ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸೌರ ಒಲೆ

ಸಮುದಾಯದ ಬಳಕೆಗೆ - ಸೌರ ಶಕ್ತಿಯನ್ನು ಏಕಾಗ್ರಗೊಳಿಸುವಂತಹ ಮಾದರಿಯ ಒಲೆಗಳು.ಇವು ಶೆಫ್ಲರ್ ಮಾದರಿಯ ಸೌರ ಪೆಟ್ಟಿಗೆ ಒಲೆಗಳೆಂದೂ ಚಿರಪರಿಚಿತವಾಗಿವೆ.

ಸೌರ ಒಲೆಯ ವಿಧಗಳು

ಸಮುದಾಯದ ಬಳಕೆಗೆ - ಸೌರ ಶಕ್ತಿಯನ್ನು ಏಕಾಗ್ರಗೊಳಿಸುವಂತಹ ಮಾದರಿಯ ಒಲೆಗಳು.ಇವು ಶೆಫ್ಲರ್ ಮಾದರಿಯ ಸೌರ ಪೆಟ್ಟಿಗೆ ಒಲೆಗಳೆಂದೂ ಚಿರಪರಿಚಿತವಾಗಿವೆ. ಇದು ಒಂದು ಬಿಸಿ ಪೆಟ್ಟಿಗೆಯಂತಿದ್ದು ಇದರೊಳಗೆ ಆಹಾರವನ್ನು ಬೇಯಿಸಲು ಸಾಧ್ಯವಾಗುತ್ತದೆ. ಈ ಮಾದರಿಯ ಸೌರ ಒಲೆ ಹೆಚ್ಚಾಗಿ ಮನೆಯ ಉಪಯೋಗಗಳಿಗೆ ಬಳಕೆಯಾಗುತ್ತದೆ.

ನಿಮ್ಮದೆ ಸೌರ ಒಲೆಯನ್ನು ತಯಾರಿಸಿ

ಮನೆಯಲ್ಲಿಯೆ ಸಿಗುವ ವಸ್ತುಗಳಿಂದ ಸೌರ ಒಲೆಯನ್ನು ತಯಾರಿಸಬಹುದು.ನಿಮ್ಮ ಸೌರ ಒಲೆಯಲ್ಲಿ ಬೆಂಕಿಕಡ್ಡಿ ಬಳಸದೆ ರುಚಿಕರವಾದ ಅಡುಗೆ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

 • ಎರಡು ಸಾಧಾರಣ ಅಳತೆಯ ರಟ್ಟಿನ ಡಬ್ಬಿಗಳು :- ಎರಡು ಪಾತ್ರೆಗಳನ್ನು ಇಟ್ಟು ತುಸು ಜಾಗ ಉಳಿಯುವಷ್ಟು ಅಳತೆಯವು.ಅವು ಒಂದರಲ್ಲಿ ಒಂದು ಸೇರುವಂತಿರಬೇಕು.
 • ಹುಲ್ಲು / ಹಳೆ ಪತ್ರಿಕೆಗಳು – ಕೆಲ ಪತ್ರಿಕೆಗಳನ್ನುಹರಿದು ಚೂರು ಮಾಡಿ, ಹುಲ್ಲು ಇದ್ದರೆ ಉತ್ತಮ. ಅವನ್ನು ಉಷ್ಣ ನಿರೋಧಕವಾಗಿ ಬಳಸಬಹುದು.
 • ಪಾರದರ್ಶಕವಾದ ಗಾಜನ್ನು ಪೆಟ್ಟಿಗೆಯ ಬಾಯಿಯ ಅಳತೆಗೆ ಸರಿಯಾಗಿ ಕತ್ತರಿಸಿ- ಅದನ್ನು ಒಳಗಿನ ಪೆಟ್ಟಿಗೆಯ ಮುಚ್ಚಳವಾಗಿ ಬಳಸಲಾಗುವುದು.
 • ಅಲ್ಯುಮಿನಿಯಂ ಹಾಳೆ
 • ಕಪ್ಪು ಆಕ್ರೆಲಿಕ್ ಪೇಂಟು
 • ಪ್ಯಾಕಿಂಗ್ ಟೇಪು
 • ಕತ್ತರಿ
 • ಗಾಜಿನ ಹಾಳೆ
 • 2 ಲೋಹದ ಮುಚ್ಚಳ ವಿರುವ ಅಲ್ಯುಮಿನಯಂ ಪಾತ್ರೆ
 • ಅರ್ಧ ಪಾತ್ರೆ ಅಕ್ಕಿ;ಬೇಕಾದ ತರಕಾರ ಮತ್ತು ಮಸಾಲೆ

ವಿಧಾನ

 • ಒಳಪೆಟ್ಟಿಗೆ: ಪೆಟ್ಟಿಗೆಯನ್ನು ಶುಚಿಗೊಳಿಸಿ. ಮೇಲುಭಾಗದ ಹೊರತು ಎಲ್ಲಕಡೆ ಟೇಪು ಅಂಟಿಸಿ. ಪೆಟ್ಟಿಗೆ ಗಟ್ಟಿ ಮುಟ್ಟಾಗಿರುವಂತೆ ನೋಡಿಕೊಳ್ಳಿ.ಒಳಗಿ ಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ಕತ್ತರಿಸಿ ಅಂಚಿಗೆ ಟೇಪು ಅಂಟಿಸಿ.ಈಗ ಒಳ ಪೆಟ್ಟಿಗೆಯ ಒಳ ಬಾಗಕ್ಕೆ ದಟ್ಟ ಕಪ್ಪುಬಣ್ಣ ಹಚ್ಚಿ. ಆಕ್ರೆಲಿಕ್ ಪೇಂಟ್ಗೆ ಆದ್ಯತೆ ಇರಲಿ.. ಅದನ್ನು ಒಣಗಿಸಿ.
 • ಹೊರ ಪೆಟ್ಟಿಗೆ : ಹೊರ ಪೆಟ್ಟಿಗೆಯನ್ನು ಶುಚಿ ಮಾಡಿ, ಎಲ್ಲಬಭಾಗಗಳಿಗೆ ಟೇಪು ಹಚ್ಚಿ . ಮೇಲಿನ ಭಾಗಕ್ಕೆ ಬೇಡ.. ಪೆಟ್ಟಿಗೆ ಗಟ್ಟಿಮುಟ್ಟಾಗಿರಲಿ. ಕತ್ತರಿಯಿಂದ ಅಲ್ಯುಮಿನಯಂ ಫಾಯಲ್ ದೊಡ್ಡ ತುಂಡನ್ನು ಕತ್ತರಿಸಿ. ಆಹಾರವನ್ನು ಕಟ್ಟಲುಬಳಸುವ ಅಲ್ಯುಮಿನಿಯಂ ಹಾಳೆ. ಆ ತುಂಡುಗಳನ್ನು ನಾಲಕ್ಕು ಮುಚ್ಚಳಗಳ ಒಳ ಮೈಗೆ ಅಂಟಿಸಿ. ಪೆಟ್ಟಿಗೆಯನ್ನು ಒಣಗಿಸಿ.
 • ಉಷ್ಣ ನಿರೋಧ : ಉಷ್ಣ ವಾಹಕವಲ್ಲದ ಸಾಮಗ್ರಿಗಳನ್ನು ಬಳಸಿ. ಕಾಗದದ ಚೂರು,ಒಣ , ಹುಲ್ಲು , ಹೊಟ್ಟು ಇತ್ಯಾದಿಗಳನ್ನು ಸೇರಿಸಿದ ಆವರಣವನ್ನು ದೊಡ್ಡ ಬಟ್ಟಿಗೆಯ ತಳದಲ್ಲಿರಿಸಿ. ಅದರ ಮೇಲೆ ಚಿಕ್ಕ ಪೆಟ್ಟಿಗೆ ಇಡಿ.. ನಂತರ ಪೆಟ್ಟಿಗೆಗಳ ಮಧ್ಯದ ಜಾಗವನ್ನು ಇನಸುಲೇಷನ್ ಸಾಮಗ್ರಿಯಿಂದ ತುಂಬಿ.. ಅದೆಲ್ಲವೂ ಆದ ಮೇಲೆ ಎರಟೂ ಪೆಟ್ಟಿಗೆಗಳೂ ಸೇರಿ ಒಂದೆ ಘಟಕವಾಗುವುದು.
 • ಗಾಜಿನ ಮುಚ್ಚಳ : ಗಾಜಿನ ಮುಚ್ಚಳದಿಂದ ಒಳ ಪಟ್ಟಿಗೆಯ ಬಾಯಿ ಮುಚ್ಚಿ. ಆಹಾರ ತಯಾರಿ : ಮುಚ್ಚುಳವಿರುವ ಪ್ರತಿಫಲಿಸದ ಎರಡುಪಾತ್ರೆ ತೆಗೆದು ಕೊಳ್ಳಿ.ಒಂದರಲ್ಲಿ ಅರ್ಧ ಕಪ್ಪು ಅಕ್ಕಿತೊಳೆದು ಹಾಕಿ ಎರಡು ಕಪ್ಪಿ ನೀರುಹಾಕಿ.. ಇನ್ನೊಂದು ಪಾತ್ರೆಯಲ್ಲಿ ನಿಮಗೆ ಬೇಕಾದ ತರಕಾರಿಗಳ ತುಂಡುಗಳನ್ನು ಮಿಶ್ರಮಾಡಿ. ಒಂದು ಚಮಚ ಎಣ್ಣೆ ಮತ್ತು ಹಸಿಮೆಣಸಿನಕಾಯಿ ಚೂರುಗಳನ್ನು, ರುಚಿಗೆ ಬೇಕಾದಷ್ಟು ಉಪ್ಪು, ಚಿಟಿಕೆ ಅರಿಷಿಣ ಹಾಕಿ.ಎರಡು ಪಾತ್ರೆಗಳನ್ನು ಹುಷಾರಾಗಿ ಸೌರ ಕುಕರ್ನಲ್ಲಿ ಇಡಿ.ಬಿಸಿಲಲ್ಲಿ ಎರಡು ತಾಸು ಇಡಿ ರುಚಿಯಾದ ಅಡುಗೆ ಸಿದ್ಧ. ನಿಸರ್ಗದ ಕೊಡುಗೆಯಿಂದ ಆಹಾರ ಸಿದ್ಧವಾಗುವುದು.

ಮೂಲ :ಅಕ್ಷಯ್  ಊರ್ಜ , ವಾಲ್ಯೂಮ್  ೪ , ಇಶ್ಯೂ  ೪

ಸೋಲಾರ್ ನೀರು ಬಿಸಿ ಮಾಡುವ ವ್ಯವಸ್ಥೆಯನ್ನು ಆಯ್ಕೆ ಮಾಡುವ ವಿಧಾನ ಎವ್ಯಾಕ್ಯುಏಟೆಡ್ ಟ್ಯೂಬ್ ಕಲೆಕ್ಟರ್ (ಇ ಟ್ ಸಿ) ಆಧಾರಿತ ವ್ಯವಸ್ಥೆಗಳು ಗ್ಲಾಸಿನಿಂದ ಮಾಡಲ್ಪಟ್ಟಿದ್ದು ಇವುಗಳು ಬಹಳ ನಾಜೂಕಾಗಿರುತ್ತದೆ. ಫ್ಲಾಟ್ ಪ್ಲೇಟ್ ಕಲೆಕ್ಟರ್ (ಎಫ್ ಪಿ ಸಿ) ಆಧಾರಿತ ವ್ಯವಸ್ಥೆಗಳು ಲೋಹದ ಮಾದರಿಯದ್ದಾಗಿದ್ದು ಇ ಟಿ ಸಿ ಯನ್ನು ಹೋಲಿಸಿದರೆ ಹೆಚ್ಚಿನ ಬಾಳಿಕೆ ನೀಡುತ್ತದೆ. ಎವ್ಯಾಕ್ಯುಏಟೆಡ್ ಟ್ಯೂಬ್ ಕಲೆಕ್ಟರ್ (ಇ ಟ್ ಸಿ) ಆಧಾರಿತ ವ್ಯವಸ್ಥೆಗಳು, ಫ್ಲಾಟ್ ಪ್ಲೇಟ್ ಕಲೆಕ್ಟರ್ (ಎಫ್ ಪಿ ಸಿ) ಆಧಾರಿತ ವ್ಯವಸ್ಥೆಗಳಿಗಿಂತ ಶೇಕಡಾ 10-20 ರಷ್ಟು ಅಗ್ಗವಾಗಿರುತ್ತದೆ. ಇವುಗಳು ಶೀತಲ ಪ್ರದೇಶದಲ್ಲಿ ಚೆನ್ನಾಗಿ ಕೆಲಸಮಾಡುತ್ತದೆ ಮತ್ತು ಜೀರೊ ಡಿಗ್ರಿಗಿಂತ ಕಡಿಮೆ ಇರುವ ಪರಿಸ್ಥಿತಿಯಲ್ಲಿ ಹಿಮಗಟ್ಟುವುದಿಲ್ಲ. ಫ್ಲಾಟ್ ಪ್ಲೇಟ್ ಕಲೆಕ್ಟರ್ (ಎಫ್ ಪಿ ಸಿ) ಗಳೂ ಸಹಿತ ಹಿಮಗಟ್ಟುವುದಿಲ್ಲವಾದರೂ ಅದರ ಬೆಲೆಯು ದುಬಾರಿಯಾಗಿರುತ್ತದೆ.

ನೀರು ಗಡುಸಾಗಿದ್ದು ಹೆಚ್ಚಿನ ಕ್ಲೋರಿನ್ ಅಂಶವನ್ನು ಹೊಂದಿದ್ದರೆ, ಉಷ್ಣಾಂಶ ವಿನಿಮಯ ವ್ಯವಸ್ಥೆಯನ್ನು ಫ್ಲಾಟ್ ಪ್ಲೇಟ್ ಕಲೆಕ್ಟರ್ (ಎಫ್ ಪಿ ಸಿ)ಗೆ ಅಳವಡಿಸಬೇಕಾಗುತ್ತದೆ. ಈ ವ್ಯವಸ್ಥೆಯು ಸೋಲಾರ್ ಕಲೆಕ್ಟರ್ ನಲ್ಲಿರುವ ತಾಮ್ರದ ಟ್ಯೂಬ್ ಗಳಲ್ಲಿ ನೀರಿನ ಹರಿವನ್ನು ತಡೆಗಟ್ಟುವ ಮತ್ತು ಬಿಸಿಮಾಡುವ ಸಾಮರ್ಥ್ಯತೆಯನ್ನು ಕಡಿಮೆಮಾಡುವ ಹೊಟ್ಟಿನ ಸಂಗ್ರಹಣೆಯನ್ನು ತಡೆಗಟ್ಟುತ್ತದೆ. ಎವ್ಯಾಕ್ಯುಏಟೆಡ್ ಟ್ಯೂಬ್ ಕಲೆಕ್ಟರ್ (ಇ ಟ್ ಸಿ) ಆಧಾರಿತ ವ್ಯವಸ್ಥೆಗಳಲ್ಲಿ ಈ ಸಮಸ್ಯೆಯಿರುವುದಿಲ್ಲ.

3-4 ಜನರಿರುವ ಒಂದು ಬಚ್ಚಲುಮನೆಗೆ ಪ್ರತಿ ದಿನಕ್ಕೆ ನೂರು ಲೀಟರಿನ ಸಾಮರ್ಥ್ಯವುಳ್ಳ ವ್ಯವಸ್ಥೆಗಳು ಸಾಕಾಗುತ್ತದೆ. ಬಚ್ಚಲು ಮನೆಯು ಹೆಚ್ಚಿದ್ದರೆ ಪೈಪು ಮತ್ತು ಹೆಚ್ಚಿದ ಕುಟುಂಬದ ಸದಸ್ಯರಿಂದ, ಅದಕ್ಕೆ ಸರಿಯಾಗಿ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಸಾಮಾನ್ಯವಾಗಿ ವ್ಯವಸ್ಥೆಯ ಸಾಮರ್ಥ್ಯವನ್ನು ಬೆಳಗಿನ ಸ್ನಾನಕ್ಕೆ ಅಗತ್ಯವಿರುವ ಬಿಸಿ ನೀರಿನ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ಸಾಯಂಕಾಲ ಅಥವಾ ದಿನದ ಬೇರೆ ಯಾವುದೇ ವೇಳೆಯಲ್ಲಿ ನೀರನ್ನು ಉಪಯೋಗ ಮಾಡುವಂತಿದ್ದಲ್ಲಿ ಇದಕ್ಕೆ ಹೊಂದುವಂತ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ.

ಒಂದು ನೂರು ಲೀಟರು ಪ್ರತಿ ದಿವಸದ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಯ ವೆಚ್ಚ ಅದರ ಮಾದರಿ ಮತ್ತು ಸ್ಥಳಕ್ಕೆ ಅನುಗುಣವಾಗಿ 16,000 ರೂ ನಿಂದ 22,000 ರೂ ಗಳಾಗಬಹುದು. ಗುಡ್ಡಗಾಡು ಮತ್ತು ಈಶಾನ್ಯ ದಿಕ್ಕಿನ ಪ್ರದೇಶಗಳಿಗೆ ಇದರ ವೆಚ್ಚವು ಶೇಕಡಾ 15-20 ರಷ್ಟು ಹೆಚ್ಚಬಹುದು. ಇದರ ವೆಚ್ಚವು ಸಾಮರ್ಥ್ಯಕ್ಕನುಗುಣವಾಗಿ ಹೆಚ್ಚಾಗುವುದಿಲ್ಲ. ಬದಲಾಗಿ ಹೆಚ್ಚಿನ ಸಾಮರ್ಥ್ಯವಿರುವ ವ್ಯವಸ್ಥೆಯ ಮಾದರಿಗಳ ವೆಚ್ಚವು ಪ್ರಮಾಣ ಬದ್ದವಾಗಿ ಕಡಿಮೆಯಾಗುತ್ತಾ ಬರುತ್ತದೆ. ಓವರ್ ಹೆಡ್ ಟ್ಯಾಂಕಿನ ವ್ಯವಸ್ಥೆ ಇಲ್ಲದಿರುವ ಮನೆ ಅಥವಾ ಕಟ್ಟಡಗಳಲ್ಲಿ ವ್ಯವಸ್ಥೆಗೆ ಅಗತ್ಯವಿರುವ ತಣ್ಣೀರಿನ ಟ್ಯಾಂಕು ಮತ್ತು ಅದರ ಪೀಠದ ವೆಚ್ಚವನ್ನು ವ್ಯವಸ್ಥೆಯ ವೆಚ್ಚದಲ್ಲಿ ಒಳಗೂಡಿಸಿರುವುದಿಲ್ಲ. ಒಂದಕ್ಕಿಂತ ಹೆಚ್ಚು ಬಚ್ಚಲುಮನೆ ಇದ್ದ ಪಕ್ಷದಲ್ಲಿ ಬಿಸಿನೀರಿನ ಇನ್ಸುಲೇಟೆಡ್ ಪೈಪಿನ ವೆಚ್ಚವನ್ನೂ ಕೂಡ ಸೇರಿಸಲಾಗುತ್ತದೆ. ಇವೆಲ್ಲಾ ಅಧಿಕ ಭಾಗಗಳ ವೆಚ್ಚವು ಸೇರಿ ವ್ಯವಸ್ಥೆಯ ಒಟ್ಟು ವೆಚ್ಚವು ಶೇಕಡಾ 5-10 ರಷ್ಟು ಹೆಚ್ಚಬಹುದು.

ಸೋಲಾರ್ ವ್ಯವಸ್ಥೆಯ ಸಂಗ್ರಹಣಾ ಟ್ಯಾಂಕಿನಲ್ಲಿ ವಿದ್ಯುತ್ ಬ್ಯಾಕ್ ಅಪ್ ಹಾಕಿಸುವದನ್ನು ತಡೆಗಟ್ಟಿದರೆ ಸೂಕ್ತ. ನಿಮ್ಮ ಹತ್ತಿರ ಹತ್ತು ಲೀಟರ್ ಪ್ರತಿ ದಿವಸಕ್ಕೆ ನೀರು ಒದಗಿಸುವ ವಿದ್ಯುತ್ ಗೀಜರ್ ಅಥವಾ ಇನ್ಸ್ ಟೆಂಟ್ ಗೀಜರ್ ಇದ್ದ ಪಕ್ಷದಲ್ಲಿ, ಸೋಲಾರ್ ವ್ಯವಸ್ಥೆಯಿಂದ ಹೊರ ಹೋಗುವ ಪೈಪನ್ನು ಗೀಜರಿನ ಪ್ರವೇಷದ್ವಾರಕ್ಕೆ ಸಂಪರ್ಕ ಕಲ್ಪಿಸಿ ಉಷ್ಣಾಂಶದ ಸ್ಥಿರತೆಯನ್ನು ನಲವತ್ತು ಡಿಗ್ರಿಗೆ ಇರಿಸಿರಿ. ಸೋಲಾರ್ ನೀರು ನಲವತ್ತು ಡಿಗ್ರಿಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಮಾತ್ರಾ ನಿಮ್ಮ ಗೀಜರು ಕೆಲಸ ಮಾಡಲು ಪ್ರಾರಂಭಿಸುತ್ತದೆ. ನಲವತ್ತೆರಡು ಡಿಗ್ರಿಗಿಂತ ಹೆಚ್ಚಾದ ಪಕ್ಷದಲ್ಲಿ ತಾನಾಗಿಯೇ ಆಫ್ ಆಗುತ್ತದೆ. ಇದು ಸಾಕಷ್ಟು ವಿದ್ಯುತ್ ಉಳಿತಾಯ ಮಾಡುತ್ತದೆ ಹಾಗೂ ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ನೀರನ್ನು ಬಿಸಿ ಮಾಡುತ್ತದೆ. ಆದರೆ ನಿಮ್ಮ ಮನೆಯ ಗೀಜರ್ ನ ಪ್ರಮಾಣ ಹೆಚ್ಚಾಗಿದ್ದಲ್ಲಿ ಸೋಲಾರ್ ವ್ಯವಸ್ಥೆಗೇ ಬೇರೆಯಾದ ನಲ್ಲಿಯನ್ನು ಇಟ್ಟು ಸೋಲಾರ್ ನೀರು ಬಿಸಿ ಇಲ್ಲದ ಪಕ್ಷದಲ್ಲಿ ವಿದ್ಯುತ್ ಗೀಜರ್ ನ ಬಳಕೆ ಮಡುವುದು ಸೂಕ್ತ.

ಮೂಲ : ಎಂ ಏನ್ ಆರ್ ಇ

2.97701149425
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top