ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಶಾ

ಸಮುದಾಯದ ಆರೋಗ್ಯಕ್ಕಾಗಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಆರೋಗ್ಯ ಇಲಾಖೆ ಹಾಗೂ ಜನ ಸಮುದಾಯದ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುವ 'ಆಶಾ' ಸ್ವಯಂ ಸೇವಕಿಯರು (accredited social health activist ) ಸಮುದಾಯದ ಆರೋಗ್ಯವನ್ನು ಉತ್ತಮ ಪಡಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಹಳ ಮುಖ್ಯವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ತಾಯಂದಿರು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಅಶಾಗಳ ಪಾತ್ರ ಅತಿ ಮುಖ್ಯವಾಗಿದೆ. ಸಮುದಾಯದೊಳಗೇ ಇದ್ದು ಅವರ ರೀತಿ, ರಿವಾಜು ತಿಳಿದುಕೊಂಡಿರುವ ಸ್ವಯಂ ಆಗ್ತಿ ತೇರ್ಗಡೆ ಇವರು. ಪ್ರತಿ ಗ್ರಾಮ ಅಥವಾ ೧೦೦೦ ಜನಸಂಖ್ಯೆಗೆ ಒಬ್ಬರು ಅಶಾ ಕಾರ್ಯ ಕರ್ತೆಯರು ಇರುತ್ತಾರೆ.

ಆಶಾ ಯಾರಾಗಬಹುದು?

  • ೭ ನೇ ತೇರ್ಗಡೆ ಹೊಂದಿದ್ದು ಓದು ಬರಹ ತಿಳಿದವರಾಗಿರಬೇಕು ಹಾಗೂ ಮಾಹಿತಿಯನ್ನು ಪ್ರಚಾರ ಮಾಡುವ ನೈಪುಣ್ಯತೆ ಹೊಂದಿರಬೇಕು
  • ಎರಡು ಮಕ್ಕಳ ತಾಯಿಯಾಗಿದ್ದು ೨ ನೇ ಮಗುವಿಗೆ ಕನಿಷ್ಠ ೫ ವರ್ಷ ಮೇಲ್ಪಟ್ಟಿರಬೇಕು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮತ್ತು ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಆದ್ಯತೆ

ಆಯ್ಕೆ ಹೇಗೆ?

  • ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಗ್ರಾಮ ನೈರ್ಮಲ್ಯ ಸಮಿತಿಯವರು ೩ ಅರ್ಹ ಆಶಾ ಅಭ್ಯರ್ಥಿಗಳನ್ನು ಪ್ರತಿ ೧೦೦೦ ಜನಸಂಖ್ಯೆಗೆ ಅನುಗುಣವಾಗಿ ಗುರುತಿಸುವುದು, ಹೀಗೆ ಗುರುತಿಸಿದ ಆಶಾ ಸ್ವಯಂ ಸೇವಕಿಯರನ್ನು ಗ್ರಾಮ ನೈರ್ಮಲ್ಯ ಸಮಿತಿ ನಡಾವಳಿ ಪುಸ್ತಕದಲ್ಲಿ ದಾಖಲಿಸುವುದು.
  • ರಾಜ್ಯದಲ್ಲಿ ಈಗ ೩೩,೭೫೦ ಆಶಾ ಸ್ವಯಂ ಸೇವಕಿಯರು ಸೇವೆಯಲ್ಲಿದ್ದಾರೆ. ಇವರು ತಮ್ಮ ಸೇವೆಯನ್ನು ಸಮರ್ಥವಾಗಿ  ನೀಡಲು ಅನುಕೂಲವಾಗುವಂತೆ ಎಲ್ಲ ೩೩,೭೫೦ ಆಶಾ ಸ್ವಯಂ ಸೇವಕಿಯರಿಗೂ ಔಷಧಿಗಳ ಕಿಟ್ಗಳನ್ನೂ  ನೀಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಅವರು ನೀಡುವ ಪ್ರತಿಯೊಂದು ಸೇವೆಗೂ ನಿಯಾಮ್ನುಸಾರ ಗೌರವ ಧನ ನೀಡಲಾಗುತ್ತದೆ. ಇವರು ಸರ್ಕಾರಿ ನೌಕರರಲ್ಲ. ಆದ್ದರಿಂದ ನಿರ್ದಿಷ್ಟ ಸಂಬಳ ದೊರೆಯುವುದಿಲ್ಲ.
2.9880952381
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top