অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗ್ಯಾಜೆಟ್ಸ್

ಹಸಿರು ಗ್ಯಾಜೆಟ್ಸ್

  • ಹಸಿರೇ ಉಸಿರು ಎಂಬ ಮಂತ್ರ ತಂತ್ರಜ್ಞಾನ ಲೋಕಕ್ಕೂ ಅನ್ವಯವಾಗುತ್ತದೆ. ಆದಷ್ಟು ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದನ್ನು ಕಡಿಮೆ ಮಾಡಿ ಹಸಿರು ಉತ್ಪನ್ನಗಳನ್ನು ಇಂದಿನ ದಿನದ ವಿಶೇಷಕ್ಕಾಗಿ ಇನ್ನು ಮುಂದೆ ಬಳಸಲು ಆರಂಭಿಸುವುದು ಹಸಿರು ಕ್ರಾಂತಿಯ ಕಹಳೆಯಾಗಲಿದೆ
  • ಕಾಫಿ ಮೇಕರ್ ಒಂದು ಸಮಯದಲ್ಲಿ ಒಂದು ಕಪ್ ಕಾಫಿಯನ್ನು ಇದು ಮಾಡುತ್ತದೆ. ಕಾಫಿಯನ್ನು ತ್ವರಿತವಾಗಿ ಇದು ಬ್ರೂ ಮಾಡಿಕೊಡುತ್ತದೆ.
  • ಫಿಲಿಪ್ಸ್ ಕೆಟಲ್ ಸರಿಯಾದ ಪ್ರಮಾಣದಲ್ಲಿರುವ ನೀರನ್ನು ಕುದಿಸಲು ಈ ಕೆಟಲ್ ಸಹಕಾರಿಯಾಗಿದೆ. ಇದು ಎನರ್ಜಿಯನ್ನು ಉಳಿಸಲು ಬಳಕೆದಾರರಿಗೆ ಸಹಕಾರಿ.
  • ಹಲ್ಲುಜ್ಜಲು ಸಹಕಾರಿ ಈ ಬ್ರಶ್ ಅನ್ನು ಟೂತ್‌ಪೇಸ್ಟ್ ಇಲ್ಲದೆಯೇ ಬಳಸಬಹುದಾಗಿದ್ದು, ಬ್ರಶ್‌ನಲ್ಲಿರುವ ಟೈಟಾನಿಯಮ್ ಡಿಯೋಕ್ಸೈಡ್ ನಿಮಗೆ ಹಲ್ಲುಜ್ಜಲು ಸಹಕಾರಿಯಾಗಿದೆ.
  • ಪೈಲಟ್ ಪೆನ್ಸ್ ರೀಸೈಕಲ್ ಮಾಡಬಹುದಾದ ಪ್ಲಾಸ್ಟಿಕ್ ನೀರಿನ ಬಾಟಲುಗಳಿಂದ ಇದನ್ನು ತಯಾರಿಸಿದ್ದು, ಹಸಿರು ಉತ್ಪನ್ನಕ್ಕೆ ಉತ್ತಮ ಉದಾಹರಣೆಯಾಗಿದೆ.
  • ಚಾರ್ಜರ್ ನಿಮ್ಮ ಫೋನ್‌ಗೆ ಎಷ್ಟು ಬ್ಯಾಟರಿ ಶಕ್ತಿ ಅವಶ್ಯಕತೆಯಿದೆ ಎಂಬುದನ್ನು ಈ ಚಾರ್ಜರ್ ಹೇಳುತ್ತದೆ. ಇದನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.
  • ಕ್ಸೆಮಿನಿ ಚಾರ್ಜರ್ ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳನ್ನು ಇದು ಚಾರ್ಜ್ ಮಾಡಲಿದ್ದು, ಮರದಿಂದ ಇದನ್ನು ನಿರ್ಮಿಸಲಾಗಿದೆ.
  • ಹೆಡ್‌ಫೋನ್ಸ್ ಪ್ರಾಣಿಸಂರಕ್ಷಣಾ ಕಂಪೆನಿ ಪಾಕ್ಸ್‌ನೊಂದಿಗೆ ಕಂಪೆನಿ ಕೈಜೋಡಿಸಿ ಈ ಹೆಡ್‌ಫೋನ್ ತಯಾರಿಸಿದ್ದು, ಹಳೆಯ ಹೆಡ್‌ಫೋನ್‌ನ ಭಾಗಗಳನ್ನು ಇದರಲ್ಲಿ ಬಳಸಲಾಗಿದೆ.
  • ಟಿವಿ ಇದರ ಬ್ಯಾಕ್ ಲೈಟ್ ಸೆನ್ಸಾರ್‌ಗಳಿಗೆ ಕೃತಜ್ಞತೆಯನ್ನರ್ಪಿಸಬೇಕು. ಇದು ಹೆಚ್ಚುವರಿ ಎನರ್ಜಿಯನ್ನು ಉಳಿಸಿ ಮನರಂಜನೆಯನ್ನು ಒದಗಿಸುತ್ತದೆ.
  • ಕಂಪ್ಯೂಟರ್ ರೀಸೈಕಲ್ ಮಾಡಬಹುದಾದ ಸಾಮಾಗ್ರಿಗಳಿಂದ ಇದನ್ನು ತಯಾರಿಸಲಾಗಿದ್ದು, ಸ್ನೇಹಿ ಕಂಪ್ಯೂಟರ್ ಇದಾಗಿದೆ. ಎಲ್‌ಇಡಿ ಲೈಟಿಂಗ್ ಅನ್ನು ಇದು ಬಳಸುತ್ತಿದೆ.

ಆಂಡ್ರಾಯ್ಡ್ ಎಮ್

ಆಂಡ್ರಾಯ್ಡ್ ಲಾಲಿಪಪ್‌ನ ಸಕ್ಸೆಸರ್ ಆಂಡ್ರಾಯ್ಡ್ ಎಮ್ ಉಗಮಗೊಂಡಿದೆ. ಆಂಡ್ರಾಯ್ಡ್‌ನ ವಿಪಿ ಎಂಜಿನಿಯರಿಂಗ್ ಗೂಗಲ್ ಈವೆಂಟ್‌ನಲ್ಲಿ ಆಂಡ್ರಾಯ್ಡ್ ಎಮ್ ಲಾಲಿಪಪ್ ಅನ್ನು ಮೀರಿಸಿ ದಾಖಲೆ ನರೆಯುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಲಾಲಿಪಪ್ ಅನ್ನು ಪ್ರಸ್ತುತಪಡಿಸಿದ ಸಂದರ್ಭದಲ್ಲಿ ಗೂಗಲ್ ಕಂಡುಕೊಂಡ ಕೆಲವೊಂದು ನವೀಕರಣಗಳನ್ನು ಆಂಡ್ರಾಯ್ಡ್ ಎಮ್‌ನಲ್ಲಿ ಒಳಪಡಿಸಿದೆ.

ಗೂಗಲ್‌ನ ಹೆಚ್ಚು ಬಲಯುತ ಓಎಸ್ ಆಗಿ ಗೂಗಲ್ ಎಮ್ ತನ್ನ ನೆಲೆಯನ್ನು ಕಂಡುಕೊಂಡಿದ್ದು ಇಂದಿನ ಲೇಖನದಲ್ಲಿ ಇದನ್ನು ಕುರಿತಾದ ಇನ್ನಷ್ಟು ವಿಷಯಗಳನ್ನು ನಾವು ಅರಿತುಕೊಳ್ಳಲಿರುವೆವು. ಫಿಂಗರ್ ಪ್ರಿಂಟ್ ಬೆಂಬಲ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಬೆರಳಚ್ಚು ಸ್ಕ್ಯಾನರ್‌ಗಳನ್ನು ತಮ್ಮ ಡಿವೈಸ್‌ಗಳಲ್ಲಿ ಹೊಂದಿವೆ. ಇನ್ನು ಆಂಡ್ರಾಯ್ಡ್ ಎಮ್‌ನಲ್ಲಿ ಈ ಫೀಚರ್ ಅನ್ನು ಗೂಗಲ್ ಪ್ರಸ್ತುತಪಡಿಸಿದ್ದು ಪ್ರಮಾಣಿತ ಎಪಿಐ ಅನ್ನು ಇದಕ್ಕಾಗಿ ಬಳಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ನಂತೆಯೇ ಪೇ ಲಾಲಿಪಪ್‌ನಲ್ಲಿ ಇಲ್ಲದ ಒಂದು ಫೀಚರ್ ಆಗಿದೆ ಆಂಡ್ರಾಯ್ಡ್ ಪೇ. ಎನ್‌ಎಫ್‌ಸಿ ಚಾಲನೆಯಲ್ಲಿರುವ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಮತ್ತು ಮೇಲಿನವುಗಳಲ್ಲಿ ಇದು ಬೆಂಬಲವನ್ನು ನೀಡುತ್ತಿದೆ. ಬ್ಯಾಟರಿ ಲೈಫ್ ಡೋಜ್ ಎಂಬ ಅತಿವಿಶಿಷ್ಟ ಫೀಚರ್ ಅನ್ನು ಆಂಡ್ರಾಯ್ಡ್ ತಂದಿದ್ದು, ಇದು ಬ್ಯಾಟರಿ ಶಕ್ತಿಯನ್ನು ವರ್ಧಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ. ಯುಎಸ್‌ಬಿ ಕನೆಕ್ಟರ್ ಯುಎಸ್‌ಬಿ ಸಿ ಬೆಂಬಲದೊಂದಿಗೆ ವೇಗವಾದ ಚಾರ್ಜಿಂಗ್ ಅನ್ನು ಇದು ತರುತ್ತಿದೆ. ಇದೊಂದು ಹೊಸ ರೀತಿಯ ಯುಎಸ್‌ಬಿ ಕನೆಕ್ಟರ್ ಆಗಿದ್ದು, ಸುಲಭ ಮತ್ತು ವೇಗವಾದ ಚಾರ್ಜಿಂಗ್‌ಗೆ ಅನುಕೂಲಕರವಾಗಿದೆ.

ಅನುಮತಿಗಳು ಅಪ್ಲಿಕೇಶನ್ ಅನುಮತಿ ವ್ಯವಸ್ಥೆಗಳನ್ನು ಇದರಲ್ಲಿ ನಮಗೆ ಕಾಣಬಹುದಾಗಿದ್ದು ಬಳಕೆದಾರರು ಭದ್ರತಾ ವ್ಯವಸ್ಥೆಗಳನ್ನು ಅನುಮೋದಿಸುವುದು ಅಥವಾ ನಿರಾಕರಿಸುವುದನ್ನು ಬಳಕೆದಾರರು ಮಾಡಬಹುದಾಗಿದೆ. ನೀವು ಅಂಗೀಕರಿಸಲು ಇಚ್ಛಿಸಿದ ಕೆಲವೊಂದು ನಿಯಮಗಳನ್ನು ನಿರಾಕರಿಸುವ ಆಂಡ್ರಾಯ್ಡ್ ಎಮ್ ಫೀಚರ್‌ಗಳು ಪಠ್ಯ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಅಂತೆಯೇ ಧ್ವನಿ ನಿಯಂತ್ರಣಗಳು ಕೆಲಸ ಮಾಡುವ ಪರಿಯನ್ನು ಇನ್ನಷ್ಟು ಸುಧಾರಣೆ ಮಟ್ಟದಲ್ಲಿ ಇದು ನಿರ್ವಹಿಸುತ್ತಿದೆ. ಆಂಡ್ರಾಯ್ಡ್ ಎಮ್ ಅಪ್‌ಡೇಟ್‌ನೊಂದಿಗೆ ಗೂಗಲ್ ಧ್ವನಿ ನಿಯಂತ್ರಣ ವ್ಯವಸ್ಥೆಗಳನ್ನು ಇನ್ನಷ್ಟು ಸರಳಗೊಳಿಸಿದೆ.

ಸ್ಮಾರ್ಟ್‌ಫೋನ್‌ನ ಕುತ್ತುತರುವ ಅಂಶಗಳು

ಆದರೆ ಸ್ಮಾರ್ಟ್‌ಫೋನ್‌ಗಳು ಒದಗಿಸುತ್ತಿರುವ ಈ ಪ್ರಯೋಜನಗಳು ಒಮ್ಮೊಮ್ಮೆ ಕಿರಿಕಿರಿಯನ್ನುಂಟು ಮಾಡುತ್ತದೆ. ಸ್ಮಾರ್ಟ್‌ಫೋನ್‌ಗಳ ಅತಿಹೆಚ್ಚು ಬಳಕೆ ಇಂದು ಪ್ರಾಣಕ್ಕೆ ಕುತ್ತಾಗಿದೆ. ಯುವಜನರು ತಪ್ಪು ಕೆಲಸಗಳಲ್ಲಿ ಮೈಮರೆಯುತ್ತಿದ್ದಾರೆ. ಇಂತಹುದೇ ಕೆಲವೊಂದು ತಲೆನೋವಿನ ಕೆಲಸಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಹಂಚಿಕೊಳ್ಳುತ್ತಿದ್ದು ಸ್ಮಾರ್ಟ್‌ಫೋನ್‌ಗಳು ಎಷ್ಟು ಬದಲಾವಣೆಯನ್ನು ಉಂಟುಮಾಡಿವೆ ಎಂಬುದನ್ನು ಅರಿತುಕೊಳ್ಳಿ.

ಕಿರಿಕಿರಿ ಇನ್ನು ಏನಾದರೂ ವಿಶೇಷ ಖಾದ್ಯವನ್ನು ತಯಾರಿಸಿದರೂ ಅದರ ಫೋಟೋ ತೆಗೆಯುವುದು ಮತ್ತು ಅದನ್ನು ಹಂಚಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಇತರರಿಗೆ ಇದು ಕಿರಿಕಿರಿಯನ್ನುಂಟು ಮಾಡುತ್ತದೆ ಎಂಬ ವಿಷಯ ನಮ್ಮ ತಲೆಯಲ್ಲಿ ಇರುವುದೇ ಆಗಾಗ್ಗೆ ಸಂದೇಶ ರವಾನೆ ಇನ್ನು ವಿವಾದಗಳನ್ನು ಬಗೆಹರಿಸಲು ಫೋನ್ ಅನ್ನು ಹೆಚ್ಚು ಹೆಚ್ಚು ಬಳಸುವವರಿದ್ದಾರೆ? ಇಂತಹ ಸಂದರ್ಭದಲ್ಲಿ ಅವರ ಕೈ ಸುಮ್ಮನೆ ಇರುವುದೇ ಇಲ್ಲ. ಫೋನ್‌ನಲ್ಲಿ ಆಗಾಗ್ಗೆ ಸಂದೇಶ ರವಾನೆಯಾಗುತ್ತಲೇ ಇರುತ್ತದೆ. ಅನಿಯಮಿತ ಬಳಕೆ ಸ್ಮಾರ್ಟ್‌ಫೋನ್‌ಗಳು ಒದಗಿಸುತ್ತಿರುವ ಅಪ್ಲಿಕೇಶನ್‌ಗಳು ಒಮ್ಮೊಮ್ಮೆ ಪ್ರಯೋಜನಕಾರಿಯಾಗಿದ್ದರೂ ಇದರಿಂದ ತಲೆನೋವು ಇದ್ದೇ ಇದೆ.

ಹೆಚ್ಚಿನ ಅಪ್ಲಿಕೇಶನ್‌ಗಳ ಬಳಕೆಯಿಂದಾಗಿ ನಿಮ್ಮ ಫೋನ್ ಕಸದ ಡಬ್ಬಿಯಾಗುವುದು ಖಂಡಿತ. ಸೆಲ್ಫಿ ಸರಮಾಲೆ ಇನ್ನು ಫೋನ್‌ಗಳಲ್ಲಿ ಮುಂಭಾಗ ಕ್ಯಾಮೆರಾ ಇದೆ ಎಂದಾದಲ್ಲಿ ಬೇಕು ಬೇಕಾದ ಹಾಗೆ ಸೆಲ್ಫಿ ತೆಗೆಯುವುದು ಮೋಜುದಾಯಕವಾಗಿದೆ. ಕುಳಿತಲ್ಲಿ ನಿಂತಲ್ಲಿ ಹೀಗೆ ಬೇರೆ ಬೇರೆ ಪ್ರಕ್ರಿಯೆಗಳಲ್ಲಿ ಸೆಲ್ಫಿ ಸರಮಾಲೆ. ಮ್ಯೂಸಿಕ್ ಪೆಟ್ಟಿಗೆ ಇನ್ನು ಕೆಲವರು ತಮ್ಮ ಫೋನ್‌ಗಳನ್ನೇ ಸಂಗೀತ ಪೆಟ್ಟಿಗೆಯನ್ನಾಗಿಸಿ ಸಾರ್ವಜನಿಕ ವಲಯಗಳಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಾರೆ. ಅವರಿಗೆ ಇದು ಒಂದು ರೀತಿಯ ಮೋಜನ್ನು ಉಂಟುಮಾಡುತ್ತಿದ್ದರೂ ಆಲಿಸುವವರಿಗೆ ಕಿರಿಕಿರಿ ಖಂಡಿತ. ಬ್ಯುಸಿ ಇನ್ನು ಲಿಫ್ಟ್‌ಗಳಲ್ಲಿ ನೀವು ಪ್ರಯಾಣಿಸುತ್ತಿದ್ದೀರಿ ಎಂದಾದಲ್ಲಿ ಕೂಡ ಫೋನ್ ಬಳಕೆ ಮಾಡುವುದು ಅಸಹನೀಯವನ್ನುಂಟು ಮಾಡುತ್ತದೆ. ಫೋನ್‌ಗಳು ನಮ್ಮನ್ನು ಎಷ್ಟು ಬ್ಯುಸಿಯಾಗಿಸಿವೆ ಎಂಬುದು ಇದರಿಂದ ತಿಳಿದು ಬರುತ್ತದೆ.

ವೀಡಿಯೋ ಶೂಟಿಂಗ್ ಇನ್ನು ಕೆಲವರು ಮೇಧಾವಿಗಳು ಫೋನ್‌ನಲ್ಲಿ ವೀಡಿಯೋ ಶೂಟಿಂಗ್ ಮಾಡುವಾಗ ಲಂಬವಾಗಿ ತಮ್ಮ ಫೋನ್ ಅನ್ನು ಹಿಡಿದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವಾಗ ಚಿತ್ರಗಳು ಸರಿಯಾಗಿ ಸೆರೆಯಾಗುವುದಿಲ್ಲ ಎಂಬ ಸಾಮಾನ್ಯ ಅಂಶ ಅವರ ತಲೆಯಲ್ಲಿರುವುದಿಲ್ಲ. ಆಪಲ್ ಮ್ಯಾಪ್ಸ್ ಆಪಲ್‌ನ ಮ್ಯಾಪ್ಸ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದೇ ಇರುವುದು. ಆಪಲ್ ಮ್ಯಾಪ್ಸ್ ಅನ್ನು ಬಳಸುತ್ತಿರುವಾಗ ನೀವು ಮೂರನೇ ವ್ಯಕ್ತಿ ಅಪ್ಲಿಕೇಶನ್ ಅಥವಾ ಗೂಗಲ್ ಮ್ಯಾಪ್ಸ್‌ನ ನೆರವನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಸ್ಮಾರ್ಟ್‌ಫೋನ್ ಸಂಗಾತಿ ರಸ್ತೆಯಲ್ಲಿ ನಡೆದಾಡುವಾಗ ಕೂಡ ನಾವು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತೇವೆ. ಆದರೆ ಇದರಿಂದ ಉಂಟಾಗುವ ಅವಘಡಗಳ ಬಗ್ಗೆ ನಿಮಗೆ ಎಚ್ಚರವಿದೆಯೇ? ಫೋನ್ ಅನ್ನು ನಾವು ಬಳಸುತ್ತಿರುವಾಗ ಮೈಮರೆಯುವುದು ಸಹಜ. ಆದರೆ ಇದು ನಿಮ್ಮ ಪ್ರಾಣಕ್ಕೆ ಹಾನಿಯನ್ನುಂಟು ನಿಯಮಗಳನ್ನು ಪಾಲಿಸಿ ಕೆಲವೊಮ್ಮೆ ತುರ್ತಾದ ಮೀಟಿಂಗ್‌ಗಳ ಸಂದರ್ಭಗಳಲ್ಲಿ ನಿಮ್ಮ ಫೋನ್ ಕಿರಿಚಿಕೊಳ್ಳುತ್ತಿದ್ದರೆ ಬೇರೆಯವರಿಗೆ ಅದು ಅಸಹನೀಯವಾಗುತ್ತದೆ. ಆದ್ದರಿಂದ ಕೆಲವೊಂದು ಸ್ಥಳಗಳಲ್ಲಿ ಫೋನ್‌ ಬಳಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿ.

ವಾಟ್ಸಾಪ್ ಹೊಸ ಅಂಶ

ಹೆಚ್ಚು ಜನಪ್ರಿಯವಾದ ಮೊಬೈಲ್ ಅಪ್ಲಿಕೇಶನ್ ಆಗಿ ಪ್ರಖ್ಯಾತಿಯನ್ನು ಹೊಂದಿರುವ ವಾಟ್ಸಾಪ್‌ನ ಕೆಲವೊಂದು ಅನೂಹ್ಯ ಅಂಶಗಳನ್ನು ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಮಾತ್ರವಲ್ಲದೆ ಐಫೋನ್, ಬ್ಲ್ಯಾಕ್‌ಬೆರ್ರಿ ಮೊಬೈಲ್ ಫೋನ್‌ಗಳಿಗೂ ಸಿಸ್ಟಮ್‌ಗಳಿಗೂ ವಾಟ್ಸಾಪ್ ಲಭ್ಯವಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸಾಪ್‌ನ ಕೆಲವೊಂದು ಸಲಹೆ ಸೂಚನೆಗಳನ್ನು ನಾವು ನೀಡುತ್ತಿದ್ದು ಇದು ಅತಿ ವಿಶೇಷ ಎಂದೆನಿಸಿದೆ.

ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸದೇ ವಾಟ್ಸಾಪ್ ಬಳಸುವುದು ಹೇಗೆ ಎಂಬುದೇ ಇಂದಿನ ವಾಟ್ಸಾಪ್ ವಿಶೇಷತೆಯಾಗಿದೆ. ಅನ್‌ಇನ್‌ಸ್ಟಾಲ್ ನಿಮ್ಮ ಮೊಬೈಲ್‌ನಿಂದ ವಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿ ಪ್ಲೇ ಸ್ಟೋರ್‌ ಪ್ಲೇ ಸ್ಟೋರ್‌ನಿಂದ ಪುನಃ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇನ್‌ಸ್ಟಾಲ್ ಮಾಡಿ (ಇದು ಹೆಚ್ಚು ಪ್ರಮುಖವಾಗಿದೆ) ಸಂದೇಶ ಸೇವೆ ಸಂದೇಶ ಸೇವೆಯನ್ನು ನಿಷ್ಕ್ರಿಯಗೊಳಿಸಿ (ಫ್ಲೈಟ್ ಮೋಡ್ ಸಕ್ರಿಯಗೊಳಿಸಿ) ಮೊಬೈಲ್ ಸಂಖ್ಯೆಯನ್ನು ನಮೂದಿಸಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಫ್ಲೈಟ್ ಮೋಡ್ ಇದೀಗ ತನ್ನ ಸರ್ವರ್‌ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲು ಸಾಧ್ಯವಾಗದು.

ನಿಮ್ಮ ಮೊಬೈಲ್‌ನಲ್ಲಿ ಫ್ಲೈಟ್ ಮೋಡ್ ಸಕ್ರಿಯಗೊಂಡಿದೆ ಎಂಬುದನ್ನು ಖಾತ್ರಿಪಡಿಸಿ. ಪರ್ಯಾಯ ವ್ಯವಸ್ಥೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಪರ್ಯಾಯ ವ್ಯವಸ್ಥೆಯನ್ನು ವಾಟ್ಸಾಪ್ ಕಲ್ಪಿಸುತ್ತದೆ. ಇಮೇಲ್ ವಿಳಾಸ "ಚೆಕ್ ತ್ರು ಎಸ್‌ಎಮ್‌ಎಸ್" ಎಂಬುದನ್ನು ಆರಿಸಿ ಮತ್ತು ನಿಮ್ಮ ಇಮೇಲ್ ವಿಳಾಸ ನಮೂದಿಸಿ. ದೃಢೀಕರಣ ಪ್ರಕ್ರಿಯೆ ಕಳುಹಿಸು ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೂಡಲೇ ಕ್ಯಾನ್ಸಲ್ ಬಟನ್ ಅನ್ನು ಒತ್ತಿರಿ.

ದೃಢೀಕರಣ ಪ್ರಕ್ರಿಯೆಯನ್ನು ಅಂತ್ಯಗೊಳಿಸಲು ಇದು ಅಗತ್ಯವಾಗಿದೆ ಸ್ಪೂಫ್ ಸಂದೇಶ ನಿಮ್ಮ ಮೊಬೈಲ್‌ನಲ್ಲಿ ಸ್ಪೂಫ್ ಸಂದೇಶಗಳ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಔಟ್‌ಬಾಕ್ಸ್‌ಗೆ ಹೋಗಿ ಮತ್ತು ಸಂದೇಶ ವಿವರಗಳನ್ನು ನಕಲಿಸಿಕೊಳ್ಳಿ ಮತ್ತು ಅದನ್ನು ಸ್ಪೂಫ್‌ಡ್ ಪರಿಶೀಲನೆಗೆ ಕಳುಹಿಸಿ. ಸ್ನೇಹಿತರೊಂದಿಗೆ ಸಂಪರ್ಕ ನಿಮ್ಮ ದೇಶದ ಕೋಡ್ ಮೊಬೈಲ್ ಸಂಖ್ಯೆ ನಿಮ್ಮ ಇಮೇಲ್ ವಿಳಾಸ ಮಾಹಿತಿಗಳನ್ನು ಸ್ಪೂಫ್‌ಡ್ ಸಂದೇಶಗಳಲ್ಲಿ ನಮೂದಿಸಿ ಇದರ ನಂತರ ಸ್ಪೂಫ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಲಾಗುತ್ತದೆ ಮತ್ತು ಈ ಸಂಖ್ಯೆಯನ್ನು ಬಳಸಿಕೊಂಡು ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕವನ್ನು ನಡೆಸಬಹುದಾಗಿದೆ.

ಟೆಕ್ ಉತ್ಪನ್ನಗಳು

ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ನಾವು ಹೆಚ್ಚು ಸುಧಾರಿತ ಅಂಶಗಳನ್ನು ಕಂಡುಕೊಳ್ಳುತ್ತಿದ್ದೇವೆ. ನಮ್ಮ ಜೀವನವನ್ನು ಇನ್ನಷ್ಟು ಸರಳ ಅಂತೆಯೇ ಮಾಡರ್ನ್‌ಗೊಳಿಸುವ ಈ ಸಂಗತಿಗಳು ವಿಜ್ಞಾನ ಲೋಕ ನಮಗೆ ನೀಡಿರುವ ಅದ್ಭುತ ಕೊಡುಗೆ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಇಂತಹುದೇ ನಾವೀನ್ಯತೆಯುಳ್ಳ ಡಿವೈಸ್‌ಗಳನ್ನು ಕಾಣಲಿದ್ದು ಇದು ಮಾಡುವ ಕಾರುಬಾರು ನಿಜಕ್ಕೂ ಅಮೋಘ ಎಂದೆನಿಸಿದೆ. ಸೋಲಾರ್ ಪ್ಯಾನೆಲ್‌ ಸೋಲಾರ್ ರಸ್ತೆಗಳಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ರಸ್ತೆಯ ಒಳಗೆ ಅಳವಡಿಸುತ್ತಿದ್ದು ಇದು ಸೌರಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇದು ಫೈಬರ್ ಸ್ವಿಚ್‌ಗಳನ್ನು ಹೊಂದಿದೆ.

ರಸ್ತೆಗಳಲ್ ಒಡೆಯುವಿಕೆ ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಅರ್ಬನ್ ವಾಟರ್ ಸ್ಟೇಶನ್ ಕಂಪ್ಯೂಟರೀಕೃತ ಕುಡಿಯುವ ನೀರಿನ ಸ್ಟೇಶನ್‌ಗಳು ನಿಮ್ಮ ನೀರಡಿಕೆಯನ್ನು ನೀಗಿಸುತ್ತವೆ. ಇದರಿಂದಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಆಗಾಗ್ಗೆ ಖರೀದಿಸಿ ಎಲ್ಲೆಂದರಲ್ಲಿ ಎಸೆಯುವ ಕ್ರಮಕ್ಕೆ ಅಂತ್ಯಹಾಡಬಹುದಾಗಿದೆ. ಫೈರ್‌ವಾಲ್ ಕಾರಿನ ಚಕ್ರಗಳನ್ನು ಭದ್ರಪಡಿಸುವ ವ್ಯವಸ್ಥೆಯನ್ನು ಅರಿಲು ಅಭಿವೃದ್ಧಿಪಡಿಸಿದ್ದು ನಿಮ್ಮ ಕಾರಿಗೆ ತೊಂದರೆಗಳಾದಲ್ಲಿ ಮಾಹಿತಿ ನೀಡುತ್ತದೆ. ವೈರ್‌ಲೆಸ್ ನೆಟ್‌ವರ್ಕ್ ವೈರ್‌ಲೆಸ್ ನೆಟ್‌ವರ್ಕ್ ಉಳ್ಳ ಆಟಿಕೆಗಳು ಇದಾಗಿದ್ದು ಮಕ್ಕಳೊಂದಿಗೆ ಇದು ಸಂಭಾಷಣೆಯನ್ನು ನಡೆಸುತ್ತವೆ.

ನಿಮ್ಮ ಮಾತುಗಳನ್ನು ಫೋನ್‌ನಿಂದ ವೈಫೈ ಮೂಲಕ ಮಕ್ಕಳಿಗೆ ತಿಳಿಸುತ್ತದೆ. ಇದರಿಂದಾಗಿ ಮಕ್ಕಳಿಗೆ ಅಭದ್ರತೆ ಕಾಡುವುದಿಲ್ಲ. ವೀಡಿಯೋ ಕ್ಯಾಮೆರಾ ಎತ್ತರದ ಟವರ್‌ಗಳಲ್ಲಿ ವೀಡಿಯೋ ಕ್ಯಾಮೆರಾಗಳನ್ನು ಅಳವಡಿಸಿ ಕಾಡಿನ ಸಂರಕ್ಷಣೆಯನ್ನು ಮಾಡಬಹುದಾಗಿದೆ. ಕಾಡಿನಲ್ಲಿ ಬೆಂಕಿ ಕಂಡುಬಂದಲ್ಲಿ ಇದು ಕೂಡಲೇ ಸೂಚನೆಯನ್ನು ಒದಗಿಸುತ್ತದೆ. ಜಿಪಿಎಸ್‌ ನೆಟ್‌ವರ್ಕ್ ಅಂಡರ್ ವಾಟರ್ ಕಮ್ಯುನಿಕೇಶನ್ ಮತ್ತು ನ್ಯಾವಿಗೇಶನ್‌ಗೆ ಇದು ಸಹಕಾರಿಯಾಗಲಿದೆ.

ನೀರಿನ ಒಳಗೆ ಜಿಪಿಎಸ್‌ನಂತಹ ನೆಟ್‌ವರ್ಕ್ ಅನ್ನು ಅಳವಡಿಸಲಾಗುತ್ತಿದ್ದು ಹಡಗಿನ ರಕ್ಷಣೆಯನ್ನು ಮಾಡುತ್ತದೆ. ಮತ್ತು ಗ್ಯಾಸ್/ಎಣ್ಣೆ ಮೊದಲಾದ ನೀರಿನೊಳಗಿನ ಸರಬರಾಜುಗಳ ಮೇಲೆ ಕಣ್ಣಿಡುತ್ತದೆ ಪಾಸ್‌ವರ್ಡ್‌ ಹ್ಯಾಕರ್‌ ಈ ದೃಢೀಕರಣ ವ್ಯವಸ್ಥೆ ನಿಮ್ಮೆಲ್ಲಾ ಪಾಸ್‌ವರ್ಡ್‌ಗಳು ಹ್ಯಾಕ್ ಆಗುವುದನ್ನು ತಪ್ಪಿಸುತ್ತದೆ. ಸರ್ವರ್‌ನಲ್ಲಿ ಪಾಸ್‌ವರ್ಡ್‌ ಹ್ಯಾಕರ್‌ಗೆ ದೊರೆತರೂ ಇದು ಅವರಲ್ಲಿ ಗೊಂದಲವನ್ನುಂಟು ಮಾಡುತ್ತದೆ. ಅನ್‌ಲಾಕ್ ಸಿಸ್ಟಮ್ ನಿಮ್ಮ ಮನೆಗೆ ಭದ್ರತೆಯನ್ನೊದಗಿಸುವ ಚುಯಿ ಮನೆಯ ಹೊರಗೆ ಕದತಟ್ಟುತ್ತಿರುವ ವ್ಯಕ್ತಿಯ ವಿವರವನ್ನು ನಿಮ್ಮ ಫೋನ್‌ಗೆ ರವಾನಿಸುತ್ತದೆ.

ಮಾಹಿತಿ ಈ ಚಿಪ್ ಅನ್ನು ಬೇರೆ ಬೇರೆ ಡಿವೈಸ್‌ಗಳಿಗೆ ಅಳವಡಿಸಿ ಫೋನ್‌ನಲ್ಲಿರುವ ಬ್ಲ್ಯೂಟೂತ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. 3ಡಿ ಮಾಡ್ಯುಲ್‌ ಕಟ್ಟಡ ನಿರ್ಮಾಣ ತಂಡಕ್ಕೆ ಮತ್ತು ವೆಬ್ ಅಪ್ಲಿಕೇಶನ್‌ಗಳ ಮೂಲಕ ಪ್ರವೇಶವಿರುವ ಹೆಚ್ಚಿನದಕ್ಕೆ ವಿವರವಾದ ಚಿತ್ರ ನಕ್ಷೆಗಳನ್ನು ಮತ್ತು 3ಡಿ ಮಾಡ್ಯುಲ್‌ಗಳನ್ನು ಇದು ಒದಗಿಸುತ್ತದೆ.

ಸ್ಲಿಮ್ ಫೋನ್‌ಗಳತ್ತ ಒಂದು ನೋಟ

ವಿವೊ X5Max

ಜಗತ್ತಿನಲ್ಲೇ ಅತ್ಯಂತ ಸ್ಲಿಮ್ ಫೋನ್ 4.75 ಎಮ್‌ಎಮ್‌ನ ವಿವೊ X5Max ಜಗತ್ತಿನಲ್ಲೇ ಅತ್ಯಂತ ಸ್ಲಿಮ್ ಫೋನ್ ಎಂದೆನಿಸಿದೆ. ಇದು ಅತಿ ವೇಗವಾದ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಸಿಪಿಯುವನ್ನು ಪಡೆದುಕೊಂಡಿದೆ. 2 ಜಿಬಿ RAM ಇದರಲ್ಲಿದ್ದು, 16 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ. 13-ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಆಗಿದೆ.

ಒಪ್ಪೊ ಆರ್5
ಸ್ಲಿಮ್ ಫೋನ್ 5.2 ಇಂಚಿನ 1080p ಅಮೋಲೆಡ್ ಡಿಸ್‌ಪ್ಲೇ ಫೋನ್‌ನಲ್ಲಿದೆ. ವಿವೊ X5Max ನಲ್ಲಿರುವ ಅದೇ ವಿನ್ಯಾಸವನ್ನು ಈ ಫೋನ್‌ನಲ್ಲಿ ನಮಗೆ ಕಾಣಬಹುದಾಗಿದ್ದು ಸ್ವಲ್ಪ ದಪ್ಪವಾಗಿದೆ. 2,000 mAh ಬ್ಯಾಟರಿ ಫೋನ್‌ನಲ್ಲಿದೆ.

ಜಿಯೋನಿ ಇಲೈಫ್ S5.1

ಸ್ಲಿಮ್ ಫೋನ್ ಜಿಯೋನಿ ಇಲೈಫ್ S5.1 ಸ್ಲಿಮ್ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಜಿಯೋನಿ ಇಲೈಫ್ S5.1 ಓಕ್ಟಾ ಕೋರ್ ಪ್ರೊಸೆಸರ್, ಕಡಿಮೆ ರೆಸಲ್ಯೂಶನ್ ಡಿಸ್‌ಪ್ಲೇ, 2 ಜಿಬಿ RAM ಮತ್ತು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಜಿಯೋನಿ ಇಲೈಫ್ ಎಸ್5.5
5.5 ಎಮ್‌ಎಮ್ ಅಳತೆಯನ್ನು ಈ ಫೋನ್ ಪಡೆದುಕೊಂಡಿದ್ದು ಅದ್ಭುತ ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. 5 ಇಂಚಿನ 1080p ಅಮೋಲೆಡ್ ಡಿಸ್‌ಪ್ಲೇ ಇದರಲ್ಲಿದ್ದು 2 ಜಿಬಿ RAM ಡಿವೈಸ್‌ನಲ್ಲಿದೆ. ಇನ್ನು ಫೋನ್ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಜಿಯೋನಿ ಇಲೈಫ್ ಎಸ್7 ಚೀನಾದ ಸ್ಮಾರ್ಟ್‌ಫೋನ್ ಜಿಯೋನಿ ಇಲೈಫ್ ಎಸ್7 5.2 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು, 64 ಬಿಟ್ MediaTek ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದೆ. 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು, 16 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದ್ದು 8 ಮೆಗಾಪಿಕ್ಸೆಲ್ ಮುಂಭಾಗದಲ್ಲಿದೆ.

ವಿವೋ ಎಕ್ಸ್3 5 ಇಂಚಿನ 720 ಸ್ಕ್ರೀನ್ ಡಿವೈಸ್‌ನಲ್ಲಿದ್ದು 1 ಜಿಬಿ RAM ಫೋನ್‌ನಲ್ಲಿದೆ. ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಅನ್ನು ಪಡೆದುಕೊಂಡಿದೆ.

ಹುವಾಯಿ ಅಸೆಂಡ್ ಪಿ6 4.7 ಇಂಚಿನ 720 x 1280 ಪಿಕ್ಸೆಲ್‌ಗಳನ್ನು ಫೋನ್ ಹೊಂದಿದ್ದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ 4.2.2 ಇದನ್ನು ಕಿಟ್‌ಕ್ಯಾಟ್ 4.4.2 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಕ್ವಾಡ್ ಕೋರ್ 1.5GHZ ಕೋರ್ಟೆಕ್ಸ್ A9 ಫೋನ್‌ನಲ್ಲಿದ್ದು ಎಸ್‌ಡಿ ಕಾರ್ಡ್ ಅನ್ನು ಡಿವೈಸ್ ಪಡೆದುಕೊಂಡಿದೆ. ಹಿಂಬದಿ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಹೆಚ್ಚು ಮೊಬೈಲ್ ಬಳಕೆ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಾಗಿ ಬಳಸಲಾಗುತ್ತಿದೆ. ಮೊಬೈಲ್ ಫೋನ್‌ಗಳನ್ನು ಬಳಸುವಾಗ ಎಚ್ಚರಿಕೆಯನ್ನು ಪಾಲಿಸದೇ ಇದ್ದರೆ ಅವುಗಳು ಉಂಟುಮಾಡುವ ಅವಘಡಗಳನ್ನು ನೀವು ಕೇಳಿರುತ್ತೀರಿ ನೋಡಿರುತ್ತೀರಿ. ಹಾಗಿದ್ದರೆ ಈ ಅವಘಡಗಳನ್ನು ತಡೆಯುವುದು ಹೇಗೆ? ಫೋನ್ ಸ್ಫೋಟಗೊಳ್ಳಲು ಕಾರಣಗಳೇನು ಎಂಬ ಅಂಶಗಳನ್ನು ಲೇಖನದಲ್ಲಿ ನೋಡೋಣ.


ಯಾವೆಲ್ಲಾ ಅಂಶಗಳು ತಲೆಯಲ್ಲಿರಬೇಕು ಸಾಧ್ಯವಾದಷ್ಟು ಬ್ರ್ಯಾಂಡ್ ಫೋನ್‌ಗಳನ್ನೇ ಖರೀದಿಸಿ. ಫೋನ್ ನಿಖರವಾದ IMEI ಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಪ್ರತೀ ಫೋನ್ ಅನ್ನು ಗುರುತಿಸುವ ಕೋಡ್ ಇದಾಗಿದೆ. ಇನ್ನು ಫೋನ್‌ನೊಂದಿಗೆ ಬರುವ ಪ್ರತಿಯೊಂದು ಸಲಕರಣೆಗಳು ಅಂದರೆ ಇಯರ್ ಫೋನ್‌ಗಳು, ಬ್ಯಾಟರಿ ಮತ್ತು ಚಾರ್ಜರ್ ಅನ್ನು ಪರಿಶೀಲಿಸಿಕೊಳ್ಳಿ.

ಕಾರಣಗಳೇನು? ಚಾರ್ಜ್‌ನಲ್ಲಿದ್ದಾಗ ಫೋನ್ ಅನ್ನು ಬಳಸುವುದು ಮೊಬೈಲ್ ಫೋನ್‌ನ ಸ್ಫೋಟಕ್ಕೆ ಕಾರಣವಾಗಿದೆ. ಫೋನ್‌ನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡವನ್ನು ಹಾಕುತ್ತದೆ, ಈ ಸಮಯದಲ್ಲಿ ಫೋನ್ ಅನ್ನು ಬಳಸುವುದು ಒತ್ತಡವನ್ನು ಹೆಚ್ಚಿಸುತ್ತದೆ. ಮೊಬೈಲ್‌ಗಳಲ್ಲಿ ಬಳಸುವ ಕಡಿಮೆ ಗುಣಮಟ್ಟದ ಇಲೆಕ್ಟ್ರಾನಿಕ್ ಬಿಡಿಭಾಗಗಳು ಒಮ್ಮೊಮ್ಮೆ ಇದಕ್ಕೆ ಕಾರಣವಾಗುತ್ತದೆ.
ತೆಗೆದುಕೊಳ್ಳಬೇಕಾದ ಕ್ರಮಗಳೇನು? ಫೋನ್‌ ಚಾರ್ಜ್‌ನಲ್ಲಿರುವಾಗ ಆದಷ್ಟು ಫೋನ್ ಬಳಸುವುದನ್ನು ಕಡಿಮೆ ಮಾಡಿ. ಈ ಸಮಯದಲ್ಲಿ ಫೋನ್ ಸ್ವೀಕರಿಸಬೇಕೆಂದಾದಲ್ಲಿ, ಫೋನ್ ಅನ್ನು ಚಾರ್ಜರ್‌ನಿಂದ ಡಿಸ್‌ಕನೆಕ್ಟ್ ಮಾಡಿ ನಂತರ ಫೋನ್ ಕರೆ ಸ್ವೀಕರಿಸಿ. ಫೋನ್ ಚಾರ್ಜಿಂಗ್ ಚಾರ್ಜ್ ಮಿತಿಯನ್ನು ಮೀರಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಬ್ಯಾಟರಿ ಮೆತ್ತಗಾಗಿದೆ ಅಥವಾ ಸೋರಿಕೆಯುಂಟಾಗುತ್ತಿದೆ ಎಂದಾದಲ್ಲಿ ಅದನ್ನು ಬದಲಾಯಿಸಿ.

ಖರೀದಿ ಹಾನಿಕಾರಕ ಹೆಚ್ಚಿನ ಕಡಿಮೆ ದರದ ಫೋನ್‌ಗಳು ಅಂದರೆ ಹೆಚ್ಚಾಗಿ ಚೀನಾ ತಯಾರಿಯ ಫೋನ್‌ಗಳ ಹಾರ್ಡ್‌ವೇರ್ ಮತ್ತು ಬಿಡಿಭಾಗಗಳು ಬ್ರ್ಯಾಂಡೆಡ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಆಂಟಿ ವೈರಸ್ ಸಾಫ್ಟ್‌ವೇರ್‌ ಪರಿಣಾಮಕಾರಿಯಾಗಿರುವುದಿಲ್ಲ ಮೊಬೈಲ್ ಫೋನ್‌ಗಳಲ್ಲಿರುವ ಆಂಟಿ ವೈರಸ್ ಸಾಫ್ಟ್‌ವೇರ್‌ಗಳು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದಲೇ ಬೇರೆ ವೆಂಡೋರ್‌ಗಳಿಂದ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ಆಪರೇಟಿಂಗ್ ಸಿಸ್ಟಮ್ ಒದಗಿಸಿರುವ ಸೇವೆಯನ್ನು ಆದಷ್ಟು ಬಳಸಿ.

ಸ್ಪೀಕರ್ ಫೋನ್ ಇಲ್ಲವೇ ವೈರ್‌ಲೆಸ್ ಬ್ಲ್ಯೂಟೂತ್ ಬಳಕೆ ಮಾಡಿ ಫೋನ್‌ನಲ್ಲಿ ನೀವು ಸಂವಹನವನ್ನು ನಡೆಸುತ್ತಿರುವಾಗ, ಆದಷ್ಟು ನಿಮ್ಮ ದೇಹದಿಂದ ಫೋನ್ ಅನ್ನು ದೂರವಾಗಿರಿಸಿ. ಇದು ರೇಡಿಯೇಶನ್‌ನ ಇಲೆಕ್ಟ್ರೊ ಮ್ಯಾಗ್ನಟಿಕ್ ಕ್ಷೇತ್ರದ ಬಲವನ್ನು ಕಡಿಮೆ ಮಾಡಬಹುದು. ಆದಷ್ಟು ಸ್ಪೀಕರ್ ಫೋನ್ ಇಲ್ಲವೇ ವೈರ್‌ಲೆಸ್ ಬ್ಲ್ಯೂಟೂತ್ ಹೆಡ್‌ಸೆಟ್‌ಗಳ ಬಳಕೆ ಮಾಡಿ. ಇನ್ನು ಸುದೀರ್ಘ ಸಂವಹನಕ್ಕಾಗಿ ಲ್ಯಾಂಡ್ ಲೈನ್ ಫೋನ್‌ಗಳನ್ನು ಬಳಸಿ.

ಎಲ್ಲಾ ಉಪಕರಣಗಳನ್ನು ಒಣಗಿಸಿ ನೀರಿನಿಂದ ಫೋನ್ ಅನ್ನು ತೆಗೆದ ನಂತರ, ಅದರ ಬ್ಯಾಟರಿಯನ್ನು ಹೊರತೆಗೆಯಿರಿ, ಜೊತೆಗೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹೊರತೆಗೆದು ಸ್ವಿಚ್ ಆಫ್ ಮಾಡಿ. ಎಲ್ಲಾ ಉಪಕರಣಗಳನ್ನು ಒಣಗಿಸಿ. ನಂತರ ಇವುಗಳನ್ನು ಅಕ್ಕಿಯಲ್ಲಿ ಹುದುಗಿಸಿಡಿ.

ಬಾಯಿಯ ಸಮೀಪ ಫೋನ್ ನಿಮ್ಮ ಬಾಯಿಗೆ ಹತ್ತಿರವಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಇದು ಬಾಯಿಯ ಕ್ಯಾನ್ಸರ್ ಅಥವಾ ಟ್ಯೂಮರ್‌ಗೆ ಕಾರಣವಾಗುತ್ತದೆ. ಇನ್ನು ನಿಯಮಿತವಾಗಿ ಫೋನ್‌ನಲ್ಲಿ ಸಂಭಾಷಣೆಯನ್ನು ನಡೆಸುವವರು ನಿದ್ದೆಯ ಕೊರತೆ, ಮೈಗ್ರೇನ್ ಮತ್ತು ತಲೆನೋವಿನಿಂದ ಬಳಲುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಲ್ಯಾಪ್‌ಟಾಪ್ ಬಗ್ಗೆ ಕೆಲವು ಸಲಹೆಗಳು

ನೀವು ಹೊಸ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಖರೀದಿಸಿದ ನಂತರ ಅದನ್ನು ಹೇಗೆ ಆಪರೇಟ್ ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನೀವು ತಿಳಿದುಕೊಳ್ಳಲಿರುವಿರಿ.

ನೀವು ನಿಮ್ಮ ಹೊಚ್ಚ ಹೊಸ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ಪ್ರಥಮವಾಗಿ ಅಳವಡಿಬೇಕಾಗಿರುವುದು ಏನು? ಅದರಲ್ಲಿ ಆಪರೇಟಿಂಗ್ ಅನ್ನು ಹೇಗೆ ಮಾಡಬೇಕು ಮೊದಲಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀವು ತಿಳಿದುಕೊಳ್ಳಲಿರುವಿರಿ. ಈ 10 ಸಲಹೆಗಳು ನಿಮ್ಮ ಲ್ಯಾಪ್‌ಟಾಪ್/ಕಂಪ್ಯೂಟರ್‌ನ ದೀರ್ಘ ಬಾಳ್ವಿಕೆಗೆ ಅತಿ ಮುಖ್ಯವಾಗಿದ್ದು ಇದನ್ನು ಅನುಸರಿಸಬೇಕು.

ಎಲ್ಲಾ ವಿಂಡೋಸ್ ನವೀಕರಣಗಳನ್ನು ರನ್ ಮಾಡಿ ಕೆಲವೊಂದು ಅತಿಮುಖ್ಯವಾದ ವಿಂಡೋಸ್ ನವೀಕರಣಗಳನ್ನು ನಿಮ್ಮ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಬೇಕು. ನೀವು ಅಂತರ್ಜಾಲಕ್ಕೆ ನಿಮ್ಮ ಲ್ಯಾಪ್‌ಟಾಪ್ ಅನ್ನು ಸಂಪರ್ಕಪಡಿಸಿದ ಒಡನೆ ಇದು ನವೀಕರಣಗಳನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲು ಆರಂಭಿಸುತ್ತದೆ.

ಹಂತ: 2 ನಿಮ್ಮ ಹಳೆಯ ಪಿಸಿಗೆ ಫೈಲ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಟ್ರಾನ್ಸ್‌ಫರ್ ಮಾಡಿ

ಹಂತ: 3 ಅತ್ಯಾಧುನಿಕ ಬ್ರೌಸರ್ ಪಡೆದುಕೊಳ್ಳಿ

ಹಂತ: 4 ಅದ್ಭುತ ಫ್ರಿವೇರ್ ಅನ್ನು ಇನ್‌ಸ್ಟಾಲ್ ಮಾಡಿ

ಹಂತ: 5 ಮೆಚ್ಚಿನ ಅಪ್ಲಿಕೇಶನ್‌ಗಳಿಗೆ ಹಾಟ್ ಕೀಗಳನ್ನು ಪಿನ್ ಮಾಡಿ ಮತ್ತು ರಚಿಸಿ

ಹಂತ: 6 ನಿಮ್ಮ ಟಾಸ್ಕ್‌ಬಾರ್ ಐಕಾನ್‌ಗಳನ್ನು ಅನ್‌ಕಂಬೈನ್ ಮಾಡಿ

ಹಂತ: 7 ಎಕ್ಸೆಟೆನ್ಶನ್, ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮರೆಮಾಡದಿರಿ

ಹಂತ: 8 ನಿಮ್ಮ ಲಾಗಿನ್ ಸಂಗ್ರಹಿಸಲು ಪಾಸ್‌ವರ್ಡ್ ಮ್ಯಾನೇಜರ್ ಇನ್‌ಸ್ಟಾಲ್ ಮಾಡಿ

ಹಂತ: 9 ನಿಮ್ಮ ಪವರ್ ಸೆಟ್ಟಿಂಗ್ಸ್ ಟ್ವೀಕ್ ಮಾಡಿ

ಹಂತ: 10 ಬಳಕೆದಾರ ಖಾತೆ ನಿಯಂತ್ರಣ/ ಸ್ಮಾರ್ಟ್ ಸ್ಕ್ರೀನ್ ಫಿಲ್ಟರಿಂಗ್ ನಿಷ್ಕ್ರಿಯಗೊಳಿಸಿ

ಸ್ನೇಹಿತರ ಕಂಪ್ಯೂಟರ್‌ಗೆ ಲಾಗಿನ್ ಮಾಡುವುದು

ನಿಮ್ಮ ಮನೆಯಲ್ಲಿ ನೀವು ಕುಳಿತಿರುವಾಗಲೇ ಕಚೇರಿಯ ಕಂಪ್ಯೂಟರ್‌ನಲ್ಲಿರುವ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬೇಕೇ? ಜಗತ್ತಿನ ಯಾವ ಮೂಲೆಯಲ್ಲಿ ನೀವಿದ್ದರೂ ಇನ್ನೊಂದು ಕಂಪ್ಯೂಟರ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ.

ಹೀಗೆ ಮಾಡಲು ಹಲವಾರು ವಿಧಾನಗಳಿದ್ದು, ಬಿಲ್ಟ್ ಇನ್ ಟೂಲ್ಸ್‌ಗಳ ಮೂಲಕ, ಡೌನ್‌ಲೋಡ್ ಮಾಡಬಹುದಾದ ಪ್ರೊಗ್ರಾಮ್‌ಗಳ ಮೂಲಕ ಹಾಗೂ ಬ್ರೌಸರ್ ಆಧಾರಿತ ಸಲಹೆಗಳ ಮೂಲಕ ಒಂದು ಕಂಪ್ಯೂಟರ್‌ನಿಂದ ಇನ್ನೊಂದಕ್ಕೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ವಿಂಡೋಸ್ ರಿಮೋಟ್ ಡೆಸ್ಕ್‌ಟಾಪ್ ಬಳಸಿಕೊಂಡು ಸಿಸ್ಟಮ್ ಮೆನು ತೆರೆಯಲು ವಿಂಡೋಸ್ ಕೀ + ಪಾಸ್ ಒತ್ತಿ. ಪ್ರಾರಂಭ ಮೆನುವನ್ನು ಒತ್ತಿರಿ, ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಮತ್ತು ಸಿಸ್ಟಮ್ ಭದ್ರತೆ ಒತ್ತಿ ಹಾಗೂ ಸಿಸ್ಟಮ್ ಕ್ಲಿಕ್ ಮಾಡಿ ವಿಂಡೋದ ಎಡಭಾಗದಲ್ಲಿ "ರಿಮೋಟ್ ಸೆಟ್ಟಿಂಗ್ಸ್" ಲಿಂಕ್ ಕ್ಲಿಕ್ ಮಾಡಿ ಈ ಕಂಪ್ಯೂಟರ್‌ಗೆ ರಿಮೋಟ್ ಕನೆಕ್ಷನ್‌ಗಳನ್ನು ಅನುಮತಿಸಿ ಪರಿಶೀಲಿಸಿ.

ಬಳಕೆದಾರರನ್ನು ಸೇರಿಸಿ ಮೆಶೀನ್‌ನಲ್ಲಿ ರಿಮೋಟ್‌ನಂತೆ ಯಾವ ಬಳಕೆದಾರ ಲಾಗಿನ್ ಮಾಡಬಹುದೆಂಬುದನ್ನು ನೀವು ಹೊಂದಿಸಬೇಕಾಗುತ್ತದೆ.

ಸಿಸ್ಟಮ್ ನೇಮ್ ಹುಡುಕಿ ಕಂಪ್ಯೂಟರ್‌ಗೆ ನೀವು ಸಂಪರ್ಕ ಹೊಂದಿದಾಗ, ಸಿಸ್ಟಮ್ ಹೆಸರು ನಿಮಗೆ ತಿಳಿದಿರಬೇಕು. ವಿಂಡೋಸ್ ಕೀ + ಪಾಸ್ ಒತ್ತಿದಾಗ "ಕಂಪ್ಯೂಟರ್ ನೇಮ್" ನಮೂದನ್ನು ನಿಮಗೆ ಕಾಣಬಹುದು.

ಸ್ಲೀಪ್ ಮೋಡ್ ನಿಷ್ಕ್ರಿಯಗೊಳಿಸುವುದು ಸ್ಲೀಪಿಂಗ್ ಮೋಡ್‌ನಲ್ಲಿರುವ ಕಂಪ್ಯೂಟರ್ ಅನ್ನು ನಿಷ್ಕ್ರಯಗೊಳಿಸಲು ಈ ಸಲಹೆಗಳನ್ನು ಅನುಸರಿಸಿ ಕಂಟ್ರೋಲ್ ಪ್ಯಾನೆಲ್ ತೆರೆಯಿರಿ ಮತ್ತು ಪವರ್ ಆಪ್ಶನ್‌ಗಳನ್ನು ಆಯ್ಕೆಮಾಡಿ ಐಕಾನ್ ಕಾಣಲು ವೀಕ್ಷಣೆಗಳನ್ನು ನೀವು ಬದಲಾಯಿಸಬೇಕಾಗುತ್ತದೆ. ನಿಮ್ಮ ಆಕ್ಟೀವ್ ಪ್ಲಾನ್‌ನ ನಂತರವಿರುವ "ಚೇಂಜ್ ಪ್ಲಾನ್ ಸೆಟ್ಟಿಂಗ್ಸ್" ಲಿಂಕ್‌ಗೆ ಕ್ಲಿಕ್ ಮಾಡಿ

ಕಂಪ್ಯೂಟರ್‌ಗೆ ಸಂಪರ್ಕ ಹೊಂದಿ ನೀವು ರಿಮೋಟ್ ಕಂಪ್ಯೂಟರ್ ಆಗಿ ಬಳಸಬೇಕೆಂದಿರುವ ಕಂಪ್ಯೂಟರ್‌ಗೆ ಲಾಗಿನ್ ಮಾಡಿ. ಸ್ಟಾರ್ಟ್ ಮೆನು ಕ್ಲಿಕ್ ಮಾಡಿ ಮತ್ತು ಸರ್ಚ್ ಫೀಲ್ಡ್‌ನಲ್ಲಿ "ರಿಮೋಟ್ ಡೆಸ್ಕ್‌ಟಾಪ್ ಕನೆಕ್ಷನ್" ನಮೂದಿಸಿ.

ಇಂಟರ್ನೆಟ್ ಮೂಲಕ ಪೋರ್ಟ್ ತೆರೆಯುವುದು ಇಂಟರ್ನೆಟ್‌ನಾದ್ಯಂತ ನಿಮ್ಮ ರಿಮೋಟ್ ಕಂಪ್ಯೂಟರ್‌ಗೆ ಸಂಪರ್ಕ ಹೊಂದಲು ನಿಮಗೆ ಸಾಧ್ಯವಾದಲ್ಲಿ ವಿಪಿಎಸ್ ಬಳಸದೇ, ಪೋರ್ಟ್ 3389 ಅನ್ನು ಕಂಪ್ಯೂಟರ್‌ನ ಫೈರ್‌ವಾಲ್‌ನಲ್ಲಿ ನೀವು ತೆರೆಯಬೇಕಾಗುತ್ತದೆ.

ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ ನೀವು ವಿಂಡೋಸ್ 8 ಅಥವಾ 8.1 ಅನ್ನು ಚಾಲನೆ ಮಾಡುತ್ತಿದ್ದೀರಿ ಎಂದಾದಲ್ಲಿ, ಐಓಎಸ್ ಹಾಗೂ ಆಂಡ್ರಾಯ್ಡ್‌ನಲ್ಲಿ ಅಧಿಕೃತ ಮೈಕ್ರೋಸಾಫ್ಟ್ ಅಪ್ಲಿಕೇಶನ್ ಮೂಲಕ ನಿಮ್ಮ ರಿಮೋಟ್ ಡೆಸ್ಕ್‌ಟಾಪ್‌ಗೆ ನೀವು ಸಂಪರ್ಕ ಹೊಂದಬಹುದು.

ವೆಬ್‌ಸೈಟ್‌ನಲ್ಲಿ ಮಾಹಿತಿ ಕಲೆಹಾಕಲು

ಇಂಟರ್ನೆಟ್ ಎನ್ನುವುದು ಪತ್ರಿಕೋದ್ಯಮಿಗಳಿಗೆ ಒಂದು ಅದ್ಭುತವಾದ ಪರಿಕರವಾಗಿದೆ. ಮೊದಲೆಲ್ಲಾ ಮಾಹಿತಿಗಳನ್ನು ಹಾಳೆಯಲ್ಲಿ ಬರೆದಿಟ್ಟುಕೊಳ್ಳಬೇಕಾಗಿತ್ತು ಆದರೆ ಈಗ ಮೌಸ್‌ನ ಒಂದು ಕ್ಲಿಕ್‌ನಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ. ಅದೇ ರೀತಿ ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತಿದ್ದ ಸಂಶೋಧನೆಯನ್ನು ಕೂಡ ಕೆಲವೇ ಸಮಯಗಳಲ್ಲಿ ಮಾಡಿ ಮುಗಿಸಬಹುದಾಗಿದೆ.


ಆದರೆ ಯಾವ ವೆಬ್‌ಸೈಟ್‌ಗಳನ್ನು ತಡಕಾಡಬೇಕು ಎಂಬ ಮಾಹಿತಿಯನ್ನು ನೀವು ಪಡೆದರೆ ನಿಮ್ಮ ಸಮಯವೂ ಉಳಿತಾಯವಾಗುತ್ತದೆ ಅಂತೆಯೇ ಬೇಕಾದ ಮಾಹಿತಿ ನಿಮಗೆ ಸರಿಯಾದ ಸಮಯದಲ್ಲಿ ದೊರೆಯುತ್ತದೆ. ಹಾಗಿದ್ದರೆ ಅಂತಹ ವೆಬ್‌ಸೈಟ್‌ಗಳನ್ನು ಹೇಗೆ ಹುಡುಕುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳೋಣ.


ಸ್ಥಾಪಿತ ಶಿಕ್ಷಣ ಸಂಸ್ಥೆಗಳಿರುವ ವೆಬ್‌ಸೈಟ್ ನಂಬಿಕರ್ಹ ವಿದ್ಯಾ ಸಂಸ್ಥೆಗಳಿರುವ ವೆಬ್‌ಸೈಟ್‌ಗಳನ್ನು ನಿಮ್ಮ ಮಾಹಿತಿಗಾಗಿ ಬಳಸಿ. ಇದರಿಂದ ನಿಮಗೆ ಮಾಹಿತಿ ಬೇಕಾದಗ ದೊರೆಯುತ್ತದೆ.

ತಜ್ಞ ವೆಬ್‌ಸೈಟ್‌ಗಳು ಹೆಚ್ಚುವರಿ ನುರಿತ ವೆಬ್‌ಸೈಟ್‌ಗಳನ್ನು ನೀವು ಶೋಧಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಿಪುಣ ಸೈಟ್‌ಗಳು ಮಾಹಿತಿಯನ್ನು ನಿಖರವಾಗಿ ಹೊಂದಿರುತ್ತವೆ.

ವಾಣಿಜ್ಯ ಸೈಟ್‌ಗಳು ವಾಣಿಜ್ಯ ಸೈಟ್‌ಗಳನ್ನು ಕೂಡ ಮಾಹಿತಿ ಪಡೆದುಕೊಳ್ಳುವ ಸಮಯದಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿದೆ.

ಪ್ರೇರಣೆಗೆ ಒಳಗಾಗದಿರಿ ಯಾವುದೇ ರಾಜಕೀಯ ಪಕ್ಷಗಳನ್ನು ಹೊಗಳಿ ಬರೆಯುವುದು ಇಲ್ಲವೇ ಒಂದೇ ಪಕ್ಷಕ್ಕೆ ಬದ್ಧವಾಗಿರುವುದು ಮೊದಲಾದ ಚಟುವಟಿಕೆಗಳನ್ನು ಮಾಡದಿರಿ.

ಸೈಟ್‌ನ ವಿನ್ಯಾಸವನ್ನು ನೋಡಿ ಮಾಹಿತಿಯನ್ನು ಸಂಗ್ರಹಿಸುವ ಮೊದಲು ಸೈಟ್‌ನ ವಿನ್ಯಾಸ ಹೇಗಿದೆ ಎಂಬುದನ್ನು ಗಮನಿಸಿ. ವಿನ್ಯಾಸ ಕಳಪೆಯಾಗಿದ್ದಲ್ಲಿ ಸುದ್ದಿ ಕೂಡ ಅಷ್ಟು ಉಪಯೋಗಕಾರಿಯಾಗಿರುವುದಿಲ್ಲ ಎಂಬುದು ಗಮನದಲ್ಲಿರಲಿ.

ದಿನಾಂಕ ಪರಿಶೀಲಿಸಿ ಇನ್ನು ನಿಮಗೆ ದೊರೆತಿರುವ ಮಾಹಿತಿ ನಿಖರವಾದ ದಿನಾಂಕವನ್ನು ಒಳಗೊಂಡಿದೆಯೇ ಎಂಬುದನ್ನು ಗಮನಿಸಿ. ವರದಿಗಾರನಿಗೆ ದಿನಾಂಕ ಹೆಚ್ಚು ಮುಖ್ಯವಾಗಿದೆ.

ಸೈಟ್‌ನ ವಿನ್ಯಾಸವನ್ನು ನೋಡಿ ಮಾಹಿತಿಯನ್ನು ಸಂಗ್ರಹಿಸುವ ಮೊದಲು ಸೈಟ್‌ನ ವಿನ್ಯಾಸ ಹೇಗಿದೆ ಎಂಬುದನ್ನು ಗಮನಿಸಿ. ವಿನ್ಯಾಸ ಕಳಪೆಯಾಗಿದ್ದಲ್ಲಿ ಸುದ್ದಿ ಕೂಡ ಅಷ್ಟು ಉಪಯೋಗಕಾರಿಯಾಗಿರುವುದಿಲ್ಲ ಎಂಬುದು ಗಮನದಲ್ಲಿರಲಿ.


ಅಜ್ಞಾತ ಲೇಖಕರನ್ನು ತಿರಸ್ಕರಿಸಿ ಅಜ್ಞಾತ ಲೇಖಕರ ಲೇಖನಗಳನ್ನು ಆದಷ್ಟು ವೆಬ್‌ಸೈಟ್‌ನಲ್ಲಿ ಪ್ರಕಟಿಸದಿರಿ. ಅವರು ಪ್ರಕಟಿಸಿರುವ ಮಾಹಿತಿಗಳು ನಿಖರವಾಗಿರಬಹುದು ಇಲ್ಲದಿರಬಹುದು.

ಲಿಂಕ್‌ಗಳನ್ನು ಪರಿಶೀಲಿಸಿ ಗೌರವಾನ್ವಿತ ವೆಬ್‌ಸೈಟ್‌ಗಳು ಪ್ರತಿಯೊಬ್ಬರಿಗೆ ಲಿಂಕ್‌ಗಳನ್ನು ಹಂಚಿಕೊಳ್ಳುತ್ತದೆ. ಗೂಗಲ್‌ನಲ್ಲಿ ಈ ಲಿಂಕ್‌ಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಗ್ಯಾಜೆಟ್‌ಗಳ ಬಗ್ಗೆ

ಇಂದಿನ ಆಧುನಿಕ ಯುಗದಲ್ಲಿ ಗ್ಯಾಜೆಟ್‌ಗಳು ನಮ್ಮ ಜೀವನ ವಿಧಾನವನ್ನೇ ಬದಲಾಯಿಸಿವೆ. ನಮ್ಮ ದೈನಂದಿನ ಕೆಲಸದಲ್ಲಿ ಹೆಚ್ಚು ಉಪಯೋಗಕಾರಿ ಎಂದೆನಿಸಿರುವ ಈ ಗ್ಯಾಜೆಟ್‌ಗಳು ಮನರಂಜನೆಯ ನೋಟವನ್ನು ಹೊಂದಿರುವುದರ ಜೊತೆಗೆ ಅದ್ಭುತ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಎಂದರೆ ತಪ್ಪಲ್ಲ.

ಟವೆಲ್ ಡ್ರೈಯರ್ ಈ ಟವೆಲ್ ಡ್ರೈಯರ್ ನಿಮ್ಮ ಟವೆಲ್ ಅನ್ನು ಒಣಗಿಸುವುದು ಮಾತ್ರವಲ್ಲದೆ, ಯುವಿ ಕಿರಣಗಳಿಂದ ಸೋಂಕು ನಿವಾರಕಗಳಾಗಿ ಅವನ್ನು ಕಾಪಾಡುತ್ತವೆ.

  • ಮೊಬೈಲ್ ಶೆಲ್ಟರ್ ಶೂಗಳು ಈ ಶೂಗಳು ನಿಮಗೆ ರಕ್ಷಣೆಯನ್ನು ಒದಗಿಸುವ ಡೇರೆಯಾಗಿ ಕೂಡ ಕಾರ್ಯನಿರ್ವಹಿಸುತ್ತದೆ.
  • ಆಹಾರ ತಾಜಾವಾಗಿಡಲು ನೀರು ಕ್ರಿಮಿನಾಶಕ ಹಣ್ಣುಹಂಪಲುಗಳನ್ನು ತಾಜಾವಾಗಿಡಲು ಸಹಕಾರಿಯಾಗಿದೆ.
  • ಪುಟಗಳಿಂದ ಆವೃತ ಕುರ್ಚಿ ಸೀಟಿನ ಎತ್ತರವನ್ನು ಸರಿಪಡಿಸಿಕೊಳ್ಳಲು ಈ ಕುರ್ಚಿ ನೆರವಾಗುತ್ತದೆ.
  • ಚಾಕ್ ಬೋರ್ಡ್ ಧೂಳು ಹಿಡಿದ ಚಾಕ್ ಅನ್ನು ಹೊಸ ಚಾಕ್ ಪೀಸ್ ಅನ್ನಾಗಿ ಈ ಬೋರ್ಡ್ ಮಾಡುತ್ತದೆ.
  • ಕಾಫಿ ಕಪ್ ಈ ಕಾಫಿ ಕಪ್ ಕಾಫಿ ಸೋರದಂತೆ ತಡೆಹಿಡಿಯುತ್ತದೆ.
  • ಟೂತ್‌ಬ್ರಶ್ ಇದು ನಾಯಿಯ ಹಲ್ಲಿಗೆ ವ್ಯಾಯಾಮವನ್ನು ಒದಗಿಸುತ್ತದೆ ಜೊತೆಗೆ ಆಟಿಕೆಯಾಗಿ ಕೂಡ ಬಳಕೆಯಾಗುತ್ತದೆ.
  • ಬಾತ್ ಸ್ಟೋನ್‌ಗಳು ನಿಮ್ಮ ಬಚ್ಚಲು ಕೋಣೆಯನ್ನು ಒಣಗಿಸಿಡುವ ಬಾತ್ ಸ್ಟೋನ್‌ಗಳು
  • ಎಲ್ಲವೂ ಒಂದರಲ್ಲೇ ಈ ಸಣ್ಣ ಮೆಶೀನ್ ಬಟ್ಟೆಯನ್ನು ತೊಳೆದು ಒಣಗಿಸಿ ಕೊಡುತ್ತದೆ.
  • ದಿನಾಂಕ ಮುದ್ರಿಸುವ ಸ್ಟೇಪ್ಲರ್ ಇದು ದಿನಾಂಕವನ್ನು ಮುದ್ದಿಸಿಕೊಡುವ ಸ್ಟೇಪ್ಲರ್ ಆಗಿದೆ.

ಮೂಲ : ಜಿಜ್ಬೊಟ್

ಕೊನೆಯ ಮಾರ್ಪಾಟು : 6/7/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate