ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣದ ಸವಾಲನ್ನು ಎದುರಿಸಲು ಪ್ರೌಢ / ಮಾಧ್ಯಮಿಕ ಶಿಕ್ಷಣದ ಪರಿಕಲ್ಪನೆಯ ವಿನ್ಯಾಸದ ಮಾದರಿಯ ಬದಲಾವಣೆಯ ಅಗತ್ಯವಿದೆ. ಈ ದಿಶೆಯಲ್ಲಿನ ಮಾರ್ಗದರ್ಶಿ ತತ್ವಗಳು ಹೀಗಿವೆ: ಸಾರ್ವತ್ರಿಕ ಲಭ್ಯತೆ, ಸಮಾನತೆ, ಸಾಮಾಜಿಕ ನ್ಯಾಯ, ಸುಸಂಬದ್ಧತೆ ಮತ್ತು ಅಭಿವೃದ್ಧಿ ಮತ್ತು ಪಠ್ಯದ ರಚನಾತ್ಮಕ ಅಂಶಗಳು. ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣವು ಸಮಾನತೆಯತ್ತ .ಸಾಗಲು ಅವಕಾಶ ಕೊಡುತ್ತದೆ. ಸಮಾನ ಶಾಲೆ ಎಂಬ ಪರಿಕಲ್ಪನೆಯನ್ನು ಉತ್ತೇಜಿಸಲಾಗುವುದು. ಈ ಮೌಲ್ಯಗಳು ವ್ಯವಸ್ಥೆಯಲ್ಲಿ ಬೇರೂರಿದರೆ, ಎಲ್ಲ ರೀತಿಯ ಶಾಲೆಗಳು , ಅನುದದಾನರಹಿತ ಖಾಸಗಿಶಾಲೆಗಳೂ ಸೇರಿದಂತೆ. ಸಮಾಜದಲ್ಲಿ ಅವಕಾಶ ವಂಚಿತ ಮತ್ತು ಬಡತನರೇಖೆಯ ಕೆಳಗಿನ ( ಬಿಪಿ ಎಲ್ ) ಕುಟುಂಬಗಳ ಮಕ್ಕಳನ್ನು ದಾಖಲೆ ಮಾಡಿಕೊಳ್ಳುವ ಮೂಲಕ ಪ್ರೌಢ / ಮಾಧ್ಯಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ(ಯು ಎಸ್ ಇ) ಕೊಡುಗೆ ನೀಡಬಹುದು ಮೂಲ: ಪೋರ್ಟಲ್ ತಂಡ |
ಕೊನೆಯ ಮಾರ್ಪಾಟು : 4/1/2020