ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

೧ ನೇ ಮನವಿ ಅರ್ಜಿ

ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮನವಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು

ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮನವಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು

 1. ಮೊದಲ ಮನವಿಯನ್ನು ಯಾವಾಗ ಮಾಡಬೇಕು:
  • ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ನೀವು ಕೇಳಿದ ಮಾಹಿತಿಯನ್ನು ಒದಗಿಸಲು ಸಲ್ಲಿಸಿದ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ
  • ಸಾರ್ವಜನಿಕ ಪ್ರಾಧಿಕಾರವು 30 ದಿನಗಳು ಅಥವಾ 48 ಘಂಟೆಗಳ* ಕಾಲಾವಧಿಯ ಒಳಗೆ ಮಾಹಿತಿ ಒದಗಿಸಲು ಅಸಮರ್ಥವಾದರೆ
  • ಸಾರ್ವಜನಿಕ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಲು ಅಥವಾ ಕೇಳಿದ ಮಾಹಿತಿಯನ್ನು ಒದಗಿಸಲು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸದಿದ್ದಲ್ಲಿ
  • ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅರ್ಜಿಯನ್ನು ಸ್ವೀಕರಿಸಲು ಮತ್ತು ಅದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವರ್ಗಾಯಿಸಲು ನಿರಾಕರಿಸಿದರೆ
  • ನಿಮಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ತೀರ್ಪು ತೃಪ್ತಿಕರವಾಗಿರದಿದ್ದಲ್ಲಿ
  • ಪೂರೈಸಿದ ಮಾಹಿತಿಯು ಅಪೂರ್ಣ, ತಪ್ಪು ಅಭಿಪ್ರಾಯವನ್ನುಂಟುಮಾಡುತ್ತದೆ ಅಥವಾ ತಪ್ಪು ಎಂದು ನೀವು ಭಾವಿಸಿದಲ್ಲಿ
  • ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ ಪಡೆದ ಅರ್ಜಿ ಶುಲ್ಕವು ದುಬಾರಿ ಎಂದು ನೀವು ಭಾವಿಸಿದರೆ.
  • ಪ್ರಥಮ ಮೇಲ್ಮನವಿ ಅರ್ಜಿಯನ್ನು ದಾಖಲು ಮಾಡಲು ಕಾಲಾವಧಿ:
  • ವಿಧಿಸಿದ ಸಮಯದ ಮುಕ್ತಾಯದ ದಿನಾಂಕ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ (SPIO) / ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯೊಂದಿಗೆ (CPIO) ಸಂಪರ್ಕಿಸಿದ (ತೀರ್ಪು ಅಥವಾ ಬೇಡಿಕೆಯ ನಿರಾಕರಣೆ) ದಿನದಿಂದ 30 ದಿನಗಳ ಒಳಗೆ
  • ಮೇಲ್ಮನವಿದಾರನನ್ನು ಮೇಲ್ಮನವಿ ಮೊಕದ್ದಮೆ ದಾಖಲು ಮಾಡುವುದನ್ನು ತಡೆಯಲಾಗಿದೆ ಎಂಬುದು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಖಾತ್ರಿಯಾದರೆ, ಮೇಲ್ಮನವಿಯನ್ನು 30 ದಿವಸಗಳ ನಂತರ ಸಹ ಒಪ್ಪಿಕೊಳ್ಳಬಹುದು.
 2. ಪ್ರಥಮ ಮೇಲ್ಮನವಿ ಅರ್ಜಿಯನ್ನು ಸಿದ್ಧಗೊಳಿಸುವುದು:
 3. ಬಿಳಿಯ ಹಾಳೆಯ ಮೇಲೆ ಅರ್ಜಿಯ ಕರಡನ್ನು ಬರೆಯಿರಿ
 4. ಅರ್ಜಿಯು ಕೈ ಬರಹದಲ್ಲಿರ ಬೇಕು ಅಥವಾ ಟೈಪ್ ಮಾಡಿರಬೇಕು
 5. ಅರ್ಜಿಯು ಇಂಗ್ಲಿಷ್, ಹಿಂದಿ ಅಥವಾ ಯಾವುದೇ ರಾಜ್ಯ ಭಾಷೆಗಳಲ್ಲಿರಬೇಕು
 6. ನಿಗದಿ ಪಡಿಸಿದ ವಿಧಾನದಲ್ಲಿ ಸ್ಪಷ್ಟವಾಗಿ ಅಗತ್ಯವಾದ ಮಾಹಿತಿಗಳನ್ನು ಒದಗಿಸಿ,
 7. ಸ್ವತಃ ದೃಢೀಕರಿಸಿದ ಕೋರಿಕೆಯ ಅರ್ಜಿಯ ಜೆರಾಕ್ಸ್ ಪ್ರತಿಯ ಜೊತೆಗೆ ಅರ್ಜಿ ಶುಲ್ಕದ ಪುರಾವೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿ ಸ್ವೀಕೃತದ ರಸೀದಿ, ತೀರ್ಪಿನ ಪ್ರತಿ ಇತ್ಯಾದಿಗಳನ್ನು ಸೇರಿಸಿ
 8. ನಿಮ್ಮ ಹೆಚ್ಚಿನ ಉಪಯೋಗಕ್ಕಾಗಿ ಅರ್ಜಿ ಮತ್ತು ಸೇರಿಸಿದ ಎಲ್ಲಾ ದಾಖಲೆಗಳ ಒಂದು ಜೆರಾಕ್ಸ್ ಪ್ರತಿ ಮಾಡಿಸಿ ಕೊಳ್ಳಿ.
 9. ಪ್ರಥಮ ಮೇಲ್ಮನವಿ ಅರ್ಜಿಯನ್ನು ಎಲ್ಲಿ ಸಲ್ಲಿಸುವುದು:
 10. ಇದನ್ನು ಅದೇ ಸಾರ್ವಜನಿಕ ಪ್ರಾಧಿಕಾರದ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಕಚೇರಿಯಲ್ಲಿ ಸಲ್ಲಿಸ ಬೇಕು
 11. ಅಧಿಕಾರ ಶ್ರೇಣಿಯಲ್ಲಿ, ಪ್ರಥಮ ಮೇಲ್ಮನವಿ ಪ್ರಾಧಿಕಾರವು ಸಾರ್ವಜನಿಕ ಮಾಹಿತಿ ಅಧಿಕಾರಿಗಿಂತ ಮೇಲ್ದರ್ಜೆಯದು ಮತ್ತು ಅರ್ಜಿಯನ್ನು ಪಡೆಯಲು, ಕೋರಿದ ಮಾಹಿತಿಯನ್ನು ಒದಗಿಸಲು ಅಥವಾ ಅರ್ಜಿಯನ್ನು ನಿರಾಕರಿಸಲು ಬದ್ಧವಾಗಿರುತ್ತದೆ
 12. 1ನೇ ಮನವಿ ಅರ್ಜಿಯನ್ನು ಸಲ್ಲಿಸುವ ಮೊದಲು, ಪ್ರಥಮ ಮೇಲ್ಮನವಿ ಪ್ರಾಧಿಕಾರದ ಹೆಸರು, ನಿಗದಿಸಿದ ಶುಲ್ಕ ಮತ್ತು ಶುಲ್ಕ ಪಾವತಿಯ ವಿಧಾನವನ್ನು ಪರಿಕ್ಷೀಸಿ (ಕೆಲವು ರಾಜ್ಯಗಳು 1ನೇ ಮನವಿಯ ವೆಚ್ಚದ ಶುಲ್ಕದ ನಿಬಂಧನೆಯನ್ನು ಮಾಡಿದೆ ಆದರೆ ಕೆಲವು ರಾಜ್ಯಗಳು ಅರ್ಜಿ ಶುಲ್ಕವನ್ನು ವಿಧಿಸುತ್ತವೆ).
 13. 1ನೇ ಮನವಿ ಅರ್ಜಿಯನ್ನು ಹೇಗೆ ಕಳುಹಿಸುವುದು:
  • ಅರ್ಜಿಯನ್ನು ನೇರವಾಗಿ ಅಥವಾ ಅಂಚೆ ಮೂಲಕ ಕಳುಹಿಸ ಬೇಕು.
  • ನೀವು ಅಂಚೆ ಮೂಲಕ ಕಳುಹಿಸುವುದಾದರೆ, ನೋಂದಾಯಿತ/ರಿಜಸ್ಟರ್ ಅಂಚೆ ಸೇವೆ ಮೂಲಕವೇ ಕಳುಹಿಸಿ. ಯಾವಾಗಲೂ ಕೊರಿಯರ್ ಸೇವೆಯನ್ನು ಬಳಸಬೇಡಿ.
  • ಎರಡು ಸಂಧರ್ಭಗಳಲ್ಲಿ ಅರ್ಜಿಯನ್ನು ಕಳುಹಿಸಿದ ಅಥವಾ ಸಲ್ಲಿಸಿದ ರಸೀದಿಯನ್ನು ಪಡೆಯಿರಿ.
 14. ಮಾಹಿತಿಯ ಪುರೈಕೆಗೆ ಕಾಲಾವಧಿ:
  • ಸಹಜ ಪರಿಸ್ಥಿತಿಯಲ್ಲಿ ತೀರ್ಪನ್ನು 30 ದಿನಗಳ ಒಳಗೆ ನೀಡಬೇಕು, ಆದರೆ ಅಸಹಜ ಪರಿಸ್ಥಿತಿಯಲ್ಲಿ 45 ದಿನಗಳ ಕಾಲ ಪರಿಮಿತಿ ಇರುತ್ತದೆ.
  • ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ (FAA) ಅರ್ಜಿ ಸ್ವೀಕೃತವಾದ ದಿನಾಂಕದಿಂದ ತೀರ್ಪಿನ ಕಾಲಾವಧಿಯನ್ನು ಪರಿಗಣಿಸಲಾಗುತ್ತದೆ.

೧ ನೇ ಮನವಿ ಅರ್ಜಿ

ಮೂಲ: ಪೋರ್ಟಲ್  ತಂಡ

3.18032786885
ಅಶೋಕ Jul 25, 2019 03:17 PM

ಮಾಹಿತಿ ನೀಡಲು ವಿಳಂಬವಾಗಿರುತ್ತದೆ

ಕಾಶನಾಥ ನಾಟೇಕರ Apr 20, 2019 08:12 AM

ದುರ್ಗ ದೇವಿ ಟೆಂಪಲ್ ಶಹಾಪುರ ತಾಲೂಕು ಜಿಲ್ಲೆ ಯಾದಗಿರಿ

ಎನ್ ಎಲ್ ಭರತ್ ರಾಜ್ Apr 07, 2019 10:05 PM

ತಹಸೀಲ್ದಾರ್ ಕಛೇರಿ ಗೆ ಕೆಲವು ಮಾಹಿತಿಗಾಗಿ ಅರ್ಜಿ ಸಲ್ಲಿಸಿದರೆ ಅವರು ವಿನಕಾರಣ ನೀಡಿ ಹಿಂಬರಹ ನೀಡುತ್ತಾರೆ ಹಾಗಾಗಿ ಮೇಲ್ಮನವಿಯನ್ನ ಎಲ್ಲಿಗೆ ಸಲ್ಲಿಸಬೇಕು

ಪುಷ್ಪಲತಾ Feb 25, 2019 04:53 PM

ಹೌ ಮೆನಿ ಇಯರ್ಸ್ ಪಬ್ಲಿಕ್ ಇನ್ಫಾರ್ಮಶನ್ ಆಫೀಸರ್ ಕ್ಯಾನ್ ಕೀಪ್ RTI application

ಮನೋಜ್ Oct 17, 2018 03:12 PM

ನಮ್ಮ ಪಂಚಾಯಿತಿ ಯಲ್ಲಿ ನಾನ್ನು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದೆ 2 ನೇ ಮೆಲ್ಮೆಮೆಲ್ಮನವಿಯನ್ನು ಹಾಕಿದೆ ಯಾವು
ಮಾಹಿತಿ ನಿಡಿಲ್ಲ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top