অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವರ್ಡ್‌ 2003 ರಲ್ಲಿ ಚಿತ್ರಗಳು

ವರ್ಡ್‌ 2003 ರಲ್ಲಿ ಚಿತ್ರಗಳು

ಮೈಕ್ರೋಸಾಫ್ಟ್‌ ಕಂಪೆನಿಯ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ಇದರಲ್ಲಿ ಸೇರಿಕೊಂಡಿರುವ ವರ್ಡ್‌ 2003ನ್ನು ಬಳಸಿ ಲೇಖನಗಳನ್ನು ಸಿದ್ಧಮಾಡಬಹದು. ಅಷ್ಟು ಮಾತ್ರವಲ್ಲ, ಪುಸ್ತಕಗಳನ್ನೂ ಸಿದ್ಧಮಾಡಬಹುದು. ಅದಕ್ಕೆ ಪೂರಕವಾದ ಹಲವು ಸೌಲಭ್ಯಗಳು ಈ ತಂತ್ರಾಂಶದಲ್ಲಿ ಲಭ್ಯವಿವೆ. ಪದಪರೀಕ್ಷೆ, ಹುಡುಕು-ಬದಲಿಸು, ಅಕ್ಷರ ಸ್ವರೂಪಣ ಮತ್ತು ಪುಟ ವಿನ್ಯಾಸ, ಕೋಷ್ಟಕಗಳ ಅಳವಡಿಕೆ ಇತ್ಯಾದಿಗಳ ಜೊತೆ ಚಿತ್ರಗಳ ಅಳವಡಿಕೆ –ಇವು ಕೆಲವು ಸೌಲಭ್ಯಗಳು. ಉಪಯುಕ್ತ ಸವಲತ್ತುಗಳ ಪಟ್ಟಿ ಇನ್ನೂ ದೊಡ್ಡದಿದೆ.  ವರ್ಡ್‌ 2003 ರಲ್ಲಿ ಚಿತ್ರಗಳ ಅಳವಡಿಕೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ರ್ಡ್ 2003 ರ Insert ಮೆನುವಿನಲ್ಲಿರುವ Picture ಆದೇಶವನ್ನು ಬಳಸಿ ಚಿತ್ರಗಳನ್ನು ಸೇರಿಸಬಹುದು. ಈ ಆದೇಶದಲ್ಲಿ ಹಲವು ಉಪ-ಆದೇಶಗಳು (ಮೆನು) ಇವೆ. ಇವುಗಳಲ್ಲಿ ಹೆಚ್ಚಾಗಿ ಬಳಕೆಯಾಗುವುದು From File ಎಂಬುದು. ಇದನ್ನು ಬಳಸಿ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಟ್ಟ ಯಾವುದೇ ಚಿತ್ರ ಫೈಲನ್ನು ವರ್ಡ್ ಫೈಲಿನಲ್ಲಿ ಸೇರಿಸಬಹುದು. ಚಿತ್ರ ಫೈಲ್‌ಗಳಿಗೆ ಉದಾಹರಣೆಗಳು –ಫೋಟೋಶಾಪ್ ಬಳಸಿ ತಯಾರಿಸುವ ಚಿತ್ರ, ಛಾಯಾಚಿತ್ರ, ಕೋರೆಲ್‌ಡ್ರಾ ಬಳಸಿ ತಯಾರಿಸುವ ಚಿತ್ರ, ಸ್ಕ್ಯಾನರ್ ಬಳಸಿ ಸ್ಕ್ಯಾನ್ ಮಾಡಿದ ಛಾಯಾಚಿತ್ರ, ಇತ್ಯಾದಿ. ಈ ಚಿತ್ರ ಫೈಲುಗಳು JPG, TIF, BMP, WMF, PNG, ಇತ್ಯಾದಿ ವಿಸ್ತರಣೆಗಳನ್ನು ಹೊಂದಿರಬಹುದು.

ಲೇಖನದಲ್ಲಿ ಚಿತ್ರ ಅಳವಡಿಬೇಕಾಗಿರುವ ಜಾಗದಲ್ಲಿ ಸೂಚಕವನ್ನು ಇರಿಸಬೇಕು. ನಂತರ Insert -> Picture -> From File ಆದೇಶವನ್ನು ಕ್ಲಿಕ್ ಮಾಡಿದರೆ ಒಂದು ಸಂವಾದಚೌಕ ತೋರಿಬರುತ್ತದೆ. ಅದನ್ನು ಬಳಸಿ ಕಂಪ್ಯೂಟರಿನಲ್ಲಿ ಸಂಗ್ರಹಿಸಿಟ್ಟಿರುವ ಯಾವುದಾದರೊಂದು ಚಿತ್ರವನ್ನು ಆಯ್ಕೆ ಮಾಡಿಕೊಂಡು ಅದನ್ನು ವರ್ಡ್ ಫೈಲಿನೊಳಗೆ ಸೇರಿಸಬಹುದು. ಹೀಗೆ ಅಳವಡಿಸಿದ ಚಿತ್ರವನ್ನು ಹಲವು ರೀತಿಯಲ್ಲಿ ಸರಿಹೊಂದಿಸಬಹುದು. ಉದಾಹರಣೆಗೆ ಚಿತ್ರವನ್ನು ಬಲಬದಿಗೆ ಅಳವಡಿಸುವುದು. ಚಿತ್ರದ ಮೇಲೆ ಮೌಸ್‌ನ ಬಲ-ಕ್ಲಿಕ್ ಮಾಡಿದರೆ ಸಿಗುವ ಮೆನುವಿನಿಂದ Format Picture ಎಂಬುದನ್ನು ಆಯ್ದುಕೊಂಡು ಚಿತ್ರವನ್ನು ಹಲವು ರೀತಿಯಲ್ಲಿ ಹೊಂದಿಸಬಹುದು. ಉದಾಹರಣೆಗೆ ಇಲ್ಲಿ ನೀಡಿರುವ ಚಿತ್ರವನ್ನು ಗಮನಿಸಿ. ಇದರಲ್ಲಿ ಚಿತ್ರದ ಎಡ, ಬಲ, ಮೇಲೆ, ಕೆಳಗೆ ಪಠ್ಯವನ್ನು ಅಚ್ಚುಕಟ್ಟಾಗಿ ಸರಿಹೊಂದಿಸಲಾಗಿದೆ.

ಪಠ್ಯವನ್ನು ಚಿತ್ರದ ಹಿಂದೆ ಯಾ ಮುಂದೆ ತರುವುದು, ಚಿತ್ರವನ್ನು ಪಠ್ಯದ ಎಡಕ್ಕೆ ಅಥವಾ ಬಲಕ್ಕೆ ಸರಿಹೊಂದಿಸುವುದು, ಇತ್ಯಾದಿ ಸೌಲಭ್ಯಗಳು ಇವೆ. ಇದೇ ಸಂವಾದಚೌಕವನ್ನು ಬಳಸಿ ಚಿತ್ರವನ್ನು ಹಿಗ್ಗಿಸಬಹುದು ಅಥವಾ ಕುಗ್ಗಿಸಬಹುದು. ಚಿತ್ರವನ್ನು ಹಿಗ್ಗಿಸುವಾಗ ಅಥವಾ ಕುಗ್ಗಿಸುವಾಗ ಅಡ್ಡ ಮತ್ತು ಲಂಬ ಅನುಪಾತಗಳನ್ನು ಬದಲಿಸುವ ಮೂಲಕ ಚಿತ್ರವನ್ನು ಅಗಲವಾಗಿ ಅಥವಾ ಲಂಬವಾಗಿ ಹಿಗ್ಗಿಸುವ ಅಥವಾ ಕುಗ್ಗಿಸುವ ಸೌಲಭ್ಯವೂ ಇವೆ. ಹೀಗೆ ಮಾಡುವುದರಿಂದ ಚಿತ್ರದ ಸಮತೋಲ ತಪ್ಪಿ ಅದು ಕೃತಕವಾಗಿ ಕಾಣಿಸುತ್ತದೆ

ಚಿತ್ರವನ್ನು ಸಂಪಾದಿಸಲೆಂದೇ ಇರುವ Picture toolbar ನಲ್ಲಿ ಇನ್ನೂ ಹಲವು ಸವಲತ್ತುಗಳಿವೆ. ಅವುಗಳೆಂದರೆ –ಚಿತ್ರವನ್ನು ಕಟಾಯಿಸುವುದು, ಚಿತ್ರದ ಗಾಢತೆಯನ್ನು ಹೆಚ್ಚಿಸುವುದು ಅಥವಾ ತಗ್ಗಿಸುವುದು, ಚಿತ್ರವನ್ನು ಬಣ್ಣದಿಂದ ಕಪ್ಪು ಬಿಳುಪಿಗೆ ಬದಲಿಸುವುದು, ಚಿತ್ರವನ್ನು ಲಂಬವಾಗಿ ತಿರುಗಿಸುವುದು –ಇತ್ಯಾದಿ.


ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate