অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿದ್ಯುದೀಕರಣ

ವಿದ್ಯುದೀಕರಣ

ಕಾರ್ಯಕ್ರಮ

ಈ ಯೋಜನೆಯ ಮೂಲ ಉದ್ದೇಶವೆಂದರೆ ಜನಗಣತಿಯಲ್ಲಿ ದುರ್ಗಮ ಗ್ರಾಮ ಎಂದು ಗುರುತಿಸಲ್ಪಟ್ಟ, ಹಾಗೂ ದುರ್ಗಮ ಹಳ್ಳಿಗಳ ವಸತಿ ಸಮುಚ್ಛಯಗಳಲ್ಲಿ ಈಗಾಗಲೇ ವಿದ್ಯುದೀಕರಣಗೊಂಡಿರುವ ಹಳ್ಳಿಗಳಿಗೆ ಅಸಂಪ್ರದಾಯಿಕ ಶಕ್ತಿಯ ಮೂಲಗಳಾದ ಸೌರ ಶಕ್ತಿ, ಕಿರು ಜಲ ವಿದ್ಯುತ್ ಯೋಜನೆ, ಜೀವರಾಶಿ, ಪವನ ಶಕ್ತಿ, ಹಾಗೂ ಮಿಶ್ರ ಪದ್ಧತಿಗಳ ಉಪಯೋಗದ ಮೂಲಕ ವಿದ್ಯುತ್ ಪೂರೈಸುವುದು. ಈ ರೀತಿಯಾಗಿ ಜನಗಣತಿಯಲ್ಲಿ ವಿದ್ಯುದೀಕರಣಗೊಳ್ಳದ, ದುರ್ಗಮ ಗ್ರಾಮ ಎಂದು ಗುರುತಿಸಲ್ಪಟ್ಟ, ಹಾಗೂ ದುರ್ಗಮ ಹಳ್ಳಿಗಳ ವಸತಿ ಸಮುಚ್ಛಯಗಳಲ್ಲಿ ಈಗಾಗಲೇ ವಿದ್ಯುದೀಕರಣಗೊಂಡಿರುವ ಹಳ್ಳಿಗಳನ್ನು ಕೇಂದ್ರವಾಗಿಸಿ ಕೆಲಸ ಮಾಡುವುದರ ಮೂಲಕ ಈ ಗ್ರಾಮಗಳಿಗೆ ವಿದ್ಯುತ್ತಿನಿಂದಾಗುವ ಲಾಭಗಳನ್ನು ತಲಪಿಸುವುದು ಯೋಜನೆಯ ಉದ್ದೇಶವಾಗಿದೆ.

ವ್ಯಾಪ್ತಿ

ಯೋಜನೆಯ ವ್ಯಾಪ್ತಿ ಇವುಗಳನ್ನು ಒಳಗೊಂಡಿದೆ-

  • 2007 ಇಸವಿಯ ವೇಳೆಗೆ ವಿದ್ಯುದೀಕರಣಗೊಂಡಿರದ, ಜನಗಣತಿಯಲ್ಲಿ ದುರ್ಗಮವೆಂದು ಗುರುತಿಸಲ್ಪಟ್ಟ ಎಲ್ಲಾ ಹಳ್ಳಿಗಳು.
  • 2012 ಇಸವಿಯ ವೇಳೆಗೆ ವಿದ್ಯುದೀಕರಣಗೊಂಡಿರುವ ಹಳ್ಳಿಗಳಲ್ಲಿ ವಿದ್ಯುದೀಕರಣಗೊಂಡಿರದ ವಸತಿ ಸಮುಚ್ಚಯಗಳು.
  • 2012 ರ ವೇಳೆಗೆ ಜನಗಣತಿಯ ಪ್ರಕಾರ ದುರ್ಗಮ ಹಳ್ಳಿ ಹಾಗೂ ವಸತಿ ಸಮುಚ್ಚಯ ಎಂದು ಗುರುತಿಸಿರುವಲ್ಲಿ ವಿದ್ಯುದೀಕರಣಗೊಂಡಿರದ ಎಲ್ಲಾ ಮನೆಗಳು.
  • ಸಂಬಂಧಪಟ್ಟ ಇಲಾಖೆ/ ರಾಜ್ಯ ವಿದ್ಯುತ್ ನಿಗಮಗಳಿಂದ ಪ್ರಮಾಣೀಕೃತವಾದಂತೆ ಹನ್ನೊಂದನೇ ಯೋಜನೆ (2012)ಯ ಕೊನೆಯಲ್ಲಿ ಸಂಪ್ರದಾಯಿಕ ಮೂಲಗಳಿಂದ ವಿದ್ಯುದೀಕರಣ ಅಸಾಧ್ಯವೆಂದು ಪರಿಗಣಿಸಲ್ಪಟ್ಟ, ಜನಗಣತಿಯಲ್ಲಿ ದುರ್ಗಮ ಎಂದು ಗುರುತಿಸಿದ, ವಿದ್ಯುದೀಕರಣಗೊಂಡಿರದ ಎಲ್ಲ ಹಳ್ಳಿಗಳು ಮತ್ತು ವಿದ್ಯುದೀಕರಣಗೊಂಡಿರುವ ಹಳ್ಳಿಗಳ ದುರ್ಗಮ ವಸತಿ ಸಮುಚ್ಚಯಗಳು ಕೂಡ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಅರ್ಹತೆಯನ್ನು ಹೊಂದಿವೆ.

ಯೋಜನೆಗಳಿಗೆ ಕೇಂದ್ರದಿಂದ ದೊರೆಯುವ ಅರ್ಥಿಕ ನೆರವು

ಮುಂಚಿತವಾಗಿ ನಿರ್ಧಾರವಾಗಿರುವ ಗರಿಷ್ಠ ದರಗಳನ್ನು ಆಧರಿಸಿ ಕೇಂದ್ರ ಸರಕಾರದ ಸಚಿವಾಲಯವು ಯಾವುದೇ ನವೀಕರಿಸಬಲ್ಲ ಶಕ್ತಿಯ ಯಂತ್ರ/ ಸಾಧನಗಳ ವೆಚ್ಚದ ಮೇಲೆ ಶೇ. 90% ರಷ್ಟು ಸಬ್ಸಿಡಿ/ಸಹಾಯಧನವನ್ನು ಕೊಡುತ್ತದೆ. ಜೊತೆಗೆ, ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವ ಸಂಸ್ಥೆಗಳಿಗೆ, ಅನೇಕ ಪ್ರೇರಕ ಕೊಡುಗೆಗಳನ್ನೂ, ಸೇವಾ ಶುಲ್ಕವನ್ನೂ ಒದಗಿಸಿಕೊಡುತ್ತದೆ.

ಯೋಜನೆ

ಈ ವರೆಗೆ ಜಾರಿಯಲ್ಲಿದ್ದ ಯೋಜನೆಗಳನ್ನು ಒಂದಾಗಿಸಿಕೊಂಡು ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ಎಪ್ರಿಲ್ 2005 ರಂದು ಜಾರಿಗೆ ತರಲಾಯಿತು. ಈ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರವು ಶೇ. 90 ರಷ್ಟು ಅನುದಾನವನ್ನು ನೀಡುತ್ತದೆ. ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಶನ್  ಅಂದರೆ ಗ್ರಾಮೀಣ ವಿದ್ಯುದೀಕರಣ ನಿಗಮವು ಶೇ.10 ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ಸಾಲದ ರೂಪದಲ್ಲಿ ನೀಡುತ್ತದೆ. ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಶನ್  ಅಂದರೆ ಗ್ರಾಮೀಣ ವಿದ್ಯುದೀಕರಣ ನಿಗಮ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ನೋಡಲ್ ಸಂಸ್ಥೆಯಾಗಿದೆ.

ಗ್ರಾಮೀಣ ವಿದ್ಯುದೀಕರಣ”ದ ಅರ್ಥ ವಿವರಣೆ

ಒಂದು ಗ್ರಾಮವು ವಿದ್ಯುದೀಕರಣಗೊಂಡಿದೆ ಎಂದು ಘೋಷಿಸಬೇಕಾದರೆ: ದಲಿತರ ಕಾಲನಿಯಲ್ಲಿಯೂ ಸೇರಿದಂತೆ ವಾಸವಿರುವ ಎಲ್ಲಾ ವಸತಿ ಸಮುಚ್ಚಯಗಳಲ್ಲೂ ವಿದ್ಯುತ್ ವಿತರಣಾ ಪರಿವರ್ತಕ ಹಾಗೂ ತಂತಿಗಳಂತಹ ಮೂಲಭೂತ ಸೌಕರ್ಯವಿದ್ದಿರಬೇಕು. ಸಾರ್ವಜನಿಕ ಸ್ಥಳಗಳಾದ ಶಾಲೆ, ಪಂಚಾಯತು ಕಛೇರಿ, ಆರೋಗ್ಯ ಕೇಂದ್ರಗಳು, ಔಷಧಾಲಯಗಳು, ಹಾಗೂ ಸಮುದಾಯ ಕೇಂದ್ರಗಳು, ಇವೇ ಮುಂತಾದುವುಗಳಲ್ಲಿ ವಿದ್ಯುತ್ ಸಂಪರ್ಕವಿರಬೇಕು. ಕನಿಷ್ಟ ಪಕ್ಷ ಗ್ರಾಮದಲ್ಲಿರುವ ಒಟ್ಟು ವಸತಿಯ ಶೇ. 10 ರಷ್ಟು ಮನೆಗಳು ವಿದ್ಯುತ್ ಸಂಪರ್ಕ ಪಡೆದಿರಬೇಕು.

ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ಉದ್ದೇಶ:

ಹೊಸ ಅರ್ಥವಿವರಣೆಗೆ ಅನುಗುಣವಾಗಿ ಎಲ್ಲಾ ಹಳ್ಳಿ ಹಾಗೂ ವಸತಿ ಸಮುಚ್ಚಯಗಳನ್ನೂ ವಿದ್ಯುದೀಕರಣಕ್ಕೊಳಪಡಿಸುವುದು. ಎಲ್ಲಾ ಗ್ರಾಮೀಣ ವಸತಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವುದು. ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳಿಗೂ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸುವುದು

ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ದೊರಕುವ ಸೌಕರ್ಯಗಳು

33/11 ಕಿ. ವ್ಯಾ. (ಅಥವಾ 66/11 ಕಿ. ವ್ಯಾ.) ಸಾಮರ್ಥ್ಯದ ರೂರಲ್ ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಶನ್ ಬ್ಯಾಕ್ ಬೋನ್  ಅಂದರೆ ಗ್ರಾಮೀಣ ವಿದ್ಯುತ್ ಸರಬರಾಜು ಬೆನ್ನೆಲುಬಿನ ಉಪ ಕೇಂದ್ರವನ್ನು ಅಳವಡಿಸುವುದು. ಅಗತ್ಯ ಸಾಮರ್ಥ್ಯವಿರುವ ವಿದ್ಯುತ್ ವಿತರಣಾ ಪರಿವರ್ತಕಗಳನ್ನು ಒಳಗೊಂಡಿರುವಂತಹ ಗ್ರಾಮ ವಿದ್ಯುದೀಕರಣದ ಮೂಲಭೂತ ಸೌಕರ್ಯ. ಗ್ರಿಡ್ ಸಂಪರ್ಕದ ಮೂಲಕ ವಿದ್ಯುತ್ ಸರಬರಾಜು ಆರ್ಥಿಕವಾಗಿ ಸಾಧ್ಯವಿಲ್ಲದಲ್ಲಿ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಶಕ್ತಿಯ ಮೂಲಗಳನ್ನು ಆಧರಿಸಿ ವಿಕೇಂದ್ರೀಕೃತ, ವಿತರಿತ ಉತ್ಪಾದನಾ ಪದ್ಧತಿ.

ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ಅನುಷ್ಠಾನಕ್ಕೆ ತರಲು ಇರುವ ಕಾರ್ಯತಂತ್ರಗಳು ಹಾಗೂ ಷರತ್ತುಗಳು

ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ಅನುಷ್ಠಾನಕ್ಕೆ ತರಲು ಇರುವ ಕಾರ್ಯತಂತ್ರಗಳು ಹಾಗೂ ಷರತ್ತುಗಳು : ತಿರುಪು ಕೀಲಿ (ಟರ್ನ್ ಕೀ)ಆಧಾರದ ಮೇಲೆ ಕಾರ್ಯನಿರ್ವಹಿಸಲು ಜಿಲ್ಲಾಧಾರಿತ ಯೋಜನಾ ವರದಿಯನ್ನು ತಯಾರಿಸುವುದು. ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವಾಗ ಶಕ್ತಿಯ/ ಇಂಧನ ಸಚಿವಾಲಯದ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳ ಭಾಗವಹಿಸುವಿಕೆ. ಸಂಬಂಧಪಟ್ಟ ಗ್ರಾಮ ಪಂಚಾಯತುಗಳ ಮೂಲಕ ವಿದ್ಯುದೀಕರಣಗೊಂಡಿರುವ ಹಳ್ಳಿಗಳನ್ನು ಅಧಿಕೃತಗೊಳಿಸುವುದು. ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಸರಬರಾಜು, ಉತ್ತಮ ಗ್ರಾಹಕ ಸೇವೆಗೆ ಹಾಗೂ ನಷ್ಟವನ್ನು ಕಡಿಮೆ ಮಾಡಲು ಅನುಕೂಲವಾಗುವಂತೆ ಫ್ರಾಂಚೈಸಿಗಳನ್ನು ನೇಮಿಸುವುದು. ರಾಜ್ಯಗಳು ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿಯಲ್ಲಿ ಬರುವ ಗ್ರಾಮ ಜಾಲದಲ್ಲಿ ದಿನದಲ್ಲಿ ಕನಿಷ್ಟ ಪಕ್ಷ 6- 8 ಘಂಟೆ ವಿದ್ಯುತ್ ಸರಬರಾಜು ಮಾಡುವ ಭರವಸೆಯನ್ನು ಕೊಡುವುದು. ಅಗತ್ಯವಿದ್ದಲ್ಲಿ ರಾಜ್ಯಗಳು ಹಣಕಾಸಿನ ಸಬ್ಸಿಡಿ/ ಸಹಾಯಧನ ಒದಗಿಸಲು ಅನುವು ಮಾಡಿಕೊಡುವುದು. ಫ್ರಾಂಚೈಸಿಗಳಿಗೆ ಸಗಟು ಸರಬರಾಜು ಮಾಡಬೇಕಾದಲ್ಲಿ ವ್ಯವಹಾರದಲ್ಲಿ ನಷ್ಟವಾಗದಂತೆ ದರ ನಿಗದಿ ಮಾಡುವುದು. ಹನ್ನೊಂದನೇ ಯೋಜನೆಯಲ್ಲಿ ಮೂರು ಹಂತದ ಗುಣಮಟ್ಟ ಪರೀಕ್ಷೆಯನ್ನು ಖಡ್ಡಾಯ ಮಾಡುವುದು. ಅಂತರ್ಜಾಲವನ್ನು ಆಧರಿಸಿ ಯೋಜನಾ ಪ್ರಗತಿಯನ್ನು ಪರಿಶೀಲಿಸುವುದು. ಪೂರ್ವ ನಿರ್ಧರಿತ ಗುರಿಯನ್ನು ಮುಟ್ಟಲು ಅನುಕೂಲವಾಗುವಂತೆ ಅನುದಾನವನ್ನು ಬಿಡುಗಡೆ ಮಾಡುವುದು. ಗುತ್ತಿಗೆದಾರರ ಹಂತದವರೆಗೂ ಅನುದಾನದ ಇಲೆಕ್ಟ್ರಾನಿಕ್ ವರ್ಗಾವಣೆಯ ಮೂಲಕ ಅನುದಾನವನ್ನು ತಲಪಿಸುವುದು. ರಾಜ್ಯ ಸರಕಾರಗಳು ಗ್ರಾಮೀಣ ವಿದ್ಯುದೀಕರಣದ ಯೋಜನೆಯ ಕುರಿತು ಅನುಸೂಚನೆಗಳನ್ನು ಹೊರಡಿಸುವುದು.

ನೂರಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ವಸತಿ ಪ್ರದೇಶಗಳಲ್ಲಿ ಈ ಯೋಜನೆಯು ಅನುಷ್ಠಾನಕ್ಕೆ ಬರುತ್ತಿದೆ. ಹನ್ನೊಂದನೇ ಯೋಜನೆಯ ಅವಧಿಯಲ್ಲಿ 16,268 ಕೋಟಿ ರೂಪಾಯಿ ವೆಚ್ಚದ 327 ಯೋಜನೆಗಳು, 49,383 ಹಳ್ಳಿಗಳ ವಿದ್ಯುದೀಕರಣಕ್ಕೆ, ಹಾಗೂ ಬಡತನ ರೇಖೆಗಿಂತ ಕೆಳಗಿರುವ 162 ಲಕ್ಷ ವಸತಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅನುಮೋದನೆ ಪಡೆದಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯು, ದೆಹಲಿ, ಲಕ್ಷದ್ವೀಪ, ಪುದುಚೆರಿ- ಇವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.

ನೀತಿ ೨೦೦೬

ಸಂಬಂಧಿಸಿದ ಅಂಶಗಳು

2009 ರ ಒಳಗೆ ಎಲ್ಲಾ ಮನೆಗಳಿಗೂ ವಿದ್ಯುಚ್ಚಕ್ತಿ ಸಂಪರ್ಕ ಒದಗಿಸುವುದು; ಸೂಕ್ತ ದರದಲ್ಲಿ ಉತ್ತಮ ಗುಣಮಟ್ಟದ, ನಂಬಲರ್ಹ ಶಕ್ತಿಯ ಪೂರೈಕೆ, ಹಾಗೂ 2012 ರೊಳಗೆ ಕನಿಷ್ಠ ಜೀವನಾಡಿ ಬಳಕೆಯಾದ 1ಯುನಿಟ್/ಮನೆ/ದಿನ ವನ್ನು ಒಂದು ಅರ್ಹ ಸರಕಾಗಿ ಒದಗಿಸುವುದು- ಇದರ ಗುರಿಗಳು. ಗ್ರಿಡ್ ಸಂಪರ್ಕ ಶಕ್ಯವಲ್ಲದ ಅಥವಾ ಆರ್ಥಿಕ ಹೊರೆಯಾಗುವ ಹಳ್ಳಿಗಾಡುಗಳಲ್ಲಿ ಪ್ರತ್ಯೇಕ ಮಾದರಿಯ ಗ್ರಿಡ್ ಸಂಪರ್ಕ ವಿರದ ವ್ಯವಸ್ಥೆಯನ್ನು ಆಧರಿಸಿದ ವಿದ್ಯುಚ್ಚಕ್ತಿ ಉತ್ಪಾದನೆಯ ಮಾರ್ಗವನ್ನು ಅನುಸರಿಸುವುದು. ಇವುಗಳೂ ಸಹ ಸಾಧ್ಯವಾಗದ ಪ್ರದೇಶಗಳಲ್ಲಿ, ಅಥವಾ ಸೌರ ವಿದ್ಯುಜ್ಜನಕದಂತಹ, ಒಂದೊಂದೇ ಬೆಳಕಿನ ವ್ಯವಸ್ಥೆಗಳನ್ನು ಒದಗಿಸಬೇಕಾದಲ್ಲಿ, ಅವುಗಳನ್ನು ಬಳಸುವುದು. ಆದರೆ ಇಂತಹ ಹಳ್ಳಿಗಳು ವಿದ್ಯುದೀಕರಣಗೊಂಡಿವೆ ಎಂದು ಪರಿಗಣಿಸುವ ಹಾಗಿಲ್ಲ. ರಾಜ್ಯ ಸರಕಾರವು ಆರು ತಿಂಗಳಿನೊಳಗೆ, ವಿದ್ಯುತ್ ಸರಬರಾಜಿನ ಪೂರೈಕೆಯ ರೀತಿ ಹಾಗೂ ನಕಾಶೆ ಇರುವ, ಸಂಪೂರ್ಣ ಮಾಹಿತಿಯಿರುವ, ಗ್ರಾಮ ವಿದ್ಯುದೀಕರಣ ಯೋಜನೆಯನ್ನು ತಯಾರಿಸಿ ಪ್ರಕಟಿಸತಕ್ಕದ್ದು. ಈ ಯೋಜನೆಯು ಜಿಲ್ಲಾ ಅಭಿವೃದ್ಧಿ ಯೋಜನೆಗೆ ಸಂಬಂಧ ಹೊಂದಿರಬಹುದು. ಈ ಯೋಜನೆಯ ಕುರಿತು ಸೂಕ್ತ ಆಯೋಗಕ್ಕೆ ತಿಳುವಳಿಕೆ ನೀಡತಕ್ಕದ್ದು. ಹಳ್ಳಿ/ಗ್ರಾಮವು ವಿದ್ಯುದೀಕರಣಗೊಂಡಿದೆ ಎಂದು ಉದ್ಘೋಷಿಸಲು ಅರ್ಹತೆ ಪಡೆದ ಸಮಯದಲ್ಲೇ ಗ್ರಾಮ ಪಂಚಾಯತು ಮೊದಲ ದೃಢೀಕರಣ ಪತ್ರವನ್ನು ಹೊರಡಿಸತಕ್ಕದ್ದು. ತರುವಾಯ, ಪ್ರತಿ ವರ್ಷ ಮಾರ್ಚ್ ತಿಂಗಳ 31ನೇ ತಾರೀಕಿನೊಳಗೆ, ಗ್ರಾಮವು ವಿದ್ಯುದೀಕರಣಕ್ಕೊಳಪಟ್ಟಿದೆ ಎಂದು ದೃಢಪಡಿಸತಕ್ಕದ್ದು. ರಾಜ್ಯ ಸರಕಾರವು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ, ಒಂದು ಜಿಲ್ಲಾ ಸಮಿತಿಯನ್ನು ರಚಿಸತಕ್ಕದ್ದು. ಈ ಸಮಿತಿಯಲ್ಲಿ ಮಹಿಳಾ ಪ್ರತಿನಿಧಿಯನ್ನು ಒಳಗೊಂಡಿರುವ, ಪ್ರಮುಖ ಪಾಲುದಾರರ, ಬಳಕೆದಾರ ಸಂಘಗಳ, ಜಿಲ್ಲಾ ಮಟ್ಟದ ಸಂಸ್ಥೆಗಳ ಪ್ರತಿನಿಧಿಗಳು ಇರಬೇಕು. ಜಿಲ್ಲಾ ಸಮಿತಿಯು ಜಿಲ್ಲೆಯಲ್ಲಿ ವಿದ್ಯುದೀಕರಣದ ಪ್ರಮಾಣವನ್ನು, ಗ್ರಾಹಕರ ಸಂತುಷ್ಟಿ, ಇತ್ಯಾದಿಗಳನ್ನು ಸಂಯೋಜಿಸುತ್ತದೆ. ಪಂಚಾಯತ್ ರಾಜ್ ಸಂಸ್ಥೆಗಳು ಮೇಲ್ವಿಚಾರಕ/ ಸಲಹಾಗಾರ ಜವಾಬ್ದಾರಿಯನ್ನು ಹೊಂದಿರುತ್ತವೆ. ರಾಜ್ಯ ಸರಕಾರಗಳು ಅಸಂಪ್ರದಾಯಿಕ ಇಂಧನಾಧಾರಿತ ವ್ಯವಸ್ಥೆಗಳಿಗೆ ಸಾಂಸ್ಥಿಕ ಸಹಕಾರ ಹಾಗೂ ತಾಂತ್ರಿಕ ಬೆಂಬಲವನ್ನು ಸೃಷ್ಠಿಸಬೇಕಾಗುತ್ತದೆ.

ನೀತಿ ೨೦೦೫

ರಾಷ್ಟ್ರೀಯ ವಿದ್ಯುಚ್ಛಕ್ತಿ ನೀತಿಯು ಈ ಕೆಳಗಿನ ಉದ್ದೇಶವನ್ನು ಒಳಗೊಂಡಿದೆ ಇಂಧನ ಲಭ್ಯತೆ- 2012ರ ವೇಳೆಗೆ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸುವುದು. ಶಕ್ತಿಯ ಅಲಭ್ಯತೆಯನ್ನು ಹಾಗೂ ಅತಿ ಹೆಚ್ಚಿನ ಬಳಕೆಯಿಂದಾಗುವ ಅಲಭ್ಯತೆಯನ್ನು ತಡೆಯುವುದು ಮತ್ತು ಸುತ್ತುವ ನಿಕ್ಷೇಪದ ಲಭ್ಯತೆ ವಿದ್ಯುಚ್ಛಕ್ತಿಗೆ ಅವಕಾಶ- ಮುಂದಿನ ಐದು ವರ್ಷಗಳಲ್ಲಿ ಎಲ್ಲ ವಸತಿಗಳಿಗೂ/ ಮನೆಗಳಿಗೂ ವಿದ್ಯುಚ್ಚಕ್ತಿಯನ್ನು ಒದಗಿಸುವುದು. ದಕ್ಷ ರೀತಿಯಲ್ಲಿ, ನ್ಯಾಯಯುತ ಬೆಲೆಗೆ, ನಿರ್ಧರಿತ ಗುಣಮಟ್ಟದ ನಂಬಿಕೆಗೆ ಯೋಗ್ಯವದ, ಉತ್ತಮ ಗುಣ ಮಟ್ಟದ ಇಂಧನ ಪೂರೈಕೆ. 2012 ರ ವೇಳೆಗೆ ಪ್ರತಿ ವ್ಯಕ್ತಿಗೆ ಲಭ್ಯವಿರುವ ವಿದ್ಯುಚ್ಛಕ್ತಿಯನ್ನು 1000 ಯೂನಿಟ್ ಗಳಿಗೆ ಏರಿಸುವುದು. 2012ರ ವೇಳೆಗೆ ಪ್ರತಿ ದಿನಕ್ಕೆ/ ಪ್ರತಿ ಮನೆಗೆ/ ದಿನದಂತೆ ಕನಿಷ್ಠ ಜೀವನಾಧಾರಿತ ಬಳಕೆಯು ಒಂದು ಅರ್ಹ ಸರಕು ಆಗಿಸುವುದು. ವಿದ್ಯುತ್ ಕ್ಷೇತ್ರದ ಆರ್ಥಿಕೀಕರಣ ಹಾಗೂ ವ್ಯಾಪಾರೀಕರಣ. ಗ್ರಾಹಕರ ಆಸಕ್ತಿಯ ರಕ್ಷಣೆ

ಗ್ರಾಮ

ವಿದ್ಯುದೀಕರಣಗೊಂಡ ಗ್ರಾಮವೆಂದು ಒಂದು ಗ್ರಾಮವನ್ನು ಯಾವಾಗ ಕರೆಯಬಹುದು

ಅಕ್ಟೋಬರ್ 1997 ಗಿಂತ ಮುನ್ನ

ಗ್ರಾಮದ ಕಂದಾಯದ ವ್ಯಾಪ್ತಿಯಲ್ಲಿ ವಿದ್ಯುತ್ತನ್ನು ಯಾವುದೇ ಬಳಕೆಗಾದರೂ ಸರಿ ಉಪಯೋಗಿಸುತ್ತಿದ್ದಲ್ಲಿ ಅಂತಹ ಗ್ರಾಮವನ್ನು ವಿದ್ಯುದೀಕರಣಗೊಂಡ ಗ್ರಾಮವೆಂದು ವರ್ಗೀಕರಿಸಲಾಗುತ್ತದೆ. ಅಕ್ಟೋಬರ್ 1997 ನ ನಂತರ ಗ್ರಾಮದ ಕಂದಾಯದ ವ್ಯಾಪ್ತಿಯ ಮೇರೆಯೊಳಗೆ, ಜನರು ವಾಸಿಸುವ ಸ್ಥಳದಲ್ಲಿ, ವಿದ್ಯುತ್ತನ್ನು ಯಾವುದೇ ಬಳಕೆಗಾದರೂ ಸರಿ ಉಪಯೋಗಿಸುತ್ತಿದ್ದಲ್ಲಿ ಅಂತಹ ಗ್ರಾಮವನ್ನು ವಿದ್ಯುದೀಕರಣಗೊಂಡ ಗ್ರಾಮವೆಂದು ಪರಿಗಣಿಸಲಾಗುತ್ತದೆ. 2004-05 ನೇ ಇಸ್ವಿಯಲ್ಲಿ ಗ್ರಾಮ ವಿದ್ಯುದೀಕರಣದ ಹೊಸ ವ್ಯಾಖ್ಯಾನವು ಆಚರಣೆಗೆ ಬಂತು. (ಎಮ್ ಒ ಪಿ ಯಿಂದ ಜಾರಿಮಾಡಲ್ಪಟ್ಟ, ಫೆಬ್ರವರಿ 5, 2004ರ ಪತ್ರದ ಸಂಖ್ಯೆ. 42/1/2001-D(RE) ರಲ್ಲಿ ನೋಡಬಹುದಾಗಿದೆ ಮತ್ತು ಇದರ ತಿದ್ದೋಲೆಯನ್ನು ಫೆಬ್ರವರಿ 17, 2004ರ ಪತ್ರದ ಸಂಖ್ಯೆ 42/1/2001-D(RE)ರಲ್ಲಿ ನೋಡಬಹುದಾಗಿದೆ) ಹೊಸ ವ್ಯಾಖ್ಯಾನದ ಪ್ರಕಾರ, ಒಂದು ಗ್ರಾಮವು ವಿದ್ಯುದೀಕರಣಗೊಂಡಿದೆ ಎಂದು ಹೀಗೆ ಹೇಳಬಹುದಾಗಿದೆ: ವಾಸವಿರುವ ಪ್ರದೇಶ ಮತ್ತು ದಲಿತರ ಬಸ್ತಿ ಕೊಪ್ಪಲಿನಲ್ಲಿ ಮೂಲ ಸೌಕರ್ಯಗಳಾದ ಟ್ರಾನ್ಸ್ ಫಾರ್ಮರ್ ನ ವಿಭಜನೆ ಮತ್ತು ಮಾರ್ಗದ ಹಂಚಿಕೆಯ ಪೂರೈಕೆಯಾಗಿರಬೇಕು. ಸಾರ್ವಜನಿಕ ಪ್ರದೇಶಗಳಾದ ಶಾಲೆ, ಪಂಚಾಯತ್ ಕಚೇರಿ, ಆರೋಗ್ಯ ಕೇಂದ್ರ, ಔಷದಾಲಯ, ಸಮುದಾಯ ಕೇಂದ್ರ ಮುಂತಾದವುಗಳಲ್ಲಿ ವಿದ್ಯುತ್ಚಕ್ತಿಯ ಪೂರೈಕೆಯಾಗಿರಬೇಕು. ಗ್ರಾಮದ ಒಟ್ಟು ಮನೆಯ ಕಡೇ ಪಕ್ಷ ಶೇಕಡಾ 10 ರಷ್ಟು ಮನೆಗಳಿಗೆ ವಿದ್ಯುದೀಕರಣವಾಗಿರಬೇಕು

ಮೂಲ  : ಎಂ ಏನ್ ಆರ್ ಇ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate