অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಗ

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ದಿಯ ಫಲವೇ ಈ ಯಾಂತ್ರಿಕ ಬದುಕು. ಇಂದಿನ ಅಭಿವೃದ್ದಿಯ ಈ ಯಾಂತ್ರಿಕ ಬದುಕಿನಲ್ಲಿ ಮನುಷ್ಯ ಅದೆಷ್ಟು ಬಿಡುವಿಲ್ಲದನ್ತವನಾಗಿದ್ದಾನೆಂದರೆ ಅವನು ತನ್ನ ಆರೋಗ್ಯದತ್ತ ಸ್ವಲ್ಪವೂ ಗಮನ ನೀಡುತ್ತಿಲ್ಲ. ಆರೋಗ್ಯ ಎಂಬುದು ಅಂಗಡಿಯಿಂದ ಕೊಂಡು ತರುವುದಿಲ್ಲ. ಆತ್ಮ ವಿಶ್ವಾಸ ಸ್ವಯಂ ನಿಯಂತ್ರಣದಿಂದ ಪಡೆಯುವಂತದ್ದು "A SOUND MIND IN A SOUND B0DY " ಎನ್ನುವ ಶ್ರೀ ವಿವೇಕಾನಂದರ ಈ ವಾಕ್ಯ ಆರೋಗ್ಯಕರ ಶರೀರದ ಮಹತ್ವ ತಿಳಿಸುತ್ತದೆ. ಆರೋಗ್ಯ ಪರಸ್ಪರರ ನಡುವೆ ಪ್ರೀತಿ ಸಂತೋಷಗಳುನ್ತಾಗುವಂತೆ ಪ್ರೇರೇಪಿಸುತ್ತದೆ.

ಆರ್ಥಿಕ ಸಂಪತ್ತು ಎಲ್ಲರಿಗೂ ಸಂಪತ್ತನ್ನು ಸೃಷ್ಟಿಸುತ್ತದೆ. ಒಬ್ಬ ವ್ಯಕ್ತಿ ಸಂಪತ್ತನ್ನು ಹೊಂದಿದ್ದರೆ ಅವನ ಇಡೀ ಕುಟುಂಬ ಉನ್ನತ ಜೀವನಮಟ್ಟ ಮತ್ತು ಉತ್ತಮ ಆರ್ಥಿಕ ಸ್ಥಿತಿ ಅನುಭವಿಸಬಹುದು. ಒಳ್ಳೆಯ ಆದಾಯ, ಸಂಪತ್ತು - ಹೊಂದಿದ ವ್ಯಕ್ತಿಗೆ ಆತ್ಮ ವಿಶ್ವಾಸವು ಹೆಚ್ಚಾಗಿದ್ದು ಅವನ ಸಂಪತ್ತನ್ನು ವೃದ್ದಿಗೊಳಿಸುತ್ತದೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ತಿಳಿಯುವುದೇನೆಂದರೆ, ಉನ್ನತ ಗುಣಮಟ್ಟದ ಜೀವನ ನಡೆಸಲು "ಆರೋಗ್ಯ ಮತ್ತು ಸಂಪತ್ತು" ಎರಡು ಅತ್ಯವಶ್ಯಕ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಶ್ರೇಷ್ಠ. ಎಲ್ಲಾ ಭಾಗ್ಯಗಳನ್ನು ಅನುಭವಿಸಬೇಕಾದರೆ, ಆರೋಗ್ಯ ಭಾಗ್ಯದಿಂದ ಮಾತ್ರ ಸಾಧ್ಯ. ಇಂಥ ಆರೋಗ್ಯ ಭಾಗ್ಯದ ಜ್ಞಾನದ ಮಹತ್ವವನ್ನು ೮೦೦೦ ವರ್ಷಗಳಿಗಿಂತಲೂ ಹಿಂದೆ ನಮ್ಮ ಋಷಿಮುನಿಗಳು ತಮ್ಮ ದಿವ್ಯ ಧ್ಯಾನದ ಶಕ್ತಿಯಿಂದ ಉದ್ಭವಾದಂತಹ ಅಪರೂಪ ಮತ್ತು ಪರಿಣಾಮಕಾರಿಯಾದ ಯೋಗಾಸನ, ಪ್ರಾಣಾಯಾಮ, ಧ್ಯಾನ, ಕ್ರಿಯೆ, ಪರ್ಯಾಯ ಚಿಕಿತ್ಸೆ, ಪರಬ್ರಹ್ಮ ಚಿಕಿತ್ಸೆ, ಸಮ್ಮೋಹನಾ ಚಿಕಿತ್ಸೆ, ಪೂರ್ವ ಜನ್ಮದ ಚಿಕಿತ್ಸೆ ಹಾಗೂ ಇನ್ನೂ ಇತರೆ ಅನರ್ಘ್ಯ ರತ್ನಗಳನ್ನು ವಿಶ್ವಮಾನವ ಸಂಕುಲಕ್ಕೆ ಭಾರತೀಯರು ನೀಡಿದ್ದಾರೆ.

ಮನುಷ್ಯ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ನಾನು ಎಲ್ಲರಿಗಿಂತಲೂ ಮುಂದೆ ಬರಬೇಕೆಂಬ ಹಂಬಲದಿಂದ ಒತ್ತಡಕ್ಕೆ ಒಳಗಾಗಿ ಅವನು ಮಾನಸಿಕ ಹಾಗೂ ದೈಹಿಕ ವ್ಯಾದಿಗಳಿಗೆ ಒಳಗಾಗುತ್ತಿದ್ದಾನೆ. ಮಾನಸಿಕ ಒತ್ತಡದಿಂದಾಗಿ ಬಿ.ಪಿ. ಸಕ್ಕರೆ ಕಾಯಿಲೆ, ಅಸ್ತಮ, ಸಂದಿವಾತ, ನರಗಳ ದೌರ್ಬಲ್ಯ ಮುಂತಾದ ವ್ಯಾದಿಗಳು ಹಾಗೂ ಮನೋವಿಕಾರದ ಕಾಯಿಲೆಗಳಿಗೆ ತುತ್ತಾಗುತ್ತಾ  ಇದ್ದಾನೆ.

ಮಾನವ ಸೇವಿಸುವಂತಹ ಆಹಾರ, ನೀರು, ಗಾಳಿ ಇವೆಲ್ಲವೂ ಸಹ ಕಲುಷಿತವಾಗಿ ಅವನ ಶರೀರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿದೆ. ರೈತ ತಾನು ಹೆಚ್ಚು ಹಣಗಳಿಸಬೇಕೆಂಬ ಆಸೆ-ಆಕಾಂಕ್ಷೆಗಳಿಂದ ಸಾವಯವ ಗೊಬ್ಬರಕ್ಕೆ ಬದಲಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ರಾಸಾಯನಿಕ ಔಷಧಿಗಳನ್ನು ಬಳಸಿ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾನೆ. ಇಂತಹ ಆಹಾರ ಪದಾರ್ಥಗಳನ್ನು ತಿಂದಂತಹ ನಮಗೆ ಅದರಿಂದ ಅನಾರೋಗ್ಯ ಬರುತ್ತಿದೆ. ಇದರಿಂದ ಮನುಷ್ಯನ ಶಕ್ತಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಕಾರ್ಖಾನೆಗಳು ತಮ್ಮ ರಾಸಾಯನಿಕ ತ್ಯಾಜ್ಯ ವಸ್ತುಗಳನ್ನು ನದಿಗಳಿಗೆ ಬಿಡುತ್ತಿದ್ದು ಅಂತಹ ನೀರನ್ನು ನಾವು ಕುಡಿಯುತ್ತಿರುವುದರಿಂದ ನಮಗೆ ಅದೇ ಕಾಯಿಲೆಗಳು ಬರುತ್ತಿವೆ.

ಪ್ರಸ್ತುತ ವಾಹನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿದ್ದು ಆ ವಾಹನಗಳು ಮತ್ತು ಕಾರ್ಖಾನೆಗಳು ವಿಸರ್ಜಿಸುವ ಹೊಗೆಯಿಂದ ಹಾಗೂ ಅರಣ್ಯ ನಾಶದಿಂದ ಪರಿಸರದ ಶುದ್ದ ಗಾಳಿ ಕಲ್ಮಶವಾಗುತ್ತಿದೆ. ಅಂತಹ ಕಲ್ಮಶ ಗಾಳಿಯನ್ನು ನಾವು ಸೇವಿಸುತ್ತಿರುವುದರಂದ ನಮ್ಮ ಆರೋಗ್ಯ ಕೆಡುತ್ತದೆ.

ಹೀಗೆ ನಾವು ಸೇವಿಸುವುದರಿಂದ ಆಹಾರ, ನೀರು, ಗಾಳಿ ಎಲ್ಲವೂ ಸಹ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ನಾವು ಕೇಳಿ ಅರಿಯದಂತಹ ಚಿತ್ರ-ವಿಚಿತ್ರವಾದಂತಹ ಅನೇಕ ಕಾಯಿಲೆಗಳು ಮನುಷ್ಯನಿಗೆ ಬರುತ್ತಿವೆ. ಇಂತಹ ಎಲ್ಲಾ ಕಾಯಿಲೆಗಳಿಂದ ಮುಕ್ತಿ ಪಡೆಯಬೇಕಾದರೆ ತನ್ನ ಆರೋಗ್ಯವನ್ನು ತಾನು ಕಾಪಾಡಿಕೊಂಡು ಉತ್ತಮ ಜೀವನವನ್ನು ನಡೆಸಬೇಕಾದರೆ, ಅವನಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ, ಪರಬ್ರಹ್ಮ ಚಿಕಿತ್ಸೆ, ಪರ್ಯಾಯ ಚಿಕಿತ್ಸೆ ಹಾಗೂ ಇತರ ಕ್ರಿಯೆಗಳ ಅಭ್ಯಾಸ ಅತ್ಯಂತ ಅವಶ್ಯವಾದುದು. ಯೋಗ ಸರ್ವ ರೋಗ ನಿರೋಧಕ. ಯೋಗ ಒಂದು ಪ್ರಯೋಗಶಾಲೆ. ಯೋಗ ವಾಮನನಿಂದ ಮಹಾ ಮಾನವನನ್ನಾಗಿಸುವ ಒಂದು ಸಮಗ್ರ ಆಧ್ಯಾತ್ಮಿಕ ವಿದ್ಯೆಯಾಗಿದೆ.ಯೋಗ ಮಾನವನ ಸರ್ವಾಂಗೀಣ ಆರೋಗ್ಯವನ್ನು ನೀಡುವಂತಹ ಸಾಧನವಾಗಿದೆ.

ಧ್ಯಾನ

ಕುಂಡಲನೀ ಶಕ್ತಿ ಸಂಜೀವಿನ ಧ್ಯಾನ:

ನಾವು ಕೇವಲ ಭೌತಿಕ ಶರೀರವಲ್ಲ. ನಮ್ಮಲ್ಲಿ ನಮ್ಮ ಕಣ್ಣಿಗೆ ಗೋಚರಿಸದ ಪ್ರಾಣ ಶರೀರವೂ ಇದೆ. ಚಕ್ರಗಳು ನಮ್ಮ ಪ್ರಾಣ ಶರೀರದ ಮುಖ್ಯವಾದ ಅಂಗಗಳು ಮೂಲಾಧಾರ ಚಕ್ರ. ಸ್ವಾಧಿಷ್ಟಾನ ಚಕ್ರ, ಮಣಿಪುರ ಚಕ್ರ, ಅನಾಹುತ ಚಕ್ರ, ವಿಶುದ್ದಿ ಚಕ್ರ, ಆಜ್ಞಾ ಚಕ್ರ ಮತ್ತು ಸಹಸ್ರಾರ ಚಕ್ರಗಳು ನಮ್ಮ ಭೌತಿಕ ಶರೀರದ ಮುಖ್ಯವಾದ ಅಂಗಗಳನ್ನು ನಿಯಂತ್ರಿಸಿ, ನಿರ್ದೇಶಿಸುವುದರ ಜೊತೆಗೆ ಭೌತಿಕ ಶರೀರದ ಅಂಗಾಂಗಗಳಿಗೆ ಪ್ರಾಣ ಶಕ್ತಿಯನ್ನು ರವಾನಿಸುತ್ತವೆ. ಈ ಚಕ್ರಗಳು ಸರಿಯಾದ ಕ್ರಮದಲ್ಲಿ ಕಾರ್ಯ ನಿರ್ವಹಿಸದಿದ್ದಾಗ, ರೋಗ ಅಥವಾ ಕಾಯಿಲೆಯುಂಟಾಗುತ್ತದೆ. ಅಂದರೆ ಪ್ರಾಣ ಶರೀರ ಸಮ ಪ್ರಮಾಣದಲ್ಲಿದ್ದು ಮಾನವ ದೇಹದಲ್ಲಿ ಚಕ್ರಗಳು ಸರಿಯಾದ ಕ್ರಮದಲ್ಲಿ ಕಾರ್ಯನಿರ್ವಹಿಸಿದಾಗ ಮಾನವ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ.

ಅಲ್ಲದೆ ಈ ಧ್ಯಾನಕ್ರಿಯೆಯಿಂದ ಚಕ್ರಗಳು ಅವಿರತವಾಗಿ ಚೈತನ್ಯ ಹೊಂದಿ ಅಂತರಶಕ್ತಿ ಅಂತಹಪ್ರಜ್ಞೆ, ತೇಜಸ್ಸು, ಆಯಸ್ಸು, ಯಶಸ್ಸು, ಶಾಂತಿ, ಆತ್ಮ ವಿಶ್ವಾಸ, ಸಂತೋಷ, ಸಂಪತ್ತು ಮತ್ತು ಆರೋಗ್ಯ ಲಭಿಸುತ್ತದೆ. ಈ ಯೋಗಿಕ ಪ್ರಕ್ರಿಯೆಗಳನ್ನು ಮಾಡುವ ವ್ಯಕ್ತಿಗೆ ಜೀವನದಲ್ಲಿ ಯಾವುದೇ ರೋಗ ಇರಲಾರದು. ಹಾಗೆಯೇ ಕ್ಯಾನ್ಸರ್, ಹೃದಯ ರೋಗ, ಮಧುಮೇಹ, ಸ್ಥೂಲ ಕಾಯ, ಹೊಟ್ಟೆಯ ಎಲ್ಲಾ ಬಗೆಯ ರೋಗಗಳಾದ ಪಿತ್ತ, ವಾಯು, ಕಫ಼ ಮುಂತಾದ ವಿಷಮತೆಗಳು ಸ್ವತಃ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ಹಾಗೂ ವ್ಯಕ್ತಿಯು ಪೂರ್ಣ ನಿರೋಗಿಯಾಗುತ್ತಾನೆ. ಇದರಿಂದ ಯಾವುದೇ ಔಷಧ ವಿಲ್ಲದೆ ಎಲ್ಲಾ ರೋಗಗಳನ್ನು ಗುಣಪಡಿಸಲಾಗುವುದು ಮತ್ತು  ಜೀವನ ಪರ್ಯಂತ ನಿರೋಗ, ಸ್ವಸ್ಥ ಮನಸ್ಸು ಹಾಗೂ ತಪಸ್ವಿಯಾಗಬಹುದು.

ಪ್ರಾಣಾಯಾಮ

ನಮ್ಮ ಉಸಿರೇ  ನಮ್ಮ ಆರೋಗ್ಯ

ಸರಿಯಾದ ಕ್ರಮದ ಉಸಿರಾಟದ ಅಭ್ಯಾಸದಿಂದ ಜೀವಕಳೆ ಹೊಂದಿ, ನಮ್ಮ ಆರೋಗ್ಯವನ್ನು ಹಾಗೂ ಮಾನಸಿಕ ನೆಮ್ಮದಿಯನ್ನು ನಾವೇ ಕಾಪಾಡಿಕೊಳ್ಳಬಹುದು ಇದು ಪ್ರಾಣಾಯಾಮದಿಂದ ಸಾಧ್ಯವಾಗುತ್ತದೆ. ಪ್ರಾನಾಯಾಮದಿಂದಾಗುವ ಪ್ರಯೋಜನಗಳು.

  • ಸರಿಯಾದ ಉಸಿರಾಟ ಕ್ರಮದಿಂದ ಆಯಸ್ಸು ವೃದ್ದಿಯಾಗುತ್ತದೆ.
  • ಶ್ವಾಸಕೋಶಕ್ಕೆ ಸಂಬಂದಿಸಿದ ರೋಗಗಳನ್ನು ಗುಣಪಡಿಸುತ್ತದೆ.
  • ರಕ್ತದ ಸಂಚಲನವನ್ನು ಸರಾಗಗೊಳಿಸಿ ದೇಹದ ಶಕ್ತಿಯನ್ನು ವೃದ್ದಿಸುತ್ತದೆ.
  • ಶರೀರ ಮತ್ತು ಮನಸ್ಸುಗಳು ಸಶಕ್ತಿ, ಸದೃಢ ಸಂಪ್ರೀತ ಸಕಾರಾತ್ಮಕಗೊಳ್ಳುವುವು

ಇವೇ ಅಲ್ಲದೆ ನಮ್ಮ ಮೆದುಳಿನ ಪೂರ್ಣ ಪ್ರಯೋಜನಗಳನ್ನು ಪ್ರಾಣಾಯಾಮದಿಂದ ಪಡೆದು ರೋಗ ಮುಕ್ತರಾಗಬಹುದು ಮನಸ್ಸು ಶಾಂತಸ್ಥಿತಿಗೆ ಬರುತ್ತದೆ.

ಯೋಗಾಸನ

ಯೋಗಾಸನಗಳೆಂದರೆ ಸುಖವಾದ ಸ್ಥಿರವಾದ ಮತ್ತು ವ್ಯವಸ್ಥಿತವಾದ ವಿವಿಧ ಶಾರೀರಿಕ ಭಂಗಿಗಳು. ಈ ಶಾರೀರಿಕ ಭಂಗಿಗಳು ಶರೀರ ಮತ್ತು ಮನಸ್ಸನ್ನು ಶುದ್ಧಗೊಳಿಸುತ್ತವೆ. ಯೋಗಾಸನಗಳು ರೋಗ ನಿರೋಧಕ ಹಾಗೂ ರೋಗಗಳನ್ನು ಶಮನ ಸಾಧನಗಳಾಗಿವೆ.

ಷಟ್ ಕ್ರಿಯೆಗಳು

ಇವು ನಮ್ಮ ಶರೀರದ ಒಳಗಿನ ಎಲ್ಲಾ ಅಂಗಾಂಗಗಳನ್ನು ಗ್ರಂಥಿಗಳನ್ನು ಶುದ್ಧಗೊಳಿಸಿ ಸದೃಢ ಮಾಡುತ್ತದೆ. ವಾತ, ಪಿತ್ತ, ಕಫಾಗಳ ದೋಷದಿಂದ ಬರುವಂತಹ ಎಲ್ಲಾ ವ್ಯಾದಿಗಳನ್ನು ಶಮನಗೊಳಿಸುತ್ತದೆ. ಪಂಚೇಂದ್ರಿಯಗಳ ಕ್ರಿಯಾ ಶಕ್ತಿಯನ್ನು ವೃದ್ದಿಸುತ್ತದೆ.

ಮುದ್ರೆಗಳು

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ

ಮುದ್ರೆಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಇನ್ನೊಂದು ಪ್ರಮುಖ ಅಸ್ತ್ರ. ಸದೃಢ ಕೈ ಬೆರಳುಗಳಿಂದ ಮೂಡಿಸಬಹುದಾದ ಸರಳ ಮುದ್ರೆಗಳಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಂದಿರುವಂತಹ ವ್ಯಾದಿಗಳನ್ನು ಸಹ ನಿರಂತರ ಅಭ್ಯಾಸದಿಂದ ಗುಣಪಡಿಸಬಹುದು.

ಮುದ್ರೆಗಳಿಂದಾಗುವ ಪ್ರಯೋಜನಗಳು:

  • ನೆನೆಪಿನ ಶಕ್ತಿ ಮತ್ತು ಏಕಾಗ್ರತೆ ವೃದ್ದಿಸುತ್ತದೆ.
  • ಒತ್ತಡ ಮತ್ತು ಕಿರಿಕಿರಿಯನ್ನು ತಗ್ಗಿಸುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ.
  • ಸದಾ ಸಂತೋಷ ಮತ್ತು ನೆಮ್ಮದಿ ಲಭಿಸುತ್ತದೆ.

ಪರಬ್ರಹ್ಮ ಚಿಕಿತ್ಸೆ ಮತ್ತು ಪರ್ಯಾಯ ಚಿಕಿತ್ಸೆ

ಆಧುನಿಕ ವಿಜ್ಞಾನ ಹೇಳುವಂತೆ ಅಣುಗಳು, ಕಣಗಳು, ಐಸೊಟೋಪ್ ಹಾಗೂ ಶಕ್ತಿಯ ಸಂಯೋಗ ಸ್ವರೂಪವೇ ವಸ್ತುಗಳ ಅಸ್ತಿತ್ವ. ಜೀವಿಗಳಲ್ಲಿ ಸಹ ಜೀವಕೋಶಗಳು, ಜೀವಕಣಗಳು ಅಂಗಾಂಗಗಳು ಹಾಗೂ ಶಕ್ತಿಯ ಸಂಯುಕ್ತ ಸ್ವರೂಪ ಭೌತಶಾಸ್ತ್ರದ ನಿಯಮ ಹೇಳುವಂತೆ ಶಕ್ತಿಯನ್ನು ಸೃಷ್ಟಿಸಲಾಗದು ಅಥವಾ ವಿನಾಶಗೊಳಿಸಲಾಗದು. ಆದರೆ ಅದರ ಸ್ವರೂಪವನ್ನು ಬದಲಾಯಿಸಬಹುದು. ಮಾನವ ಜೀವಿಗಳೂ ಸಹ ಶಕ್ತಿ ಸಂಯುಕ್ತ ಸ್ವರೂಪಗಳೇ ಆಗಿರುತ್ತದೆ. ಮಾನವ ಶಕ್ತಿ ವಲಯದಲ್ಲಿ ಆಗುವ ಏರುಪೇರು, ತೊಂದರೆಗಳು ಖಾಯಿಲೆಗಳಾಗಿ ಪರಿಣಾಮಗೊಳ್ಳುತ್ತದೆ. ವಿಶ್ವ ದಿವ್ಯ ಶಕ್ತಿಗೆ ಈ ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ. ವ್ಯಕ್ತಿಯ ಅಸ್ತಿತ್ವದ ಎಲ್ಲಾ ಸ್ತರದಲ್ಲೂ ಚಿಕಿತ್ಸೆಗೊಳಿಸಿ ಸಮತೋಲನ ಹಾಗೂ ಸಾಮರಸ್ಯ ಉಂಟು ಮಾಡುತ್ತದೆ ಹಾಗೂ ಸಹಜವಾಗಿ ವ್ಯಕ್ತಿ ಆರೋಗ್ಯವಾಗಿರುತ್ತಾನೆ.

ಸಮ್ಮೋಹನಾ ಚಿಕಿತ್ಸೆ

ವಿಧ್ಯಾರ್ಥಿಗಳ ನಾಳಿನ ಸ್ಪರ್ಧಾತ್ಮಕ ಯುಗಕ್ಕೊಂದು ಉಜ್ವಲವಾದ ವಿಶಿಷ್ಟ ಕಲೆಯೇ ಸಮ್ಮೋಹನಾ ಚಿಕಿತ್ಸೆ. (HYPNOSIS THERAPY ) ಇದರಿಂದ ಪರೀಕ್ಷಾ ಭಯ, ಕೀಳರಿಮೆ, ಅಂಜಿಕೆ, ತಳಮಳ, ಕುಗ್ಗುವಿಕೆ, ವೇದಿಕೆ ಭಯ, ಹಾಸಿಗೆಯಲ್ಲಿ ಮೂತ್ರ ವಿಸರ್ಜನ್ ಹಾಗೂ ಇತರ ದುಶ್ಚಟಗಳಿಂದ ವಿಮುಕ್ತರಾಗಿ ನಮ್ಮ ಜೀವನ ಶೈಲಿಯ ಬದಲಾವಣೆಯಾಗುತ್ತದೆ. ನಮ್ಮಲ್ಲಿ ಮನೋಶಕ್ತಿ, ವ್ಯಕ್ತಿತ್ವ ವಿಕಸನ, ಓದಿನಲ್ಲಿ ಪ್ರಗತಿ ಏಕಾಗ್ರತೆ, ನೆನೆಪಿನ ಶಕ್ತಿ ವ್ರುದ್ದಿಹೊಂಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆಯನ್ನು ಪಡೆಯಬಹುದು.

ಪೂರ್ವ ಜನ್ಮದ ಚಿಕಿತ್ಸೆ

ನಾವು ಕೇವಲ ಭೌತಿಕ ಶರೀರವಲ್ಲ ನಮ್ಮಲ್ಲಿ ಕಣ್ಣಿಗೆ ಗೋಚರಿಸದ ಪ್ರಾಣ ಶರೀರವು ಇದೆ. ನಮ್ಮ ಪ್ರಾಣ ಶರೀರದ ಹಿಂದೆ ಅನೇಕ ಜನ್ಮಗಳ ಅನುಭವಗಳು ಇದ್ದು, ಅವುಗಳು ಈ ಜನ್ಮಕ್ಕೂ ಸಹ ಬಂದಿರುತ್ತದೆ. ಪೂರ್ವಜನ್ಮದ ಚಿಕಿತ್ಸೆ (Past Life Therapy ) ಯಿಂದ ಎಲ್ಲಾ ತರಹದ ಹಳೆಯ ಮತ್ತು ಹೊಸ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ನಮ್ಮಲ್ಲಿರುವ ಭಯ, ದುಃಖ, ಅಂಜಿಕೆ, ಕೋಪ, ಗೊಂದಲ, ಒಂಟಿತನ, ಆತ್ಮಹತ್ಯೆಯ ಮನೋಯೋಚನೆ ಈ ಎಲ್ಲಾ ಮಾನಸಿಕ ಸಮಸ್ಯೆಗಳಿಂದ ಬಿಡುಗಡೆ ಪಡೆದು ಸಾವಿನ ಭಯದ ನಿವಾರಣೆಯಾಗುತ್ತದೆ. ಮನಸ್ಸಿನ ಗೊಂದಲಗಳ ನಿವಾರಣೆಯಾಗಿ ಆತ್ಮ ವಿಶ್ವಾಸ, ಅಂತಃ ಶಕ್ತಿ, ಅಂತಃ ಪ್ರಜ್ಞೆ. ತೇಜಸ್ಸು ವೃದ್ಡಿಯಾಗುತ್ತದೆ. ಸೋಲು ನಿವಾರಣೆಯಾಗುತ್ತದೆ. ವ್ಯಸನ ವಿಮುಕ್ತರಾಗಿ ಶಾಂತಿ ಪಡೆದು ಸಂತೋಷ, ಆರೋಗ್ಯ, ಸಂಪತ್ತುಗಳಿಸಿ ನೆಮ್ಮದಿಯಿಂದ ಮುಕ್ತಿಯನ್ನು ಪಡೆಯಬಹುದು.

ಸಂಪೂರ್ಣ ಆರೋಗ್ಯ

ವಿಶ್ವ ಆರೋಗ್ಯ ಸಂಸ್ಥೆ (W .H .O ) ಹೇಳಿರುವಂತೆ ವ್ಯಕ್ತಿಯಲ್ಲಿ ಭೌತಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ಸಮತೋಲನ ಹಾಗೂ ಸಾಮರಸ್ಯದ ಸ್ಥಿತಿಯೇ ಸಂಪೂರ್ಣ ಆರೋಗ್ಯ. ಈ ಮಾರ್ಗದಲ್ಲಿ ಯೋಗ ಆತ್ಮ ಉಪಚಾರ ಅಥವಾ ಆತ್ಮ ದರ್ಶನದ ಶ್ರೇಷ್ಠ ಆಧ್ಯಾತ್ಮಿಕ ವಿದ್ಯೆಯಾಗಿದೆ. ಯೋಗ ಕೇವಲ ವ್ಯಕಲ್ಪಿಕ ಪರೀಕ್ಷೆ ಪದ್ಧತಿ ಮಾತ್ರವಲ್ಲ ಅದು ಪ್ರಯೋಗ ಪರಿಣಾಮಗಳ ಮೇಲೆ ಆಧಾರಿತವಾಗಿರುವ ಒಂದು ಅಭೂತ ಪೂರ್ವ ಪ್ರಯೋಗ ಶಾಲೆ. ನಿರಂತರ ಯೋಗ ಸಾಧನೆಯಿಂದ ಎಲ್ಲಾ ರೋಗಗಳ ಮೂಲ ಕಾರಣಗಳನ್ನು ನಿರ್ಮೂಲನೆ ಮಾಡಿ ಒಳಗಿನಿಂದ ಆರೋಗ್ಯ ಪ್ರದಾನ ಮಾಡುತ್ತದೆ ಹಾಗೂ ಜನ್ಮ ಜನ್ಮಾಂತರಗಳ ಸಂಚಿತ ಅಶುಭ ಸಂಸ್ಕಾರ ಅಥವಾ ಪಾಪ ಪರಿಹಾರವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (W .H .O ) ಯಾ ಧ್ಯೇಯವನ್ನು ಸಾರ್ಥಕಗೊಳಿಸುವ ಸಾಧನವಾಗಿದೆ ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ.

ಮೂಲ: ರಜತ ದರ್ಪಣ

ಕೊನೆಯ ಮಾರ್ಪಾಟು : 7/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate