অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಲ್‍ಷ್ಟೆಟೆರ್ , ರಿಚರ್ಡ್ (1872-1942) 1915

ವಿಲ್‍ಷ್ಟೆಟೆರ್ , ರಿಚರ್ಡ್ (1872-1942) 1915

ವಿಲ್‍ಷ್ಟೆಟೆರ್ , ರಿಚರ್ಡ್ (1872-1942)  ೧೯೧೫

ಜರ್ಮನಿ-ಸಾವಯವ ರಸಾಯನಶಾಸ್ತ್ರ- ಕ್ಲೋರೋಫಿಲ್‍ನ  ರಾಚನಿಕ ಸ್ವರೂಪ ಅನಾವರಣಗೊಳಿಸಿದಾತ.

ವಿಲ್‍ಷ್ಟೆಟೆರ್, ಹನ್ನೊಂದನೆ ವಯಸ್ಸಿನಲ್ಲಿರುವಾಗ, ಆತನ ತಂದೆ ನ್ಯೂಯಾರ್ಕ್‍ಗೆ ಹೋದನು.  ವಿಲ್‍ಷ್ಟೆಟೆರ್‍ನ ಸೋದರ ಮಾವ ನ್ಯೂಯರ್ಕ್‍ನಲ್ಲಿ ಬಟ್ಟೆಯ ಕಾರ್ಖಾನೆ ತೆರೆದಿದ್ದನು.  ಇದರ ಯಶಸ್ಸು ವಿಲ್‍ಷ್ಟೆಟೆರ್ ತಂದೆಯನ್ನು ಆಕರ್ಷಿಸಿದ್ದಿತು.  ಆದರೆ ಈ ವ್ಯಾಪಾರದಲ್ಲಿ ಯಶಸ್ಸು ಗಳಿಸುವಲ್ಲಿ ಹದಿನೇಳು ವರ್ಷಗಳು ಸರಿದವು.  ಈ ಕಾಲದಲ್ಲಿ ವಿಲ್‍ಷ್ಟೆಟರ್ ತಾಯಿ ಜರ್ಮನಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಬೆಳೆಸಿದಳು.  ವಿಲ್‍ಷ್ಟೆಟರ್ ಚಿಕ್ಕಪ್ಪ ಬ್ಯಾಟರಿ ಕಾರ್ಖಾನೆ ಹೊಂದಿದ್ದನು. ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದುದರಿಂದ ಅವನಿಗೆ ರಸಾಯನಶಾಸ್ತ್ರದಲ್ಲಿನ ಆಸಕ್ತಿಗೆ ಕಾರಣವಾಯಿತು. ವಿಲ್‍ಷ್ಟೆಟರ್ ಮ್ಯೂನಿಕ್‍ನಲ್ಲಿ ಬೇಯರ್ ಕೆಳಗೆ ವಿದ್ಯಾಭ್ಯಾಸ ಹೊಂದಿ 1894ರಲ್ಲಿ ಅಲ್ಕ ಲಾಯಿಡ್ಸ್‍ಗಳ ಮೇಲೆ ನಡೆಸಿದ ಸಂಶೋಧನೆಗಳಿಗಾಗಿ ಡಾಕ್ಟರೇಟ್ ಪಡೆದನು.  ಇದಾದ ಮೇಲೆ ಝೂರಿಕ್‍ನಲ್ಲಿ ಪ್ರಾಧ್ಯಾಪಕನಾದನು.  ಸಸ್ಯಗಳ ಬಣ್ಣ ,ಕ್ವಿನೈನ್, ಕ್ಲೋರೋಫಿûಲ್ ಈತನ ಅಧ್ಯಯನದ ವಿಷಯಗಳಾಗಿದ್ದವು.  ಟ್ಸೆಟ್, ವರ್ಣಾಲೇಖ (Chromatography) ತಂತ್ರಗಳನ್ನು ಬಳಕೆಗೆ ತಂದಿದ್ದನು. ಈ ತಂತ್ರದ ನೆರವಿನಿಂದ, ವಿಲ್‍ಷ್ಟೆಟರ್ ಕ್ಲೋರೋಫಿûಲ್-ಎ ಹಾಗೂ ಬಿ ವಿಧಗಳ ರಾಚನಿಕ ಸ್ವರೂಪ ನಿರ್ಧರಿಸಿದನು.  ರಕ್ತದಲ್ಲಿನ ಹಿಮೋಗ್ಲೋಬಿನ್ ಕಬ್ಬಿಣದ ಒಂದು ಅಣುವನ್ನು ಹೊಂದಿರುವಂತೆ , ಕ್ಲೋರೋಫಿûಲ್ ಮೆಗ್ನೇಷಿಯಂನ ಒಂದು ಅಣುವನ್ನು ಹೊಂದಿರುವುದೆಂದು ವಿಲ್‍ಷ್ಟೆಟರ್ ತೋರಿಸಿದನು.  ಕೊಕೇನ್‍ನ ಉತ್ಪನ್ನಗಳನ್ನು ಸಹ ಈತ  ಅಭ್ಯಸಿಸಿದನು. 1915ರಲ್ಲಿ ಸಸ್ಯಗಳ ವರ್ಣಕಗಳ (Pigments) ವಿಷಯದಲ್ಲಿನ ಕಾರ್ಯಗಳಿಗಾಗಿ  ನೊಬೆಲ್ ಪ್ರಶಸ್ತಿ ಪಡೆದನು. 1912ರಲ್ಲಿ ಬರ್ಲಿನ್-ಡಹ್ಲೆಮ್‍ನ ಕೈಸರ್ ವಿಲ್‍ಹೆಲ್ಮ್ ಸಂಸ್ಥೆ ಸೇರಲು ಬರ್ಲಿನ್‍ಗೆ ಮರಳಿದನು.  ಇಲ್ಲಿ ಕೆರೋಟಿನ್ ಹಾಗೂ ಆಂಥೋಸೆಯನಿಸ್ಸ್‍ಗಳಲ್ಲಿ ಸಂಶೋಧನೆಯಲ್ಲಿ ಕ್ರಿಯಾಶೀಲನಾಗಿದ್ದನು.  ಮೊದಲ ಜಾಗತಿಕ ಯುದ್ದದಲ್ಲಿ ವಿಷಾನಿಲ ರಕ್ಷಕ ಮುಖವಾಡ ನಿರ್ಮಿಸಿದ ವಿಲ್‍ಷ್ಟೆಟರ್ ¥sóÁಸ್ಜೀನ್‍ನ್ನು ಹೀರಿಕೊಳ್ಳುವ ರಾಸಾಯನಿಕ ತಯಾರಿಸಿದನು.

1916ರಲ್ಲಿ ಮ್ಯೂನಿಕ್‍ನಲ್ಲಿ ಬೇಯರ್‍ನಿಂದ ತೆರವಾದ ಪೀಠ ಅಲಂಕರಿಸಿದನು. ಸ್ಮಾಲ್ ಜೊತೆಗೆ ದ್ಯುತಿ ಸಂಶ್ಲೇಷಣೆ ಕಿಣ್ವ,ಪರಾಕ್ಸೈಡ್‍ಗಳ ಅರಿವಿಗೆ ಶ್ರಮಿಸಿದನು. ಭೂರಸಾಯನಶಾಸ್ತ್ರಜ್ಞ ವಿ.ಎಂಗೋಲ್‍ಷ್ಮಿತ್, ಯಹೂದಿಯೆಂದು ಆತನನ್ನು ಬೋಧಕ ಹುದ್ದೆಗೆ ಆಯ್ಕೆ ಮಾಡಲು ಆಡಳಿತ ಮಂಡಳಿ ನಿರಾಕರಿಸಿತು. ಜನಾಂಗ ಭೇದ ನೀತಿಯನ್ನು ವಿರೋಧಿಸಿದ ವಿಲ್‍ಷ್ಟೆಟರ್ ತನ್ನ 53ನೇ ವಯಸ್ಸಿನಲ್ಲಿ ನಿವೃತ್ತಿ ವೇತನವಿಲ್ಲದೆ, ಆಡಳಿತ ಮಂಡಳಿ ನೀಡಿದ ಮನೆಯನ್ನು ಹಿಂದುರುಗಿಸಿ ರಾಜಿನಾಮೆ ನೀಡಿದನು.  ಮದುವೆಯಾದ ಐದೇ ವರ್ಷಗಳಲ್ಲಿ ವಿಲ್‍ಷ್ಟೆಟರ್ ಮಡದಿ ತೀರಿದಳು.  ಕೊನೆಯ ಮಗ ಕೊನೆಯುಸಿರೆಳಿದಿದ್ದನು.  ಮಗಳು ಮದುವೆಯಾಗಿ ಅಸಂಸಂಗಳಲ್ಲಿ ವಾಸಿಸುತ್ತಿದ್ದಳು.  ಇವೆಲ್ಲ ಸನ್ನಿವೇಶಗಳು ವಿಲ್‍ಷ್ಟೆಟರ್‍ನನ್ನು ಏಕಾಂಗಿಯಾಗಿಸಿದವು.  ಹಲವಾರು ದೇಶಗಳಿಂದ ಬಂದ ಆಹ್ವಾನಗಳನ್ನು ತಿರಸ್ಕರಿಸಿ ತನ್ನ ಉಳಿದ ಜೀವನವನ್ನು ಪ್ರಯಾಣ ಉಪನ್ಯಾಸಗಳಲ್ಲಿ ಕಳೆದನು. 1938ರಲ್ಲಿ ನ್ಯಾಷನಲ್ ಸೊಷಿಯಲಿಸ್ಟ್  ಪಕ್ಷ ಯಹೂದಿಗಳ ಬಂಧನಕ್ಕೆ ಸ್ವಯಂ ಸೇವಕನನ್ನು ಕರೆದಿರುವ ವಿಷಯ ವಿಲ್‍ಷ್ಟೆಟರ್ ಕಿವಿಗೆ ಬಿದ್ದಿತು.  ಅವರಿಂದ ವಿಲ್‍ಷ್ಟೆಟರ್ ಎಚ್ಚರಿಕೆಯ ಬೆದರಿಕೆಗಳನ್ನು ಪಡೆದನು.  ಇಂತಹ ಸ್ಥಿತಿಯಲ್ಲಿ ಬದುಕಿ ಉಳಿಯಬೇಕಾದರೆ ಜರ್ಮನಿ ತೊರೆದು ಹೋಗದೆ ಬೇರೆ ದಾರಿಯಿಲ್ಲವೆಂದು ಈತನಿಗೆ ಮನದಟ್ಟಾಯಿತು.  ಅಪರಾಧಿಯಂತೆ ಕಳ್ಳ ಮಾರ್ಗದಲ್ಲೇ ಜರ್ಮನಿ ತೊರೆಯದೆ, ಸರಿಯಾದ ಕಾನೂನಿನ ಮಾರ್ಗದಲ್ಲೇ ಸ್ವಿಟ್ಸಲ್ರ್ಯಾಂಡ್‍ಗೆ ಹೋಗಲು ವಿಲ್‍ಷ್ಟೆಟರ್  ಯತ್ನಿಸಿದನು.  ಆದರೆ ಈತನ ಪ್ರಾಮಾಣಿಕತೆ, ಸಜ್ಜನಿಕೆಗಳು ನಾಝಿಗಳೆದುರು ನಿಲ್ಲಲಿಲ್ಲ.  ವಿಲ್‍ಷ್ಟೆಟರ್ ದಾಖಲೆಗಳು ಸರ್ಕಾರದ ವಶವಾದವು. 1939ರ ಮಾರ್ಚ್‍ನಲ್ಲಿ ತನ್ನ ಹಳೆಯ ವಿದ್ಯಾರ್ಥಿ ಸ್ಮಾಲ್ ಹಾಗೂ ಪ್ರಭಾವಿ ಸ್ನೇಹಿತರ ನೆರವಿನಿಂದ ಸ್ವಿಟ್ಸಲ್ರ್ಯಾಂಡ್‍ಗೆ ವಲಸೆ ಹೋಗಬೇಕಾಯಿತು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate