ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ಮದನ ಮೋಹನ ಮಾಳವೀಯ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮದನ ಮೋಹನ ಮಾಳವೀಯ

ಮದನ ಮೋಹನ ಮಾಳವೀಯ ಕುರ್ರಿತು ಇಲ್ಲಿ ತಿಳಿಸಲಾಗಿದೆ.

ನಮ್ಮ ದೇಶದಲ್ಲಿ ಆಂಗ್ಲರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಹಲವರು, ಆದರೆ ಮುಂಚೂಣಿಯಲ್ಲಿ ಕೆಲವರು ಮಾತ್ರ ಕಾಣಸಿಗುತ್ತಾರೆ. ಅದಕ್ಕೆ ಕಾರಣ ಸ್ವಾತಂತ್ರ್ಯ ಹೋರಾಟಗಾರ ಅಂದರೇ ಆಂಗ್ಲರ ವಿರುದ್ಧ ಯಾರು ಹೋರಾಟ ನಡೆಸಿದವರು ಅವರು ಮಾತ್ರ ಎನ್ನುವ ನಂಬಿಕೆ ಬಲವಾಗಿದೆ. ಆಂಗ್ಲರ ಪ್ರಭಾವದಿಂದ ದೇಶಾದ್ಯಂತ ಆಂಗ್ಲ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತ ಬಂತು, ನಿಧಾನವಾಗಿ ಭಾರತೀಯರು ಆಂಗ್ಲರ ಅನುಕರಣೆಯಲ್ಲಿ ತೊಡಗಿದರು. ಇದರ ಪರಿಣಾಮವಾಗಿ ಭಾರತೀಯ ಸಂಸ್ಕೃತಿಯು  ನಿಧಾನವಾಗಿ ಅವನತಿಯತ್ತ ಸಾಗಿತ್ತು. ಭಾರತೀಯರು ಹಿಂದಿನಿಂದ ನಡೆಸಿಕೊಂಡು ಬಂದಿದ್ದ ಧಾರ್ಮಿಕ ಸಿದ್ದಾಂತಗಳನ್ನು ಆಂಗ್ಲರ ಕುತಂತ್ರದಿಂದ ಭಾರತೀಯರೇ ಮೂಲೆ ಗುಂಪು ಮಾಡತೊಡಗಿದರು. ಹೀಗಿರುವಾಗ ಭಾರತದಲ್ಲಿ ಭಾರತೀಯರ ಭಾರತೀಯತೆ ನಾಶವಾದರೇ ಸ್ವತಂತ್ರ ಹೋರಾಟವನ್ನು ಹತ್ತಿಕ್ಕಿದಂತೆ ಎನ್ನುವ ಕುತಂತ್ರವನ್ನು ಆಂಗ್ಲರು ಭಾರತೀಯರ ಮೇಲೆ ಬೀಸಿದ್ದರು.

ಭಾರತೀಯರಲ್ಲಿ ಭಾರತೀಯತೆಯನ್ನು ಬೆಳೆಸುವ ಹಾಗೂ ಆಂಗ್ಲರನ್ನು ಭಾರತದಿಂದ ತೊಲಗಿಸುವ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೇಧಾವಿ ಭಾರತೀಯ ಹೋರಾಟಗಾರರು ಬೇಕಾಗಿದ್ದರು. ಅಪ್ರತಿಮ ದೇಶಭಕ್ತ ಭಾರತೀಯರನ್ನು ತಯಾರಿಕೆ  ಕೇವಲ ಭಾರತೀಯ ಸಂಸ್ಕೃತಿಯನ್ನು ಹೇಳಿ ಕೊಡುವ ಶಿಕ್ಷಣದ ಅವಶ್ಯಕತೆ ನಮ್ಮ ಭಾರತೀಯ ಯುವಕರಿಗೆ ಕಾಡುತ್ತಿತ್ತು. ಈ ಶಿಕ್ಷಣದ ಮಹತ್ವವನ್ನು ಅರಿತ ರಾಷ್ಟ್ರ ಗುರು ಎಂದೇ ಖ್ಯಾತರಾದ ಮದನ ಮೋಹನ ಮಾಳವೀಯ ಅವರು ವಿಶ್ವವಿದ್ಯಾನಿಲಯವನ್ನು ಆರಂಭಿಸಿದರು ಅದೇ ನಮ್ಮ ಕಾಶಿಯ ಹಿಂದೂ ವಿಶ್ವ ವಿದ್ಯಾಲಯ.

ಈಗಿನ ಕಾಲದಲ್ಲಿ ಎಲ್ಲವೂ ಇದ್ದು ಒಂದು ಶಾಲೆ ನಡೆಸುವುದು ಕಷ್ಟ, ಆಗಿನ ಕಾಲದಲ್ಲಿ ಪರಿಸ್ಥಿತಿಯ ವಿರುದ್ದ ನಿಂತು ಮಾಳವೀಯ ಅವರು ಈ ವಿಶ್ವವಿದ್ಯಾಲಯ ಕಟ್ಟಿದ್ದ ಕಥೆ ಬಹಳ ಸ್ವಾರಸ್ಯಕರವಾಗಿದೆ.

ಭಾರತೀಯ ಕಾಂಗ್ರೆಸ್ಸಿನ ಇಪ್ಪತೊಂದನೆಯ ಅಧಿವೇಶನದಲ್ಲಿ ಮಾಳವೀಯರು ಗೋಪಾಲ ಕೃಷ್ಣ ಗೋಖಲೆಯವರು ಸೇರಿದಂತೆ ಇತರೆ ಹಿರಿಯ ನಾಯಕರನ್ನು ಭೇಟಿ ಮಾಡಿ ಈ ವಿದ್ಯಾಲಯದ ಅವಶ್ಯಕತೆಯ ಬಗ್ಗೆ ಅರಿಕೆ ಮಾಡಿಕೊಟ್ಟರು. ಮಾಳವೀಯ ಅವರ ಈ ಕಾರ್ಯಕ್ಕೆ ಎಲ್ಲರೂ ತಮ್ಮ ಬೆಂಬಲ ಸೂಚಿಸಿ ತಮ್ಮಿಂದಾದ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು. ಆಗ ಸುರೇಂದ್ರನಾಥ ಬ್ಯಾನರ್ಜಿ ತಾವು ಯೋಗ್ಯ ಇಂಗ್ಲೀಷ್ ಶಿಕ್ಷಕ ಸೀಗುವವರೆಗೂ ಉಚಿತವಾಗಿ ಪಾಠ ಮಾಡುವುದಾಗಿ ವಚನ ನೀಡಿದರು.

ವಿಶ್ವವಿದ್ಯಾಲಯವನ್ನು ಕಾಶಿಯಲ್ಲೇ ಕಟ್ಟ ಬೇಕೆಂಬ ದೃಡ ಸಂಕಲ್ಪ ಮಾಡಿದ್ದ ಮಾಳವೀಯರು, ಸ್ಥಳಕ್ಕಾಗಿ ಕಾಶಿ ರಾಜರ ಬಳಿಗೆ ಹೋದರು. ಆಗ ರಾಜರು ನಿಮಗೆ ಎಷ್ಟು ದುಡ್ಡು ಬೇಕು ಕೇಳಿ ಆದರೆ ಜಾಗ ಕೊಡುವುದಿಲ್ಲ ಎಂದು ಮಾಳವೀಯರ ಆಸೆಗೆ ತಣ್ಣೀರೆರಚಿದರು. ಕಡೆಗೆ ಅದೇ ರಾಜರು ದಾನವಾಗಿ ಅದೇ ಜಾಗವನ್ನು ನೀಡಿದರು. ಜಾಗ ಸಿಕ್ಕಿದ್ದಾಯಿತು ಕಟ್ಟಡಕ್ಕಾಗಿ ಈಗ ಹಣ ಹೊಂದಿಸುವ ಚಿಂತೆ,  ಮಾಳವೀಯರು ಆಗರ್ಭ ಶ್ರೀಮಂತರಲ್ಲ ಎಲ್ಲಿಂದ ತರುವುದು ಹಣವನ್ನು. ಕಡೆಗೆ ಜೋಳಿಗೆ ಹಿಡಿದು ದೇಶ ಸಂಚಾರ ಮಾಡಿ ಹಣ ಸಂಗ್ರಹಿಸುವ ಸಲುವಾಗಿ ಹೊರಟೆ ಬಿಟ್ಟರು. ಎಲ್ಲರ ಮುಂದೆ ಕೈಯೊಡ್ಡಿ  ಅಕ್ಷರ ದಾಸೋಹಕ್ಕಾಗಿ ಭಿಕ್ಷೆ ಬೇಡಿ ಜೋಳಿಗೆ ತುಂಬಿಸಿಕೊಳ್ಳುತ್ತಾ ಹೊರಟರು. ಮಾಳವೀಯರು ಹೈದರಾಬಾದ್ ಪ್ರಾಂತ್ಯಕ್ಕೆ ಬಂದಾಗ ಅಲ್ಲಿನ ನಿಜಾಮ ಹಿಂದೂ ವಿಶ್ವ ವಿದ್ಯಾನಿಲಯಕ್ಕೆ ಹಣದ ಸಹಾಯ ನೀಡಲು ನಿರಾಕರಿಸಿದನು. ಆದರೂ ನಿಜಾಮನಿಂದ  ಹಣ ಪಡೆಯದೆ ಹಿಂತಿರುಗಕೂಡದು ಎಂದು ಸಂಕಲ್ಪ ಮಾಡಿದ್ದ ಮಾಳವೀಯರು. ಅದೇ ಸಮಯಕ್ಕೆ ಹೈದರಾಬಾದಿನ ಓರ್ವ ಶ್ರೀಮಂತ ನಿಧನ ಹೊಂದಿದ, ಅವನ ಅಂತಿಮ ಯಾತ್ರೆಯಲ್ಲಿ ಅವನ ಶವದ ಮೇಲೆ ಹಣವನ್ನು ತೂರುತ್ತಿದ್ದರು. ಇದನ್ನು ಕಂಡ ಮಾಳವೀಯರು ಹಣವನ್ನು ಅರಿಸಿಕೊಂಡು ತಮ್ಮ ಜೋಳಿಗೆಯಲ್ಲಿ ಹಾಕಿ ಕೊಳ್ಳತೊಡಗಿದರು. ಇದನ್ನು ಕಂಡ ಜನರು ಕೆಳಗೆ ಬಿದ್ದ ಹಣವನ್ನು ಮಾಳವೀಯರ ಜೋಳಿಗೆ ಹಾಕ ತೊಡಗಿದರು. ಈ ಸುದ್ದಿಯನ್ನು ಕೇಳಿದ ನಿಜಾಮನು ಮಾಳವೀಯರಿಗೆ ಧನ ಸಹಾಯ ಮಾಡಿದರು.

ಹೀಗೆ ಅಖಂಡ ಭಾರತವನ್ನು ಸಂಚರಿಸಿ ತಮ್ಮ ಕಾರ್ಯಕ್ಕಾಗಿ ಭಿಕ್ಷೆ ಬೇಡಿದರು. ಒಮ್ಮೆ ದರ್ಭಾಂಗದಲ್ಲಿ ಮದ್ಭಾಗವತ ಪ್ರವಚನ ಮಾಡುತ್ತಿದ್ದಾಗ ಆಗಮಿಸಿದ ಕಾಶಿ ಮಹಾರಾಜರು ಇವರ ಪ್ರವಚನಕ್ಕೆ ಮಾರು ಹೋಗಿ ಹಿಂದೂ ವಿಶ್ವವಿದ್ಯಾಲಯಕ್ಕೆ ಇಪ್ಪತೈದು ಲಕ್ಷ ದಾನ ಮಾಡಿದಲ್ಲದೆ  ಮಾಳವೀಯರ ಜೊತೆ ಸಂಚರಿಸಿ ಅಪಾರ ನಿಧಿ ಸಂಗ್ರಹಿಸಿ ಕೊಟ್ಟರು . ಕಡೆಗೆ ಮಾಳವೀಯರು ಒಟ್ಟು ಒಂದು ಕೋಟಿ ಮೊವತ್ತು ನಾಲ್ಕು ಲಕ್ಷ ಸಂಗ್ರಹಿಸಿ ಭಿಕ್ಷುಕ ಸಾಮ್ರಾಟ್ ಎಂಬ ಹೆಸರನ್ನು ಸಹ ಸಂಪಾದಿಸಿದರು.
ನಾಲ್ಕನೇ ಫೆಬ್ರವರಿ ೧೯೧೬ರ ವಸಂತ ಪಂಚಮಿಯ ದಿನ, ಎಲ್ಲರ ಸಮ್ಮುಖದಲ್ಲಿ ಗಂಗ ನದಿಯ ತೀರದಲ್ಲಿ ಹಿಂದೂ ವಿಶ್ವವಿದ್ಯಾಲಯ ಶಂಕುಸ್ಥಾಪನೆ ಮಾಡಿದರು. ನಮ್ಮ ರಾಷ್ಟ್ರದ ಯುವಕರು ಉದಾರ ಶಿಕ್ಷಣ ಪಡೆಯಲಿ ಜೊತೆಗೆ ಅನ್ಯ ಧರ್ಮದ ಜ್ಞಾನವನ್ನು ಪಡೆಯಲಿ ಎನ್ನುವ ಅಂತರಂಗದ ಅಪೇಕ್ಷೆಯ ಪ್ರತಿರೋಪವೇ ಕಾಶಿ ಹಿಂದೂ ವಿಶ್ವವಿದ್ಯಾಲಯ.

ದೇವರಲ್ಲಿ ನಂಬಿಕೆಯಿಡಿ, ಸಮಸ್ತ ಪ್ರಾಣಿ ವರ್ಗದಲ್ಲಿ ದಯೆತೋರಿ. ದಿನರು ದುರ್ಬಲರಲ್ಲಿ ಅನುಕಂಪವಿರಲಿ. ಸ್ತ್ರೀಯರಿಗೆ ಸದಾ ಗೌರವ ತೋರಿಸಿ, ದುಖಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ ಕೈಲಾದ ಸಹಾಯ ಮಾಡಿ, ಯಾರಿಗೂ ಹಿಂಸೆ ಮಾಡಬೇಡಿ, ಪರನಿಂದೆ ಮಾಡಬೇಡಿ. ನೀವು ಯಾರನ್ನು ಹೆದರಿಸಬೇಡಿ, ನೀವು ಯಾರಿಗೂ ಹೆದರಬೇಡಿ. ,ಇನ್ನೊಬ್ಬರ ಹಣಕ್ಕೆ ಆಸೆಪಡಬೇಡಿ . ಸತ್ಕರ್ಮದಿಂದ ಸತ್ಪಲವು, ದುಷ್ಪಲವು ಲಭಿಸುತ್ತದೆ ಎಂದು ಸಾರಿ ಹೇಳಿದರು

ಮದನ ಮೋಹನ ಮಾಳವೀಯ ಅವರು ಶಿಕ್ಷಣವಲ್ಲದೆ ಸರ್ವರ ಏಳಿಗೆಗೆಗಾಗಿ ದುಡಿದರು.ಭಾರತ ಎಲ್ಲ ದೃಷ್ಟಿಯಿಂದ ಬಲಿಷ್ಟವಾಗಬೇಕೆಂಬ ಮಹಾ ಕನಸನ್ನು ಕಂಡ ಮಹಾತ್ಮರು  ಮದನ ಮೋಹನ ಮಾಳವೀಯರು.

ಮದನ ಮೋಹನ ಮಾಳವೀಯರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಮದನ ಮೋಹನ ಮಾಳವೀಯರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ  ತನ್ನ ಗೌರವ ಸೂಚಿಸಿತು. ಆದರೆ ಇವರ ಸಾಧನೆಯನ್ನು ಅರಿಯದ ಕೆಲವರ ನಾಲಿಗೆಗೆ ಮದನ ಮೋಹನ ಮಾಳವೀಯರ ಹೆಸರು ಆಹಾರವಾಗಿದ್ದು ದುರದುಷ್ಟಕರ ಬೆಳವಣಿಗೆಗೆ.

ಯಾರು ಏನೇ ಹೇಳಲಿ ,
ಮದನ ಮೋಹನ ಮಾಳವೀಯರು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂದು ಕರೆದರೆ ತಪ್ಪಾಗಲಾರದು.

ಕೊಡುಗೆದಾರರು : ಮಧು ಚಂದ್ರ

2.97368421053
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top