ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮತದಾರ ಪಟ್ಟಿ

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸಿ

ಹೆಸರು ಸೇರ್ಪಡೆಗೆ ಅರ್ಜಿ

 • ಜನವರಿ 1,2010ಕ್ಕೆ 18 ವರ್ಷ ಭರ್ತಿಯಾದ ವ್ಯಕ್ತಿಯ ಹೆಸರಿನ ಸೇರ್ಪೆಡೆಗೆ ಅರ್ಜಿ ಸಲ್ಲಿಸಬಹುದು
 • ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸಿ
 • ಎರಡು ಕಲರ್ ಅಥವಾ ಕಪ್ಪು/ಬಿಳುಪು ಭಾವಚಿತ್ರವನ್ನು ಫಾರಂ-6ನೊಂದಿಗೆ ಲಗತ್ತಿಸಿ
 • ಜನ್ಮ ಪ್ರಮಾಣ ಪತ್ರದ ಜೆರಾಕ್ಸ್ಪ್ರತಿಯನ್ನು ಸೇರಿಸಿ ( ನಗರ ಸಭೆಯಿಂದ ನೀಡಿದ ಜನ್ಮ ಪ್ರಮಾಣ ಪತ್ರ ಅಥವಾ ಮೆಟ್ರಿಕ್ಯುಲೇಶನ್ ದೃಢೀಕರಣ ಪತ್ರ ಅಥವಾ ಶಾಲೆ/ಕಾಲೇಜಿನಿಂದ ನೀಡಿದ ದೃಢೀಕರಣ ಪತ್ರ)
 • ವಿಳಾಸ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ (ಬ್ಯಾಂಕ್/ಅಂಚೆ ಕಚೇರಿಯ ಪ್ರಸ್ತುತ ಪಾಸ್ ಬುಕ್, ಪಡಿತರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್/ ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ಆ ವಿಳಾಸದ ಇತ್ತೀಚಿನ ನೀರು/ದೂರವಾಣಿ/ವಿದ್ಯುಚ್ಛಕ್ತಿ/ಗ್ಯಾಸ್ ಸಂಪರ್ಕದ ಬಿಲ್ (ಅರ್ಜಿದಾರ ಅಥವಾ ಆತ/ಆಕೆಯ ಹೆತ್ತವರ ವಿಳಾಸದಲ್ಲಿ ಇತ್ಯಾದಿ) ಅಥವಾ ಆ ವಿಳಾಸದ ಅರ್ಜಿದಾರ ಹೆಸರಿನಲ್ಲಿ ಅಂಚೆ ಇಲಾಖೆಯ ಸ್ವೀಕೃತ/ ಕಳುಹಿಸಿದ ಅಂಚೆಗಳು

ಹೆಸರು ತೆಗೆದು ಹಾಕಲು ಅರ್ಜಿ

 • ಮತದಾರನು ಬೇರೆ ಮತದಾನ ಕ್ಷೇತ್ರಕ್ಕೆ ವರ್ಗಾವಣೆ ಆಗಿದ್ದರೆ ಅಥವಾ ಮರಣ ಹೊಂದಿದ್ದರೆ ಅಥವಾ ತಪ್ಪು ನಮೂದನೆ ಆಗಿದ್ದಲ್ಲಿ, ಆಗ ನೀವು ಅವರ ಹೆಸರನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಬೇಕು.
 • ಈ ಉದ್ದೇಶಕ್ಕೆ ಫಾರಂ ಸಂಖ್ಯೆ-7 ಅನ್ನು ಬಳಸಬೇಕು.

ಹೆಸರು ಸರಿಪಡಿಸಲು ಅರ್ಜಿ

 • ಮತದಾರರ ಪಟ್ಟಿಯಲ್ಲಿ ಅಥವಾ ನಿಮ್ಮ ಮತದಾರರ ಫೋಟೋ ಗುರುತು ಕಾರ್ಡ್ (EPIC) ನಲ್ಲಿ ತಪ್ಪು ಕಂಡು ಬಂದಲ್ಲಿ, ಆಗ ನೀವು ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು.
 • ತಪ್ಪು ನಮೂದನೆಯ ತಿದ್ದುಪಡಿಗೆ ಫಾರಂ ಸಂಖ್ಯೆ-8 ಅನ್ನು ಬಳಸ ಬೇಕು.
 • ಜನ್ಮ ಪ್ರಮಾಣ ಪತ್ರದ ಜೆರಾಕ್ಸ್ಪ್ರತಿಯನ್ನು ಗುರುತು ಪುರಾವೆಯಾಗಿ ಸಲ್ಲಿಸಬೇಕು.

ಮತದಾರರ ಪಟ್ಟಿಗಳಲ್ಲಿ ನಮೂದನೆಯ ವರ್ಗಾವಣೆಗೆ ಅರ್ಜಿ

 • ನಿಮ್ಮ ಮನೆ ಬೇರೆ ಮತ ಕ್ಷೇತ್ರಕ್ಕೆ ಬದಲಾಯಿಸಿದರೆ, ಆಗ ಮತದಾರರ ಪಟ್ಟಿಗಳಲ್ಲಿ ನಿಮ್ಮ ನಮೂದನೆಯನ್ನು ಆ ಪ್ರದೇಶಕ್ಕೆ ವರ್ಗಾಯಿಸಲು ಅರ್ಜಿಸಲ್ಲಿಸ ಬೇಕು.
 • ಈ ಉದ್ದೇಶಕ್ಕೆ ಫಾರಂ ಸಂಖ್ಯೆ-9 ಅನ್ನು ಬಳಸಬೇಕು.
 • ವಿಳಾಸ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ (ಬ್ಯಾಂಕ್/ಅಂಚೆ ಕಚೇರಿಯ ಪ್ರಸ್ತುತ ಪಾಸ್ ಬುಕ್, ಪಡಿತರ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್/ ಆದಾಯ ತೆರಿಗೆ ನಿರ್ಧಾರಣ ಆದೇಶ ಅಥವಾ ಆ ವಿಳಾಸದ ಇತ್ತೀಚಿನ ನೀರು/ದೂರವಾಣಿ/ವಿದ್ಯುಚ್ಛಕ್ತಿ/ಗ್ಯಾಸ್ ಸಂಪರ್ಕದ ಬಿಲ್ಲು (ಅರ್ಜಿದಾರ ಅಥವಾ ಆತ/ಆಕೆಯ ಹೆತ್ತವರ ವಿಳಾಸದಲ್ಲಿ ಇತ್ಯಾದಿ) ಅಥವಾ ಆ ವಿಳಾಸದ ಅರ್ಜಿದಾರ ಹೆಸರಿನಲ್ಲಿ ಅಂಚೆ ಇಲಾಖೆಯ ಸ್ವೀಕೃತ/ ಕಳುಹಿಸಿದ ಅಂಚೆಗಳು.

ಅರ್ಜಿ

 • ಫಾರಂ ನಂಬರ್- 6
 • ಫಾರಂ ನಂಬರ್- 7
 • ಫಾರಂ ನಂಬರ್- 8
 • ಫಾರಂ ನಂಬರ್- 8 A

ಅರ್ಜಿಯನ್ನು ಎಲ್ಲಿ ಸಲ್ಲಿಸುವುದು

 • ನೀವು ನಗರ ಸಭೆಯ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಅರ್ಜಿಯನ್ನು ಕೆಳಕಂಡಲ್ಲಿ ಸಲ್ಲಿಸಿ:
 • ಸಹಾಯಕ ಆಯುಕ್ತರು (ನಗರ ಪಾಲಿಕೆಯ ಕಚೇರಿ)
 • ಅಂಚೆ ಕಚೇರಿಗಳು
 • ವಾಣಿಜ್ಯ ಮಳಿಗೆಗಳ ಡ್ರಾಪ್ ಡೌನ್ ಪೆಟ್ಟಿಗೆಗಳು
 • ಪೆಟ್ರೋಲ್ ಬಂಕ್ಗಳು.
 • ನೀವು ನಗರ ನಗರ ಸಭೆಯ ಪ್ರದೇಶವಲ್ಲದೆ ಬೇರೆ ಕಡೆ ವಾಸವಾಗಿದ್ದರೆ, ನಿಮ್ಮ ಅರ್ಜಿಯನ್ನು ನಿಮ್ಮ ಜಿಲ್ಲೆಯಲ್ಲಿ ಸಲ್ಲಿಸಿ:
 • ಉಪ ಪರೀಕ್ಷಕ ಕಚೇರಿ.
 • ರೆವಿನ್ಯೂ ಡಿವಿಶನಲ್ ಅಧಿಕಾರಿ ಕಚೇರಿ (ಮತದಾರ ನೋಂದಾವಣೆ ಅಧಿಕಾರಿ)
 • ತಹಶೀಲ್ದಾರರ ಕಚೇರಿ (ಸಹಾಯಕ ಮತದಾರ ನೋಂದಾವಣೆ ಅಧಿಕಾರಿ)

ಮೂಲ: ಪೋರ್ಟಲ್ ತಂಡ

3.07766990291
nagaraj Mar 18, 2017 09:16 PM

self

ಫಾರಂ ನಂಬರ್- 6 Nov 17, 2016 08:31 PM

ಫಾರಂ ನಂಬರ್- 6

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top