অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಲೈಂಗಿಕ ದುರ್ಬಳಕೆ

ಮಿಥ್ಯೆ:    ಮಗುವಿನ ಲೈಂಗಿಕ ದುರ್ಬಳಕೆಯು ನಮ್ಮ ದೇಶದಲ್ಲಿ ಬಹು ವಿರಳ.  ಇದೆಲ್ಲ ಮಾಧ್ಯಮಗಳು ಹಬ್ಬಿಸಿರುವ ಹುಯಿಲು. ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಅಗುತ್ತಿದೆ. ಮಕ್ಕಳು ಮತ್ತು ಹದಿ ಹರೆಯದವರು ಕಥೆ ಕಟ್ಟಿ , ಕಲ್ಪನಾ ಲೋಕದಲ್ಲಿ ವಿಹರಿಸುವರು  .ಲೈಂಗಿಕ ದುರ್ಬಳಕೆ ಆಗಿದೆ ಎಂದು ಸುಳ್ಳು ಹೇಳುವರು. ಅದು ಏನಿದ್ದರೂ ಕೆಟ್ಟ ಮತ್ತು ನಡತೆ ಸರಿ ಇಲ್ಲದ ಹೆಣ್ಣುಗಳಿಗೆ ಮಾತ್ರ ಆಗುವುದು.

ಸತ್ಯ:  ಕೆಲವೆ ತಿಂಗಳ, ಮತ್ತು  ಕೆಲವೇ ದಿನಗಳ  ಅತಿ ಚಿಕ್ಕ  ವಯಸ್ಸಿನ ಮಕ್ಕಳು  ಲೈಂಗಿಕ ದುರ್ಬಳಕೆಗೆ ಬಲಿಯಾಗಿದ್ದಾರೆ.  ಬಾಲಕಿಯರು ಈ ದುರ್ಬಳಕೆಗೆ  ಬೇಗ ಒಳಗಾಗುವರೆಂಬ ನಂಬಿಕೆ ಇದ್ದರೂ ಬಾಲಕರೂ ಸಹಾ ದುರ್ಬಳಕೆಗೆ  ಬಲಿಯಾಗುತ್ತಿದ್ದಾರೆ.

ಮಾನಸಿಕ ಮತ್ತು ದೈಹಿಕ  ವಿಕಲತೆ ಇರುವವರು ಇನ್ನೂ ಹೆಚ್ಚಿನ ಅಪಾಯಕ್ಕೆ ಈಡಾಗುತ್ತಾರೆ. ಮಗುವಿನ ಲೈಂಗಿಕ ದರ್ಬಳಕೆಯ ಅಪಾಯ  ಎಲ್ಲ ಲಿಂಗ, ಜಾತಿ , ಕುಲ,ವರ್ಗ ಗಳಲ್ಲಿ ಮತ್ತು ನಗರ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ವ್ಯಾಪಿಸಿದೆ.

ಮಗುವನ್ನು  ಕೆಳಗೆ ಕಾಣಿಸಿದ ಯಾವುದೇ ವಿಧಾನದಿಂದ ದುರ್ಬಳಕೆ ಮಾಡಬಹುದು :

  • ಶಿಶ್ನ ಸೇರಿಸಿ ಲೈಂಗಿಕ  ಸಂಭೋಗ- ಬಲತ್ಕಾರ   ಅಥವ  ಯಾವುದೆ ವಸ್ತುವನ್ನು , ದೇಹದ ಯಾವುದೆ ಭಾಗದಲ್ಲಿ ಸೇರಿಸುವದು,
  • ಮಕ್ಕಳನ್ನು ಅಶ್ಲೀಲತೆಗೆ ಒಡ್ಡುವುದು ಇಲ್ಲವೆ  ಅಶ್ಲೀಲ ಸಾಮಗ್ರಿ ತಯಾರಿಕೆಗೆ ಬಳಕೆ ಮಾಡುವುದು
  • ಮಗುವಿನ ದೇಹದ ಯಾವುದೇ ಭಾಗವನ್ನು ನೇರವಾಗಿ ಇಲ್ಲವೆ ಪರೋಕ್ಷವಾಗಿ ಲೈಂಗಿಕ ತೃಪ್ತಿ ಪಡೆಯಲು ಮುಟ್ಟುವುದು.
  • ಲೈಂಗಿಕ ಉದ್ದೇಶದಿಂದ ಗುಪ್ತಾಂಗಗಳ ಪ್ರದರ್ಶನ
  • ಲೈಂಗಿಕ ಕ್ರಿಯೆಯನ್ನು ತೋರಿಸಿ   ತೃಪ್ತಿ ಪಡೆಯುವುದು ಇಲ್ಲವೆ ಇಬ್ಬರು ಅಥವ ಹೆಚ್ಚು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಲು        ಬಲವಂತ ಮಾಡುವುದು
  • ಲೈಂಗಿಕ ಬಣ್ಣವಿರುವ ಮಾತನಾಡುವುದು ಅಥವ ಅಸಭ್ಯ , ಅಶ್ಲೀಲ ಬೈಗುಳಗಳನ್ನು ಮಗುವಿನ ಮೇಲೆ ಬಳಸುವುದು
  • ಕೊಯಿಮತ್ತೂರು: ನಗರದ ಹೊರವಲಯದ  ಮದ್ದುಕರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯನೊಬ್ಬನನ್ನು  ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಬೈದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ
  • ಮೂರನೆ ತರಗತಿಯ ೮ ವರ್ಷದ ಹುಡುಗಿಯ ದೂರಿನ ಮೇಲೆ ಪೋಲೀಸರು  ಅವನನ್ನು ಬಂಧಿಸಿ ವಿವಿಧ .ಪ್ರಕರಣಗಳ ಅನ್ವಯ ಮೊಕದ್ದಮೆ ದಾಖಲುಮಾಡಿದ್ದಾರೆ.ಅದರಲ್ಲಿ ಲೈಂಗಿಕ ದುರ್ಬಳಕೆಯ ಪ್ರಯತ್ನ ವೂ ಸೇರಿದೆ. ಸುಮಾರು ೧೦೦ ಜನ ವಿದ್ಯಾರ್ಥಿಗಳು ಮದುಕ್ಕರಿ ಪೋಲೀಸು ಠಾಣೆಗೆ ಹೋಗಿ  ಆರೋಪಿಯ ಮೇಲೆ ತಕ್ಷಣದ ಕ್ರಮಕ್ಕಾಗಿ ಒತ್ತಾಯಿಸಿದ್ದಾರೂ. ಆ ಮುಖ್ಯ ಉಪಾಧ್ಯಾಯನೇ  ದೂರು ನೀಡಿದರೆ. ಮಕ್ಕಳು ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಹೆದರಿಸಿದ್ದಾನೆ

ಮೂಲ: ಪಿಟಿ ಐ , 25 ಮಾರ್ಚ 2005

ಆಕ್ರಮಣಕಾರಿಯ ಕಾಳಜಿ, ಮೃದುತ್ವ ಮತ್ತು ಪ್ರೀತಿಯು ಮಗುವಿಗೆ ಬಹಳ ಕಿರಿಕಿರಿವೆನಿಸಿಬಹುದು ಮತ್ತು ಅದರಿಂದ ಮಗುವಿನ ಆತ್ಮವಿಶ್ವಾಸ ಕುಗ್ಗಿ ,   ಅಪನಂಬಿಕೆ  ಹೆಚ್ಚಿ , ಅಪರಾಧಿ ಭಾವ ಕಾಡುವುದು.

ಮಗುವನ್ನು ಅದಕ್ಕೆ ಗೊತ್ತಿರುವವರು ಇಲ್ಲವೆ ಅಪರಿಚಿತರು ದುರ್ಬಳಕೆ ಮಾಡಿಕೊಳ್ಳುವರು

ಹೀಗೆ ಮಾಡುವವನು  ೯೦%  ಘಟನೆಗಳಲ್ಲಿ ಮಗುವಿಗೆ ಪರಿಚಿತರಾದ ಮತ್ತು ನಂಬಿಗೆಯ  ವ್ಯಕ್ತಿಯೇ ಆಗಿರುವನು. ದುರ್ಬಳಕೆ ಮಾಡುವವನು ನಂಬಿಕೆಯ ಸಂಬಂಧವನ್ನು ಉಲ್ಲಂಘಿಸಿ   ತನ್ನ ಅಧಿಕಾರ ಮತ್ತು ಸ್ಥಾನದ ದುರುಪಯೋಗ ಮಾಡಿಕೊಳ್ಳುವನು. ಅನೇಕ ಸಂದರ್ಭಗಳಲ್ಲಿ ಮಗುವಿಗೆ ಅತಿ ಸಮೀಪದ ವ್ಯಕ್ತಿಯೇ- ತಂದೆ, ಅಣ್ಣ, ಚಿಕ್ಕಪ್ಪ, ಮಾವ, ನೆರಮನೆಯವ ಆಗಿರಬಹುದು. ಅವನು ಕುಟುಂಬದ ಸದಸ್ಯನಾಗಿದ್ದರೆ ಅದು ನಿಷಿದ್ಧ ಗಮನವೆನಿಸುವುದು.

ಲೈಂಗಿಕ ದುರ್ಬಳಕೆಯು ಹಿಂದಿನಿಂದಲೂ ಸಮಾಜದಲ್ಲಿದೆ. ಹೆಣ್ಣು ಮಗುವನ್ನು ವೇಶ್ಯಾ ವೃತ್ತಿಗಾಗಿ ಮಾರುವುದು, ಧರ್ಮ,  ಸಂಪ್ರದಾಯದ ಹೆಸರಲ್ಲಿ ದೇವದಾಸಿ, ಜೋಗಿನಿಯಾಗಿಸುವುದು ಇದಕ್ಕೆ ಉದಾಹರಣೆ. ಆದರೆ ಕಾಲ ಗತಿಸಿದಂತೆ ಅರಿವು ಹೆಚ್ಚುತ್ತಿದೆ. ಮಾಧ್ಯಮಗಳ ವರದಿಗಳು ಅನೇಕ ಸಲ ಸತ್ಯವನ್ನು ಮರೆಮಾಚುತ್ತವೆ.

ದುರ್ಬಳಕೆ ಮಾಡಿಕೊಳ್ಳುವವರು ಹೆಂಡತಿಯ ಇಲ್ಲವೆ ವಯಸ್ಕ ಸಂಗಾತಿಯ ಬದಲಾಗಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಜೊತೆಯಾಗಿಯೇ ಈ ಕೆಲಸ ಮಾಡುವರು. ಅವರು ಮಾನಸಿಕವಾಗಿ ಅಸ್ವಸ್ಥರಲ್ಲ. ಎಲ್ಲರಂತೆಯೇ ಇರುವರು. ತಮ್ಮ  ದುಷ್ಕೃತ್ಯವನ್ನು   ಸಮರ್ಥಿಸಿಕೊಳ್ಳಲು ಕೊಡುವ ಕಾರಣಗಳಲ್ಲಿ ಇದೂ ಒಂದು ನೆಪ.. ಸ್ವಲ್ಪ ಜನ ದುರ್ಬಳಕೆಯನ್ನು  ಜನರ ಎದುರೇ ಮಾಡುವಷ್ಟು ನಾಚಿಕೆ ಇಲ್ಲದವರಾಗಿರುವರು.

ಮಕ್ಕಳು ಯಾರಿಗೂ ದುರ್ಬಳಕೆಯ ಬಗ್ಗೆ,  ಅಶ್ಲೀಲ ಚಿತ್ರಗಳನ್ನು ನೋಡಲು ಮಾಡುವ ಒತ್ತಾಯದ ಕುರಿತು  ಹೇಳಲು ಹೆದರುವರು .ಮಗುವು ಎಷ್ಟೆ ದೊಡ್ಡವನಾಗಿದ್ದರೂ ದುರ್ಬಳಕೆ ಮಾಡುವವರು ಅವನಿಗಿಂತ ಬಲಶಾಲಿಗಳಾಗಿರುವರು. ಮಗುವು ಅವನಿಗೆ ಯಾವುದೆ ರೀತಿಯಲ್ಲಿ ಸರಿ ಸಾಟಿಯಲ್ಲ.   ದುರ್ಬಳಕೆ ಮಾಡುವವನ ವಂಚನೆಯನ್ನು ಹೇಳಲು ಅದಕ್ಕೆ ಆಗುವುದಿಲ್ಲ  ಏಕೆಂದರೆ   ಅವನು ಹತ್ತಿರದ ಬಂಧುವಾಗಿರುವನು. ತಾಯಿಗೆ  ಈ ವಿಷಯ ಗೊತ್ತಾದರೂ ಏನೂ ಮಾಡದ ಅಸಾಹಯಕ ಸ್ಥಿತಿಯಲ್ಲಿರುವಳು. ಕುಟುಂಬ ಒಡೆಯುವ ಭಯ ಇಲ್ಲವೇ ಯಾರೂ ನಂಬುವುದಿಲ್ಲ ಎಂಬ ಅನುಮಾನ ಮೌನಕ್ಕೆ ಕಾರಣ.   ತಾಯಿತಂದೆಯರು, ಕುಟುಂಬದಲ್ಲಿನ ಹಿರಿಯರು ಈ ವಿಷಯವನ್ನು ನಿರ್ಲಕ್ಷಮಾಡುವರು. ನಡೆದೆ ಇಲ್ಲ ಎಂದು ವಾದಿಸಬಹುದು.  ಮಕ್ಕಳು ತಿಳಿಸುವ ದುರ್ಬಳಕೆ ಮತ್ತು ಶೋಷಣೆಯ ವಿಷಯ ಬಹುತೇಕ ಸತ್ಯವಾಗಿರುವುದು.  ಲೈಂಗಿಕ ದುರ್ಬಳಕೆ, ನಿಷಿದ್ದ ಗಮನವನ್ನು , ಮಗುವಿನ ಸಾಗಣಿಕೆಯನ್ನು  ಭ್ರಮೆ ಎಂದು ಸಮಾಜವು ತಿರಸ್ಕಾರ ಮಾಡುವುದು.

ಮಕ್ಕಳು ಮುಗ್ಧರು ಮತ್ತು ನಿರ್ಬಲರು. ಅವರಿಗೆ ಲೈಂಗಿಕ ತಿಳುವಳಿಕೆ ಇಲ್ಲ. ಮತ್ತು ಹಿರಿಯರ ಲೈಂಗಿಕತೆಗೆ ಮಕ್ಕಳ ವರ್ತನೆಗೆ  ಕಾರಣವಲ್ಲ. ಮಕ್ಕಳಿಗೆ ತಿಳುವಳಿಕೆ ಇದ್ದರೂ  ಅದು ಮಕ್ಕಳ ಮೇಲಿನ ನ್ಯೇತಾತ್ಮಕ ಅಭಿಪ್ರಾಯ ಮತ್ತು ಅವರನ್ನೆ ದೂಷಿಸುವುದಕ್ಕೆ ಕಾರಣವಾಗಬಾರದು. ವೇಶ್ಯೆಯೂ ಕೂಡಾ ಬಲತ್ಕಾರಕ್ಕೆ  ಹಲ್ಲೆಗೆ, ಗುರಿಯಾಗಬಹುದು. ಆಗಲೂ ಕಾನೂನು ಅವಳ ಸಹಾಯಕ್ಕೆ ಬರುವುದು. ಮಕ್ಕಳನ್ನೇ ಅವರು ಅನುಭವಿಸುವ ನೋವಿಗೆ ತೆಗಳುವುದರಿಂದ  ಘಟನೆಯ ಹೊಣೆಯನ್ನು ಮಗುವಿನ ಮೇಲೆ  ಹಾಕಿದಂತಾಗುವುದು.

ಮಗುವಿನ ವಿಷಯದಲ್ಲಿ ಒಪ್ಪಿಗೆಯ ಮಾತೇ ಬರುವುದಿಲ್ಲ. ಕಾನೂನಿನ  ಪ್ರಕಾರ ೧೬ ವರ್ಷದ ಕೆಳಗಿನ ಹುಡುಗಿಯ ಸಂಭೋಗವು  ಬಲತ್ಕಾರ ಎನಿಸುವುದು.

ಮಕ್ಕಳು ದುರ್ಬಳಕೆಯನ್ನು ವರದಿಮಾಡಿದಾಗ ಅವರ ನಂಬಿಕಾರ್ಹತೆಯೇ ಪ್ರಶ್ನೆಗೆ ಒಳಗಾಗುವುದು. ಅವರ ನಂಬಿಕೆ ಮತ್ತು ವಿಶ್ವಾಸವನ್ನೆ ಹಳಿಯಲಾಗುವುದು. ಮಗುವಿನ ಪಾಪ ಪ್ರಜ್ಞೆಯನ್ನೆ ಬಳಸಿಕೊಂಡು ಅವರ ವರ್ತನೆಯಿಂದಲೇ ಘಟನೆ ನೆಡೆದಿದೆ ಎಂದು ಯೋಚಿಸಲಾಗುವುದು.

ಮೂಲ : ಅರ್ಥಕ್ಕೆ ಸಂಬಂಧಿಸಿದೆಯೋ ಅಥವ ಗಾಂಭೀರ್ಯವೋ? ಮಕ್ಕಳ ಲೈಂಗಿಕ ಶೋಷಣೆ ವಿರುದ್ಧದ ಉಪಗುಂಪು, ಮಕ್ಕಳ ಹಕ್ಕುಗಳ ಸಮಾವೇಶದ ಸರ್ಕಾರೇತರ ಸಂಸ್ಥೆಗಳ ಒಂದು ಗುಂಪು, ಜನವರಿ 2005

ಮಗುವಿನ ಮೇಲೆ ಲೈಂಗಿಕ ದುರ್ಬಳಕೆಯ ಪರಿಣಾಮ

ದುರ್ಬಳಕೆಯ ಪರಿಣಾಮವು  ತತಕ್ಷಣ ಅಥವ ದೂರಗಾಮಿಯೂ ಆಗಿರಬಹದು:

  • ಗಾಯ, ಕಚ್ಚಿರುವುದು.ತೆರಚು, ಗುಪ್ತಾಂಗದಲ್ಲಿ ರಕ್ತಸ್ರಾವ ಮೊದಲಾದ ದೈ ಹಿಕ  ನೋವುಗಳು
  • ಮಕ್ಕಳು  ಅನೇಕ ಸಲ ತಪ್ಪಿತಸ್ಥ ಭಾವನೆ, ಖಿನ್ನತೆ, ಆತಂಕ ಮತ್ತು ಲೈಂಗಿಕ ನಿರ್ಬಲತೆಯಿಂದ ಬಳಲುವರು. ಕುಟುಂಬದಿಂದ ಸಾವಕಾಶವಾಗಿ ದೂರವಾಗುವರು
  • ಹಲವು ಮಕ್ಕಳು ವಯಸ್ಕ  ಸಂಬಂಧಗಳಲ್ಲಿ ಸಮಸ್ಯೆ ಎದುರಿಸುವರು. ಸರಿಯಾದ ಲೈಂಗಿಕ ಸಂಬಂಧ ಹೊಂದುವಲ್ಲಿ ವಿಫಲರಾಗುವರು..
  • ಲೈಂಗಿಕ ದುರ್ಬಳಕೆಯ  ಜೊತೆ ಜೊತೆಗೆ  ವಿಶ್ವಾಸದ್ರೋಹವು ಅವರನ್ನು ಬಹಳಕಾಲ ಕಾಡುವುದು,  ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸದಿದ್ದರೆ ಕೆಲವು ಬಾರಿ  ಜೀವವಿರುವವರೆಗೂ ಘಾಸಿ ಮಾಡುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate