ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಾಹಿತಿಗಾಗಿ ಹಕ್ಕು

ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ಹೊಂದಲ್ಪಟ್ಟಿರುವ ಅಥವಾ ನಿಯಂತ್ರಣದಲ್ಲಿರುವ ಮಾಹಿತಿಗೆ ಸುಲಭಗಮ್ಯತೆಯನ್ನು ಒದಗಿಸುತ್ತದೆ ಹಾಗು ಇದು ಕಾಮಗಾರಿಯನ್ನು, ದಾಖಲಾತಿಗಳನ್ನು, ದಾಖಲೆಗಳನ್ನು ಪರಿಶೀಲಿಸಲು, ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ದಸ್ತಾವೇಜುಗಳು /ದಾಖಲೆಗಳು ಹಾಗು ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳನ್ನು ಹಾಗು ವಿದ್ಯುನ್ಮಾನ ನಮೂನೆಯಲ್ಲಿ ಸಂಗ್ರಹಿಸಿದಲಾಗಿರುವ ಮಾಹಿತಿಯನ್ನು ಪದೆಯುವುದನ್ನೂ ಒಳಗೊಂಡಿದೆ.

ಮಾಹಿತಿಗಾಗಿ ಹಕ್ಕು ಎಂದರೆ ಏನು ?

ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ಹೊಂದಲ್ಪಟ್ಟಿರುವ ಅಥವಾ ನಿಯಂತ್ರಣದಲ್ಲಿರುವ ಮಾಹಿತಿಗೆ ಸುಲಭಗಮ್ಯತೆಯನ್ನು ಒದಗಿಸುತ್ತದೆ ಹಾಗು ಇದು ಕಾಮಗಾರಿಯನ್ನು, ದಾಖಲಾತಿಗಳನ್ನು, ದಾಖಲೆಗಳನ್ನು ಪರಿಶೀಲಿಸಲು, ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ದಸ್ತಾವೇಜುಗಳು /ದಾಖಲೆಗಳು ಹಾಗು ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳನ್ನು ಹಾಗು ವಿದ್ಯುನ್ಮಾನ ನಮೂನೆಯಲ್ಲಿ ಸಂಗ್ರಹಿಸಿದಲಾಗಿರುವ ಮಾಹಿತಿಯನ್ನು ಪದೆಯುವುದನ್ನೂ ಒಳಗೊಂಡಿದೆ.

ಮಾಹಿತಿಯನ್ನು ಯಾರು ಕೇಳಬಹುದು ?

ಯಾವುದೇ ನಾಗರಿಕನು ಲಿಖಿತ ರೂಪದಲ್ಲಿ ಒಂದು ಅರ್ಜಿಯನ್ನು ಸಲ್ಲಿಸುವ ಮೂಲಕ ಅಥವಾ ವಿದ್ಯುನ್ಮಾನೀಯ ಮಾರ್ಗದಲ್ಲಿ ಅಂಗ್ಲ/ಹಿಂದಿ/ಅರ್ಜಿಯನ್ನು ಯಾವ ಪ್ರಾಂತ್ಯದಲ್ಲಿ ಸಲ್ಲಿಸಲಾಗುತ್ತಿರುವುದೋ, ಅ ಪ್ರಾಂತ್ಯದ ಅಧಿಕೃತ ಭಾಷೆಯಲ್ಲಿ , ನಿರ್ದಿಷ್ಟ ಶುಲ್ಕಗಳೊಂದಿಗೆ ಮಾಹಿತಿಗಾಗಿ ಕೋರಬಹುದು.

ಮಾಹಿತಿಯನ್ನು ಯಾರು ಒದಗಿಸುತ್ತಾರೆ ?

ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವೂ ಓರ್ವ ಕೇಂದ್ರ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ವಿವಿಧ ಹಂತಗಳಲ್ಲಿ ನೇಮಕ ಮಾಡಬೇಕು, ಅವರು ಸಾರ್ವಜನಿಕರಿಂದ ಮಾಹಿತಿಗಾಗಿ ಕೋರಿಕೆಗಳನ್ನು ಸ್ವೀಕರಿಸುವರು. ಎಲ್ಲಾ ಆಡಲಿತಾತ್ಮಕ ಘಟಕಗಳಲ್ಲಿನ/ಕಚೇರಿಗಳಲ್ಲಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು ವ್ಯವಸ್ಥೆ ಮಾಡುವರು. ಮಾಹಿತಿಗಾಗಿನ ಅರ್ಜಿಯನ್ನು/ಕೋರಿಕೆಯನ್ನು ಮಾಹಿತಿಯನ್ನು ಒದಗಿಸುವ ಮೂಲಕ ಅಥವಾ ಕೋರಿಕೆಯನ್ನು ತಿರಸ್ಕರಿಸುವ ಮೂಲಕ 30 ದಿನಗಳ ಒಳಗೆ ವಿಲೇವಾರಿ ಮಾಡಬೇಕು.

ಮಾಹಿತಿಗಾಗಿ ಹಕ್ಕು ಅರ್ಜಿ ಶುಲ್ಕಗಳು

ಅಧಿನಿಯಮದ ಅಡಿಯಲ್ಲಿ ಮಾಹಿತಿಗಾಗಿ ಹಕ್ಕು ಅರ್ಜಿ ಶುಲ್ಕಗಳನ್ನು ಯುಐಎಡಿಎ ನ ಪಾವತಿ ಮತ್ತು ಲೆಕ್ಕಪತ್ರಗಳ ಅಧಿಕಾರಿಗಳಿಗೆ ಪಾವತಿಸ ಬೇಕಾದ ನಗದು/ಡಿಮಾಂಡ ಡ್ರಾಫ್ಟ್/ಭಾರತೀಯ ಅಂಚೆ ಇಲಾಖೆಯ ಆದೇಶ, ಇವುಗಳ ರೂಪದಲ್ಲಿ ಪಾವತಿಸಬೇಕು.

2005ರ ಪರಿಚ್ಛೇದ 4(1)(ಬಿ) ಅಡಿಯಲ್ಲಿ ಅನಿವಾರ್ಯ ಬಾಬುಗಳು

1 ಅದರ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು ಹಾಗು ಕರ್ತವ್ಯಗಳು ಸವಿವರ ಮಾಹಿತಿ
2 ಮೇಲ್ವಿಚಾರಣೆ ಹಾಗು ಉತ್ತರದಾಯಿತ್ವವೂ ಸೇರಿದಂತೆ, ತನ್ನ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ, ಅನುಸರಿಸುತ್ತಿರುವ ಕಾರ್ಯವಿಧಾನಗಳು ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ.
3 ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವಲ್ಲಿ ಅದು ನಿರ್ದಿಷ್ಠ ಪಡಿಸಿರುವ ಪರಿಮಾಣಗಳು. ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ.
4 ಅದರ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವಲ್ಲಿ ಅದರ ಸಿಬ್ಬಂದಿಗಳು ಬಳಸುವ ನಿಯಮಗಳು, ನಿಯಂತ್ರಣಗಳು, ನಿರ್ದೇಶನಗಳು, ಕೈಪಿಡಿಗಳು ಮತ್ತು ದಾಖಲೆಗಳು ಭಾರತ ಸರ್ಕಾರದ ಮಂತ್ರಾಲಯಗಳು/ಇಲಾಖೆಗಳಿಗೆ ಅನ್ವಯಗೊಳ್ಳುವ ಸಾಮಾನ್ಯ ರೂಢಿಯ ನಡವಳಿಕೆಗಳು/ನಿರ್ದೇಶನಗಳು ಯುಐಎಡಿಎಗೆ ಕೂಡ ತನ್ನ ಆಡಳಿತ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನ್ವಯವಾಗುತ್ತದೆ.
5 ಅದು ತನ್ನ ನಿಯಂತ್ರಣದ ಅಡಿಯಲ್ಲಿ ಹೊಂದಿರುವ ಪ್ರವರ್ಗವಾರು ದಾಖಲೆಗಳ ಒಂದು ತ:ಖ್ತೆ ಯುಐಎಡಿಎಯು ಯುಐಡಿ ಯೋಜನೆಗೆ ಸಂಬಂಧಿತ ದಾಖಲೆಗಳನ್ನು ಹೊಂದಿದೆ ಹಾಗು ಅವುಗಳು ಜಾಲತಾಣದಲ್ಲಿ ಯುಐಎಡಿಎ ದಾಖಲೆಗಳ ವಿಭಾಗದಲ್ಲಿ ಲಭ್ಯವಿವೆ.
6 ಸಲಹೆಸಮಾಲೋಚನೆಗಾಗಿ ಇರುವ ಯಾವುದಾದರೂ ನಿರ್ದಿಷ್ಟ ವ್ಯವಸ್ಥೆಯ ವಿವರಗಳು, ಅಥವಾ ಕಾರ್ಯನೀತಿಯನ್ನು ರೂಪಿಸುವುದಕ್ಕೆ ಅಥವಾ ಅದನ್ನು ಅನುಷ್ಥಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸದಸ್ಯರಿಂದ ಇರುವ ಪ್ರತಿನಿಧಿತ್ವ ಯುಐಎಡಿಎ ಒಂದು ನಿರ್ದಿಷ್ಠ ವಿಷಯಗಳ ಮೇಲೆ ವಿವಿಧ ಪಾಲುದಾರರ ಜೊತೆ ಸಮಾಲೋಚಿಸುತ್ತದೆ. ಮುಂದುವರಿದು, ಸಾರ್ವಜನಿಕ ಸದಸ್ಯರಿಂದ ಇಮೇಲ್ ಮೂಲಕ ಸಲಹೆಗಳನ್ನು ತೆಗೆದುಕೊಳ್ಳುತ್ತದೆ.
7 ಅದು ರಚಿಸಿರುವ ಎರಡು ಅಥವಾ ಅದಕ್ಕೂ ಹೆಚ್ಚಿನ ವ್ಯಕ್ತಿಗಳನ್ನು ಒಳಗೊಂಡಿರುವ ಮಂಡಳಿಗಳು,ಮಂಡಲಗಳು, ಸಮಿತಿಗಳು ಹಾಗು ಇತರೆ ಸಂಸ್ಥೆಗಳು, ಹೆಚ್ಚಿನದ್ದಾಗಿ, ಇವುಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದವೆ, ಅಥವಾ ಅಂತಹ ಸಭೆಗಳ ನಡಾವಳಿಗಳನ್ನು ಸಾರ್ವಜನಿಕರು ವೀಕ್ಷಿಸುವಂತಿದ್ದವೆ.. ಯುಐಎಡಿಎ ರಚಿಸಿರುವ ಸಮಿತಿಗಳು:
  1. ಬಯೋಮೆಟ್ರಿಕ್ಸ್ ಮಾನದಂಡಗಳ ಸಮಿತಿ
  2. ಜನಸಂಖ್ಯಾ ಶಾಸ್ತ್ರದ ಮೂಲಮಾತಿ ಮಾನದಂಡಗಳ ಪರಿಶೀಲನಾ
  3. ಜಾಗೃತಿ ಮತ್ತು ಸಂದೇಶ ಕಾರ್ಯನೀತಿ ಮಂಡಳಿ
ಈ ಸಮಿತಿಯ ವರದಿಗಳು ಯುಐಎಡಿಎ ಜಾಲತಾಣದಲ್ಲಿವೆ.ಸವಿವರ ಮಾಹಿತಿ
ಯುಐಎಡಿಎ ನೀಡಿರುವ ಪತ್ರಿಕಾ ಪ್ರಕಟಣೆಗಳು ಯುಐಎಡಿಎನ ಜಾಲತಾಣದಲ್ಲಿ ಲಭ್ಯವಿವೆ. (ಸವಿವರ ಮಾಹಿತಿ )
8 ತನ್ನ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿರ್ದೇಶಿಕೆ ನಮ್ಮನ್ನು ಸಂಪರ್ಕಿಸಿ’ಯನ್ನು ನೋಡಿ (ಸವಿವರ ಮಾಹಿತಿ )
9 ತನ್ನ ನಿಯಂತ್ರಣಗಳಲ್ಲಿ ಅನುವು ಮಾಡಿರುವ ರೀತಿಯಲ್ಲಿ ಪರಿಹಾರದ ವ್ಯವಸ್ಥೆಯೂ ಒಳಗೊಂಡಂತೆ , ತನ್ನ ಪ್ರತಿಯೋರ್ವ ಅಧಿಕಾರಿಗೆ ಮತ್ತು ಸಿಬ್ಬಂದಿಯು ಸ್ವೀಕರಿಸಿರುವ ಮಾಸಿಕ ವೇತನ. (ಸವಿವರ ಮಾಹಿತಿ )
10 ಎಲ್ಲಾ ಯೋಜನೆಗಳು, ಪ್ರಸ್ತಾಪಿಸಲಾಗಿರುವ ವೆಚ್ಚಗಳು ಹಾಗು ಮಾಡಲಾಗಿರುವ ವಿತರಣೆಗಳ ಮೇಲಿನ ವರದಿಗಳನ್ನು ಸೂಚಿಸಿದಂತೆ,ತನ್ನ ಪ್ರತಿಯೊಂದು ಸಂಸ್ಥೆಗೂ ಹಂಚಿಕೆ ಮಾಡಲಾಗಿರುವ ಅಯವ್ಯಯ, (ಸವಿವರ ಮಾಹಿತಿ )
11 ಹಂಚಿಕೆಯಾದ ಮೊತ್ತ ಹಾಗು ಅಂತಹ ಕಾರ್ಯಕ್ರಮಗಳ ಫಾಲಾನುಭಾವಿಗಳ ವಿವರಗಳನ್ನು ಒಳಗೊಂಡಂತೆ, ಸಹಾಯಾನುಧಾನದ ಕಾರ್ಯಕ್ರಮಗಳ ಅನುಷ್ಥಾನದ ಕಾರ್ಯವೈಖರಿ. ಅನ್ವಯಿಸುವುದಿಲ್ಲ.
12 ರಿಯಾಯಿತಿಗಳು, ಪರವಾನಿಗೆಗಳು ಅಥವಾ ಅದು ನೀಡಿರುವ ಮಂಜೂರಾತಿಗಳು ಅನ್ವಯಿಸುವುದಿಲ್ಲ.
13 ಒಂದು ವಿದ್ಯುನ್ಮಾನ ನಮೂನೆಯಲ್ಲಿ ಇಳಿಸಲ್ಪಟ್ಟಿರುವಂತೆ, ಲಭ್ಯವಿರುವ ಅಥವಾ ಅದು ಹೊಂದಿರುವ ಮಾಹಿತಿಯ ವಿವರಗಳು Information in electronic form are available on the website.
14 ಸಾರ್ವಜನಿಕ ಬಳಕೆಗಾಗಿ ಯಾವುದಾದನ್ನು ನಿರ್ವಹಿಸಿದ್ದಲ್ಲಿ, ಒಂದು ಪುಸ್ತಕ ಭಂಡಾರ ಅಥವಾ ವಾಚನಾಲಯದ ಕೆಲಸದ ವೇಳೆಯೂ ಸೇರಿದಂತೆ, ಮಾಹಿತಿಯನ್ನು ಪಡೆಯುವುದಕ್ಕಾಗಿ ನಾಗರಿಕರಿಗೆ ಲಭ್ಯವಿರುವ ಅನುಕೂಲತೆಗಳ ವಿವರಗಳು ಯುಐಎಡಿಎ ನಿರ್ವಹಿಸುವ ಯಾವುದೇ ಸಾರ್ವಜನಿಕ ಪುಸ್ತಕ ಭಂಡಾರವಾಗಲೀ ಅಥವಾ ವಾಚನಾಲಯವಾಗಲೀ ಇರುವುದಿಲ್ಲ.
15 ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರಗಳು (ಸವಿವರ ಮಾಹಿತಿ )

ಮೂಲ :ಯು  ಐ  ಡಿ ಆ  ಐ

3.09
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top