অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾರತದ ಸಂವಿಧಾನ

ಭಾರತದ ಸಂವಿಧಾನ

ಭಾರತ ಬ್ರಿಟಿಷರ  ಆಳ್ವಿಕೆಯಿಂದ ಬಿಡುಗಡೆ ಹೊಂದಿದರೂ ಆಡಳಿತ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಪಡೆಯಲು ಕೆಲವು ಕಾಲ ಕಾಯ ಬೇಕಾಯಿತು. ಏಕೆಂದರೆ ಸುಮಾರು ೨೦0 ವರ್ಷಗಳ ಕಾಲದ ಅವರ ಆಳ್ವಿಕೆಯ ಆಡಳಿತ ಪದ್ಧತಿ ಭಾರತಕ್ಕೆ ಹೊಂದುವಂತಿರಲಿಲ್ಲ. ಇದನ್ನು ಮನಗಂಡು ೧೯೪೬ ರಲ್ಲಿ ಕ್ಯಾಬಿನೆಟ್ ಮಿಷನ್ ಭಾರತಕ್ಕೆ ಬಂದಾಗ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಗೆ ದೊರೆಯಿತು.  ಅದರಂತೆ ಪ್ರಾದೇಶಿಕ ವಿಧಾನಸಭೆಗಳಿಗೆ ಚುನಾವಣೆ ನಡೆದು ೩೮೯ ಸದಸ್ಯರು ಚುನಾಯಿತರಾದರು. ಇದರಲ್ಲಿ ರಾಜ-ಮಹಾರಾಜರ  ಆಳ್ವಿಕೆಯ ೯೩ ಸದಸ್ಯರೂ ಸೇರಿದ್ದರು. ಈ ಸಂವಿಧಾನ ಸಭೆಯಲ್ಲಿ ಭಾರತದ ಪ್ರಖ್ಯಾತ ರಾಜಕಾರಣಿಗಳು,ಕಾನೂನು ತಜ್ಞರು,ಒಗ್ಗೂಡಿದ್ದರು. ಇದರ ಮೊದಲ ಸಭೆ  ೧೯೪೬ ರ ಡಿಸಂಬರ್ ೯ ರಂದು ನವದೆಹಲಿಯಲ್ಲಿ ನಡೆಯಿತು. ಆದರೆ ಮುಸ್ಲಿಂ ಲೀಗ್ ಸದಸ್ಯರು ಇದರಲ್ಲಿ ಭಾಗವಹಿಸಲಿಲ್ಲ. ಈ ಸಭೆಗೆ ರಾಜೇಂದ್ರ ಪ್ರಸಾದರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. ಡಾ. ಅಂಬೇಡ್ಕರ್ ರವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಭಾರತಕ್ಕೆ ಉತ್ತಮ ಸಂವಿಧಾನ ದೊರಕಿಸಿಕೊಟ್ಟರು. ೧೯೪೯ ರ ನವೆಂಬರ್ ೨೬ ರಂದು ಸಂವಿಧಾನವನ್ನು ಒಪ್ಪಿಕೊಳ್ಳಲಾಯಿತು. ಮತ್ತು ೧೯೫೦ ಜನವರಿ ೨೬ ರಿಂದ ಅದು ಆಚರಣೆಗೆ ಬಂದಿತು. ಈ ಬೃಹತ್ ಸಂವಿಧಾನ ರಚಿಸುವುದಕ್ಕೆ ಮುಂಚೆ, ಅಮೇರಿಕ , ಬ್ರಿಟನ್, ಕೆನಡಾ, ಐರ್ಲೆಂಡ್  ಮುಂತಾದ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳ ನೆರವನ್ನು ಪಡೆಯಲಾಗಿದೆ. ಅವುಗಳಲ್ಲಿ ನಮ್ಮ ದೇಶಕ್ಕೆ ಅನ್ವಯಿಸುವ ಉತ್ತಮ ಅಂಶಗಳನ್ನು ಆರಿಸಿಕೊಳ್ಳಲಾಗಿದೆ.

ಈ ಸಂವಿಧಾನದ ಪ್ರಕಾರ ಭಾರತವನ್ನು ಗಣರಾಜ್ಯವೆಂದು ಘೋಷಿಸಲಾಯಿತು. ಸರ್ಕಾರವು ಯಾವ ನಿಯಮಗಳಿಗೆ ಅನುಸಾರವಾಗಿ ಆಡಳಿತ ನಡೆಸಬೇಕು, ಪ್ರಜೆಗಳಿಗೆ ಯಾವ ಬಗೆಯ ಹಕ್ಕು ಮತ್ತು ಕರ್ತವ್ಯಗಳಿವೆ ಇತ್ಯಾದಿ ವಿವರಗಳನ್ನು ತಿಳಿಸುವ ಆಡಳಿತಾತ್ಮಕ ಸಂಕಲನವನ್ನು 'ಸಂವಿಧಾನ' ಎನ್ನುವರು. ಪ್ರಜಾಪ್ರಭುತ್ವ - ಭಾರತದಲ್ಲಿ  ಸಂಸದೀಯ ವ್ಯವಸ್ತೆಯ ಸರ್ಕಾರವಿದೆ. ಭಾರತವು ಸಂವಿಧಾನಾತ್ಮಕವಾಗಿ ಆಳಲ್ಪಡುತ್ತದೆ. ಇದು ರಚನೆಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಮತ್ತು ವಿಶೇಷ ಅಧಿಕಾರಗಳನ್ನು ಹೊಂದಿದೆ. ಸಂವಿಧಾನದ ಅಂದರೆ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮುಖ್ಯಸ್ಥರಾಗಿ ರಾಷ್ಟ್ರಪತಿಗಳಿರುತ್ತಾರೆ. ರಾಷ್ಟ್ರಪತಿಗಳಿಗೆ ಸಲಹೆಗಳನ್ನು ನೀಡಲು ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಲ ಹೊಂದಿರಲು ಸಂವಿಧಾನ ಅವಕಾಶ ನೀಡುತ್ತದೆ. ವಾಸ್ತವವಾಗಿ ಕಾರ್ಯಾಂಗದ ಸರ್ವ ಅಧಿಕಾರವು ಮಂತ್ರಿಮಂಡಲದ ಮುಖ್ಯಸ್ಥರಾಗಿರುವ ಪ್ರಧಾನಮಂತ್ರಿಗಳಿಗಿರುತ್ತದೆ. ಮಂತ್ರಿಮಂಡಲ ಸಾಮೂಹಿಕವಾಗಿ ಲೋಕಸಭೆಗೆ ಜವಾಬ್ದಾರವಾಗಿರುತ್ತದೆ.ಅದೇ ರೀತಿ ರಾಜ್ಯಗಳಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿ (ಗೌರ್ನರ್) ರಾಜ್ಯಪಾಲರಿರುವುದಾದರೂ ರಾಜ್ಯದ ಮಂತ್ರಿಮಂಡಲವು ಕಾರ್ಯಾಂಗದ ನಿಜವಾದ ಅಧಿಕಾರವನ್ನು ಹೊಂದಿರುತ್ತದೆ. ಇಲ್ಲಿ ಮುಖ್ಯಮಂತ್ರಿ ಮುಖ್ಯಸ್ಥ. ಮಂತ್ರಿಮಂಡಲವು ವಿಧಾನಸಭೆಗೆ ಸಾಮೂಹಿಕವಾಗಿ ಜವಾಬ್ದಾರಯುತವಾಗಿರುತ್ತದೆ.

ಭಾರತದ ನ್ಯಾಯಾಂಗ ವಿಭಾಗದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಉನ್ನತ ಸ್ಥರದ ಹಾಗು ಅಂತಿಮ ಹಂತದ ನ್ಯಾಯಾಲಯವಾಗಿರುತ್ತದೆ. ಅದಕ್ಕೆ ಮುಖ್ಯಸ್ಥರಾಗಿ ಚೀಫ್ ಜಸ್ಟೀಸ್ ಹಾಗು ೨೫ ಜನ ಇತರ ಜಡ್ಜ್ ಗಳಿರುತ್ತಾರೆ. ಇವರೆಲ್ಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ೬೫ ವರ್ಷದವರೆಗೆ ಅವರು ಕಾರ್ಯನಿರ್ವಹಿಸಲು ಅವಕಾಶವಿದೆ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಬೇರೆ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಮಾಡುವಂತಿಲ್ಲ. ಸುಪ್ರೀಂ ಕೋರ್ಟಿಗೆ ಮೂಲ ಅರ್ಜಿ ಹಾಗೂ ಪ್ರಾರ್ಥನಾ ಅರ್ಜಿ ಸ್ವೀಕರಿಸಲು ಅಧಿಕಾರವಿದೆ. ಇದೂ ಅಲ್ಲದೆ ಮೂಲಭೂತ ಹಕ್ಕುಗಳ ಬಗೆಗೂ ಅದು ತೀರ್ಮಾನ ಕೊಡುವ ಹಕ್ಕನ್ನು ಹೊಂದಿದೆ.

ಭಾರತದ ಸಂವಿಧಾನವು ತನ್ನ ಎಲ್ಲಾ ಪ್ರಜೆಗಳಿಗೆ ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಅಮೂಲ್ಯವಾದ ಮೂಲಭೂತ ಹಕ್ಕನ್ನು ಕೊಡುತ್ತದೆ ಮತ್ತು ಸೂಚಿಸುತ್ತದೆ. ಇವೇ ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಅಡಿಗಲ್ಲಾಗಿವೆ ಹಾಗೂ ನೈತಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಜವಾಬ್ದಾರಿಯಾಗಿದೆ. ಈ ಹಕ್ಕು ಮತ್ತು ಸ್ವಾತಂತ್ರ್ಯ ಸಂವಿಧಾನದ ಅವಿಭಾಜ್ಯ ಅನ್ಗ್ಗವಾಗಿರುವುದರಿಂದ ಸಾಮಾನ್ಯ ಸನ್ನಿವೇಶಗಳಲ್ಲಿ ಇವುಗಳನ್ನು ನಿರಾಕರಿಸಲು ಅಥವಾ ಮೀರಲು ಸಾಧ್ಯವಾಗುವುದಿಲ್ಲ. ಅವುಗಳು ಹೀಗಿವೆ.

  1. ಕಾನೂನಿನಂತೆ ಎಲ್ಲರೂ ಸಮಾನರು ಹಾಗು ಯಾವುದೇ ಲಿಂಗ, ಧರ್ಮ, ಜನಾಂಗ, ಹುಟ್ಟಿದ ಸ್ಥಳ ಇವುಗಳ ಆಧಾರದಿಂದ ಯಾರಿಗೂ ನೌಕರಿಯಲ್ಲಿ ಸಮಾನತೆಯ ಅವಕಾಶದಿಂದ ವಂಚಿತರನ್ನಾಗಿಸುವ ಅಧಿಕಾರವಿಲ್ಲ.
  2. ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ, ಒಗ್ಗೂಡುವುದು, ಸಂಚಾರ, ವಾಸ, ಹಾಗೂ ಯಾವುದೇ ಉದ್ಯೋಗವನ್ನು ಹೊಂದುವ ಸ್ವಾತಂತ್ರ್ಯವಿದೆ. ಆದರೆ ಇವುಗಳಲ್ಲಿ ಕೆಲವು ಬಗೆಯ ನಿರ್ಬಂಧಗಳಿವೆ. - ವಿದೇಶಗಳೊಂದಿಗೆ ಸ್ನೇಹ ಸಂಬಂಧ ಹೊಂದುವುದು, ರಾಷ್ಟ್ರದ ಭದ್ರತೆ,ಸರ್ಕಾರದ ನಿಯಮಗಳು ಮತ್ತು ನೈತಿಕತೆ ಇತ್ಯಾದಿಗಳು ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ.
  3. ಶೋಷಣೆಯ ವಿರುದ್ಧ ಹಕ್ಕು ಎಂದರೆ, ಅನಧಿಕೃತವಾಗಿ ಅಧಿಕ ಸೇವೆ ಪಡೆಯುವುದು, ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಇತ್ಯಾದಿಗಳ ವಿರುದ್ದ ರಕ್ಷಣೆ ಇದೆ.
  4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು - ಅಂದರೆ ಯಾವುದೇ ವ್ಯಕ್ತಿ ತನಗಿಷ್ಟವಾದ ಯಾವುದೇ ಧರ್ಮವನ್ನು ಅನುಸರಿಸಬಹುದು ಹಾಗೂ ಧರ್ಮ ಪ್ರಚಾರ ಮಾಡಬಹುದು.
  5. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕು - ಇದರಿಂದ ಯಾವುದೇ ಸಂಸ್ಕೃತಿಯನ್ನು, ಭಾಷೆಯನ್ನು ಉಪಯೋಗಿಸಲು ಅಥವಾ ಕಲಿಸುವ ಶಿಕ್ಷಣ ನೀಡಲು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಹಕ್ಕನ್ನು ನೀಡಲಾಗಿದೆ.
  6. ಸಂವಿಧಾನದ ಪ್ರಕಾರ ಈ ಹಕ್ಕುಗಳನ್ನು ನಿರಾಕರಿಸಿದರೆ ಅದಕ್ಕೆ ಪರಿಹಾರ ಪಡೆಯುವ ಹಕ್ಕನ್ನು ಕೋರಲಾಗಿದೆ.

ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡಿರುವಂತೆ ಮೂಲಭೂತ ಕರ್ತವ್ಯಗಳನ್ನು ವಿಧಿಸಿದೆ.ಹಕ್ಕುಗಳ ರಕ್ಷಣೆಯ ಅಧಿಕಾರ ನ್ಯಾಯಾಂಗಕ್ಕೆ ನೀಡಲಾಗಿದೆ. ಆದರೆ ಇವು ಅನಿರ್ಭಂದಿತ ಸ್ವರೂಪದ ಹಕ್ಕುಗಳಾಗಿಲ್ಲ. ಸರ್ಕಾರವು ಇವುಗಳ ಮೇಲೆ ಸಕಾರಣವಿದ್ದಲ್ಲಿ ನಿರ್ಬಂದಗಳನ್ನು ಹೊರಬಹುದು.

ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಸೇರಿಸಲಾಗಿದೆ. ಇವು ಭಾರತದ ಜನತೆಯ ಕಲ್ಯಾಣದ ಗುರಿಯನ್ನು ಸಾಧಿಸಲು ಅನುಕೂಲವಾಗುವ ರೀತಿಯಲ್ಲಿ ನೀತಿಯನ್ನು ಸ್ಪಷ್ಟಪಡಿಸಿದೆ.

ಭಾರತೀಯ ಪ್ರಜೆಗಳಿಗೆ ಹಕ್ಕನ್ನು ಕೊಟ್ಟಿರುವಂತೆ ಕರ್ತವ್ಯಗಳನ್ನು ವಿಧಿಸಲಾಗಿದೆ. ಏಕೆಂದರೆ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಹಕ್ಕುಗಳನ್ನು ಪಡೆಯಲು ಕರ್ತವ್ಯಗಳ ಪಾಲನೆ ಅಷ್ಟೇ ಮುಖ್ಯವೆಂದು ಸಂವಿಧಾನ ಭಾವಿಸಿದೆ. ಕರ್ತವ್ಯಗಳನ್ನು ನಿರ್ಧಿಷ್ಟವಾಗಿ ಹೀಗೆ ಸೂಚಿಸಲಾಗಿದೆ.

  1. ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಭಾರತೀಯರಾದವರು ಗೌರವಿಸಬೇಕಾದ್ದು ಅದ್ಯ ಕರ್ತವ್ಯವಾಗಿದೆ.
  2. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಮ್ಮಿಕೊಂಡ ಆದರ್ಶ, ಧ್ಯೇಯಗಳನ್ನು ಮರೆಯದೆ ಗೌರವಿಸಬೇಕು.
  3. ಭಾರತದ ಸಾರ್ವಬೌಮತ್ವ - ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವುದು ಹಾಗೂ ಅದರ ರಕ್ಷಣೆಗಾಗಿ ಸಿದ್ದರಾಗಿರುವುದು.
  4. ಅವಶ್ಯಕತೆ ಬಂದರೆ ರಾಷ್ಟ್ರ ರಕ್ಷಣೆಗೆ ಹಾಗೂ ಸೇವೆಗೆ ಸಿದ್ದರಾಗಿ ಸೇವೆಸಲ್ಲಿಸುವುದು.
  5. ಭಾರತೀಯರೆಲ್ಲರೂ ಸಮಾನರೆಂಬ ಭ್ರಾತೃತ್ವ ಭಾವವನ್ನು ಬೆಳೆಸುವುದು ಹಾಗೂ ಸ್ತ್ರೀಯರಿಗೆ ಅಗೌರವವಾಗುವಂತಹ ಪದ್ಧತಿಗಳನ್ನು ಆಚರಣೆಗೆ ತಾರದಿರುವುದು.
  6. ರಾಷ್ಟ್ರದಲ್ಲಿರುವ ವಿಭಿನ್ನ ಸಂಸ್ಕುತಿಗಳನ್ನು ರಕ್ಷಿಸುವುದು.
  7. ಪರಿಸರ ರಕ್ಷಣೆ ಮತ್ತು ವನ್ಯಜೀವಿ ಹಾಗೂ ಮೂಕಜೀವಿಗಳ ಬಗ್ಗೆ ಸಹಾನುಭೂತಿ ತೋರುವುದು ರಕ್ಷಣೆ ಮಾಡುವುದು ಮತ್ತು ಆ ಕಾರ್ಯದಲ್ಲಿ ಸಹಕರಿಸುವುದು.
  8. ವೈಜ್ಞಾನಿಕ ದೃಷ್ಟಿ, ಮಾನವೀಯತೆ, ಸುಧಾರಣೆಗಳ ಬಗ್ಗೆ ಆಸಕ್ತಿ ಹೊಂದುವುದು.
  9. ಹಿಂಸಾಪ್ರವೃತ್ತಿ ದೂರಮಾಡಿ ರಾಷ್ಟ್ರದ ಆಸ್ತಿ ಸಂರಕ್ಷಿಸುವುದು.
  10. ವ್ಯಕ್ತಿಗತ ಮತ್ತು ಸಾಂಘಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು.

ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಕೆಲವು ನಿರ್ದೇಶಕ ತತ್ವಗಳನ್ನು ನೀಡಲಾಗಿದೆ. ಮೂಲಭೂತ ಹಕ್ಕುಗಳಂತೆ ಇವುಗಳನು ಭಾವಿಸಲಾಗದಿದ್ದರೂ ರಾಜ್ಯಗಳು ಕಾನೂನು ರಚಿಸುವಾಗ ಈ ತತ್ವಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ರಾಜ್ಯಗಳು ತನ್ನ ಪ್ರಜೆಗಳ ಅಭಿವೃದ್ದಿಗಾಗಿ ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರಜೀವನಕ್ಕೆ ನೆರವಾಗುವಂತಹ ರಾಜಕೀಯ ಸಂಬಂದಿ, ಕಾನೂನುಗಳ ಆಧಾರದ ಮೇಲೆ ಅವಶ್ಯಕ ಸುಧಾರಣೆಗಳನ್ನು ತರಬಹುದು.  ಇಂತಹ ನಿರ್ದೇಶಕ ತತ್ವಗಳನ್ನು ಆಚರಣೆಗೆ ತರುವಾಗ ಎಲ್ಲಾ ಪುರುಷ ಸ್ತ್ರೀಯರಿಗೂ ಆರ್ಥಿಕ ಮಿತಿಯೊಳಗೆ ಎಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸ ಮಾಡುವ ಹಕ್ಕು, ವಿದ್ಯೆ, ಉದ್ಯೋಗ ಗಳಿಸಲು ಸಹಾಯ,ವೃದ್ದಾಪ್ಯ, ಅನಾರೋಗ್ಯ, ಮತ್ತು ಅಂಗವಿಕಲತೆ ಇವುಗಳಲ್ಲಿ ಅವಶ್ಯಕ ನೆರವು ಇತ್ಯಾದಿಗಳನ್ನು ಸಂವಿಧಾನಕ್ಕೆ ಮೀರದಂತೆ ಪಡೆಯಬಹುದು.ಸರ್ಕಾರ ತನ್ನ ರಾಜ್ಯದ ಕಾರ್ಮಿಕರ ವೇತನ, ಮಾನವೀಯತೆ, ಯೋಗ್ಯ ಜೀವನ ಹಾಗೂ ಕಾರ್ಮಿಕರು ಕೈಗಾರಿಕೆಗಳ ಆಡಳಿತದಲ್ಲಿ ಭಾಗವಹಿಸುವುದು.ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸುಧಾರಣೆಗಳನ್ನು ಮಾಡಲು ನಿರ್ದೇಶನ ತತ್ವಗಳು ಸೂಚಿಸಲ್ಪತ್ತಿವೆ.

ಆರ್ಥಿಕ ಕ್ಷೇತ್ರದಲ್ಲಿಯೂ ಸಹ ಸರ್ಕಾರ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ದೇಶನ ತತ್ವಗಳನ್ನು ಪಾಲಿಸಬೇಕಾಗುತ್ತದೆ. ಮಾಲಿಕತ್ವದ ಹಕ್ಕು, ವಸ್ತುಗಳ ಸಂಗ್ರಹ ಮತ್ತು ಹಂಚಿಕೆ ಮತ್ತು ಕೆಲವೇ ಕ್ಷೇತ್ರದಲ್ಲಿ ಸಂಪತ್ತು ಕೇಂದ್ರಿಕ್ರುತವಾಗದ ಹಾಗೆ ಹಾಗೂ ಉತ್ಪಾದಿತ ವಸ್ತುಗಳು ಶೇಖರವಾಗದ ಹಾಗೆ ಸಮಾನವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಲು ನಿರ್ದೇಶಕ ತತ್ವಗಳು ಸೂಚಿಸುತ್ತವೆ. ಒಟ್ಟಿನಲ್ಲಿ ಯಾವುದು ನಿಜವಾಗಿ ಅಗತ್ಯವೋ ಯಾವುದನ್ನೂ ಒತ್ತಾಯವಿಲ್ಲದೆ ಆಚರಣೆಗೆ ತರಬಹುದೋ ಅವೆಲ್ಲವನ್ನು ತರಬಹುದಾಗಿದೆ. ಆಡಳಿತಾತ್ಮಕವಾಗಿಯು ಈ ಆದರ್ಶಗಳನ್ನು ಆದಷ್ಟು ಮಟ್ಟಿಗೆ ಗಮನದಲ್ಲಿತ್ತುಕೊಂದಿರಬೇಕು. ಇವೆಲ್ಲವುಗಳ ಗುರಿ ರಾಷ್ಟ್ರವನ್ನು ಶಾಂತಿ, ಅಭಿವೃದ್ದಿ ಮತ್ತು ವಿಕಾಸದ  ಕಡೆಗೆ

ಕೊನೆಯ ಮಾರ್ಪಾಟು : 7/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate