অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

೬೦೦೦ ಮಾದರಿ ಶಾಲೆ

“ನಾನು ರಾಜ್ಯಗಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಲು ಮನವಿ ಮಾಡುವೆ , ಶಿಕ್ಷಣದ ಬುನಾದಿಯ ಮೇಲೆಯೇ ಪ್ರಗತಿಪರ ಮತ್ತು ಸಮೃದ್ಧ ಸಮಾಜವನ್ನು ಕಟ್ಟಬಹುದು. ಹೆಚ್ಚುತ್ತಿರುವ ರಾಜಸ್ವ ಆದಾಯವು ರಾಜ್ಯಗಳ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿವೆ. ಈಗ ಅವು ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಈ ದಿಶೆಯಲ್ಲಿ ಅಂತಿಮವಾಗಿ, ನಮ್ಮ ಸರ್ಕಾರವು ಉತ್ತಮ ಗುಣಮಟ್ಟದ ಶಾಲೆಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಲು ಹಣ ಹೂಡಲು ನಿರ್ಧರಿಸಿದೆ. ನಾವು 6೦೦೦ ಹೆಚ್ಚಿನ ಗುಣಮಟ್ಟದ ಹೊಸ ಶಾಲೆಗಳನ್ನು ಬೆಂಬಲಿಸುವೆವು. – ದೇಶದ ಪ್ರತಿ ವಲಯಕ್ಕೆ ಒಂದರಂತೆ ಇರುವ ಈ ಶಾಲೆಯು ಆ ಪ್ರದೇಶದ ಇತರೆ ಶಾಲೆಗಳಿಗೆ ಶ್ರೇಷ್ಟತೆಯ ಮಾದರಿಯಾಗಿರುವುದು .”

ಹಿನ್ನೆಲೆ

ಹತ್ತನೆ ಯೋಜನೆಯ ಅವಧಿಯಲ್ಲಿ ಪ್ರೌಢ ಶಿಕ್ಷಣವು ಆದ್ಯ ವಿಷಯ ಆಗಿರಲಿಲ್ಲ. ಗುಣಮಟ್ಟ ಮತ್ತು ಲಭ್ಯತೆ ಯನ್ನು ಹೆಚ್ಚಿಸಲು ಕೇವಲ ಕೆಲವೆ ಯೋಜನೆಗಳು ಇದ್ದವು. ಆದರೆ ಅವುಗಳ ವ್ಯಾಪ್ತಿಯು ಹೆಚ್ಚಾಗಿರಲಿಲ್ಲ.ಅವು ಸರ್ವ ವ್ಯಾಪಿಯಾಗಿರಲಿಲ್ಲ. ಯೋಜನಾ ಕಾರ್ಯಕ್ರಮಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (MHRD) ಸ್ವಾಯತ್ತ ಸಂಸ್ಥೆಗಳು ನಡೆಸುತ್ತಿದ್ದ ಶಾಲಾ ವ್ಯವಸ್ಥೆಯನ್ನು ಮುಂದುವರಿಸುತ್ತಿದ್ದವು.ವಿಕಲಚೇತನರ ಶಿಕ್ಷಣ ನೀಡುವ ಪ್ರಯತ್ನ ಸೇರಿದಂತೆ,ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯ (ಹಾಸ್ಟೆಲ್) ಸೌಲಭ್ಯ ಒದಗಿಸಿ, ಶಾಲೆಗಳಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ (ICT) ಒದಗಿಸಿ, ಪ್ರೌಢ ಶಿಕ್ಷಣವನ್ನು ವೃತ್ತಿಪರವಾಗಿಸಿ, ಮುಕ್ತ ಮತ್ತು ದೂರ ಶಿಕ್ಷಣ ಕಲಿಕೆ ಸೇರಿದಂತೆ ಹಲವು ಪ್ರಯತ್ನಗಳು ಸಾಗಿದ್ದವು.

ಪ್ರಾಥಮಿಕ ಶಿಕ್ಷಣವು ಸಾರ್ವತ್ರಿಕವಾಗುವುದು ಸಂವಿಧಾನಾತ್ಮಕ ಆಶಯವಾದ ಮೇಲೆ, ಈ ವಿಷನ್ ಅನ್ನು ಪ್ರೌಢ ಶಿಕ್ಷಣದ ಸಾರ್ವತ್ರಿಕರಣದೆಡೆಗೆ ಮುನ್ನುಗ್ಗಿಸುವುದು ಅತ್ಯಾವಶಕವಾಯಿತು. ಇದನ್ನು ಆಗಲೆ ಹೆಚ್ಚಿನ ಸಂಖ್ಯೆಯ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳು ಸಾಧಿಸಿವೆ.

“ಪ್ರೌಢಶಿಕ್ಷಣದ ಅವಕಾಶವನ್ನು ಪಡೆಯಲು ಹೆಣ್ಣು ಮಕ್ಕಳು, ಪರಿಶಿಷ್ಠ ಜಾತಿ, ಮತ್ತು ಪರಿಶಿಷ್ಠ ಪಂಗಡದ ಮಕ್ಕಳನ್ನು ವಿಶೇಷವಾಗಿ ವಿಜ್ಞಾನ, ವಾಣಿಜ್ಯ ಮತ್ತು ವೃತ್ತಿ ವಾಹಿನಿಗಳಲ್ಲಿ ದಾಖಲು ಮಾಡಿ , ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕು”.

“…….ರಾಜ್ಯವು ಸಾರ್ವಜನಿಕ (ಪಬ್ಲಿಕ್) ಶಾಲಾ ವ್ಯಸ್ಥೆಯಲ್ಲಿ ಗುಣಮಟ್ಟ, ಕಟ್ಟಡ ,ಉಪಕರಣ ಇತ್ಯಾದಿ.. ಗಳಲ್ಲಿ ಹಣ ತೊಡಗಿಸಿ , ಕೇಂದ್ರೀಯ ವಿದ್ಯಾಲಯಗಳ ಮಟ್ಟಕ್ಕೆ ಸರಿ ಸಮ ಇರುವಂತೆ ಮಾಡಬೇಕು”.

ಮಾದರಿ ಶಾಲೆಯ ಪರಿಕಲ್ಪನೆ

ಮಾದರಿ ಶಾಲೆಗಳು ಮೂಲಭೂತವಾಗಿ ಕೇಂದ್ರೀಯ ವಿದ್ಯಾಲಯಗಳ ಮಟ್ಟದ ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳನ್ನು ಹೊಂದಿರಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಮಾಣವು ಅದೇ ಮಾದರಿಯಲ್ಲಿರ ಬೇಕು. ಮಾಹಿತಿ ಸಂವಹನ ತಂತ್ರಜ್ಞಾನ (ICT) ದ ಬಳಕೆ, ಸಮಗ್ರತಾ ದೃಷ್ಠಯ (ಹೋಲಿಸ್ಟಿಕ್) ಶೈಕ್ಷಣಿಕ ವಾತಾವರಣ, ಸೂಕ್ತ ಪಠ್ಯ ಕ್ರಮ, ಫಲಿತಾಂಶ ಮತ್ತು ಪರಿಣಾಮದ ಮೇಲೆ ಒತ್ತು ಇರಬೇಕು.

ಮಾದರಿ ಶಾಲೆಯ ಕೆಲವು ಮುಖ್ಯ ಲಕ್ಷಣಗಳು :

  1. ಮಾದರಿಶಾಲೆಯಲ್ಲಿ ನೀಡುವ ಶಿಕ್ಷಣವು ಸರ್ವಾಂಗಿಣವಾಗಿರಬೇಕು ಮತ್ತು ಐಕ್ಯತೆಯನ್ನು ಹೊಂದಿರಬೇಕು. ಅದು ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ದೈಹಿಕ,ಭಾವನಾತ್ಮಕ,ಮತ್ತು ಸೌಂದರ್ಯ ಪ್ರಜ್ಞೆಯನ್ನು ಅಭಿವೃದ್ಧಿಪಡಿಸಬೇಕು
  2. ಪೂರ್ತಿ ಹೊಸ ಶಾಲೆಗಳನ್ನು ಪ್ರಾರಂಭಿಸಬಹುದು. ಇಲ್ಲವೆ ಇದ್ದ ಶಾಲೆಗಳನ್ನೆ ಮಾದರಿ ಶಾಲೆಯಾಗಿ ಪರಿವರ್ತಿಸಬಹುದು..
  3. ಈ ರೀತಿಯ ಶಾಲೆಗಳಲ್ಲಿ ಬರಿ ಬೋಧನಾ ಸೌಕರ್ಯ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಿಗೆ, ಕ್ರೀಡೆಗೆ, ಅಗತ್ಯ ಸೌಲಭ್ಯ ಒದಗಿಸಲಾಗುವುದು ಕ್ರೀಡೆ, ಮನರಂಜನೆ,ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸಾಕಷ್ಟು ಅವಕಾಶ ಕಲ್ಪಿಸಲಾಗುವುದು. ಆಟದ ಮೈದಾನ, ಉದ್ಯಾನ ವನ, ರಂಗಮಂದಿರ, ಇತ್ಯಾದಿ ಸೌಲಭ್ಯಗಳನ್ನು ಮಾದರಿ ಶಾಲೆಯಲ್ಲಿ ಒದಗಿಸಲಾಗುವುದು.
  4. ಪಠ್ಯ ಕ್ರಮವು ಸ್ಥಳೀಯ ಸಂಸ್ಕೃತಿ ಪರಿಸರವನ್ನು ಒಳಗೊಂಡಿರಬೇಕು ಮತ್ತು ಬೋಧನೆಯು ಚಟುವಟಿಕೆ ಆಧಾರಿತವಾಗಿರಭೇಕು.
  5. ಈ ಶಾಲೆಗಳಲ್ಲಿ ಸಾಕಷ್ಟು ಮಾಹಿತಿ, ಸಂವನ ತಂತ್ರಜ್ಞಾನ (ICT) ಸೌಕರ್ಯ ವಿರುವುದು. ಮೂಲಸೌಲಭ್ಯ , ಅಂತರ್ಜಾಲ ಸಂಪರ್ಕ ಮತ್ತು ಪೂರ್ಣಾವಧಿ ಕಾಂಪ್ಯೂಟರ್ ಶಿಕ್ಷಕರು ಇರುವರು..
  6. ಶಿಕ್ಷಕ ಮತ್ತು ವಿದ್ಯಾರ್ಥಿ ಪ್ರಮಾಣವು 1:25 ನ್ನು ಮೀರಿರಬಾರದು. ತರಗತಿಗಳು ಕನಿಷ್ಟ 3೦ ಜನರನ್ನು ಹಿಡಿಯುವಷ್ಟು ವಿಶಾಲವಾಗಿರಬೇಕು. ಆದಾಗ್ಯೂ ತರಗತಿ ಕೋಣೆ ಮತ್ತು ವಿಧ್ಯಾರ್ಥಿಗಳ ಅನುಪಾತ ವು 1: 4೦ ಮೀರಬಾರದು.
  7. ಈ ಶಾಲೆಗಳಿಗೆ ನಿರ್ದಿಷ್ಟ ವಿಷಯ ಬೋಧಕರ ಜೊತೆಗೆ ಸಂಗೀತ ಶಿಕ್ಷಕರು, ಕರಕೌಶಲ (ಕ್ರಾಫ್ಟ) ಶಿಕ್ಷಕರು ನೇಮಕವಾಗಿರುವರು. ಈ ಶಾಲೆಗಳು ಭಾರತೀಯ ಪರಂಪರೆ ಕಲೆ , ಮತ್ತು ಕರಕುಶಲತೆಗೆ ಒತ್ತು ನೀಡಬೇಕು.
  8. ವಿಜ್ಞಾನ, ಗಣಿತ ಮತ್ತು ಆಂಗ್ಲಾ (ಇಂಗ್ಲಿಷ್) ವಿಷಯಗಳನ್ನು ಬೋಧಿಸಲು ವಿಶೇಷ ಆಸಕ್ತಿ ವಹಿಸಬೇಕು. ಅಗತ್ಯ ಬಿದ್ದರೆ ಸೇತು ಬಂಧ ಕೋರ್ಸ ಗಳನ್ನು ಹಿಂದುಳಿದ ಮಕ್ಕಳಿಗಾಗಿ ಏರ್ಪಡಿಸಬೇಕು.
  9. ಶಾಲಾ ಪಠ್ಯ ಕ್ರಮ ನಾಯಕತ್ವಗುಣ , ತಂಡಮನೋಭಾವ, ಪಾಲ್ಗೊ ಳ್ಳುವ ಸಾಮರ್ಥ್ಯ, ಮೃದು ಕೌಶಲ್ಯಗಳ ಅಭಿವೃದ್ಧಿ, ನೈಜ ಜೀವನ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಗಳನ್ನು ನಿಡುವ ಸಾಮಗ್ರಿ ವಿಷಯವನ್ನು ಸೇರಿಸಬೇಕು..
  10. ಆರೋಗ್ಯ ತಪಾಸಣೆ, ಆರೋಗ್ಯಶಿಕ್ಷಣ ಗಳು ಈ ಶಾಲೆಯಲ್ಲಿ ಇರುವವು
  11. ಮಕ್ಕಳಿಗೆ ಮತ್ತು ಶಿಕ್ಷಕರಿಗಾಗಿ ಉತ್ತಮ ಗ್ರಂಥಗಳು ಮತ್ತು, ನಿಯತಕಾಲಿಕಗಳನ್ನು ಹೊಂದಿದ ಗ್ರಂಥಾಲಯವಿರಬೇಕು.
  12. ಹೊರ ಸಂಚಾರ ಮತ್ತು ಶೈಕ್ಷಣಿಕ ಪ್ರವಾಸಗಳು ಪಠ್ಯಕ್ರಮದ ಅವಿಭಾಜ್ಯ ಅಂಗಗಳಾಗಿರಬೇಕು. *ಬೋಧನಾ ಮಾಧ್ಯಮದ ವಿಷಯವನ್ನು ರಾಜ್ಯಗಳಿಗೆ ಬಿಡಬೇಕು. ಆದರೂ ಆಂಗ್ಲಾ (ಇಂಗ್ಲಿಷ್) ಬೋಧನೆಗೆ ಮತ್ತು ಆಂಗ್ಲಾ (ಇಂಗ್ಲಿಷ್) ಮಾತುಗಾರಿಕೆಗೆ ಆದ್ಯತೆ ಇರಬೇಕು.
  13. ಈ ಶಾಲೆಗಳು ಯಾವ ಪರಿಕ್ಷಾ ಮಂಡಳಿಗೆ ಸೆರಿರಬೇಕು ಎನ್ನುವ ವಿಷಯ, ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ
  14. ಅಭ್ಯ ರ್ಥಿಗಳ ಆಯ್ಕೆಯನ್ನು ಆಯ್ಕೆ ಪರೀಕ್ಷೆಯ ಮೂಲಕ ಮಾಡಬೇಕು
  15. ಪ್ರಾಂಶುಪಾಲರ ಮತ್ತು ಶಿಕ್ಷಕರ ಆಯ್ಕೆಯನ್ನು ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ಮಾಡಿ ಅಭಿವೃದ್ಧಿಪಡಿಸಿದ ಒಂದು ಸ್ವತಂತ್ರ ಪ್ರಕ್ರಿಯೆಯ ಮೂಲಕ ಮಾಡಬೇಕು
  16. ಮಾದರಿ ಶಾಲೆಗಳು ಸೂಕ್ತ ಕ್ರಮದಲ್ಲಿ ಚಟುವಟಿಕೆಗಳನ್ನು ಮಾಡಿ ಸುತ್ತ ಮುತ್ತಲಿನ ಶಾಲೆಗಳಿಗೆ ಮಾರ್ಗದರ್ಶಿಗಳಾಗಿರಬೇಕು.

ಅನುಷ್ಠಾನ

ಶೈಕ್ಷಣಿಕವಾಗಿ ಹಿಂದುಳಿದ ವಲಯಗಳಲ್ಲಿ ( EBBs) 6000 ಮಾದರಿ ಶಾಲೆಗಳಲ್ಲಿ 2500 ಶಾಲೆಗಳನ್ನು ಕೇಂದ್ರೀಯ ವಿದ್ಯಾಲಯಗಳ ರೀತಿಯಂತೆ ಸ್ಥಾಪಿಸಲಾಗುವುದು. ಇನ್ನು 2,500 ಶಾಲೆಗಳನ್ನು ಸರ್ಕಾರಿ ಖಾಸಾಗಿ (ಪಬ್ಲಿಕ್ ಪ್ರೈವೇಟ) ಪಾಲುದಾರಿಕೆಯಲ್ಲಿ ಸ್ಥಾಪಿಸಲಾಗುವುದು . ಉಳಿದ 1,000 ಶಾಲೆಗಳ ಬಗೆಗೆ ಇನ್ನೂ ಯಾವುದೆ ನಿರ್ಧಾರ ತೆಗೆದುಕೊಂಡಿಲ್ಲ.

ಸ್ಥಳ. : 2500 ಮಾದರಿ ಶಾಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ವಲಯಗಳಲ್ಲಿ (EBBs).ಸ್ಥಾಪಿಸಲಾಗುವುದು.

ಭೂಮಿ : ಈ ಶಾಲೆಗಳಿಗೆ ಅಗತ್ಯವಾದ ಸ್ಥಳವನ್ನು ರಾಜ್ಯ ಸರ್ಕಾರವೆ ಗುರ್ತಿಸಿ ಉಚಿತವಾಗಿ ನೀಡುವುದು.

ಶಾಲೆಗಳ ಆಯ್ಕೆ: ಭಾರತ ಸರ್ಕಾರದ ಸಂಪನ್ಮೂಲ ಇಲಾಖೆಯು ರಾಜ್ಯವಾರು ಶಾಲೆಗಳನ್ನು ಹಂಚಿಕೆ ಮಾಡುವುದು. ಆನಂತರ ರಾಜ್ಯ ಸರ್ಕಾರವು ಹೊಚ್ಚಹೊಸ ಶಾಲೆಗಳನ್ನು ಪ್ರಾರಂಭಿಸಬಹುದು, ಅಥವ ಈಗಿರುವ ಶಾಲೆಗಳನ್ನೆ ಮಾದರಿ ಶಾಲೆಗಳಾಗಿ ಪರಿವರ್ತನೆ ಮಾಡಲು ಸ್ವತಂತ್ರವಾಗಿರುವುದು.

ತರಗತಿಗಳು: ಈ ಶಾಲೆಗಳು VI ರಿಂದ XII ನೆ ತರಗತಿಯವರೆಗೆ. ಎರಡೆರಡು ವರ್ಗ ಹೊಂದಿರುವೆ. ಆಲ್ಲಿ ಪ್ರಾಂತೀಯ ಭಾಷಾ ಮಾಧ್ಯಮ ವಿದ್ದರೆ ಅದು ಒಂದು ವರ್ಗವನ್ನು ಹೊಂದಿರಬಹುದು.

ಈ ಶಾಲೆಗ ಳನ್ನ ಕೇಂದ್ರೀಯ ವಿದ್ಯಾಲಯ ಸೊಸೈಟಿಯ (KVS)

ಮಾದರಿಯಲ್ಲಿರುವ ರಾಜ್ಯಸರ್ಕಾರದ ಸೊಸೈಟಿಗಳು ನೆಡೆಸುವವು.

ನಿರ್ಮಾಣ:

ರಾಜ್ಯದ ಸೊಸೈಟಿಗಳು ಶಾಲಾ ಕಟ್ಟಡದ ನಿರ್ಮಾಣ ಮಾಡುವವು.

  • ಮಾದರಿಯನ್ನು ಕೇಂದ್ರೀಯ ವಿದ್ಯಾಲಯ ,ಸೊಸೈಟಿ / ರಾಜ್ಯ ಪಿ .ಡಬ್ಲ್ಯು.ಡಿ ಗಳು ನೀಡುವವು.
  • ರಾಜ್ಯಸರ್ಕಾರಗಳಿಗೆ ಶಾಲಾ ಕಟ್ಟಡವನ್ನು ಖಾಸಗೀ ಸಹಭಾಗಿತ್ವದಲ್ಲಿ ಮಾದರಿಯ ಮೇರೆಗೆ ನಿರ್ಮಾಣ ಮಾಡಲು ಅವಕಾಶವಿದೆ.

ಪ್ರವೇಶ:

  • ಸೀಟುಗಳನ್ನು ಕೆ.ವಿ ಎಸ್ ಮಾದರಿಯ ಪ್ರವೇಶ ಪರೀಕ್ಷೆಯ ಮೂಲಕ ತುಂಬಲಾಗುವುದು.. ರಾಜ್ಯದ ಮೀಸಲಾತಿ ನಿಯಮವು ಇದಕ್ಕೂ ಅನ್ವಯವಾಗುವುದು..
  • ಕಟ್ಟಡವು ಭೂಕಂಪನಿರೋಧಕ ವಿನ್ಯಾಸ ಹೊದಿರುವುದು. ಅಗ್ನಿಶಾಮಕ ವ್ಯವಸ್ಥೆಯನ್ನೂ ಒಳಗೊಂಡಿರುವುದು.
  • ಸೌರಶಕ್ತಿ ಮತ್ತು ಪರ್ಯಾಯ ಇಂಧನ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಅಳವಡಿಸಿಕೊಳ್ಳಲು ಅನು ಕೂಲವಾಗುವ ವಿನ್ಯಾಸವನ್ನು ಕಟ್ಟಡವು ಹೊಂದಿರಬೇಕು.

ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ 2,500 ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸುವಲ್ಲಿ ರಾಜ್ಯ ಸರರ್ಕಾರದ ಪಾತ್ರ.

  • ರಾಜ್ಯಸರ್ಕಾರದ ಈಗಿರುವ ಶಾಲೆಗಳನ್ನೆ ಮಾದರಿ ಶಾಲೆಗಳಾಗಿ ಪರಿವರ್ತಿಸಿದವುಗಳು ಅಥವ ಹೊಸ ಮಾದರಿ ಶಾಲೆಗಳು,
  • ರಾಜ್ಯ ಸರ್ಕಾರಗಳೂ ಇಲ್ಲವೆ ಕೇಂದ್ರಾಡಳಿತ ಪ್ರದೇಶಗಳು ಕೆ. ವಿ. ಎಸ್ ಮಾದರಿಯ ಸೊಸೈಟಿ ರಚಿಸಿ ಶಾಲೆಗಳ ನಿರ್ವಹಣೆಯನ್ನು ಅವುಗಳಿಗೆ ವಹಿಸುವುದು.
  • ರಾಜ್ಯ ಸರ್ಕಾರಗಳೂ ಇಲ್ಲವೆ ಕೇಂದ್ರಾಡಳಿತ ಪ್ರದೇಶಗಳು ಶಾಲೆಗಳ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಅಗತ್ಯವಿದ್ದಲ್ಲಿ ಒದಗಿಸುವುದು.
  • ಪ್ರತಿ ರಾಜ್ಯವೂ ಅನುಷ್ಠಾನ ಅನುಸೂಚಿಯನ್ನು / ಯೋಜನೆಯನ್ನು ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಲ್ಲಿಸಬೇಕು..
  • ಅಗತ್ಯವಾದ ಕನಿಷ್ಟ ಭೂಮಿತಿಯು KVS/NVS ಮಾದರಿಯಲ್ಲಿರುವುದು. ಆದರೆ ಭೂಮಿಯ ಕೊರತೆ ಇದ್ದರೆ ಮಾದರಿಯು ತೃಪ್ತಿಕರವಾಗಿರುವಂತೆ ಮಿತಿಯನ್ನು ಕೊಂಚ ಮಟ್ಟಿಗೆ ಸಡಲಿಸಬಹುದು
  • ಈ ಶಾಲೆಗಳನ್ನು ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿಸಬೇಕು. ಅನುಸೂಚಿ V ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಆಶ್ರಮ ಶಾಲೆಗಳಿಗೆ ಆದ್ಯತೆ ಕೊಡಬೇಕು.
  • ನಿರ್ಮಾಣವನ್ನು ರಾಜ್ಯ ಸೊಸೈಟಿಗಳುನಿರ್ವಹಿಸುವವು.. ಆದ್ದರಿಂದ ರಾಜ್ಯದ ಪಾಲಿನ ಹಣವನ್ನು ಶಾಲೆಗಳನ್ನು ನಿರ್ವಹಿಸುವ ರಾಜ್ಯ ಸೊಸೈಟಿಗಳ ಖಾತೆಗೆ ಜಮಾ ಮಾಡಬೇಕು.
  • ರಾಜ್ಯ ಸರ್ಕಾರಗಳು ಕಟ್ಟಡವನ್ನು ನಿರ್ಮಾಣ ಮಾಡಲು, ಮತ್ತು ನಿರ್ವಹಣೆ ಮಾಡಲು ಸರಕಾರಿ ಖಾಸಗಿ ಸಹಭಾಗಿತ್ವ (PPP.ಸ.ಖಾ.ಸ) ಹೊಂದಬಹುದು. ಅದಕ್ಕೆ ಬೇಕಾದ ವಾರ್ಷಿಕ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮವಾಗಿ ಹಂಚಿಕೊಳ್ಳುವವು..
  • ರಾಜ್ಯ ಸರ್ಕಾರವು ವಲಯ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಬೇಕು. ರಾಜ್ಯ ಮೇಲುಸ್ತುವಾರಿ ಸಮಿತಿಯು ಕೇಂದ್ರ ಸರ್ಕಾರದ ಸದಸ್ಯರನ್ನು ಹೊಂದಿರುವುದು.
  • KVS/ ಸೊಸೈಟಿಗಳು ತಾತ್ಕಾಲಿಕ ನಿವೇಶನವನ್ನು ಆಯ್ಕೆಮಾಡಿ ಶಾಲೆ ನೆಡೆಸಲು ನೀಡ ಬೇಕು.

ಹಣಕಾಸು ನೀಡಿಕೆಯ ವಿನ್ಯಾಸ

ಕೇಂದ್ರಸರ್ಕಾರವು 75% ಬಂಡವಾಳವನ್ನು, ರಾಜ್ಯ ಸರ್ಕಾರವು ಉಳಿದ 25% ಹಣವನ್ನು 11ನೆ ಯೋಜನಾ ಅವಧಿಯಲ್ಲಿ ಕೊಡಬೇಕು. ಆವರ್ತಕ ವೆಚ್ಚವನ್ನು ಕೇಂದ್ರಸರ್ಕಾರವೆ ನೀಡುವುದು. 75:25 ಅನುಪಾತದಲ್ಲಿ ಕೊಡುವುದು.ಹಣ ಕೊಡುವ ಪ್ರಮಾಣವು 12ನೆ ಯೋಜನಾ ಅವಧಿಯಲ್ಲಿ 50:50 ಇರುವುದು. ವಿಶೇಷ ವರ್ಗದ ರಾಜ್ಯಗಳಿಗೆ ಇದು 90:10. ಆಗಿರುವುದು.

ವೆಚ್ಚದ ಮಾದರಿ

ಕೇಂದ್ರೀಯ ವಿದ್ಯಾಲಯ ಸಂಘಟನೆಯು ಕೆ. ವಿ ಮಾದರಿಯಲ್ಲಿ ಒಂದನ್ನು ಸ್ಥಾಪಿಸಲು VI ರಿಂದ XII ನೇ ತರಗತಿ, ಪ್ರತಿ ತರಗತಿಯಲ್ಲಿ ಎರಡು ವರ್ಗ ಇರುವ ಶಾಲೆ ಒಂದನ್ನು ಸ್ಥಾಪಿಸಲು ರೂ. ಅನಾವರ್ತಕ ವೆಚ್ಚವು 3.02 ಕೋಟಿ ಬೇಕಾಗುವುದೆಂದು ಅಂದಾಜು ಮಾಡಿದೆ. ಪ್ರತಿ ವರ್ಷ ಆವರ್ತಕ ವೆಚ್ಚವು ರೂ. 0.75 ಕೋಟಿ ಆಗುವುದು.

ಈ ಅಂದಾಜು ಸದ್ಯಕ್ಕೆ ಇರುವ ದರ , ನಿರ್ಮಾಣ ಮತ್ತು ನಿರ್ವಹಣೆಯಂತೆ ಇರುತ್ತದೆ.

ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ ಮತ್ತು ರಾಜ್ಯ ವಲಯದಲ್ಲಿನ ಶಾಲೆಗಳ ಸ್ಥಾಪನೆಯ ವಾಸ್ತವ ವೆಚ್ಚ ಮಾದರಿಯು CPWD ಯ ಅನುಸೂಚಿಯ ನಿರ್ಧಿಷ್ಟ ಸ್ಥಳದ ದರಕ್ಕೆ ಅನ್ವಯವಾದ ಮಾದರಿಯನ್ನು ಆಧರಿಸಿವೆ. ಇವು ಕೇವಲ ಅಂದಾಜು ಮಾತ್ರ ಆಗಿವೆ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate