অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕ್ರೆಡಿಟ್ ಕಾಡ೯ಗಳು

ಕ್ರೆಡಿಟ್ ಕಾಡ೯ಗಳು

  • ಡೆಬಿಟ್ ಕಾಡ೯(ಖಚಿ೯ನ-ಕಾಡು೯)ನ್ನು ಬಳಸಿದಾಗ ತಕ್ಷಣ ನಿಮ್ಮ ಖಾತೆಯಿಂದ ಖಚಾ೯ಗುತ್ತದೆ. ಇದು ಡೆಬಿಟ್ ಕಾಡ್೯(ಖಚಿ೯ನ) ಅಥವಾ ಕ್ರೆಡಿಟ್(ಸಾಲದ) ಕಾಡಿ೯ಗೆ ಇರುವ ವ್ಯತ್ಯಾಸ.
  • ಸಾಲದ(ಕ್ರೆಡಿಟ್ ಕಾಡ೯)ನ ಬಳಕೆದಾರರಿಂದ ಬ್ಯಾಂಕಿಗೆ ಸಾಲದ ಅಪಾಯ ಅತೀ ಹೆಚ್ಚಾಗಿರುತ್ತದೆ.
  • ಯಾವ ಬ್ಯಾಂಕು ವ್ಯಾಪಾರಿಯ ವಹಿವಾಟಿಗೆ ಸಂದಾಯ ಮಾಡುತ್ತದೆಯೋ ಅದಕ್ಕೆ ಸಂಪಾದಿಸುವ ಬ್ಯಾಂಕ ಎಂದು ಕರೆಯಲಾಗುತ್ತದೆ.
  • ಹೆಚ್ಚಿಗೆ ಹಣ ಖಚು೯ ಮಾಡಿ ಋಣದ ಬಲೆಯಲ್ಲಿ ಸಿಗುವುದು, ಕಾಡ೯ನ್ನು ಕಳೆದುಕೊಳ್ಳುವುದರಿಂದ ಆಗುವ ಮತ್ತು ನಕಲಿ ಸಹಿಗಳಿಂದ ಆಗುವ ನಷ್ಟ ಇವು ಕ್ರೆಡಿಟ್ ಕಾಡ್೯ ಬಳಕೆದಾರರಿಗೆ ಆಗುವ ಪ್ರತಿಕೂಲಗಳು.
  • ಕ್ರೆಡಿಟ್ ಕಾಡ೯ಗಳನ್ನು ಕೊಡುವಾಗ ಅದರ ಮೇಲೆ ಅದನ್ನು ಬಳಸಲು ಮತ್ತು ಕೊಡಲು ತಿಳಿದಿರಬೇಕಾದ ಎಲ್ಲ ಕರಾರು ಮತ್ತು ನಿಯಮಗಳನ್ನು ಸ್ಪಷ್ಟ ಮತ್ತು ಸರಳ ಭಾಷೆಯಲ್ಲಿ ಬರೆದಿರಬೇಕು. ಕಾಡ್೯ ಕೊಡುವವರು ಅದಕ್ಕೆ ಸಂಬಂದಿಸಿದಂತೆ ವಾಷಿ೯ಕ ಪ್ರತಿಶತ ದರವನ್ನು (ಎ.ಪಿ.ಆರ್) ಕಾಡ್೯ ಮತ್ತು ಅದರ ಉತ್ಪನ್ನಗಳ ಮೇಲೆ ನಮೂದಿಸಿರಬೇಕು. ಕಾಡು೯ ಕೊಡುವ ಬ್ಯಾಂಕುಗಳು/ ಎನ್.ಬಿ.ಎಫ್.ಸಿ.ಗಳು ಒಂದೇ ಕಡೆಯಿಂದ ಕಾಡ೯ನ್ನು ಮೇಲ್ದಜಿ೯ಗೆ ಏರಿಸುವುದು ಮತ್ತು ಸಾಲದ ಮಿತಿಗಳನ್ನು ಏರಿಸುವುದನ್ನು ಮಾಡಲೇಬಾರದು. ಹಣ ತೆಗೆಯುವವರ ಒಪ್ಪಿಗೆಯನ್ನು ಯಾವುದೇ ಕರಾರು ಮತ್ತು ನಿಯಮಗಳನ್ನು ಬದಲಿಸುವ ಮೊದಲೇ ಖಾತ್ರಿಯಾಗಿ ತೆಗೆದುಕೊಳ್ಳಲೇಬೇಕು. ಎಲ್ಲಿ ದಲ್ಲಾಳಿಗಳು ವ್ಯವಹಾರವನ್ನು ಮಾಡುತ್ತಾರೋ ಅಲ್ಲಿ ಕಾಡ೯ ಕೊಡಮಾಡುವ ಬ್ಯಾಂಕು ಕೆ.ವಾಯ್.ಸಿ.ಯ ಅಗತ್ಯಗಳನ್ನು ಪೂರೈಸುವ ಹೊಣೆ ಹೊರಬೇಕಾಗುತ್ತದೆ.

ಸಾಲದ ಕಾಡು೯(ಕ್ರೆಡಿಟ್ ಕಾಡು೯)

ನೀವು ಕ್ರೆಡಿಟ್ ಕಾಡು೯ ಉಪಯೋಗಿಸುವ ಮುನ್ನ ಕ್ರೆಡಿಟ್ ಕಾಡ೯ ಅಂದರೆ ಏನು ? ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ನೀವು ಕ್ರೆಡಿಟ್ ಕಾಡ೯ನ್ನು ಹೇಗೆ ಬಳಸುತ್ತೀರಿ ಮತ್ತು ನಿವ೯ಹಣೆ ಮಾಡುತ್ತೀರಿ ಎಂಬುದು ನಿಮ್ಮ ಆಥಿ೯ಕ ಭವಿಷ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

ನಿಖರವಾಗಿ ಕ್ರೆಡಿಟ್ ಕಾಡ್೯ಅಂದರೆ ಏನು ?

ಕ್ರೆಡಿಟ್ ಕಾಡ್೯ ಒಂದು ಪ್ಲಾಸ್ಟಿಕ್ ತುಂಡಿಗಿಂತ ಸ್ವಲ್ಪ ದೊಡ್ಡದಾಗಿದೆ. ಇದೊಂದು ಆಥಿ೯ಕ ಸಂಸ್ಥೆಯ ನೀವು ಬಳಸಬಹುದಾದ ಸಾಲದ ರೂಪವಾಗಿದ್ದು, ನಂತರ ನೀವು ಆ ಸಾಲವನ್ನು ಮಾಸಿಕ ಕಂತುಗಳ ಮುಖಾಂತರ ಮರುಪಾವತಿಸಬಹುದಾಗಿದೆ. ನಿಮ್ಮ ಕ್ರೆಡಿಟ್ ಕಾಡ್೯ಗೆ ಒಂದು ಮಿತಿ ಇರುತ್ತದೆ, ನೀವು ನಿಮ್ಮ ಒಟ್ಟು ಬಾಕಿಯನ್ನು ಆ ಮಿತಿಯ ಒಳಗೆ ಇಡಬೇಕಾಗುತ್ತದೆ. ನೀವು ಹಣ ಸಂದಾಯ ಮಾಡಿದಾಗ ನೀವು ಖಚು೯ ಮಾಡಿದ ಮೊತ್ತವನ್ನು, ಮರುಪಾವತಿಯ ಅವಧಿಯ ಒಳಗೆ ಅಥವಾ ನೀವು ಖರೀದಿ ಮಾತ್ರ ಮಾಡಿ ಪೂಣ೯ ಬಾಕಿಯನ್ನು ಪ್ರತಿ ತಿಂಗಳು ಸಂದಾಯ ಮಾಡದಿದ್ದರೆ ಬಡ್ಡಿ ಸಹಿತ ಮರು ಪಾವತಿಸಬೇಕಾಗುತ್ತದೆ.

ನೀವು ಕ್ರೆಡಿಟ್ ಕಾಡ೯ನ್ನು ಜಾಣತನದಿಂದ ಬಳಸಿದಾಗ ನಿಮ್ಮ ಆಥಿ೯ಕ ವಹಿವಾಟುಗಳ ತಿಂಗಳಿಂದ ತಿಂಗಳಿಗೆ ನಿವ೯ಹಣೆ ಮಾಡಲು ಒಂದು ಸರಳ ದಾರಿ ಸಿಕ್ಕಂತಾಗುತ್ತದೆ.

ಮೂರು ಮೂಲ ವಿಧದ ಕ್ರೆಡಿಟ್ ಕಾಡ್೯ಗಳು

ಸಾಮಾನ್ಯ ಉದ್ದೇಶದ ಕ್ರೆಡಿಟ್ ಕಾಡ್೯( ಆವರ್ತನ ಕ್ರೆಡಿಟ್ ಕಾಡ್೯):-

ಈ ಕಾಡು೯ಗಳನ್ನು ಬಟ್ಟೆ ಬರೆ ಊಟ ತಿಂಡಿ, ವಿಮಾನಯಾನದಂತಹ ಯಾವುದಕ್ಕೂ , ಎಲ್ಲಿಯಾದರೂ ಹಣ ಸಂದಾಯ ಮಾಡಲಿಕ್ಕೆ ಬಳಸಬಹುದಾಗಿದೆ. ವೀಸಾ ಮತ್ತು ಮಾಸ್ಟರ ಕಾಡ್೯ ಕ್ರೆಡಿಟ್ ಕಾಡ್೯ಗಳು ಇದಕ್ಕೆ ಉದಾಹರಣೆ. ನೀವು ಖಚು೯ ಮಾಡುವ ಮೊತ್ತದಲ್ಲಿ ಅಥವಾ ಪ್ರತಿ ತಿಂಗಳು ಮಾಡುವ ಮರುಪಾವತಿಯ ಮೇಲೆ ಒಂದು ವಿಧದ ಹೊಂದಾಣಿಕೆ ಬೇಕಾದಾಗ ಸಾಮಾನ್ಯ ಉದ್ದೇಶದ ಕ್ರೆಡಿಟ್ ಕಾಡ್೯ ನಿಮ್ಮ ಬೇಡಿಕೆಗಳನ್ನು ಪೂರೈಸುತ್ತದೆ. ನಿಮ್ಮ ಕ್ರೆಡಿಟ್ ಕಾಡ೯ಗಳ ಖರೀದಿಗಳ ಮೇಲೆ ಹೆಚ್ಚಿನ ಅವಧಿಯ ಕಾಲಮಿತಿ ಯೊಳಗೆ ಮತ್ತುರೆ ನೀವು ನಿಮ್ಮ ಖರೀದಿಗಳ ಹಣ ಸಂದಾಯವನ್ನು ಪೂತಿ೯ಯಾಗಿ ಪ್ರತಿ ತಿಂಗಳೂ ಮಾಡದೇ ಇದ್ದಲ್ಲಿ ಬಾಕೀ ಉಳಿದ ಮೊತ್ತದ ಮೇಲೆ ಬಡ್ಡಿಯನ್ನು ವಿಧಿಸಲಾಗುವುದು.

ಅಂಗಡಿಯ ಕಾಡು೯ಗಳು:-

(ಏಕ ಅಥವಾ ಸೀಮಿತ ಉದ್ದೇಶದ ಕಾಡು೯ಗಳೆಂದು ಕೂಡ ಕರೆಯಲಾಗುತ್ತದೆ.) ಈ ತರದ ಕಾಡು೯ಗಳನ್ನು ನಿಧಿ೯ಷ್ಟ ಮಳಿಗೆ (ಅಂಗಡಿ) ಗಳಲ್ಲಿ ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬಹುದು. ಡಿಪಾಟ೯ಮೆಂಟ ಮಳಿಗೆ ಕಾಡ೯ಗಳು ಮತ್ತು ಬಟ್ಟೆ ಮಳಿಗೆಯ ಕಾಡು೯ಗಳು ಇದರ ಉದಾಹರಣೆಗಳಾಗಿವೆ. ಇಂತಹ ಕಾಡು೯ಗಳ ಮೇಲಿನ ಬಡ್ಡೀ ದರ ಸಾಧಾರಣವಾಗಿ ತುಂಬ ಹೆಚ್ಚಾಗಿರುತ್ತವೆ. ಅನೇಕ ಅಂಗಡಿಗಳಲ್ಲಿ ಈ ಕಾಡು೯ಗಳನ್ನು ವಿಶೇಷ ಉತ್ತೇಜನಕ್ಕಾಗಿ ಬಳಸುತ್ತವೆ. ( ಉದಾಹರಣೆಗೆ ಮೊದಲ ಖರೀದಿಯ ಮೇಲೆ ೧೫% ವಿನಾಯತಿ) ನೀವು ಒಂದು ಖಾತೆಯನ್ನು ತೆರೆದರೂ ಹೆಚ್ಚಿನ ಬಡ್ಡಿ ದರವಿರುವುದರಿಂದ ದೀಘಾ೯ವಧಿಯಲ್ಲಿ ಅದು ಹೆಚ್ಚುಲಾಭ ದಾಯಕವಾಗಿರುವುದಿಲ್ಲ.

ಸಾಂಪ್ರದಾಯಿಕ ವೆಚ್ಚದ ಕಾಡು೯ಗಳು

ಈ ಕಾಡು೯ಗಳಿಂದ ನೀವು ಖರೀದಿಸಿದಾಗ ಅಥವಾ ಸೇವೆಯನ್ನು ಪಡೆದಾಗ ಅದರ ಹಣವನ್ನು ಒಂದೇ ಕಂತಿನಲ್ಲಿ ಒಂದು ನಿಧಿ೯ಷ್ಟ ಅವಧಿಯಲ್ಲಿ ಸಂದಾಯಮಡಬೇಕಾಗುತ್ತದೆ. ರೂಢಿಯಂತೆ ನೀವು ಈ ತರಹದ ಕಾಡು೯ಗಳಿಗೆ ಬಡ್ಡಿ ದರ ತೆರಬೇಕಾಗಿಲ್ಲ. ಆದರೆ ನೀವು ಶಿಲ್ಕು ಉಳಿಸಿಕೊಳ್ಳದೆ ಪಾವತಿಯನ್ನು ಪೂತಿ೯ಯಾಗಿ ಪ್ರತಿ ತಿಂಗಳು ಸಂದಾಯ ಮಾಡಬೇಕಾಗುತ್ತದೆ. ಈ ತರಹದ ಕಾಡ್೯ಗಳನ್ನು ಪ್ರವಾಸ ಕಾಡು೯ಗಳು ಮತ್ತು ಮನರಂಜನೆ ಕಾಡು೯ಗಳು ಎಂತಲೂ ಕರೆಯಲಾಗುತ್ತದೆ. ಉದಾಹರಣೆಗೆ ಅಮೇರಿಕನ ಎಕ್ಸಪ್ರೆಸ್ ಮತ್ತು ಡೈನರ್ಸ ಕ್ಲಬ್ ವೆಚ್ಚದ ಕಾಡು೯ಗಳು.

ಕ್ರೆಡಿಟ್ ಕಾಡು೯ಗಳನ್ನು ಬಳಸುವ ಪ್ರಯೋಜನಗಳು.

  • ನೀವು ನಗದನ್ನು ಎಲ್ಲ ಕಡೆ ಇಟ್ಟುಕೊಂಡು ಹೋಗಬೇಕಾಗಿಲ್ಲ ಮತ್ತು ಯಾವುದೇ ಧನಾದೇಶವನ್ನು ಬರೆಯಬೇಕಾಗಿಲ್ಲ. ತಿಂಗಳ ಅಂತ್ಯಕ್ಕೆ ನೀವು ಒಂದು ಜಮಾ ಖಚಿ೯ನ ಪಟ್ಟಿಯನ್ನು (ಸ್ಟೇಟಮೆಂಟನ್ನು ) ಪಡೆಯುತ್ತೀರಿ. ಅದರಲ್ಲಿ ನಿಮ್ಮ ಎಲ್ಲ ಖರೀದಿಗಳ ದಾಖಲೆಗಳಿರುತ್ತವೆ, ಅವುಗಳಿಂದ ನೀವು ನಿಮ್ಮ ಎಲ್ಲ ಖಚು೯ಗಳನ್ನು ಗುರುತಿಸಿಕೊಳ್ಳಬಹುದು.
  • ನೀವು ನಿಮ್ಮ ಎಲ್ಲ ಖಚು೯ಗಳನ್ನು ಕ್ರೂಢೀಕರಿಸಿ ಮಾಸಿಕ ಸಂದಾಯ ಮಾಡಬಹುದು.
  • ನೀವು ಖರೀದಿಗಳ ರಕ್ಷಣೆ ಮತ್ತು ಸರಕುಗಳ ವಿಸ್ತರಿಸಿದ ಭರವಸೆಯನ್ನು ಪಡೆಯಬಹುದಾಗಿದೆ.

ಕ್ರೆಡಿಟ್ ಕಾಡ್೯ಗಳನ್ನು ಬಳಸುವಾಗ ವಹಿಸಬೇಕಾದ ಎಚ್ಚರಿಕೆಗಳು

  • ನೀವು ಕಾಡಿ೯ನಿಂದ ಮಾಡಿದ ವೆಚ್ಚಕ್ಕೆ ನೀವೇ ಜವಾಬ್ದಾರರು.
  • ಸಂಚಿತ ಹಣದ ಮೇಲಿನ ಶುಲ್ಕದಿಂದಾಗಿ ನೀವು ಖರೀದಿಸಿದ ವಸ್ತುಗಳ ಬೆಲೆಗಳು ನೀವು ನಿರೀಕ್ಷಿಸಿದಕ್ಕಿಂತ ಜಾಸ್ತಿಯಾಗಿರುವುದು.
  • ನೀವು ನಿಮ್ಮ ಕಾಡಿ೯ನ ಖಾತೆಯನ್ನು ಅವಿವೇಕದಿಂದ ನಿವ೯ಹಿಸಿದಲ್ಲಿ ನೀವು ಹೆಚ್ಚಿನ ಸಂದಾಯಗಳಾದ ಮಿತಿಮೀರಿದ ಮೊತ್ತದ ದಂಡ ಅಥವಾ ತಡವಾದ ಸಂದಾಯ ದಂಡಗಳನ್ನು ತೆರಬೇಕಾಗುತ್ತದೆ.
  • ನೀವು ಒಂದು ನಿಧಿ೯ಷ್ಟ ಆಯವ್ಯಯ ಪಟ್ಟಿಯನ್ನು ಮಾಡಬೇಕಾಗುತ್ತದೆ . ಮತ್ತು ಅದರಿಂದ ನೀವು ಮಾಡುವ ಖಚಿ೯ನ ಸಂದಾಯ ಪಾವತಿಯನ್ನು ಸರಿಯಾಗಿ ಮಾಡಬಹುದು.
  • ಹಠಾತ್ತಾದ ಖರೀದಿಗಳಿಂದ ಜಾಗರೂಕರಾಗಿರಿ ಅವು ನಿಮ್ಮ ಆಯವ್ಯಯ ಪಟ್ಟಿಯನ್ನು ಅಸ್ತವ್ಯಸ್ತಗೊಳಿಸಬಹುದು.
  • ತಡವಾದ ಪಾವತಿಗಳು ಅಥವಾ ಮಿತಿಮೀರಿದ ಮೊತ್ತದ ದಂಡಗಳು ನಿಮ್ಮ ಸಾಲದ ಅಂದಾಜಿಗೆ ಪ್ರತಿಕೂಲವಾಗಬಹುದು.

ಕ್ರೆಡಿಟ್ ಕಾಡ೯ಗಳ ಜವಾಬ್ದಾರಿಯುತ ಬಳಕೆ.

ಕ್ರೆಡಿಟ್ ಕಾಡ್೯ಗಳು ಅನುಕೂಲಕರವಾಗಿದ್ದು, ಅವು ತಿಂಗಳಿಂದ ತಿಂಗಳಿಗೆ ನಿಮ್ಮ ಎಲ್ಲ ಖಚು೯ಗಳ ಮೇಲೆ ನಿಗಾ ಇಡಲು ಸಹಾಯ ಮಾಡುವ ಸರಳ ದಾರಿಯಾಗಿವೆ. ಅದು ಅನುಕೂಲ ಬಳಸಲು ಬಹಳ ಜವಾಬ್ದಾರಿ ಬೇಕಾಗುತ್ತದೆ. ನಿಮ್ಮ ಕಾಡ೯ ನಿವ೯ಹಣೆಯನ್ನು ಸರಿಯಾಗಿ ಮಾಡುವುದರ ಮೂಲಕ ನಿಮಗೆ ಹಣ ಕೊಡುವವರಿಗೆ ನಿಮಗೆ ಸಾಲನ್ನು ನಿವ೯ಹಣೆ ಸರಿಯಾಗಿದೆ ಎಂದು ತೋರಿಸಬಹುದು. ಅದು ಒಂದು ಸಿದ್ಧ ದಾಖಲೆಯಾಗುವುದು. ಅದರಿಂದ ನಿಮಗೆ ಹೆಚ್ಚು ಮೊತ್ತದ ಖರೀದಿಗಳಾದ ಹೊಸಕಾರು, ಮನೆಗಳಿಗೆ ಹಣ ದೊರಕುವ ಸಾಧ್ಯತೆಗಳು ಹೆಚ್ಚಾಗುತ್ತವೆ.ಆಥಿ೯ಕ ಸಂಸ್ಥೆಗಳು ಸದಾ ಕ್ರಿಮಿನಲ್ಗಳಿಂದ ನಿಮ್ಮನ್ನು ರಕ್ಷಿಸಲು ಹೊಸದಾರಿಗಳನ್ನು ಹುಡುಕುತ್ತಿರುತ್ತವೆ. ನಿಮ್ಮ ಕ್ರೆಡಿಟ್ ಕಾಡ್೯ ಕಳೆದಾಗ ಅಥವಾ ಕಳುವಾದಾಗ ಅಥವಾ ನೀವು ಯಾವುದೇ ವಂಚನೆಗೆ ಬಲಿಯಾದಾಗ ಕೂಡಲೇ ನಿಮಗೆ ಕಾಡ೯ನ್ನು ನೀಡಿದ ಆಥಿ೯ಕ ಸಂಸ್ಥೆಗೆ ತಿಳಿಯಪಡಿಸಿರಿ.

ಡೆಬಿಟಕಾಡ್೯ ಮತ್ತು ಕ್ರೆಡಿಟ್ ಕಾಡ೯ಗಳ ಮಧ್ಯದ ವ್ಯತ್ಯಾಸವೇನು ?

ನೀವು ಒಂದು ಖರೀದಿಯನ್ನು ಮಾಡಿದಾಗ ಅಥವಾ ನಗದನ್ನು ಪಡೆದಾಗ ಡೆಬಿಟ್ ಕಾಡ್೯ ಆಗಿದ್ದಲ್ಲಿ ನೇರವಾಗಿ ನಿಮ್ಮ ಚೆಕಿಂಗ್ ಖಾತೆಯಿಂದ ಹಣವನ್ನು ಸೆಳೆಯಲಾಗುತ್ತಲಿದೆ. ಅದೇ ಕ್ರೆಡಿಟ್ ಕಾಡ್೯ ಆದಲ್ಲಿ ನಿಮ್ಮ ಪ್ರತೀ ವಹಿವಾಟನ್ನು ನಿಮ್ಮ ಚಾಜ್೯ ಖಾತೆಯ ಬೆಲೆಪಟ್ಟಿಗೆ ಸೇರಿಸಲಾಗುತ್ತದೆ. ಕ್ರೆಡಿಟ್ ಕಾಡ್೯ನ್ನು ಬಳಸಿದಾಗ ನೀವು ಹಣ ನಿಡಿದವರಿಗೆ ಅದನ್ನು ಮರಳಿ ಸಂದಾಯ ಮಾಡಬೇಕಾಗುತ್ತದೆ.ಕೆಲವು ವೇಳೆ ಏನಾದರೂ ಅನಿರೀಕ್ಷಿತ ಘಟನೆ ನಡೆದಾಗ ನಿಮ್ಮ ಕಾಡು೯ ಕಳೆದಾಗ ಅಥವಾ ಕಳುವಾದಾಗ ನೀವು ನಿಮ್ಮ ಬ್ಯಾಂಕನ್ನು ನೇರವಾಗಿ ಸಂಪಕಿ೯ಸಿದಾಗ ಮುಂಬರುವ ವಂಚನೆಯವೆಚ್ಚಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದಿಲ್ಲ.

ನೀವು ನಿಮ್ಮ ಕ್ರೆಡಿಟ್ ಕಾಡ೯ನ್ನು ಯಾವುದಕ್ಕೆ ಉಪಯೋಗಿಸುತ್ತೀರಿ ಅನ್ನುವದಕ್ಕಿಂತಲೂ ನೀವು :-

  • ನಿಮ್ಮ ಮಾಸಿಕ ಪಟ್ಟಿಯಲ್ಲಿ ನಮೂದಿಸಿದ ಕನಿಷ್ಟ ಮೊತ್ತವನ್ನು ಯಾವಾಗಲೂ ಪಾವತಿಮಾಡಲೇಶ ಬೇಕು. ಒಂದು ವೇಳೆ ನೀವು ಪೂತಿ೯ ಶಿಲ್ಕನ್ನು ಪ್ರತಿ ತಿಂಗಳು ಸಂದಾಯ ಮಾಡಿದರಂತೂ ಇನ್ನೂ ಉತ್ತಮ. ಅದು ನಿಮಗೆ ಬಡ್ಡಿಯ ವೆಚ್ಚವನ್ನು ಬರದಂತೆ ಮಾಡುತ್ತದೆ.
  • ಎಲ್ಲ ಪಾವತಿಗಳನ್ನೂ ಸಮಯಾನುಸಾರ ಮಾಡಬೇಕು.
  • ನಿಮ್ಮ ಎಲ್ಲ ವಹಿವಾಟುಗಳು ನಿಮ್ಮ ಕಾಡಿ೯ನ ಸಾಲದ ಮಿತಿಯಲ್ಲಿವೆ ಎಂದು ಮನದಟ್ಟು ಮಾಡಿಕೊಳ್ಳಬೇಕು.
  • ಯಾವತ್ತೂ ನೀವು ಮರುಪಾವತಿ ಮಾಡಲಾಗದಷ್ಟು ಖಚು೯ ಮಾಡಲೇಬಾರದು. ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಈ ಸಲಹೆಯನ್ನು ಗಮನಿಸಿ:- ಕ್ರೆಡಿಟ್ ಕಾಡಿ೯ನ ಖಚು೯ಗಳು ಮತ್ತು ಬೇರೆ ಸಾಲಗಳು( ಬಾಡಿಗೆ ಮತ್ತು ಅಡವು ಪಾವತಿ ಬಿಟ್ಟು) ಸಾಮಾನ್ಯವಾಗಿ ತೆರಿಗೆ- ನಂತರದ ಆದಾಯದ ೨೦%ವನ್ನು ಮೀರಬಾರದು.

ಸಾಲದ ತೊಂದರೆಗಳಾದ ಈ ಸಂಕೇತಗಳಿಂದ ಎಚ್ಚರವಾಗಿರಿ:

  • ವೆಚ್ಚಪಟ್ಟಿ ( Statement) ಬರುವ ಮುನ್ನ ನೀವು ಎಷ್ಟು ಕೊಡಬೇಕು ಎನ್ನುವುದು ಗೊತ್ತಿರುವುದಿಲ್ಲ.
  • ನೀವು ಮೇಲಿಂದ ಮೇಲೆ ನಿಮ್ಮ ಹಣವನ್ನು ತಡವಾಗಿ ಪಾವತಿ ಮಾಡುತ್ತೀರಿ.
  • ನೀವು ಹಲವು ಬಾರಿ ನಿಮ್ಮ ಕ್ರೆಡಿಟ್ ಕಾಡ೯ನ ಕನಿಷ್ಟ ಮೊತ್ತವನ್ನೂ ಪಾವತಿ ಮಾಡುವುದಿಲ್ಲ.
  • ನೀವು ಪದೇ ಪದೇ ನಿಮ್ಮ ಸಾಲದ ಮಿತಿಯನ್ನು ತಲುಪುತ್ತೀರಿ ಅಥವಾ ಮೀರುತ್ತೀರಿ.
  • ನೀವು ಹೊಸ ಸಾಲ ಮಾಡಿ ಅಥವಾ ನಗದು ಮುಂಗಡ ಪಡೆದು ಲ್ ಬೆಲೆಪಟ್ಟಿ ಪಾವತಿ ಮಾಡಲು ಉಪಯೋಗಿಸುತ್ತೀರಿ.

ಸಾಲದ ಭಾದೆಗಳನ್ನು ಹೇಗೆ ನಿಭಾಯಿಸುವುದು.

  • ನಿಮ್ಮ ಸಾಲಗಾರನನ್ನು ಕರೆದು ನೇರವಾಗಿ ಚಚಿ೯ಸಿರಿ. ನೀವು ಪಾವತಿಯ ವೇಳಾಪಟ್ಟಿಯನ್ನು ನಿಧ೯ರಿಸಬಹುದು.
  • ನಿಮ್ಮ ಕ್ರೆಡಿಟ್ ಕಾಡಿ೯ನ ಉಪಯೋಗವನ್ನು ನಿಲ್ಲಿಸಿ.

ನಿಮ್ಮ ಮಿತಿಯನ್ನು ಅರಿಯಿರಿ.

ಕ್ರೆಡಿಟ್ ಕಾಡ೯ ಹೊಂದಿರುವುದು ನೀವು ಮಾಡಬಹುದಾದಕ್ಕಿಂತ ಹೆಚ್ಚಿಗೆ ಸರಳವಾಗಿ ಖಚು೯ ಮಾಡುವಂತೆ ಮಾಡುತ್ತದೆ. ಅಥವಾ ಪ್ರೇರೇಪಿತ (ದುಬಾರಿ) ಖರೀದಿಗಳನ್ನು ಮಾಡುವಂತೆ ಮಾಡುತ್ತದೆ. ನಿಮ್ಮ ಮಿತಿಯನ್ನು ಅರಿತಿರುವುದು ಮತ್ತು ನೀವು ಎಷ್ಟು ವ್ಯಯ ಮಾಡಲು ಶಕ್ತವಿರುತ್ತೀರಿ ಎಂಬುದನ್ನು ಅಥ೯ ಮಾಡಿಕೊಳ್ಳುವುದು , ಕ್ರೆಡಿಟ್ ಕಾಡ೯ನ್ನು ಜಾಣತನದಿಂದ ಉಪಯೋಗಿಸುವ ಒಂದು ಸಂಕೇತವಾಗಿದೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate