ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ನೀತಿ-ನಿಯಮಗಳ ಬೆಂಬಲ / ಉಜಾಲಾ ಕಾರ್ಯಕ್ರಮ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉಜಾಲಾ ಕಾರ್ಯಕ್ರಮ

ಸಾಮಾನ್ಯ ಬಲ್ಬ್ ನಿಂದ ನಮಗೆ ದೊರೆಯುವ ಬೆಳಕು ಅದಕ್ಕೆ ವ್ಯಯಿಸುವ ವಿದ್ಯುತ್ ನ ಕೇವಲ 5% ಆಗಿದೆ. ಒಲಿದಂತಹ ವಿದ್ಯುತ್ ಶಕ್ತಿ ವ್ಯರ್ಥ ವಾಗುತ್ತದೆ.

ಉಜಾಲಾ ಕಾರ್ಯಕ್ರಮ ಇದರ ಮುಖ್ಯ ಉದ್ದೇಶ ಪರಿಣಾಮಕಾರಿ ಬೆಳಕಿನ ಉಪಯೋಗ ವಿದ್ಯುತ್ ಬಿಲ್ಲುಗಳನ್ನು ಕಡಿಮೆಮಾಡುವುದು ಮತ್ತು ಪರಿಸರ ಸಂರಕ್ಷಿಸುವ ವ್ಯವಸ್ಥೆ.

ಸಾಮಾನ್ಯ ಬಲ್ಬ್ ನಿಂದ ನಮಗೆ ದೊರೆಯುವ ಬೆಳಕು  ಅದಕ್ಕೆ ವ್ಯಯಿಸುವ ವಿದ್ಯುತ್ ನ ಕೇವಲ 5% ಆಗಿದೆ. ಒಲಿದಂತಹ ವಿದ್ಯುತ್ ಶಕ್ತಿ ವ್ಯರ್ಥ ವಾಗುತ್ತದೆ.
ಆದರೆ ದಕ್ಷ ಬೆಳಕು ಸೂಸುವ ಡಯೋಡ್ (ಎಲ್ಇಡಿ) ಬಲ್ಬ್ಗಳು ಉಪಯೋಗಿಸುವ ವಿದ್ಯುತ್ ಶಕ್ತಿ ಒಂದನೇ ಹತ್ತು ಭಾಗವಾಗಿದೆ ಅಲ್ಲದೆ  ಸಾಮಾನ್ಯ ಬಲ್ಬ್ ಗಿಂತ ಉತ್ತಮ ಬೆಳಕಿನ ಉತ್ಪಾದನೆ ಒದಗಿಸಲು ಸಾಧ್ಯವಾಗಿದೆ.

ಆದಾಗ್ಯೂ, ಎಲ್ಇಡಿ ಹೆಚ್ಚಿನ ವೆಚ್ಚ ಇಂತಹ ಪರಿಣಾಮಕಾರಿ ಬೆಳಕಿನ ವ್ಯವಸ್ಥೆಗಳನ್ನು ಉಪಯೋಗಿಸಲು ತಡೆಗೋಡೆಯಾಗಿದೆ. DELP ಆನ್ ಬಿಲ್ ಹಣಕಾಸು ಯೋಜನೆ ಈ ರೀತಿಯ ಅಧಿಕ ವೆಚ್ಚ ದಿಂದ ಹೊರಬರಲು ಸಹಾಯಕವಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಎಲ್ಲರ ಕೈಗೆಟುಕುವ LED ಬಲ್ಬ್ ಯೋಜನೆ ಇದಕ್ಕೆ  "ಉಜಾಲಾ" ಎಂದು ಹೆಸರಿಡಲಾಗಿದೆ.

ಉದ್ದೇಶಗಳು

ಇದರ ಮುಖ್ಯ ಉದ್ದೇಶ ಪರಿಣಾಮಕಾರಿ ಬೆಳಕಿನ ಉಪಯೋಗ ವಿದ್ಯುತ್ ಬಿಲ್ಲುಗಳನ್ನು ಕಡಿಮೆಮಾಡುವುದು  ಮತ್ತು ಪರಿಸರ ಸಂರಕ್ಷಿಸುವ ವ್ಯವಸ್ಥೆ.

ಮುಖ್ಯ ಗುರಿಗಳು

 

 • ಒಟ್ಟು L E D ಪ್ರಕಾಶಮಾನ  ಬಲ್ಬ್ ಗಳ  ಬದಲಿ - 200 ಮಿಲಿಯನ್
 • ನಿರೀಕ್ಷಿತ ಒಟ್ಟಾರೆ ವಾರ್ಷಿಕ ಶಕ್ತಿ ಉಳಿತಾಯ - 10.5 ಶತಕೋಟಿ kWh
 • ನಿರೀಕ್ಷಿತ  ಕಡಿಮೆ ಲೋಡ್   - 5000 ಮೆವ್ಯಾ
 • ಗ್ರಾಹಕ ಬಿಲ್ಲುಗಳನ್ನು ನಿರೀಕ್ಷಿತ ವಾರ್ಷಿಕ ವೆಚ್ಚ ಕಡಿತ - ರೂ. 40,000 ಕೋಟಿ
 • ವಾರ್ಷಿಕ ಅಂದಾಜು ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ - 79 ದಶಲಕ್ಷ ಟನ್ CO2

ಅನುಷ್ಠಾನ ಸಂಸ್ಥೆಗಳು


ಸಾರ್ವಜನಿಕ ವಲಯದಲ್ಲಿ ಕಾರ್ಯರೂಪಕ್ಕಿಳಿಸುವ ಸಂಸ್ಥೆ ವಿದ್ಯುತ್ ಸರಬರಾಜು ಕಂಪೆನಿ ಮತ್ತು ಇಂಧನ ದಕ್ಷತೆ ಸೇವೆಗಳು ಲಿಮಿಟೆಡ್ (EESL) ಭಾರತ ಸರ್ಕಾರ

ಎಲ್ಇಡಿ  ಬಲ್ಬ್ ಗಳ ಪಡೆಯುವಿಕೆ


ಬಲ್ಬ್ಗಳನ್ನು ನಗರದಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ  ವಿಶೇಷ ಕೌಂಟರ್ ಮೂಲಕ ಹಂಚಲಾಗುತ್ತದೆ. ಅಂಗಡಿಗಳು ಸೇರಿದಂತೆ ಯಾವುದೇ ಇತರ ಸ್ಥಳಗಳಲ್ಲಿ ಲಭ್ಯವಿರುವುದಿಲ್. ಹಂತದ ಪ್ರಕಾರ ವಿತರಣೆಯು ಲಭ್ಯವಿರುತ್ತದೆ. ಕೌಂಟರ್ ಸ್ಥಳಬಗ್ಗೆ ಗ್ರಾಹಕರುಗಳಿಗೆ ಮಾಹಿತಿ  ಜಾಗೃತಿ ಡ್ರೈವ್  (ಕರಪತ್ರ , ಪೋಸ್ಟರ್, ಜಾಹೀರಾತುಗಳು ಇತ್ಯಾದಿ) ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ.

ಎಲ್ಇಡಿ ಬಲ್ಬ್ಗಳನ್ನು ಪಡೆಯಲು ಸಲ್ಲಿಸಬೇಕಾದ ದಾಖಲೆಗಳು

 • ಇತ್ತೀಚಿನ ವಿದ್ಯುತ್ ಬಿಲ್
 • ಛಾಯಾಚಿತ್ರ  ಹೊಂದಿರುವಂತಹ ಗುರುತು ಚೀಟಿ ಪ್ರತಿ
 • ವಸತಿ ಪುರಾವೆ ಪ್ರತಿ (ವಸತಿ ಪುರಾವೆ ವಿಳಾಸ ವಿದ್ಯುತ್ ಬಿಲ್ ವಿಳಾಸ ಸರಿಹೊಂದಿರುವಂತೆ)
 • ಆನ್ ಬಿಲ್ ಫೈನಾನ್ಸಿಂಗ್ ಸಂದರ್ಭದಲ್ಲಿ ಮುಂಗಡ ಹಣ ಪಡೆಯಲಾಗುವುದು ( ಉಳಿದ ಹಣವನ್ನು ವಿದ್ಯುತ್ ಬಿಲ್ ಮುಖಾಂತರ ಪಡೆಯಲಾಗುವುದು), ಅಪ್ ಫ್ರಂಟ್ ಪೇಮೆಂಟ್  ಸಂದರ್ಭದಲ್ಲಿ ಪೂರ್ಣ ಪ್ರಮಾಣದ  ಮೊಬಲಗನ್ನು ಪಡೆಯಲಾಗುವುದು. ಅಪ್ ಫ್ರಂಟ್ ಪೇಮೆಂಟ್ ಸಂದರ್ಭದಲ್ಲಿ  ವಿಳಾಸ ಪುರಾವೆ ಕಡ್ಡಾಯವಾಗಿರುವುದಿಲ್ಲ.

ದೋಷಯುಕ್ತ ಬಲ್ಬ್ಗಳು / ಎಲ್ಇಡಿ ಬಲ್ಬ್ ಫ್ಯೂಸ್ಗಳ ಸಂದರ್ಭದಲ್ಲಿ

ಎಲ್ಇಡಿ ಬಲ್ಬ್ಗಳು ಬಹಳಷ್ಟು ಬಾಳಿಕೆ ಬರುತ್ತದೆ  (ಪ್ರತಿದಿನ  4-5 ಗಂಟೆ ಬಳಸಿದಾಗ 15 ವರ್ಷಗಳಿಗೂ ಅಧಿಕ) .
ಆದಾಗ್ಯೂ, ಎಲ್ಇಡಿ ಬಲ್ಬ್ ಕಾರಣ ತಾಂತ್ರಿಕ ದೋಷದ ಕೆಲಸ ನಿಲ್ಲಿಸಿದರೆ, EESL ಮೂರು ವರ್ಷಗಳ ಎಲ್ಲ ತಾಂತ್ರಿಕ ದೋಷಗಳನ್ನು ವೆಚ್ಚ ಖಾತರಿಸಿ ಮತ್ತು ಬದಲೀ ವಿತರಣೆ ಗೊತ್ತುಪಡಿಸಿದ ಚಿಲ್ಲರೆ ಅಂಗಡಿಗಳ ಮೂಲಕ  ಉಚಿತವಾಗಿ ಒದಗಿಸುತ್ತದೆ.
ವಿತರಣೆ ಸಮಯದಲ್ಲಿ, ಬದಲಿ ನಗರದಲ್ಲಿ  ಕಾರ್ಯನಿರ್ವಹಿಸುತ್ತಿರುವ ಯಾವುದೇ DELP ಕೌಂಟರ್  ಮೂಲಕವೇ ವಿತರಣೆಮಾಡಲಾಗುತ್ತದೆ.
ಯಾವುದೇ  ಕಂಪನಿಯ EESL ಎಲ್ಇಡಿ ಬಲ್ಬ್ ಯಾವುದೇ ಕಂಪನಿಯ EESL ಎಲ್ಇಡಿ ಬಲ್ಬ್ ಬದಲಿಗೆ ಮಾಡಬಹುದು.

ದೂರು ನೋಂದಾಯಿಸಿಕೊಳ್ಳುವಿಕೆ

ವಿತರಣೆ ಸಮಯದಲ್ಲಿ ದೂರುಗಳ ಜಾಹೀರಾತುಗಳ ಮತ್ತು ಜಾಗೃತಿ ಡ್ರೈವ್ಗಳಲ್ಲಿ ಪ್ರಚಾರ ಇವು ವಿತರಣಾ ಏಜೆನ್ಸಿಯ ಗ್ರಾಹಕ ಕೇರ್ ಸೆಂಟರ್ ಸಂಖ್ಯೆಯಲ್ಲಿ ಪರಿಹರಿಸಬಹುದಾಗಿದೆ. EESL ಉಜಾಲಾ ಬಲ್ಬ್ ಬಾಕ್ಸ್ ಹಾಗೂ ಒಪ್ಪಿಗೆ ಪತ್ರ (ಪಾವತಿ ರಶೀದಿ) ಎಲ್ಇಡಿ ಮೇಲೆ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಯನ್ನು ನಮೂದಿಸಲಾಗಿರುತ್ತದೆ. ಒಮ್ಮೆ ವಿತರಣೆ ಅವಧಿ ಮುಗಿದ  ಮೇಲೆ ಗ್ರಾಹಕರು ಈ ಸಹಾಯವಾಣಿ ಸಂಖ್ಯೆಗಳ ಮೂಲಕ ಆಯಾ ತಯಾರಕ ಸಂಪರ್ಕಿಸಿ ಮತ್ತು ಬಲ್ಬ್ ಬದಲಿ ಪಡೆದುಕೊಳ್ಳಬೇಕಾಗುತ್ತದೆ. ಭರವಸೆ ಮೂಡಿಸಿದೆ. ಕೆಲಸ-ಮಾಡದ ಎಲ್ಇಡಿ ದೂರುಗಳನ್ನು ದಾಖಲಿಸಲು ಒಂದು ಸಹಾಯವಾಣಿ ಕೇಂದ್ರವನ್ನು ತೆರಿಯಲಾಗಿದೆ ಮತ್ತು ಸರಿಯಾದ ಸಮಯದಲ್ಲಿ ಅಗತ್ಯ ಬಲ್ಬ್ ಗಳನ್ನು ನೀಡುವುದಾಗಿದೆ

ಗೃಹಬಳಕೆಗೆ ಬಳಸಬಹುದಾದ ಗರಿಷ್ಠ ಬಲ್ಬ್ ಗಳು

ಉಜಾಲಾ ಯೋಜನೆ ಗ್ರಾಹಕರು  ಪ್ರದೇಶವನ್ನು ಅವಲಂಬಿಸಿ, ಗರಿಷ್ಠ  ಕನಿಷ್ಠ 2 ಮತ್ತು 10 ಎಲ್ಇಡಿ ಬಲ್ಬಗಳನ್ನು  ಪಡೆಯಬಹುದು. ಒಂದು ಮನೆಯಲ್ಲಿ ಸರಾಸರಿ 5-6  ಬೆಳಕಿನ  ಪಾಯಿಂಟ್ ಗಳನ್ನ ಗಣನೆಗೆ ತೆಗೆದುಕೊಳ್ಳಲಾಗಿದೆ.

ಮಾದರಿ ಹೇಗೆ ಕೆಲಸಮಾಡುತ್ತದೆ

 • ಇಂಧನ ದಕ್ಷತೆ ಸೇವೆಗಳು ಲಿಮಿಟೆಡ್ (EESL) ಮಾರುಕಟ್ಟೆ ಬೆಲೆಗಿಂತ 40% ಕಡಿಮೆ ವೆಚ್ಚದಲ್ಲಿ ಮನೆಗಳಿಗೆ ಎಲ್ಇಡಿ ಬಲ್ಬ್ಗಳ ವಿತರಣೆ
 • EESL ಹೂಡಿಕೆ ಮತ್ತು ರಿಸ್ಕ್ ಕವರೇಜ್ ಅನ್ನು ಭರಿಸುತ್ತದೆ
 • DISCOM 5 ವರ್ಷಗಳಲ್ಲಿ ವಾಸ್ತವಿಕ ಶಕ್ತಿಯ  ಉಳಿತಾಯದ ಮೊತ್ತವನ್ನು EESL ಗೆ  ಪಾವತಿಸುತ್ತದೆ
 • ಸರ್ಕಾರದಿಂದ ಯಾವುದೇ ಸಬ್ಸಿಡಿ ಅಗತ್ಯವಿಲ್ಲ
 • ವಿದ್ಯುತ್ ಸುಂಕದ ಮೇಲೆ ಯಾವುದೇ ಪ್ರಭಾವವಿರುವುದಿಲ್ಲ

ಮೂಲ : ಪ್ರೆಸ್ ಇನ್ಫರ್ಮೇಷನ್ ಬ್ಯೂರೊ

2.94366197183
Raju s Jun 17, 2019 01:51 PM

Document submit places and how many rupeea in this bulb

divya Nov 29, 2016 11:03 AM

ಶಕ್ತಿ ಒಳಿಸಿ ದೇಶ ಬೆಳೆಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top