অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರೀಕ್ಷಾ ಒತ್ತಡ

ಪರೀಕ್ಷಾ ಒತ್ತಡ

  • ಮಿಥ್ಯ:  ಭಾರತದ  ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು  ನೋಡಿ ವಿಶ್ವವು ವಿಸ್ಮಯಗೊಂಡಿದೆ.   ಭಾರತದ  ವಿದ್ವಾಂಸರು, ಇಂಜನಿಯರುಗಳು, ವಿಜ್ಞಾನಿಗಳು  ಮತ್ತು ಇತರೆ ವೃತ್ತಿಪರರು ಪಾಶ್ಚಿಮಾತ್ಯ  ದೇಶಗಳಲ್ಲಿ ನೆಲೆಸಿ ತಮಗೂ , ರಾಷ್ಟ್ರಕ್ಕೂ ಹೆಸರು ತಂದಿದ್ದಾರೆ.  ಕಠಿಣ ಶಿಸ್ತಿನಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾಪದ್ಧತಿಯಲ್ಲಿಯೂ ಗೆಲುವಿನ ದಾರಿ ತೋರಿವೆ. ಎಲ್ಲ ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ನೀಡುವ ಶಾಲೆಗಳಿಗೆ ಸೇರಿಸಲು ಬಯಸುವರು
  • ಸತ್ಯ :  ಭಾರತವು ವಿಶ್ವದಲ್ಲಿ ಅತಿ ಬುದ್ಧಿವಂತರನ್ನು ಸೃಷ್ಟಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ  ಆ ಕೀರ್ತಿಯು ಈಗಿನ ಶಾಲೆಗಳಿಗೆ ಮತ್ತು ಶಿಕ್ಷಣ ವ್ಯವಸ್ಥೆಗೆ ಪೂರ್ತಿಯಾಗಿ  ಸಲ್ಲವುದೆ? ಅಥವಾ ಕೆಲವು ವಿದ್ಯಾರ್ಥಿಗಳ ದೃಢ ಸಂಕಲ್ಪ, ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡವನ್ನುಮೀರಿ ನಿಲ್ಲುವ ಶಕ್ತಿಗೆ ಸಲ್ಲಬೇಕೋ? ತೀವ್ರ ಸ್ಪರ್ಧೆ, ಹೆಚ್ಚುತ್ತಿರುವ ಮಕ್ಕಳ ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆ, ಫಲಿತಾಂಶವೆ ಶಾಲೆಯ ಮತ್ತು ಶಿಕ್ಷಕರ  ಗೌರವದ, ಸಾಧನೆಯ ಅಳತೆಗೋಲು ಆಗಿದೆ.  ಹೆಚ್ಚುತ್ತಿರುವ ಒತ್ತಡ ನಿಭಾಯಿಸಲು ಸೂಕ್ತ  ಸಹಾಯ ಕೊಡುವಲ್ಲಿ ಶಾಲೆ ಮತ್ತು ಶಿಕ್ಷಕರು  ನಿಸ್ಸಹಾಯಕರಾಗಿರುವುದರಿಂದ  ಮಕ್ಕಳಲ್ಲಿ ಖಿನ್ನತೆ ಹೆಚ್ಚುತ್ತಿದೆ ಅದು ಅನೇಕ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಮೆದುಳುಗಳು ಮರಣಿಸುತ್ತಿವೆ. ಈ ವಾಸ್ತವಕ್ಕೆ ನಾವು ಕಣ್ಣು ತೆರೆಯದೆ ಇದ್ದರೆ  ನಾವು ಅತಿ ಬೇಗ  ಬಹು ಜಾಣರಾದ ಒಂದು ಯುವ  ಪೀಳಿಗೆಯನ್ನೆ  ಕಳೆದು ಕೊಳ್ಳಬಹುದು.

ಕೆಲವು ಮಕ್ಕಳಿಗೆ  CBSE  ಪರೀಕ್ಷೆ ಬಿಟ್ಟರೆ ಬೇರೆ ಜೀವನವೇ ಇಲ್ಲ.

CBSE ಯ  X ಮತ್ತು XII ತರಗತಿಯ    ಫಲಿತಾಂಶ  ಬಂದ ೫-೬ ದಿನಗಳಲ್ಲಿ ದೆಹಲಿಯಲ್ಲಿ ಅರ್ಧ ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಳ್ಳತ್ತಾರೆ. ನೀವು ಇದನ್ನು ಓದುತ್ತಿರುವಾಗಲೇ  ಇನ್ನೂ ಅನೇಕರು ತಮಗೆ ಉತ್ತಮ ಫಲಿತಾಂಶ ಬಂದಿಲ್ಲ ಎಂದು  ಜೀವನ ಕೊನೆ ಗೊಳಿಸುವ ಯೋಚನೆ ಮಾಡುತ್ತಿರಬಹುದು.   ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮ ಹತ್ಯೆಯು ಗಂಭೀರ ಸಮಸ್ಯೆಯ ಸಂಕೇತ. ಈ ಮೊದಲು ಖಿನ್ನತೆ ಮತ್ತು ಹದಿಹರೆಯ ಒಟ್ಟಿಗೆ ಇರಲಾರವು ಎಂಬ ಭಾವನೆ ಇತ್ತು.    ಈಗ ಬೆಳೆಯುತ್ತಿರುವ ಭಾವನೆಯ ಪ್ರಕಾರ ಹದಿಹರೆಯದವರೂ  ಹೆಚ್ಚು ಹೆಚ್ಚಾಗಿ ಖಿನ್ನತೆಗೆ ಒಳಗಾಗುವರು, ಎಂದು ಹೇಳುತ್ತಾರೆ  ಡಾ. ಆರ್.ಸಿ ಜಿಲೋಹ, ಪ್ರಧ್ಯಾಪಕರು ಮತ್ತು ಮನೊವಿಜ್ಞಾನ  ವಿಭಾಗದ ಮುಖ್ಯಸ್ಥರು. ಜಿ.ಬಿ ಪಂತ್ ಮತ್ತು ಮೌಲಾನಾ ಅಜಾದ ಮೆಡಿಕಲ್ ಕಾಲೇಜು. ಈ ಸಮಸ್ಯೆಯು ಜಠಿಲವಾಗುತ್ತಾ ಹೋಗುವುದು.  ಎಳೆ ವಯಸ್ಸಿನ ಅವರಿಗೆ ಸೊಲನ್ನು ಎದುರಿಸುವ ಗಡಸುತನವಾಗಲೀ,  ಜೀರ್ಣಿಸಿಕೊಳ್ಳುವ ಅನುಭವವಾಗಲಿ ಇರುವುದಿಲ್ಲ.

ಮೆ. ಶರ್ಮ , ಟೆಲಿ-ಕೌನ್ಸಿಲರ್ ಹೇಳುತ್ತಾರೆ  “ ತಾಯಿತಂದೆ ಮತ್ತು ಶಿಕ್ಷಕರು ಆಪ್ತ ಸಲಹೆಯ ಪ್ರಾಮುಖ್ಯತೆಯನ್ನು ಅರಿಯುವುದು ಅತಿ ಮುಖ್ಯ. ಪರೀಕ್ಷಾ ಫಲಿತಾಂಶವೇ ಜಗತ್ತಿನಲ್ಲಿ ಎಲ್ಲ ಅಲ್ಲ. ಅದರಿಂದ ಜಗತ್ತೇ ಕೊನೆಯಾಗುವುದಿಲ್ಲ.. ಪರೀಕ್ಷೆಯಾದ ಮೇಲೂ ಜೀವನ ಇದೆ. ನೀವು ಸರಿಯಾಗಿ,  ಪರೀಕ್ಷೆ ಬರೆಯದಿದ್ದರೂ ಸಹಾ. ಅದನ್ನು ತಾಯಿತಂದೆಯರು , ಶಿಕ್ಷಕರು ಅರ್ಥಮಾಡಿ ಕೊಳ್ಳಬೇಕು”

ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ಬರುವ ಶಾಲೆಗೆ ಸೇರಿಸುವುದು ಸಹಜ. ಆದರೆ ಅವರನ್ನು ಯಾರಾದರೂ ಮಗುವಿನ ಬದುಕು ಮತ್ತು  ಕಲ್ಯಾಣಕ್ಕಿಂತ ಅದು  ಮುಖ್ಯವಾ?  ಎಂದು ಕೇಳಿದ್ದಾರಾ ? ಯಾರೂ ತಮ್ಮ ಮಗುವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.ಇದು ತಾಯಿತಂದೆಯರಿಗೆ ಇರುವ ಆಪ್ತ ಸಲಹೆಯ ಅಗತ್ಯವನ್ನು ತೋರಿಸುತ್ತದೆ. ಶಾಲೆಯ ಒತ್ತಡವು ಹೆಚ್ಚಿದಂತೆಲ್ಲ, ಅವನ ಪ್ರಗತಿ ಪತ್ರವು ಮಗು ಎಷ್ಟುಚೆನ್ನಾಗಿ ಮಾಡಿದೆ, ಎಷ್ಟು ಚೆನ್ನಾಗಿಮಾಡಿಲ್ಲ ವೆಂಬುದನ್ನು ಮಾತ್ರ ತೀಳಿಸಿದರೆ, ತರಗತಿಯ ಶಿಕ್ಷಕರು  ಸದಾ ಒಂದು ಮಗುವನ್ನು ಇನ್ನೊಂದು ಮಗುವಿನ ಜೊತೆ ಹೋಲಿಸುತ್ತಿದ್ದರೆ, ವಿದ್ಯಾರ್ಥಿಗಳ  ಭಾವನತ್ಮಕ, ಮಾನಸಿಕ ಅಗತ್ಯಗಳನ್ನು ನಿರ್ಲಕ್ಷಿಸಿದರೆ, ಪರಿಸ್ಥಿತಿಯು ಎಂದೂ ಬದಲಾಗಲು ಅಸಾಧ್ಯ. ಶಾಲೆಗಳು ಈ ದಿಶೆಯಲ್ಲಿ ಮೊದಲು ಕ್ರಮ ತೆಗೆದುಕೊಳ್ಳ ಬೇಕು ಮತ್ತು ತಾಯಿತಂದೆಯರಿಗೆ ಅವರ ಜೊತೆಯಲ್ಲಿ ಮಕ್ಕಳಿಗೂ ಕೂಡಾ  ಆಪ್ತ ಸಲಹೆಯನ್ನು ಕೊಡಬೇಕು.

ಮೂಲ:ಸ್ಮೃತಿ ಕಕ್,ದ ತ್ರಿಬ್ಯೂನ್,ಚಂಡಿಗಡ,ಭಾರತ ಶುಕ್ರವಾರ,ಮೇ 31, 2002

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate