ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಇಂಧನ / ನೀತಿ-ನಿಯಮಗಳ ಬೆಂಬಲ / ವಿದ್ಯುಚ್ಚಕ್ತಿ ಕಾಯಿದೆ ೨೦೦೩
ಹಂಚಿಕೊಳ್ಳಿ

ವಿದ್ಯುಚ್ಚಕ್ತಿ ಕಾಯಿದೆ ೨೦೦೩

ವಿದ್ಯುಚ್ಚಕ್ತಿ ಕಾಯಿದೆಯು ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಉಪಬಂಧಗಳನ್ನು ಹೊಂದಿದೆ.

ಕಲಂ3(1) ಮತ್ತು 3(2)

ಕಲಂ 3(1) ಮತ್ತು 3(2) ರ ಅಡಿಯಲ್ಲಿ, ಕೇಂದ್ರ ಸರಕಾರವು, ಕಲ್ಲಿದ್ದಲು, ನೈಸರ್ಗಿಕ ಅನಿಲ, ಅಣುಶಕ್ತಿ ಕೊಡುವ ವಸ್ತುಗಳು, ಜಲ ಮತ್ತು ನವೀಕರಿಸಬಲ್ಲ ಶಕ್ತಿಯ ಸಂಪನ್ಮೂಲಗಳ ಗರಿಷ್ಠ ಬಳಕೆ ಮಾಡುವ ಶಕ್ತಿ ವ್ಯವಸ್ಥೆಯ ಅಭಿವೃದ್ಧಿಗಾಗಿ, ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾಲ ಕಾಲಕ್ಕೆ ರಾಷ್ಟ್ರೀಯ ವಿದ್ಯುಚ್ಛಕ್ತಿ ನೀತಿ ಹಾಗೂ ಸುಂಕದ ನೀತಿಯನ್ನು ತಯಾರಿಸಿ ಪ್ರಕಟಿಸತಕ್ಕದ್ದು ಎಂದು ಹೇಳಿದೆ.

ಕಲಂ 4

ಕಲಂ 4, ರಾಜ್ಯ ಸರಕಾರದ ಜೊತೆಗಿನ ಸಮಾಲೋಚನೆಯ ನಂತರ, ಗ್ರಾಮೀಣ ಪ್ರದೇಶಗಳಿಗಾಗಿ ಪ್ರತ್ಯೇಕ (ನವೀಕರಿಸಬಲ್ಲ ಇಂಧನಗಳ ಹಾಗೂ ಇತರ ಅಸಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನು ಒಳಗೊಂಡ) ವ್ಯವಸ್ಥೆಯನ್ನು ಕಲ್ಪಿಸುವಂತಹ ರಾಷ್ಟ್ರೀಯ ನೀತಿಯನ್ನು ತಯಾರಿಸಿ ಪ್ರಕಟಿಸತಕ್ಕದ್ದು ಎಂದು ಹೇಳಿದೆ.

ಕಲಂ 61

ಕಲಂ 61, 61(h), ಮತ್ತು 61(i) ರ ಪ್ರಕಾರ, ಈ ಕಾಯಿದೆಯ ಉಪಬಂಧಗಳಲ್ಲಿ ಹೇಳಿರುವಂತೆ, ಸೂಕ್ತ ಆಯೋಗವು, ಸುಂಕದ ದರವನ್ನು ನಿಗದಿಪಡಿಸಲು ಇರಬೇಕಾದ ನಿಬಂಧನೆಗಳು ಮತ್ತು ಷರತ್ತುಗಳನ್ನು ವಿವರಿಸತಕ್ಕದ್ದು; ಮತ್ತು ಹಾಗೆ ಮಾಡುವಲ್ಲಿ, ಈ ಕೆಳಗಿನ ಸೂಚನೆಗಳನ್ನು ಅನುಸರಿಸತಕ್ಕದ್ದು, ಅಂದರೆ, ನವೀಕರಿಸಬಲ್ಲ ಇಂಧನ ಮೂಲಗಳಿದ ಸಹ ಉತ್ಪಾದನೆ ಹಾಗೂ ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಪ್ರವರ್ತಿಸುವುದು; ಹಾಗೂ ರಾಷ್ಟ್ರೀಯ ವಿದ್ಯುಚ್ಛಕ್ತಿ ನೀತಿ ಮತ್ತು ಸುಂಕದ ನೀತಿ.

ಕಲಂ 86(1)

ಕಲಂ 86(1) ಮತ್ತು 86(1)(e) ರ ಪ್ರಕಾರ, ರಾಜ್ಯ ಆಯೋಗವು ಈ ಕೆಳಗಿನ ಕರ್ತವ್ಯಗಳನ್ನು, ಅಂದರೆ, ಗ್ರಿಡ್ ಸಂಪರ್ಕ ಪಡೆಯಲು ಮತ್ತು ಯಾವುದೇ ವ್ಯಕ್ತಿಗೆ ವಿದ್ಯುಚ್ಛಕ್ತಿಯ ಮಾರಾಟ ಮಾಡುವುದಕ್ಕೆ ಸೂಕ್ತ ಹೆಜ್ಜೆಗಳನ್ನು ಒದಗಿಸುವುದರ ಮೂಲಕ, ನವೀಕರಿಸಬಲ್ಲ ಇಂಧನ ಮೂಲಗಳಿದ ಸಹ ಉತ್ಪಾದನೆ ಹಾಗೂ ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಪ್ರವರ್ತಿಸುವುದು, ಜೊತೆಗೆ, ಸರಬರಾಜು ಪರವಾನಿಗಿ ಪಡೆದ ಪ್ರದೇಶದಿಂದ ವಿದ್ಯುಚ್ಛಕ್ತಿಯ ಖರೀದಿಗೆ ಇರಬೇಕಾದ ಒಟ್ಟು ಬಳಕೆಯ ನಿಗದಿತ ಪ್ರತಿಶತ ಪಾಲನ್ನು ನಿರ್ದೇಶಿಸತಕ್ಕದ್ದು.

ಮೂಲಾಧಾರ : ಎಂ ಏನ್ ಆರ್ ಇ

2.9
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top