অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ -2

ಭಾಗ -2

ಹಿನ್ನೆಲೆ ಕಾರ್ಯಗಳನ್ನು ಯಾವಾಗಲೂ ನಿಮ್ಮ ಎಲ್ಲಾ ಅಪ್ಲಿಕೇಶನ್‌ಗಳು ರನ್ ಆಗುತ್ತಿದ್ದರೆ ಆಗ ನೀವು ಎಂದಿಗೂ ದೀರ್ಘಾವಧಿಯ (ಅಥವಾ ಸುಧಾರಿತ) ಬ್ಯಾಟರಿ ಜೀವಿತಾವಧಿಯನ್ನು ನೀವು ಸಾಧಿಸುವುದಿಲ್ಲ. ವಿಂಡೋಸ್ 8 ಮತ್ತು WinRT ಯೊಂದಿಗೆ, ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳಿಗೆ ಹಿನ್ನೆಲೆ ಪ್ರೊಸೆಸಿಂಗ್ ಅನ್ನು ಸಾಧಿಸಲು ನಾವು ಹೊಸ API ಗಳನ್ನು ರಚಿಸಿದ್ದೇವೆ.

 

 

ಸಂದರ್ಭ ವಿವರಣೆ
ಹಿನ್ನೆಲೆ ಡೌನ್‌ಲೋಡ್ ಅಥವಾ ಅಪ್‌ಲೋಡ್ ಇಂಟರ್ನೆಟ್‌ನಲ್ಲಿ ವಿಷಯವನ್ನು ಪ್ರವೇಶಿಸುವುದು ಮತ್ತು ಸಂಗ್ರಹಿಸುವುದು ಅಪ್ಲಿಕೇಶನ್‌ಗಳಿಗೆ ಅತೀ ಸಾಮಾನ್ಯವಾದ ಸಂಗತಿಯಾಗಿದೆ. ನಿಮ್ಮ ಅಪ್ಲಿಕೇಶನ್‌ಗೆ ನೀವು ಮರಳಿ ಬದಲಾಯಿಸಿದ ತಕ್ಷಣವೇ ಯಾವಾಗಲೂ ತಾಜಾ ವಿಷಯವು ನಿಮಗೆ ಈಗಾಗಲೇ ಲೋಡ್ ಆಗಿರಬೇಕೆಂದು ನಾವು ಬಯಸುತ್ತೇವೆ. ಇದು ಮ್ಯಾಗಜೈನ್ ಅಥವಾ ಸುದ್ದಿ-ಆಧಾರಿತ ಅಪ್ಲಿಕೇಶನ್‌ಗಳಿಗೆ ನಿರ್ದಿಷ್ಟವಾಗಿ ಸಹಾಯಕಾರಿಯಾಗಿರುತ್ತದೆ. ಹಿನ್ನೆಲೆಯಲ್ಲಿ ಅಪ್‌ಲೋಡ್‌ಗಳು ಮತ್ತು ಡೌನ್‌ಲೋಡ್‌ಗಳನ್ನು ಮಾಡಲು ಹೊಸ ಹಿನ್ನೆಲೆ ವರ್ಗಾವಣೆ API ಅನ್ನು ಅಪ್ಲಿಕೇಶನ್‌ಗಳು ಬಳಸಬಹುದು. ಈ API ಅನ್ನೇ ನಾವು “ಪೂರ್ಣವಾಗಿ ಬ್ರೋಕರ್ ಆದ” ಎಂದು ಕರೆಯುತ್ತೇವೆ, ಇದರರ್ಥ ತನ್ನಷ್ಟಕ್ಕೇ ಅಪ್‌ಲೋಡ್/ಡೌನ್‌ಲೋಡ್ ಅನ್ನು OS ಮಾಡುತ್ತದೆ. ಇದು ಅಪ್ಲಿಕೇಶನ್ ಕೋಡ್ ಅನ್ನು ಸಾಂದರ್ಭಿಕವಾಗಿ ತೆಗೆದುಹಾಕುತ್ತದೆ ಮತ್ತು ಬ್ಯಾಟರಿ ಜೀವಿತಾವಧಿಯನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ.
ಹಿನ್ನೆಲೆ ಆಡಿಯೋ ಒಂದೇ ಸಮಯದಲ್ಲಿ, ಮುಖ್ಯವಾಗಿ ಮಾಡಬೇಕಾದ ಸಂಗತಿಗಳಲ್ಲಿ ಕೇವಲ ಸಂಗೀತವನ್ನು ಕೇಳುವುದು ಒಂದು ಸಂಗತಿಯಾಗಿದ್ದರೆ ನೀವು ಒಂದಕ್ಕಿಂತ ಹೆಚ್ಚು ಸಂಗತಿಗಳನ್ನು ಮಾಡಲು ನಾವು ಇನ್ನೂ ಸಹ ಬಯಸುತ್ತೇವೆ. ಯಾವುದೇ ಮೀಡಿಯಾ ಅಥವಾ ಕಮ್ಯೂನಿಕೇಶನ್‌ಗಳ ಅಪ್ಲಿಕೇಶನ್ ಹಿನ್ನಲೆಯಲ್ಲಿ ಆಡಿಯೋವನ್ನು ಪ್ಲೇ ಮಾಡಬಹುದು. ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸಲು, ನೀವು ಆಡಿಯೋವನ್ನು ಪಾಸ್ ಮಾಡಿದಾಗ ಅಪ್ಲಿಕೇಶನ್ ಅನ್ನು ನಾವು ತಡೆಹಿಡಿಯುತ್ತೇವೆ.
ಹಂಚಿಕೊಳ್ಳುವಿಕೆ ಒಂದು ವೇಳೆ ವಿಷಯವೊಂದನ್ನು ಶೇರ್ ಚಾರ್ಮ್ ಬಳಸಿಕೊಂಡು ಕ್ಲೌಡ್ ಸೇವೆಗೆ ನಿಮ್ಮ ಅಪ್ಲಿಕೇಶನ್ ಕಳುಹಿಸುವ ಮಧ್ಯದಿದ್ದಲ್ಲಿ, ಹಿನ್ನೆಲೆಯಲ್ಲಿ ಅದು ಕಾರ್ಯಾಚರಣೆಯನ್ನು ಪೂರ್ಣಗೊಳಿಸಬಹುದು.
ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳು ಇತ್ತೀಚಿನ ಮಾಹಿತಿಯೊಂದಿಗೆ ಸಾಮಾನ್ಯವಾಗಿ ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳು ನಿಮಗೆ ಸೂಚಿಸಬೇಕಾಗುತ್ತದೆ ಮತ್ತು ಇದು ನೀವು ಅಪ್ಲಿಕೇಶನ್ ಬಳಸದೇ ಇರುವಾಗಲೂ ಸಹ ಯಾವುದೇ ಸಮಯದಲ್ಲಿ ಸಂಭವಿಸಬಹುದು.ಹೆಚ್ಚು ಸಾಮಾನ್ಯವಾದ ಉದಾಹರಣೆಗಳಲ್ಲಿ ನಿಮ್ಮ ಇಮೇಲ್, VoIP, ಮತ್ತು IM ಅಪ್ಲಿಕೇಶನ್‌ಗಳು ಸೇರಿವೆ. ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳು ಪ್ರಕಟಣೆಗಳನ್ನು ವಿತರಿಸಬಹುದು ಮತ್ತು ಬ್ಯಾಟರಿಯಲ್ಲಿರುವಾಗ ಹಿನ್ನೆಲೆಯಲ್ಲಿ ಮತ್ತು ಸ್ಕ್ರೀನ್ ಲಾಕ್ ಆದಾಗಲೂ ಸಹ ನಿಮ್ಮ ಡೇಟಾವನ್ನು ಸಿಂಕ್ ಮಾಡಬಹುದು.
ಮುದ್ರಣ ಮುದ್ರಣವನ್ನು ಮಾಡುತ್ತಿರುವ ಅಪ್ಲಿಕೇಶನ್ ಅನ್ನು ಹಿನ್ನೆಲೆಗೆ ಸರಿಸಿದಾಗಲೂ ಸಹ ನೀವು ಡಾಕ್ಯುಮೆಂಟ್‌ಗಳನ್ನು ಮುದ್ರಿಸಬಹುದು.
ಸಾಧನ ಸಿಂಕ್ ಸ್ಕ್ರೀನ್‌ನಲ್ಲಿ ಅಪ್ಲಿಕೇಶನ್ ಕಂಡುಬರದಿದ್ದರೂ ಸಹ ಸಂಪರ್ಕಿತ ಸಾಧನ (ಕ್ಯಾಮೆರಾದಂತಹ) ಮತ್ತು ನಿಮ್ಮ PC ನಡುವೆ ವಿಷಯವನ್ನು ನೀವು ಸಿಂಕ್ರೊನೈಸ್ ಮಾಡಬಹುದು.
ವಿಂಡೋಸ್ ನೋಟಿಫಿಕೇಶನ್ ಸರ್ವೀಸ್‌ನೊಂದಿಗೆ ಲೈವ್ ಟೈಲ್‌ಗಳು ಅಪ್ಲಿಕೇಶನ್‌ಗಳ ಲೈವ್ ಟೈಲ್‌ಗಾಗಿ ತಾಜಾ ವಿಷಯವನ್ನು ಒದಗಿಸಲು ನಿಮ್ಮ ವಿಂಡೋಸ್ 8 PC ಗೆ ಪುಷ್ ಪ್ರಕಟಣೆಗಳನ್ನು ಕಳುಹಿಸುವ ಮೂಲಕ ಎಲ್ಲಾ ಸಮಯದಲ್ಲಿ ಅಪ್ಲಿಕೇಶನ್‌ಗಳನ್ನು ತಾವು ರನ್ ಮಾಡುತ್ತಿರುವೆವೆಂಬ ಭಾವನೆಯನ್ನು ಅಪ್ಲಿಕೇಶನ್‌ಗಳು ಮೂಡಿಸಬಹುದು.
ನಿಗದಿತ ಪ್ರಕಟಣೆಗಳು ನಿರ್ದಿಷ್ಟ ಸಮಯದಲ್ಲಿ (ಯೋಚಿಸಿ: ಕ್ಯಾಲೆಂಡರ್ ಅಪಾಯಿಂಟ್‌ಮೆಂಟ್‌ಗಳು) ಟೈಲ್ ಅನ್ನು ನವೀಕರಿಸುವ ಮೂಲಕ ಅಥವಾ ನೀವು ಕಚೇರಿ ಬಿಡುವ ಮುನ್ನ ನೀವು ಏನನ್ನಾದರೂ ಮಾಡಬೇಕಾದುದರ ಬಗ್ಗೆ ನಿಮ್ಮನ್ನು ಜ್ಞಾಪಿಸಿ ಡೆಸ್ಕ್‌ಟಾಪ್‌ನಲ್ಲಿ ಪ್ರಕಟಣೆಯೊಂದನ್ನು ಪಾಪ್ ಅಪ್ ಮಾಡುವ ಮೂಲಕ ನಿಮಗೆ ಅಪ್ಲಿಕೇಶನ್‌ಗಳು ಸೂಚಿಸಬಹುದು. ಈ ಈವೆಂಟ್‌ಗಳನ್ನು ಅಪ್ಲಿಕೇಶನ್‌ ನಿಗದಿಪಡಿಸುತ್ತವೆ, ಆದರೆ ಪ್ರಕಟಣೆಯನ್ನು ವಿತರಣೆ ಮಾಡಲು ವಿಂಡೋಸ್ ಜವಾಬ್ದಾರಿಯಾಗಿರುತ್ತದೆ, ಇದು ಬ್ಯಾಟರಿ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಹಿನ್ನೆಲೆ ಕಾರ್ಯಗಳು ಉದಾಹರಣೆಯಾಗಿ, ನಿಯತಕಾಲಿಕ ಮಧ್ಯಂತರಗಳಲ್ಲಿ ಅಥವಾ ನೀವು ವಿಂಡೋಸ್ ಅಥವಾ IM ಸೇವೆಯೊಂದಕ್ಕೆ ಸೈನ್ ಇನ್ ಮಾಡಿದಾಗಿನಂತಹ ನಿರ್ದಿಷ್ಟ ಈವೆಂಟ್‌ಗಳು ಸಂಭವಿಸಿದಾಗ ಅಪ್ಲಿಕೇಶನ್‌ಗಳು ಕೋಡ್ ಅನ್ನು ರನ್ ಮಾಡಬಹುದು. ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳು ಪ್ರತಿ 15 ನಿಮಿಷಗಳಿಗೊಮ್ಮೆ ಕೋಡ್ ಅನ್ನು ರನ್ ಮಾಡಬಹುದು, ಆದರೆ ಸಾಧನವು A/C  ಪವರ್‌ಗೆ ಪ್ಲಗ್ ಇನ್ ಆಗಿರುವವರೆಗೆ ಪ್ರತಿ 15 ನಿಮಿಷಗಳಿಗೊಮ್ಮೆ ಕೋಡ್ ಅನ್ನು ರನ್ ಮಾಡಲು ಲಾಕ್-ಸ್ಕ್ರೀನ್ ಅಲ್ಲದ ಅಪ್ಲಿಕೇಶನ್‌ಗಳು ನೋಂದಾಯಿಸಬಹುದು.

 

 


ಬ್ಯಾಟರಿ ಜೀವಿತಾವಧಿಗೆ ವಿಂಡೋಸ್ 8 ಅತ್ಯುತ್ತಮವಾಗಿರುವುದಕ್ಕೆ ಮಾಡುವಂತೆ ಮೈಕ್ರೋಸಾಫ್ಟ್ ಪ್ರಮುಖವಾಗಿ ಪ್ರಯತ್ನಗಳನ್ನು ಮಾಡಿದೆ. ಸಂಪರ್ಕಿತ ಅನುಭವಗಳನ್ನು ಕ್ರಿಯಾತ್ಮಗೊಳಿಸುವದರ ಜೊತೆಗೆ ಸ್ಥಿರವಾಗಿ ದೀರ್ಘಾವಧಿಯ ಬ್ಯಾಟರಿ ಜೀವಿತಾವಧಿಯನ್ನು ನೀಡಲು ಹೊಸ ಅಪ್ಲಿಕೇಶನ್ ಮಾದರಿಯನ್ನು ಅದು ರೂಪಿಸಿದೆ. ವಿಂಡೋಸ್‌ 7 ಗೆ ವಿನ್ಯಾಸಗೊಳಿಸಿದ ಅಪ್ಲಿಕೇಶನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆಯೇ ಅವುಗಳು ಹಿಂದಿನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ, ಮತ್ತು ಆಪರೇಟಿಂಗ್ ಸಿಸ್ಟಮ್ ಒದಗಿಸುವ ಹಿನ್ನೆಲೆ ಮೂಲಭೂತ ಸೌಕರ್ಯಗಳ ಪ್ರಯೋಜನವನ್ನು ತೆಗೆದುಕೊಂಡು, ಹೆಚ್ಚು ವಿದ್ಯುತ್-ಕಾರ್ಯಕ್ಷಮತೆ ರೀತಿಯಲ್ಲಿ ಕೆಲಸ ಮಾಡುವ ಹೊಸ ಸಂಪರ್ಕಿತ ಅನುಭವವನ್ನು ಕ್ರಿಯಾತ್ಮಕಗೊಳಿಸಲು ಹೊಸ ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳನ್ನು  ಅಭಿವೃದ್ಧಿಪಡಿಸಬಹುದು.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 3/26/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate