অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಿಕ್ಷಣ

ಶಿಕ್ಷಣ

ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ. ಆದುದರಿಂದ ಶರೀರ ಶಿಕ್ಷಣದ ಅರ್ಥ ತಿಳಿಯುವ ಮೊದಲು ಶಿಕ್ಷಣದ ಅರ್ಥವನ್ನು ತಿಳಿಯೋಣ.

ಶಿಕ್ಷಣ ಎಂಬ ಪದವು ಇಂಗ್ಲೀಷ್ ಅನುವಾದ Education ಎಂಬ ಪದದಿಂದಾಗಿದೆ. ಆಂಗ್ಲಭಾಷೆಯ ಈ Education ಎಂಬ ಪದವು Educe ಎಂಬ ಲ್ಯಾಟಿನ್ ಪದದಿಂದ ಬಂದಿದೆ. Educe ಎಂದರೆ ಹೊರ ತೆಗೆ ಅಥವಾ ಬೆಳೆಸು ಎಂದರ್ಥವಾಗುತ್ತದೆ. ಆದುದರಿಂದ ಶಿಕ್ಷಣವು ಮಾನವನ ಆಂತರಿಕ ಶಕ್ತಿಯನ್ನು ಹೊರ ತರುವುದಲ್ಲದೇ ಅದನ್ನು ಬೇಳೆಸುತ್ತದೆ.

ಇದನ್ನೇ ಮಹಾತ್ಮ ಗಾಂಧೀಜಿ ಮತ್ತು ಎಡಿಸನ್ ರವರು ಶಿಕ್ಷಣ ಎಂಬ ಪದವು Educare ಎಂಬ ಮೂಲ ಪದದಿಂದ ಉದ್ಭವಿಸಿದೆ ಎಂದಿದ್ದಾರೆ. ಇದರ ಅರ್ಥ ಒಳ್ಳೆಯ ಗುಣವನ್ನು ಹೊರ ತೆಗೆ ಅಥವಾ ಬೆಳೆಸು ಎಂಬುದಾಗಿದೆ. ಅಂದರೆ ವ್ಯಕ್ತಿಯಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವುದೇ ಶಿಕ್ಷಣವಾಗಿದೆ.

ಶಿಕ್ಷಣದ ಬಗ್ಗೆ ಹಲವಾರು ಶಿಕ್ಷಣ ತಜ್ಞರುಗಳು, ಧರ್ಮ ಗುರುಗಳು, ತತ್ವಜ್ಞಾನಿಗಳು ತಮ್ಮದೇ ವ್ಯಾಖ್ಯಾನಗಳನ್ನು ನೀಡಿರುವರು. ಅವು ಈ ಕೇಗಿನಂತಿವೆ.

ಕ್ರೋವ್ ಮತ್ತು ಕ್ರೋವ್ : ಪೀಳಿಗೆಯಿಂದ ಪೀಳಿಗೆಗೆ ಆಗುವ ಜ್ಞಾನದ ವರ್ಗಾವಣೆಯೇ ಶಿಕ್ಷಣ ಎಂದಿದ್ದಾರೆ.

ಟಿ.ಪಿ.ನನ್ :ಪ್ರತಿ ವ್ಯಕ್ತಿಯೂ ಪರಿಪೂರ್ಣವಾಗಿ ಬೆಳೆಯುವಂತೆ ಯೋಗ್ಯ ಪರಿಸರವನ್ನು ನಿರ್ಮಿಸುವುದೇ ಶಿಕ್ಷಣ ಎನ್ನುತ್ತಾರೆ.

ಬ್ಯಾನರ್ಜಿ: ಬದಲಾಗಿತ್ತಿರುವ ಸಮಾಜದ ವಾತಾವರಣಕ್ಕೆ ಹೊಂದಿಕೊಂಡು ಹೋಗುವಂತೆ ಮಾಡುವುದೇ ಶಿಕ್ಷಣ ಎನ್ನುತ್ತಾರೆ.

ಜಾನ್ ಡ್ಯೂಯಿ : ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳ ಪುನರ್ ಪರಿಶಿಲನೆಯೇ ಶಿಕ್ಷಣ ಎಂದಿದ್ದಾರೆ.

ಮಹಾತ್ಮ ಗಾಂಧೀಜಿ : ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ನೈತಿಕವಾಗಿ ಸಮರ್ಥರನ್ನಾಗಿಸುವುದೇ ಶಿಕ್ಷಣ ಎಂದಿದ್ದಾರೆ.

ಮೇಲಿನ ಎಲ್ಲಾ ವ್ಯಾಖ್ಯಾನಗಳನ್ನು ಕ್ರೂಢೀಕರಿಸಿದಾಗ ಇಂದಿನ ಪ್ರಗತಿಪರ ಸಮಾಜಕ್ಕೆ ಮಹಾತ್ಮ ಫಾಂಧೀಜಿಯವರ ವ್ಯಾಖ್ಯಾನ ಇಂದಿನ ಕೆಲವು ಸವಾಲುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳಬಹುದಾಗಿದೆ. ಆದರೆ ಶೈಕ್ಷಣಿಕ ಅನುಭವವು ಮನೆ,ಶಾಲೆ,ಪುಸ್ತಕ ಭಂಡರ,ಪ್ರಯೋಗಶಾಲೆ, ಪ್ರವಾಸ, ಆಟದ ಬಯಲು, ಪೇಟೆ ಹಾಗೂ ಸಮಾಜದ ಎಲ್ಲಾ ಕಡೆಗಳಲ್ಲೂ ನಡೆಯುತ್ತಿರುತ್ತದೆ.

ಆದರೆ ಅದಲ್ಲವನ್ನು ಕ್ರಮಬದ್ದಗೊಳಿಸಿ ಒಮ್ದು ಮಾರ್ಗದಲ್ಲಿ ನಿರ್ಭಯವಾಗಿ ನಡೆಯುವಂತೆ ಮಾಡುವ ಜವಾಬ್ದಾರಿ ಶಿಕ್ಷಕನಿಗಿದ್ದು, ಅವನ ವ್ಯಕ್ತಿತ್ವದ ಮೇಲೆ ಶಿಕ್ಷಣ ಅವಲಂಬಿತವಾಗಿದೆ ಎಂದರೆ, ತಪ್ಪಾಗಲಾರದು. ಆದರೆ ಅವನಿಗೆ ಒಂದು ವ್ಯಾಪ್ತಿಯಿದ್ದು ಅದರಲ್ಲಿ ಮಗುವಿಗೆ ಅವಶ್ಯಕವಾದುದ್ದನ್ನು ಶಿಕ್ಷಣ ತಜ್ಞರುಗಳು ಸೂಚಿಸಿದ ಪಠ್ಯವಸ್ತುವಿನ ಆಧಾರದ ಮೇಲೆ ಮುಂದಿನ ಸತ್ಪ್ರಜೆಗಳನ್ನು ಶಿಕ್ಷಕ ತಯಾರುಮಾಡುವ ಕೆಲಸದಲ್ಲಿ ಕಾರ್ಯಪ್ರವೃತ್ತನಾಗಿದ್ದಾನೆ.

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate