অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂದಿನ ಶಿಕ್ಷಣದಲ್ಲಿ ದೈಹಿಕ ಶಿಕ್ಷಣ

ಇಂದಿನ ಶಿಕ್ಷಣದಲ್ಲಿ ದೈಹಿಕ ಶಿಕ್ಷಣ

ಶೈಕ್ಷಣಿಕ ಬೋಧನೆಗೆ ಇಂದು ಮಗುವು ಕೇಂದ್ರಬಿಂದುವಾಗಿದ್ದಾನೆ. ಈ ಮಗುವಿನ ಅವಶ್ಯಕತೆಯನ್ನು ಅರಿತು ಇಂದು ಶಿಕ್ಷಕರಿಗೆ ಅನೇಕ ರೀತಿಯ ತರಬ್ರ್ತಿಗಳನ್ನು ಈ ಸಂಬಂಧ ನೀಡಲಾಗುತ್ತದೆ. ಈ ನಡುವೆ ಶಿಕ್ಷಕ ಪಾಠ ಬೋಧಿಸಲು ತಯಾರಾದರೆ ಮಕ್ಕಳು ಇದನ್ನು ಕಲಿಯಲು ತಯಾರಾಗಿರುತ್ತಾರೆ. ಆದರೆ ಆಟ, ಸಂಗೀತ, ವ್ಯಾಯಾಮ, ನೃತ್ಯದಂತ ಚಟುವಟಿಕೆಗಳನ್ನು ಬಹಳಷ್ಟು ಪಾಠಕ್ಕೆ ಉತ್ತೇಜನ ಹಾಗೂ ಪೂರಕವಾಗಿರುವುದರಿಂದ ಇವುಗಳನ್ನು ಸಹ ಕಲಿಸುವಲ್ಲಿ ಆಗಾಗ ಶಿಕ್ಷಕ ಬಳಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತಿದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಪಾಠದಲ್ಲಿ ಆಸಕ್ತಿ ಹಾಗೂ ಮಾನಸಿಕ, ದೈಹಿಕ ಆರೋಗ್ಯವನ್ನುಂಟು ಮಾಡಿ ಪಾಠ ಕಲಿಯುವಲ್ಲಿ ಮಕ್ಕಳು ಸರ್ವಸನ್ನದ್ಧರಾಗಿರುವಂತೆ ಮಾಡುವ ಕಾಯಕದಲ್ಲಿ ಶಿಕ್ಷಕ ವೃಂದವು ಈಗಾಗಲೇ ಶ್ರಮಿಸುತ್ತಿದೆ.

ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ (ಜೀವನ ವಿಜ್ಞಾನ) ಮತ್ತು S.U.P.W. ಅವಧಿಗಳನ್ನು ಮೀಸಲಿಟ್ಟಿದೆ. ಈ ಚಟುವಟಿಕೆಗಳ ಸಂಬಂಧ ಶಿಕ್ಷಕರುಗಳಿಗೆ ತರಬೇತಿಗಳನ್ನು ನೀಡಲಾಗಿದೆ.

ಜೀವನ ವಿಜ್ಞಾನ(ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ)ದಲ್ಲಿ ಅನೇಕ ವಿವಿಧ ಆಟಗಳು, ವ್ಯಾಯಾಮ, ಆಹಾರ, ಪದ್ಧತಿ, ಮೌಲ್ಯಗಳು, ಆರೋಗ್ಯದ ರೂಢಿಗಳು ಶಿಕ್ಷಣಕ್ಕೆ ಅಂದರೆ. ಭಾಷೆ, ಗಣಿತ, ವಿಜ್ಞಾನ, ಸಮಾಜ ಪಠ್ಯಕ್ಕೆ ಪೂರಕ ಅಂಶಗಳನ್ನು ನೀಡುತ್ತದೆ. ಅದನ್ನು ಬಳಸಿಕೊಳ್ಳಲು ಕ್ರೀಯಾಶೀಲನಾದ ಶಿಕ್ಷಕನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸರ್ವಸನ್ನದ್ಧನಾಗಿದ್ದಾನೆ.ಹಾಗೂ ದೈಹಿಕ ಶಿಕ್ಷಣ ಗುರಿ ಉದ್ದೇಶಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದನೆ.

ಜೀವನ ಪ್ರಗತಿಗೆ ಬೌದ್ಧಿಕ ವಿಕಾಸ ಅನಿವಾರ್ಯವಾಗಿದೆ. ಹಾಗಾಗಿ ಬೌದ್ಧಿಕ ಶಿಕ್ಷಣ ಮಹತ್ವ ಪಡೆದಿದೆ. ಆದರೆ ಈ ಪ್ರಗತಿ ಎಮ್ಬ ಭಾಣವು ಸಾಗಲು ಬಿಲ್ಲಿನಂತೆ ಆರೋಗ್ಯವುಳ್ಳ ಶರೀರದ ಮೇಲೆ ಅವಲಂಬಿತವಾಗಿದೆ. ಇದೇ ಸೃಷ್ಠಿಯ ರಹಸ್ಯ ಇವೆರಡನ್ನು ಶಿಕ್ಷಣದಲ್ಲಿ ಬಿಡಿಸಲಾರದ ಗಂಟಾಗಿದೆ. ಹಾಗಾಗಿ ಇವರೆಡನ್ನು ಬಾಣ ಬಿಲ್ಲಿಗಿರುವ ಸಂಬಂಧವನ್ನು ಕಲ್ಪಿಸುತ್ತಾ ಅವೆರಡನ್ನು ಒಂದೇ ಮುಖ್ದ ಎರಡು ಕಣ್ಣುಗಳಂತೆ ರಕ್ಷಿಸುವ ಅನಿವಾರ್ಯತೆ ನಮಗಿಂದು ಎದ್ದು ಕಾಣುತ್ತದೆ.

ದೈಹಿಕ ಶಿಕ್ಷಣದ ಗುರಿ ಮತ್ತು ಉದ್ದೇಶಗಳು

  1. ಆರೋಗ್ಯ ವೃದ್ಧಿಸುವಂತೆ ಮಾಡುವುದು.
  2. ಶರೀರ ಮತ್ತು ಮನಸ್ಸಿನ ಸದೃಢತೆಯನ್ನು ಹೆಚ್ಚಿಸುವುದು.
  3. ನರ ಸ್ನಾಯುಗಳ ಪರಸ್ವರ ಹೊಂದಾಣಿಕೆಯಾಗುವಂತೆ ಮಾಡುವುದು.
  4. ಆಟದಲ್ಲಿ ಪಾಲ್ಗೊಳ್ಳುವಂತೆ ಮಾಡೀ ಸ್ವರ್ಧೆಯಲ್ಲಿ ಗೆಲ್ಲುವಂತೆ ತರಬೇತು ಗೊಳಿಸುವುದು.
  5. ಆಟದ ಮತ್ತು ಮೇಲಾಟದ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಮಾಡುವುದು.
  6. ಕ್ರೀಡೆಯೊಂದನ್ನು ಹವ್ಯಾಸಿವಾಗಿ ಬೆಳೆಯುವಂತೆ ಮಾಡುವುದು.
  7. ಕ್ರೀಡೆಯಿಂದ ಮನರಂಜನೆ, ವಿನೋದ, ಆನಂದವನ್ನುಂಟು ಮಾಡುವುದು.
  8. ನಾಯಕತ್ವದ ಗುಣಗಳನ್ನು ಬೇಳೆಸುವುದು.
  9. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಐಕ್ಯತಾ ಭಾವನೆಯನ್ನು ಬೆಳೆಸುವುದು.
  10. ಬೀಡುವಿನ ವೇಳೆಯನ್ನು ಸದುಪಯೋಗಪಡಿಸಿಕೋಳ್ಳುವಂತೆ ಮಾಡುವುದು.
  11. ಲಿಂಗ, ಜಾತಿ, ವರ್ಗ ಮತ್ತು ವರ್ಣ ಬೇಧದ ತಾರತಮ್ಯತೆಯನ್ನು ಹೋಗಳಾಡಿಸುವುದು.
  12. ರಾಷ್ಟ್ರ ರಕ್ಷಣೆಗಾಗಿ ದೇಶ ಪ್ರೇಮಿಗಳು ಹಾಗೂ ಸದೃಢವಾದ ವ್ಯಕ್ತಿಯನ್ನು ತಯಾರು ಮಾಡುವುದು.
  13. ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಶಿಕ್ಷಣಕ್ಕೆ ಪೂರಕವಾಗಿ ಸ್ವಂದಿಸುವುದು.
  14. ಆರೋಗ್ಯದ ರೂಢಿ ಹಾಗೂ ಮೌಲ್ಯಗಳನ್ನು ಬೆಳೆಸುವುದು .
  15. ಹಿಂಜರಿಕೆ ಸ್ವಭಾವದ ಮಕ್ಕಳಿಗೆ ಆತ್ಮಸ್ಥೈರ್ಯಾ ತುಂಬಿ ಅವರನ್ನು ಕ್ರೀಡಾಪಟುಗಳಾಗಿ ಮಾಡುವುದು.
  16. ಕರ್ತವ್ಯ ಪ್ರಜ್ಞೆ, ಸಹಕಾರ, ವಿನಯ, ಸೇವೆ, ಸಹೋದರತ್ವದ ಗುಣಗಳನ್ನು ಬೆಳೆಸುವುದು.
  17. ಆರೋಗ್ಯ ಆಹಾರ ಮತ್ತು ವ್ಯಾಯಾಮ ಅಭ್ಯಾಸಗಳನ್ನು ಬೆಳೆಸುವುದು.
  18. ಕ್ರೀಡಾ ಮನೋಭಾಮಿಕೆಯನ್ನು ಕ್ರೀಡೆಯಲ್ಲಿ ಅಷ್ಟೇಯಲ್ಲದೆ ಜೀವನದಲ್ಲೂ ರೂಢಿಸಿಕೊಳ್ಳುವಂತೆ ಮಾಡುವುದು.
  19. ಆಪತ್ಕಾಲದಲ್ಲಿ ಪಾರಾಗುವ ತಂತ್ರಗಳು ಸುರಕ್ಷತಾ ಶಿಕ್ಷಣದ ಬಗ್ಗೆ ತಿಳುವಳಿಕೆ ಮೂಡಿಸುವುದು.
  20. ಆಟೋಟಗಳಿಂದ ಸಿಗಬಹುದಾದ ಜೀವನದ ಮೌಲ್ಯಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು.
  21. ರಾಷ್ಟ್ರದ ಉತ್ತಮ ನಾಗರೀಕರನ್ನಾಗಿ ತಯಾರು ಮಾಡುವುದು.
  22. ಮಕ್ಕಳ ಚಲನಾ ಸಾಮರ್ಥ್ಯವನ್ನು ಹೆಚ್ಚಿಸುವುದು.

ಕೊನೆಯ ಮಾರ್ಪಾಟು : 7/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate