অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೇಬ್ರಿಯಲ್, ಲಿಪ್‍ಮನ್

ಗೇಬ್ರಿಯಲ್, ಲಿಪ್‍ಮನ್

ಫ್ರಾನ್ದ್-ಭೌತಶಾಸ್ತ್ರ- ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ರೂಪಿಸಿದಾತ.

ಲಿಪ್‍ಮನ್‍ನ ತಂದೆ, ತಾಯಿ ಲುಕ್ವೆಂಟರ್‍ನ ಹೊಲೆರಿಕ್‍ನಲ್ಲಿ ನೆಲೆಸಿದ್ದ ಫ್ರೆಂಚ್ ಮೂಲದವನಾಗಿದ್ದರು. 16 ಆಗಸ್ಟ್ 1845ರಂದು ಈ ಪಟ್ಟಣದಲ್ಲಿಯೇ ಲಿಪ್‍ಮನ್ ಜನಿಸಿದನು. ಅಲ್ಪ ಕಾಲದಲ್ಲೇ ಲಿಪ್‍ಮನ್ ಕುಟುಂಬ ಪ್ಯಾರಿಸ್‍ಗೆ ಹೋಯಿತು.  ಲಿಪ್‍ಮನ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದನು. 1858ರಲ್ಲಿ ಲೈಸೀ ನೆಪೋಲಿಯನ್ ಪ್ರೌಢಶಾಲೆಗೆ ಸೇರಿದನು. ಇದಾದ ಹತ್ತು ವರ್ಷಗಳ ನಂತರ ಎಕೊಲೆ ನಾರ್ಮಲೆಗೆ ಸೇರಿದನು. ತನಗೆ ಅಭಿರುಚಿಯಿದ್ದ ವಿಷಯಗಳನ್ನು ಹೊರತು ಪಡಿಸಿ, ಬೇರೆಯವುಗಳತ್ತ  ಕಣ್ಣೆತ್ತಿಯೂ ನೋಡದಿದ್ದರಿಂದ, ಲಿಪ್‍ಮನ್ ಉಪಾಧ್ಯಾಯ ವೃತ್ತಿಗೆ ಅಗತ್ಯವಾದ ಪದವಿ ಪಡೆಯುವಲ್ಲಿ ವಿಫಲನಾದನು.  1873ರಲ್ಲಿ ಫ್ರೆಂಚ್ ಸರ್ಕಾರ, ಜರ್ಮನಿಯಲ್ಲಿ ವಿಜ್ಞಾನದ ಶಿಕ್ಷಣ ವಿಧಾನದ ಅಧ್ಯಯನಕ್ಕೆ ಸಮಿತಿಯೊಂದನ್ನು ನಿಯೋಜಿಸಿತು.  ಲಿಪ್‍ಮನ್ ಇದರ ಸದಸ್ಯನಾದನು.  ಇದರಿಂದಾಗಿ ಕುಹ್ನ್ ಹಾಗೂ ಕಿರ್ಕ್‍ಹಾಫ್ರೊಂದಿಗೆ ಹೈಡೆಲ್‍ಬರ್ಗ್‍ನಲಿ ಹೆಲ್ಮ್ ಹೋಲ್ಟ್ಸ್‍ನೊಂದಿಗೆ ಬರ್ಲಿನ್‍ನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತು. 1878ರಲ್ಲಿ ಲಿಪ್‍ಮನ್ ಪ್ಯಾರಿಸ್‍ನಲ್ಲಿ ಬೋಧಕ ಸಿಬ್ಬಂದಿಯಾದನು.  1885ರಲ್ಲಿ ಗಣಿತೀಯ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡನು. ಇದಾದ

ಮೂರು ವರ್ಷಗಳ ನಂತರ, ಪ್ರಯೋಗಶೀಲ ಭೌತಶಾಸ್ತ್ರದ ಮುಖ್ಯಸ್ಥನಾಗಿದ್ದ ಔಮಿನ್ ನಿವೃತ್ತನಾದನು.  ಲಿಪ್‍ಮನ್ ಈತನಿಂದ ತೆರವಾದ ಸ್ಥಾನ ತುಂಬಿದನು.  ಮುಂದೆ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕನಾದನು.  ಕೆಲಕಾಲ ಪ್ಯಾರಿಸ್‍ನಲ್ಲಿದ್ದ ನಂತರ ಸೊರ್‍ಬೊನ್ನೆಗೆ ವರ್ಗಾವಣೆಗೊಂಡನು. ಲಿಪ್‍ಮನ್ ಸ್ವತಂತ್ರ ವಿಚಾರಧಾರೆಯ, ಮುಕ್ತ ಮನಸ್ಸಿನವನಾಗಿದ್ದನು.  ವಿದ್ಯುತ್, ಔಷ್ಣೀಯ ಗತಿಶಾಸ್ತ್ರ, ದೃಕ್ ಶಾಸ್ತ್ರ, ದ್ಯುತಿರಸಾಯನಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿದ್ದನು.  ಹೈಡೆಲ್‍ಬರ್ಗ್‍ನಲ್ಲಿರುವಾಗ ರೋಮನಾಳ ವಿದ್ಯಾಮನ (Capillary Phenomenon)   ಹಾಗೂ ವೈದ್ಯುತ್ ಕ್ಷೇತ್ರದ ಮಧ್ಯದ ಸಂಬಂಧ ಕುರಿತು ಹಲವಾರು ಪ್ರಯೋಗಗಳನ್ನು ಕೈಗೊಂಡಿದ್ದನು. ಇದರ ಅಂಗವಾಗಿ ಅತಿ ಸೂಕ್ಷ್ಮ ಸುಕ್ಲಿಷ್ಟ ಸಲಕರಣೆಗಳನ್ನು ನಿರ್ಮಿಸಿದನು.  1886ರಲ್ಲಿ ಬಣ್ಣಗಳನ್ನು ದ್ಯುತಿ ಕ್ರಿಯೆಯ ಮೂಲಕ ಸೆರೆಹಿಡಿಯುವ ವಿಧಾನ ರೂಪಿಸಿದನು.  ಆದರೆ ಇದನ್ನು ದೈನಂದಿನ ವ್ಯವಹಾರ ಸಾಧ್ಯತೆಯಾಗಿಸಲು ಹಲವಾರು ಆಡಚಣೆಗಳಿದ್ದವು. ಲಿಪ್‍ಮನ್‍ನ ಹಲವಾರು ವರ್ಷಗಳ ಸತತ ಪರಿಶ್ರಮ, ತಾಳ್ಮೆಯ ಪ್ರಯತ್ನಗಳಿಂದ 1891ರಲ್ಲಿ ಇದು ಸಾಧ್ಯವಾಯಿತು.  ಆದರೆ ಲಿಪ್‍ಮನ್ ಬಳಸಿದ ವ್ಯತ್ತಸ್ಥ ಸಂವೇದನೆ ಹೊಂದಿದ ಫಿಲ್ಮ್’ಗಳಿಂದ,  ಛಾಯಾಚಿತ್ರಗಳಲ್ಲಿ ಅಲ್ಪಸ್ವಲ್ಪ ದೋಷಗಳು ಉಳಿದಿರುತ್ತಿದ್ದವು. 1893ರಲ್ಲಿ ಇವೆಲ್ಲವನ್ನು ಸರಿಪಡಿಸಿ, ಆಕ್ಯಾಡೆಮಿ ಆಫ್ ಸೈನ್ಸ್‍ಗೆ  ತನ್ನ ಪರಿಪೂರ್ಣ ಛಾಯಾಚಿತ್ರಗಳನ್ನು ಒದಗಿಸಿದನು.  1894ರಲ್ಲಿ ದ್ಯುತಿ ಪ್ರಕ್ರಿಯೆ ಆಧಾರಿತವಾದ  ಬಣ್ಣಗಳನ್ನು ಬೇಕಾದಂತೆ ಪಡೆಯಬಲ್ಲ  ಸಿದ್ಧಾಂತವನ್ನು ಲಿಪ್‍ಮನ್ ಮಂಡಿಸಿದನು. 1895ರಲ್ಲಿ ಕಾಲವನ್ನು ಕರಾರುವಕ್ಕಾಗಿ ಅಳೆಯುವ ವಿಧಾನಗಳಲ್ಲಿದ್ದ ಮಾನವನ ಹಸ್ತಕ್ಷೇಪಗಳನ್ನು ನಿವಾರಿಸಿದನು. ವಿಶಿಷ್ಟವಾದ ಛಾಯಾಗ್ರಾಹಕ ತಯಾರಿಸಿದ ಲಿಪ್‍ಮನ್ ಅದರಿಂದ ತಾರೆಗಳ ಸುಸ್ಪಷ್ಟ ಬಿಂಬಗಳನ್ನು ಪಡೆದನು. ಇವೆಲ್ಲವು ಭೌತಶಾಸ್ತ್ರದ ವಿವಿಧ ಸಂಶೋಧನೆಗಳಿಗೆ ಅಪಾರ ನೆರವಿತ್ತವು.  ದ್ಯುತೀಕರಣದಿಂದ ಬಣ್ಣದ ಛಾಯಾಬಿಂಬ ಪಡೆಯುವ ವಿಧಾನ ನೀಡಿದ್ದಕ್ಕಾಗಿ ಲಿಪ್‍ಮನ್ 1908ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಪ್ಯಾರಿಸ್‍ನ ಅಕಾಡೆಮಿ ಆಫ್ ಸೈನ್ಸ್‍ನ ಸದಸ್ಯನಾದ ಲಿಪ್‍ಮನ್ 1912ರಲ್ಲಿ ಅದರ ಅಧ್ಯಕ್ಷ್ಯನಾದನು.  ಲಂದನ್‍ನ ರಾಯಲ್ ಸೊಸೈಟಿಯ ಸದಸ್ಯನೂ ಆಗಿದ್ದನು.  1921ರಲ್ಲಿ ಸರ್ಕಾರದ ಯೋಜನೆಯ ಅಂಗವಾಗಿ, ಅಸಂಸಂಗಳಿಗೆ ಭೇಟಿ ನೀಡಿದ್ದ ಲಿಪ್‍ಮನ್ ಅಲ್ಲಿಂದ ಹಿಂದಿರುಗುವಾಗ, ಮಾರ್ಗ ಮಧ್ಯದಲ್ಲಿ ಸಮುದ್ರಯಾನದಲ್ಲಿ ಮರಣ ಹೊಂದಿದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate