অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಿಚರ್ಡ್ , ಕುಹ್ನ್ (1900-1967) 1938

ರಿಚರ್ಡ್ , ಕುಹ್ನ್ (1900-1967) 1938

ರಿಚರ್ಡ್ , ಕುಹ್ನ್ (1900-1967)   ೧೯೩೮

ಜರ್ಮನಿ-ರಸಾಯನಶಾಸ್ತ್ರ-ವಿಟಮಿನ್-ಬಿ ಕುರಿತಾಗಿ ವಿಸ್ತೃತ ಸಂಶೋಧನೆ ನಡೆಸಿದಾತ.

ಕುಹ್ನ್‍ನ ತಂದೆ ಹೊಫ್ರಾಟ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದನು. 3 ಡಿಸೆಂಬರ್ 1910ರಂದು ವಿಯೆನ್ನಾದಲ್ಲಿ ಕುಹ್ನ್‍ನ ಜನನವಾಯಿತು.  ವಿಯೆನ್ನಾ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪದವಿ ಗಳಿಸಿ ನಂತರ ಮ್ಯೂನಿಕ್‍ನಲ್ಲಿ ಆರ್.ವಿಲ್‍ಸ್ಟ್ಯಾಟರ್‍ನ ಕೆಳಗೆ ಕಿಣ್ವಗಳ ಮೇಲೆ ಸಂಶೋಧನೆ ನಡೆಸಿ 1922ರಲ್ಲಿ ಡಾಕ್ಟರೇಟ್ ಗಳಿಸಿದನು. 1926 ಮ್ಯೂನಿಕ್‍ನಲ್ಲಿ ವೈಶ್ಲೇಷಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕನಾದನು. 1929ರಲ್ಲಿ ಹೈಡೆಲ್‍ಬರ್ಗ್‍ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ಕೈಸೆರ್ ವಿಲ್‍ಹೆಲ್ಮ್ ಸಂಸ್ಥೆಯ ವೈದ್ಯಕೀಯ ರಸಾಯನಶಾಸ್ತ್ರದ ಮುಖ್ಯಸ್ಥನಾದನು. 1950ರಿಂದ ಇದು ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯೆಂದು ಹೆಸರಾಯಿತು. 1937ರಿಂದ ಕುಹ್ನ್ ಈ ಸಂಸ್ಥೆಯ ಆಡಳಿತಾಧಿಕಾರಿಯಾದನು.  ಈ ಹೊಣೆಯೊಂದಿಗೆ ಹೈಡೆಲ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಜೀವ ರಸಾಯನಶಾಸ್ತ್ರದ ಪ್ರಾಧ್ಯಪಕನೂ ಆಗಿದ್ದನು. ಕುಹ್ನ್ ಸಾವಯವ ರಸಾಯನಶಾಸ್ತ್ರದಲ್ಲಿ ಅಲಿಫ್ಯಾಟಿಕ್ ರೋಮ್ಯಾಟಿಕ್, ಸಂಯುಕ್ತಗಳು, ಪಾಲಿಯೆನ್ಸ್ ಕ್ಯುಮುಲೆನೆಸ್‍ಗಳ ಸಂಶ್ಲೇಷಣೆ, ಬಣ್ಣಗಳ ಸಂಯೋಜನೆ, ಹೈಡ್ರೋಕಾರ್ಬನ್‍ಗಳ ಅಮ್ಲೀಯತೆಯ ಅಧ್ಯಯನ ನಡೆಸಿದನು.  ಕೆರೋಟಿನಾಯಿಡ್ಸ್‍ಗಳ ರಾಸಾಯನಿಕ ಸ್ವಭಾವಗಳ ಅಧ್ಯಯನದಲ್ಲಿ ದ್ವಿ ಬಂಧಗಳಿಗೆ ಮಹತ್ವವಿದೆ.  ಇಂತಹ ಎಂಟು ಹೊಸ ಬಂಧಗಳನ್ನು ಅನಾವರಣಗೊಳಿಸಿದ ಕುಹ್ನ್, ವಿಟಮಿನ್-ಬಿ ಕುರಿತಾಗಿ ನಡೆಸಿದ ಸಂಶೋಧನೆಗಳಿಗಾಗಿ 1938ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು. ಕುಹ್ನ್‍ಗೆ ಮ್ಯೂನಿಕ್, ವಿಯೆನ್ನಾ, ಬ್ರೆಜಿಲ್‍ನ ಸೇಂಟ್ ಮಾರಿಯಾವಿಶ್ವವಿದ್ಯಾಲಯಗಳಿಂದ ಗೌರವ ಪದವಿಗಳು ದಕ್ಕಿದವು. 1910 ರಿಂದ1918ರವರೆಗೆ ಕುಹ್ನ್ ಹಾಗೂ 1945ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವೂಲ್ಫ್‍ಗ್ಯಾಂಗ್ ಪೌಲಿ ಸಹಪಾಠಿಗಳಾಗಿದ್ದರು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate