অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಲಿಕೆಯಲ್ಲಿನ ಸಮಸ್ಯೆಗಳು

ಕಲಿಕೆಯಲ್ಲಿನ ಸಮಸ್ಯೆಗಳು

ಕ್ರಮ. ಸಂಖ್ಯೆ

 

 

1

ಬೇರೆಯವರ ನಿಗಾ ಇಲ್ಲದೇ ಇದ್ದಾಗ ತನಗೆ ನೀಡಿರುವ ಕೆಲಸವನ್ನು ಮಾಡುವ ಆಸಕ್ತಿಯನ್ನು ಉಳಿಸಿಕೊಳ್ಳಲು ಮಗುವು ಸಮಸ್ಯೆ ಎದುರಿಸುತ್ತಿದೆಯೇ?

ಹೌದು / ಇಲ್ಲ

2

ನಿಗಾ ಇಲ್ಲದೇ ಇದ್ದಾಗ ತನಗೆ ನೀಡಿದ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಲು ಮಗುವು ಕಷ್ಟ ಪಡುತ್ತದೆಯೇ?

ಹೌದು / ಇಲ್ಲ

3

ಮಗುವು ಪುಸ್ತಕದ ಸಾಲೊಂದನ್ನು ಓದುವಾಗ  ಅಕ್ಷರಗಳನ್ನು ಅಥವಾ ಪದಗಳನ್ನು ಬಿಟ್ಟು ಬಿಡುತ್ತದೆಯೇ?

ಹೌದು / ಇಲ್ಲ

4

ಸಾಲುಗಳನ್ನು ಇಲ್ಲವೇ ಸಾಲಿನಲ್ಲಿನ ಪದಗಳನ್ನು ಅನುಸರಿಸುವಾಗ ಮಗುವು ಸಮಸ್ಯೆ ಎದುರಿಸುತ್ತದೆಯೇ?

ಹೌದು / ಇಲ್ಲ

5

ಆಕಾರ, ಬಣ್ಣ ಅಥವಾ ಗಾತ್ರಕ್ಕೆ ಅನುಗುಣವಾಗಿ  ಮಗುವು ಜೋಡಿಸಲು ಸಮರ್ಥವಾಗಿದೆಯೇ?
ಉದಾಹರಣೆ: ಶಾಲೆಯ ಚೀಲದಲ್ಲಿ ಗಾತ್ರಕ್ಕನುಗುಣವಾಗಿ ಪುಸ್ತಕ ಜೋಡಿಸುವುದು ಅಥವಾ ಮಾಡದಲ್ಲಿನ ಬಟ್ಟೆಗಳನ್ನು ಅದರ ಅಳತೆ ಮತ್ತು ಬಳಕೆಗೆ ಅನುಗುಣವಾಗಿ ಮಗುವು ವಿಂಗಡಿಸುತ್ತಿದೆಯೇ?

ಹೌದು / ಇಲ್ಲ

6

ಪದಗಳನ್ನು ಅಥವಾ ಅಕ್ಷರಗಳನ್ನು ಬಿಡದೆ ಕಪ್ಪು ಹಲಗೆಯಿಂದ ಬರೆದುಕೊಳ್ಳುವಲ್ಲಿ ಮಗುವು ಸಮಸ್ಯೆಯನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

7

ಗಣಿತದ ಚಿಹ್ನೆಗಳು ಮತ್ತು ಸಂಖ್ಯೆಗಳ ನಡುವಣ ಸಂಬಂಧಗಳನ್ನು ಅರ್ಥೈಸಿಕೊಳ್ಳುವಲ್ಲಿ ಮಗುವು ಸಮಸ್ಯೆಯನ್ನು ಎದುರಿಸುತ್ತಿದೆಯೇ?

ಹೌದು / ಇಲ್ಲ

8

'b' ಮತ್ತು 'd''p' ಮತ್ತು 'q' , 'u' ಮತ್ತು 'n' ಅಕ್ಷರಗಳುಮತ್ತು '9' and '6' ರಂತಹ ಸಂಖ್ಯೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಮಗುವು ತಿಣುಕುತ್ತಿದೆಯೇ?

ಹೌದು / ಇಲ್ಲ

9

ಬರೆಯುವಾಗ ಮಗುವು ನೇರ ಸಾಲು ಅಥವಾ ಪದಗಳು ಮತ್ತು ಸಾಲುಗಳ ನಡುವೆ ಸಮಾನ ಅಂತರವನ್ನು ಕಾಪಾಡಲು ಕಷ್ಟ ಪಡುತ್ತಿದೆಯೇ?

ಹೌದು / ಇಲ್ಲ

10

ಓದುವಾಗ ಮತ್ತು ಬರೆಯುವಾಗ ವಿರಾಮ ಚಿಹ್ನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಮಗುವು ತೊಂದರೆ ಎದುರಿಸುತ್ತಿದೆಯೇ?

ಹೌದು / ಇಲ್ಲ

11

ಅಂಕಿಗಳ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ಮತ್ತು ಪದ ಸಮಸ್ಯೆಗಳನ್ನು ಅರಿಯುವಲ್ಲಿ ಮಗುವು ತೊಂದರೆ ಅನುಭವಿಸುತ್ತಿದೆಯೇ?

ಹೌದು / ಇಲ್ಲ

12

ಒಂದು ಕಥೆಯಲ್ಲಿನ ಅಥವಾ ಪ್ಯಾರಾದಲ್ಲಿನ ಒಂದು ಘಟನೆಯನ್ನು ಓದಿ ಅದರಲ್ಲಿನ ನಿಖರ ವಿವರಗಳನ್ನು  ತಿಳಿಯುವಲ್ಲಿ ಮಗುವು ಸಮಸ್ಯೆ ಎದುರಿಸುತ್ತಿದೆಯೇ?

ಹೌದು / ಇಲ್ಲ

13

ನಿಗದಿತ ಸೂಚನೆಗಳನ್ನು ನೀಡಿದಾಗ ವಸ್ತುವನ್ನು ಹುಡುಕುವಲ್ಲಿ ಮಗುವು ತೊಂದರೆಗೀಡಾಗುತ್ತಿದೆಯೇ?
ಉದಾಹರಣೆ: ಮೇಜಿನ ಬಲಗಡೆ ಮೇಲೆ ಬಲ ಮೂಲೆಯಲ್ಲಿರುವ ಹಳದಿ ಬ್ಯಾಗ್‌ ಅನ್ನು ನೋಡು.

ಹೌದು / ಇಲ್ಲ

14

ನಿಗದಿತ ಪಠ್ಯದಲ್ಲಿ ನಿರ್ದಿಷ್ಟ ಸಂಖ್ಯೆ ಅಥವಾ ಅಕ್ಷರವನ್ನು ನೋಡುವಲ್ಲಿ ಮಗುವು ಸಮಸ್ಯೆಗಳನ್ನು ಎದುರಿಸುತ್ತಿದೆಯೇ?

 

15

ಶಾಲೆ ಅಥವಾ ಮನೆಯಲ್ಲಿ ನೆರೆಹೊರೆಯ ಮಕ್ಕಳೊಂದಿಗೆ ಆಡುವಾಗ ಮಗುವು ತನ್ನ ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಎದುರಿಸುತ್ತಿದೆಯೇ?

 

16

ಸಹಪಾಠಿಗಳಲ್ಲಿ ಜನಪ್ರಿಯವಾದ ಆಟಗಳನ್ನು ಆಡುವಾಗ ನಿಯಮಗಳನ್ನು ಪಾಲಿಸುವಲ್ಲಿ ಮಗುವು ತೊಂದರೆಗಳನ್ನು ಎದುರಿಸುತ್ತಿದೆಯೇ?

ಮೂಲ: ಪೋರ್ಟಲ್ ತಂಡ

ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ, ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.

ಕೊನೆಯ ಮಾರ್ಪಾಟು : 5/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate