অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದೃಷ್ಟಿ ದೋಷ

ದೃಷ್ಟಿ ದೋಷ

ಕ್ರಮ ಸಂಖ್ಯೆ

 

 

1

ಮಗುವಿಗೆ ಒಂದು ಮೀಟರ್‌ ದೂರ ಚಾಚಿದ ಕೈಯ ಬೆರಳುಗಳನ್ನು ಎಣಿಸಲು ಕಷ್ಟವಾಗುತ್ತಿದೆಯೇ?

ಹೌದು / ಇಲ್ಲ

2

ಬೆಳಕಿನ ಮೂಲದ ಕಡೆಗೆ ಮಗುವು ತನ್ನ ತಲೆಯನ್ನು ತಿರುಗಿಸುತ್ತಿದೆಯೇ?

ಹೌದು / ಇಲ್ಲ

3

ಮಗುವು ತನ್ನ ಕಣ್ಣುಗಳನ್ನು ಆಗಾಗ ತಿಕ್ಕುತ್ತಿದೆಯೇ?

ಹೌದು / ಇಲ್ಲ

4

ಮಗುವು ಓದುವಾಗ ಪುಸ್ತಕವನ್ನು ತನ್ನ ಕಣ್ಣುಗಳಿಗೆ ಅತಿ ಹತ್ತಿರವಾಗಿ / ದೂರವಾಗಿ ಹಿಡಿಯುತ್ತಿದೆಯೇ?

ಹೌದು / ಇಲ್ಲ

5

ಮಗುವು ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಬರೆದುಕೊಳ್ಳುವಾಗ ಪದೇ ಪದೇ ಇತರೆ ಮಕ್ಕಳನ್ನು ಕೇಳುತ್ತಿದೆಯೇ?

ಹೌದು / ಇಲ್ಲ

6

ಮಗುವು ತನ್ನ ಪಕ್ಕದಲ್ಲಿರುವ ವಸ್ತುಗಳನ್ನು ಮಾಲುಗಣ್ಣಿನಿಂದ ನೋಡುತ್ತಿದೆಯೇ?

ಹೌದು / ಇಲ್ಲ

7

ಮೊದಲ ಸಾಲಿನಲ್ಲೇ ಕುಳಿತಿದ್ದರೂ ಕಪ್ಪು ಹಲಗೆಯ ಮೇಲೆ ಬರೆದದ್ದನ್ನು ಮಗುವು ಓದಲು ಕಷ್ಟ ಪಡುತ್ತಿದೆಯೇ?

ಹೌದು / ಇಲ್ಲ

8

ಬಣ್ಣಗಳನ್ನು ಗುರುತಿಸುವಲ್ಲಿ / ಹೋಲಿಸುವಲ್ಲಿ ಮಗುವು ವಿಫಲವಾಗುತ್ತಿದೆಯೇ?

ಹೌದು / ಇಲ್ಲ

9

ಮಗುವಿನ ಕಣ್ಣಿನ ಆಕೃತಿಯಲ್ಲಿ  ಅಸಹಜತೆಯೇನಾದರೂ ಇದೆಯೇ (ಉಬ್ಬಿದ ಕಣ್ಣು / ದೊಡ್ಡಕಣ್ಣು / ತೀರಾ ಚಿಕ್ಕ ಕಣ್ಣು)?

ಹೌದು / ಇಲ್ಲ

10

ಮಗುವಿನ ಕಣ್ಣಲ್ಲಿ ಆಗಾಗ ನೀರರೂರುತ್ತಿದೆಯೇ?

ಹೌದು / ಇಲ್ಲ

11

ಚಲಿಸುತ್ತಿರುವ ವಸ್ತುಗಳನ್ನು ಗಮನಿಸುವಲ್ಲಿ ಮಗುವಿಗೆ ಕಷ್ಟವಾಗುತ್ತಿದೆಯೇ?

ಹೌದು / ಇಲ್ಲ

12

ವಾತಾವರಣದಲ್ಲಿನ ಬೆಳಕಿನ ಪ್ರಮಾಣದ ಬದಲಾವಣೆಯಿಂದ ಮಗುವು ಗೊಂದಲಕ್ಕೆ ಈಡಾಗುತ್ತದೆಯೇ?

ಹೌದು / ಇಲ್ಲ

13

ಮಗುವು ಸದಾ ಕಣ್ಣು ಪಿಳುಕಿಸುತ್ತಿದೆಯೇ?

ಹೌದು / ಇಲ್ಲ

14

ಮಗುವು ೪-೫ ಮೀಟರ್‌ ದೂರದಲ್ಲಿನ ವಸ್ತುಗಳು / ಜನರನ್ನು ಗುರುತಿಸಲು ಕಷ್ಟ ಪಡುತ್ತಿದೆಯೇ?

ಹೌದು / ಇಲ್ಲ

ಗಮನಿಕೆ: ಮೇಲಿನ ಪ್ರಶ್ನೆಗಳಲ್ಲಿ ೪-೫ ಉತ್ತರಗಳು ಹೌದು ಎಂದಾದರೆ , ಮಗುವನ್ನು ತಜ್ಞವೈದ್ಯರ ಬಳಿಗೆ ಕರೆದೊಯ್ದು ಕೂಲಂಕುಷ ಚಿಕಿತ್ಸೆಗೆ ಒಳಪಡಿಸಬೇಕು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate