অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರಿಸರ ಸ್ನೇಹಿ ವಿಧಾನ

ಬೇಸಿಗೆಯನ್ನು ಎದುರಿಸಲು ಪರಿಸರ ಸ್ನೇಹಿ ವಿಧಾನ

  • ಹೆಚ್ಚು ನೀರು ಕುಡಿಯಿರಿ. ಬಾಟಲಿಯಲ್ಲಿನ ನೀರು ಬೇಡ. ಅವು ತ್ಯಾಜ್ಯವನ್ನುಹೆಚ್ಚಿಸುವವು.. ನೈಸರ್ಗಿಕ ಸಂಪನ್ಮೂಲವನ್ನು ಕಡಿಮೆಮಾಡುವವು.
  • ಕೆಫಿನ್ ಇರುವ ಪಾನೀಯ ಬೇಡ. ನೈಸರ್ಗಿಕವಾಗಿತಂಪು ಮಾಡುವ ಮಜ್ಜಿಗೆ ಕುಡಿಯಿರಿ..
  • ತಿಳಿ ಬಣ್ಣದ ಬಟ್ಟೆ ಧರಿಸಿ.ಹತ್ತಿ ಬಟ್ಟೆಗೆ ಆದ್ಯತೆಇರಲಿ.
  • ದೇಹದಲ್ಲಿ ನೀರಿನ ಕೊರತೆಯಾಗುವುದನ್ನುತಪ್ಪಿಸಲು ಹೆಚ್ಚು ಹೆಚ್ಚು ದ್ರವಪದಾರ್ಥ ಸೇವಿಸಿ. ನಿಂಬೆ ಪಾನ, ಎಳನೀರು, ಹಣ್ಣಿನ ರಸ ಇತ್ಯಾದಿ. ಎಳನೀರಿನಲ್ಲಿ ಸಕ್ಕರೆ, ನಾರು, ಪ್ರೋಟೀನ್ ವಿಟಮಿನ್ಗಳು ಮತ್ತು ಲವಣಗಳು ಇರುತ್ತವೆ.
  • ಹೆಚ್ಚು ಸಲಾಡ್ ಅನ್ನು ತಿನ್ನಿರಿ. ಕಲ್ಲಂಗಡಿ ಹಣ್ಣಿನಂತಹ ಕೆಚ್ಚು ನೀರಿನ ಅಂಶವಿರುವ ತಾಜಾ ಹಣ್ಣು ಸೇವಿಸಿ ಅದರಲ್ಲಿ 92% ನೀರು, ವಿಟಮಿನ್ ಸಿ 14% ನವರೆಗೆ ಇರುವುದುಅದು ಬೆವರಿನಿಂದ ನಷ್ಟವಾದ ನಾರಿನ ಅಂಶದ ಮರುಪೂರಣಕ್ಕೆ ಸಹಾಯಮಡುವುದು. ತುಸು ಪ್ರಮಾಣದ ವಿಟಮಿನ್ ಬಿಮತ್ತು ಪೊಟಾಸಿಯಂ ಕೂಡಾ ಅದರಲ್ಲಿದೆ..
  • ಹೂಜಿಯಲ್ಲಿಟ್ಟ ನೀರು ಕುಡಿಯಿರಿ
  • ಕರಿದ ಪದಾರ್ಥಗಳನ್ನು, ರಸ್ತೆ ಬದಿಯಲ್ಲಿ ನೊಣ ಮತ್ತು ಧೂಳು ಕೂಡಬಹುದಾದ ಕತ್ತರಿಸಿದ ಹಣ್ಣುಗಳು ಬೇಡ.
  • ಬೀಸಣಿಕೆ ಬಳಸಿ. ವಿದ್ಯುತ್ ಇಲ್ಲದಾಗಲೂ ಅದು ಸಹಾಯಕ್ಕೆ ಬರುವುದು..
  • ಕಿಟಕಿಗೆ ಲಾವಂಚದಿಂದ ಮಾಡಿದ ಚಾಪೆಯನ್ನು ಒದ್ದೆ ಮಾಡಿ ಪರದೆಯಂತೆ ಹಾಕಿ.. ಅದು ತಂಪಾದ ಗಾಳಿಮನೆಯಲ್ಲಿ ಪರಿಚಲಿಸಲು ಸಹಾಯ ಮಾಡುವುದು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate