ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ರಾಮಪ್ರಸಾದ್ ಬಿಸ್ಮಿಲ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಮಪ್ರಸಾದ್ ಬಿಸ್ಮಿಲ್

ರಾಮಪ್ರಸಾದ್ ಬಿಸ್ಮಿಲ್ ಕುರಿತು ಇಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸೆರೆಮನೆಯಿಂದ ಕೈದಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವುದನ್ನು ಟಿವಿಯಲ್ಲಿ ನೋಡಿರುತ್ತೇವೆ ಹಾಗೂ ಪತ್ರಿಕೆಗಳಲ್ಲಿ ಓದಿರುತ್ತೇವೆ. ಆದರೆ ಸ್ವತಂತ್ರ ಪೂರ್ವದಲ್ಲಿ ಮರಣದಂಡನೆಗೊಳಗಾದ ಕೈದಿಯೊಬ್ಬ ಪೊಲೀಸರಿಂದ  ಸುಲಭವಾಗಿ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ ಸಹ ಆತ ತಪ್ಪಿಸಿಕೊಳ್ಳುವುದಿಲ್ಲ. ಕಾರಣ ಇಷ್ಟೇ ಜೈಲಿನ ಅಧಿಕಾರಿಯು ಆ ಕೈದಿಯ ಮೇಲಿಟ್ಟ ನಂಬಿಕೆ. ಕೈದಿಗೆ ಆ ಸೆರೆಮನೆಯ ಗುಮಾಸ್ತನ ಪರಿಚಯವಿರುತ್ತದೆ ಒಮ್ಮೆ ಆ ಕೈದಿ ನಾನು ಇಲ್ಲಿಂದ ತಪ್ಪಿಸಿಕೊಂಡು ಹೋಗಲು ಸಹಕಾರ ನೀಡು ಎಂದು ಕೇಳುತ್ತಾನೆ ಆದರೆ ನಾನು ತಪ್ಪಿಸಿಕೊಂಡು ಹೋದರೆ ಅವನ ಮೇಲೆ ಬರುವ ಆಪತ್ತುನ್ನು ಸಹ ತಿಳಿಸುತ್ತಾನೆ ಇದರಿಂದ ವಿಚಲಿತನಾದ ಅಧಿಕಾರಿ ಈ ರೀತಿ ಮಾಡುವುದರಿಂದ ನನ್ನ  ಬಂಧನವಾಗುತ್ತದೆ , ನನ್ನ ಸಂಸಾರವೇ ಬೀದಿಗೆ ಬರುತ್ತದೆ  ಹಾಗಾಗಿ ದಯವಿಟ್ಟು ಹಾಗೆ ಮಾಡಬೇಡಿ ಎಂದು ಮನವಿ ಮಾಡುತ್ತಾನೆ. ಅಂದು  ಉಳಿದ ಪೊಲೀಸರು ರಾತ್ರಿಯೆಲ್ಲ ದಸ್ತಗಿರಿಯಲ್ಲಿ ತೊಡಗಿದ್ದರಿಂದ ಎಲ್ಲರೂ ಮನೆಗೆ ಹೊರಡುತ್ತಾರೆ ಆ ಸಮಯದಲ್ಲಿ ಅಲ್ಲಿದ್ದ ಎಲ್ಲ ಕೈದಿಗಳಿಗೂ ಬೇಡಿ ಹಾಕುವಂತೆ ಅಪ್ಪಣೆ ಬರುತ್ತದೆ. ಈ ಕೈದಿಯ ಸರದಿಯು ಬರುತ್ತದೆ ಆಗ ಆಧಿಕಾರಿ ' ಈತ ಓಡಿಹೋಗುವುದಿಲ್ಲ ಎಂಬ ನಂಬಿಕೆ ನನಗೆಯಿದೆ, ಹಾಗಾಗಿ ಬೇಡಿ ತೊಡಿಸುವ ಅವಶ್ಯಕತೆಯಿಲ್ಲ ' ಎಂದು ಹೇಳುತ್ತಾನೆ. ಸ್ವಲ್ಪ ಸಮಯದ ನಂತರ ಅವರೆಲ್ಲರೂ ಕುಸ್ತಿ ನೋಡುವುದರಲ್ಲಿ  ತಲ್ಲೀನನಾದರು. ಆಗ ಈ ಕೈದಿ , ಒಮ್ಮೆಲೇ ಗೋಡೆ ಹಾರಿ ಯಾರಿಗೂ ಸಿಗದಂತೆ ತಪ್ಪಿಸಿಕೊಂಡರೆ ನನ್ನನ್ನು ಯಾರು ಸಹ ಹಿಡಿಯಲಾರರು ಎಂದು ಯೋಚನೆ ಮಾಡುತ್ತಾನೆ. ಆಗ ಆತನ ಮನದಲ್ಲಿ ಈ ಅಧಿಕಾರಿ ನನ್ನ ಮೇಲೆ ನಂಬಿಕೆ ಇರಿಸಿ ಇಷ್ಟು ಸ್ವತಂತ್ರ ಕೊಟ್ಟಿದ್ದಾನೆ, ನಾನು ಅವನಿಗೆ ಋಣಿಯಾಗಿರಬೇಕು ಎಂದು ಅಲ್ಲಿಂದ ಪರಾರಿಯಾಗುವ ಯೋಚನೆಯನ್ನು ಕೈಬಿಡುತ್ತಾನೆ. ನಂಬಿದವರಿಗೆ ವಿಶ್ವಾಸ ದ್ರೋಹ ಬಗೆಯದೆ ಎಂತಹ ಪರಿಸ್ಥಿತಿಯಿದ್ದರೂ ದೇಶ ಸೇವೆಗೆ ತನ್ನನ್ನೇ ತಾನು ಬಲಿದಾನ ಮಾಡಿದ ಮಹಾನ್ ಕ್ರಾಂತಿಕಾರ ದೇಶಪ್ರೇಮಿ ಮತ್ತಾರು ಅಲ್ಲ ' ರಾಮಪ್ರಸಾದ್ ಬಿಸ್ಮಿಲ್ ' . p> ಕೊಡುಗೆದಾರರು : ಮಧು ಚಂದ್ರ

 

3.0
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top