ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಂರಕ್ಷಣೆ

ನಾವು ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ.

ನಾವು ಶಕ್ತಿಯನ್ನು ಏಕೆ ಉಳಿಸಬೇಕು?

ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯವನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ – ಮಹಾತ್ಮಾ ಗಾಂಧೀಜಿ

ನಾವು ಶಕ್ತಿಯನ್ನು ಅದು ಉತ್ಪಾದನೆಗೊಳ್ಳುವುದಕ್ಕಿಂತ ಹೆಚ್ಚು ವೇಗವಾಗಿ ಖರ್ಚು ಮಾಡುತ್ತೇವೆ. ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲಗಳು- ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುತ್ತಿರುವ ಇವು ರೂಪುಗೊಳ್ಳಲು ಸಾವಿರಾರು ವರ್ಷಗಳು ತಗಲುತ್ತವೆ.

ಶಕ್ತಿ ಸಂಪನ್ಮೂಲಗಳು ಸೀಮಿತವಾಗಿವೆ.

  • ಭಾರತದಲ್ಲಿ ಜಾಗತಿಕ ಶಕ್ತಿ ಸಂಪನ್ಮೂಲದ ಸರಿಸುಮಾರು 1 % ಭಾಗದಷ್ಟಿದೆ, ಆದರೆ ಇಲ್ಲಿನ ಜನಸಂಖ್ಯೆ ಜಾಗತಿಕ ಜನಸಂಖ್ಯೆಯ 16% ರಷ್ಟಿದೆ.
  • ನಾವು ಬಳಸುವ ಬಹುಪಾಲು ಶಕ್ತಿಯನ್ನು ಪುನರ್ಬಳಕೆಯಾಗಲೀ ನವೀಕರಣ ಮಾಡಲಿಕ್ಕಾಗಲೀ ಸಾಧ್ಯವಿಲ್ಲ.
  • ನವೀಕರಿಸಲಾಗದ ಶಕ್ತಿಸಂಪನ್ಮೂಲಗಳು ಇಂಧನ ಬಳಕೆಯ 80% ಪಾಲು ಹೊಂದಿವೆ. ನಮ್ಮ ಶಕ್ತಿ ಸಂಪನ್ಮೂಲಗಳು ಮುಂದಿನ ನಲವತ್ತು ವರ್ಷಗಳು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಕಾಲದವರೆಗೆ ಮಾತ್ರ ಸಾಕಾಗುವಷ್ಟಿದೆ ಎಂದು ಹೇಳಲಾಗುತ್ತದೆ.
  • ಶಕ್ತಿ ಉಳಿತಾಯದ ಮೂಲಕ ನಾವು ನಮ್ಮ ದೇಶಕ್ಕೆ ಅಪಾರ ಮೊತ್ತದ ಹಣವನ್ನು ಉಳಿಸಿಕೊಡುತ್ತೇವೆ.
  • ನಾವು ಬಳಸುವ ಕಚ್ಚಾ ತೈಲದ 75% ಭಾಗವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ತಗಲುವ ವೆಚ್ಚ ಒಂದು ವರ್ಷಕ್ಕೆ ಸುಮಾರು 1,50,000 ಕೋಟಿ ರೂಪಾಯಿಗಳು.
  • ಶಕ್ತಿಯನ್ನು ಉಳಿಸುವ ಮೂಲಕ ನಾವು ಹಣವನ್ನೂ ಉಳಿಸುತ್ತೇವೆ
  • ನಿಮ್ಮ ಎಲ್‌ಪಿಜಿ ಸಿಲಿಂಡರ್ ಒಂದು ವಾರ ಹೆಚ್ಚುವರಿ ಒದಗಿ ಬರುವುದನ್ನು ಅಥವಾ ನಿಮ್ಮ ವಿದ್ಯುತ್ ಬಿಲ್‌ನಲ್ಲಿನ ಕಡಿತವನ್ನು ಊಹಿಸಿಕೊಳ್ಳಿ.
  • ಶಕ್ತಿಯನ್ನು ಉಳಿಸುವ ಮೂಲಕ ನಾವು ನಮ್ಮ ಶಕ್ತಿಯನ್ನೂ ಉಳಿಸಿಕೊಳ್ಳುತ್ತೇವೆ
  • ಉರುವಲನ್ನು ನಾವು ಸಮರ್ಥವಾಗಿ ಬಳಸಿದರೆ, ನಮ್ಮ ಉರುವಲಿನ ಅವಶ್ಯಕತೆಯ ಪ್ರಮಾಣ ತಗ್ಗುತ್ತದೆ ಮತ್ತು ಆ ಮೂಲಕ ಅದನ್ನು ಒಟ್ಟುಮಾಡುವ ಶ್ರಮವೂ ತಗ್ಗುತ್ತದೆ.

ಉಳಿತಾಯಗೊಂಡ ಶಕ್ತಿಯು ಉತ್ಪಾದನೆಗೊಂಡ ಶಕ್ತಿಗೆ ಸಮ ನಾವು ಒಂದು ಯುನಿಟ್ ಶಕ್ತಿಯನ್ನು ಉಳಿತಾಯ ಮಾಡಿದರೆ, ಅದು ಉತ್ಪಾದನೆಗೊಂಡ ಎರಡು ಯುನಿಟ್ ಶಕ್ತಿಗೆ ಸಮವೆನಿಸುತ್ತದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಶಕ್ತಿಯನ್ನು ಉಳಿಸಿ

ಶಕ್ತಿಯ ಉತ್ಪಾದನೆ ಮತ್ತು ಬಳಕೆಯು ಅತ್ಯಧಿಕ ಮೊತ್ತದ ವಾಯು ಮಾಲಿನ್ಯವನ್ನು ಉಂಟುಮಾಡುತ್ತದೆ ಮತ್ತು ಈ ಪ್ರಕ್ರಿಯೆಗಳಿಂದ 83%ಕ್ಕೂ ಹೆಚ್ಚು ಪ್ರಮಾಣದಲ್ಲಿ ಹಸಿರುಮನೆ ಅನಿಲಗಳು ಹೊರಹೊಮ್ಮುತ್ತವೆ. ನಾಳೆಯ ಉಪಯೋಗಕ್ಕಾಗಿ ಇಂದು ಉಳಿತಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಪ್ರಾಚೀನ ಭಾರತದ ಉಕ್ತಿಯೊಂದು ಹೀಗಿದೆ, 'ಭೂಮಿ, ನೀರು ಮತ್ತು ಗಾಳಿ ಹಿರಿಯರಿಂದ ನಮಗೆ ದೊರೆತಿರುವ ಉಡುಗೊರೆಗಳಲ್ಲ, ಅವು ನಮ್ಮ ಮೇಲಿರುವ ನಮ್ಮ ಮಕ್ಕಳ ಋಣ'.ಉಳಿತಾಯವನ್ನೊಂದು ಹವ್ಯಾಸವಾಗಿಸಿಕೊಳ್ಳಿ

ಆಕರ : ಶಕ್ತಿ ಉಳಿತಾಯ ಮಂಡಳಿ, ಹೈದರಾಬಾದ್

2.96842105263
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top