ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಧಾರ್‌ ಎಂದರೇನು

ಆಧಾರ್‌, ಭಾರತ ಸರ್ಕಾರದ ಪರವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ೧೨ ಅಂಕೆಗಳ ಒಂದು ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ.

ಆಧಾರ್‌, ಭಾರತ ಸರ್ಕಾರದ ಪರವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ೧೨ ಅಂಕೆಗಳ ಒಂದು ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ.ಇದನ್ನು ಭಾರತದ ಯಾವುದೇ ಸ್ಥಳದಲ್ಲಿ ವ್ಯಕ್ತಿಯ ಗುರುತು ಮತ್ತು ವಿಳಾಸದ ಸಾಕ್ಷಿಯಾಗಿ ಬಳಸಬಹುದಾಗಿದೆ.ಯಾವುದೇ, ವಯಸ್ಸು/ಲಿಂಗದ ಭಾರತೀಯರು ಯುಐಡಿಎಐನ ಪರಿಶೀಲನಾ ಪ್ರಕ್ರಿಯೆಗೆ ಒಳಪಟ್ಟಂತೆ ಆಧಾರ್‌ಗಾಗಿ ದಾಖಲು ಮಾಡಿಕೊಳ್ಳಬಹುದು.ಪ್ರತಿಯೊಬ್ಬರು ಒಮ್ಮೆ ಮಾತ್ರ ದಾಖಲು ಮಾಡಿಕೊಳ್ಳಬಹುದಾಗಿದ್ದು ಇದು ಉಚಿತವಾಗಿರುತ್ತದೆ.ಪ್ರತಿ ಆಧಾರ್‌ ಸಂಖ್ಯೆ ಆಯಾ ವ್ಯಕ್ತಿ ವಿಶಿಷ್ಟವಾಗಿದ್ದು, ಜೀವನ ಪರ್ಯಂತ ಪರಿಗಣಿತವಾಗಿರುತ್ತದೆ. ಆಧಾರ್‌ ಸಂಖ್ಯೆಯನ್ನು ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್‌, ಮೊಬೈಲ್‌ ದೂರವಾಣಿ ಸಂಪರ್ಕ ಹಾಗೂ ಇತರ ಸರ್ಕಾರಿ/ಸರ್ಕಾರೇತರ ಸೇವೆಗಳಿಗಾಗಿ ಬಳಸಿಕೊಳ್ಳಬಹುದು.

ಆಧಾರ್‌ ಕುರಿತು ಮಾಹಿತಿ

ಆಧಾರ್‌

  • ಇದನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದಾಗಿದೆ, ಮಿತವ್ಯಯದ ಮಾರ್ಗ ಕೂಡ.
  • ಸರ್ಕಾರಿ ಹಾಗೂ ಖಾಸಗಿ ಮಾಹಿತಿ ಮೂಲಗಳಲ್ಲಿ ಅಪಾರ ಪ್ರಮಾಣದ ನಕಲಿ ಮತ್ತು ಖೊಟ್ಟಿ ಗುರುತುಗಳನ್ನು ನಿರ್ಮೂಲಗೊಳಿಸುವಷ್ಟು ಇದು ವಿಶಿಷ್ಟ ಹಾಗೂ ಸದೃಢವಾಗಿದೆ.
  • ಯಾವುದೇ ಜಾತಿ, ಜನಾಂಗ, ಧರ್ಮ ಮತ್ತು ಭೌಗೋಳಿಕ ವರ್ಗೀಕರಣವಿಲ್ಲದ ವಿಶಿಷ್ಟ ಸಂಖ್ಯೆ ಇದಾಗಿರುತ್ತದೆ.

ಆಧಾರ್‌ ಆಗಿದೆ ಆಧಾರ್‌ - ಇದು ಅಲ್ಲ
1. ಮಗು ಮತ್ತು ಶಿಶುಗಳನ್ನು ಒಳಗೊಂಡಂತೆ ಪ್ರತಿ ಭಾರತೀಯನಿಗೆ ವೈಯಕ್ತಿಕವಾಗಿ ಒದಗುವ ೧೨ ಅಂಕೆಗಳ ವಿಶಿಷ್ಟ ಗುರುತು ಇದಾಗಿದೆ. ಇದು ಮತ್ತೊಂದು ಚೀಟಿ.
2. ಪ್ರತಿ ಭಾರತೀಯ ನಿವಾಸಿಯನ್ನು ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ. ಒಂದು ಕುಟುಂಬಕ್ಕೆ ಒಂದು ಆಧಾರ್‌ ಚೀಟಿ ಸಾಕಾಗುತ್ತದೆ.
3. ಡೆಮೋಗ್ರಾಫಿಕ್ (ವಿಳಾಸದ ವಿವರ) ಮತ್ತು ಬಯೋಮೆಟ್ರಿಕ್ ವಿವರಗಳ ಆಧಾರದ ಮೇಲೆ ಪ್ರತಿ ವ್ಯಕ್ತಿಯ ವಿಶಿಷ್ಟತೆಯನ್ನು ಸಾಬೀತುಪಡಿಸುತ್ತದೆ. ಜಾತಿ, ಧರ್ಮ ಮತ್ತು ಭಾಷೆ ಮೊದಲಾದ ಮಾಹಿತಿ ಸಂಗ್ರಹವಾಗಿದೆ.
4. ಇದೊಂದು ಸ್ವಯಂ ಸೇವೆಯಾಗಿದ್ದು, ಹಾಲಿ ದಾಖಲಾತಿಗಳ ಪರಿಗಣನೆ ಇಲ್ಲದೆ ಪ್ರತಿ ನಿವಾಸಿಯು ಇದನ್ನು ಬಳಸಿಕೊಳ್ಳಬಹುದಾಗಿದೆ. ಗುರುತು ದಾಖಲೆ ಇರುವ ಪ್ರತಿ ಭಾರತೀಯ ನಿವಾಸಿಗೆ ಕಡ್ಡಾಯವಾಗಿರುತ್ತದೆ.
5. ಪ್ರತಿ ವ್ಯಕ್ತಿಗೆ ಒಂದು ವಿಶಿಷ್ಟ ಆಧಾರ್‌ ಐಡಿ ಸಂಖ್ಯೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಅನೇಕ ಆಧಾರ್‌ ಐಡಿ ಸಂಖ್ಯೆ ಪಡೆಯಬಹುದು.
6. ಆಧಾರ್‌ ಒಂದು ಸಾರ್ವತ್ರಿಕ ಗುರುತಿನ ಸೌಲಭ್ಯವಾಗಿದ್ದು, ಇದನ್ನು ಗುರುತು ಸಂಬಂಧಿತ (ಪಡಿತರ ಚೀಟಿ, ಪಾಸ್‌ಪೋರ್ಟ್‌ ಇತ್ಯಾದಿ) ಅರ್ಜಿಗಳಲ್ಲಿ ಬಳಸಬಹುದು. ಆಧಾರ್‌, ಉಳಿದೆಲ್ಲ ಐಡಿ ಗುರುತುಗಳಿಗೆ ಬದಲಾದ ವ್ಯವಸ್ಥೆಯಾಗಿದೆ.
7. ಯುಐಡಿಎಐ, ಯಾವುದೇ ಗುರುತು ದೃಢೀಕರಣ ಪ್ರಶ್ನೆಗಳಿಗೆ ಹೌದು/ಇಲ್ಲ ಉತ್ತರವನ್ನು ನೀಡುತ್ತದೆ. ಯುಐಡಿಎಐ ಮಾಹಿತಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಲಭ್ಯವಾಗಬಲ್ಲದು.

ಮೂಲ :ಯು ಐ ಡಿ ಎ ಐ

3.52173913043
Shivakumar A N Sep 21, 2016 09:37 AM

Aadhaar no. Is fully used to Digital India..

suraya Sep 19, 2016 02:11 PM

ಉತ್ತಮವಾದ ಪುಟ

kiran kumar Sep 18, 2016 05:57 PM

ಉತ್ತಮವಾದ ಪುಟ

MADHU Sep 18, 2016 05:23 PM

ಉತ್ತಮವಾದ ಪುಟ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top