অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಾಥಮಿಕ ಆರೋಗ್ಯ ಕೇಂದ್ರ

ಪ್ರಾಥಮಿಕ ಆರೋಗ್ಯ ಕೇಂದ್ರ

ಪ್ರಾಥಮಿಕ ಆರೋಗ್ಯ ಕೇಂದ್ರ

ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಜನ ಸಾಮಾನ್ಯರಿಗೆ ವೈದ್ಯರ ಸೇವೆಗಳನ್ನು ಹಾಗೂ ಒಳ ರೋಗಿಗಳ ಸೇವೆಗಳನ್ನು ನೀಡುವ ಮೊದಲ ಹಂತವೇ ಪ್ರಾಥಮಿಕ ಆರೋಗ್ಯ ಕೇಂದ್ರ.

ನಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ ಸಿಬ್ಬಂದಿಗಳು

ಸಿಬ್ಬಂದಿಗಳು

ಪ್ರಸ್ತುತ

ಏನ್ ಆರ್ ಎಚ್ ಎಂ ಅಪೇಕ್ಷಿತ

ವೈದ್ಯಾಧಿಕಾರಿಗಳು

1

೨ (ಕನಿಷ್ಠ ಒಬ್ಬ ಮಹಿಳಾ ವೈದ್ಯರು)

ಆಯುರ್ವೇದ, ಯೋಗ,

ಹೋಮಿಯೋಪತಿ ವೈದ್ಯರು

-

ಯಾವುದೇ ಪದ್ದತಿಯ ಒಬ್ಬರು

ಔಷಧಿ ವಿತರಕರು

1

1

ನರ್ಸಗಳು

1

3

ಹಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ

1

1

ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರು

೩+೩

 

೩+೩

ಆರೋಗ್ಯ ಶಿಕ್ಷಕರು

1

1

ಪ್ರಯೋಗಾಲಯ ಸಿಬ್ಬಂದಿ

1

1

ಲೆಕ್ಕ ಪತ್ರ ನಿರ್ವಾಹಕರು

-

1

ಗುಮಾಸ್ತರು

1

1

ವಾಹನ ಚಾಲಕರು

 

1

ಗುತ್ತಿಗೆಗೂ ನೀಡಬಹುದು

ಡಿ ದರ್ಜೆ ನೌಕರರು

ಒಟ್ಟು

17

 

21

 

ಪ್ರಾಥಮಿಕ ಆರೋಗ್ಯ ಕೇಂದ್ರ (ಪ್ರಾ.ಆ.ಕೇ.) ಸರ್ಕಾರವು ವಾಗ್ದಾನ ಮಾಡಿರುವ ಸೇವೆಗಳು

ವೈದ್ಯರು ಸಿಗುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಪ್ರಥಮ ಹಂತ

ವೈದ್ಯಕೀಯ ಸೇವೆಗಳು:

ಹೊರರೋಗಿ ಸೇವೆಗಳು : ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನವೂ ಬೆಳಗಿನ ೪ ಗಂಟೆಗಳು ಹಾಗೂ ಮಧ್ಯಾಹ್ನದ ಮೇಲೆ ೨.1/೨ ಗಂಟೆ ಕಾಲಾವಧಿಗೆ ಹೊರರೋಗಿಗಳ ಸೇವೆ ಲಭ್ಯ. ದಿನದ ೨೪ ಗಂಟೆಗಳೂ ತುರ್ತು ಮತ್ತು ಅಪಘಾತ ಸೇವೆಗಳು ಲಭ್ಯವಿರಬೇಕು. ಉದಾ:ನಾಯಿ ಕಡಿತ, ಹಾವು ಕಡಿತ, ಅಪಘಾತದ ಗಾಯಗಳು ಮುಂತಾದವು.

ಒಳರೋಗಿಗಳ ಸೇವೆಗಳು: ಒಳ ರೋಗಿಗಳ ಸೇವೆಗಾಗಿ ಹಾಸಿಗೆಯುಳ್ಳ ಸೇವೆಗಳು ಲಭ್ಯವಿರಬೇಕು.

ಮುಂದುವರೆದ ಖಾಯಿಲೆಗಳ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವುದು ಹಾಗೂ ಅದರ ಅನುಸರಣೆ.

ವಾರದ ಎಲ್ಲಾ ದಿನಗಳಲ್ಲಿ ೨೪ ಗಂಟೆಗಳ ಹೆರಿಗೆ ಸೇವೆಗಳು.

ಶಸ್ತ್ರ ಚಿಕಿತ್ಸ್ಸೆಗಳು: ( ಶಸ್ತ್ರ ಚಿಕಿತ್ಸಾ ಕೊಠಡಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ.)

  • ಸುರಕ್ಷಿತ ಗರ್ಭಪಾತ
  • ಟುಬೆಕ್ಟಮಿ , ವ್ಯಾಸಕ್ಟೆಮಿ

ಸಿಗಲೇಬೇಕಾಗಿರುವ ಸೇವೆಗಳು:

  • ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳು

ಉಪ ಕೇಂದ್ರ ಮಟ್ಟದಲ್ಲಿ ಸಿಗಬೇಕಾಗಿರುವ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರಬೇಕು ಅವುಗಳ ಜೊತೆಗೆ ಈ ಕೆಳಗಿನ ಸೇವೆಗಳು ಲಭ್ಯವಿರಬೇಕು.

ಪರೀಕ್ಷೆಗಳು:

  • ರಕ್ತ ಪರೀಕ್ಷೆ (ರಕ್ತ ಹೀನತೆಗೆ)
  • ಮೂತ್ರ ಪರೀಕ್ಷೆ (ಸಕ್ಕರೆ ಮತ್ತು ಪ್ರೊಟೆನ್)
  • ಸಿಫಿಲಿಸ್ ರೋಗ ಪರೀಕ್ಷೆ

ಹೆರಿಗೆ ಸೇವೆಗಳು:

  • ಸುರಕ್ಷಿತ ಹಾಗೂ ಸಾಂಸ್ಥಿಕ (ಆಸ್ಪತ್ರೆ) ಹೆರಿಗೆಗೆ ಪ್ರೋತ್ಸಾಹ.
  • ಸಹಜ ಹೆರಿಗೆಯ ವ್ಯವಸ್ಥೆ.
  • ಸಿಸೇರಿಯನ್ ಆಪರೇಶನ್ ಬಿಟ್ಟು ಬೇರೆ ರೀತಿಯ ಕಷ್ಟ ಕರ ಹೆರಿಗೆಗಳನ್ನು ನಿಭಾಯಿಸುವುದು.
  • ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆ ಸಂಧರ್ಭದಲ್ಲಿ ಬರುವ ಅತಿ ರಕ್ತದ ಒತ್ತಡದ ನಿರ್ವಹಣೆ
  • ಉಪ ಕೇಂದ್ರದಿಂದ ಬರುವಂತಹ ಕಷ್ಟಕರ ಗರ್ಭಾವಸ್ಥೆ ಹಾಗೂ ಹೆರಿಗೆಗಳ ನಿರ್ವಹಣೆ
  • ಜನನಿ ಸುರಕ್ಷಾ ಯೋಜನೆಯ ಸೇವಾ ನಿರ್ವಹಣೆ.
  • ಸುರಕ್ಷಿತ ವೈದ್ಯಕೀಯ ಗರ್ಭಪಾತದ ಸೇವೆಗಳು ಲಭ್ಯವಿರಬೇಕು.

ಸಂತಾನೋತ್ಪತ್ತಿ ಮಾರ್ಗದ ಹಾಗೂ ಲೈಂಗಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಶಿಕ್ಷಣ ಹಾಗೂ ಆ ರೋಗಗಳಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ.

  • ನವಜಾತ ಶಿಶುಗಳ ಆರೈಕೆ.
  • ನವಜಾತ ಶಿಶುಗಳ ಆರೈಕೆ
  • ನವಜಾತ ಶಿಶುಗಳ ಕಾಮಾಲೆ ರೋಗದ ಆರೈಕೆ/ಚಿಕಿತ್ಸೆ
  • ಶಾಖ ಕಳೆದುಕೊಂಡ ನವಜಾತ ಶಿಶುಗಳ ಆರೈಕೆ.

ಮಕ್ಕಳ ಆರೋಗ್ಯ ಸೇವೆಗಳು.

  • ಎಲ್ಲಾ ರೋಗಗ್ರಸ್ಥ ಮಕ್ಕಳ ತುರ್ತು ಸೇವೆಗಳು
  • ಸಾಮಾನ್ಯ ಖಾಯಿಲೆಗಳ ಆರೈಕೆ

ಉದಾ: ಶೀತ, ಕೆಮ್ಮು,ನೆಗಡಿ,ಜ್ವರ,ಅಪೌಷ್ಟಿಕತೆ,ನ್ಯುಮೋನಿಯಾ (ಶ್ವಾಸಕೋಶದ ಸೋಂಕು) ದಡಾರ

ಪೂರ್ಣ ಲಸಿಕಾ ಕಾರ್ಯಕ್ರಮ.

ಕುಟುಂಬ ಕಲ್ಯಾಣ ಸೇವೆಗಳು.

  • ಕುಟುಂಬ ಕಲ್ಯಾಣ ಸೇವೆಗಳ ಬಗ್ಗೆ ಮಾಹಿತಿ ಹಾಗೂ ಶಿಕ್ಷಣ
  • ತಾತ್ಕಾಲಿಕ ಸೇವೆಗಳು:ಕಾಂಡೋಮ್,ಕಾಪರ್ - ಟಿ ವ್ಯವಸ್ಥೆ, ಮಾತ್ರೆಗಳು, ತುರ್ತು ಗರ್ಭನಿರೋಧಕ ವಿಧಾನಗಳು. ಉದಾ:ವ್ಯಾಸೆಕ್ಟಮಿ,ಟುಬೆಕ್ಟಮಿ.
  • ಸಂತಾನ ಹೀನ ದಂಪತಿಗಳೊಂದಿಗೆ ಆಪ್ತ ಸಮಾಲೋಚನೆ ಮತ್ತು ಹೆಚ್ಚಿನ ಸೇವೆಗಾಗಿ ಮೇಲಿನ ಆರೋಗ್ಯ ಕೇಂದ್ರಗಳಿಗೆ ಕಳುಹಿಸುವುದು.

ಪೌಷ್ಟಿಕತೆಯ ಸೇವೆಗಳು

  • ಅಂಗನವಾಡಿ ಹಾಗೂ ಉಪ ಕೇಂದ್ರಗಳ ಸಹಯೋಗದಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು ಗುರುತಿಸುವುದು ಹಾಗೂ ಅದರ ಆರೈಕೆ.
  • ಮಕ್ಕಳಲ್ಲಿನ ರಕ್ತ ಹೀನತೆ ಹಾಗೂ ರಾತ್ರಿ ಕುರುಡು ಗುರುತಿಸುವಿಕೆ ಹಾಗೂ ಅದರ ಆರೈಕೆ.

ಶಾಲಾ ಅರೋಗ್ಯ

  • ವರ್ಷದಲ್ಲಿ ೪ ಬಾರಿ ಶಾಲಾ ಭೇಟಿ, ಶಾಲಾ ಮಕ್ಕಳ ತಪಾಸಣೆ ಚಿಕಿತ್ಸೆ ಹಾಗೂ ಅನುಸಾರ.

ಹದಿಹರೆಯದವರ ಆರೋಗ್ಯ

  • ಆಪ್ತ ಸಮಾಲೋಚನೆ.
  • ಜೀವನ ಕೌಶಲ್ಯದ ಶಿಕ್ಷಣ
  • ಹದಿ ಹರೆಯದವರ ರೋಗಗಳಿಗೆ ಚಿಕಿತ್ಸೆ.

ಸುರಕ್ಷಿತ ಕುಡಿಯುವ ನೀರಿನ ಹಾಗೂ ನೈರ್ಮಲ್ಯ ವಾತಾವರಣದ ಬಗ್ಗೆ ಶಿಕ್ಷಣ, ತರಬೇತಿ ಹಾಗೂ ಪ್ರೋತ್ಸಾಹ.

ಸ್ಥಳೀಯ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ನಿಯಂತ್ರಣ ಹಾಗೂ ಚಿಕಿತ್ಸೆ.

ಉದಾ:ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ, ಡೆಂಗೀ ಜ್ವರ.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾರಿ.

ಆರೋಗ್ಯ ಶಿಕ್ಷಣ.

-ಹದಿ ಹರೆಯದವರಿಗೆ

-ಹೆಂಗಸರಿಗೆ.

ಮೂಲ: ಗ್ರಾಮ ಆರೋಗ್ಯ ಮತ್ತು ನಿರ್ಮಲ್ಯ ಸಮಿತಿ


ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate