অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬ್ಯಾಂಕಿಂಗ

ಮೂಲ ಮಾಹಿತಿಗಳು

  • ಉಳಿತಾಯ ಖಾತೆ ಎಂದರೆ ಪ್ರತೀ ತ್ರೈಮಾಸಿಕಕ್ಕೆ ಹಣ ತೆಗೆಯುವ ಸಂಖ್ಯೆ ಮತ್ತು ಎ.ಟಿ.ಎಂ.ನಿಂದ ಪ್ರತಿಯೊಂದು ವಹಿವಾಟಿನಲ್ಲಿ ಹಣ ತೆಗೆಯುವಾಗಿನ ಮೊತ್ತವಾಗಿರುತ್ತದೆ.
  • ಶಿಲ್ಕಿಗಿಂತ ಹೆಚ್ಚಿನ ಹಣ ತೆಗೆಯುವ ವಹಿವಾಟವನ್ನು ಬ್ಯಾಂಕುಗಳಲ್ಲಿ ಸಾಧಾರಣವಾಗಿ ಚಾಲ್ತಿ ಖಾತೆಗಳಿಗೆ ಮಾತ್ರ ಮಂಜೂರು ಮಾಡಲಾಗುತ್ತದೆ.
  • ಬ್ಯಾಂಕಿನ ಸ್ಥಿರ ಠೇವಣಿಗಳ ಗುಣ ಲಕ್ಷಣಗಳು , ಠೇವಣಿಯ ಸಮಯದಲ್ಲಿ ಗ್ರಾಹಕರ ಜೊತೆ ಒಪ್ಪಿದ ಬಡ್ಡೀ ದರ, ಠೇವಣಿಯ ಸ್ಥಿರ ಅವಧಿ ಮತ್ತು ನಿಯಮಿತವಾಗಿ ಬಡ್ಡಿ ಸಂದಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.
  • ಸ್ಥಿರ ಠೇವಣಿಗಳನ್ನು ಮೂರನೆಯವರಿಗೆ ವಗಾ೯ಯಿಸಲು ಬರುವುದಿಲ್ಲ.
  • ಒಂದು ಪುನರಾವತಿ೯ತ ಠೇವಣಿಯ ಖಾತೆಗೆ ಗ್ರಾಹಕನು ಒಂದು ನಿಖರವಾದ ಮೊತ್ತವನ್ನು ಒಂದು ನಿಧಿ೯ಷ್ಟ ಅಂತರಗಳಲ್ಲಿ ಒಂದು ನಿಧಿ೯ಷ್ಟ ಅವಧಿಗೆ ನೀಡಬೇಕಾಗುತ್ತದೆ.
  • ಬ್ಯಾಂಕಿನ ಪ್ರಧಾನ ಕೆಲಸಗಳಾವುವೆಂದರೆ:- ಠೇವಣಿಗಳನ್ನು ಸ್ವೀಕರಿಸುವುದು, ಸಾಲಕೊಡುವುದು ಮತ್ತು ಹಣ ಹೂಡುವುದು ಮತ್ತು ನಿಧಿರಹಿತ ವಹಿವಾಟು ಮತ್ತು ಹಣ ರವಾನಿಸುವ ಸೇವೆಗಳು.
  • ಬೇಡಿಕೆಯ ಠೇವಣಿಗಳು ಬೇಡಿಕೆ ಇದ್ದಾಗ ತೆಗೆಯುವಂತಹ ಠೇವಣಿಗಳಾಗಿವೆ.
  • ಚಾಲ್ತಿ ಖಾತೆಗಳ ಠೇವಣಿಗಳಿಗೆ ಬಡ್ಡಿ ಅನ್ವಯವಾಗುವುದಿಲ್ಲ.
  • ಉಳಿತಾಯ ಖಾತೆಯ ಠೇವಣಿಗಳಿಗೆ ಬಡ್ಡಿಯನ್ನು ಖಾತೆಯಲ್ಲಿನ ಅತೀ ಕಡಿಮೆ ಶಿಲ್ಕಿನ( ತಿಂಗಳ ೧೦ ನೇ ತಾರೀಖಿನಿಂದ ಕೊನೆಯ ದಿನದವರೆಗಿನ) ಮೇಲೆ ಸಂದಾಯ ಮಾಡಲಾಗುತ್ತದೆ.

ಬ್ಯಾಂಕ್ ಖಾತೆಯನ್ನು ತೆರೆಯುವುದು ಹೇಗೆ

ಉಪಯೋಗಗಳು

  • ನಿಮ್ಮ ಗಳಿಕೆಯನ್ನು ಸುರಕ್ಷಿತವಾಗಿಡಲು,
  • ಉಳಿಸಿದ ಮೊತ್ತದ ಮೇಲೆ ಬಡ್ಡಿ ಪಡೆಯಲು,
  • ಮೂರನೇ ವ್ಯಕ್ತಿಯಿಂದ ಸಾಲದ ಹಣ ಪಡೆಯಲು (ಚೆಕ್, ಬ್ಯಾಂಕ್ ಡ್ರಾಫ್ಟ್, ಹಣ ಅಥವಾ ಆನ್ಲೈನ್ ಮೂಲಕ)
  • ಉಪಯೊಗಿ ಬಿಲ್ ಪಾವತಿ ಮಾಡಲು (ಅವುಗಳು LIC ಪ್ರಿಮಿಯಂ, ರೈಲು ಟೀಕೆಟ್ ಮುಂಗಡ ಬುಕಿಂಗ್)

ಬ್ಯಾಂಕ್ ಖಾತೆ ತೆರೆಯಲು ಅಗತ್ಯ

  • ಭರ್ತಿ ಮಾಡಿದ ಅರ್ಜಿ ( ಅದನ್ನು ಬ್ಯಾಂಕ್ನ ಶಾಖೆಯಲ್ಲಿ ಸಂಗ್ರಹಿಸಲು ಸಾಧ್ಯ)
  • ಎರಡು ಪಾಸ್ಪೋರ್ಟ್ ಅಳತೆಯ ಕಲರ್ ಭಾವಚಿತ್ರ
  • ಗುರುತು ಪುರಾವೆಯ ಜೆರಾಕ್ಸ್ ಪ್ರತಿ
  • ನಿವಾಸದ ಪುರಾವೆಯ ಜೆರಾಕ್ಸ್ ಪ್ರತಿ
  • 1000 ರೂಪಾಯಿ ಮೊತ್ತದ ಹಣ (ಆದರೆ ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಾಗಿರುತ್ತದೆ)
  • ಅರ್ಜಿಗೆ ಸಹಿ ಮಾಡಲು ಒಬ್ಬ ಜಾಮೀನುದಾರ (ಆ ವ್ಯಕ್ತಿಯು ಆ ಬ್ಯಾಂಕ್ನಲ್ಲಿ ಖಾತೆ ಹೊಂದಿರಬೇಕು)

ಗಮನಿಸಿ: ಗುರುತು ಮತ್ತು ನಿವಾಸದ ಪುರಾವೆಗೆ ಎರಡು ಪ್ರತ್ಯೇಕ ದಾಖಲೆಗಳನ್ನು ಸಲ್ಲಿಸಬೇಕು.

ಗುರುತು ಪುರಾವೆಗೆ ಕೆಳಗಿನವುಗಳನ್ನು ಬಳಸಬಹುದು:

  1. ಪಾಸ್ಪೊರ್ಟ್
  2. ಮತದಾರರ ಗುರುತಿನ ಚೀಟಿ
  3. ಪಾನ್ ಕಾರ್ಡ್
  4. ಸರ್ಕಾರ/ರಕ್ಷಣಾ ಐಡಿ ಕಾರ್ಡ್
  5. ಪ್ರಖ್ಯಾತ ಐಡಿ ಕಾರ್ಡ್
  6. ಡ್ರೈವಿಂಗ್ ಲೈಸೆನ್ಸ್
  7. ಅಂಚೆ ಕಚೇರಿ ಇಂದ ನೀಡಿದ ಐಡಿ ಕಾರ್ಡ್

ನಿವಾಸದ ಪುರಾವೆಗೆ ಕೆಳಗಿನವುಗಳನ್ನು ಬಳಸಲು ಸಾಧ್ಯ:

  1. ಕ್ರೆಡಿಟ್ ಕಾರ್ಡ್ ಹೇಳಿಕೆ
  2. ಸಂಬಳದ ಸ್ಲಿಪ್ (ವಿಳಾಸದ ಜೊತೆ)
  3. ಆದಾಯ ತೆರಿಗೆ/ಅಸ್ತಿ ತೆರಿಗೆ ಕಂದಾಯ ಆದೇಶ
  4. ವಿದ್ಯುಚ್ಛಕ್ತಿ ಬಿಲ್
  5. ದೂರವಾಣಿ ಬಿಲ್
  6. ಬ್ಯಾಂಕ್ ಖಾತೆ ಹೇಳಿಕೆ
  7. ಪ್ರಸಿದ್ಧ ಉದ್ಯಮಿಯಿಂದ ಪತ್ರ
  8. ಮಾನ್ಯತೆ ಹೊಂದಿದ ಸಾರ್ವಜನಿಕ ಪ್ರಾಧಿಕಾರದಿಂದ ಪತ್ರ
  9. ಪಡಿತರ ಚೀಟಿ
  10. ಎಲ್ಪಿಜಿ ಗ್ಯಾಸ್ ಬಿಲ್

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 10/8/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate