অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಾಸ್ಪೋರ್ಟ್

ಪಾಸ್ಪೋರ್ಟ್

  1. ಅನ್ಲೈನ್ ಅರ್ಜಿಯ ಪ್ರಕ್ರಿಯೆ
  2. ಪಾಸ್ಪೊರ್ಟ್ಗೆ ಶುಲ್ಕ
  3. ತತ್ಕಾಲ್ ಕೋಟಾ ಅಡಿಯಲ್ಲಿ ಪಾಸ್ಪೋರ್ಟ್ ಶುಲ್ಕಗಳು
    1. ಹೊಸ ಪಾಸ್ಪೋರ್ಟ್ಗಾಗಿ
    2. ಪಾಸ್ಪೋರ್ಟ್ನ ಬದಲಾವಣೆ (ಕಳೆದು ಹೋದ/ಹಾನಿಯಾದ ಪಾಸ್ಪೋರ್ಟ್ ಬದಲಿಗೆ)
    3. 10 ವರ್ಷಗಳ ಕಾಲಾವಧಿಯ ಅಂತ್ಯದ ನಂತರ ಪುನ: ಜಾರಿಗೊಳಿಸುವ ಸಂದರ್ಭದಲ್ಲಿ:
  4. ಅನ್ಲೈನ್ ಅರ್ಜಿಯ ಉಪಯೋಗಗಳೇನು?
  5. ಪಾಸ್ಪೋರ್ಟ್ಗೆ ಅನ್ಲೈನ್ ಅರ್ಜಿಯನ್ನು ಯಾರು ಸಲ್ಲಿಸಲು ಸಾಧ್ಯ
  6. ಪಾಸ್ಪೋರ್ಟ್ಗೆ ಅನ್ಲೈನ್ ಅರ್ಜಿಯನ್ನು ಯಾವಾಗ ಸಲ್ಲಿಸಲು ಸಾಧ್ಯ
  7. ಪಾಸ್ಪೊರ್ಟ್ನ ಅಗತ್ಯಗಳೇನು?
  8. ಅಗತ್ಯವಾದ ದಾಖಲೆಗಳು
  9. ತತ್ಕಾಲ್ ಯೋಜನೆಯಡಿಯಲ್ಲಿ ಪಾಸ್ಪೋರ್ಟ್ಗೆ ಹೇಗೆ ಅರ್ಜಿ ಸಲ್ಲಿಸುವುದು
  10. ಅಫ್ಲೈನ್ನಲ್ಲಿ ಪಾಸ್ಪೋರ್ಟ್ಗೆ ಹೇಗೆ ಅರ್ಜಿಸಲ್ಲಿಸುವುದು
  11. ಪಾಸ್ಪೋರ್ಟ್ಗಾಗಿ ಬಳಸುವ ಅರ್ಜಿಯ ಪಟ್ಟಿ
    1. ಅರ್ಜಿ ಸಂಖ್ಯೆ- 1
    2. ಅರ್ಜಿ ಸಂಖ್ಯೆ- 2
      1. ವೈಯಕ್ತಿಕ ವಿವರಗಳ ಅರ್ಜಿ
    3. ಅಫಿಡವಿಟ್ ಶೈಲಿ

ಅನ್ಲೈನ್ ಅರ್ಜಿಯ ಪ್ರಕ್ರಿಯೆ

  • ಪಾಸ್ಪೋರ್ಟ್ ವೈಬ್ಸೈಟ್ ಮೂಲಕ - ನೀವು ಅನುಕ್ರಮವಾದ ಪಾಸ್ಪೋರ್ಟ್ ಕಚೇರಿಯಲ್ಲಿ ನಿಮ್ಮ ಅರ್ಜಿಯನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯ.
  • ನೋಂದಣಿಯ ನಂತರ, ಕಂಪ್ಯೂಟರ್ ನಿಮ್ಮ ಅರ್ಜಿಯನ್ನು ತೆರೆಯಲು/ಉಳಿಸಲು ಕೇಳುತ್ತದೆ,
  • ತೆರೆದ/ಉಳಿಸದ ನಂತರ, ದಯವಿಟ್ಟು ಅರ್ಜಿಯ ಪ್ರಿಂಟ್ ತೆಗೆದು ಕೊಳ್ಳಿ,
  • ಕಾರಣಾಂತರಗಳಿಂದ ನೀವು ಪ್ರಿಂಟ್ ತೆಗೆಯಲು ಅಸಮರ್ಥರಾದರೆ, ನೀವು ಅರ್ಜಿ ಸಂಖ್ಯೆಯನ್ನು ಬರೆದಿಟ್ಟು
  • ಕೊಳ್ಳಬೇಕು, ಈ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಸಹಾಯದಿಂದ ನಂತರದಲ್ಲಿ ನೀವು ಅರ್ಜಿಯ ಪ್ರಿಂಟ್ ತೆಗೆದು ಕೊಳ್ಳಲು ಸಾಧ್ಯ.
  • ನೀವು ಅರ್ಜಿಯನ್ನು ಉಳಿಸಿದ್ದಲ್ಲಿ ಸಹ ಅರ್ಜಿಯ ಪ್ರಿಂಟ್ ತೆಗೆದು ಕೊಳ್ಳಲು ಸಾಧ್ಯ.
  • ಅರ್ಜಿಯಲ್ಲಿ ಇನ್ನೂ ಕೆಲವು ಕಾಲಂಗಳಿವೆ, ಅವುಗಳನ್ನು ನೀವು ಹಸ್ತಾಕ್ಷರದಲ್ಲಿಯೆ ಭರ್ತಿ ಮಾಡಬೇಕು.
  • ನೀವು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಶುಲ್ಕ, ಸಮರ್ಥಿಸುವ ದಾಖಲೆಗಳಾದ ಜನ್ಮದಿನಾಂಕದ ಪ್ರಮಾಣ ಪತ್ರ ಇತ್ಯಾದಿಗಳೊಂದಿಗೆ ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಂದು ಪಾಸ್ಪೋರ್ಟ್ ಕಚೇರಿಗೆ ಭೇಟಿ ನೀಡಿ ಸಲ್ಲಿಸ ಬೇಕು.
  • ಪಾಸ್ಪೋರ್ಟ್ ಕಚೇರಿಯಲ್ಲಿ ಭೇಟಿಯ ದಿನಾಂಕ ಮತ್ತು ಸಮಯವನ್ನು ಅನ್ಲೈನ್ ವ್ಯವಸ್ಥೆಯಲ್ಲಿ ತಿಳಿಸಲಾಗುತ್ತದೆ ಮತ್ತು ಮಾಹಿತಿಯನ್ನು ಅರ್ಜಿಯಲ್ಲಿ ಸಹ ಮುದ್ರಿಸಲಾಗಿರುತ್ತದೆ
  • ದಯವಿಟ್ಟು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಪಾಸ್ಪೋರ್ಟ್ ಕಚೇರಿಗೆ ಭೇಟಿ ನೀಡಿ. ಪ್ರಾದೇಶಿಕ ಪಾಸ್ಪೊರ್ಟ್ ಕಚೇರಿಯನ್ನು (RPO) ನಿಗದಿ ಪಡಿಸಿದ ಸುಮಾರು 15 ನಿಮಿಷಗಳ ಮೊದಲು ತಲುಪಬೇಕು ಮತ್ತು ಅದರ ಕೌಂಟರ್ಗೆ ಮುಂದುವರಿಯಬೇಕು.
  • ಅನ್ಲೈನ್ ಅರ್ಜಿದಾರರು ಅವರ ಅರ್ಜಿಯನ್ನು ಸಲ್ಲಿಸಲು ಟೋಕನ್ ಸಂಖ್ಯೆಯನ್ನು ಪಡೆದು ಕೊಳ್ಳುವ ಅಗತ್ಯವಿಲ್ಲ. ನೀವು ಉದ್ದನೆಯ ಸರತಿಯ ಸಾಲಿನಲ್ಲಿ ಕಾಯುವ ಅಗತ್ಯವಿಲ್ಲ.

ಪಾಸ್ಪೊರ್ಟ್ಗೆ ಶುಲ್ಕ

ಅರ್ಜಿ ಶುಲ್ಕವನ್ನು ಅರ್ಜಿಯ ಜೊತೆಯಲ್ಲಿ ಪಾವತಿಸಬೇಕು. ಸಂಬಂಧಪಟ್ಟ ಪಾಸ್ಪೋರ್ಟ್ ಅಧಿಕಾರಿಯ ಪರವಾಗಿ ಬ್ಯಾಂಕ್ ಡ್ರಾಫ್ಟ್ ಮೂಲಕ ಅಥವಾ ನಗದು ಹಣದಲ್ಲಿ; ಡಿಡಿ ಆದ ಪಕ್ಷದಲ್ಲಿ, ಅದರ ಹಿಂದಿನ ಭಾಗದಲ್ಲಿ ಅರ್ಜಿದಾರರನ ಪೂರ್ಣ ಹೆಸರು ಮತ್ತು ಅರ್ಜಿ ಸಂಖ್ಯೆಯನ್ನು ಬರೆಯಬೇಕು. ಡಿಡಿಯನ್ನು ನೀಡಿದ ಬ್ಯಾಂಕ್ನ ಕೋಡ್, ಡಿಮ್ಯಾಂಡ್ ಡ್ರಾಫ್ಟ್ ಸಂಖ್ಯೆ ಮತ್ತು ಡಿಮ್ಯಾಂಡ್ ಡ್ರಾಫ್ಟ್ ಅನ್ನು ನೀಡಿದ ದಿನಾಂಕವನ್ನು ನಮೂದಿಸಲೇ ಬೇಕು. ಶುಲ್ಕದ ಪಾವತಿಯ ವಿವರಗಳನ್ನು ಅರ್ಜಿಯಲ್ಲಿನ ಸಂಬಂಧಿಸಿದ ವಿಭಾಗಗಳಲ್ಲಿ ನಮೂದಿಸಬೇಕು.


ಕ್ರ.ಸಂ

ವಿವರಣೆ

ಶುಲ್ಕಗಳು

1.

10 ವರ್ಷಗಳ ಕಾಲಾವಧಿಯ ಹೊಸ ಪಾಸ್‌ಪೋರ್ಟ್ (36ಪುಟಗಳು) (10 ವರ್ಷಗಳ ಪೂರ್ಣ ಕಾಲಾವಧಿಯ ಪಾಸ್‌ಪೋರ್ಟ್ ಪಡೆಯಲು ಬಯಸುವ  15 ರಿಂದ18 ವರ್ಷ ವಯಸ್ಸಿನ ವರೆಗಿನ ಅಪ್ರಾಪ್ತ ವಯಸ್ಕರು ಸೇರಿದಂತೆ)

Rs 1,000/-

2.

10 ವರ್ಷಗಳ ಕಾಲಾವಧಿಯ ಹೊಸ ಪಾಸ್‌ಪೋರ್ಟ್ (60 ಪುಟಗಳು)

Rs. 1,500/-

3.

5 ವರ್ಷಗಳ ಕಾಲಾವಧಿಯ ಅಪ್ರಾಪ್ತ ವಯಸ್ಕರಿಗಾಗಿ ಹೊಸ ಪಾಸ್‌ಪೋರ್ಟ್ ಅಥವಾ ಅಪ್ರಾಪ್ತ ವಯಸ್ಕರು 18 ವರ್ಷ ವಯಸ್ಸಾಗುವ ವರೆಗೆ  ಯಾವುದು ಮೊದಲೋ ಅದು

Rs  600/-

4.

ಕಳೆದು ಹೋದ, ಹಾನಿಯಾದ, ಕಳುವಾದ ಪಾಸ್‌ಪೋರ್ಟ್ ಬದಲಿಗೆ  ನಕಲಿ ಪಾಸ್‌ಪೋರ್ಟ್ (36 ಪುಟಗಳು)

Rs. 2500/-

5.

ಕಳೆದು ಹೋದ, ಹಾನಿಯಾದ, ಕಳುವಾದ ಪಾಸ್‌ಪೋರ್ಟ್ ಬದಲಿಗೆ   ನಕಲಿ ಪಾಸ್‌ಪೋರ್ಟ್ (60 ಪುಟಗಳು)

Rs. 3000/-

6.

ಪೊಲೀಸ್ ಸ್ಪಷ್ಟೀಕರಣ ಪ್ರಮಾಣ ಪತ್ರ/ ECNR/ಹೆಚ್ಚುವರಿ ಒಪ್ಪಿಗೆಗಳು

Rs.300/-

7.

ವಿಳಾಸ, ಹೆಸರು, ಜನ್ಮ ದಿನಾಂಕ, ಜನ್ಮ ಸ್ಥಳ , ಚಹರೆ, ಗಂಡ/ಹೆಂಡತಿ ಹೆಸರು, ಹೆತ್ತವರ/ಪೋಷಕರ ಹೆಸರಿನ ಬದಲಾವಣೆಯ ಸಂದರ್ಭದಲ್ಲಿ,

Rs.1000/-

ತತ್ಕಾಲ್ ಕೋಟಾ ಅಡಿಯಲ್ಲಿ ಪಾಸ್ಪೋರ್ಟ್ ಶುಲ್ಕಗಳು

ತತ್ಕಾಲ್ ಅಡಿಯಲ್ಲಿ ಪಾಸ್ಪೋರ್ಟ್ ಪಡೆಯಲು ಹೆಚ್ಚುವರಿ ಶುಲ್ಕ ಸೇರ್ಪಡೆಗೊಳ್ಳುತ್ತದೆ. ಈ ಶುಲ್ಕವನ್ನು ನಗದು ಅಥವಾ ಡಿಡಿ ರೂಪದಲ್ಲಿ ಸಂಬಂಧಿತ ಅಧಿಕಾರಿಯ ಹೆಸರಿಗೆ ಪಾವತಿಸಬೇಕು. ಪರ್ಯಾಯವಿಲ್ಲದ ತತ್ಕಾಲ್ ಪಾಸ್ಪೋರ್ಟ್ಗೆ ಹೆಚ್ಚುವರಿ ಶುಲ್ಕಗಳು ಈ ಕೆಳಗಿನಂತಿದೆ:

ಹೊಸ ಪಾಸ್ಪೋರ್ಟ್ಗಾಗಿ


1.

ಅರ್ಜಿ ಸಲ್ಲಿಸಿದ  ದಿನಾಂಕದ 1-7 ದಿನಗಳ ಒಳಗೆ

1,500/- ರೂಪಾಯಿಗಳ ಜೊತೆಗೆ 1000/- ರೂಪಾಯಿಗಳ ಪಾಸ್‌ಪೋರ್ಟ್ ಶುಲ್ಕ

2.

ಅರ್ಜಿ ಸಲ್ಲಿಸಿದ ದಿನಾಂಕದ  8-14 ದಿನಗಳ ಒಳಗೆ

1,000/- ರೂಪಾಯಿಗಳ ಜೊತೆಗೆ 1000/- ರೂಪಾಯಿಗಳ ಪಾಸ್‌ಪೋರ್ಟ್ ಶುಲ್ಕ

ಪಾಸ್ಪೋರ್ಟ್ನ ಬದಲಾವಣೆ (ಕಳೆದು ಹೋದ/ಹಾನಿಯಾದ ಪಾಸ್ಪೋರ್ಟ್ ಬದಲಿಗೆ)


1.

ಅರ್ಜಿ ಸಲ್ಲಿಸಿದ ದಿನಾಂಕದ 1-7 ದಿನಗಳ ಒಳಗೆ

2,500/- ರೂಪಾಯಿಗಳೊಂದಿಗೆ  2500/-ರೂಗಳ ನಕಲಿ ಪಾಸ್‌ಪೋರ್ಟ್ ಶುಲ್ಕ

2.

ಅರ್ಜಿ ಸಲ್ಲಿಸಿದ ದಿನಾಂಕದ  8-14 ದಿನಗಳ ಒಳಗೆ

1,500/- ರೂಪಾಯಿಗಳೊಂದಿಗೆ  2500/-ರೂಗಳ ನಕಲಿ ಪಾಸ್‌ಪೋರ್ಟ್ ಶುಲ್ಕ

10 ವರ್ಷಗಳ ಕಾಲಾವಧಿಯ ಅಂತ್ಯದ ನಂತರ ಪುನ: ಜಾರಿಗೊಳಿಸುವ ಸಂದರ್ಭದಲ್ಲಿ:


1.

ಅರ್ಜಿ ಸಲ್ಲಿಸಿದ ದಿನಾಂಕದ  3 ಕೆಲಸದ ದಿನಗಳ ಒಳಗೆ

1,500/- ರೂಪಾಯಿಗಳ ಜೊತೆಗೆ 1000/- ರೂಪಾಯಿಗಳ ಪಾಸ್‌ಪೋರ್ಟ್ ಶುಲ್ಕ

 

ಅನ್ಲೈನ್ ಅರ್ಜಿಯ ಉಪಯೋಗಗಳೇನು?

  • ಅರ್ಜಿದಾರರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗೆ ಅಗತ್ಯವಾದ ದಾಖಲೆಗಳು ಮತ್ತು ಶುಲ್ಕ ಸಲ್ಲಿಸಲು ಅನುಸೂಚಿತ ದಿನಾಂಕ ಸಮಯವನ್ನು ಪಡೆಯುತ್ತಾರೆ.
  • ಉದ್ದವಾದ ಸರತಿಯ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ.

ಪಾಸ್ಪೋರ್ಟ್ಗೆ ಅನ್ಲೈನ್ ಅರ್ಜಿಯನ್ನು ಯಾರು ಸಲ್ಲಿಸಲು ಸಾಧ್ಯ

  • ಪಾಸ್ಪೋರ್ಟ್ ಪಡೆಯಲು ಅರ್ಹತೆ ಹೊಂದಿದ ವ್ಯಕ್ತಿಗಳು ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅರ್ಹರು.
  • ಅವರವರ ಪಾಸ್ಪೋರ್ಟ್ ಕಚೇರಿಯ ಕಾರ್ಯವ್ಯಾಪ್ತಿಯಡಿಯಲ್ಲಿ ಬರುವ ನಿವಾಸಿಗಳು ಮಾತ್ರ ಈ ವೆಬ್ಸೈಟ್ ಮೂಲಕ ಅನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅರ್ಹರು.
  • ಪ್ರಸ್ತುತವಾಗಿ, ಪಾಸ್ಪೋರ್ಟ್ಗಾಗಿ ಅನ್ಲೈನ್ ಅರ್ಜಿ ಸೌಲಭ್ಯ ಕೆಳಗಿನ ನಗರಗಳಲ್ಲಿ ಮಾತ್ರ ಲಭ್ಯ:

 

ಅಹಮದಾಬಾದ್

 

ಅಮೃತಸರ

 

ಬೆಂಗಳೂರು

ಬರೇಲಿ

ಭೋಪಾಲ್

ಭುವನೇಶ್ವರ

ಚಂಡೀಗಡ

ಚೆನ್ನೈ

ಕೊಚ್ಚಿನ್

ಕೊಯಮತ್ತೂರು

ಡೆಹರಾಡುನ್

ದೆಹಲಿ

ಗಜಿಯಾಬಾದ್

ಗೋವಾ

ಗುವಾಹಟಿ

ಹೈದರಬಾದ್

ಜಯ್‌ಪುರ

ಜಲಂದರ್

ಜಮ್ಮು

ಕೊಲ್ಕತ್ತಾ

ಕೊಳಿಕೊಡೈ

ಲಕ್ನೊ

ಮಧುರೈ

ಮಲಪುರಂ

ಮುಂಬಯಿ

ನಾಗ್ಪುರ

ಪಟ್ನಾ

ಪುಣೆ

ರಾಯ್‌ಪುರ

ರಾಂಚಿ

ಶಿಮ್ಲಾ

ಶ್ರೀನಗರ

ಸೂರತ್

ಥಾಣೆ

ತಿರುಚ್ಚಿ

ಟ್ರಿವೇಂಡ್ರಮ್

ವಿಶಾಖಪಟ್ಟಣ

 

 


ಪಾಸ್ಪೋರ್ಟ್ಗೆ ಅನ್ಲೈನ್ ಅರ್ಜಿಯನ್ನು ಯಾವಾಗ ಸಲ್ಲಿಸಲು ಸಾಧ್ಯ

  • ಹೊಸ ಪಾಸ್ಪೋರ್ಟ್ನ ನೀಡಿಕೆಗಾಗಿ (ನೀವು ಈ ಮೊದಲು ಪಾಸ್ಪೋರ್ಟ್ನ್ನು ಹೊಂದಿರದಿದ್ದಲ್ಲಿ)
  • ಪಾಸ್ಪೋರ್ಟ್ನ ಪುನಃ-ನೀಡಿಕೆಗಾಗಿ (ನಿಮ್ಮ 10 ವರ್ಷಗಳ ಕಾಲಾವಧಿಯ ಈಗಿನ ಪಾಸ್ಪೋರ್ಟ್ನ ಕಾಲಾವಧಿ ಅಂತ್ಯವಾಗಿದ್ದರೆ ಅಥವಾ ಮುಂದಿನ 12 ತಿಂಗಳಲ್ಲಿ ಅಂತ್ಯವಾಗುವ ಹಾಗಿದ್ದರೆ)
  • ನಕಲಿ ಪಾಸ್ಪೋರ್ಟ್ನ ನೀಡಿಕೆಗಾಗಿ (ನಿಮ್ಮ ಈಗಿನ ಪಾಸ್ಪೋರ್ಟ್ ಕಳೆದು ಹೋಗಿದ್ದಲ್ಲಿ ಅಥವಾ ಹಾನಿ ಆಗಿದ್ದರೆ)

ಪಾಸ್ಪೊರ್ಟ್ನ ಅಗತ್ಯಗಳೇನು?

  • ವಿಳಾಸದ ಪುರಾವೆ
  • ಜನ್ಮ ದಿನಾಂಕದ ಪುರಾವೆ
  • ಅವಶ್ಯಕ ಶುಲ್ಕ (ಹಣ ಅಥವಾ ಡಿಡಿ)
  • ಪಾಸ್ಪೋರ್ಟ್ ಅಳತೆಯ ಕಲರ್ ಫೋಟೊ.

ಅಗತ್ಯವಾದ ದಾಖಲೆಗಳು

ಒಂದು ಹೊಸ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳ ಎರಡು ಪ್ರತಿಗಳನ್ನು ಲಗತ್ತಿಸಿ:

  1. ವಿಳಾಸದ ಪುರಾವೆ (ಕೆಳಗಿನವುಗಳಲ್ಲಿ ಒಂದನ್ನು ಲಗತ್ತಿಸಿ):
    • ಅರ್ಜಿದಾರನ ಪಡಿತರ ಚೀಟಿ
    • ಶೀರ್ಷಿತ ಪತ್ರಹಾಳೆಯಲ್ಲಿ ಹೆಸರುವಾಸಿಯಾದ ಕಂಪೆನಿಗಳ ಉದ್ಯೋಗದಾತನಿಂದ ಪ್ರಮಾಣ ಪತ್ರ
    • ನೀರು/ದೂರವಾಣಿ/ವಿದ್ಯುಚ್ಛಕ್ತಿ ಬಿಲ್ಲು
    • ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಹೇಳಿಕೆ
    • ಆದಾಯ ತೆರಿಗೆ ನಿರ್ಧಾರಣ ಆದೇಶ
    • ಚುನಾವಣೆ ಆಯೋಗದ ಐಡಿ ಕಾರ್ಡ್
    • ಗ್ಯಾಸ್ ಸಂಪರ್ಕದ ಬಿಲ್ಲು
    • ಗಂಡ/ಹೆಂಡತಿಯ ಪಾಸ್ಪೋರ್ಟ್ ಪ್ರತಿ
    • ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಹೆತ್ತವರ ಪಾಸ್ಪೋರ್ಟ್ ಪ್ರತಿ
  2. ಗಮನಿಸಿ: ಯಾವುದೇ ಅರ್ಜಿದಾರ ಪಡಿತರ ಚೀಟಿಯನ್ನು ಮಾತ್ರ ವಿಳಾಸದ ಪುರಾವೆಯಾಗಿ ಸಲ್ಲಿಸಿದ್ದಲ್ಲಿ, ಮೇಲೆ ಸೂಚಿಸಿರುವ ಯಾವುದಾದರೂ ಒಂದು ವಿಳಾಸದ ಪುರಾವೆಯನ್ನು ಜೊತೆಯಲ್ಲಿ ಲಗತ್ತಿಸಬೇಕು.
  3. ಜನ್ಮ ದಿನಾಂಕದ ಪುರಾವೆ (ಕೆಳಗಿನವುಗಳಲ್ಲಿ ಒಂದನ್ನು ಅಂಟಿಸಬೇಕು)
    • ನಗರ ಸಭಾ ಪ್ರಾಧಿಕಾರ ಅಥವಾ ಜನನ ಮತ್ತು ಮರಣ ನೋಂದಣಿ ಅಧಿಕಾರಿಯ ಜಿಲ್ಲಾ ಕಛೇರಿಯ ಮೂಲಕ ನೀಡಿದ ಜನ್ಮ ಪ್ರಮಾಣ ಪತ್ರ. ಅರ್ಜಿದಾರನಿಂದ ಕೊನೆಯ ಬಾರಿ ಹಾಜರಾದ ಶಾಲೆ ಅಥವಾ ಯಾವುದೇ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಜನ್ಮ ದಿನಾಂಕದ ಪ್ರಮಾಣ ಪತ್ರ; ಅಥವಾ ಅನಕ್ಷರಸ್ಥ ಅಥವಾ ಅರೆ ಅಕ್ಷರಸ್ಥ ಅರ್ಜಿದಾರರಿಂದ ಮ್ಯಾಜಿಸ್ಟ್ರೇಟ್/ನೋಟರಿಯ ಮುಂದೆ ಪ್ರಮಾಣ ಮಾಡಿದ ಅನುಬಂಧ ‘A’ ರಲ್ಲಿನ ಮಾದರಿಯಂತೆ ದಿನಾಂಕ/ಸ್ಥಳವನ್ನು ತಿಳಿಸುವ ಅಫಿಡವಿಟ್.
  4. ಗಮನಿಸಿ: 26.01.89ರಂದು ಅಥವಾ ನಂತರ ಜನಿಸಿದ ಅರ್ಜಿದಾರನಾದರೆ, ನಗರ ಸಭಾ ಪ್ರಾಧಿಕಾರ ಅಥವಾ ಜನನ ಮತ್ತು ಮರಣ ನೋಂದಣಿ ಅಧಿಕಾರಿಯ ಜಿಲ್ಲಾ ಕಛೇರಿಯ ಮೂಲಕ ನೀಡಿದ ಜನ್ಮ ಪ್ರಮಾಣ ಪತ್ರ ಮಾತ್ರ ಸ್ವೀಕಾರಾರ್ಹ.
  5. ಅಪ್ರಾಪ್ತ ವಯಸ್ಕರಿಗೆ ಪಾಸ್ಪೋಟ್ಗೆ ಅರ್ಜಿ ಸಲ್ಲಿಸುವಾಗ, ಅವಶ್ಯಕವಾಗುವ ದಾಖಲೆಗಳು
    • ಅನುಬಂಧ "H" (ಇಬ್ಬರೂ ಹೆತ್ತವರಿದ ಸಹಿ ಮಾಡಿದ), ಅನುಬಂಧ" C" (ಪ್ರತ್ಯೇಕವಾಗಿ ವಾಸಿಸುತ್ತಿರುವ ಅಂದರೆ ಅಧಿಕೃತವಾಗಿ ವಿಚ್ಛೇದನವಾಗದ ಹೆತ್ತವರು/ಮದುವೆಯಾಗದೆ ಜನಿಸಿದ ಮಗು), ಅನುಬಂಧ "G" (ಸಂಗಾತಿಯಿಲ್ಲದೆ ಒಬ್ಬನೇ(ಳೇ) ಮಗು ಯಾ ಮಕ್ಕಳನ್ನು ಬೆಳೆಸುವವ(ಳು) ಅಥವಾ ಕಾನೂನುಬದ್ಧ, ಪೋಷಕರಿಂದ ಪಾಸ್ಪೋರ್ಟ್ಗೆ ಅರ್ಜಿಸಲ್ಲಿಸಿದ್ದಾಗ), ಅನುಬಂಧ "I" ರಂತೆ (15-18 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕರು 10 ವರ್ಷಗಳ ಪೂರ್ಣ ಕಾಲಾವಧಿಯ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದಾಗ ಅಥವಾ ಹೆತ್ತವರಲ್ಲಿ ಯಾರಾದರೂ ಅವರ ಅಪ್ರಾಪ್ತ ವಯಸ್ಕ ಮಗುವಿನ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಗ ಒಬ್ಬರ ಪಾಸ್ಪೋರ್ಟ್ ಭಾರತೀಯ ಪಾಸ್ಪೋರ್ಟ್ನ ಸಿಂಧುತ್ವವನ್ನು ಹೊಂದಿರದಿದ್ದಲ್ಲಿ) , ಸಂದರ್ಭಕ್ಕೆ ತಕ್ಕಂತೆ, ಅಪ್ರಾಪ್ತ ವಯಸ್ಕರ ಬಗ್ಗೆ ಅರ್ಜಿಯಲ್ಲಿ ಒದಗಿಸಿದ ಮಾಹಿತಿಗಳನ್ನು ಧೃಡಪಡಿಸುವ ಒಂದು ಘೋಷಣೆ
    • ಹೆತ್ತವರ ಪಾಸ್ಪೋರ್ಟ್ನ ಅಟೆಸ್ಟೆಡ್ ಪ್ರತಿ, ಅವರು ಹೊಂದಿದ್ದಲ್ಲಿ.
    • ಹೆತ್ತವರ ಅಸಲಿ ಪಾಸ್ಪೋರ್ಟ್ಗಳನ್ನು ಋಜುವಾತುಗಾಗಿ ಹಾಜಾರುಪಡಿಸಬೇಕು.
    • ಹೆತ್ತವರಲ್ಲಿ ಒಬ್ಬರು ವಿದೇಶದ ನಿವಾಸಿಯಾಗಿದ್ದರೆ, ಭಾರತೀಯ ಮಿಷನ್ ಮೂಲಕ ವಿದೇಶದಲ್ಲಿ ನಿವಾಸಿಯಾಗಿರುವ ಹೆತ್ತವರಿಂದ ಮೂಲಕ ಪ್ರಮಾಣ ಮಾಡಿದ ಅಫಿಡವಿಟ್ ಜೊತೆಗೆ ಭಾರತದಲ್ಲಿ ವಾಸವಾಗಿರುವ ಹೆತ್ತವರಿಂದ ಅಫಿಡವಿಟನ್ನು ಸಹ ಸಲ್ಲಿಸಬೇಕು.

ತತ್ಕಾಲ್ ಯೋಜನೆಯಡಿಯಲ್ಲಿ ಪಾಸ್ಪೋರ್ಟ್ಗೆ ಹೇಗೆ ಅರ್ಜಿ ಸಲ್ಲಿಸುವುದು

  • ಭರ್ತಿ ಮಾಡಿದ ನಿಮ್ಮ ಅರ್ಜಿ, ಋಜುವಾತು ಪ್ರಮಾಣ ಪತ್ರದೊಂದಿಗೆ ತತ್ಕಾಲ್ ಶುಲ್ಕವನ್ನು ಅನುಬಂಧ ‘ಎಫ್ ’ ನ ಮಾದರಿಯಂತೆ ಮತ್ತು ಅನುಬಂಧ “ಎಲ್ ” ನ ಮಾದರಿಯಂತೆ ಸ್ಟ್ಯಾಂಡರ್ಡ್ ಅಪಿಡವಿಟ್ ಸಲ್ಲಿಸಿ,
  • ಪಾಸ್ಪೋರ್ಟ್ ನೀಡುವ ಪ್ರಾಧಿಕಾರ ಪಾಸ್ಪೊರ್ಟ್ ನೀಡಿದ ಅಧಿಕಾರಯಿಂದ ಬರವಣಿಗೆಯಲ್ಲಿ ಋಜುವಾತು ಪ್ರಮಾಣ ಪತ್ರದ ಸಾಧರತೆಯ ಋಜುವಾತಿನ ಹಕ್ಕನ್ನು ಉಳಿಸಿಕೊಳ್ಳಬೇಕು
  • ಪಾಸ್ಪೋರ್ಟ್ನ ಸರದಿ ರಹಿತ ನೀಡಿಕೆಗೆ ತುರ್ತುಕಾರಣದ ಪುರಾವೆ ಅಗತ್ಯವಿಲ್ಲ.
  • ತತ್ಕಾಲ್ ಯೋಜನೆ ಅಡಿಯಲ್ಲಿ ನೀಡಿದ ಎಲ್ಲಾ ಪಾಸ್ಪೋರ್ಟ್ಗಳಿಗೆ ನಂತರದ ಪೋಲಿಸ್ ಪರಿಶಿಲನೆಯನ್ನು ಮಾಡಬೇಕು.
  • ಕೆಳಗೆ ಉಲ್ಲೇಖಿಸಿದ ಪಟ್ಟಿಯಿಂದ ಮೂರು ದಾಖಲೆಗಳನ್ನು ಸಲ್ಲಿಸಿ ಅರ್ಜಿದಾರ ತತ್ಕಾಲ್ ಯೋಜನೆ ಅಡಿಯಲ್ಲಿ ಪಾಸ್ಪೋರ್ಟ್ ಪಡೆಯುವ ಆಯ್ಕೆಯನ್ನು ಹೊಂದಿದ್ದಾನೆ. ಆ ಮೂರು ದಾಖಲೆಗಳಲ್ಲಿ, ಸ್ಟ್ಯಾಂಡರ್ ಅಫಿಡವಿಟ್ನ ಜೊತೆ ನಾನ್-ಜ್ಯುಡಿಶಿಯಲ್ ಸ್ಟಾಂಪ್ ಕಾಗದದ ಮೇಲೆ ನೋಟರಿಯ ಮೂಲಕ ಅಟೆಸ್ಟ್ ಆದ ಒಂದು ಫೋಟೊ ಗುರುತಿನ ದಾಖಲೆಯಾಗಿರಬೇಕು.
  • ಕೆಳಗಿನ ದಾಖಲೆಗಳ ಪಟ್ಟಿಯಿಂದ, ಪಾಸ್ಪೋರ್ಟ್ ಗಾಗಿ   ಮೂರು ದಾಖಲೆಗಳನ್ನು ಸಲ್ಲಿಸಬೇಕು
    1. ಮತದಾರ ಫೋಟೊ ಗುರುತಿನ ಚೀಟಿ
    2. ರಾಜ್ಯ/ಕೇಂದ್ರ ಸರ್ಕಾರ, ಸಾರ್ವಜನಿಕ ವಲಯ ಉದ್ಯಮಗಳು, ಸ್ಥಳಿಯ ಮಂಡಳಿಗಳು ಅಥವಾ ಸಾರ್ವಜನಿಕ ನಿಯಮಿತ ಕಂಪೆನಿಗಳಿಂದ ನೀಡಲಾದ ಸೇವೆಯ ಫೋಟೊ ಗುರುತಿನ ಚೀಟಿ ,
    3. ಎಸ್.ಸಿ /ಎಸ್.ಟಿ / ಓ.ಬಿ.ಸಿ  ಧೃಡೀಕರಣ ಪತ್ರಗಳು,
    4. ಸ್ವಾತಂತ್ರ ಹೋರಾಟಗಾರ ಗುರುತಿನ ಚೀಟಿ,
    5. ಆಯುಧ ಪರವಾನಗಿ,
    6. ಆಸ್ತಿ ದಾಖಲೆಗಳಾದ ಪಟ್ಟಾ, ನೋಂದಣಿ ಪತ್ರಗಳು ಇತ್ಯಾದಿ.
    7. ಪಡಿತರ ಚೀಟಿ,
    8. ಪಿಂಚಣಿ ದಾಖಲೆಗಳಾದ ಪಿಂಚೂಣಿ ಪುಸ್ತಕ/ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ ವಿಧವೆ/ಅವಲಂಬಿ ಪ್ರಮಾಣ ಪತ್ರಗಳು, ವೃದ್ಧಾಪ್ಯ ಪಿಂಚಣಿ ಆದೇಶ, ವಿಧವೆ ಪಿಂಚಣಿ ಆದೇಶ,
    9. ರೈಲ್ವೇ ಗುರುತಿನ ಚೀಟಿ,
    10. ಆದಾಯ ತೆರಿಗೆ (ಪ್ಯಾನ್ ) ಕಾರ್ಡ್ಗಳು,
    11. ಬ್ಯಾಂಕ್/ ಕಿಸಾನ್/ಅಂಚೆ ಕಚೇರಿ ಪಾಸ್ಬುಕ್ಗಳು,
    12. ಗುರುತಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ವಿದ್ಯಾರ್ಥಿ ಗುರುತಿನ ಚೀಟಿ,
    13. ಡ್ರೈವಿಂಗ್ ಲೈಸೆನ್ಸ್,
    14. ಆರ್.ಬಿ.ಡಿ  ಕಾಯಿದೆ ಅಡಿಯಲ್ಲಿ ನೀಡಲಾದ ಜನ್ಮ ಪ್ರಮಾಣ ಪತ್ರ,
    15. ಗ್ಯಾಸ್ ಸಂಪರ್ಕದ ಬಿಲ್ಲು ,

ಅಫ್ಲೈನ್ನಲ್ಲಿ ಪಾಸ್ಪೋರ್ಟ್ಗೆ ಹೇಗೆ ಅರ್ಜಿಸಲ್ಲಿಸುವುದು

  • ಅಗತ್ಯವಾದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಭರ್ತಿ ಮಾಡಿ,
  • ಭರ್ತಿ ಮಾಡಿದ ಅರ್ಜಿಯನ್ನು ಶುಲ್ಕ ಮತ್ತು ಅಗತ್ಯವಾದ ದಾಖಲೆಗಳೊಂದಿಗೆ ಕೆಳಗೆ ತಿಳಿಸಿದಲ್ಲಿ ಸಲ್ಲಿಸಿ:
    1. ಪಾಸ್ಪೋರ್ಟ್ ಕಚೇರಿಯ ಕೌಂಟರ್
    2. ಶೀಘ್ರ ಅಂಚೆ ಕೇಂದ್ರಗಳು

ಜಿಲ್ಲಾ ಪಾಸ್ಪೋರ್ಟ್ ಕೇಂದ್ರಗಳು

ಅರ್ಜಿಯನ್ನು ಭರ್ತಿ ಮಾಡಲು ಕ್ರಮಗಳ ಮಾಹಿತಿ

ಪಾಸ್ಪೋರ್ಟ್ಗಾಗಿ ಬಳಸುವ ಅರ್ಜಿಯ ಪಟ್ಟಿ

ಅರ್ಜಿ ಸಂಖ್ಯೆ- 1

ಈ ಅರ್ಜಿಯನ್ನು ಹೊಸ/ಪುನಃ ನೀಡಿಕೆ/ಕಳೆದ/ಹಾನಿಗೊಳಗಾದ ಪಾಸ್ಪೋರ್ಟ್ಗಳ ಬದಲಿಗೆ/ಹೆಸರು/ಚಹರೆಯ ಬದಲಾವಣೆ/ಪುಟಗಳ ಮುಗಿದುಹೋಗಿರುವ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಈ ಅರ್ಜಿಯನ್ನೇ ಅಪ್ರಾಪ್ತ ವಯಸ್ಕರ ಪಾಸ್ಪೋರ್ಟ್ಗಾಗಿ ಸಹ ಬಳಸಲಾಗುತ್ತದೆ.

ಅರ್ಜಿ ಸಂಖ್ಯೆ- 2

ಇದನ್ನು ಪೊಲೀಸ್ ಸ್ಪಷ್ಟೀಕರಣ ಪ್ರಮಾಣ ಪತ್ರ, ಇ.ಸಿ.ಆರ್  ಸ್ಟಾಂಪ್ನ ತೆಗೆದುಹಾಕುವಿಕೆ, ಗಂಡ/ಹೆಂಡತಿಯ ಹೆಸರಿನ ಸೇರ್ಪಡೆ ಮತ್ತು ವಿಳಾಸ ಬದಲಾವಣೆಯ ಅರ್ಜಿಗಳನ್ನು ಮಾಡಲು ಬಳಸಲಾಗುತ್ತದೆ. ಇದೇ ಅರ್ಜಿಯನ್ನು ಒಂದು ಚಿಕ್ಕ ಅವಧಿಯ ಪಾಸ್ಪೋರ್ಟ್ ಅನ್ನು ಪೂರ್ಣ ಕಾಲಾವಧಿಯ ಪಾಸ್ಪೋರ್ಟ್ ಆಗಿ ನವೀಕರಣ ಮಾಡಲು ಸಹ ಬಳಸಲಾಗುತ್ತದೆ.

ವೈಯಕ್ತಿಕ ವಿವರಗಳ ಅರ್ಜಿ

ಇದನ್ನು ಪೊಲೀಸ್ ಋಜುವಾತು ವರದಿಗಾಗಿ ಬಳಸಲಾಗುತ್ತದೆ. ಇದು ಅರ್ಜಿ ಸಂಖ್ಯೆ-1ರ ಒಂದು ಭಾಗ. ಪಾಸ್ಪೋರ್ಟ್ ಕಚೇರಿಯಿಂದ ಪುನಃ ಋಜುವಾತಿಗಾಗಿ ಕೇಳಿದರೆ ಇದನ್ನು ಪ್ರತ್ಯೇಕವಾಗಿ ಭರ್ತಿಮಾಡಬೇಕು. ಅರ್ಜಿದಾರನು ಕಳೆದ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ, ಪ್ರತಿ ವಿಳಾಸ/ಸ್ಥಳಕ್ಕೆ ಒಂದು ಹೆಚ್ಚುವರಿ PP ಅರ್ಜಿಯನ್ನು ಭರ್ತಿಮಾಡಬೇಕು.

ಅಫಿಡವಿಟ್ ಶೈಲಿ

  • ಅನಕ್ಷರಸ್ಥ ಅರ್ಜಿದಾರರು ಜನ್ಮದಿನಾಂಕ ಪ್ರಮಾಣ ಪತ್ರ ಸಲ್ಲಿಸಲು (ಅನುಬಂಧ "ಏ ")
  • ಗುರುತಿನ ಪ್ರಮಾಣ ಪತ್ರ (ಅನುಬಂಧ "ಬಿ ")
  • ಹೆತ್ತವರಲ್ಲಿ ಒಬ್ಬರಿಂದ ಅಪ್ರಾಪ್ತ ವಯಸ್ಕನ ಪಾಸ್ಪೋರ್ಟ್ಗೆ ಅಫಿಡವಿಟ್ (ಅನುಬಂಧ "ಸಿ ")
  • ಮಹಿಳಾ ಅರ್ಜಿದಾರರಿಂದ ಮದುವೆಯ ನಂತರ ಹೆಸರು ಬದಲಾವಣೆಗೊಳಿಸಿದ ಅಫಿಡವಿಟ್ (ಅನುಬಂಧ"ಡಿ ")
  • ಹೆಸರು/ಡೀಡ್ ಪೋಲ್/ಪ್ರಮಾಣೀಕೃತ ಅಫಿಡವಿಟ್ನಲ್ಲಿ ಬದಲಾವಣೆ (ಅನುಬಂಧ"ಇ ")
  • ತತ್ಕಾಲ್ ಪಾಸ್ಪೋರ್ಟ್ಗಾಗಿ ಋಜುವಾತು ಪ್ರಮಾಣ ಪತ್ರ(ಅನುಬಂಧ"ಎಫ್ ")
  • ಅಪ್ರಾಪ್ತ ವಯಸ್ಕರ ಪಾಸ್ಪೋರ್ಟ್ಗಾಗಿ ಹೆತ್ತವರ/ಪೋಷಕರ ಘೋಷಣೆ (ಹೆತ್ತವರಲ್ಲಿ ಒಬ್ಬರು ಒಪ್ಪಿಗೆ ನೀಡದಿದ್ದರೆ) (ಅನುಬಂಧ"ಜಿ ")
  • ಅಪ್ರಾಪ್ತ ವಯಸ್ಕರ ಪಾಸ್ಪೋರ್ಟ್ಗಾಗಿ ಹೆತ್ತವರ/ಪೋಷಕರ ಘೋಷಣೆ (ಅನುಬಂಧ" ಹೆಚ್   ")
  • ಸ್ಟಾಂಡರ್ಡ್ ಅಫಿಡವಿಟ್ (ಅನುಬಂಧ"ಐ ")
  • ಮಾದರಿ ಋಜುವಾತು ಪ್ರಮಾಣಪತ್ರ (ಅನುಬಂಧ"ಜೆ ")
  • ಪ್ರಾಧಿಕಾರದ ಪತ್ರ

ಮೂಲ  : ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate