অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಾನ್ , ಬಿ. ಫೆನ್

ಜಾನ್ , ಬಿ. ಫೆನ್

ಜಾನ್ , ಬಿ. ಫೆನ್ (1917--) ೨೦೦೨

ಅಸಂಸಂ_ ರಸಾಯನಶಾಸ್ತ್ರ -ನೋದಕಾರಿಗಳನ್ನು ಕುರಿತಾದ ಸಂಶೋಧನೆಗಳ ಮುಂದಾಳು.

ಫೆನ್ ತಂದೆ ವೈದ್ಯುತ್ ಇಂಜಿನಿಯರಿಂಗ್‍ನಲ್ಲಿ  ಪದವಿ ಗಳಿಸಿದ್ದನು.  ನಂತರ ಬಟ್ಟೆ ತಯಾರಿಕಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದನು. ನಂತರ ತಬೇತಿ ಪಡೆದು ಧರ್ಮ ಪ್ರಚಾರ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದನು. ಜಾನ್ ತಾಯಿ ಈತನ ಸಹೋದ್ಯೋಗಿಯಾಗಿದ್ದಳು. 1917ರಲ್ಲಿ ನ್ಯೂಜೆರ್ಸಿಯಲ್ಲಿ ಜಾನ್‍ನ ಜನನವಾಯಿತು. ಬಟ್ಟೆ ತಯಾರಿಕಾ ಕಂಪನಿಯ ಮಾಲಿಕತ್ವ ಬದಲಾಗಿ ಜಾನ್‍ನ ತಂದೆ ಕೆಲಸ ಕಳೆದುಕೊಂಡನು. ಆಗ ಅಸಂಸಂದಲ್ಲಿ ಆರ್ಥಿಕ ಖಿನ್ನತೆಯ ಕಾಲ. ಈ ಸಂಕಷ್ಟದ ದಿನಗಳಲ್ಲಿ ಕಡುಕಷ್ಟದಿಂದ ಕುಟುಂಬವನ್ನು ಸಲಹಿದನು. ಈ ಕಾಲದಲ್ಲಿ ಅರ್ಹ ಬಡ ವಿದ್ಯಾರ್ಥಿಗಳ ನೆರವಿಗಾಗಿ ಸ್ಥಾಪಿಸಿದ್ದ ಶಾಲೆಯಲ್ಲಿ ಜಾನ್ ವಿದ್ಯಾಭ್ಯಾಸ ಸಾಗಿತು. ರಸಾಯನಶಾಸ್ತ್ರದ ಅಧ್ಯಯನಕ್ಕಾಗಿ ಜಾನ್ ಯೇಲ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಮುಂದೆ ನೊಬೆಲ್ ಪ್ರಶಸ್ತಿ ಪಡೆದ ಲಾರ್ಸ್ ಆನ್ಸೇಜರ್ಫೆನ್‍ನ ಸಹಪಾಠಿಯಾಗಿದ್ದನು. ರಸಾಯನಶಾಸ್ತ್ರದಲ್ಲಿ ಪದವಿ ಮುಗಿಸಿದ ನಂತರಫೆನ್ ವ್ರೆನ್ಸ್ ಮೊನ್ಸಾಂಟೋ ಕೆಮಿಕಲ್ ಕಂಪನಿಯ ¥sóÁಸ್ಪೇಟ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದನು. ಈ ಕಂಪನಿ  ಸ್ಟಾನ್ ಕಂಪೆನಿಯನ್ನು ಖರೀದಿಸಿತು. ಹೊಸದಾಗಿ ಸೇರ್ಪಡೆಗೊಂಡ ಈ ಘಟಕದಲ್ಲಿ ಕ್ಲೋರಿನ್‍ನಿಂದ ಸಂಪನ್ನಗೊಳಿಸಿದ ಬೈಫಿûನೈಲ್‍ಗಳನ್ನು  ಆರೋಕ್ಲೋರ್ ರಾಸಾಯನಿಕ ಸಂಯುಕ್ತಗಳನ್ನು ತಯಾರಿಸಲಾಗುತ್ತಿದ್ದಿತು. ಈ ಸಂಯುಕ್ತಗಳಿಗೆ ಅತ್ಯುತ್ತಮ ಶಾಖ  ವರ್ಗಾಂತರ   ಗುಣಗಳಿದ್ದು ವಿದ್ಯುತ್ ಪರಿವರ್ತಕಗಳಲ್ಲಿ (Transformers) ಶಾಖ ವಿಸರಣ ಮಾಧ್ಯಮಗಳಂತೆ ಬಳಕೆಯಾಗುತ್ತವೆ.ಫೆನ್ ಈ ಕಂಪನಿಯಲ್ಲಿ ಒಂದು ವರ್ಷವಿದ್ದನು. ನಂತರ ಮಿಷಿಗನ್‍ನಲ್ಲಿದ್ದ ಷಾಪ್ಲೆಸ್ ಕೆಮಿಕಲ್ ಕಂಪನಿ ಸೇರಿದನು. ಮೊನ್ಸಾಂಟೋ ಕಂಪನಿಯಲ್ಲಿದ್ದ ಜೇಮ್ಸ್ ಡಬ್ಲ್ಯೂ ಮುಲ್ಲೆನ್ ತಮ್ಮದೇ ಆದ ಒಂದು ಸಂಶೋಧನಾ ಪ್ರಯೋಗಾಲಯವನ್ನು ತೆರೆಯುವ ಹೊಂಗನಸನ್ನುಫೆನ್ ಮನದಲ್ಲಿ ಬಿತ್ತಿದ್ದನು. 1945ರಲ್ಲಿ ಎಕ್ಸಪೆರಿಮೆಂಟ್ ಇನ್ಕ್ ಸ್ಥಾಪನೆಯೊಂದಿಗೆ ಇದು ನನಸಾಯಿತು. ಇಲ್ಲಿ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದಿತು. ಇಲ್ಲಿ ಏಳು ವರ್ಷಗಳ ಕಾಲವಿದ್ದಫೆನ್, ಅಪಾರ ಜ್ಞಾನ ಹಾಗೂ ವೃತ್ತಿ ನೈಪುಣ್ಯ ಗಳಿಸಿದನು. ಇಲ್ಲಿರುವಾಗ ಶಬ್ಥಾತೀತ ವೇಗದ ವಿಮಾನಗಳಲ್ಲಿ ಬಳಸುವ ರಾಸಾಯನಿಕ ನೋದಕಾರಿಗಳ (Propellent) ಬಗೆಗೆ ವಿಸ್ತೃತವಾಗಿ ಅರಿತನು. ಇದರ ಫಲವಾಗಿ ಪ್ರಿನ್ಸ್‍ಟನ್ ವಿಶ್ವ ವಿದ್ಯಾಲಯ ಜೆಟ್ ನೋದಕೀಕರಣ ಕುರಿತಾದ ಸಂಶೋಧನೆಗಾಗಿ ಪ್ರಾರಂಭಿಸಿದ್ದ ಯೋಜನೆಯ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಆಹ್ವಾನ ನೀಡಿತು. ರಾಕೆಟ್‍ನ ಇಂಧನವಾಗಿ ಬಳಸುವ ಹೈಡ್ರೊಝೈನ್ ಕುರಿತಾದ ಸಂಶೋಧನೆಗಳನ್ನು ಫೆನ್ ನಿರ್ವಹಿಸಿದನು. ಇದರ ಅಂಗವಾಗಿ ಬ್ರಿಟನ್‍ನ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶ ದಕ್ಕಿತು.


ರಾಕೆಟ್ ಹಾಗೂ ವಿಮಾನಗಳ ಇಂಧನಗಳ ಅಧ್ಯಯನದಲ್ಲಿ ಉರಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇಂಧನಗಳು ಹೊತ್ತು ಉರಿಯುವ ತಾಪಮಾನ,ರಾಸಾಯನಿಕ ಸಂಯೋಜನೆ ಬಹು ಸಂಕೀರ್ಣ ವಿದ್ಯಾಮಾನಗಳಾಗಿದ್ದು ಇವುಫೆನ್‍ನ ಗಮನ ಸೆಳೆದಿದ್ದವು. ಅಲ್ಪ ಕಾಲದಲ್ಲೇ ಉರಿಗಳು ಸಹ ಒಂದು ಬಗೆಯ ಜೀವಿಗಳಂತೆಫೆನ್‍ಗೆ ಭಾಸವಾಗತೊಡಗಿತು. ಉರಿಗಳು ಜೀವಿಗಳಂತೆ ಉಗಮಗೊಂಡು, ಅಸ್ತಿತ್ವಕ್ಕಾಗಿ ಇಂಧನ ಅವಲಂಬಿಸಿ , ಆರೋಗ್ಯಕರ ಕಾರ್ಯ ನಿರ್ವಹಣೆಗೆ ಆಮ್ಲಾಕಾರಕಗಳನ್ನು ಬೇಡುತ್ತಿದ್ದು ಅವು ಕ್ರಮೇಣ ವ್ಯಾಪಿಸಿ ಹಲವಾಗಿ, ನಿಧಾನ ಗತಿಯಲ್ಲಿ ನಂದಿ ಹೋಗುವುದು ಜೀವಿಯ  ಜೀವನ ಕ್ರಮಕ್ಕಿಂತ ಬೇರೆಯಲ್ಲ ಎನಿಸಿತು. ಉರಿಯ ಒಳ ತಿರುಳು ಹೊರ ತಿರುಳಿಗಿಂತಲೂ ವಿಭಿನ್ನವಾಗಿರುತ್ತದೆ. ಇದೇ ನಿಜವಾದ ಉರಿಯ ಆತ್ಮ. ಇದರ ಅಧ್ಯಯನ ಬಹು ಕ್ಲಿಷ್ಟಕರ. ಏಕೆಂದರೆ ಇದರ ವ್ಯಾಪ್ತಿ ಅತ್ಯಲ್ಪ ಇದರ ತಾಪಮಾನ ವ್ಯತ್ಯಾಸ ತೀವ್ರ ಹಾಗೂ ಸಂಯೋಜನೆ ಸಂಕೀರ್ಣ ಇಂತಹ ಉರಿಯ ಮೇಲೆ ಪ್ರಯೋಗಗಳನ್ನು ಅರಿಯಲು , ಭೌತಶಾಸ್ತ್ರಜ್ಞರು ಕಣ ದೂಲಗಳನ್ನು ಬಳಸುವಂತೆ ಉರಿಯನ್ನು ಅರಿಯಲು ಅದೇ ಬಗೆಯ ತಂತ್ರಗಳಿಂದೇಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಫೆನ್‍ನ್ನು ಕಾಡತೊಡಗಿತು. ಮೆಸಾಚುಸೆಟ್ಸ್ ಇನ್ಟಿಟಿಟ್ಯೂಟ್ ಆಫ್ಟೆಕ್ನಾಲಜಿಯ ಅಮೆಡರ್  ಹಾಗೂ ಫ್ರೆಡರಿಕ್ ಕೆಯೆಸ್, ಅನಿಗಳ ವರ್ಗಾವಣೆ ಗುಣ ಲಕ್ಷಣ ಅಳೆಯಲು ವಿಶಿಷ್ಟ ತಂತ್ರಗಳನ್ನು ರೂಪಿಸಿದ್ದರು. ಆದರೆ ಉರಿಗಳ ಅಧ್ಯಯನಕ್ಕೆ ಇವು ಅಷ್ಟೊಂದು ಸಮರ್ಪಕವಾಗಿರಲಿಲ್ಲ. ಇ.ಡಬ್ಲ್ಯೂ ಬೇಕರ್ ಮತ್ತು ಕೆ. ಬೀರ್ ಸಹ ಈ ನಿಟ್ಟಿನಲ್ಲಿ ವಿಭಿನ್ನ ಯೋಜನೆಯೊಂದನ್ನು ವಿವರಿಸಿದ್ದರು.1929ರಲ್ಲಿ ಇವರಿಗಿಂತ ಇಪ್ಪತ್ತೈದು ವರ್ಷ ಮುಂಚೆಯೇ ಯೇಲ್ ವಿಶ್ವ ವಿದ್ಯಾಲಯದಲ್ಲಿದ್ದ ಟಿ.ಎಚ್.ಜಾನ್ಸನ್  ಪಾದರಸ ಪರಮಾಣುಗಳನ್ನು ಬಳಸಿ ಇವರಿಗಿಂತಲೂ ಉತ್ತಮ ತಂತ್ರವನ್ನು ವಿವರಿಸಿದ್ದನು. ಆದರೆ ಇದನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ. ಈ ಅಧ್ಯಯನದ ಮುಂದುವರೆದ ಭಾಗವಾಗಿ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್‍ನಲ್ಲಿರುವಾಗ ಜಾನ್ಸನ್ ರಾಸಾಯನಿಕ ಕ್ರಿಯೆಯಲ್ಲಿರುವ ಜಲಜನಕ್ಕಿಂತ ಭಾರವಾದ ಪರಮಾಣುಗಳ ವಿವರ್ತನ ವಿದ್ಯಾಮಾನವನ್ನು ಸಹ ಗುರುತಿಸಿದ್ದನು. ಆದರೆ ಇದನ್ನು ಪ್ರಕಟಿಸಿರಲಿಲ್ಲ. ಇದೇ ಸಮಯದಲ್ಲಿ ಗಟ್ಟಿಂಜೆನ್‍ನಲ್ಲಿದ್ದ ಫ್ರಿಷ್ಕ್ , ಎಸ್ಟರ್‍ಮನ್ ಮತ್ತು ಸ್ಟರ್ನ್ ಇದೇ ಫಲಿತಾಂಶ ಪಡೆದು, ಜಾನ್ಸನ್‍ಗಿಂತ ಎಂಟು ವಾರ ಮೊದಲೇ ಪ್ರಕಟಿಸಿದರು. ಇದಕ್ಕಾಗಿ ಸ್ಟರ್ನ್‍ಗೆ ನೊಬೆಲ್ ಪ್ರಶಸ್ತಿ ದಕ್ಕಿತು. ಸಂಶೋಧನೆಯಲ್ಲಿ ಬೇರೆಯವರಿಗಿಂತ 25 ವರ್ಷ ಮೊದಲಿದ್ದರೂ, ಪ್ರಕಟಣೆಯಲ್ಲಿ ಎಂಟು ವಾರ ಜಾನ್ಸನ್ ಹಿಂದಿದ್ದನು. ಹೀಗಾಗಿ ವಿಜ್ಞಾನದ ಮಹಾ ಆವಿಷ್ಕಾರವನ್ನು ನಡೆಸಿಯೂ ಅದರ ಕೀರ್ತಿ ದಕ್ಕದ ದುರ್ದೈವಿಯಾಗಿ ಜಾನ್ಸನ್ ಪರಿಗಣಿತನಾಗಿದ್ದಾನೆ. ಈ ಎಲ್ಲಾ ಹಿನ್ನೆಲೆಗಳನ್ನು ಪರಿಗಣಿಸಿಫೆನ್ ಹಾಗೂ ತಂಡ  ರಾಕೆಟ್‍ನ ಇಂಧನ , ಅದು ಹೊತ್ತಿ ಉರಿಯುವ ಕ್ರಿಯೆ, ವಿಸರ್ಜನಾ ನಳಿಕೆಯ ಮೂಲಕ ಹೊರ ಬರುವ ವಿದ್ಯಾಮನದ ಸಂಪೂರ್ಣ ಅರಿವಿಗೆ ಯತ್ನಿಸಿ ಅದರಲ್ಲಿ ಸಾಫಲ್ಯ ಕಂಡರು. 1960ರ ವೇಳೆಗೆ ರಾಕೆಟ್‍ನಂತಹ ಅತ್ಯಧಿಕ ವೇಗ ಕಾಯಗಳ ಇಂಧನ ಹೊತ್ತಿ ಉರಿಯುವ ಸ್ವರೂಪ ಸುಸ್ಪಷ್ಟವಾಯಿತು. ಇದಕ್ಕಾಗಿ ಫೆನ್ 2002ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate