ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅರ್ಜಿ

ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಹಾಕುವಾಗ, ಪ್ರಶ್ನೆಯನ್ನು ರೂಪಿಸುವುದು ಅತಿ ಮುಖ್ಯ.

ಅರ್ಜಿಯನ್ನು ಹೇಗೆ ಬರೆಯುವುದು?

ಉತ್ತರ: ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಹಾಕುವಾಗ, ಪ್ರಶ್ನೆಯನ್ನು ರೂಪಿಸುವುದು ಅತಿ ಮುಖ್ಯ. ಒಂದು ಚಿಕ್ಕ ಭಿನ್ನಭಿಪ್ರಾಯ ಅಥವಾ ಅಸ್ಪಷ್ಟ ಪ್ರಶ್ನೆಗಳು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಕೆಳಗಿನ ಗೊತ್ತುವಳಿಗಳನ್ನು ಅನುಸರಿಸಿ:

 • ಅರ್ಜಿಯನ್ನು ಬರೆಯಲು ಬಿಳಿಯ ಹಾಳೆಯನ್ನು ಉಪಯೋಗಿಸಿ. ನೋಟ್ ಶೀಟ್ ಅಥವಾ ಕೋರ್ಟ್ ಸ್ಟಾಂಪ್ ಪೇಪರ್ ಬಳಸುವ ಅಗತ್ಯವಿಲ್ಲ.
 • ವಿಷಯವನ್ನು ಕೈ ಬರಹದಲ್ಲಿ ಬರೆಯ ಬಹುದು ಅಥವಾ ಟೈಪ್ ಮಾಡಬಹುದು. ವಿಷಯವನ್ನು ಟೈಪ್ ಮಾಡಲೇ ಬೇಕಾದ ಕಡ್ಡಾಯವಿಲ್ಲ.
 • ಅರ್ಜಿಯು ಸ್ಪಷ್ಟವಾಗಿದೆ ಮತ್ತು ಸುಲಭವಾಗಿ ಓದಲು ಸಾಧ್ಯ ಎಂಬುದನ್ನು ಖಚಿತ ಪಡಿಸಿ ಕೊಳ್ಳಿ
 • ಮಾಹಿತಿಯನ್ನು ಕೇಳುವಾಗ ಅರ್ಜಿಯಲ್ಲಿ ಪುಟಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿಲ್ಲ
 • ಒಂದು ಅರ್ಜಿಯಲ್ಲಿ ಕೇಳಬಹುದಾದ ಪ್ರಶ್ನೆಗಳ ಸಂಖ್ಯೆಗೆ ನಿರ್ಬಂಧವಿಲ್ಲ. ಆದರೆ ಒಂದು ಅರ್ಜಿಯಲ್ಲಿ ಮಿತವಾದ ಪ್ರಶ್ನೆಗಳನ್ನು ಕೇಳುವುದು ಮತ್ತು ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳುವುದು ಸೂಕ್ತ.
 • ಒಬ್ಬರು ಅವನಿಗೆ/ಅವಳಿಗೆ ಇಷ್ಟವಾದಷ್ಟು ಸಣ್ಣ ಪ್ರಶ್ನೆಗಳನ್ನು ಕೇಳಬಹುದು. ಆದರೆ ಒಂದೇ ಬಾರಿಗೆ ದೊಡ್ಡ ಮಾಹಿತಿಯನ್ನು ಕೇಳಬೇಡಿ.
 • ಅರ್ಜಿಯಲ್ಲಿ ಯಾವಾಗಲೂ ನಿಮ್ಮ ಹೆಸರು ಬರೆಯಿರಿ ಮತ್ತು ನಿಮ್ಮ ಸಹಿ ಹಾಕಿ, ನಿಮ್ಮ ' ಕೆಲಸ/ಸ್ಥಾನ'ವನ್ನು ನಮೂದಿಸುವ ಅವಶ್ಯಕತೆ ಇಲ್ಲ, ಎಲ್ಲಾ ಪ್ರಜೆಗೂ ಮಾಹಿತಿಯ ಹಕ್ಕಿದೆ.
 • 'ಏಕೆ' ಎಂದು ಪ್ರಾರಂಭ ವಾಗುವ ನೇರ ಪ್ರಶ್ನೆಯನ್ನು ಕೇಳಬೇಡಿ, ಅದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಅನ್ವಯಿಸುವುದಲಿಲ್ಲ ವಾದುದರಿಂದ ನಿರಾಕರಣೆಗೆ ಯೋಗ್ಯವಾಗುತ್ತದೆ ಉದಾಹರಣೆಗೆ, 'ನೀವು ಏಕೆ ಬಿಲ್ ಮಂಜೂರು ಮಾಡಲು ವಿಫಲರಾಗಿರುವಿರಿ?', ಈ ಪ್ರಶ್ನೆಯು ತಿರಸ್ಕರಿಸಲು ಅರ್ಹ.

ಕಲಂ 4(1)(d) ಅಡಿಯಲ್ಲಿ, "ಆಡಳಿತದ" ಅಥವಾ "ಭಾಗಶಃ ನ್ಯಾಯಿಕ" ತೀರ್ಪಿನ ಹಿಂದಿನ ಕಾರಣಗಳನ್ನು ಕೇಳಿ, ವಿಶೇಷವಾಗಿ ನೀವು ಒಬ್ಬ "ಭಾದಿತ ವ್ಯಕ್ತಿ" ಆಗಿದ್ದರೆ

 • ಕೋರಿದ ಮಾಹಿತಿಯು ಭಾರಿ ಪ್ರಮಾಣದಲ್ಲಿದರೆ, ವೆಚ್ಚವನ್ನು ಉಳಿಸಲು CDಯ ರೂಪದಲ್ಲಿ ಕೇಳುವುದು ಉತ್ತಮ.
 • ಮಾಹಿತಿಯನ್ನು ಕೇಳಲು ನೀವು ಕಾರಣವನ್ನು ಬರೆಯುವ ಅವಶ್ಯಕತೆ ಇಲ್ಲ, ಇದನ್ನು ನೆನಪಿಡಿ
 • ಹಣ ಪಾವತಿದ ವಿವರಗಳನ್ನು ನಮೂದಿಸಿ, ಉದಾಹರಣೆಗೆ BC/DD/IPO ಸಂಖ್ಯೆ, ಬ್ಯಾಂಕ್/ಅಂಚೆ ಕಚೇರಿ. ದಿನಾಂಕ, ಹಣದ ರಸೀದಿಯ ವಿವರಗಳು ಇತ್ಯಾದಿಗಳನ್ನು ನಿಮ್ಮ ಅರ್ಜಿಯ ಕೊನೆಯಲ್ಲಿ ನಮೂದಿಸಿ.

ಅರ್ಜಿಯನ್ನು ಯಾರಿಗೆ ಸಂಬೋಧಿಸ ಬೇಕು?

ಉತ್ತರ:

 • ನೀವು ಅರ್ಜಿ ಸಲ್ಲಿಸ ಬೇಕಾಗಿರುವ, ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರಗಳು, ಹೆಸರು, ವಿಳಾಸ ಇತ್ಯಾದಿಗಳನ್ನು ಬರೆಯಿರಿ.
 • ನೀವು ನಿಮ್ಮ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಗುರುತಿಸುವಲ್ಲಿ ತೊಂದರೆಯಾದರೆ, ನೀವು ನಿಮ್ಮ ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ, C/o ವಿಭಾಗದ ಮುಖ್ಯಸ್ಥರಿಗೆ ಸಂಬೋಧಿಸ ಬಹುದು ಮತ್ತು ಅದನ್ನು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರಕ್ಕೆ ಅಗತ್ಯವಾದ ಅರ್ಜಿಯ ಶುಲ್ಕದೊಂದಿಗೆ ಕಳುಹಿಸಿ
 • ವಿಭಾಗದ ಮುಖ್ಯಸ್ಥರು ನಿಮ್ಮ ಅರ್ಜಿಯನ್ನು ಸಂಬಂಧ ಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರವಾನಿಸಬೇಕು.
 • ನಿಮ್ಮ ಅರ್ಜಿಯಲ್ಲಿ ನಿರ್ದಿಷ್ಟವಾದ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರನ್ನು ನಮೂದಿಸ ಬೇಡಿ, ಅವರು ವರ್ಗಾವಣೆಯಾಗಬಹುದಾದ ಅಥವಾ ಹೊಸ ವ್ಯಕ್ತಿ ಆ ಸ್ಥಾನಕ್ಕೆ ಬರುವ ಸಂಭವವಿರುತ್ತದೆ.
ಮೂಲ : ಪೋರ್ಟಲ್  ತಂಡ
3.09638554217
ರಾಜಕುಮಾರ ಡಿ ಚಿಂಚೂಳೆ May 30, 2019 03:42 PM

ಮ್ಯುಟೆಶನ( M R 4 )2018 2019 ದಿನಾಂಕ 15*9*2018 ಸಂಬದಿಸಿದ ದಾಖಲೆ ಹಕ್ಕು ಬದಲಾವಣೆಯ ಸಂಬದಿಸಿದ ದಾಖಲೆ ಮತ್ತು ಪೌತಿ ಖಾತೆ ಸಂಬಂದಿಸಿದ ದಾಖಲೆಗಳ ಪ್ರತಿ ಮರಣ ಪ್ರಮಾಣ ಪತ್ರ ವೈಯಕ್ತಿಕ ಪತ್ರ ಮತ್ತು ಇದಕ್ಕೆ ಸಂಭದಿಸಿದ ಎಲ್ಲಾ ತರಹದ ದಾಖಲೆ ಕೂಡಬೆಕಾಗಿ ವಿನಂತಿ

ಶಿವು.ಮೇಲಿನಮನಿ Jan 09, 2019 09:18 PM

ನಮ್ಮ ಗ್ರಾಮ ಪಂಚಾಯತದಲಿ ನಾನು ರಸ್ತೆ ಕಾಮಗಾರಿಯನ ಬಗ್ಗೆ ಮಾಹಿತಿ ಕೇಳಿದರೆ ಸುಮಾರು ಹತ್ತು ತಿಂಗಳಾದರು ಮಾಹಿತಿ ನೀಡಿಲ್ಲ. ಇದಕ್ಕೆ ತಮ ಮುಂದಿನ ಸಲಹೆ ಸೂಚನೆಗಳನ್ನು ತಿಳಿಸಿ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top