অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮೈಸೂರು ಸಮೀಪದ ಪ್ರವಾಸಿ ತಾಣಗಳು

ಮೈಸೂರು ಸಮೀಪದ ಪ್ರವಾಸಿ ತಾಣಗಳು

ಮುತ್ತಿನ ಕೆರೆಯ ತೊಣ್ಣೂರು

 

ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಎತ್ತಿ ತಂದೆ ಎಲ್ಲಿಂದ…. ಸವಿಸಕ್ಕರೆಯ ನಾಡು ಮಂಡ್ಯ ಜಿಲ್ಲೆ. ಇಲ್ಲಿನ ಜನ ಕಬ್ಬಿನಂತೆ ಒರಟಾದರೂ ಕಬ್ಬಿನ ಒಳಗಿನ ಸವಿರಸದಂತೆ ಮೃದುಮನಸ್ಸಿನವರು, ಹೃದಯಶ್ರೀಮಂತಿಕೆಯವರು. ಬರುವ ಸಂಕಷ್ಟಗಳನ್ನು ಎದೆಗುಂದದೆ ಛಲದಿಂದ ಎದುರಿಸಿ ಹಿಮ್ಮೆಟ್ಟಿಸಬಲ್ಲವರು. ಭತ್ತ ಕಬ್ಬುಗಳ ನಾಡಾದ ಮಂಡ್ಯ ಪ್ರೇಕ್ಷಣೀಯ ಸ್ಥಳಗಳ, ಧಾರ್ಮಿಕಕ್ಷೇತ್ರಗಳ ನೆಲೆವೀಡು. ಕೃಷ್ಣರಾಜಸಾಗರ ಜಲಾಶಯ, ಜಲಾಶಯದ ಕೆಳಗಿನ ಬೃಂದಾವನ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ, ಮೇಲುಕೋಟೆಯ ಚೆಲುವನಾರಾಯಣಸ್ವಾಮಿ.

 

ರಂಗನತಿಟ್ಟು ಪಕ್ಷಿಧಾಮ, ಗಗನಚುಕ್ಕಿ – ಭರಚುಕ್ಕಿ ಒಂದೇ ಎರಡೇ ಹೇಳುತ್ತಾ ಹೋದರೆ ಸಾಲು ಸಾಲು ಇದೆ. ಈ ನಿಟ್ಟಿನಲ್ಲಿ ಬರುವುದೇ ಕೆರೆ ತೊಣ್ಣೂರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಪಾಂಡವಪುರ ಪಟ್ಟಣಕ್ಕೆ 9 ಕಿಮೀ. ದೂರದಲ್ಲಿರುವ ಒಂದು ಹಳ್ಳಿಯೇ ಕೆರೆ ತೊಣ್ಣೂರು. ಹೊಯ್ಸಳರ ಕಾಲದಲ್ಲಿ ಪ್ರಸಿದ್ಧವಾದ ಅಗ್ರಹಾರವಾಗಿ ಬೆಳೆಯಿತು. ತೊಂಡನೂರು, ತೊಂಡನೂರಗ್ರಹಾರ, ಯಾದವಪುರ, ಯಾದವನಾರಾಯಣ ಚತುರ್ವೇದಿಮಂಗಳ ಎಂದು ಮುಂತಾಗಿ ಶಾಸನಗಳಲ್ಲಿ ಈ ಊರನ್ನು ಹೆಸರಿಸಿದೆ. ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಈ ಊರಿನಲ್ಲಿ ತುಪ್ಪಲೇಶ್ವರವೆಂಬ ಶಿವದೇವಾಲಯವೊಂದನ್ನು ಕಟ್ಟಿಸಿದಳೆಂದೂ ಅದಕ್ಕೆ ವಿಷ್ಣುವರ್ಧನ ದತ್ತಿ ಬಿಟ್ಟಿದ್ದುದಾಗಿಯೂ ತಿಳಿದುಬರುತ್ತದೆ.

ವಿಷ್ಣುವರ್ಧನ ಯುವರಾಜನಾಗಿದ್ದಾಗ ಬಹುಶ: ಇಲ್ಲಿಂದ ರಾಜ್ಯಭಾರ ಮಾಡುತ್ತಿದ್ದ. ಅವನು ಇದನ್ನು ಅಗ್ರಹಾರವಾಗಿ ಪರಿವರ್ತಿಸಿದ. ಬಹುಶ: ಅವನು ನಿರ್ಮಿಸಿದ ಪಂಚನಾರಾಯಣ ದೇವಾಲಯಗಳಲ್ಲಿ ಇಲ್ಲಿಯ ಲಕ್ಷ್ಮೀನಾರಾಯಣ ದೇವಾಲಯವೂ ಒಂದಾಗಿರಬೇಕು. ರಾಮಾನುಜಾಚಾರ್ಯರು ವಿಷ್ಣುವರ್ಧನನನ್ನು ಸಂಧಿಸಿ ಅವನನ್ನು ಜೈನಮತದಿಂದ ವೈಷ್ಣವಮತಕ್ಕೆ ಮತಾಂತರಗೊಳಿಸಿದುದು ಇಲ್ಲಿಯೇ ಎಂಬ ಒಂದು ಐತಿಹ್ಯವಿದೆ. ಒಂದನೆಯ ನರಸಿಂಹನ ಕಾಲದಲ್ಲಿ ಕೃಷ್ಣನ ದೇವಾಲಯವನ್ನೂ ಬಹುಶ: ಕೈಲಾಸೇಶ್ವರ ದೇವಾಲಯವನ್ನೂ ಇಲ್ಲಿ ನಿರ್ಮಿಸಲಾಯಿತು. ಅಲ್ಲದೆ ನರಸಿಂಹನ ದೇವಾಲಯವೂ ಈ ಕಾಲದಲ್ಲಿಯೇ ನಿರ್ಮಿಸಿರಬಹುದಾದ ಕಟ್ಟಡ. ಇಮ್ಮಡಿ ಬಲ್ಲಾಳನ ಕಾಲದಲ್ಲಿ ಈ ದೇವಾಲಯಗಳನ್ನು ವಿಸ್ತರಿಸಲಾಯಿತು.

ಮುಂದೆ ಹೊಯ್ಸಳ ರಾಜ್ಯದ ಕೊನೆಗಾಲದಲ್ಲಿ ಮುಮ್ಮಡಿ ಬಲ್ಲಾಳ ಸ್ವಲ್ಪ ಕಾಲ ಇಲ್ಲಿ ತಂಗಿದ್ದನೆಂಬ ಹೇಳಿಕೆಯೂ ಉಂಟು. ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲೂ ಇಲ್ಲಿಯ ದೇವಾಲಯಗಳಿಗೆ ಪಾತಾಳಾಂಕಣವೇ ಮೊದಲಾದ ಭಾಗಗಳನ್ನು ಸೇರಿಸಲಾಗಿದೆ. ಹೊಯ್ಸಳರ ಕಾಲದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ನಿರ್ಮಿತವಾದ ದ್ರಾವಿಡ ಶೈಲಿಯ ದೇವಾಲಯಗಳಿಗೆ ಇಲ್ಲಿಯ ದೇವಾಲಯಗಳು ಮಾದರಿಗಳಾಗಿವೆ. ಗರ್ಭಗೃಹ, ಸುಕನಾಸಿ ಮತ್ತು ನವರಂಗಗಳನ್ನುಳ್ಳ ಲಕ್ಷ್ಮೀನಾರಾಯಣನ ಮೂಲ ಗುಡಿಯ ಗೋಡೆಗಳನ್ನು ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಲಾಗಿದೆ. ಹೊರ ಗೋಡೆಗಳಲ್ಲಿ ಚೌಕ ಅರೆಗಂಬಗಳೂ, ಆಳವಿಲ್ಲದ ಗೂಡುಗಳೂ, ಮೇಲೆ ಪಿರಮಿಡ್ ಆಕೃತಿಯ ಅರೆಗೋಪುರಗಳೂ ಇವೆ.

ಬುಡದಲ್ಲಿ ಅಷ್ಟಕೋನಾಕೃತಿಯ ಅಥವಾ ದುಂಡಾದ ದಿಂಡುಗಳಿವೆ. ನವರಂಗದಲ್ಲಿ ತಿರುಗಣೆಯಲ್ಲಿ ಕಡೆದು ಹೊಳಪುಕೊಟ್ಟು ಮಾಡಿರುವ ಹೊಯ್ಸಳ ರೀತಿಯ ಬಳಪದಕಲ್ಲಿನ ಕಂಬಗಳಿವೆ. ಇವು ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳಂತಿವೆ. ದ್ರಾವಿಡ ಹೊಯ್ಸಳ ಶೈಲಿಗಳ ಮಿಶ್ರಣವನ್ನು ಈ ದೇವಾಲಯದಲ್ಲಿ ಕಾಣಬಹುದು. ಮುಂದೆ ಇರುವ ದೊಡ್ಡದಾದ ಮುಖಮಂಟಪ ಮತ್ತು ಪಾತಾಳಾಂಕಣಗಳು, ಸುತ್ತಲೂ ಎತ್ತರವಾಗಿ ನಿರ್ಮಿತವಾಗಿರುವ ಎರಡು ಸುತ್ತು ಪ್ರಾಕಾರಗಳು ವಿಜಯನಗರ ಮತ್ತು ಮೈಸೂರರಸರ ಕಾಲದವು. ಮೂಲ ದೇವಾಲಯದ ಪಕ್ಕದಲ್ಲಿಯೇ ಇರುವ ಲಕ್ಷ್ಮೀದೇವಿಯ ಗುಡಿಯನ್ನು ವಿಷ್ಣುವರ್ಧನನ ಕಾಲದಲ್ಲಿ ಸುರಿಗೆಯ ನಾಗಯ್ಯನೆಂಬ ದಂಡನಾಯಕ ಕಟ್ಟಿಸಿದುದಾಗಿ ಶಾಸನವೊಂದರಿಂದ ತಿಳಿದುಬರುತ್ತದೆ.

ಭಾಗಮಂಡಲ

 

ಭಾರತದಲ್ಲಿನ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳದಲ್ಲಿ, ಕಾವೇರಿಗೆ ಎರಡು ಉಪನದಿಗಳು ಬಂದು ಸೇರಿಕೊಳ್ಳುತ್ತವೆ; ಕನ್ನಿಕೆ ಮತ್ತು ಕಾಲ್ಪನಿಕ ನದಿಯಾದ ಸುಜ್ಯೋತಿ ಇವೇ ಆ ಎರಡು ನದಿಗಳಾಗಿವೆ. ಒಂದು ನದಿ ಸಂಗಮಸ್ಥಾನವಾಗಿ ಇದು ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. 1785–1790ರ ಅವಧಿಯಲ್ಲಿ, ಸದರಿ ಪ್ರದೇಶವು ಟಿಪ್ಪು ಸುಲ್ತಾನ್‌‌ನಿಂದ ಆಕ್ರಮಿಸಲ್ಪಟ್ಟಿತು.

ಆತ ಭಾಗಮಂಡಲವನ್ನು ಅಫ್ಸಲಾಬಾದ್ ಎಂಬುದಾಗಿ ಮರು-ನಾಮಕರಣ ಮಾಡಿದ. 1790ರಲ್ಲಿ ದೊಡ್ಡ ವೀರ ರಾಜೇಂದ್ರ ರಾಜನು ಭಾಗಮಂಡಲವನ್ನು ಒಂದು ಸ್ವತಂತ್ರ ಕೊಡಗು ರಾಜ್ಯದೊಳಗೆ ಮರಳಿ ಪಡೆದ. ಭಾಗಮಂಡಲವು ಮಡಿಕೇರಿ ಜಿಲ್ಲಾ ಕೇಂದ್ರದಿಂದ ಸುಮಾರು 33 ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ ಮತ್ತು ಇದು ಮಡಿಕೇರಿ, ವಿರಾಜಪೇಟೆಗಳಿಂದ ಹಾಗೂ ಕೇರಳದಲ್ಲಿನ ಸನಿಹದ ಸ್ಥಳಗಳಿಂದ ಬರುವ ಸುಸಜ್ಜಿತ ರಸ್ತೆಗಳಿಂದ ಸಂಪರ್ಕಿಸಲ್ಪಟ್ಟಿದೆ. ಈ ಎಲ್ಲಾ ಮಾರ್ಗಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಲಭ್ಯವಿವೆ. ಭಾಗಮಂಡಲದ ಮೇಲ್ಮಟ್ಟದಲ್ಲಿದ್ದುಕೊಂಡು ಆ ಪ್ರದೇಶವನ್ನು ಮೇಲಿನಿಂದ ಕಣ್ಣುಹಾಯಿಸಿ ನೋಡುವಂತಿರುವ ಥಾವೂರ್‌‌ ಪರ್ವತವು ಒಂದು ಅತ್ಯುನ್ನತ ಶಿಖರವಾಗಿದೆ. ಸನಿಹದಲ್ಲಿರುವ ಕೋಪಟ್ಟಿ ಪರ್ವತವು ಇದರ ಅವಳಿ ಶಿಖರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಈ ಎರಡೂ ಶಿಖರಗಳು ಶೋಲಾ ಅರಣ್ಯಶ್ರೇಣಿಯ ಸಮ್ಮೋಹನಗೊಳಿಸುವ ಸೌಂದರ್ಯವನ್ನು ಆಸ್ವಾದಿಸಲು ಬಯಸುವ ಯಾರಿಗೇ ಆದರೂ ಅತ್ಯುತ್ಕೃಷ್ಟವಾದ ಚಾರಣ ಮಾರ್ಗಗಳಾಗಿ ಪರಿಣಮಿಸುತ್ತವೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :153.2ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 152ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 164ಕಿಲೋ ಮೀಟರ್

ಬಂಡೀಪುರ

ಮೈಸೂರು ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಒಂದು ಗುಂಡ್ಲು ಗ್ರಾಮ. ಪೇಟೆಯ ದಕ್ಷಿಣಕ್ಕೆ 19 ಕಿಮೀ ದೂರದಲ್ಲಿದೆ. ಜನಸಂಖ್ಯೆ 371 (1971). ಪ್ರಾಥಮಿಕ ಶಾಲೆ, ಅಂಚೆ, ದೂರವಾಣಿ ಮತ್ತು ವಿದ್ಯುತ್ ಸೌಲಭ್ಯಗಳಿವೆ. ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರದಿಂದಾಗಿ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಬಂಡೀಪುರ ವನ್ಯಮೃಗ ಸಂರಕ್ಷಣಾ ಕೇಂದ್ರ ಸುಮಾರು 57 ಚಕಿಮೀ ವಿಸ್ತಾರವಾಗಿದೆ. ಇದು 1941 ರಿಂದ ವೇಣುಗೋಪಾಲ ವನ್ಯಮೃಗ ಉದ್ಯಾನವನದ ಒಂದು ಭಾಗವಾಗಿ ಪರಿಗಣಿತವಾಗಿದೆ. ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ ಮೈಸೂರು ನಗರದ ದಕ್ಷಿಣಕ್ಕೆ 80 ಕಿಮೀ ದೂರದಲ್ಲಿದ್ದು, ಸಮುದ್ರಮಟ್ಟಕ್ಕಿಂತ 1,022 ರಿಂದ 1,454 ಮೀ ಎತ್ತರದಲ್ಲಿದೆ. ವರ್ಷದ ಸರಾಸರಿ ಮಳೆ 890 ಮಿಮಿ, ಉಷ್ಣ 110-380 ಸೆಲ್ಸಿಯಸ್ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಧಿಕ ಉಷ್ಣತೆ. ಮಳೆ ಕಡಿಮೆಯಾದ್ದರಿಂದ ಬಂಡೀಪುರದ ಕಾಡು ದಟ್ಟವಾಗಿಲ್ಲ. ಸ್ವಾಭಾವಿಕವಾಗಿ ಎಲೆ ಉದುರುವ ಮರದ ಕಾಡು ಇಲ್ಲಿಯ ಮುಖ್ಯ ಸಸ್ಯವರ್ಗ.

ಸವನ್ನ ಕಾಡಿನಲ್ಲಿರುವ ಹಾಗೆ ಇಲ್ಲಿ ತೇಗ, ಮತ್ತಿ, ದಿಂಡಲು, ಹೊನ್ನೆ, ಜಾಲಾರಿ, ಯತಿಗ, ಬೀಟೆ, ತಡಸಲು, ನೇರಳೆ, ಬೂರುಗ ಮತ್ತು ತಾರೆ ಮರಗಳು ಅಲ್ಲಲ್ಲಿ ಗುಂಪಾಗಿ ಬೆಳೆದು ಕಾಡಿನ ಬಹುಭಾಗವನ್ನು ಆಕ್ರಮಿಸಿವೆ. ಮರದ ಗುಂಪುಗಳ ಮಧ್ಯಭಾಗದಲ್ಲಿ ಅಖಂಡವಾಗಿ ಬೆಳೆದಿರುವ ಆನೆಹುಲ್ಲನ್ನು ಕಾಣಬಹುದು. ಇಲ್ಲಿ ನೀರಿನ ಸಣ್ಣ ಬುಗ್ಗೆಗಳು ಹೇರಳವಾಗಿವೆ.

ನೈರುತ್ಯ ಶೀತಮಾರುತ ಬರುವ ಮುನ್ನವೇ ಅವು ಬತ್ತಿಹೋಗುತ್ತವೆ. ಸದಾ ನೀರು ತುಂಬಿ ಹರಿಯುವ ಕೆಕ್ಕನ ಹಳ್ಳವೇ ಕಾಡಿನ ಮೃಗಗಳ ನೀರಿಗೆ ಆಧಾರ, ಈ ನದಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳನ್ನು ಬೇರ್ಪಡಿಸುವ ಗಡಿರೇಖೆಯಂತಿದೆ. ಕಾಡಿನಲ್ಲಿರುವ ಕೆಸರುಗುಂಡಿಗಳು ಕಾಡಾನೆಗಳಿಗೆ ಬೇಸಗೆಯಲ್ಲಿ ಮರಳು ಗಾಡಿನ ಓಯಸಿಸ್ ಇದ್ದಹಾಗೆ. ಆದುದರಿಂದಲೇ ಕಾಡಾನೆಗಳು ಬಂಡೀಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಕೆಸರುಗುಂಡಿಯ ಮತ್ತು ಸಣ್ಣ ಝರಿಗಳ ಅಂಚಿನಲ್ಲಿ ದಟ್ಟವಾಗಿ ಬೆಳೆದಿರುವ ಬಿದಿರುಮೆಳೆ ಸಣ್ಣ ಪ್ರಾಣಿಗಳಿಗೆ ವಾಸಸ್ಥಾನ.

ವನ್ಯಮೃಗಗಳು ನೆಕ್ಕಲು ಬೇಕಾಗುವ ಉಪ್ಪು ಊರಿದ ನೆಲ ಈ ಕಾಡಿನಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ. ನಾಲ್ಕನೆಯ ಪಂಚವಾಷರ್ಿಕ ಯೋಜನೆಯ ಅಂತಿಮ ವರ್ಷ ಮತ್ತು ಐದನೆಯ ಪಂಚವಾರ್ಷಿಕ ಪೂರ್ಣಾವಧಿಗೆ ಹಬ್ಬುವ ಹುಲಿರಕ್ಷಣೆ ಯೋಜನೆಯ ಕಾರ್ಯಕ್ರಮದಲ್ಲಿ ಭಾರತದ ಒಂಬತ್ತು ಹುಲಿ ರಕ್ಷಣಾಕೇಂದ್ರಗಳಲ್ಲಿ ಬಂಡೀಪುರ ಅಭಯಾರಣ್ಯವೂ ಸೇರಿದೆ.

ಬಂಡೀಪುರದ ವನ್ಯ ಮೃಗಗಳಲ್ಲಿ ಸಾಮಾನ್ಯವಾಗಿ ನಾವು ಕಾಣುವುದು ಆನೆ, ಕಾಡು ಕೋಣ, ಚುಕ್ಕೆಜಿಂಕೆ, ಬಗಳುವ ಜಿಂಕೆ, ಕಾಡುಹಂದಿ, ಕಾಡುನಾಯಿ, ನರಿ, ಮುಂಗುಸಿ, ಕಪ್ಪು ಮುಖದ ಮುಸುವ. ಆಗಾಗ ಕಾಣಿಸಿಕೊಳ್ಳುವ ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡುಕುರಿ, ಕರಡಿ, ಕಾಡುಬೆಕ್ಕು ಮುಖ್ಯವಾದವು. ಜೊತೆಗೆ ನವಿಲು, ಹಸಿರು ಪಾರಿವಾಳ, ಮುಳ್ಳುಹಂದಿ, ಹೆಬ್ಬಾವು, ನಾಗರಹಾವು, ಹಸಿರು ಹಾವು, ಮಂಡಲದ ಹಾವು ಮೊದಲಾದವನ್ನು ಕಾಣಬಹುದು. ವನ್ಯಮೃಗಗಳನ್ನು ನೋಡುವುದಕ್ಕೆ ಮಾರ್ಚಿಯಿಂದ ಆಗಸ್ಟ್ ತಿಂಗಳುಗಳು ಒಳ್ಳೆಯ ಕಾಲ. ಪ್ರವಾಸೀ ಕೇಂದ್ರವಾಗಿ ಅಭಿವೃದ್ಧಿಹೊಂದಿರುವ ಬಂಡೀಪುರದಲ್ಲಿ ತಂಗಲು ಪ್ರವಾಸೀ ಮಂದಿರ ಇದೆ. ವನ್ಯಮೃಗಗಳನ್ನು ನೋಡಲು ಸಾರಿಗೆ ಮತ್ತು ಅರಣ್ಯ ಅಧಿಕಾರಿಗಳ ಸಹಾಯ ದೊರಕುತ್ತದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :77.7ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 78.9ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 68ಕಿಲೋ ಮೀಟರ್

ನಾಗರಹೊಳೆ

ಕರ್ನಾಟಕದ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆಯ ಆಗ್ನೇಯಕ್ಕೆ 61 ಕಿ.ಮೀ. ದೂರದಲ್ಲಿದೆ. ವಿರಾಜಪೇಟೆ ತಾಲ್ಲೂಕಿನ ಆಗ್ನೇಯದಲ್ಲಿ ಹುಟ್ಟಿ ಪೂರ್ವಕ್ಕೆ ಹರಿದು, ಮೈಸೂರು ಜಿಲ್ಲೆಯಲ್ಲಿ ಕಪಿಲಾನದಿಯನ್ನು ಸೇರುವ ನಾಗರಹೊಳೆಯಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಕಲ್ಲಹಳ್ಳಿ, ತಿತ್ತಿಮತ್ತಿ, ನಾಗರಹೊಳೆ ಅರಣ್ಯಪ್ರದೇಶಗಳನ್ನು ಒಳಗೊಂಡಿದೆ.

ಇದರ ಒಟ್ಟು ವಿಸ್ತೀರ್ಣ 288 ಚ.ಮೀ. ಇದು ಸಮುದ್ರ ಮಟ್ಟದಿಂದ ಸುಮಾರು 573 ಕಿ.ಮೀ. ಎತ್ತರದಲ್ಲಿದೆ. ಇದರ ದಕ್ಷಿಣದಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಾಕನಕೋಟೆ ಅರಣ್ಯವುಂಟು. ಇದರ ಉತ್ತರ ಭಾಗವೆಲ್ಲ ದಟ್ಟವಾದ ಅರಣ್ಯ ವೃಕ್ಷಗಳಿಂದ (ತೇಗ, ಬೀಟೆ, ಕರಿಮತ್ತಿ, ನಂದಿ, ಶ್ರೀಗಂಧ ಮುಂತಾದವು ಇಲ್ಲಿನ ಪ್ರಮುಖ ವೃಕ್ಷ ಜಾತಿಗಳು) ಕೂಡಿದೆಯಾದರೆ, ದಕ್ಷಿಣದಲ್ಲಿ ಕಾಡುಪ್ರಾಣಿಗಳಿಗೆ ಬೇಕಾಗುವ ಹುಲ್ಲುಗಾವಲು ಉಂಟು. ವರ್ಷದ ಬಹು ಪಾಲು ಎಲ್ಲ ಕಾಲಗಳಲ್ಲಿಯೂ ವನ್ಯಜೀವಿಗಳಿಗೆ ಇಲ್ಲಿ ಆಹಾರ ಸೌಲಭ್ಯವಿದೆ.

ಹಾಗೇ ನೀರಿನ ಸೌಕರ್ಯವೂ ಪ್ರಾಣಿಗಳಿಗೆ ಪ್ರಿಯವಾದ ಉಪ್ಪುನೆಕ್ಕುಗಳೂ (ಸಾಲ್ಟ್ ಲಿಕ್ಸ್) ಇವೆ. ಈಗ ಇದಕ್ಕೆ ರಾಜೀವಗಾಂಧಿ ಅಭಯಾರಣ್ಯ ಎಂದು ಹೆಸರು ಕೊಡಲಾಗಿದೆ. ಇಲ್ಲಿನ ವನ್ಯಪ್ರಾಣಿಗಳಲ್ಲಿ ಮುಖ್ಯವಾದವು ಹುಲಿ, ಚಿರತೆ, ಕರಡಿ, ಕಾಡು ನಾಯಿ, ಆನೆ, ಕಾಡೆಮ್ಮೆ, ಜಿಂಕೆ, ಕಾಡುಬೆಕ್ಕು, ಕೆಂಪು ಅಳಿಲು, ಹಾರುವ ಅಳಿಲು, ಕೋತಿ, ನರಿ, ಮುಂಗುಸಿ ಮುಂತಾದವು. ಕಾಕನಕೋಟೆಯ ಕಡೆ ಬಂದರೆ, ಅಪರೂಪದ ನಾಲ್ಕು ಕೊಂಬಿನ ಹುಲ್ಲೆ ಕಾಣದೊರೆಯುವುದು. ನಾಗರಹೊಳೆಯ ಪಕ್ಷಿ ಸಂಪತ್ತು ಕೂಡ ವೈವಿಧ್ಯಮಯ. ನವಿಲು, ಕಾಡು ಕೋಳಿ, ಗೌಜಲು, ಭೀಮರಾಜ, ಮರಕುಟಿಗ, ಪ್ಯಾರಡೈಸ್ ಫ್ಲೈ ಕ್ಯಾಚರ್, ಅರಷಿಣ ಬಣ್ಣದ ಕೊಕ್ಕುಳ್ಳ ಮಂಗಟ್ಟೆ (ಹಾರ್ನ್ ಬಿಲ್), ಕಾಮಾಲೆಹಕ್ಕಿ (ಓರಿಯೋಲ್),

ಬಾಬಾಬುಡನ್ ಗಿಣಿ, ಬೆಟ್ಟದ ಗೊರವಂಕ (ಹಿಲ್ಮೈನ), ಬುಲ್ಬುಲ್, ಸೂರಕ್ಕಿ (ಸನ್ ಬರ್ಡ್) – ಇವು ಇಲ್ಲಿನ ಮುಖ್ಯ ಪಕ್ಷಿಗಳು. ಅಂತೆಯೇ ವಿವಿಧ ರೀತಿಯ ಹಾವುಗಳು (ಹೆಬ್ಬಾವು, ನಾಗರಹಾವು, ಕಾಳಿಂಗಸರ್ಪ ಇತ್ಯಾದಿ) ಇಲ್ಲಿ ಉಂಟು. ಇಲ್ಲಿನ ಪ್ರಾಣಿ ಸಂಪತ್ತನ್ನು ಹತ್ತಿರದಿಂದ ನೋಡುವ ಅನುಕೂಲತೆಗಾಗಿ ಎತ್ತರದ ವೀಕ್ಷಣ ಗೋಪುರಗಳನ್ನು ಕಟ್ಟಿದ್ದಾರಲ್ಲದೇ ಅಭಯಾರಣ್ಯವನ್ನು ಸುತ್ತುವ ಸಲುವಾಗಿ ವಾಹನ ಸೌಕರ್ಯವನ್ನೂ ಕಲ್ಪಿಸಲಾಗಿದೆ. ಸಾಕಿದ ಆನೆಗಳ ಮೇಲೆ ಪ್ರವಾಸಿಗರನ್ನು ಒಯ್ಯುವ ಅನುಕೂಲತೆಯೂ ಉಂಟು. ಹಾಗೇ ಇಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ, ಪ್ರಾಣಿಗಳಿಗೆ ಸಂಬಂಧಿಸಿದ ಒಳ್ಳೆಯ ಗ್ರಂಥ ಭಂಡಾರವಿದೆ. ಇವೆಲ್ಲಾ ಕಾರಣಗಳಿಂದಾಗಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಲು ಜನಪ್ರಿಯ ತಾಣವಾಗಿದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :89.2ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 88ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 93ಕಿಲೋ ಮೀಟರ್

ಕೃಷ್ಣರಾಜಸಾಗರ

ಕಾವೇರಿನದಿಗೆ ಅಡ್ಡವಾಗಿ ಅಣೆಕಟ್ಟು ಕಟ್ಟಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಹತ್ವಾಕಾಂಕ್ಷೆ ಫಲವಾಗಿ ಭಾರತ ರತ್ನ ಮೋಕ್ಷಗೊಂಡ ವಿಶ್ವೇಶ್ವರಯ್ಯನವರ ಯೋಜನೆಯಾಗಿ ಸುಮಾರು 80 ವರ್ಷಗಳ ಹಿಂದೆ ಈ ಅಣೆಕಟ್ಟು ನಿರ್ಮಿಸಲಾಯಿತು. ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನಗಳ ಜೀವನಾಡಿ ಹಾಗೂ ಜೀವನದಿಯಾದ ಕಾವೇರಿಗೆ ಕಟ್ಟಿರುವ ಈ ಅಣೆಕಟ್ಟೆಯ ತಳ ಭಾಗದಲ್ಲಿ ಪ್ರಖ್ಯಾತ ಬೃಂದಾವನ ಉದ್ಯಾನ, ಸಂಗೀತ ಕಾರಂಜಿಗಳಿದ್ದು ದೇಶವಿದೇಶಗಳ ಪ್ರವಾಸಿಗರು ಇಲ್ಲಿಗೆ ದಿನನಿತ್ಯ ಭೇಟಿ ನೀಡುತ್ತಾರೆ. ಇದು ಮೈಸೂರಿಗೆ 15 ಕಿಲೋಮೀಟರ್ ದೂರದಲ್ಲಿದೆ.

 

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :20.2ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 19ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 30ಕಿಲೋ ಮೀಟರ್

ಶಿವನ ಸಮುದ್ರ

ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು. ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು. ಈ ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರಿವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ.

ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ತೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ. ಏಷ್ಯಾದಲ್ಲೇ ಪ್ರಥಮವಾಗಿ ವಿದ್ಯುತ್ ಉತ್ಪಾದಿಸಿದ ಶಿವನಸಮುದ್ರ ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ. ಕೋಲಾರ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್ ಒದಗಿಸುವ ಸಲುವಾಗಿ ಶಿಂಷಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಆಗಸ್ಟ್ 6, 1904ರಲ್ಲಿ ವಿದ್ಯುಕ್ತವಾಗಿ ಆರಂಭವಾಯಿತು. ಶಿವನಸಮುದ್ರದಲ್ಲಿ ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾದದ್ದು ಮತ್ತು ಈ ಕುರಿತ ಯೋಜನೆ ಶೇಷಾದ್ರಿ ಅಯ್ಯರ್ ಅವರ ದಿವಾನಗಿರಿಯಲ್ಲಿ 1900ರ ವರ್ಷದಲ್ಲಿ ಕಾರ್ಯರೂಪಕ್ಕೆ ಬಂದದ್ದೂ ಚರಿತ್ರೆಯಲ್ಲಿ ಸ್ಪಷ್ಟವಾಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಇದೆಲ್ಲ ಬರೀ ಬುರುಡೆ ಎಂದು ಹೇಳಿದರು. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ಕನಕಪುರದ ಕಾನಕಾನಹಳ್ಳಿ ಎಲೆಕ್ಟ್ರಿಕ್ ಗ್ರಿಡ್ ಗೆ ಬಂದು ನಂತರ ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿಒಂದು ಸೆಕೆಂಡ್ ಕಾಲ ಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.

”ಶಿವನ ಸಮುದ್ರದಿಂದ 1902ರ ವರ್ಷದಲ್ಲೇ ಕೋಲಾರ ಚಿನ್ನದ ಗಣಿಗೆ, 1905ರ ವರ್ಷದಲ್ಲಿ ಬೆಂಗಳೂರು ನಗರಕ್ಕೆ ಮತ್ತು 1906ರಲ್ಲಿ ಮೈಸೂರು ನಗರಕ್ಕೆ ವಿದ್ಯುತ್ ಹರಿದು ಬಂದದ್ದು ವಿಶೇಷವಾದುದಾಗಿದೆ. ಈ ಭಾಗದಲ್ಲಿ ಗಣಿಗಾರಿಕೆಯಿಂದ ಪ್ರಾಕೃತಿಕ ಸೌಂಧರ್ಯಕ್ಕೆ ಅಪಾಯ ಒದಗುತ್ತಿದ್ದ ಸಂದರ್ಭದಲ್ಲಿ 2006ರ ವರ್ಷದಲ್ಲಿ ಹೈಕೋರ್ಟ್ ನ್ಯಾಯಪೀಠ ಅಂತಹ ಚಟುವಟಿಕೆಗಳಿಗೆ ತಡೆ ಹಾಕಿದ್ದುದು ಸ್ತುತ್ಯಾರ್ಹವಾಗಿದೆ. ಏಷ್ಯಾದಲ್ಲೇ ಪ್ರಥಮವಾಗಿ ವಿದ್ಯುತ್ ಪಡೆದ ಅಂದಿನ ನಮ್ಮ ಭವ್ಯ ನಾಡು, ಇನ್ನೂ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಇಂದೂ ಕೂಡಾ ವಿದ್ಯುತ್ ಖೋತಾಗಳಿಗೆ ತುತ್ತಾಗುತ್ತಿರುವುದು, ಅಂದಿನ ರಾಜರ ಕಾಲದಲ್ಲಿದ್ದ ಪ್ರಗತಿ ಪರ ಕಾಳಜಿಗಳಿಗೂ, ಇಂದಿನ ರಾಜಕಾರಣಿಗಳ ಸಮಾಜಾಭಿವೃದ್ಧಿಗೆ ವಿಮುಖವಾದ ಗಣಿಗಾರಿಕೆ ಪರವಾಗಿನ ದುಷ್ಟ ನೀತಿಗಳಿಗೂ ಇರುವ ವ್ಯತ್ಯಾಸವನ್ನು ನಿಚ್ಚಳವಾಗಿ ಪ್ರತಿಬಿಂಬಿಸುತ್ತಿವೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :75ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 76.2ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 83ಕಿಲೋ ಮೀಟರ್

ಬಿಳಿಗಿರಿರಂಗನ ಬೆಟ್ಟ

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯ ಪ್ರಕೃತಿ ಎಂದೆಂದೂ ಮನಕ್ಕೆ ಮುದ ನೀಡುತ್ತದೆ. ಅದರಲ್ಲೂ ದಟ್ಟ ಹಸಿರಿನ ಕಾನನ ಇನ್ನೂ ಸೊಗಸು. ಬನ್ನಿ, ಕಣ್ಣಿಗೆ ತಂಪನ್ನೀಯುವ ಅಂದ-ಚಂದದ ಬಿಳಿಗಿರಿರಂಗನ ಬೆಟ್ಟವನ್ನೂ, ಮನಕ್ಕೆ ನೆಮ್ಮದಿ ನೀಡುವ ಬಿಳಿಗಿರಿ ರಂಗನಾಥಸ್ವಾಮಿಯನ್ನು ನೆನೆಯೋಣ. ಇಲ್ಲಿನ ಕಾಡಿನ ಬಯಲಿನಷ್ಟೇ ದೇವಾಲಯವೂ ಸುಂದರ. ಕಾಡಿನಲ್ಲಿರುವ ಈ ಗುಡಿಯು ಪ್ರಕೃತಿ ತಾಣವಾಗಿ ಬಯಲಿನಂತೆಯೇ ಇದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಆಗ್ನೇಯಕ್ಕೆ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿ ಇರುವ ಬೆಟ್ಟ. ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರವಿದೆ.

ಈ ಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲ ಬೆಟ್ಟ, ಶ್ವೇತಾದ್ರಿ ಎಂದೂ ಕರೆಯುತ್ತಾರೆ. ಬೆಟ್ಟದ ಮೇಲೆ ಬಿಳಿಗಿರಿರಂಗಸ್ವಾಮಿ ದೇವಾಲಯವಿದ್ದು ಪುಣ್ಯಕ್ಷೇತ್ರವೆನಿಸಿದೆ. ಬೆಟ್ಟ ಏರಲು ಯಳಂದೂರು ಹಾಗೂ ಚಾಮರಾಜನಗರದಿಂದ ರಸ್ತೆಗಳಿವೆ. ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ದಟ್ಟ ಕಾಡಿದೆ. ಇಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೀಟೆ, ಬನ್ನಿ ಮೊದಲಾದ ಅಮೂಲ್ಯ ಮರಗಳಿವೆ.

ಕಾಡಿನಲ್ಲಿ ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ವಿವಿಧ ರೀತಿಯ ಜಿಂಕೆ ಮೊದಲಾದ ಪ್ರಾಣಿಗಳಿವೆ. ಬೆಟ್ಟದ ಸುತ್ತಮುತ್ತ ಆನೆಯ ಹಾವಳಿ ಇದೆ. ಬೆಟ್ಟದ ಮೇಲಿನಿಂದ ಕಾಣುವ ನಿಸರ್ಗ ದೃಶ್ಯ ರಮಣೀಯ. ಇಲ್ಲಿ ವಾಸಿಸುವವರು ಹೆಚ್ಚಾಗಿ ಸೋಲಿಗರು. ಬೆಟ್ಟದ ಮೇಲೆ ಕೆಲವೆಡೆ ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯುವ ಸಣ್ಣ ತೋಟಗಳಿವೆ. ಬೆಟ್ಟದ ಮೇಲೆ ರೇಷ್ಮೆ ಸಂಶೋಧನಾ ಕೇಂದ್ರವಿದೆ. ಪ್ರವಾಸಿ ಬಂಗಲೆ ಸುತ್ತ ಸಿಂಕೋನ ಮರಗಳಿವೆ. ದೇವಾಲಯದ ಪ್ರಾಕಾರ ನವರಂಗ ಹಾಗೂ ಮುಖಮಂಟಪ ಮೊದಲಾದವು ಸಾಮಾನ್ಯ ರೀತಿಯ ದ್ರಾವಿಡಶೈಲಿಯ ಕಟ್ಟಡ. ಮುಖ್ಯ ದೇವರು ಬಿಳಿಗಿರಿ ರಂಗಸ್ವಾಮಿ (ಶ್ರೀನಿವಾಸ) ನವರಂಗದ ಬಲಭಾಗದ ಮೂರು ಗೂಡುಗಳಲ್ಲಿ ಲೋಹ ನಿರ್ಮಿತ ಬಿಳಿಗಿರಿರಂಗ, ಹನುಮಂತ ಮಣವಾಳ ಮಹಾಮುನಿಗಳ ಮೂರ್ತಿಗಳಿವೆ. ಬಲ ಭಾಗದಲ್ಲಿ ಅಲರ್ಮೇಲು ಮಂಗೈ ಅಮ್ಮನವರ ಸನ್ನಿಧಿ ಇದೆ. ನವರಂಗದ ಎಡಭಾಗದ ಗೂಡುಗಳಲ್ಲಿ ನಮ್ಮಾಳ್ವಾರ್ ಮತ್ತು ರಾಮಾನುಜರ ವಿಗ್ರಹಗಳಿವೆ. ದ್ವಾರದ ಬಲಗಡೆಯಲ್ಲಿರುವ ಇನ್ನೊಂದು ಗೂಡಿನಲ್ಲಿ ವೇದಾಂತಚಾರ್ಯರ ವಿಗ್ರಹ ಕಾಣಬಹುದು. ಮೂಲದೇವರನ್ನು ವಸಿಷ್ಠರು ಪ್ರತಿಷ್ಠಾಪಿಸಿದರೆಂಬುದು ಸ್ಥಳಪುರಾಣ. ಇಲ್ಲಿಯ ಬಿಳಿಕಲ್ಲು ತಿರುವೇಂಕಟನಾಥನಿಗೆ ಹದಿನಾಡಿನ ಮುದ್ದರಾಜ 1667ರಲ್ಲಿ ದತ್ತಿ ಬಿಟ್ಟ ವಿಷಯವನ್ನು ಇಲ್ಲಿರುವ ತಾಮ್ರಶಾಸನ ತಿಳಿಸುತ್ತದೆ. ದಿವಾನ್ ಪೂರ್ಣಯ್ಯ ಈ ದೇವಾಲಯದ ಸೇವೆಗಾಗಿ 2 ಗ್ರಾಮಗಳನ್ನು ದತ್ತಿ ಬಿಟ್ಟರು. ಬ್ರಹ್ಮಾಂಡಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎನ್ನಲಾಗಿದೆ. ವೈಶಾಖ ಮಾಸದಲ್ಲಿ (ಏಪ್ರಿಲ್) ರಥೋತ್ಸವ ನಡೆಯುವುದು. ದೇವಸ್ಥಾನದಿಂದ 16 ಕಿಮೀ ದೂರದಲ್ಲಿ ಭಾರ್ಗವೀ ನದಿ ಹರಿಯುತ್ತದೆ.

ಬೆಟ್ಟದ ಮೇಲೆ ಗಂಗಾಧರೇಶ್ವರನ ಗುಡಿ ಇದೆ. ಬಿಳಿಗಿರಿರಂಗಸ್ವಾಮಿಯ ದೇವಸ್ಥಾನದಿಂದ ಸುಮಾರು 19 ಕಿಮೀ ದೂರದಲ್ಲಿ ಶಿವಸಮುದ್ರದ ಗಂಗರಾಜ ತನ್ನ ಅಳಿಯನಾಗಿ ಕುಂಚುಕೋಟೆಯನ್ನು ನಿರ್ಮಿಸಿದುದಾಗಿ ತಿಳಿಯುತ್ತದೆ. ಈಗಲೂ ಆ ಕೋಟೆಯ ಅವಶೇಷಗಳನ್ನು ನೋಡಬಹುದಾಗಿದೆ. ಬೆಟ್ಟದ ಬುಡದಲ್ಲಿ ಬೃಂದಾವನವೆಂಬ ತುಳಸಮ್ಮನ ಗುಡಿ ಇದೆ. ಮಧ್ಯಭಾಗದಲ್ಲಿ ಕನಕದಾಸರದೆಂದು ಹೇಳಲಾಗುವ ಗುಹೆ ಇದೆ. ಇಲ್ಲಿ ವಾಸ್ತವ್ಯಕ್ಕೆ ದೇವಳದ ಅತಿಥಿಗೃಹವಿದೆ. ಸಮೀಪದ ಕೆ.ಗುಡಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಎಲ್ಲಾ ಅನುಕೂಲತೆಗಳಿರುವ ಆಶ್ರಯ ತಾಣವಿದೆ. ಇದಲ್ಲದೆ 45 ನಿಮಿಷ ಪ್ರಯಾಣ ಮಾಡಿದರೆ ಕೊಳ್ಳೇಗಾಲದಲ್ಲೂ, 90 ನಿಮಿಷ ಪ್ರಯಾಣ ಮಾಡಿದರೆ ಮೈಸೂರಿನಲ್ಲೂ ತಂಗಬಹುದು. ಮೈಸೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಯಳಂದೂರುಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸೌಕರ್ಯವಿದೆ.

ಕಾಡು ಪ್ರಾಣಿಗಳಿಗೆ ಹಾಗೂ ಅವುಗಳಿಂದ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸಂಜೆ ಆರರಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಬೆಟ್ಟ ಪ್ರವೇಶ ನಿಷಿದ್ಧ. ಚಪ್ಪಲಿ ಸೇವೆ ಚಪ್ಪಲಿ ಸೇವೆ ಎಂದರೆ ಗಾಬರಿಯಾಗಬೇಡಿ! ಬಿಳಿಗಿರಿ ರಂಗನಾಥಸ್ವಾಮಿಗೆ ಪ್ರತಿ ವರ್ಷ ಉತ್ಸವದ ವೇಳೆಯಲ್ಲಿ ಒಂದು ಜೊತೆ ಚಪ್ಪಲಿಯನ್ನು ಸೇವಾರೂಪದಲ್ಲಿ ಆರ್ಪಿಸಲಾಗುತ್ತದೆ. ದೇವರ ಈ ಪಾದರಕ್ಷೆ ನಿರ್ಮಾಣವನ್ನು ವಂಶ ಪಾರಂಪರ್ಯವಾಗಿ ಬೇರೆ ಬೇರೆ ಊರುಗಳ ಎರಡು ಕುಟುಂಬಗಳು ತಲಾ ಒಂದೊಂದು ಚಪ್ಪಲಿ ತಯಾರಿಸುತ್ತಾರೆ. ಆದರೆ ಪೂಜೆಗೆ ತಂದಾಗ ಅವುಗಳ ವಿನ್ಯಾಸ, ಚಿತ್ತಾರದ ಕಲೆ, ಅಳತೆ ಒಂದೇ ಆಗಿರುತ್ತದೆ. ದೇವಾಲಯದ ಪೆಟ್ಟಿಗೆಯಲ್ಲಿಟ್ಟ ಚಪ್ಪಲಿ ಮುಂದಿನ ಜಾತ್ರೆಯ ವೇಳೆಗೆ ಕ್ರಮೇಣವಾಗಿ ಸವೆಯುತ್ತದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :61ಕಿಲೋಮೀಟರ್
  • ರೈಲ್ವೆ ನಿಲ್ದಾಣ ದಿಂದ : 62.2 ಕಿಲೋಮೀಟರ್
  • ವಿಮಾನ ನಿಲ್ದಾಣ ದಿಂದ: 80ಕಿಲೋ ಮೀಟರ್

ಮಹದೇಶ್ವರ ಬೆಟ್ಟ

ಕೊಳ್ಳೇಗಾಲಕ್ಕೆ ೮೦ ಕಿ ಮೀ ಹಾಗೂ ಮೈಸೂರಿನಿಂದ ೧೫೦ ಕಿ ಮೀ ದೂರದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ. ಈ ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ. ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನದಾರಿ, ಬಸವನದಾರಿ ಎಂಬ ಎರಡು ಮಾರ್ಗಗಳಿವೆ. ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿಮಲೆ, ಕೊಂಗುಮಲೆ ಎಂಬಾಗಿ ೭೭ ಮಲೆಗಳಿವೆ. ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಇರುವ ಶಿವ ದೇವಾಲಯವೇ ಪ್ರಧಾನವಾದದ್ದು.

ಕುರುಬ ಗೌಡರ (ಹಾಲಮತ ಗೌಡರು) ಮನೆ ದೇವರು ಮತ್ತು ಕುಲದೈವ. ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರರು ೧೫ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ. ಜುನ್ಜೆ ಗೌಡ, ಶ್ರೀಮಂತ ಕುರುಬ ಗೌಡ, ಈ ದೇವಾಲಯವನ್ನು ಕಟ್ಟಿಸಿದವನು. ಸುಮಾರು ೬೦೦ ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ, ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ. ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ ೧೫೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :134ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :133ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 124ಕಿಲೋ ಮೀಟರ್

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಸಮುದ್ರ ಮಟ್ಟದಿಂದ ಸುಮಾರು ೪೮೦೦ ಅಡಿ ಎತ್ತರ ಇದೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಬರುತ್ತದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಇದೆ. ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಸ್ಥಾನ ಮತ್ತು ನಯನ ಮನೋಹರವಾದ ಪ್ರಕೃತಿ ಚೆಲುವಿನಿಂದ ಇದು ಪ್ರಸಿದ್ದವಾಗಿದೆ. ಇಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಹಿಮ ಕವಿದಿರುವುದರಿಂದ “ಹಿಮವದ್ ಗೋಪಾಲಸ್ವಾಮಿ ಬೆಟ್ಟ” ಎಂಬ ಹೆಸರೂ ಇದೆ. ಈ ಬೆಟ್ಟವನ್ನು ತಲುಪಲು ಅರಮನೆಗಳ ನಗರ ಮೈಸೂರಿನಿಂದ ಗುಂಡ್ಲುಪೇಟೆ (೬೭ ಕಿ.ಮೀ) – ಊಟಿ ಮಾರ್ಗದಲ್ಲಿ ಬರುವ ಹಂಗಳ ಎಂಬ ಹಳ್ಳಿಯಿಂದ ಬಲಕ್ಕೆ ಸುಮಾರು ೧೦ ಕಿ.ಮೀ ಕ್ರಮಿಸಬೇಕು. ಬೆಟ್ಟದ ಮೇಲೆ ತಲುಪಲು ರಸ್ತೆ ಅನುಕೂಲ ಇದೆ. ಈ ದೇವಾಲಯವನ್ನು ಕ್ರಿ.ಶ. ೧೩೧೫ ರಲ್ಲಿ ರಾಜ ದಂಡ ನಾಯಕ ಎನ್ನುವವನು ಕಟ್ಟಿಸಿದನು. ನಂತರ ಮೈಸೂರು ಮಹಾರಾಜರು ಈ ದೇವಾಲಯದ ಅಭಿವೃದ್ಧಿ ಮಾಡಿದರು.

 

ಗೋಪಾಲಸ್ವಾಮಿ ವಿಗ್ರಹದ ಕಲ್ಲಿನ ಮೇಲೆ ವರ್ಷದ ೩೬೫ ದಿನಗಳೂ ನೀರು ಜಿನುಗುತ್ತಿರುತ್ತದೆ. ಈ ಬೆಟ್ಟದಲ್ಲಿ ಸುಮಾರು ೭೭ ತೀರ್ಥ ಸ್ಥಳಗಳಿವೆ. ಇವುಗಳಲ್ಲಿ ಕೆಲವನ್ನು ದೇವಸ್ಥಾನದ ಸುತ್ತ ಮುತ್ತ ನೋಡಬಹುದು.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :79ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :80.2ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 69ಕಿಲೋ ಮೀಟರ್

ಹಳೇಬೀಡು

ಭಾರತದ ಕನರ್ಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರ. ಇತಿಹಾಸಪ್ರಸಿದ್ಧ ಸ್ಥಳ. ಬೇಲೂರಿನ ಪೂರ್ವಕ್ಕೆ 16 ಕಿಮೀ ದೂರದಲ್ಲಿದೆ. ಈಗ ಇದು ಸಾಮಾನ್ಯ ಹಳ್ಳಿಯಾಗಿದ್ದರೂ ಲೋಕಪ್ರಸಿದ್ಧವಾದ ಕಲಾಕ್ಷೇತ್ರವಾಗಿ ಉಳಿದುಬಂದಿದೆ. ಮಲೆನಾಡಿನ ಅಂಚಿನಲ್ಲಿದ್ದು ಮಲೆನಾಡಿಗೂ ಬಯಲುಸೀಮೆಗೂ ಸಂಬಂಧವನ್ನು ಕಲ್ಪಿಸುವ ಆಯಕಟ್ಟಿನ ಸ್ಥಳದಲ್ಲಿ ಸುತ್ತಲೂ ಬೆಟ್ಟ ಗುಡ್ಡಗಳಿಂದಾವರಿಸಿ, ನಡುವೆ ವಿಶಾಲವಾದ ಕಣಿವೆಯಿರುವ ಈ ಸ್ಥಳದಲ್ಲಿ ಹತ್ತನೆಯ ಶತಮಾನದ ಲ್ಲಿಯೇ ಒಂದು ಸಣ್ಣ ಊರು ಹುಟ್ಟಿಕೊಂಡಿದ್ದಿರಬೇಕು.

ಇಲ್ಲಿ ಆಗ ನಿಮರ್ಿಸಿದ ದೊಡ್ಡ ಕೆರೆಯಿಂದ ಇದಕ್ಕೆ ದೋರಸಮುದ್ರವೆಂಬ ಹೆಸರು ಬಂತು. ಈ ದೋರಸಮುದ್ರವನ್ನು ಕಟ್ಟಿದುದು ಯಾವಾಗ ಎನ್ನುವುದು ಖಚಿತವಾಗಿಲ್ಲ. ರಾಷ್ಟ್ರಕೂಟ ಚಕ್ರವತರ್ಿ ಧ್ರುವ ಗಂಗವಾಡಿಯನ್ನು ಗೆದ್ದಾಗ ಈ ಕೆರೆ ನಿಮರ್ಾಣವಾಗಿ ಧ್ರುವನದೋರ ಎಂಬ ಹೆಸರಿನಿಂದ ಇದಕ್ಕೆ ದೋರಸಮುದ್ರ ಎಂಬ ಹೆಸರು ಬಂತೆಂದು ಒಂದು ಅಭಿಪ್ರಾಯವಿದೆ. ಆದರೆ ಅಷ್ಟು ಹಿಂದೆಯೇ ಇಲ್ಲಿ ಊರು ಹುಟ್ಟಿಕೊಂಡಿದ್ದುದಕ್ಕೆ ಆಧಾರವಿಲ್ಲ. ಹತ್ತನೆಯ ಶತಮಾನದಲ್ಲಿ ಈ ಪ್ರಾಂತ ಗಂಗಬೂತುಗನ ಆಳಿಕೆಗೆ ಒಳಪಟ್ಟು ಅವನ ಅಕ್ಕ ಪಾಂಬಬ್ಬೆ ಮತ್ತು ಭಾವ ದೋರ ಇಲ್ಲಿ ಇದ್ದಂತೆ ಶಾಸನಗಳಿಂದ ತಿಳಿದುಬರುವುದರಿಂದ 950ಕ್ಕೆ ಮುಂಚೆ ಈ ದೋರ ಇಲ್ಲಿ ಕೆರೆಯನ್ನು ಕಟ್ಟಿಸಿ ತನ್ನ ಹೆಸರಿನಲ್ಲಿ ದೋರಸಮುದ್ರ ವೆಂಬ ಊರನ್ನೂ ನಿಮರ್ಿಸಿ ಇಲ್ಲಿಂದ ರಾಜ್ಯಭಾರ ಮಾಡಿರುವುದು ಹೆಚ್ಚು ಸಂಭವನೀಯ.

ಆಗ ಇದೊಂದು ಜೈನಯತಿಗಳ ವಾಸಸ್ಥಾನವೂ ಆಗಿತ್ತು. ಇಲ್ಲಿನ ಅತ್ಯಂತ ಪ್ರಾಚೀನ ಶಾಸನವೂ ಈ ಕಾಲಕ್ಕೆ ಸೇರಿದುದಾಗಿದ್ದು ಪಾಂಬಬ್ಬೆಯ ಗುರುಗಳ ಪರಂಪರೆಗೆ ಸೇರಿದ ಯತಿಯೊಬ್ಬರ ನಿಸಿದಿಯಾಗಿದೆ. ಈ ಊರಿಗೆ 950ರ ವೇಳೆಗಾಗಲೇ ದ್ವಾರಾವತಿ ಎಂಬ ಹೆಸರೂ ಬಳಕೆಗೆ ಬಂದಿದ್ದುದಾಗಿ ಮತ್ತೊಂದು ಶಾಸನದಿಂದ ನಿರ್ಧರಿಸಬಹುದು. ಕದಂಬರ ಶಾಸನಗಳಲ್ಲಿ ಕಂಡು ಬರುವ ತ್ರಿಪರ್ವತ ಹಳೇಬೀಡು ಆಗಿರಬೇಕೆಂಬ ವಿದ್ವಾಂಸ ಮೊರೇಸನ ಅಭಿಪ್ರಾಯಕ್ಕೆ ಆಧಾರವಿಲ್ಲ. ಸೊಸೆವೂರಿನಲ್ಲಿದ್ದ ಹೊಯ್ಸಳರು ಚಾಳುಕ್ಯರ ಸಾಮಂತರಾಗಿ ರಾಜ್ಯ ವಿಸ್ತರಿಸುತ್ತ ಬಂದಂತೆ ಮಲೆನಾಡಿನಿಂದ ಬಯಲುಸೀಮೆಯ ಕಡೆಗೆ ತಮ್ಮ ನೆಲೆವೀಡನ್ನು ಬದಲಾಯಿಸಲು ಹವಣಿಸಿದಾಗ ವಿನಯಾದಿತ್ಯನಿಗೆ ದೋರಸಮುದ್ರ ಆಯಕಟ್ಟಿನ ನೆಲೆಯಾಗಿ ಕಂಡುದರಲ್ಲಿ ಆಶ್ಚರ್ಯವಿಲ್ಲ. ಆತ 1064ರಲ್ಲಿ ಕೆರೆಗೆ ತೂಬು ನಿಮರ್ಿಸಿ ಊರನ್ನು ಅಭಿವೃದ್ಧಿಪಡಿಸಿದ. ಮುಂದೆ ಹೆಚ್ಚು ವಿಸ್ತಾರವಾಗಿ ಬೆಳೆದಂತೆ ಕೆರೆಯನ್ನು ವಿಸ್ತರಿಸಿ ಮತ್ತೊಂದು ತೂಬನ್ನು 1092ರಲ್ಲಿ ವಿನಯಾದಿತ್ಯ ನಿಮರ್ಿಸಿದಂತೆ ತಿಳಿದುಬರುತ್ತದೆ.

ಒಂದನೆಯ ಬಲ್ಲಾಳ ಬೇಲೂರನ್ನೂ ವಿಷ್ಣುವರ್ಧನ ವಿಷ್ಣುಸಮುದ್ರವನ್ನೂ ನೆಲೆವೀಡುಗಳನ್ನಾಗಿ ಕಟ್ಟಿಸಿದರೂ ಈ ದೋರಸಮುದ್ರ ಅಥವಾ ದ್ವಾರಾವತೀಪುರವೇ ಹೊಯ್ಸಳ ವಂಶದ ಮುಖ್ಯ ನೆಲೆವೀಡಾಗಿ ಮುಂದುವರಿಯಿತು. ವಿಸ್ತಾರವಾಗಿದ್ದ ದೋರಸಮುದ್ರದ ನಗರವನ್ನು ಬಳಸಿಕೊಂಡು ನಿಂತಿದ್ದ ಕೋಟೆ ಭದ್ರವಾದುದಾಗಿತ್ತು. ದೊಡ್ಡ ದೊಡ್ಡ ಗುಂಡುಗಳನ್ನು ಒಂದರ ಮೇಲೊಂದು ಪೇರಿಸಿ ಒಳಭಾಗದಿಂದ ಮಣ್ಣಿನ ಒತ್ತು ಕೊಟ್ಟಿದ್ದುದಲ್ಲದೆ ಅಲ್ಲಲ್ಲಿ ಬತೇರಿಯಂತೆ ಗೋಡೆ ಮುಂಚಾಚಿಕೊಂಡಿತ್ತು. ಕೆಲವು ಕಡೆ ಆಳವಾದ ಅಗಳು ಕೋಟೆಯನ್ನು ರಕ್ಷಿಸಿಕೊಂಡಿತ್ತು.

ಈ ಅಗಳಿನ ಆಳ ಕೆಲವು ಕಡೆ 50 ಅಡಿಗಳಷ್ಟಿದೆ. ದೋರಸಮುದ್ರವಲ್ಲದೆ ಇನ್ನೂ ಕೆಲವು ಸಣ್ಣಪುಟ್ಟ ಕೆರೆಗಳಿದ್ದರೂ ವಿಸ್ತಾರವಾಗಿ ಬೆಳೆದ ನಗರಕ್ಕೆ ನೀರು ಸಾಲದೆ ಹೋಗಿರಬೇಕು. ಆದ್ದರಿಂದಲೇ ಯಗಚಿ ನದಿಯಿಂದ ಕಾಲುವೆಯನ್ನು ತೋಡಿ ಊರಿಗೆ ನೀರನ್ನು ಒದಗಿಸುವ ಏಪರ್ಾಡು ಆಗಿತ್ತು. ಊರಿನ ನಡುವೆ ಇದ್ದು, ಬೆಣ್ಣೆಗುಡ್ಡಕ್ಕೆ ಹೊಂದಿಕೊಂಡಂತೆ ಪೂರ್ವದ ಕಡೆ ವಿಶಾಲವಾದ ಬಯಲಿನಲ್ಲಿ, ಹೊಯ್ಸಳರ ಅರಮನೆಯಿತ್ತು. ಈಗಲೂ ಆ ಸ್ಥಳಕ್ಕೆ ಅರಮನೆಯ ಹೊಲ ಎಂದೇ ಹೆಸರಿದೆ. ಈ ಹೊಲದ ಬೇರೆ ಬೇರೆ ಭಾಗಗಳನ್ನು ಹಜಾರದ ಗುಂಡ್ಲು, ಲಾಯದ ಸಲಿಗೆ, ಆನೆಗುಂಡಿ, ಟಂಕಸಾಲೆ ಹೊಲ ಎಂದು ಮುಂತಾಗಿ ಕರೆಯುತ್ತಾರೆ. ಅರಮನೆ ಮತ್ತು ಅದರ ಭಾಗಗಳನ್ನು ಕಲ್ಲಿನ ಅಡಿಪಾಯದ ಮೇಲೆ ಮರದ ಕಂಬಗಳು, ಇಟ್ಟಿಗೆ ತುಂಡು ಕಲ್ಲುಗಳಿಂದ ಕಟ್ಟಿದ್ದಂತೆ ತೋರುತ್ತದೆ. ಇದು ಸಂಪೂರ್ಣವಾಗಿ ನಾಶವಾಗಿರುವುದರಿಂದ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. 80 ಮೀಗೂ ಹೆಚ್ಚು ಉದ್ದವಾಗಿದ್ದ ಅಡುಗೆ ಶಾಲೆ, ಸ್ನಾನದ ಮನೆಗಳಿದ್ದ ಕುರುಹನ್ನು ನೋಡಿದರೆ ಅರಮನೆ ತುಂಬ ವಿಶಾಲವಾದುದಾಗಿಯೇ ಇದ್ದಿರಬೇಕು. ಈ ಅರಮನೆಯನ್ನು ಸುತ್ತುವರಿದ ಒಳಕೋಟೆ ದಪ್ಪ ಗುಂಡುಗಳಿಂದ ನಿಮರ್ಿತವಾಗಿದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :150ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :148ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 159ಕಿಲೋ ಮೀಟರ್

ಬೇಲೂರು

ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕು ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವ ಮತ್ತು ಆಗ್ನೇಯದಲ್ಲಿ ಹಾಸನ ತಾಲ್ಲೂಕು, ಪಶ್ಚಿಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು, ಉತ್ತರ ಮತ್ತು ವಾಯವ್ಯದಲ್ಲಿ ಚಿಕ್ಕಮಗಳೂರು ತಾಲ್ಲೂಕು, ದಕ್ಷಿಣ ಮತ್ತು ನೈಋತ್ಯದಲ್ಲಿ ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳು ಮತ್ತು ಈಶಾನ್ಯದಲ್ಲಿ ಅರಸೀಕೆರೆ ತಾಲ್ಲೂಕು ಸುತ್ತುವರಿದಿವೆ. ಬೇಲೂರು, ಬಿಕ್ಕೋಡು ಅರೆಹಳ್ಳಿ, ಮಾದಹಳ್ಳಿ ಮತ್ತು ಹಳೇಬೀಡು ಈ ತಾಲ್ಲೂಕಿನ ಹೋಬಳಿಗಳು. 383 ಹಳ್ಳಿಗಳನ್ನೊಳಗೊಂಡಿದೆ. ಒಟ್ಟು ವಿಸ್ತೀರ್ಣ 840.2 ಚ.ಕಿ.ಮೀ. ಜನಸಂಖ್ಯೆ 1,83,080 (2001). ಬೇಲೂರು ತಾಲ್ಲೂಕು ಮಲೆನಾಡ ಪ್ರದೇಶಕ್ಕೆ ಸೇರಿದ್ದು ಸಮುದ್ರಮಟ್ಟದಿಂದ ಸುಮಾರು 968ಮೀ ಎತ್ತರದಲ್ಲಿದೆ. ಇದರ ಪೂರ್ವಭಾಗ ಅರೆಮಲೆನಾಡು ಪ್ರದೇಶ. ಪಶ್ಚಿಮ ಮತ್ತು ಉತ್ತರ ಭಾಗ ಗುಡ್ಡ ಪ್ರದೇಶವಾಗಿದ್ದು,

ಸ್ವಲ್ಪ ಭಾಗ ಕಾಡುಪ್ರದೇಶವೂ ಉಂಟು. ಇಲ್ಲಿಯ ಮುಖ್ಯನದಿ ಯಗಚಿ. ಇದು ತಾಲ್ಲೂಕಿನ ಮಧ್ಯದಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಹರಿಯುತ್ತದೆ. ಹೇಮಾವತಿ ನದಿ ತಾಲ್ಲೂಕಿನ ನೈಋತ್ಯದಲ್ಲಿ ಸ್ವಲ್ಪದೂರ ಸಕಲೇಶಪುರ ತಾಲ್ಲೂಕನ್ನು ಬೇಲೂರು ತಾಲ್ಲೂಕಿನಿಂದ ಬೇರ್ಪಡಿಸುವ ಗಡಿಯಾಗಿ ಹರಿದಿದೆ. ಜಿಲ್ಲೆಯಲ್ಲೆ ಹೆಚ್ಚು ನೀರಾವರಿ ಪ್ರದೇಶ ಈ ತಾಲ್ಲೂಕಿಗೆ ಸೇರಿದ್ದು. ಇಲ್ಲಿಯ ಕೆಂಪು ಮತ್ತು ಹಳದಿ ಮಣ್ಣಿನ ಭೂಮಿಯಲ್ಲಿ ಬತ್ತ, ಕಬ್ಬು, ಕಾಫಿ, ಅಡಕೆ, ಏಲಕ್ಕಿ, ಮೆಣಸು ಇವುಗಳೊಂದಿಗೆ ರಾಗಿ, ನೆಲಗಡಲೆ ಮುಂತಾದವನ್ನೂ ಬೆಳೆಸುತ್ತಾರೆ. ಈ ತಾಲ್ಲೂಕಿನ ಕೈಗಾರಿಕೆಗಳಲ್ಲಿ ಮರದ ಸಾಮಾನುಗಳ ತಯಾರಿಕೆ, ಜೇನು ಸಾಕಣೆ ಮುಖ್ಯವಾದುವು. ಹಿತ್ತಾಳೆ ಪಾತ್ರೆಗಳ ತಯಾರಿಕೆ,

ವಿಗ್ರಹ ಕೆತ್ತನೆ ಕೆಲಸವೂ ಉಂಟು. ಹಾಸನ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ-ಬೇಲೂರು, ಬಾಗೆ-ಬೇಲೂರು, ಬಾಣಾವರ-ಬೇಲೂರು, ಮೂಡಿಗೆರೆ ಮಾರ್ಗಗಳು ತಾಲ್ಲೂಕಿನ ಪ್ರಮುಖರಸ್ತೆಗಳಾಗಿವೆ. ಈ ತಾಲ್ಲೂಕಿನ ಮುಖ್ಯ ಸ್ಥಳಗಳಲ್ಲಿ ಹಳೇಬೀಡು ಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ಕೇಂದ್ರ. ಚಟಚಟನಹಳ್ಳಿಯಲ್ಲಿ ಹೊಯ್ಸಳ ದೇವಾಲಯವಿದೆ. ಬೇಲೂರು ಈ ತಾಲ್ಲೂಕಿನ ಆಡಳಿತಕೇಂದ್ರ ಪಟ್ಟಣ. ಜನಸಂಖ್ಯೆ 20,225 (2001). ಪಟ್ಟಣ ಯಗಚಿ ನದಿಯ ಎಡದಂಡೆಯ ಮೇಲಿದೆ. ಪುರಸಭೆಯ ಆಡಳಿತಕ್ಕೆ ಒಳಪಟ್ಟಿರುವ ಈ ಪಟ್ಟಣ ಅಂಚೆ, ದೂರವಾಣಿ, ಆಸ್ಪತ್ರೆ, ಶಾಲೆಗಳು, ರಕ್ಷಿತ ನೀರು ಸರಬರಾಜು, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದೆ. ಬೇಲೂರು ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದು. ಈ ಪಟ್ಟಣಕ್ಕೆ ಹಿಂದೆ ವೇಲೂರು, ವೇಲಾಪುರ ಎಂಬ ಹೆಸರುಗಳಿದ್ದುವು.

ಕೆಲವು ಹೊಯ್ಸಳ ಶಾಸನಗಳಲ್ಲಿ ಬೇಲುಹೂರು, ವೇಲಾಪುರ ಎಂಬ ಹೆಸರುಗಳು ದೊರೆಯುತ್ತವೆ. ಬೇಲೂರಿನ ಮುಖ್ಯ ಆಕರ್ಷಣೆಯೆಂದರೆ ಹೊಯ್ಸಳರ ಕಾಲದ ಚೆನ್ನಕೇಶವ ದೇವಾಲಯ. ಇದು ಹೊಯ್ಸಳ ಶೈಲಿಯ ಸುಂದರ ಕಟ್ಟಡಗಳಲ್ಲಿ ಒಂದು. ದೇವಾಲಯದ ಉತ್ತರ ಗೋಡೆಯ ಮೇಲೆ ಬಾಗಿಲ ಪೂರ್ವದ ಬಳಿಯ ಒಂದು ಶಾಸನ ಮತ್ತು ಅದೇ ದೇವಾಲಯದ ಒಂದು ತಾಮ್ರ ಶಾಸನದಿಂದ ತಲಕಾಡುಗೊಂಡ ವಿಷ್ಣುವರ್ಧನ ಹೇವಿಳಂಬಿ ಸಂವತ್ಸರದ ಚೈತ್ರ ಶುದ್ಧ ಪಂಚಮಿ ಶನಿವಾರದಂದು (ಮಾರ್ಚ್ 20, 1117) ಈ ದೇವಾಲಯವನ್ನು ಪ್ರತಿಷ್ಠಾಪಿಸಿದನೆಂದು ತಿಳಿದುಬರುತ್ತದೆ. ದೇವಾಲಯದ ಮೂಲವಿಗ್ರಹದ ಪೀಠದ ಮೇಲಿನ ಶಾಸನದಲ್ಲಿ ದೇವರನ್ನು ವಿಜಯನಾರಾಯಣನೆಂದು ಕರೆಯಲಾಗಿದೆ. ದೇವಾಲಯ ಗರ್ಭಗುಡಿಯಿಂದ ಕೂಡಿ ನಕ್ಷತ್ರಾಕಾರದ ತಳವಿನ್ಯಾಸವನ್ನು ಹೊಂದಿದೆ. ಈ ಗುಡಿಯ ಸುತ್ತ ಎತ್ತರವಾದ ಪ್ರಾಕಾರಗೋಡೆಗಳಿವೆ. ಕೇಶವ ದೇವಾಲಯದ ಬಲಗಡೆಗೆ ಸ್ವಲ್ಪ ಹಿಂದೆ ಕಪ್ಪೆಚೆನ್ನಿಗರಾಯನ ಗುಡಿಯಿದೆ. ದೇವಾಲಯದ ನೇರ ಹಿಂಭಾಗದಲ್ಲಿ ವೀರನಾರಾಯಣ ಗುಡಿಯಿದೆ. ಹೊಯ್ಸಳ ಶಿಲ್ಪಿಗಳು ತಮ್ಮ ಶಿಲ್ಪಕೌಶಲವನ್ನು ಈ ದೇವಾಲಯಗಳ ಮುಖಾಂತರ ತೋರಿಸಿದ್ದಾರೆ. ಇಲ್ಲಿಯ ಒಂದೊಂದು ವಿಗ್ರಹವೂ ಒಂದೊಂದು ಸುಂದರ ಶಿಲ್ಪಕೃತಿ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :155ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :154ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :165 ಕಿಲೋ ಮೀಟರ್

ಶ್ರವಣಬೆಳಗೊಳ

ಭಾರತದ ಕನರ್ಾಟಕ ರಾಜ್ಯದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಒಂದು ಪಟ್ಟಣ ಹಾಗೂ ಜೈನರ ಪವಿತ್ರ ಯಾತ್ರಾಸ್ಥಳ. ಹಾಸನಕ್ಕೆ 51 ಕಿಮೀ ದೂರದಲ್ಲೂ ಚನ್ನರಾಯ ಪಟ್ಟಣಕ್ಕೆ 11 ಕಿಮೀ ದೂರದಲ್ಲೂ ಇದೆ. ಇಲ್ಲಿನ ದೊಡ್ಡ ಬೆಟ್ಟದ ಮೇಲಿರುವ ಗೊಮ್ಮಟ ವಿಗ್ರಹ ಪ್ರಪಂಚಖ್ಯಾತವಾಗಿದೆ. ಈ ಗ್ರಾಮಕ್ಕೆ ಅತಿಪ್ರಾಚೀನವಾದ ಇತಿಹಾಸವಿದೆ. ಶಾಸನಗಳಲ್ಲಿ ಈ ಸ್ಥಳವನ್ನು ಕಟವಪ್ರ, ಕಟಪ್ರ, ಕಟಪ್ಪ, ಕಟ್ವಪ್ಪ, ಕÙಳ್ಬಪ್ಪ, ಕÙಳ್ಬಪ್ಪು, ವೆಳ್ಗೊಳ, ಬೆಳ್ಗೊಳ, ಧವಳಸರತೀರ್ಥ, ಶ್ವೇತ ಸರೋವರ ಮುಂತಾಗಿ ಕರೆಯಲಾಗಿದೆ. ಅತಿ ಪ್ರಾಚೀನವಾದ ಸುಮಾರು 6-7ನೆಯ ಶತಮಾನದ ಸಂಸ್ಕೃತ ಶಾಸನದಲ್ಲಿ ಕಟವಪ್ರ ಎಂಬ ರೂಪವಿದೆ. ಕಟವಪ್ರ ಶೈಲ, ಕಟ್ವಪ್ರಗಿರಿ ಎಂಬ ರೂಪಗಳು ಅದೇ ಕಾಲದ ಕನ್ನಡ ಶಾಸನಗಳಲ್ಲಿ ಕಂಡುಬಂದಿವೆ. ಕÙಳ್ವಪ್ಪುವಿನ ಪ್ರಾಚೀನ ರೂಪ ಕಪ್ಬೆಳ್ಪು ಎಂದಿದ್ದು ಈ ಮಾತಿಗೆ ಬೆಳ್ಪಿನ ನೀರು ಎಂಬುದೊಂದು ಅಭಿಪ್ರಾಯವಿದೆ. ಆದರೆ ಈ ಹೆಸರು ಅಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸುತ್ತದೆ. ಕÙಳ್ಬಪ್ಪು ಎಂಬುದು ಕಪ್ಪಾದ ಗುಡ್ಡ, ಕರಿಗುಡ್ಡ ಎಂಬ ಅಲ್ಲಿನ ಪ್ರಾಕೃತಿಕ ಸನ್ನಿವೇಶವನ್ನು ವಿವರಿಸುವಂತಹ ಹೆಸರಾಗಿರಬೇಕು. ಸಂಸ್ಕೃತದಲ್ಲಿ ವಪ್ರ ಎಂದರೆ ಗಿರಿ ಎಂದರ್ಥವಾಗುತ್ತದೆ.

ಕಟ ಎಂದರೆ ಸಮಾಧಿ ಗುಹೆ, ಸಮಾಧಿ ಮಾಡತಕ್ಕ ಪ್ರದೇಶ. ಇಲ್ಲಿನ 7ನೆಯ ಶತಮಾನದ 54 ಶಾಸನಗಳಲ್ಲಿ 41 ಸಲ್ಲೇಖನ, ಸನ್ಯಸನ ವಿಧಿಗಳಿಂದ ದೇಹ ಮುಡಿಪಿದ ಸಂಗತಿಯನ್ನು ನಿರೂಪಿಸುವ ಜೈನಶಾಸನಗಳು. ಇದನ್ನು ಗಮನಿಸಿ ಕಟವಪ್ರ ಎಂದರೆ ಸಮಾಧಿ ಮರಣ ಹೊಂದಲು ಯೋಗ್ಯವಾದ ಗುಡ್ಡ ಎಂದು ಅಥರ್ೈಸ ಬಹುದು. ಕಟವಪ್ರದ (ಸಮಾಧಿಗುಡ್ಡ) ಕನ್ನಡ ರೂಪಾಂತರ ಕÙಳ್ವಪ್ಪು ಆಗಿರಬೇಕು. 7ನೆಯ ಶತಮಾನದ ಶಾಸನಗಳೆರಡರಲ್ಲಿ ಈ ಊರಿನ ಹೆಸರು ವೆಳ್ಗೊಳ, ಬೆಳ್ಗೊಳ ಎಂದು ಕರೆದಿದೆ.

ಊರಿನ ಮಧ್ಯೆ ಇರುವ ಕೊಳದಿಂದ ಈ ಹೆಸರು (ಬೆಳಕೊಳ-ಬೆಳ್ಗೊಳ) ಬಂದಿರಬೇಕೆಂಬ ಊಹೆಗೆ ಇದು ಪುಷ್ಟಿ ನೀಡುತ್ತದೆ. ಇವುಗಳನ್ನು ಗಮನಿಸಿದಾಗ ಕÙಳ್ಬಪ್ಪು ಎಂಬುದು ಚಿಕ್ಕಬೆಟ್ಟಕ್ಕೂ ಬೆಳ್ಗೊಳ ಎಂಬುದು ಕೆಳಗಿನ ಊರಿಗೂ ಇದ್ದ ಹೆಸರುಗಳೆನ್ನಬಹುದು. ಶ್ರವಣ ಎಂದರೆ ಜೈನ ಋಷಿ. ಇಲ್ಲಿ ಹಲವಾರು ಜೈನಯತಿಗಳು ನೆಲಸಿದ್ದರು. ಸನ್ಯಸನ ಇತ್ಯಾದಿ ವ್ರತಗಳಿಂದ ಮರಣ ಹೊಂದಿದರು. ಎಂತಲೇ ಇದು ಕಾಲಾನಂತರ ಶ್ರವಣಬೆಳ್ಗೊಳ ಎಂಬ ಹೆಸರನ್ನು ಪಡೆಯಿತು. ಇಲ್ಲಿ ಗೊಮ್ಮಟನ ಮೂತರ್ಿ ಇರುವುದರಿಂದ ಇದು ಗೊಮ್ಮಟಪುರ ವೆಂದೂ ಕರೆಯಲ್ಪಟ್ಟಿತು. ಪ್ರಚಲಿತ ಐತಿಹ್ಯದಂತೆ ಕ್ರಿ.ಪೂ 3ನೆಯ ಶತಮಾನದಲ್ಲಿ ಮೌರ್ಯ ಅರಸನಾದ ಚಂದ್ರಗುಪ್ತನು ತನ್ನ ಗುರುವಾದ ಭದ್ರಬಾಹುವಿನೊಂದಿಗೆ ಬಂದು ಇಲ್ಲಿ ನೆಲೆ ನಿಂತನು. ಇಲ್ಲಿನ ಅತಿ ಪ್ರಾಚೀನವಾದ 7ನೆಯ ಶತಮಾನದ ಶಾಸನದಲ್ಲಿ ಮಹಾವೀರನ ನಿವರ್ಾಣಾನಂತರ ಗೌತಮ ಗಣಧರ ಮೊದಲಾದವರು ಜೈನಗುರುಗಳಾಗಿದ್ದು ಅವರಲ್ಲೊಬ್ಬನಾದ ಭದ್ರಬಾಹುಸ್ವಾಮಿಯು ಉಜ್ಜಯಿನಿಯಲ್ಲಿದ್ದಾಗ ಹನ್ನೆರಡು ವರ್ಷಗಳ ಬರಗಾಲ ದೇಶವನ್ನು ಕ್ಷೊಭೆಗೆ ಒಳಪಡಿಸುತ್ತದೆ ಎಂಬ ಭವಿಷ್ಯವಾಣಿಯನ್ನು ನುಡಿದುದರ ಫಲವಾಗಿ ಸಂಪೂರ್ಣ ಸಂಘವು ಉತ್ತರಾಪಥದಿಂದ ದಕ್ಷಿಣಾಪಥಕ್ಕೆ ವಲಸೆ ಬಂದಿತೆಂದೂ ಇಲ್ಲಿ ಪ್ರಭಾಚಂದ್ರನೆಂಬ ಆಚಾರ್ಯನು ತನ್ನ ಅವಸಾನ ಕಾಲವನ್ನರಿತು ಸಮಾಧಿ ಹೊಂದಬಯಸಿ, ಒಬ್ಬ ಶಿಷ್ಯನೊಡನೆ ಕಟವಪ್ರಗಿರಿಗೆ ಬಂದು ಇಲ್ಲಿ ಜೀವ ತೊರೆದನೆಂದೂ ಹೇಳಿದೆ.

ಇಲ್ಲಿ ಹೆಸರಿಸಲಾದ ಭದ್ರ ಬಾಹು, ಪ್ರಭಾಚಂದ್ರ ಹಾಗೂ ಅವನ ಶಿಷ್ಯರನ್ನು ಗುರುತಿಸುವುದರಲ್ಲಿ ಭಿನ್ನಾಭಿ ಪ್ರಾಯಗಳಿವೆ. ಭದ್ರಬಾಹು ಜೈನರ ಶ್ರುತಕೇವಲಿಗಳ ಲ್ಲೊಬ್ಬನೆಂದೂ ಪ್ರಭಾಚಂದ್ರನು ಮೌರ್ಯ ಚಂದ್ರಗುಪ್ತ ನೆಂದೂ ರೈಸ್ ಅವರು ಊಹಿಸಿದರೆ, ಭದ್ರಬಾಹು ಕ್ರಿ.ಪೂ. 30-31ರಲ್ಲಿ ಬಂದ ಇಮ್ಮಡಿ ಭದ್ರಬಾಹುವೆಂದೂ ಚಂದ್ರಗುಪ್ತನು ಆತನ ಶಿಷ್ಯ ನಾದ ಗುಪ್ತಿಗುಪ್ತನೆಂದೂ ಫ್ಲೀಟ್ ಭಾವಿಸಿದ್ದಾರೆ. ಭದ್ರಬಾಹು ಮತ್ತು ಚಂದ್ರ ಗುಪ್ತರು ಶ್ರವಣಬೆಳಗೊಳದ ಚಿಕ್ಕಬೆಟ್ಟದ ಗುಹೆಯಲ್ಲಿ ವಾಸಿಸಿ, ಅಲ್ಲಿಯೇ ತಮ್ಮ ದೇಹ ತೊರೆದರೆಂಬ ನಂಬಿಕೆ 7ನೆಯ ಶತಮಾನದ ವೇಳೆ ಗಾಗಲೇ ದೃಢವಾಗಿ ಬೇರೂ ರಿತ್ತು. ವಾದ ವಿವಾದಗಳೇನಿ ದ್ದರೂ ಇತರ ಶಾಸನಾಧಾರ ಗಳನ್ನವಲಂಬಿಸಿ ಭದ್ರಬಾಹು ಶ್ರುತಕೇವಲಿ ಭದ್ರಬಾಹು ವೆಂದೂ ಚಂದ್ರಗುಪ್ತನು ಮೌರ್ಯ ಚಂದ್ರಗುಪ್ತ ನೆಂದೂ ಮಾಡಿರುವ ಊಹೆ ಹೆಚ್ಚು ಮನನೀಯವಾಗಿ ಕಂಡುಬರುತ್ತದೆ. ಶ್ರವಣಬೆಳಗೊಳದ ಶಾಸನಗಳಿಂದ ನಮಗೆ ಹಲವಾರು ಜೈನಯತಿಗಳ ಪರಿಚಯವಾಗುತ್ತದೆ. ಅವರು ಒಂದಿಲ್ಲೊಂದು ರೀತಿಯಿಂದ ಶ್ರವಣಬೆಳ ಗೊಳದೊಡನೆ ಸಂಬಂಧ ಹೊಂದಿದ್ದವರೇ. ಅವರಲ್ಲಿ ಪದ್ಮನಂದಿ, ಗೃಧ್ರಪಿಚ್ಛ, ಏಕಾಚಾರ್ಯ, ವಕ್ರಗ್ರೀವ ಎಂದೆಲ್ಲ ಕರೆಯಲಾದ ಕೊಂಡಕುಂ ದಾಚಾರ್ಯ ಪ್ರಮುಖನಾದವನು. ಈತ ಪ್ರವಚನಸಾರವೆಂಬ

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :80ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :81.2ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :91 ಕಿಲೋ ಮೀಟರ್

ಸೋಮನಾಥಪುರ

ಭಾರತದ ಕನರ್ಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕಸಬೆಗೆ 10 ಕಿಮೀ, ಮೈಸೂರಿಗೆ 40 ಕಿಮೀ ದೂರದಲ್ಲಿ ಕಾವೇರಿ ನದಿಯ ಎಡದಂಡೆಯ ಮೇಲಿದೆ. 13ನೆಯ ಶತಮಾನದಲ್ಲಿ ಇದೊಂದು ಅಗ್ರಹಾರವಾಗಿತ್ತು. ಈ ಅಗ್ರಹಾರಕ್ಕೆ ಸರ್ವನಮಸ್ಯ ಮಹಾಗ್ರಹಾರ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಅಥವಾ ಚತುವರ್ೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬ ಹೆಸರಿದ್ದಿತು. ಈ ಊರಿನಲ್ಲಿರುವ ಏಳು ಶಾಸನಗಳಲ್ಲದೆ ಹರಿಹರದಲ್ಲಿರುವ ಒಂದು ಶಾಸನವೂ ಹೆಬ್ಬಕವಾಡಿಯಲ್ಲಿ ರುವ ಮತ್ತೊಂದು ಶಾಸನವೂ ಈ ಅಗ್ರಹಾರದ ಬಗೆಗೆ, ಇಲ್ಲಿನ ದೇವಾಲಯಗಳ ಬಗೆಗೆ ಸಾಕಷ್ಟು ವಿವರಗಳನ್ನೊದಗಿಸುತ್ತವೆ.

ಕಲೆ ಹಾಗೂ ವಿದ್ಯೆಗೆ ಈ ಅಗ್ರಹಾರ ಆಗರವಾಗಿತ್ತೆಂದು ಶಾಸನಗಳು ವಣರ್ಿಸುತ್ತವೆ. ಹೊಯ್ಸಳ ಚಕ್ರವತರ್ಿ ಮುಮ್ಮಡಿ ನರಸಿಂಹನ ಆಳಿಕೆಯ ಕಾಲದಲ್ಲಿ ಆತನ ಸಂಧಿವಿಗ್ರಹಿಯೂ ಮಂತ್ರಿಯೂ ದಂಡನಾಯಕನೂ ಆಗಿದ್ದ ಸೋಮನಾಥ ಈ ಅಗ್ರಹಾರವನ್ನು ಸು. 1258ರಲ್ಲಿ ನಿಮರ್ಿಸಿ, ತನ್ನ ಹೆಸರಿನಿಂದ ಸೋಮನಾಥಪುರವೆಂದು ಕರೆದು, ಇಲ್ಲಿ ಒಂದು ವಿಷ್ಣು ದೇವಾಲಯವನ್ನೂ (ಕೇಶವ) ಒಂದು ಶಿವಾಲಯವನ್ನೂ (ಪಂಚಲಿಂಗ) ಕಟ್ಟಿಸಿದ. ಈ ದೇವಾಲಯಗಳಲ್ಲದೆ ಕಾವೇರಿ ನದಿಯ ದಡಕ್ಕೆ ಹೊಂದಿಕೊಂಡಂತೆ ಲಕ್ಷ್ಮೀನರಸಿಂಹ, ಯೋಗನಾರಾಯಣ ಮತ್ತು ನಾರಸಿಂಹೇಶ್ವರ ದೇವಾಲಯಗಳನ್ನೂ ಪಂಚಲಿಂಗ ದೇವಾಲಯದ ಬಳಿ ಸೋವಲೇಶ್ವರವೆಂಬ ಮತ್ತೊಂದು ಶಿವದೇವಾಲಯವನ್ನೂ ಈತ ಕಟ್ಟಿಸಿದುದಾಗಿ ತಿಳಿದುಬರುತ್ತದೆ. ಕೇಶವ ದೇವಾಲಯ ಮೂರು ಗರ್ಭಗೃಹಗಳುಳ್ಳ ತ್ರಿಕೂಟಾಚಲ. ಬೇಲೂರಿನ ಚೆನ್ನಕೇಶವ ದೇವಾಲಯಕ್ಕಿಂತ ಸಣ್ಣದಾಗಿದ್ದರೂ ಇಲ್ಲಿ ಕೆತ್ತನೆಯ ಅಲಂಕಾರದ ಕೆಲಸಗಳು ಹೆಚ್ಚು. ಹಾಗಾಗಿ ಇದು ಉತ್ತಮ ಹೊಯ್ಸಳ ದೇವಾಲಯವೆಂದು ಪರಿಗಣಿತವಾಗಿದೆ.

ಈ ದೇವಾಲಯ 218 ಉದ್ದ, 117 ಅಗಲದ ಚತುರಸ್ರಾಕಾರದ ಅಂಗಳದ ಮಧ್ಯದಲ್ಲಿದೆ. ಈ ಅಂಗಳದ ಒಳಭಾಗದಲ್ಲಿ ಪ್ರಾಕಾರದ ಗೋಡೆಗೆ ಸೇರಿದಂತೆ ಎರಡು ಅಂಕಣಗಳ 64 ಕೈಸಾಲೆ ಮಂಟಪಗಳಿವೆ. ದೇವಾಲಯ ಪೂವರ್ಾಭಿಮುಖವಾಗಿದ್ದು ಮೂರು ಅಡಿಯ ಜಗತಿಯ ಮೇಲೆ ನಿಂತಿದೆ. ಜಗತಿಯನ್ನು ಹತ್ತಲು ಮೆಟ್ಟಲುಗಳಿದ್ದು ಅವುಗಳ ಎರಡು ಪಾಶ್ರ್ವಗಳಲ್ಲಿಯೂ ಸಣ್ಣ ದೇವಾಲಯಗಳಿವೆ. ಜಗತಿಯು ಹದಿನಾರು ಕೋಣಗಳ ನಕ್ಷತ್ರಾಕಾರದ್ದಾಗಿದ್ದು, ಅದರ ಕೆಳಭಾಗದ ಮೂಲೆಗಳಲ್ಲಿ, ಕಟ್ಟಡವನ್ನು ಹೊತ್ತು ನಿಂತಿರುವಂತೆ ಆನೆಗಳು ನಿಲ್ಲಿಸಲ್ಪಟ್ಟಿವೆ.

ಜಗತಿಗೆ ಒರಗಿಕೊಂಡಂತೆ ಕೆಲವು ವಿಗ್ರಹಗಳಿವೆ. ದೇವಾಲಯದ ಗೋಡೆಯನ್ನು ಕೆಳಭಾಗ, ಮಧ್ಯಭಾಗ ಮತ್ತು ಮೇಲ್ಭಾಗವೆಂದು ವಿಂಗಡಿಸಬಹುದು. ಕೆಳಭಾಗದ ಪಟ್ಟಿಕೆಗಳಲ್ಲಿ ಆನೆ, ಅಶ್ವಾರೋಹಿಗಳು, ಲತಾಪಟ್ಟಿಕೆ, ಪೌರಾಣಿಕ ಕಥೆಗಳ ಪಟ್ಟಿಕೆ, ಮಕರ, ಹಂಸಗಳು ಕೆತ್ತಲ್ಪಟ್ಟಿವೆ. ಈ ಪ್ರತಿಯೊಂದು ಪಟ್ಟಿಕೆಯೂ ಏಳು ಅಂಗುಲ ಅಗಲವಾಗಿವೆ. ಆನೆಗಳು ಮತ್ತು ಅಶ್ವಾರೋಹಿಗಳ ಪಟ್ಟಿಕೆಯಲ್ಲಿ ಕಾಣಬರುವ ಉಡುಗೆತೊಡುಗೆ, ಆಭರಣ, ಆಯುಧ ವಿಶೇಷಗಳು ಗಮನಾರ್ಹವಾದವು. ರಾಮಾಯಣ, ಭಾಗವತ ಮತ್ತು ಮಹಾಭಾರತದ ಕಥೆಗಳು ಪೌರಾಣಿಕ ಕಥೆಗಳ ಪಟ್ಟಿಕೆಯಲ್ಲಿ ಕಾಣಬರುತ್ತವೆ. ಪೂರ್ವದಿಂದ ಪ್ರಾರಂಭಿಸಿದರೆ ರಾಮಾಯಣದ ಕಥೆಯು ದಶರಥನ ಆಸ್ಥಾನ, ಪುತ್ರಕಾಮೇಷ್ಠಿಯಾಗದಿಂದ ಹಿಡಿದು ರಾಮ-ಸುಗ್ರೀವರ ಸ್ನೇಹದ ವರೆಗೂ ಕೆತ್ತಲ್ಪಟ್ಟಿದೆ. ಅನಂತರ ಕೃಷ್ಣಜನ್ಮದಿಂದ ಕಂಸವಧೆಯ ವರೆಗಿನ ಭಾಗವತ ಕಥೆಯಿದೆ. ಕೊನೆಯಲ್ಲಿ ಮಹಾಭಾರತದ ಕಥೆಯಿದೆ.

ಈ ಪಟ್ಟಿಕೆಗಳ ಮೇಲೆ, ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಇವುಗಳಲ್ಲಿ ನಾರಸಿಂಹ, ಹಯಗ್ರೀವ, ವೇಣುಗೋಪಾಲ, ವರಾಹ, ಶಿವ, ಇಂದ್ರ, ಮನ್ಮಥ, ಸೂರ್ಯ, ಮಹಿಷಾಸುರಮದರ್ಿನಿ, ಸರಸ್ವತಿ ಮುಖ್ಯವಾದವು. ಈ ವಿಗ್ರಹಗಳ ಪೀಠದ ಮೇಲೆ ಇವುಗಳನ್ನು ಕೆತ್ತಿದ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ, ಎಲೆಮಸೈಯ್ಯ ಮೊದಲಾದ ರೂವಾರಿಗಳ ಹೆಸರುಗಳಿವೆ. ಈ ವಿಗ್ರಹಗಳ ಮೇಲಿನ ತೋರಣಗಳಲ್ಲಿ ಲತಾ ಫಲಪುಷ್ಪ, ಕೀತರ್ಿಮುಖ ಬಲು ಸೂಕ್ಷ್ಮವಾಗಿ ಶಿಲ್ಪಿತವಾಗಿವೆ. ಈ ವಿಗ್ರಹಗಳ ಮೇಲೆ ಸಣ್ಣ ಪ್ರಮಾಣದ ಶಿಖರಗಳು ಕೆತ್ತಲ್ಪಟ್ಟಿವೆ. ಎಲ್ಲಕ್ಕೂ ಮೇಲೆ ಗೋಡೆಯ ತುದಿಯಲ್ಲಿ ದೇವಸ್ಥಾನದ ಸುತ್ತಲೂ ಲೋವೆಕಲ್ಲು ಇದೆ. ಈ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ಮೂರು ಶಿಖರಗಳು. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ಮಧ್ಯದಲ್ಲಿ ಒಂದು, ಎರಡು ಪಾಶ್ರ್ವಗಳಲ್ಲಿ ಒಂದೊಂದರಂತೆ ಇವೆ. ಇದರಿಂದ ಈ ದೇವಾಲಯ ಬಹು ರಮ್ಯವಾಗಿ ಕಾಣುತ್ತದೆ. ಇವು ಅಷ್ಟೇನೂ ಎತ್ತರವಾಗಿಲ್ಲ. ಜಗತಿಯಿಂದ ಮೇಲಕ್ಕೆ 32 ಮಾತ್ರ. ಆಕಾರದಲ್ಲಿ ಗರ್ಭಗುಡಿಯ ಗೋಡೆಯ ಮೇಲೆ ಗೋಡೆಯ ಶೈಲಿಯನ್ನೇ ಅನುಸರಿಸಿ ನಕ್ಷತ್ರಾಕಾರವಾಗಿ ಮೇಲಕ್

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :32ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :34ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 41.4ಕಿಲೋ ಮೀಟರ್

ತಲಕಾಡು

ಮೈಸೂರು ಜಿಲ್ಲೆಯ (ಕರ್ನಾಟಕ ರಾಜ್ಯ) ತಿರುಮಕೂಡ್ಲು ನರಸೀಪುರದಲ್ಲಿರುವ ಒಂದು ಪ್ರಾಚೀನ ಪಟ್ಟಣ, ಹಿಂದೂಗಳ ಪುಣ್ಯಕ್ಷೇತ್ರ, ಹೋಬಳಿಯ ಕೇಂದ್ರ. ಕಾವೇರಿ ನದಿಯ ಎಡದಂಡೆಯ ಮೇಲೆ, ಉ. ಅ. 12ಠ 11′ ಮತ್ತು ಪೂ. ರೇ, 77ಠ 2′ ನಲ್ಲಿ, ಮೈಸೂರಿನ ಆಗ್ನೇಯಕ್ಕೆ 45 ಕಿಮೀ. ದೂರದಲ್ಲಿದೆ. 1868ರ ವರೆಗೂ ಇದು ತಲಕಾಡು ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆ ವರ್ಷ ತಿರುಮಕೂಡ್ಲು ನರಸೀಪುರ ಆಡಳಿತ ಕೇಂದ್ರವಾಯಿತು. ಅನಂತರ ತಾಲ್ಲೂಕಿನ ಹೆಸರನ್ನೂ ತಿರುಮಕೂಡ್ಲು ನರಸೀಪುರವೆಂದು ಬದಲಾಯಿಸಲಾಯಿತು. ಪುರಾಣ, ಇತಿಹಾಸ : ತಲಾ ಮತ್ತು ಕಾಡ ಎಂಬ ಕಿರಾತಸೋದರರಿಂದ ಇದಕ್ಕೆ ತಲಕಾಡು ಎಂಬ ಹೆಸರು ಬಂತೆಂದೂ ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿಯೂ ಅವನ ಶಿಷ್ಯರೂ ಇಲ್ಲಿ ಮೋಕ್ಷ ಪಡೆದುದರಿಂದ ಇದು ಗಜಾರಣ್ಯಕ್ಷೇತ್ರವಾಯಿತೆಂದೂ ಪೌರಾಣಿಕ ಕಥೆಯಿದೆ. ತಲವನಪುರವೆಂಬುದು ಇದರ ಇನ್ನೊಂದು ಹೆಸರು. ಹಿಂದಿನ ಕಾಲದಲ್ಲಿ ಸೋಮದತ್ತನೆಂಬ ಒಬ್ಬ ಬ್ರಾಹ್ಮಣ, ಸಂಸಾರದಲ್ಲಿ ವಿರಕ್ತಿ ತಳೆದು ತನ್ನ ಶಿಷ್ಯರೊಡನೆ ಕಾಶೀಕ್ಷೇತ್ರಕ್ಕೆ ಹೋಗಿ ಮೋಕ್ಷ ಪಡೆಯಲು ಕೈಲಾಸನಾಥನಾದ ಶಿವನನ್ನು ಕುರಿತು ಉಗ್ರ ತಪ್ಪಸ್ಸನ್ನು ಆಚರಿಸಿದ, ಶಿವ ಪ್ರತ್ಯಕ್ಷನಾಗಿ, ಒಂದು ವರವನ್ನು ಬೇಡಲು ಸೋಮದತ್ತನಿಗೆ ಹೇಳಿದ. ಮನುಷ್ಯ ಯಾವ ಸ್ಥಳಕ್ಕೆ ಹೋದರೆ ಜನನ ಮರಣಾದಿ ದುಃಖಗಳಿಗೆ ಆಸ್ಪದವಿಲ್ಲದೆ, ಸದಾ ಆನಂದದಿಂದಿರಲು ಸಾಧ್ಯವೋ ಅಂಥ ಸ್ಥಳವನ್ನು ತಿಳಿಸಬೇಕೆಂದು ಸೋಮದತ್ತ ಕೋರಿದ.

ಆಗ ಶಂಭು ಅವನಿಗೆ ಋಚೀಕ ಮಹರ್ಷಿಯ ಆಶ್ರಮವಿರುವ ಸಿದ್ಧಾರಣ್ಯ ಕ್ಷೇತ್ರಕ್ಕೆ ಹೋಗಬೇಕೆಂದೂ ಆ ಸ್ಥಳದಲ್ಲಿ ತಾನು ವೈದ್ಯನಾಥನೆಂಬ ಹೆಸರಿನಿಂದ ನೆಲೆಸುವುದಾಗಿಯೂ ಹೇಳಿ ಅಂತರ್ಧಾನನಾದ. ಕಾವೇರಿ-ಕಪಿಲಾ ನದಿಗಳ ಸಂಗಮಸ್ಥಾನದ ಹತ್ತಿರವಿದ್ದ ಈ ಸ್ಥಳಕ್ಕೆ ಸೋಮದತ್ತ ತನ್ನ ಶಿಷ್ಯರೊಂದಿಗೆ ಪ್ರಯಾಣ ಬೆಳೆಸಿದ. ವಿಂಧ್ಯ ಪರ್ವತಗಳ ಹತ್ತಿರ ಬಂದಾಗ ಆನೆಗಳು ಅವರನ್ನು ಕೊಂದವು. ಅವರು ಆನೆಗಳಾಗಿ ಹುಟ್ಟಿ ಈ ಸ್ಥಳವನ್ನು ಸೇರಿದರು.

ಇಲ್ಲಿ ಈಶ್ವರ ಒಂದು ಶಾಲ್ಮಲೀವೃಕ್ಷದ ಪೊದರಿನ ಕೆಳಗೆ ಲಿಂಗರೂಪಿಯಾಗಿರುವುದನ್ನು ಅರಿತು ಆ ಆನೆಗಳು ಪ್ರತಿನಿತ್ಯವೂ ಸಮೀಪದಲ್ಲಿದ್ದ ಗೋಕರ್ಣತೀರ್ಥವೆಂಬ ಸರೋವರದಲ್ಲಿ ಮಿಂದು ಅಲ್ಲಿಯ ನೀರನ್ನು ಮತ್ತು ಕೆಂದಾವರೆಗಳನ್ನು ಸೊಂಡಿಲುಗಳಲ್ಲಿ ತಂದು ಲಿಂಗದ ಮೇಲೆ ಹಾಕಿ ಪೂಜೆಮಾಡಿ ಹೋಗುತ್ತಿದ್ದುವು. ಆ ಕಾಡಿನಲ್ಲಿ ವಾಸಿಸುತ್ತಿದ್ದ ತಲಾ ಮತ್ತು ಕಾಡರು ಇದನ್ನು ನೋಡಿ, ಮರದ ಬುಡದಲ್ಲಿ ಏನಿದೆಯೆಂಬ ಕುತೂಹಲದಿಂದ ತಮ್ಮ ಹರಿತವಾದ ಕೊಡಲಿಗಳಿಂದ ಅದಕ್ಕೆ ಬಲವಾದ ಏಟು ಹಾಕಿದರು. ಮರದ ಅಡಿಯಲ್ಲಿದ್ದ ಲಿಂಗ ಭಿನ್ನವಾಗಿ ಅದರಿಂದ ರಕ್ತ ಹರಿಯತೊಡಗಿತು. ಬೇಡರು ಭೀತರಾದರು. ಶಾಲ್ಮಲೀ ವೃಕ್ಷದ ಎಲೆಗಳನ್ನೂ ಫಲವನ್ನೂ ಅರೆದು ಅದರ ರಸವನ್ನು ಗಾಯಕ್ಕೆ ಹಚ್ಚಬೇಕೆಂದು ಅಶರೀರವಾಣಿಯೊಂದು ತಿಳಿಸಿತು. ಬೇಡರು ಹಾಗೆ ಮಾಡಿದ ಕೂಡಲೇ ರಕ್ತ ನಿಂತಿತು.

ಆ ವಾಣಿಯ ಆದೇಶದ ಮೇರೆಗೆ ಬೇಡರು ಹಾಲನ್ನು ಕುಡಿಯಲು ಅವರು ತಮ್ಮ ಸ್ವರೂಪವನ್ನು ಬಿಟ್ಟು ಗಣೇಶ್ವರಾದರು. ಮರುದಿನ ಬಂದ ಆನೆಗಳು ತಮ್ಮ ನಿತ್ಯಕರ್ಮವನ್ನಾಚರಿಸಿ ಬಾಯಾರಿಕೆಯಿಂದ ಹಾಲನ್ನು ಕುಡಿಯಲು ಅವಕ್ಕೂ ಮುಕ್ತಿ ದೊರಕಿತು. ಆದ್ದರಿಂದ ಆ ಸ್ಥಳಕ್ಕೆ ತಲಕಾಡು ಮತ್ತು ಗಜಾರಣ್ಯಕ್ಷೇತ್ರ ಎಂಬ ಹೆಸರುಗಳು ಬಂದುವು. ಅಲ್ಲದೆ ತನ್ನ ತಲೆಯ ಗಾಯಕ್ಕೆ ತಾನೆ ಔಷಧವನ್ನು ಹೇಳಿದ್ದನಾದ್ದರಿಂದ ಈಶ್ವರನಿಗೆ ವೈದ್ಯನಾಥನೆಂಬ ಹೆಸರು ಅನ್ವರ್ಥವಾಯಿತೆಂದು ಹೇಳಲಾಗಿದೆ. ತಲಕಾಡನ್ನು ಕುರಿತ ಪ್ರಥಮ ಉಲ್ಲೇಖ ಗಂಗರ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ್ದಾಗಿದೆ. ಮೊದಲು ಕೋಳಾಲದಲ್ಲಿ ಆಳುತ್ತಿದ್ದ ಗಂಗರು 500ರ ಸುಮಾರಿಗೆ ರಾಜಧಾನಿಯನ್ನು ತಲಕಾಡಿಗೆ ಬದಲಾಯಿಸಿರಬಹುದು. ಗಂಗರಾಜನಾದ ಹರಿವರ್ಮ ಇಲ್ಲಿ ನೆಲೆಸಿದ್ದನೆಂದು ಒಂದು ಶಾಸನದಲ್ಲಿದೆ. ಗಂಗರಾಜ ಶ್ರೀಪುರುಷನ ಕಾಲದ ಶಾಸನಗಳು ಇಲ್ಲಿ ದೊರೆತಿವೆ. ತಲಕಾಡು ಚೋಳರ ಆಳ್ವಿಕೆಗೆ ಸೇರಿದಾಗ ಅವರು ಇದನ್ನು ರಾಜರಾಜಪುರವೆಂದು ಕರೆದರು. ಚೋಳರ ಆಳ್ವಿಕೆಯ ಒಂದು ನೂರು ವರ್ಷಗಳಲ್ಲಿ ತಲಕಾಡು ಏಳಿಗೆ ಹೊಂದಿತು. ಆಗ ಇಲ್ಲಿ ಅನೇಕ ಶಿವ ಮತ್ತು ವಿಷ್ಣು ದೇವಾಲಯಗಳು ನಿರ್ಮಿತವಾದುವೆಂದು ಹೇಳಲಾಗಿದೆ. 1116 ರಲ್ಲಿ ಹೊಯ್ಸಳ ವಿಷ್ಣುವರ್ಧನನ ದಂಡನಾಯಕ ಗಂಗರಾಜ,

ಚೋಳರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿ ತಲಕಾಡನ್ನು ವಶಪಡಿಸಿಕೊಂಡ. ತಲಕಾಡುಗೊಂಡನೆಂಬ ಬಿರುದನ್ನು ವಿಷ್ಣುವರ್ಧನ ಧರಿಸಿದ. ಅವನೂ ಅವನ ತರುವಾಯ ಬಂದ ರಾಜರೂ ತಲಕಾಡನ್ನು 14ನೆಯ ಶತಮಾನದ ಮಧ್ಯಭಾಗದವರೆಗೆ ತಮ್ಮ ವಶದಲ್ಲಿಟ್ಟುಕೊಂಡಿದ್ದರು, ತಲಕಾಡು ಈ ಸಮಯದಲ್ಲಿ ಅತ್ಯಂತ ಉನ್ನತಿ ಹೊಂದಿ ಏಳು ಪುರಗಳನ್ನೂ ಐದು ಮಠಗಳನ್ನೂ ಒಳಗೊಂಡು ಹೊಯ್ಸಳರ ಉಪರಾಜಧಾನಿಯಾಗಿ ಮೆರೆಯಿತು. 3 ನೆಯ ಬಲ್ಲಾಳನ ಕಾಲದಲ್ಲಿ (1291-1342) ಅವನ ಮುಖ್ಯಮಂತ್ರಿಯಾದ ಪೆರುಮಾಳ್ ಡಣಾಯಕ ತಲಕಾಡಿನ ಆಚೆಯ ದಡದ ಮೇಲಿರುವ ಒಂದು ಪಾಠಶಾಲೆಯನ್ನು ಕಟ್ಟಿಸಿ ಅದಕ್ಕೆ ಜಹಗೀರುಗಳನ್ನು ಹಾಕಿಕೊಟ್ಟ. ಹೊಯ್ಸಳ ಚಕ್ರವರ್ತಿಗಳು ಶಿವ ಮತ್ತು ವಿಷ್ಣು ದೇವಾಲಯಗಳೆರಡಕ್ಕೂ ಸಹಾಯ ಸಲ್ಲಿಸುತ್ತಿದ್ದರು. 1117ರಲ್ಲಿ ವಿಷ್ಣುವರ್ಧನ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಕಟ್ಟಿಸಿದ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :47 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :49ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 57ಕಿಲೋ ಮೀಟರ್

ಮೇಲುಕೋಟೆ

ಮೇಲುಕೋಟೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಕಸಬೆಯಿಂದ ಉತ್ತರಕ್ಕೆ ೨೯ ಕಿ.ಮೀ ದೂರದಲ್ಲಿರುವ ಪಟ್ಟಣ, ಹೋಬಳಿಕೇಂದ್ರ. ಪ್ರಸಿದ್ಧ ಯಾತ್ರಾಸ್ಥಳ. ಸಮುದ್ರ ಮಟ್ಟದಿಂದ ೧,೦೧೩ ಮೀ ಎತ್ತರದಲ್ಲಿ ಗಿರಿಪಂಕ್ತಿಯೊಂದರ ಮೇಲೆ ಮಟ್ಟಸ ಪ್ರದೇಶದಲ್ಲಿ ಸುಂದರ ಸನ್ನಿವೇಶದಲ್ಲಿದೆ. ಇಲ್ಲಿಗೆ ಮಂಡ್ಯ ಮೈಸೂರು ಬೆಂಗಳೂರು ಮೊದಲಾದ ಸ್ಥಳಗಳಿಂದ ಉತ್ತಮ ರಸ್ತೆ ಸಂಪರ್ಕವಿದೆ. ಪುರಸಭಾಡಳಿತಕ್ಕೆ ಒಳಪಟ್ಟಿದೆ. ಜನಸಂಖ್ಯೆ ೩,೦೮೨ (೨೦೦೧). ದಕ್ಷಿಣ ಭಾರತದ ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಕ್ಷೇತ್ರಗಳಲ್ಲಿ ಇದೂ ಒಂದು (ಇತರ ಮೂರು- ಕಂಚಿ, ತಿರುಪತಿ, ಮತ್ತು ಶ್ರೀರಂಗಂ). ಇದಕ್ಕೆ ನಾರಾಯಣಾದ್ರಿ, ವೇದಾದ್ರಿ, ಯಾದವಾದ್ರಿ, ಯತಿಶೈಲ ಮುಂತಾದ ಹೆಸರುಗಳುಂಟು. ಶಾಸನಗಳಲ್ಲಿ ವೈಕುಂಠ ವರ್ಧನಕ್ಷೇತ್ರ, ದಕ್ಷಿಣ ಬದರಿಕಾಶ್ರಮ, ಯಾದವಗಿರಿ, ತಿರುನಾರಾಯಣಪುರ, ಮೇಲುಕೋಟೆ ಎಂಬ ಹೆಸರುಗಳ ಉಲ್ಲೇಖವಿದೆ. ಚೋಳರ ಕಾಲದಲ್ಲಿ ತಮಿಳುನಾಡಿನಲ್ಲಿ ಶ್ರೀವೈಷ್ಣವ ಸಮುದಾಯಕ್ಕೆ ಒದಗಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಮೇಲುಕೋಟೆ ಶ್ರೀವೈಷ್ಣವ ಪಂಥ, ಮುಖ್ಯ ಕೇಂದ್ರವಾಯಿತು.

೧೨ ವರ್ಷಗಳ ಕಾಲ ರಾಮಾನುಜರು ಮೇಲುಕೋಟೆಯಲ್ಲಿ ಇದ್ದರೆಂದು ಗುರುಪರಂಪರಾ ಪ್ರಭಾವ ಎಂಬ ಗ್ರಂಥ ತಿಳಿಸುತ್ತದೆ. ಹೊಯ್ಸಳರ ಕಾಲದಿಂದ ಪ್ರಸಿದ್ಧಿಗೆ ಬಂದ ಈ ಸ್ಥಳ ಇಂದಿಗೂ ಅದರ ಕೀರ್ತಿ ಪಾವಿತ್ರ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಮೇಲುಕೋಟೆಯ ಮುಖ್ಯ ಆಕರ್ಷಣೆ ಚೆಲುವನಾರಾಯಣ ದೇವಸ್ಥಾನ. ಮೂಲ ಗುಡಿಯಲ್ಲಿ ಗರ್ಭಗುಡಿ ಮತ್ತು ಅದರ ಸುತ್ತಲೂ ಕತ್ತಲೆ ಪ್ರದಕ್ಷಿಣೆ ಇದೆ. (ಇದು ವರ್ಷಕೊಂದು ದಿನ ವೈರಮುಡಿ ಉತ್ಸವದ ರಾತ್ರಿ ತೆರೆಯಲ್ಪಡುವುದು) ಗರ್ಭಗುಡಿಯ ಮುಂದಣ ನವರಂಗಕ್ಕೆ ಮೂರು ಕಡೆಯಿಂದ ಪ್ರವೇಶವುಂಟು. ಉತ್ಸವದವಿಗ್ರಹವಾದ ಶೆಲ್ವಪಿಳ್ಳೆಯನ್ನು ಮೂಲವಿಗ್ರಹದಿಂದ ಬೇರ್ಪಡಿಸಿ ನವರಂಗದಲ್ಲಿ ಒಂದು ಮಂಟಪದಲ್ಲಿ ಇಡುವುದು ಈ ದೇವಸ್ಥಾನದ ವೈಶಿಷ್ಟ್ಯ. ಪಾತಳಾಂಕದಲ್ಲಿರುವ ಅನೇಕ ಸನ್ನಿಧಿಗಳಲ್ಲಿ ರಾಮಾನುಜಾಚಾರ್ಯರ ಸನ್ನಿಧಿ, ಯದುಗಿರಿ ಅಮ್ಮನವರ ಸನ್ನಿಧಿ ಮುಖ್ಯವಾದವು. ರಾಮಾನುಜರು ಮೇಲುಕೋಟೆ ಬಿಟ್ಟು ಶ್ರೀರಂಗಕ್ಕೆ ಹೊರಟಾಗ ಅವರ ಶಿಷ್ಯರುಗಳಿಂದ ವಿಗ್ರಹ ಪ್ರತಿಷ್ಠಾಪಿಸಲ್ಪಟ್ಟಿತೆಂಬುದು ಪ್ರತೀತಿ. ೧೪ನೆಯ ಶತಮಾನದಲ್ಲಿ ಮೇಲುಕೋಟೆ ಮಹಮ್ಮದೀಯರ ದಾಳಿಗೆ ಈಡಾಗಿತ್ತು. ವಿಜಯನಗರದ ಅರಸು ಮಲ್ಲಿಕಾರ್ಜುನ ಮಂತ್ರಿ ತಿಮ್ಮಣ ದಂಡನಾಯಕ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ (೧೪೬೦).

ಚಕ್ರತ್ತಾಳ್ವಾರ್ ಸನ್ನಿಧಿ ಮುಂದೆಯೂ ಶ್ರೀಯದುಗಿರಿ ಅಮ್ಮನವರ ಸನ್ನಿಧಿ ಮುಂದೆಯೂ ಇರುವ ಮಂಟಪ ತಿಮ್ಮಣ ದಂಡನಾಯಕನಿಂದ ಕಟ್ಟಲಾಗಿದೆಯೆಂದು ಅಲ್ಲಿಯೇ ಕಂಬ ಮೇಲಿರುವ ಒಂದು ಶಾಸನ ಹೇಳುತ್ತದೆ. ಇಲ್ಲಿರುವ ಒಂದೊಂದು ಕಂಬದಲ್ಲೂ ರಾಮಾಯಣ ಮತ್ತು ಮಹಾಭಾರತ ಕಥೆಗಳು ಕಣ್ಣಿಗೆ ಕಟ್ಟುವಂತೆ ಕೆತ್ತಲ್ಪಟ್ಟಿವೆ. ೧೭೭೧ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು. ಅವರು ಗುರುತು ಕೂಡ ಸಿಕ್ಕದ ಹಾಗೆ ಇಲ್ಲಿಯ ಅನೇಕ ಧರ್ಮಕೇಂದ್ರಗಳನ್ನು ಸುಟ್ಟುಹಾಕಿದರಲ್ಲದೆ ಸಿಕ್ಕಿದ್ದನ್ನೆಲ್ಲ ಕೊಳ್ಳೆಹೊಡೆದು ಇಲ್ಲಿಯ ತೇರುಗಳಿಗೂ ಬೆಂಕಿಯಿಟ್ಟು ಅವುಗಳಲ್ಲಿದ್ದ ಕಬ್ಬಿಣದ ಭಾಗವನ್ನು ಕೂಡ ಸಾಗಿಸಿದರಂತೆ. ಚೆಲುವನಾರಾಯಣಸ್ವಾಮಿ ಮೈಸೂರು ಅರಸರ ಆರಾಧ್ಯ ದೈವ. ಆ ಅರಸರು ದೇವಾಲಯಕ್ಕೆ ಹೇರಳವಾದ ದಾನಧರ್ಮ ಮಾಡಿದ್ದಾರೆ. ರಾಜ ಒಡೆಯರು ತಮಗೆ ವಿಜಯನಗರ ಅರಸರಿಂದ ಉಂಬಳಿಯಾಗಿ ಬಂದ ಮುತ್ತಿಗೆರೆ ಗ್ರಾಮ ಮತ್ತು ಅದರ ೫೦ ಉಪಗ್ರಾಮಗಳನ್ನು ಇಲ್ಲಿಯ ದೇವಸ್ತಾನಕ್ಕೂ ಬ್ರಾಹ್ಮಣರಿಗೂ ಕೊಟ್ಟರು. ಗುಡಿ ಎದುರು ದೊಡ್ಡ ಮಂಟಪ ಕಟ್ಟಿಸಿ ದೇವತಾ ಉತ್ಸವಗಳಿಗೆ ಉತ್ತೇಜನ ನೀಡಿದರು. ರಾಜ ಒಡೆಯರ ಭಕ್ತವಿಗ್ರಹ ದೇವಸ್ಥಾನದ ಚಿನ್ನದ ಬಾಗಿಲಿನೊಳಗಿನ ನವರಂಗದ ಒಂದು ಕಂಬದಲ್ಲಿ ಕೆತ್ತಿದ್ದು ಈಗಲೂ ಅದಕ್ಕೆ ಮರ್ಯಾದೆ ಸಲ್ಲುತ್ತದೆ.

ಮೈಸೂರು ಅರಸರು ದೇವಾಲಯಕ್ಕೆ ಕೊಟ್ಟ ರತ್ನಾಭರಣಗಳ ವಸ್ತುಗಳು ಈಗಲೂ ಇವೆ. ರಾಜ ಒಡೆಯರ ರಾಜಮುಡಿ ಮತ್ತು ಕೃಷ್ಣರಾಜರ ಒಡೆಯರ ಕೃಷ್ಣರಾಜ ಮುಡಿ ಬಹಳ ಪ್ರಸಿದ್ಧವಾದವು. ಟಿಪ್ಪು ಈ ದೇವಸ್ಥಾನಕ್ಕೆ ಕೆಲವು ಆನೆ ಮತ್ತು ಆಭರಣಗಳನ್ನು ನೀಡಿರುವುದಾಗಿ ಶಾಸನಗಳಿಂದ ತಿಳಿಯುತ್ತದೆ. ರತ್ನಖಚಿತ ವೈರಮುಡಿ ಎಂಬ ಕಿರೀಟ ಚೆಲುವ ನಾರಾಯಣಸ್ವಾಮಿ ಗುಡಿಯ ಅಮೂಲ್ಯ ವಸ್ತುಗಳಲ್ಲಿ ಒಂದು. ಪ್ರತಿ ವರ್ಷ ಈ ಕಿರೀಟವನ್ನು ಉತ್ಸವ ಮೂರ್ತಿಗೆ ಧರಿಸಿ ವೈಭವಯುತವಾಗಿ ವೈರಮುಡಿ ಉತ್ಸವವನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲಾಗುತ್ತದೆ. ಇದು ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಇಲ್ಲಿಯ ಅಷ್ಟತೀರ್ಥಗಳಲ್ಲಿ ಕಲ್ಯಾಣಿ ಅಗ್ರಗಣ್ಯವಾದುದು. ಇದು ರಾಮಾನುಜರ ಕಾಲಕ್ಕೆ ಮುಂಚೆಯೇ ಇತ್ತೆಂದು ಹೇಳಲಾಗಿದೆ. ಇದರ ಸುತ್ತ ಅನೇಕ ಮಂಟಪಗಳಿವೆ. ರಾಮಾನುಜ ಸಿದ್ಧಾಂತದ ಅನುಯಾಯಿಗಳ ಯತಿರಾಜಮಠ, ಪರಕಾಲ ಮಠ, ವಾನಮಾಲೈಮಠ ಮುಂತಾದವೂ ಇಲ್ಲಿವೆ. ಆಧುನಿಕ ಕನ್ನಡ ಸಾಹಿತ್ಯದ ಹಿರಿಯ ಕವಿ ಪು.ತಿ.ನ ಅವರ ಜನ್ಮಸ್ಥಳವಿದು.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :49.5 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :50ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :60.2 ಕಿಲೋ ಮೀಟರ್

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರ-ದಕ್ಷಿಣ ಅಗಲವಾಗಿದ್ದು ಪೂರ್ವ-ಪಶ್ಚಿಮ ಕಿರಿದಾಗುತ್ತ ಹೋಗುವ ಈ ತಾಲ್ಲೂಕಿನ ಪೂರ್ವ ಮತ್ತು ಆಗ್ನೇಯದಲ್ಲಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕೂ ಪಶ್ಚಿಮ, ನೈಋತ್ಯ ಮತ್ತು ದಕ್ಷಿಣದಲ್ಲಿ ಅನುಕ್ರಮವಾಗಿ ಮೈಸೂರು ತಾಲ್ಲೂಕು, ಉತ್ತರದಲ್ಲಿ ಪಾಂಡವಪುರ ಮತ್ತು ಮಂಡ್ಯ ತಾಲ್ಲೂಕುಗಳು ಇವೆ. ಅರಕೆರೆ, ಬೆಳಗೊಳ, ಶ್ರೀರಂಗಪಟ್ಟಣ ಮತ್ತು ಕೆ. ಶೆಟ್ಟಿಹಳ್ಳಿ ಇದರ ಹೋಬಳಿಗಳು. ೯೭ ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ ೩೪೬.೭ ಚ.ಕಿಮೀ. ಜನಸಂಖ್ಯೆ ೧೬೨,೬೮೨. ತಾಲ್ಲೂಕಿನಲ್ಲಿ ಹುಲಿಕೆರೆ-ಕರಿಘಟ್ಟ ಶ್ರೇಣಿಗೆ ಸೇರಿದ ಕರಿಘಟ್ಟ ಬೆಟ್ಟ ಶ್ರೀರಂಗಪಟ್ಟಣದ ಹತ್ತಿರವಿದೆ. ಈ ಬೆಟ್ಟದ ಬುಡದಲ್ಲೇ ಲೋಕ ಪಾವನಿ ಬಾಬುರಾಯನಕೊಪ್ಪಲು ಬಳಿ ಕಾವೇರಿ ನದಿಯನ್ನು ಸೇರಿಕೊಳ್ಳು ವುದು. ತಾಲ್ಲೂಕಿನ ಮುಖ್ಯನದಿ ಕಾವೇರಿ. ಕೃಷ್ಣರಾಜಸಾಗರದ ಮೇಲುಗಡೆ ಹೇಮಾವತಿಯನ್ನು ಕೂಡಿಕೊಂಡು ಈ ನದಿ ಶ್ರೀರಂಗಪಟ್ಟಣ ತಾಲ್ಲೂಕನ್ನು ಪ್ರವೇಶಿಸುತ್ತದೆ. ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪ ದೂರ ಪಾಂಡವಪುರ ತಾಲ್ಲೂಕನ್ನು ಶ್ರೀರಂಗಪಟ್ಟಣ ತಾಲ್ಲೂಕಿನಿಂದ ಬೇರ್ಪಡಿಸಿ ಪೂರ್ವಾಭಿಮು ಖವಾಗಿ ಹರಿಯುವುದು.

ಮುಂದೆ ಮಹದೇವಪುರದ ಬಳಿ ಆಗ್ನೇಯಾಭಿ ಮುಖವಾಗಿ ಹರಿದು ತಿರುಮಕೂಡಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುವುದು. ಉತ್ತಮ ಹವಾಮಾನವಿರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ೫೪೭.೪೦ ಮಿಮೀ. ಕಾವೇರಿ, ಲೋಕಪಾವನಿ ಈ ನದಿಗಳ ನೀರನ್ನು ತಾಲ್ಲೂಕಿನಲ್ಲಿ ಬಳಸಿಕೊಳ್ಳುತ್ತಿರುವುದಲ್ಲದೆ ವ್ಯವಸಾಯಕ್ಕೆ ಸಾಕಷ್ಟು ಜಲ ಪೂರೈಕೆ ಮಾಡುವ ವಿರಜಾ ನದಿ ಕಾಲುವೆ, ದೇವರಾಯ ಕಾಲುವೆ, ರಾಮಸ್ವಾಮಿ ಮತ್ತು ಚಿಕ್ಕದೇವರಾಯಸಾಗರ ಕಾಲುವೆಗಳು ತಾಲ್ಲೂಕಿನಲ್ಲಿ ಹರಡಿವೆ. ಇತ್ತೀಚೆಗೆ ಯೋಜಿಸಲಾಗಿರುವ ಕರಿಘಟ್ಟ ನೀರೆತ್ತುಗ ಯೋಜನೆಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಸಾವಿರಾರು ಎಕರೆಗಳಿಗೆ ಜಲ ಪೂರೈಸಲಾಗುತ್ತಿದೆ. ಜಲ ಸಮೃದ್ಧಿಯನ್ನು ಹೊಂದಿರುವ ಈ ತಾಲ್ಲೂಕು ಫಲವತ್ತಾದ ಕೆಂಪು ಜೇಡಿಮಿಶ್ರಿತ ಮಣ್ಣಿನಿಂದ ಕೂಡಿದೆ. ಈ ತಾಲ್ಲೂಕಿನ ಮುಖ್ಯ ಬೆಳೆಗಳು ಬತ್ತ, ಕಬ್ಬು, ರಾಗಿ, ಜೊತೆಗೆ ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು. ಹರಳು ಬೆಳೆಯುತ್ತಾರೆ. ತೋಟಗಳಲ್ಲಿ ತೆಂಗು ಮತ್ತು ವಿವಿಧ ಫಲಗಳನ್ನು ಬೆಳೆಯುವುದುಂಟು. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಮತ್ಸ್ಯೋದ್ಯಮವೂ ಅಭಿವೃದ್ಧಿಯಾಗುತ್ತಿದೆ. ಈ ತಾಲ್ಲೂಕಿನ ಬೆಳಗೊಳದಲ್ಲಿ ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್ (೧೯೬೨), ಮೈಸೂರ್‌ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ (೧೯೩೭), ಮೈಸೂರು ಕೆಮಿಕಲ್ ಮ್ಯಾನುಫ್ಯಾಕ್ಚರರ್ಸ್ಮ (೧೯೪೧), ಅಲೈಡ್ ರೆಸಿನ್ಸ್ ಅಂಡ್ ಕೆಮಿಕಲ್ಸ್ (೧೯೬೫) ಕಾರ್ಖಾನೆಗಳಿದ್ದು ಕಾಗದ ಮತ್ತು ರಸಾಯನಿಕ ಗೊಬ್ಬರಗಳ ತಯಾರಿಕೆಯಿತ್ತು. ಶ್ರೀರಂಗಪಟ್ಟಣದಲ್ಲಿ ರೇಷ್ಮೆ ನೂಲು ಸಂಸ್ಕರಣ ಕೇಂದ್ರವಿದೆ. ಅರಕೆರೆ ಬಳಿ ಕಚ್ಚಾ ಕಾಗದದ ಕಾರ್ಖಾನೆಯೊಂದು ರೂಪುಗೊಂಡಿತ್ತು.

ಇವಲ್ಲದೆ ಈ ತಾಲ್ಲೂಕಿನಲ್ಲಿ ಮೊದಲಿಂದಲೂ ಬೆಲ್ಲದ ತಯಾರಿಕೆ ಇದೆ. ಈ ತಾಲ್ಲೂಕಿನ ಕೊಡಿಯಾಲ ಕೈಮಗ್ಗದ ಬಟ್ಟೆಗಳಿಗೆ ಪ್ರಸಿದ್ಧ. ಶ್ರೀರಂಗಪಟ್ಟಣದಲ್ಲಿ ಜೇನುಸಾಕಣೆ ಕೇಂದ್ರವಿದೆ. ವ್ಯವಸಾಯದ ಉಪಕರಣಗಳ ತಯಾರಿಕೆಯುಂಟು. ಮೈಸೂರು-ಬೆಂಗಳೂರು, ಮೈಸೂರು-ಹಾಸನ ರೈಲುಮಾರ್ಗಗಳು ಈ ತಾಲ್ಲೂಕು ಮುಂಖಾಂತರ ಹಾದುಹೋಗಿವೆ. ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಜೊತೆಗೆ ತಾಲ್ಲೂಕಿನ ಎಲ್ಲ ಕಡೆಗೂ ಉತ್ತಮ ಮಾರ್ಗ ಸಂಪರ್ಕವಿದೆ. ಶ್ರೀರಂಗಪಟ್ಟಣದ ನೈಋತ್ಯಕ್ಕೆ ಇರುವ ಪಶ್ಚಿಮವಾಹಿನಿ ಒಂದು ಪುಣ್ಯಕ್ಷೇತ್ರ ಮತ್ತು ರೈಲ್ವೆ ನಿಲ್ದಾಣ. ಇಲ್ಲಿ ಕಾವೇರಿ ನದಿಯ ಒಂದು ಕವಲು ಪಶ್ಚಿಮಾಭಿಮುಖವಾಗಿ ಹರಿಯುವುದರಿಂದ ಪಶ್ಚಿಮ ವಾಹಿನಿ ಎಂಬ ಹೆಸರು ಬಂದಿದೆ. ಇಲ್ಲಿ ಬಂಗಾರದೊಡ್ಡಿ ಅಣೆಕಟ್ಟು ಮತ್ತು ಅನೇಕ ಛತ್ರಗಳು ಇದ್ದು ಧಾರ್ಮಿಕ ಕಾರ್ಯಗಳು ನಡೆಯುತ್ತಿರುತ್ತವೆ. ಶ್ರೀರಂಗಪಟ್ಟಣದ ನೈಋತ್ಯಕ್ಕೆ ೫ ಕಿಮೀ ದೂರದಲ್ಲಿರುವ ಪಾಲಹಳ್ಳಿ ಕಾವೇರಿನದಿಯ ಬಲದಂಡೆಯ ಮೇಲಿದೆ. ೧೮೭೧ರವರೆಗೂ ಮೈಸೂರು ಅಷ್ಟಗ್ರಾಮ ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಆಗಿನ ಪ್ರಸಿದ್ಧ ‘ಅಷ್ಟಗ್ರಾಮ ಶುಗರ್ ವರ್ಕ್ಸ್’ ಸಕ್ಕರೆ ಕಾರ್ಖಾನೆ ಪಾಲಹಳ್ಳಿಯಲ್ಲಿ ನಡೆಯುತ್ತಿತ್ತು (೧೮೪೭-೯೪). ಇದರ ಹತ್ತಿರವೇ ಪ್ರಸಿದ್ಧ ರಂಗನತಿಟ್ಟು (ನೋಡಿ- ರಂಗನತಿಟ್ಟು-ಪಕ್ಷಿಧಾಮ) ಪಕ್ಷಿಧಾಮವಿದೆ. ಶ್ರೀರಂಗಪಟ್ಟಣ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಇತಿಹಾಸ ಪ್ರಸಿದ್ಧ ಪಟ್ಟಣ. ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾವೇರ ಿ ನದಿಯಿಂದ ಸುತ್ತುವರಿದಿರುವ ದ್ವೀಪ ಮತ್ತು ಒಂದು ಪುಣ್ಯಕ್ಷೇತ್ರ. ಮಂಡ್ಯಕ್ಕೆ ನೈಋತ್ಯದಲ್ಲಿ ೨೯ ಕಿಮೀ ದೂರದಲ್ಲೂ ಮೈಸೂರಿನ ಉತ್ತರಕ್ಕೆ ೧೩ ಕಿಮೀ ದೂರದಲ್ಲೂ ಇದೆ.

ಜನಸಂಖ್ಯೆ ೨೩೪೪೮. ಸ್ಥಳಪುರಾಣದ ಪ್ರಕಾರ ಪೂರ್ವದಲ್ಲಿ ಗೌತಮ ಋಷಿ ಇಲ್ಲಿಯ ಆದಿರಂಗನನ್ನು ಪೂಜಿಸಿ ಇಲ್ಲಿ ವಾಸವಾಗಿದ್ದುದರಿಂದ ಇದಕ್ಕೆ ಗೌತಮಕ್ಷೇತ್ರವೆಂಬ ಹೆಸರಿತ್ತೆಂದು ತಿಳಿದುಬರುವುದು. ೮೯೪ರಲ್ಲಿ ಗಂಗರ ಸಾಮಂತನಾದ ತಿರುಮಲಯ್ಯ ಇಲ್ಲಿಯ ರಂಗನಾಥಸ್ವಾಮಿ ದೇವಾಲಯ ವನ್ನು ಕಟ್ಟಿಸಿ ಇದಕ್ಕೆ ಶ್ರೀರಂಗಪುರವೆಂದು ಹೆಸರಿಟ್ಟನೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ೧೧೧೭ರಲ್ಲಿ ವೈಷ್ಣವಧರ್ಮವನ್ನು ಅವಲಂಬಿಸಿದ ಅನಂತರ ಹೊಯ್ಸಳ ವಿಷ್ಣುವರ್ಧನ ರಾಮಾನುಜಾಚಾರ್ಯ ರಿಗೆ ಕಾವೇರೀತಿರದಲ್ಲಿ ಅಷ್ಟಗ್ರಾಮಗಳನ್ನು ಬಿಟ್ಟುಕೊಟ್ಟು ಈ ಗ್ರಾಮಗಳ ಮೇಲ್ವಿಚಾರಣೆಗೆ ಹೆಬ್ಬಾರರು ಅಥವಾ ಪ್ರಭುಗಳೆಂಬ ಅಧಿಕಾರಿಗಳನ್ನು ನಿಯಮಿಸಿದ. ೧೧೨೦ರಲ್ಲಿ ವಿಷ್ಣುವರ್ಧನನ ತಮ್ಮನಾದ ಉದಯಾದಿತ್ಯ ಕಾಡಿನಿಂದ ಆವೃತವಾಗಿದ್ದ ಈ ಸ್ಥಳದಲ್ಲಿ ಊರನ್ನು ನಿರ್ಮಿಸಿದ. ೧೫ ಮತ್ತು ೧೬ನೆಯ ಶತಮಾನಗಳಲ್ಲಿ ವಿಜಯನಗರದ ಚಕ್ರವರ್ತಿಗಳು ಶ್ರೀರಂಗಪಟ್ಟಣವನ್ನು ಒಂದು ಪ್ರಾಂತ್ಯವನ್ನಾಗಿ ಮಾಡಿ ಪ್ರಾಂತ್ಯಾಧೀಶನನ್ನು ನಿಯಮಿಸಿದ್ದರು. ವಿಜಯನಗರದ ಪತನಾನಂತರ ಮೈಸೂರಿನ ರಾಜಒಡೆ ಯರು ೧೬೧೦ರಲ್ಲಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮುಂದೆ ೧೭೬೧ರ ವೇಳೆಗೆ ಹೈದರನು ಪ್ರಾಬಲ್ಯಕ್ಕೆ ಬಂದು ಮೈಸೂರು ರಾಜರನ್ನು ಮೂಲೆಗೊತ್ತಿ ತಾನೇ ಆಡಳಿತ ನಡೆಸತೊಡಗಿದ. ಅನಂತರ ಇವನ ಮಗ ಟಿಪ್ಪು ಅಧಿಕಾರಕ್ಕೆ ಬಂದ. ಇವನ ಕಾಲದಲ್ಲಿ ಈ ಸ್ಥಳ ಸಾಕಷ್ಟು ಅಭಿವೃದ್ಧಿಹೊಂದಿತು. ೧೭೯೯ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಇಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲಿದೆ.

ದೇವಾಲಯದ ಹೆಚ್ಚು ಒಳಭಾಗ ಹೊಯ್ಸಳರ ಕಾಲದ್ದು. ಗರ್ಭಗೃಹ ಮತ್ತು ಸುಕನಾಸಿಗಳ ಚಾವಣಿಗಳ ಮಧ್ಯದಲ್ಲಿ ಪದ್ಮಗಳನ್ನು ಬಿಡಿಸಿದೆ. ವಿಜಯನಗರ ಕಾಲದ ಗಂಟೆ ಮಾದರಿಯ ಕಂಬಗಳು ನವರಂಗದಲ್ಲಿವೆ. ನವರಂಗ ದ್ವಾರದ ಬಳಿ ಎರಡು ದೊಡ್ಡ ದ್ವಾರಪಾಲಕ ವಿಗ್ರಹಗಳಿವೆ. ಮಹಾದ್ವಾರದ ಗೋಪುರ, ಮುಖಮಂಟಪ ಮತ್ತು ಗರ್ಭಗೃಹದ ಗೋಪುರ ವಿಜಯನಗರ ಶಿಲ್ಪ ಲಕ್ಷಣವುಳ್ಳವು. ದೇವಾಲಯದಲ್ಲಿ ಹೊಯ್ಸಳ ಮತ್ತು ವಿಜಯನಗರ ಕಾಲಕ್ಕೆ ಸೇರಿದ ಕೆಲವು ದೇವತೆಗಳ ಋಷಿಗಳ ವಿಗ್ರಹಗಳು ಆಕರ್ಷಕವಾಗಿವೆ. ಶ್ರೀರಂಗನಾಥನ ಮುಖ್ಯ ವಿಗ್ರಹ ಬಹು ಆಕರ್ಷಕವಾದದ್ದು. ಶ್ರೀರಂಗನಾಥ ಏಳು ಹೆಡೆಗಳುಳ್ಳ ಆದಿಶೇಷನ ಮೇಲೆ ಪವಡಿಸಿದ್ದಾನೆ. ಶ್ರೀರಂಗನಾಥನ ಪಾದದ ಬಳಿ ಲಕ್ಷ್ಮಿವಿಗ್ರಹವಿದೆ. ಹಾಗೇ ಗೌತಮ ಮುನಿಯ ವಿಗ್ರಹವೂ ಇದೆ. ಇಲ್ಲಿನ ಕೆಲವು ಬೆಳ್ಳಿ ಪದಾರ್ಥಗಳು ಟಿಪ್ಪುಸುಲ್ತಾನ್ ದೇವಾಲಯಕ್ಕೆ ದಾನ ಕೊಟ್ಟಿದ್ದೆಂದು ತಿಳಿದುಬರುತ್ತದೆ. ಇಲ್ಲಿರುವ ಇತರ ದೇವಾಲಯಗಳಲ್ಲಿ ನರಸಿಂಹ ಮತ್ತು ಗಂಗಾಧರೇಶ್ವರ ದೇವಾಲಯಗಳು ಮುಖ್ಯವಾದವು. ನರಸಿಂಹ ದೇವಾಲಯವನ್ನು ಕಂಠೀರವ ನರಸರಾಜ ಒಡೆಯರ್ (೧೬೩೮-೫೯) ಕಟ್ಟಿಸಿದರೆಂದು ತಿಳಿದು ಬರುತ್ತದೆ. ದೊಡ್ಡದಾದ ಗರ್ಭಗೃಹ, ವಿಶಾಲವಾದ ಸುಕನಾಸಿ ಮತ್ತು ಅನೇಕ ಕಂಬಗಳುಳ್ಳ ನವರಂಗವಿದೆ. ಹೊಯ್ಸಳರ ಕಾಲದ ಲಕ್ಷ್ಮೀನರ ಸಿಂಹ ವಿಗ್ರಹ ಬಹು ಅಚ್ಚುಕಟ್ಟಾಗಿ ಕೆತ್ತಿದೆ. ಈ ದೇವಾಲಯದೊಳಗಿರುವ ಅಂಬೆಗಾಲು ಕೃಷ್ಣ ಆಕರ್ಷಣೀಯ. ಇಲ್ಲಿ ಮೂರುವರೆ ಅಡಿ ಎತ್ತರವಿರುವ ೧೭ನೆಯ ಶತಮಾನದ ಕಂಠೀರವ ನರಸರಾಜ ಒಡೆಯರ ವಿಗ್ರಹವಿದೆ. ಸು. ೧೬ನೆಯ ಶತಮಾನದ ಗಂಗಾಧರೇಶ್ವರ ದೇವಾಲ ಯವನ್ನು ಹೊಯ್ಸಳರ ಕಾಲದಲ್ಲಿ ಕಟ್ಟಿದ್ದು. ಈ ದೇವಾಲಯದ ನವರಂಗದಲ್ಲಿ ೬ ಮುಖಗಳೂ ೧೨ ಕೈಗಳೂ ಇರುವ ಸುಬ್ರಹ್ಮಣ್ಯ ವಿಗ್ರಹವಿದೆ.

ಮಂಟಪದಲ್ಲಿ ೧೮ನೆಯ ಶತಮಾನದ, ಅಂದವಾಗಿ ಬಿಡಿಸಿರುವ ೧೫ ಮಂದಿ ಶಿವಶರಣರ ಮೂರ್ತಿಗಳಿವೆ. ದಳವಾಯಿ ನಂಜರಾಜ (೧೮ನೆಯ ಶತಮಾನ) ಕೊಟ್ಟಿದ್ದೆನ್ನುವ ಒಂದು ತಾಮ್ರದ ಸುಂದರ ದಕ್ಷಿಣಾಮೂರ್ತಿಯ ಚಿತ್ರವಿರುವ ಶಾಸನವಿದೆ. ರಂಗನಾಥಸ್ವಾಮಿ ದೇವಾಲಯದ ಮುಂಭಾಗದ ಬಳಿ ಮೂರನೆಯ ಕೃಷ್ಣರಾಜ ಒಡೆಯರ ಜನ್ಮಸ್ಥಳವನ್ನು ಸರ್ಕಾರ ರಕ್ಷಿಸಿದ್ದು ಅಲ್ಲೊಂದು ಮಂಟಪವನ್ನು ಕಟ್ಟಿಸಲಾಗಿದೆ. ಶ್ರೀರಂಗಪಟ್ಟಣವನ್ನು ಸುತ್ತುವರಿದಿದ್ದ ಗಟ್ಟಿ ಕೋಟೆಯನ್ನು ಈಗಲೂ ಕಾಣಬಹುದು. ಟಿಪ್ಪುವಿನ ಅರಮನೆ ಎಂದು ಹೇಳುವ ಲಾಲ್‌ಮಹಲ್ ಸಂಪೂರ್ಣ ನಾಶವಾಗಿದೆ. ಖೈದಿಗಳನ್ನು ಕೂಡಿಡುತ್ತಿದ್ದ ಎರಡು ನೆಲಮಾಳಿಗೆ ಬಂದೀಖಾನೆಗಳಿವೆ. ಕೋಟೆಯ ಸುತ್ತ ಕಂದಕವಿದ್ದು ಅದರಲ್ಲಿ ಕಾವೇರಿ ನದಿಯ ನೀರು ತುಂಬುವಂತೆ ಮಾಡಲಾಗುತ್ತಿತ್ತು.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :15 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :19ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ : 26.5ಕಿಲೋ ಮೀಟರ್

ನಂಜನಗೂಡು

ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ಈ ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕು ಜಿಲ್ಲೆಯ ಮಧ್ಯದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ ಮೈಸೂರು, ಪೂರ್ವದಲ್ಲಿ ತಿರುಮಕೂಡ್ಲು ನರಸೀಪುರ, ದಕ್ಷಿಣದಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ, ಪಶ್ಚಿಮದಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕುಗಳಿವೆ. ಇದರ ವಿಸ್ತೀರ್ಣ 982 ಚ.ಕಿ.ಮೀ., ತಾಲ್ಲೂಕು ಜನಸಂಖ್ಯೆ 3,58,415 (2001) ಹಾಗೂ ಪಟ್ಟಣದ ಜನಸಂಖ್ಯೆ 48,220 (2001). ಬಿಳಿಗೆರೆ, ಚಿಕ್ಕಯ್ಯನ ಛತ್ರ, ಹುಲ್ಲಹಳ್ಳಿ, ದೊಡ್ಡ ಕವಲಂದೆ, ನಂಜನಗೂಡು ಇವು ಈ ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ 188. ತಾಲ್ಲೂಕಿನ ನೆಲ ಈಶಾನ್ಯದ ಕಡೆಗೆ ಇಳಿಜಾರಾಗಿದೆ. ಅಲ್ಲಲ್ಲಿ ಕೆಲವು ಗುಡ್ಡಗಳಿವೆ. ಒಟ್ಟಿನಲ್ಲಿ ಇದು ಮೈದಾನ ಪ್ರದೇಶ. ತಾಲ್ಲೂಕಿನ ಮುಖ್ಯ ನದಿ ಕಪಿಲಾ. ವಾಯುವ್ಯದಲ್ಲಿ ಹೆಗ್ಗಡದೇವನಕೋಟೆ ಮತ್ತು ನಂಜನಗೂಡು ತಾಲ್ಲೂಕುಗಳ ಗಡಿಯಾಗಿ ಹರಿಯುವ ಈ ನದಿ ಅನಂತರ ತಾಲ್ಲೂಕಿನ ಉತ್ತರ ಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ನಂಜನಗೂಡು ಪಟ್ಟಣದ ಬಳಿ ಇದರ ಹರಿವು ಈಶಾನ್ಯ ದಿಕ್ಕಿಗೆ ಬದಲಾಗುತ್ತದೆ.

ಮುಂದೆ ಈ ನದಿ ತಿರುಮಕೂಡ್ಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಗುಂಡ್ಲುಪೇಟೆ ತಾಲ್ಲೂಕಿನಿಂದ ಹರಿದು ಬರುವ ಗುಂಡ್ಲು ಹೊಳೆ ಈ ತಾಲ್ಲೂಕಿನ ನಡುವೆ ಉತ್ತರದ ಕಡೆಗೆ ಮುಂದುವರಿದು ನಂಜನಗೂಡು ಪಟ್ಟಣದಲ್ಲಿ ಕಪಿಲಾ ನದಿಯನ್ನು ಸೇರುತ್ತದೆ. ತಾಲ್ಲೂಕಿನ ಬಹುಭಾಗ ಕಣಶಿಲೆ ಮತ್ತು ಫೆಲ್ಸ್ಟ್ರಾನಿಂದ ಕೂಡಿದ್ದು, ಕೆಂಪು ನುರುಜು ಹಾಗೂ ಕಪ್ಪು ಎರೆಮಣ್ಣುಗಳಿವೆ. ಗುಂಡ್ಲು ಹೊಳೆ ಮಳೆಗಾಲದಲ್ಲಿ ದಡ ಮೀರಿ ಹರಿದು ಇಕ್ಕೆಲಗಳಲ್ಲೂ ಮೆಕ್ಕಲುಮಣ್ಣನ್ನು ತಂದು ತುಂಬುತ್ತದೆ. ಕಪಿಲಾ ನದಿಯ ದಡಗಳಲ್ಲೂ ಮೆಕ್ಕಲುಮಣ್ಣು ಹರಡಿದೆ. ಕೋಣೂರಿನ ಬಳಿಯಲ್ಲಿ ಕಲ್ನಾರಿನ ನಿಕ್ಷೇಪವುಂಟು. ಅಂಬಳೆ, ವಳಗೆರೆಗಳಲ್ಲಿ ಚಿನ್ನ ತೆಗೆಯಲಾಗುತ್ತಿತ್ತು. ಗುಂಡ್ಲು ಹೊಳೆಯ ದಡಗಳಲ್ಲಿ ಸುಣ್ಣಕಲ್ಲು, ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಮ್ಯಾಗ್ನಸೈಟ್ ಮತ್ತು ಕ್ರೋಮೈಟ್, ವಾಯುವ್ಯ ಭಾಗದಲ್ಲಿ ಬಳಪದ ಕಲ್ಲು ಇವೆ. ತಗಡೂರು ಮತ್ತು ಚಿನ್ನಂಬಳ್ಳಿಯಲ್ಲಿ ಕಾಗೆಬಂಗಾರವನ್ನು ತೆಗೆಯಲಾಗುತ್ತಿತ್ತು.

ತಾಲ್ಲೂಕಿನಲ್ಲಿ ವರ್ಷಕ್ಕೆ ಸರಾಸರಿ ಸು. 591 ಮಿ.ಮೀ. ಮಳೆಯಾಗುತ್ತದೆ. ಕಪಿಲಾ ನದಿಯ ಎಡದಂಡೆಯಲ್ಲಿ ರಾಮಪುರ ನಾಲೆಯೂ ಬಲದಂಡೆಯಲ್ಲಿ ಹುಲ್ಲಹಳ್ಳಿ ನಾಲೆಯೂ ಈ ತಾಲ್ಲೂಕಿನ ಉತ್ತರ ಭಾಗದಲ್ಲಿ ಉದ್ದಕ್ಕೂ ಸಾಗಿ ವಿಶಾಲವಾದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿವೆ. ನುಗು ಅಣೆಕಟ್ಟಿನಿಂದ ಬರುವ ನಾಲೆ ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಭಾಗಗಳಿಗೆ ನೀರೊದಗಿಸುತ್ತದೆ. ತಾಲ್ಲೂಕಿನಲ್ಲಿ ಕೆರೆಗಳ ಸಂಖ್ಯೆ ಕಡಿಮೆ. ಉತ್ತಮ ನೀರಾವರಿ ಸೌಲಭ್ಯವಿರುವುದರಿಂದ ಭತ್ತ ಈಗ ತಾಲ್ಲೂಕಿನ ಮುಖ್ಯ ಬೆಳೆ. ಸ್ವಲ್ಪ ಮಟ್ಟಿಗೆ ಕಬ್ಬು, ಕಡಲೆಕಾಯಿ ಮತ್ತು ದ್ವಿದಳ ಧಾನ್ಯಗಳನ್ನೂ ಬೆಳೆಯುತ್ತಾರೆ. ಜೋಳ ಮತ್ತು ರಾಗಿ ಮುಖ್ಯ ಖುಷ್ಕಿ ಬೆಳೆಗಳು. ನೆಲಗಡಲೆ, ದ್ವಿದಳ ಧಾನ್ಯಗಳು, ಹತ್ತಿ ಇವೂ ಬೆಳೆಯುತ್ತದೆ. ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ತೆಂಗಿನ ತೋಟಗಳಿವೆ. ನಂಜನಗೂಡಿನ ಸುತ್ತಿನಲ್ಲಿ ಬೆಳೆಯುವ ರಸಬಾಳೆ ಪ್ರಸಿದ್ಧವಾದದ್ದು. ಈ ತಾಲ್ಲೂಕಿನಲ್ಲಿ ಕೈಗಾರಿಕೆಗಳು ಕಡಿಮೆ. ಆದರೆ ನೇಯ್ಗೆ ಮತ್ತು ರೇಷ್ಮೆ ಉದ್ಯಮಗಳು ಅಲ್ಲಲ್ಲಿ ಇವೆ. ನಂಜನಗೂಡು ಪಟ್ಟಣದಲ್ಲಿ ಕೆಲವು ಕೈಗಾರಿಕೆಗಳುಂಟು. ಮೈಸೂರು-ಚಾಮರಾಜನಗರ ರೈಲುಮಾರ್ಗ ಮತ್ತು ಮೈಸೂರು-ಗುಂಡ್ಲುಪೇಟೆ-ಉದಕಮಂಡಲ ಹೆದ್ದಾರಿ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ಮೈಸೂರು-ಚಾಮರಾಜನಗರ-ತಿರುಚಿನಾಪಳ್ಳಿ ರಸ್ತೆ ನಂಜನಗೂಡು ಪಟ್ಟಣದ ಬಳಿ ಕವಲೊಡೆದು ಸ್ವಲ್ಪ ದೂರ ತಾಲ್ಲೂಕಿನಲ್ಲಿ ಸಾಗುತ್ತದೆ. ನಂಜನಗೂಡಿನಿಂದ ಟಿ.ನರಸೀಪುರ ಮತ್ತು ಹುಲ್ಲಹಳ್ಳಿಗೂ ಕವಲಂದೆಯಿಂದ ಕೊಳ್ಳೆಗಾಲಕ್ಕೂ ರಸ್ತೆಗಳಿವೆ.

ತಾಲ್ಲೂಕಿನಲ್ಲಿ ವಿದ್ಯುತ್ ಸೌಕರ್ಯ ಸಾಕಷ್ಟಿದೆ. ಗ್ರಾಮೀಣ ವಿದ್ಯುತ್ ಸೌಲಭ್ಯ ವ್ಯಾಪಕವಾಗಿರುವುದಲ್ಲದೆ ಅನೇಕ ಕಡೆಗಳಲ್ಲಿ ವಿದ್ಯುತ್ಚಾಲಿತ ಪಂಪುಗಳು ಉಪಯೋಗದಲ್ಲಿವೆ. ಹಲವು ಗ್ರಾಮಗಳಲ್ಲಿ ಅಂಚೆ ಮತ್ತು ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಇವೆ. ಈ ತಾಲ್ಲೂಕಿನ ಹದಿನಾರು, ಕಳಲೆ ಇವು ಹಿಂದೆ ಪಾಳೆಯಪಟ್ಟಿನ ಕೇಂದ್ರಗಳಾಗಿದ್ದವು. ಕಳಲೆ, ದೇವನೂರು, ಹೆಡತಲೆ, ಸುತ್ತೂರು ಈ ಸ್ಥಳಗಳಲ್ಲಿ ಪ್ರಾಚೀನ ದೇವಾಲಯಗಳಿವೆ. ದೇವನೂರು ಮತ್ತು ಸುತ್ತೂರಿನ ವೀರಶೈವ ಮಠಗಳು ಪ್ರಸಿದ್ಧವಾದವು. ಗಂಗರ ಕಾಲದಷ್ಟು ಪ್ರಾಚೀನತೆಯುಳ್ಳ ಇಮ್ಮಾವು ಗ್ರಾಮದಲ್ಲಿ ರಾಮ ದೇವಾಲಯವಿದೆ. ಇಲ್ಲಿ ಚತುರ್ಭುಜ ಲಕ್ಷ್ಮಣ ವಿಗ್ರಹ ಇದೆ. ನಂಜನಗೂಡಿನಿಂದ ಸುಮಾರು 1 ಕಿಮೀ. ಆಗ್ನೇಯದಲ್ಲಿರುವ ನಗರ್ಲೆ ಚೋಳರ ಕಾಲದಿಂದಲೂ ಪ್ರಸಿದ್ಧವಾದ ಊರು. ಇಲ್ಲಿ ಪ್ರಾಚೀನ ದುರ್ಗಾಪರಮೇಶ್ವರಿ ದೇವಾಲಯ ಮತ್ತು ಒಂದು ಜೀರ್ಣವಾದ ಪಾಶ್ರ್ವನಾಥ ಬಸ್ತಿ ಇದೆ. ನೇರಳೆಯಲ್ಲಿ ವೀರಭದ್ರ ದೇವಾಲಯವೂ ಹೆಮ್ಮರಗಾಲದಲ್ಲಿ ಪ್ರತಿವರ್ಷವೂ ಜಾತ್ರೆಗಳು ಜರುಗುತ್ತವೆ. ನಂಜನಗೂಡಿನ ಸಮೀಪದ ಗೋಳೂರಿನ ಬಳಿಯಲ್ಲಿ ಒಂದು ಮೂಲಶಿಕ್ಷಣ ಕೇಂದ್ರ (ವಿದ್ಯಾಪೀಠ) ಇದೆ. ನಂಜನಗೂಡು ಪಟ್ಟಣ ಮೈಸೂರಿನಿಂದ ದಕ್ಷಿಣ ಆಗ್ನೇಯಕ್ಕೆ 24 ಕಿಮೀ. ದೂರದಲ್ಲಿ ಕಪಿಲಾ ನದಿಯ ಬಲದಂಡೆಯ ಮೇಲಿದೆ. ಇದು ಕರ್ನಾಟಕದ ಮುಖ್ಯ ಯಾತ್ರಾಸ್ಥಳಗಳಲ್ಲೊಂದು. ಜನಸಂಖ್ಯೆ 22,583 (1971). ಮೈಸೂರು-ಚಾಮರಾಜನಗರ ರೈಲುಮಾರ್ಗದ ಮೇಲೆ ಇದೊಂದು ನಿಲ್ದಾಣ; ಮೈಸೂರು-ಉದಕಮಂಡಲ ಹೆದ್ದಾರಿ ಈ ಮೂಲಕ ಸಾಗುತ್ತದೆ. ಇಲ್ಲಿಂದ ಕೊಯಮತ್ತೂರಿಗೆ ರಸ್ತೆಯಿದೆ.

ಇದು ಸುತ್ತಲ ಅನೇಕ ಸ್ಥಳಗಳೊಡನೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಈ ಸುತ್ತಿನ ಪ್ರದೇಶಕ್ಕೆ ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಇಲ್ಲಿ ಬಟ್ಟೆ ಗಿರಣಿ, ಕಾಗದದ ಕಾರ್ಖಾನೆ, ಔಷಧ ಮತ್ತು ಸುಗಂಧ ದ್ರವ್ಯಗಳ ಕಾರ್ಖಾನೆ, ಅಕ್ಕಿ ಗಿರಣಿಗಳು ಮತ್ತು ಮರ ಕೊಯ್ಯುವ ಕಾರ್ಖಾನೆಗಳು ಇವೆ. ರೇಷ್ಮೆ ವ್ಯಾಪಾರ ಸ್ವಲ್ಪಮಟ್ಟಿಗೆ ನಡೆಯುತ್ತದೆ. ರೇಷ್ಮೆ ನೂಲುವ ಉದ್ಯಮವಿದೆ. ಅಂಚೆ-ತಂತಿ, ದೂರವಾಣಿ, ವಿದ್ಯುತ್ತು, ಸುರಕ್ಷಿತ ನೀರು ಸರಬರಾಜು ವ್ಯವಸ್ಥೆ ಇದೆ. ತಾಲ್ಲೂಕು ಮಟ್ಟದ ಆಸ್ಪತ್ರೆ ಮತ್ತು ಪಶುವೈದ್ಯಶಾಲೆ, ಶಾಲೆಗಳು ಮತ್ತು ಒಂದು ಪ್ರಥಮ ದರ್ಜೆ ಕಾಲೇಜು ಉಂಟು. ಪೌರಸಭೆ ಇದೆ. ಇಲ್ಲಿ ಪ್ರತಿ ಶುಕ್ರವಾರ ಸಂತೆ ಸೇರುತ್ತದೆ. ಪ್ರಾಚೀನ ಕಾಲದಿಂದಲೂ ತೀರ್ಥಕ್ಷೇತ್ರವಾಗಿರುವ ನಂಜನಗೂಡು ಉಮ್ಮತ್ತೂರು ಪಾಳೆಯಗಾರರ ಮತ್ತು ಕಳಲೆ ಅರಸರ ಕಾಲದಲ್ಲಿ ಉಚ್ಛ್ರಾಯಸ್ಥಿತಿಗೆ ಬಂತು. ಸುಮಾರು ಈ ಕಾಲಕ್ಕೆ ಸೇರಿದ ಕೋಟೆಯ ಅವಶೇಷಗಳನ್ನು ಊರಿನ ದಕ್ಷಿಣ ಭಾಗದಲ್ಲಿ ಮತ್ತು ಗುಂಡ್ಲು ಹೊಳೆಯ ದಡದಲ್ಲಿ ಗುರುತಿಸಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದೊರಕಿದ ವಿಶೇಷ ಪ್ರೋತ್ಸಾಹದಿಂದ ನಂಜನಗೂಡು ವಿಶೇಷವಾಗಿ ಬೆಳೆಯಿತು. ನಂಜನಗೂಡು ಪ್ರಸಿದ್ಧವಾಗಿರುವುದು ಇಲ್ಲಿಯ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇವಾಲಯದಿಂದ.

ಕನರ್ಾಟಕದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಇದು ಊರಿನ ಪೂರ್ವದ ಅಂಚಿನಲ್ಲಿ ಕಪಿಲಾ ಮತ್ತು ಗುಂಡ್ಲುಹೊಳೆಯ (ಕೌಂಡಿನ್ಯ ನದಿ) ಸಂಗಮದ ಬಳಿ ಪೂವರ್ಾಭಿಮುಖವಾಗಿದೆ. ನದಿಗಳಲ್ಲಿ ಪ್ರವಾಹ ಬಂದಾಗ ದೇವಾಲಯದಿಂದ ಕೇವಲ ತೊಂಬತ್ತು ಮೀಟರುಗಳಷ್ಟು ದೂರದವರೆಗೆ ಸಂಗಮದಲ್ಲಿ ನೀರು ಬರುತ್ತದೆ. ಶ್ರೀಕಂಠೇಶ್ವರ ದೇವಾಲಯ ದ್ರಾವಿಡ ಶೈಲಿಯ ಕಟ್ಟಡ. ಇದು 117 ಮೀ. ಉದ್ದ, 48 ಮೀ. ಅಗಲ ಇದೆ. ಇದರಲ್ಲಿ 147 ಕಂಬಗಳಿವೆ. ಇದರ ಒಟ್ಟು ಆಚ್ಛಾದಿತ ಪ್ರದೇಶ 4,831 ಚ.ಮೀ. ಇದು ಕರ್ನಾಟಕದಲ್ಲೇ ಅತ್ಯಂತ ದೊಡ್ಡ ದೇವಸ್ಥಾನ. ಹೊರಗೋಡೆಗಳು ಸುಮಾರು 3.7 ಮೀ. ಎತ್ತರವಾಗಿವೆ. ಸುತ್ತಲೂ ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಅಧಿಷ್ಠಾನ, ಹಿಂದೆ ಗೋಡೆ, ಮುಂದೆ ಕಂಬಸಾಲಿರುವ ಕೈಸಾಲೆ ಇವೆ. (ಈಗ ದಕ್ಷಿಣದ ಕೈಸಾಲೆಯನ್ನು ಪೂರ್ಣವಾಗಿಯೂ ಉತ್ತರದ್ದನ್ನು ಸ್ವಲ್ಪ ಭಾಗಗಳಲ್ಲಿಯೂ ಮುಚ್ಚಲಾಗಿದೆ). ಮೇಲೆ ಸುತ್ತಲೂ ದೇವ ಮತ್ತು ಇತರ ಶಿಲ್ಪಗಳಿರುವ ಕೂಟ ಮತ್ತು ಶಿಖರಗಳ ಗಚ್ಚಿನ ಹಾರ ಇದೆ. ಪೂರ್ವಭಾಗದಲ್ಲಿನ ಮಹಾದ್ವಾರದ ಮುಂದೆ ಇಕ್ಕೆಡೆ ಕೈಸಾಲೆಯಿರುವ ಒಂದು ಮುಖಮಂಟಪವಿದೆ. ಮಹಾದ್ವಾರ ಬೃಹತ್ ರಚನೆ. ಒಳಚಾವಣಿಯ ಎತ್ತರ ಸುಮಾರು 5.5 ಮೀ. ವಿಶಾಲ ಮಂಟಪದಂತಿರುವ ಈ ಭಾಗದಲ್ಲಿನ ದಪ್ಪ ಎತ್ತರದ ಬಾಗಿಲ ತೋಳುಗಳ ಮೇಲೆ ಮೋಹಿನಿ, ದ್ವಾರಪಾಲಕ ಮೊದಲಾದ ಶಿಲ್ಪಾಲಂಕರಣಗಳಿವೆ. ಮಹಾದ್ವಾರದ ಮೇಲೆ ಏಳು ಅಂತಸ್ತುಗಳಲ್ಲಿ ಎದ್ದಿರುವ ಸುಮಾರು 37 ಮೀ. ಎತ್ತರದ ಬೃಹತ್ ಗೋಪುರದ ಮೇಲ್ತುದಿಯಲ್ಲಿ ಚಿನ್ನದ ಗಿಲೀಟಿನ, 3 ಮೀಟರುಗಳಿಗೂ ಎತ್ತರವಾಗಿರುವ, ಏಳು ಕಲಶಗಳನ್ನು ಅಷ್ಟೇ ಎತ್ತರದ ಎರಡು ಕೊಂಬುಗಳ ಮಧ್ಯೆ ಸಾಲಾಗಿ ಜೋಡಿಸಲಾಗಿದೆ. ಮಹಾದ್ವಾರದಿಂದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ದೊಡ್ಡ ತೆರೆದ ಅಂಗಳವುಂಟು. ಇದರ ಮಧ್ಯಭಾಗದಲ್ಲಿ ಸುಂದರವಾದ ಒಂದು ವಸಂತ ಮಂಟಪ, ಆಗ್ನೇಯದಲ್ಲಿ ಪಾಕಶಾಲೆ ಮತ್ತು ಈಶಾನ್ಯದಲ್ಲಿ ಉಗ್ರಾಣ ಇವೆ. ದಕ್ಷಿಣದ ಭಾಗದಲ್ಲಿ ಒಂದು ಪ್ರವೇಶದ್ವಾರವುಂಟು. ಅಂಗಳದ ಇಕ್ಕೆಲದಲ್ಲೂ ಎತ್ತರದ ಎರಡು ಕಂಬಸಾಲುಗಳು ಉದ್ದುದ್ದವಾಗಿ ಹಬ್ಬಿವೆ. ಒಳಸಾಲಿನ ಹಿಂದಿನ ಅಂಕಣಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಂಗಳದ ಹಿಂದೆ ದೇವಾಲಯದ ಹಿಂಗೋಡೆಯವರೆಗೂ ಇರುವ ಈ ಭಾಗ ಪೂರ್ಣವಾಗಿ ಆಚ್ಛಾದಿತವಾಗಿರುವುದಲ್ಲದೆ ಅಂಗಳಕ್ಕಿಂತ ಸ್ವಲ್ಪ ಎತ್ತರದಲ್ಲಿದೆ. ಇಲ್ಲಿ ಮಧ್ಯದಲ್ಲಿರುವ ಗುಡಿಗಳನ್ನು ಬಿಟ್ಟು ಉಳಿದ ಭಾಗವನ್ನೆಲ್ಲ ಉದ್ದುದ್ದವಾಗಿ ಹಬ್ಬಿರುವ ಕಂಬಸಾಲುಗಳು ವಿಂಗಡಿಸುತ್ತವೆ.

ಅಂಗಳದಿಂದ ಮುಂದಕ್ಕೆ ಹೋಗುತ್ತಿದ್ದಂತೆಯೇ ಮೊದಲು ಸಿಗುವುದು ಬಸವನಕಟ್ಟೆ. ಇದು ವಸಂತ ಮಂಟಪದ ಎದುರಿಗೆ ಇರುವ ವಿಶಾಲವಾದ ಜಗತಿ. ಇದರ ಮೇಲೆ ಮಧ್ಯಸ್ಥಳದಲ್ಲಿ ಚಾವಣಿಯನ್ನೂ ಮೀರಿ ಮೇಲೆದ್ದಿರುವ ಅಷ್ಟಮುಖದ ಶಿಲಾದೀಪಸ್ತಂಭವಿದೆ. ಇದರ ಈಶಾನ್ಯ ಭಾಗದಲ್ಲಿರುವುದು ಬೃಹನ್ನಂದಿಯ ಗುಡಿ. ಕಟ್ಟೆಯ ವಾಯುವ್ಯದಲ್ಲಿ ಎತ್ತರವಾದ ಅಧಿಷ್ಠಾನದ ಮೇಲಿರುವುದು ತಾಂಡವೇಶ್ವರ ಗುಡಿ. ಕಟ್ಟೆಯ ಪಶ್ಚಿಮಕ್ಕೆ ಇರುವ ಮತ್ತೊಂದು ಮಹಾದ್ವಾರ ಈಗ ಕಟ್ಟಡದ ಒಳಗೆ ಸೇರಿಹೋಗಿದೆ. ಆದರೆ ಹಿಂದೆ ಇದು ದೇವಾಲಯದ ಮುಖ್ಯ ಪ್ರವೇಶದ್ವಾರವಾಗಿತ್ತು. ಇದರ ಕೆಳಭಾಗ ಕಲ್ಲಿನ ಕಟ್ಟಡ. ಇದರ ಚಾವಣಿಯ ಮೇಲೆ ಐದು ಅಂತಸ್ತುಗಳು ಮತ್ತು ಚಿನ್ನದ ಗಿಲೀಟಿನ ಐದು ಕಲಶಗಳು ಇರುವ ಸುಮಾರು 18 ಮೀ. ಎತ್ತರದ ಇಟ್ಟಿಗೆ ಮತ್ತು ಗಾರೆಯ ಶಿಖರವುಂಟು. ಈ ಮಹಾದ್ವಾರಕ್ಕೆ ಸೇರಿದಂತೆಯೇ ಬಲಪಾಶ್ರ್ವ ಮತ್ತು ಮುಂಭಾಗದಲ್ಲಿ ಕೆಲವು ಚಿಕ್ಕ ಗುಡಿಗಳಿವೆ. ಎಡಪಾಶ್ರ್ವದಲ್ಲಿ ನವಗ್ರಹಗಳಿರುವ ಒಂದು ಆವರಣವೂ ಅದರ ಹಿಂದೆ ಯಜ್ಞಶಾಲೆಯೂ ಇವೆ. ಈ ಮಹಾದ್ವಾರದ ಪಶ್ಚಿಮಕ್ಕಿರುವುದೇ ಶ್ರೀಕಂಠೇಶ್ವರ ಲಿಂಗವಿರುವ ಮೂಲ ಗುಡಿ. ಇದಕ್ಕೂ ಮಹಾದ್ವಾರಕ್ಕೂ ಮಧ್ಯೆ ಒಂದು ಕಲ್ಲಿನ ಬಲಿಪೀಠವೂ ಅದರ ಮೇಲೆ ಹಿತ್ತಾಳೆಯ ಹೊದಿಕೆಯಿರುವ ಸುಮಾರು 7.6 ಮೀ. ಎತ್ತರದ ಮರದ ಯಷ್ಟಿ ಇರುವ ಧ್ವಜಸ್ತಂಭವೂ ಇದೆ. ಮೂಲ ದೇವಾಲಯದಲ್ಲಿ ಗರ್ಭಗುಡಿ, ಸುತ್ತಲೂ ಪ್ರದಕ್ಷಿಣಾಪಥ ಮತ್ತು ಮುಂದೆ ಎರಡು ಕಂಬಗಳಿರುವ ಒಂದು ಒಳಮಂಟಪ ಇವೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :24 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :25 ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :14.6 ಕಿಲೋ ಮೀಟರ್

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು

ಸೆಂಟ್ ಫಿಲೋಮಿನಾಸ್ ಚರ್ಚ್

1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು (ಗೋಪುರಗಳು), ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಈ ಚರ್ಚನ್ನು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿಸಿವೆ.

  • ಭೇಟಿ ಸಮಯ: ಬೆಳಿಗ್ಗೆ 5 ರಿಂದ ಸಂಜೆ 6 ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :
  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :1.1ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :2.2 ಕಿಲೋ ಮೀಟರ್ • ವಿಮಾನ ನಿಲ್ದಾಣ ದಿಂದ :12.2 ಕಿಲೋ ಮೀಟರ್

ಸರ್ಕಾರಿ ರೇಷ್ಮೆ ಕಾರ್ಖಾನೆ

ವಿಶ್ವ ಪ್ರಸಿದ್ಧ ಮೈಸೂರು ರೇಷ್ಮೆ ಸೀರೆಗಳು, ಬಟ್ಟೆಗಳು ಇಲ್ಲಿ ಉತ್ಪಾದನೆಯಾಗುತ್ತವೆ. ಅಗ್ಗದ ಬೆಲೆಯಲ್ಲಿ ಅವುಗಳನ್ನು ಇಲ್ಲಿ ಕೊಳ್ಳಬಹುದು. ಇಲ್ಲಿಗೆ ಭೇಟಿ ನೀಡುವ ಮೊದಲೇ ಅನುಮತಿಯನ್ನು ಪಡೆದಿರಬೇಕು. ಭೇಟಿ ಸಮಯ: ಬೆಳಿಗ್ಗೆ 10 ರಿಂದ 12, ಮಧ್ಯಾಹ್ನ 2 ರಿಂದ ಸಂಜೆ 4 ರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಗಂಧದ ನಾಡಿದು ಮೈಸೂರು,ಪ್ರಪಂಚ ಪ್ರಸಿದ್ಧ ಅತ್ಯತ್ತಮ ಶ್ರೀಗಂಧದ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅಂದಿನ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ಸರ್ಕಾರಿ ಸಾಬೂನು ಕಾರ್ಖಾನೆ 1916ರಲ್ಲಿ ಆರಂಭಗೊಂಡಿತು. 1980ರಲ್ಲಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಾಗಿ ಪರಿವರ್ತನೆಗೊಂಡಿತು. ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ‘ಕೆಎಸ್‌ಡಿಎಲ್’ಗೆ ಸಮಾಜದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಹೀಗಾಗಿ ಇದಕ್ಕೆ ಲಾಭವೇ ಮುಖ್ಯವಲ್ಲ. ಜನಸಾಮಾನ್ಯರು, ಸಿರಿವಂತರು ಮತ್ತು ಆಧುನಿಕ ಮನೋಭಾವದ ಹೊಸ ಪೀಳಿಗೆಗೂ ಮೆಚ್ಚುಗೆ ಆಗುವ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 5.6 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :4.5 ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :9.4 ಕಿಲೋ ಮೀಟರ್

ಶ್ರೀ ಚಾಮರಾಜೇಂದ್ರ ಮೃಗಾಲಯ

ಇದು ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. 1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಚದರ ಅಡಿ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ . ಮೃಗಾಲಯದಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಹಿಡಿಸುತ್ತದೆ.

ಭೇಟಿ ಸಮಯ, ಪ್ರವೇಶ ಶುಲ್ಕ ಮತ್ತು ಸಂಪರ್ಕ

  • ಭೇಟಿ ಸಮಯ: ಬೆಳಿಗ್ಗೆ 8.30 ರಿಂದ ಸಂಜೆ 5.30, ಮಂಗಳವಾರ ರಜ. ಪ್ರವೇಶ ಶುಲ್ಕ : ಭಾರತೀಯರಿಗೆ:
  • ವಯಸ್ಕರಿಗೆ : 40. ರೂ • ಮಕ್ಕಳಿಗೆ (5 ರಿಂದ 12 ವರ್ಷ) : 20. ರೂ
  • 5 ವರ್ಷದ ಕೆಳಗಿನ ಮಕ್ಕಳಿಗೆ : ಉಚಿತ ವಿದೇಶೀಯರಿಗೆ :
  • ವಯಸ್ಕರಿಗೆ : 100. ರೂ • ಮಕ್ಕಳಿಗೆ (5 ರಿಂದ 12 ವರ್ಷ) : 50. ರೂ ಕ್ಯಾಮೆರಾ ಶುಲ್ಕ:
  • ವೀಡಿಯೋ ಕ್ಯಾಮೆರಾ : 150. ರೂ
  • ಸ್ಟಿಲ್ ಕ್ಯಾಮೆರಾ : 20. ರೂ
  • ಫೋನ್ : 0821-2434425 ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :
  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.2 ಕಿಲೋ ಮೀಟರ್ •
  • ರೈಲ್ವೆ ನಿಲ್ದಾಣ ದಿಂದ :3.4ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :9.9ಕಿಲೋ ಮೀಟರ್

ಲಲಿತಮಹಲ್ ಅರಮನೆ

ಮೈಸೂರು ನಗರದಿಂದ ತುಸು ಹೊರಭಾಗದಲ್ಲಿರುವ ಈ ಲಲಿತಮಹಲ್‌ ಅರಮನೆ ಎಂತಹವರನ್ನೂ ಅಯಸ್ಕಾಂತದಂತೆ ಸೆಳೆವ ಚೆಲುವಿನ ಗಣಿ. ಇದು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ನಿರ್ಮಾಣಗೊಂಡಿರುವ ಎರಡು ಅಂತಸ್ತಿನ ಭವ್ಯ ಕಟ್ಟಡವಾಗಿದ್ದು ಯೂರೋಪ್‌ ಮಾದರಿಯಲ್ಲಿದೆ. ಇದರ ಗುಮ್ಮಟ ಲಂಡನ್ನಿನ ಸೇಂಟ್‌ ಪಾಲ್ಸ್‌ ಕೆಥೀಡ್ರಲ್‌ ಶೈಲಿಯದು. ಪ್ರಸ್ತುತ ಇದು ಪ್ರವಾಸೋದ್ಯಮ ಇಲಾಖೆಯ ಪಂಚತಾರಾ ಹೊಟೇಲ್‌ ಆಗಿದ್ದು ದೇಶೀಯರ ಜೊತೆಗೆ ವಿದೇಶೀಯರನ್ನು ಆಕರ್ಷಿಸುತ್ತಿದೆ. ಹಾಗೆಯೇ ಕನ್ನಡ ಚಿತ್ರರಂಗ ಸೇರಿದಂತೆ ಹಾಲಿವುಡ್‌, ಬಾಲಿವುಡ್‌ ತಾರೆಗಳನ್ನು ತನ್ನತ್ತ ಸೆಳೆದುಕೊಂಡು ಹಲವಾರು ಸಿನೆಮಾ ಶೂಟಿಂಗ್‌ ಮೂಲಕ ಬೆಳ್ಳಿತೆರೆಯಲ್ಲೂ ಇದು ಮಿಂಚುತ್ತಿದೆ.

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :5.9 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :7 ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :13 ಕಿಲೋ ಮೀಟರ್

ರೈಲ್ವೆ ಮ್ಯೂಸಿಯಂ

1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ಇಲ್ಲಿ ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ, ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇವಲ್ಲದೆ ಇಲ್ಲಿನ ಮುಖ್ಯ ಆಕರ್ಷಣೆಗಳಾದ ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ. ಹಲವಾರು ಹಳೆಯ ರೈಲು ಇಂಜಿನ್ ಗಳು, ಬೋಗಿಗಳು, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ರೈಲು ಸಾಮಗ್ರಿಗಳು ಇಲ್ಲಿವೆ.

  • ಭೇಟಿ ಸಮಯ: ಬೆಳಿಗ್ಗೆ 10 ರಿಂದ ಸಂಜೆ 5.30
  • ಪ್ರವೇಶ: ಉಚಿತ

ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :

  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.3 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :800 ಮೀಟರ್ ಗಳು
  • ವಿಮಾನ ನಿಲ್ದಾಣ ದಿಂದ :12.6 ಕಿಲೋ ಮೀಟರ್

ಮೈಸೂರು ಅರಮನೆ

1897ರಲ್ಲಿ ಕಟ್ಟಲಾರಂಭಿಸಿ 1912ರಲ್ಲಿ ಮುಕ್ತಾಯಗೊಳಿಸಲಾದ ಈ ಅರಮನೆಗೆ ಅಂಬಾವಿಲಾಸ ಅರಮನೆ ಎಂದೂ ಹೆಸರು. ಈ ಅರಮನೆಯು ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿದ್ದು ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿದೆ. ಅರಮನೆಯ ಹೊರಭಿತ್ತಿಗಳಲ್ಲಿ ಹಕ್ಕಿಗಳು, ಪ್ರಾಣಿಗಳು ಹಾಗೂ ಇತರ ಕೆತ್ತನೆ ಇದೆ. ಒಳಭಾಗದ ಮುಚ್ಚಿಗೆಯಲ್ಲಿ ಕೆತ್ತನೆ ಇದೆ. ಅರಮನೆಯ ಪ್ರವೇಶವಾದಂತೆ ಬೊಂಬೆ ತೊಟ್ಟಿಲು ಮೊದಲು ಕಾಣಸಿಗುತ್ತದೆ. ಇಲ್ಲಿ 19 ಮತ್ತು 20ನೇ ಶತಮಾನದ ಪಾರಂಪರಿಕ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಪೂರ್ವವಾದ ಕೆತ್ತನೆಯಿರುವ ಕಂಬಗಳಿಂದ ಕೂಡಿದ ವಿಶಾಲವಾದ ಹಾಲ್‌ಗಳು, ದರ್ಬಾರ್‌ಹಾಲ್‌, ಕಲ್ಯಾಣ ಮಂಟಪಗಳು, ಆಯುಧಾಗಾರಗಳಿವೆ.

ಭೇಟಿ ಸಮಯ, ಪ್ರವೇಶ ಶುಲ್ಕ ಮತ್ತು ಸಂಪರ್ಕ

  • ಭೇಟಿ ಸಮಯ : ಪ್ರತಿ ದಿನ, ಬೆಳಿಗ್ಗೆ 10 ರಿಂದ ಸಂಜೆ 5:30 ರವೆರೆಗೆ.
  • ಪ್ರವೇಶ ಶುಲ್ಕ :
  • ದೊಡ್ಡವರಿಗೆ : 40. ರೂ • 10 ವರ್ಷದ ಕಡಿಮೆ ವಯಸ್ಸಿನ ಮಕ್ಕಳಿಗೆ : ಉಚಿತ
  • ವಿದ್ಯಾರ್ಥಿಗಳಿಗೆ : 10. ರೂ
  • ವಿದೇಶೀಯರಿಗೆ : 200. ರೂ ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :
  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.3 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :4ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :10 ಕಿಲೋ ಮೀಟರ್

ಜಗನ್ಮೋಹನ ಅರಮನೆ

ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆ ಮಾಡಲ್ಪಟ್ಟಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡ ಈ ವಸ್ತು ಸಂಗ್ರಹಾಲಯವನ್ನು ಒಂದು ಸಮಿತಿಗೆ ವಹಿಸಲಾಯಿತು. ನಂತರ ಈ ಅರಮನೆಗೆ ೧೯೫೫ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಆರ್ಟ್‌‌ ಗ್ಯಾಲರಿ ಎಂದು ಹೆಸರು ಬಂದಿತು. ಈ ಗ್ಯಾಲರಿಯಲ್ಲಿ ಟ್ರಾವೆಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್‌ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಗಲ್‌, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹ, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ..

ಭೇಟಿ ಸಮಯ:

  • 8:30 ಗಂಟೆಯಿಂದ ಸಂಜೆ 5:30 ರವರೆಗೆ ವೀಕ್ಷಣೆಗೆ ಅವಕಾಶವಿದ
  • ಪ್ರವೇಶ ಶುಲ್ಕ :
  • ದೊಡ್ಡವರಿಗೆ 20 ರೂಪಾಯಿ ಮಕ್ಕಳಿಗೆ (5 ರಿಂದ 10 ವರ್ಷ) 10 ರೂಪಾಯಿ ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :
  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :1.4ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :1.6ಕಿಲೋ ಮೀಟರ್
  • ವಿಮಾನ ನಿಲ್ದಾಣ ದಿಂದ :14.3 ಕಿಲೋ ಮೀಟರ್

ಚಾಮುಂಡಿ ಬೆಟ್ಟ

ಮೈಸೂರು ನಗರಕ್ಕೆ ಹೊಂದಿಕೊಂಡಂತೆ ಅದರ ಅಗ್ನೇಯಕ್ಕೆ ಪೂರ್ವಮಶ್ಚಿಮವಾಗಿ ಹಬ್ಬಿ ನಿಂತಿರುವ ಬೆಟ್ಟ. ಸಮುದ್ರಮಟ್ಟದಿಂದ ೧೦೬೩ ಮೀ. ಎತ್ತರವಾಗಿದೆ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಸುತ್ತಲೂ ಬಯಲಿದ್ದು, ಒಂಟಿಯಾಗಿ ನಿಂತಿರುವ ಕಡಿದಾದ ಈ ಬೆಟ್ಟ ಬಹು ದೂರದವರೆಗೂ ಗೋಚರಿಸುವುದಲ್ಲದೆ, ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಹರವು ಮತ್ತು ಸುತ್ತಲಿನ ಪ್ರಕೃತಿ ಸೌಂದರ್ಯ ರಮ್ಯವಾಗಿ ಕಾಣಿಸುತ್ತದೆ. ಮೈಸೂರಿಗೆ ಬರುವ ಪ್ರವಾಸಿಗಳ ಆಕರ್ಷಣೆಗಳಲ್ಲಿ ಇದೂ ಒಂದು ಮುಖ್ಯವಾದ್ದು. ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ.

ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ. ಭೂಮಿ ಅಸ್ತಿತ್ವಕ್ಕೆ ಬಂದದ್ದು ಸುಮಾರು ೮೫ ಲಕ್ಷ ವರ್ಷಗಳ ಹಿಂದೆ. ಇವತ್ತಿನ ಆಸ್ಟ್ರೇಲಿಯಾ, ಆಫ್ರಿಕಾ, ಭಾರತ ಭೂಖಂಡಗಳು ಒಟ್ಟಿಗೆ ಇದ್ದವು. ಇಂದಿಗೂ ನಕ್ಷೆಯಲ್ಲಿ ಈ ಭಾಗಗಳನ್ನು ಒಂದರ ಪಕ್ಕ ಒಂದು ಜೋಡಿಸಬಹುದಾಗಿದೆ. ಈ ಭೂಖಂಡಗಳು ಸರಿಯುತ್ತಾ ಇವೆ. ಭಾರತ ಭೂಖಂಡ ಚೀನಾ ಭಾಗದೊಂದಿಗೆ ಡಿಕ್ಕಿಯಾಗಿ, ಆ ಭಾಗದ ನೆಲ ಮೇಲಕ್ಕೇರಿತು. ಆಗ ರಚನೆ ಆದದ್ದೇ ಹಿಮಾಲಯ. ಇದು ಆದದ್ದು ೫-೬ ಲಕ್ಷ ವರ್ಷಗಳ ಹಿಂದೆ. ಹೀಗಾಗಿ ಚಾಮುಂಡಿ ಬೆಟ್ಟ ಹಿಮಾಲಯಕ್ಕಿಂತ ಹಳೆಯದು! ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ.

ಅಂದಿನಿಂದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇತಿಹಾಸ ತಜ್ಞರು. ಮೈಸೂರು ಅರಸರಲ್ಲಿ ಒಬ್ಬರಾದ ದೊಡ್ಡ ದೇವರಾಜ ಒಡೆಯರು, ಸಾರ್ವಜನಿಕರು ಬೆಟ್ಟದ ತಾಯಿಯ ದರ್ಶನ ಪಡೆಯಲು ಅನುಕೂಲವಾಗಲೆಂದು ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಲುಗಳನ್ನು ಕಟ್ಟಿಸಿದರು. ಈ ಸಾವಿರ ಮೆಟ್ಟಿಲುಗಳನ್ನು ಏರುವ ಭಕ್ತರು ದಣಿವಾರಿಸಿಕೊಲ್ಳಲೆಂದು ಮಾರ್ಗಮಧ್ಯದಲ್ಲಿ ಅಂದರೆ 700ನೇ ಮೆಟ್ಟಿಲಿನ ಬಳಿ ಬೃಹದಾಕಾರದ ನಂದಿಯನ್ನೂ ಪ್ರತಿಷ್ಠಾಪಿಸಿದರು. 16 ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕಡೆಯಲಾಗಿರುವ ನಂದಿಯ ಸುಂದರ ಮೂರ್ತಿ ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ, ಗೆಜ್ಜೆಸರಗಳನ್ನು, ಶಿಲ್ಪಿ ಸುಂದರವಾಗಿ ಕಡೆದಿದ್ದಾನೆ. ಬೆಟ್ಟದ ಮೇಲಿರುವ ಚಾಮುಂಡೇಶ್ವರಿಯ ಪುರಾತನ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದ್ದಾರೆ.ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು. ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ. ಪ್ರತಿವರ್ಷ ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಎರಡು ದಿನಗಳ ಬಳಿಕ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಬೆಟ್ಟ ಮೇಲೆ ಹೋಗಲು ಡಾಂಬರು ರಸ್ತೆಯೂ ಇದೆ, ನಗರ ಸಾರಿಗೆ ಸೌಲಭ್ಯವೂ ಇದೆ. ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಇಳಿಯುತ್ತಿದ್ದಂತೆಯೇ ದೇವಾಲಯಕ್ಕೆ ಹೋಗುವ ದಾರಿಯಲ್ಲಿರುವ 12 ಅಡಿ ಎತ್ತರದ ಮಹಿಷಾಸುರನ ಬೃಹತ್ ಪ್ರತಿಮೆ ಪ್ರವಾಸಿಗರನ್ನು, ಭಕ್ತರನ್ನು ಸ್ವಾಗತಿಸುತ್ತದೆ. ಅಂಗಡಿಗಳ ಸಾಲಿನಲ್ಲಿ ಮುಂದೆ ಸಾಗಿದರೆ ಮಷಿಷಾಸುರನನ್ನೇ ಕೊಂದ ತಾಯಿ ಚಾಮುಂಡಿಯ ದರ್ಶನವೂ ದೊರಕುತ್ತದೆ. ಭೇಟಿ ಸಮಯ ಮತ್ತು ಸಂಪರ್ಕ:

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2.00 ಮಧ್ಯಾಹ್ನ 3.30 ರಿಂದ ಸಂಜೆ 6.00 ಮತ್ತು ಸಂಜೆ 7:30 pm ರಿಂದ ರಾತ್ರಿ 9.00
  • ದೂರವಾಣಿ : 0821 – 2590027 ಮೈಸೂರಿನ ಪ್ರಮುಖ ನಿಲ್ದಾಣ ಗಳಿಂದ ಇರುವ ಅಂತರ :
  • ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :11.6 ಕಿಲೋ ಮೀಟರ್
  • ರೈಲ್ವೆ ನಿಲ್ದಾಣ ದಿಂದ :13ಕಿಲೋ ಮೀಟರ್ • ವಿಮಾನ ನಿಲ್ದಾಣ ದಿಂದ :15.1ಕಿಲೋ ಮೀಟರ್

ಮೂಲ : ಕರ್ನಾಟಕದ ಪ್ರವಾಸಿ ತಾಣಗಳು

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate