ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ಇಂಧನ ಉತ್ಪಾದನೆ / ಬಯೋ ಗ್ಯಾಸ್ ಘಟಕ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಯೋ ಗ್ಯಾಸ್ ಘಟಕ

ಬಯೋ ಗ್ಯಾಸ್ ಘಟಕದ ಅನುಕೂಲಗಳು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಬಯೋ ಗ್ಯಾಸ್ ಘಟಕದ ಅನುಕೂಲಗಳು
  • ಬಯೋ ಗ್ಯಾಸ್ ಘಟಕದ ನಿರ್ಮಾಣದ ವೆಚ್ಚ ಕಡಿಮೆ
  • ಇದನ್ನು ಮನೆಯಲ್ಲಿಯೇ ನಿರ್ಮಿಸಬಹುದು.
  • ಯಾವಾಗ ಬೇಕಾದರೂ ಬಯೋ ಗ್ಯಾಸ್ ಘಟಕದ ಸಾಮರ್ಥ್ಯ ಹೆಚ್ಚಿಸುವುದು ಸುಲಭ
  • ಅಡುಗೆ ಮನೆಯ ತ್ಯಾಜ್ಯಗಳನ್ನೂ ಕಚ್ಚಾ ಸಾಮಗ್ರಿಯಾಗಿ ಬಳಸಬಹುದು

ಸೂಚನೆ : ಇದು ಒಂದು ಪ್ರಯೋಗಿಕ ಯೋಜನೆ. ಇದನ್ನು ಇನ್ನೂ ಪರೀಕ್ಷಿಸಿಲ್ಲ.

ಮೂಲ : ಶ್ರೀ ಕೆ. ಓಂಕಾರ್

ಗ್ರಾಮೀಣ ಮಹಿಳೆಯರಿಗೆ ಆದಾಯ ತರುವ ನಾವಿನ್ಯತೆ

ಕೆ ವಿವೇಕಾನಂದ , ಕೊಯಮತ್ತೂರು , ಅವರ ರುಬ್ಬುವ ಯಂತ್ರದ ಜತೆಗೆ. ಶ್ರಿ. ಕೆ ವಿವೇಕಾನಂದನ್ , ಕೊಯಮತ್ತೂರು (ತಮಿಳುನಾಡು) ಇವರು ರೂ.8 ಲಕ್ಷ ಬಂಡವಾಳ ಹೂಡಿ ಮೆಣಸಿನ ಕಾಯಿ ಮತ್ತು ಕೊತ್ತಂಬರಿ ಬೀಜವನ್ನು ಪುಡಿಮಾಡಲು 3 HP ಯ ಪಿನ್ ಪಲ್ವರೈಜರ್ ಅನ್ನು ನಿರ್ಮಿಸಿದರು.. " ಈ ಯಂತ್ರವು ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಲು ಬಯಸುವ ಗ್ರಾಮೀಣ ಮಹಿಳೆಯರಿಗೆ ಹೆಚ್ಚುವರಿ ಆದಾಯತರುವ ಉತ್ತಮ ಸಾಧನವಾಗಿದೆ.” ಎನ್ನುತ್ತಾರೆ ಶ್ರಿ ವಿವೇಕಾನಂದನ್. ಈಗ ಇರುವ ಬಹಳಷ್ಟು ರುಬ್ಬುವ ಯಂತ್ರಗಳ ಸ್ಥಾಪನೆಯ ವೆಚ್ಚ ಬಹಳ ಅಧಿಕ ಮತ್ತು ಅವಕ್ಕೆ ಹೆಚ್ಚು ವಿದ್ಯುತ್ ಬೇಕಾಗುತ್ತದೆ. ಇದರಿಂದ ಹಳ್ಳಿಗಳಿಗೆ ಅದು ಸೂಕ್ತವಾಗಿಲ್ಲ ಏಕೆಂದರೆ ಅಲ್ಲಿನ ವಿದ್ಯುತ್ ಪೂರೈಕೆ ಅನಿಯಮಿತವಾಗಿರುವುದು

ಎದುರಿಸಿದ ಸವಾಲುಗಳು

ಎದುರಿಸಿದ ಸವಾಲುಗಳು ಈ ಯಂತ್ರವನ್ನು ಕಂಡುಹಿಡಿದ ಶ್ರಿ ವಿವೇಕಾನಂದನ್ ರುಬ್ಬುವಾಗ ಎದುರಿಸುವ ಶೇಕಡಾ 90 ಸಮಸ್ಯೆಗಳನ್ನು ಬಗೆಹರಿಸಿರುವೆ ಎಂದು ಯೋಚಿಸಿದ್ದರು. ಅವರು ಯಂತ್ರವನ್ನು ಅಭಿವೃದ್ಧಿಪಡಿಸಿ 100 ಯಂತ್ರಗಳನ್ನು ಉತ್ಪಾದಿಸಿದರು. ಆದರೆ ಕೇವಲ 20 ಯಂತ್ರಗಳು ಮಾತ್ರ ಮಾರಾಟವಾದವು. ಆದರೆ ಗ್ರಾಹಕರಲ್ಲಿ ಕೆಲವರು ಅವುಗಳನ್ನು ವಾಪಸ್ಸು ಮಾಡಿ ನಿರಾಶೆ ಮೂಡಿಸಿದರು. ಅವುಗಳಿಂದ ರುಬ್ಬುವಾಗ ಧೂಳು ಹೆಚ್ಚುಬರುತ್ತಿತ್ತು ಮತ್ತು ಮೆಣಸಿನ ಕಾಯಿ ಮತ್ತು ಹವೀಜ ಸೋಸುವ ಜರಡಿಯ ಮೂಲಕ ಸರಾಗವಾಗಿ ಹೋಗುತ್ತಿರಲಿಲ್ಲ ಅವರ ಕೆಲಸ ಸ್ಥಗಿತವಾಯಿತು. ಮುಂದೆ ಒಂದು ವರ್ಷ ಯಾವ ಕೆಲಸವೂ ಆಗಲಿಲ್ಲ. ವಿವೇಕಾನಂದನ್ ಅವರು ವಿಲ್ ಗ್ರೊ ( ಗ್ರಾಮೀಣ ಉದ್ಯಮಿಗಳನ್ನುಬೆಂಬಲಿಸುವ ಸಂಸ್ಥೆ) ಸಂಪರ್ಕ ಮಾಡಿ ಮಾರ್ಗದರ್ಶನ ಮಾಡಲು ಕೇಳಿಕೊಂಡರು. ವಿಲ್ ಗ್ರೊ ಸಿಬ್ಬಂದಿಯವರು ಈ ಸಮಸ್ಯೆಯ ಪರಿಹಾರಕ್ಕಾಗಿ ವಿವಿಧ ಸಂಪನ್ಮೂಲಗಳ ಸಹಾಯ ಪಡೆದರು. ಅಲ್ಲಿನ ತಾಂತ್ರಿಕ ಪರಿಣಿತರು ಮೊದಲು ವಿವೇಕಾನಂದನ್ ಅವರು 1 HP ಯ ಸಿಂಗಲ್ ಫೇಜ್ ಯಂತ್ರವನ್ನು ತಯಾರಿಸಲು ಸಹಾಯ ಮಾಡಿದರು. ಏಕೆಂದರೆ ಗ್ರಾಮಾಂತರ ಪ್ರದೇಶದಲ್ಲಿ ದೊರೆಯುವ ಒಂದು ಫೇಜಿನ ವಿದ್ಯುತ್ ನಿಂದ ಮತ್ತು ವೋಲ್ಟೇಜಿನ ಏರಿಳಿತದಿಂದ 3 HPಯಂತ್ರವು ಕೆಲಸ ಮಾಡುತ್ತಿರಲಿಲ್ಲ. ಅನೇಕ ಪ್ರಯೋಗಗಳ ನಂತರ ಅವರು ಮೆಣಸಿನಕಾಯಿ ಮತ್ತು ಕೊತಂಬರಿ ಬೀಜಗಳನ್ನು ಪುಡಿ ಮಾಡುವಲ್ಲಿ ಎದುರಿಸುವ ಸಮಸ್ಯೆಯನ್ನು ಗುರುತಿಸಿದರು. ಸಮಸ್ಯೆಗೆ ಅವುಗಳಲ್ಲಿನ ಹೆಚ್ಚು ನಾರಿನ ಅಂಶ ಕಾರಣವಾಗಿರಲಿಲ್ಲ. ಅದಕ್ಕೆ ಕಾರಣ ಇತಿ ಹೆಚ್ಚು ವೇಗದಿಂದ ಚಲಿಸುವ ರೊಟಾರ್ ಆಗಿತ್ತು. ಅದಕ್ಕೆ ಅನುಗುಣವಾಗಿ ಯಂತ್ರದ ತೂಕವನ್ನು ಕಡಿಮೆ ಮಾಡಲಾಯಿತು.ಅದರ ಗೋಡೆಯ ದಪ್ಪ, ಸ್ಟಾರಟರ್ ಮತ್ತು ರೋಟಾರಗಳ ವ್ಯಾಸವನ್ನು ಕಡಿಮೆ ಮಾಡಲಾಯಿತು. ಇದರಿಂದ ಗ್ರಾಮೀಣ ಭಾಗದಲ್ಲಿ ಅದರ ಬಳಕೆ ಸುಗಮವಾಯಿತು.

ಬೆಲೆ

ವಿವೇಕಾನಂದನ್ ಅವರು ರುಬ್ಬುವ ಯಂತ್ರದ ಬೆಲೆಯನ್ನು ಹಳ್ಳಿಗಳ ಉಪಯೋಗಕ್ಕೆ , ಅವರು ಬಳಸುವ ಸಾಮಗ್ರಿಗಳ ಪ್ರಮಾಣಕ್ಕೆ ಹೊಂದುವಂತೆ ಮತ್ತು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತಗ್ಗಿಸಲಾಯಿತು. ಪ್ರತಿ ಯಂತ್ರದ ಬೆಲೆಯನ್ನು. 11,500 ರೂಪಾಯಿಗಳಿಗೆ ನಿಗದಿ ಮಾಡಲಾಯಿತು ( ಮೊಟಾರು ಸೇರಿ).

ಹೆಚ್ಚಿನ ಮಹಿತಿಗಾಗಿ ಓದುಗರು ಸಂಪರ್ಕಿಸಬೇಕಾದ ವಿಳಾಸ:

ಶ್ರೀ . ಕೆ . ವಿವೆಕನಂದನ್

ಎಂ/ಎಸ್  ವಿವೆಗ  ಇಂಜಿನಿಯರಿಂಗ್  ವರ್ಕ್ಸ್

ನ್ಯೂ  ನo : ೧೧೬ -೧೧೮ , ಸತಿ  ರೋಡ್ ,

ಅರ . ಕೆ . ಪುರಂ , ಗಣಪತಿ , ಛೊಇಮ್ಬತೊರೆ  - ೬೪೧  ೦೦೬

ಮೊಬೈಲ್  ನo : ೯೪೪೩೭ -೨೧೩೪೧ .

ದಂಶಕಗಳ ಪಿಡುಗು ನಿವಾರಣೆಗೆ ಹೊಸ ಆವಿಷ್ಕಾರ

ದಂಶಕಗಳು ಕೃಷಿಗೆ ದೊಡ್ಡ ಸವಾಲಾಗಿವೆ.ಅದರಲ್ಲೂ ಮಾನ್ಸೂನ್ ತರುವಾಯ ಇನ್ನೂ ತೀವ್ರ. ದಂಶಕಗಳ ನಿರ್ವಣೆಗೆ ರೈತರು ಇತರ ಆಯ್ಕೆಗಳನ್ನು ಪ್ರಯತ್ನಿಸಿರುವುರು. 2ಧಾನ್ಯದ ಹಿಟ್ಟಿನಲ್ಲಿ ಇಲಿ ಪಾಷಾಣವನ್ನು ಬೆರಸಿ ಅದನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಮರಗಳ ಮೇಲೆ ಇಡುವರು.ಅವನ್ನು ತಿಂದ ಇಲಿಗಳು ಸಾಯುವವು. ಆದರೆ ಮಳೆಗಾಲದಲ್ಲಿ ಈ ವಿಧಾನವು ಪರಿಣಾಮಕಾರಿಯಲ್ಲ. 2ರೈತರು ಹುರಿದ ನೆಲಗಡಲೆ ಬೀಜ , ಎಳ್ಳು, ಹವೀಜದ ಜೊತೆ ಇಲಿ ಪಾಷಾಣ ಸೇರಿಸಿ ಬಟ್ಟೆಯಲ್ಲಿ ಗಂಟು ಕಟ್ಟಿ ಮರದ ಮೇಲೆ ಇಡುವರು.ಆದರೆ ಇದು ತುಸು ಅಪಾಯಕಾರಿ ಎಂದು ಸಿದ್ಧವಾಯಿತು.. ಕಾರಣ ಇದರಿಂದ ಸತ್ತ ಇಲಿಗಳನ್ನು ತಿಂದ ಹಕ್ಕಿಗಳೂ ಕೂಡಾ ಸಾಯುತ್ತವೆ.. ರೈತರು ಹೆಗ್ಗಣ ,ಇಲಿ ಹಿಡಿಯಲು ವೃತ್ತಿಪರರನ್ನು ಬಳಸಬಹುದು. ಆದರೆ ಅದು ತುಂಬ ದುಬಾರಿ. ಅವರು ಒಂದು ಹೆಗ್ಗಣಕ್ಕೆ .25-30 ರೂಪಾಯಿ ಶುಲ್ಕ ಕೇಳುವರು. ನವೀನ ಬೋನಿನ ಬಗ್ಗೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶ್ರೀ. ನವೀನ ಕುಮಾರ್ ಅವರು ಪರಿಸರ ಸ್ನೇಹಿ ಇಲಿ ಬೋನನ್ನು ತಯಾರಿಸಿರುವರು. ಈ ಇಲಿ ಬೋನಿನಲ್ಲಿ ಹಳೆಯ ಬಿದಿರಿನ ಬುಟ್ಟಿಯ ನಾಲಕ್ಕು ಮೂಲೆಗನ್ನು ತಂತಿಯಿಂದ ಕಟ್ಟಲಾಗಿರುವುದು. ಅದನ್ನು ಒಂದು ಪ್ಲಾಸ್ಟಿಕ್ ದಾರಕ್ಕೆ ಕಟ್ಟಿದೆ. ಅದನ್ನು ತೆಂಗಿನ ಗರಿಗೆ ಜೋಡಿಸಿದೆ ಅದನ್ನು ಮೇಲೆ ಕೆಳಗೆ ಎಳೆಯಬಹುದು. ಥಟ್ಟನೆ ಬೀಳುವ ಬೋನನ್ನು ಈ ಬುಟ್ಟಿಯಲ್ಲಿ ಇಡಲಾಗುವುದು.ಅದರೊಳಗೆ ಕೊಬ್ಬರಿ ತುಂಡುಗಳನ್ನು ಹಾಕುವರು. ಆಕರ್ಷಣೆಗೆ ಒಳಗಾದ ಇಲಿಗಳು.ಅದರೊಳಗೆ ಬಂದು ಕೊಲ್ಲಲ್ಪಡುವವು..ಆಗ ಸತ್ತ ಇಲಿಯನ್ನು ರೈತರು ಹೊರತೆಗೆದು ಮಣ್ಣಲ್ಲಿ ಹೂತುಹಾಕಬಹುದು. ಈ ರೀತಿಯಾಗಿ 3-4 ಇಲಿಗಳನ್ನು ಹಿಡಿದು ಸಾಯಿಸಬಹುದು.ಆದರೆ ಇದು ಶಾಶ್ವತ ಪರಿಹಾರವಲ್ಲ. ಏಕೆಂದರೆ ಸತ್ತ ಇಲಿಗಳು ಒಂದು ನಿರ್ದಿಷ್ಟವಾದ ಹಾರ್ಮೊನನ್ನು ತಮ್ಮ ದೇಹದಿಂದ ಸ್ರವಿಸುವವು. ಅದರಿಂದ ಇತರ ಇಲಿಗಳಿಗೆ ಅಪಾಯದ ಮುನ್ಸೂಚನೆ ದೊರೆಯುವುದು. ಅದನ್ನು ಗ್ರಹಿಸಿದ ಇತರೆ ಇಲಿಗಳು ಆ ಸ್ಥಳದ ಹತ್ತಿರವೂ ಸುಳಿಯುವುದಿಲ್ಲ. ಅಲ್ಲಿಂದ ದೂರದೂರದಲ್ಲೆ ಓಡಾಡುವವು. ಶ್ರೀ, ಕುಮಾರ್ ತಯಾರಿಸಿದ ಬೋನಿನ ಬೆಲೆ ಒಂದಕ್ಕೆ ಸುಮಾರು 30-35ರೂಪಾಯಿ ಆಗಬಹುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ಶ್ರಿ.ಎಸ್. ಆರ್. ಅರುಣ್ ಕುಮಾರ್, ಶೆಟ್ಟಿಕೆರೆ, ಚಿಕ್ಕನಾಯಕನ ಹಳ್ಳಿ.,

ತುಮಕೂರು ಜಿಲ್ಲೆ- 572226,

ದೂರವಾಣಿ: 08133 – 269564, ಮೊಬೈಲು: 09900824420

ಮೂಲ: ದ ಹಿಂದು

2.93670886076
Ramesh Apr 02, 2016 04:56 PM

ಗುಡ್ ತುಂಬಾ ಚನ್ನಾಗಿ ಇರುವಂಥ ಮಾಹಿತಿ ನೀಡಿದ್ದೀರ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top