ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭಾಗ -೩

ವಿಂಡೋಸ್ ಸ್ಟೋರ್ ಅಪ್ಲಿಕೇಶನ್‌ಗಳ ನಿರ್ಮಾಣಕ್ಕೆ ಭದ್ರತೆಯ ಅತ್ಯುತ್ತಮ ಅಭ್ಯಾಸಗಳು ಭಾಗ -೩

ಚಿತ್ರಗಳ ಲೈಬ್ರರಿಯನ್ನು ತೋರಿಸುತ್ತಿರುವ ಫೈಲ್ ಪಿಕ್ಕರ್

WinRT ಅನ್ನು ಪ್ರವೇಶಿಸಲು ವೆಬ್‌ಗೆ ಬಿಡಬೇಡಿ
ವಿಂಡೋಸ್ ರನ್‌ಟೈಮ್ (WinRT) ಪ್ರವೇಶಿಸಲು ಅಪ್ಲಿಕೇಶನ್ ಪ್ಯಾಕೇಜ್‌ನಲ್ಲಿನ ವಿಷಯಕ್ಕೆ ಮಾತ್ರ ವಿಂಡೋಸ್ 8 ಅನುಮತಿಸುತ್ತದೆ. ಒಂದು ವೇಳೆ ವೆಬ್‌ನಿಂದ ಇನ್‌ಪುಟ್ ಅಥವಾ ಡೇಟಾವನ್ನು ಅಪ್ಲಿಯು ಸ್ವೀಕರಿಸಿದರೆ, ಯಾವುದೇ WinRT API ಗಳ ಅಪ್ಲಿಕೇಶನ್ ಬಳಕೆಯನ್ನು ನಿಯಂತ್ರಿಸಲು ಡೇಟಾ ನಿಯಂತ್ರಣ ಅಪ್ಲಿಕೇಶನ್‌ಗಳಿಗೆ ಬಿಡಬೇಡಿ.

 

ಒಂದು ವೇಳೆ ವೆಬ್‌ನಿಂದ ವಿಷಯವನ್ನು ಅಪ್ಲಿಕೇಶನ್ ಕಾರ್ಯಗತಗೊಳಿಸಿದರೆ, ಆ ವಿಷಯವು ನಂತರ ಸೆಟ್ಟಿಂಗ್‌ಗಳು ಮತ್ತು ಅಪ್ಲಿಕೇಶನ್‌ಗಾಗಿ ಡೇಟಾ ಅಥವಾ ಅಪ್ಲಿಕೇಶನ್ ಅಸೆಸ್ ಮಾಡಬಹುದಾದ ಫೈಲ್‌ಗಳನ್ನು ಅಸೆಸ್ ಮಾಡಬಹುದು. ಇದು ಜಾವಾಸ್ಕ್ರಿಪ್ಟ್‌ನಲ್ಲಿ ಬರೆದ ಅಪ್ಲಿಕೇಶನ್‌ಗಳಿಗೆ ನಿರ್ದಿಷ್ಟವಾಗಿ ಪ್ರಮುಖವಾಗಿದ್ದು, ಅಲ್ಲಿ ಸ್ಕ್ರಿಪ್ಟ್ ಅನ್ನು ಸರಾಗವಾಗಿ ರನ್ ಮಾಡುವುದು ಹೆಚ್ಚು ಸುಲಭವಾಗಿದೆ.
ಫೈಲ್‌ಗಳು, ಪ್ರೋಟೋಕಾಲ್‌ಗಳು ಮತ್ತು ಆಮದು ಮಾಡಿದ ಡೇಟಾವನ್ನು ಪ್ರಮಾಣೀಕರಿಸಿ

 

ಫೈಲ್‌ಗಳನ್ನು ತೆರೆಯುವ, ಡೇಟಾ ಆಮದು ಮಾಡುವ ಅಥವಾ ಹಂಚಿತ ಡೇಟಾವನ್ನು ಸ್ವೀಕರಿಸುವ ಅಪ್ಲಿಕೇಶನ್‌ಗಳು ವಿಷಯದ ಕುರಿತಾಗಿ ಕ್ರಮ ತೆಗೆದುಕೊಳ್ಳುವ ಮುನ್ನ ಅವುಗಳನ್ನು ಪ್ರಮಾಣೀಕರಿಸುವ ಕುರಿತಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರಮಾಣೀಕರಣವು ಇನ್‌ಪುಟ್ ಪ್ರಕಾರದ ಮೇಲೆ ಮತ್ತು ಆ ವಿಷಯದ ಮೇಲೆ ಅಪ್ಲಿಕೇಶನ್‌ ಹೇಗೆ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ ಮತ್ತು ಸರಳದಿಂದ ಹಿಡಿದು ಸಂಕೀರ್ಣದ ತನಕ ಒಳಗೊಂಡಿರುತ್ತದೆ.
ವೈಯಕ್ತಿಕ ಹಣಕಾಸು ಅಪ್ಲಿಕೇಶನ್‌ಗಳಂತಹ ಸೂಕ್ಷ್ಮ ಡೇಟಾದೊಂದಿಗಿನ ಅಪ್ಲಿಕೇಶನ್‌ಗಳು ನಂಬಿಗಾರ್ಹವಲ್ಲದ ವಿಷಯದೊಂದಿಗ ತೀರಾ ಎಚ್ಚರಿಕೆಯಿಂದಿರಬೇಕು, ಏಕೆಂದರೆ ಇವುಗಳು ಗ್ರಾಹಕರಿಗೆ ಮೌಲ್ಯಯುತವಾಗಿರುವ ಮಾಹಿತಿಗೆ ಅಸೆಸ್ ಹೊಂದಿರುತ್ತವೆ.

 

HTTPS connections ಸಂಪರ್ಕಗಳನ್ನು ಬಳಸಿ
HTTPS ಸಂಪರ್ಕಗಳು ರಿಮೋಟ್ ಸರ್ವರ್‌ಗೆ ಅಥೆಂಟಿಕೇಶನ್ ಅನ್ನು ಒದಗಿಸುತ್ತದೆ ಮತ್ತು ಇವುಗಳನ್ನು ಮಧ್ಯದಲ್ಲಿನ ಆಕ್ರಮಣವನ್ನು ತಗ್ಗಿಸಲು ಅಧಿಕವಾಗಿ ಶಿಫಾರಸು ಮಾಡಲಾಗಿದೆ. ವಿಶ್ವದಾದ್ಯಂತ ಇನ್ನೂ ಸಹ ಸಾಕಷ್ಟು ಎನ್‌ಕ್ರಿಪ್ಟ್ ಮಾಡದ ವೈರ್‌ಲೆಸ್ ನೆಟ್‌ವರ್ಕ್‌ಗಳಿದ್ದು, ಅಲ್ಲಿ ಪ್ರಮಾಣಿತ HTTP ಸಂಪರ್ಕವು ಸುರಕ್ಷಿತವಾಗಿಲ್ಲ. ಪ್ರಮಾಣಿತ HTTP ಸಂಪರ್ಕಕ್ಕೆ, CA- ಒದಗಿಸಿದ ಸರ್ಟಿಫಿಕೇಟ್ ಅನ್ನು ರಿಮೋಟ್ ವೆಬ್‌ಸೈಟ್ ಹೊಂದಿರಬೇಕಾಗುತ್ತದೆ ಮತ್ತು HTTP ಸಂಪರ್ಕವನ್ನು ಅನುಮತಿಸಲು ಅದನ್ನು ಕಾನ್ಫಿಗರ್ ಮಾಡಿರಬೇಕಾಗುತ್ತದೆ. ವಿಂಡೋಸ್ 8 ರಿಂದ ಪ್ರಾರಂಭಗೊಂಡು, ಬಳಕೆದಾರರ ಬ್ಯಾಕೆಂಡ್ ಸರ್ವರ್‌ಗೆ ಸುರಕ್ಷಿತವಾಗಿ ಪ್ರಮಾಣೀಕರಿಸಲು, ಸ್ವಯ-ಸಹಿ ಮಾಡಿದ ಸರ್ಟಿಫಿಕೇಟ್ ಬಳಸಿಕೊಂಡು SSL ಸಂಪರ್ಕಗಳ ಪ್ರಯೋಜನವನ್ನು ಅಪ್ಲಿಕೇಶನ್ ಬಳಸಿಕೊಳ್ಳಬಹುದು. ಸ್ವಯ-ಸಹಿ ಮಾಡಿದ ಸರ್ಟಿಫಿಕೇಟ್ ಬಳಸಲು, ವಿಶುವಲ್ ಸ್ಟುಡಿಯೋ 2012 ರಲ್ಲಿನ ಮ್ಯಾನಿಫೆಸ್ಟ್ ಡಿಸೈನರ್ ಮೂಲಕ ಬಳಕೆದಾರರು ಸರ್ಟಿಫಿಕೇಟ್ ಘೋಷಣೆಯನ್ನು ಸೇರಿಸಬಹುದು, ಬಳಕೆದಾರರು ಅದೇ ಸರ್ಟಿಫಿಕೇಟ್ ಬಳಸಲು ಬ್ಯಾಕೆಂಡ್ ಸರ್ವರ್ ಅನ್ನು ಕಾನ್ಫಿಗರ್ ಮಾಡಬೇಕು.

ಮೂಲ : ಭಾಷಾಇಂಡಿಯ

3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top