ಮಹಿಳೆಯರಿಗೆ ವಿಶೇಷ ಕೊಡುಗೆಗಳು ದ ಇಂಡಿಯನ್ ರಿನ್ಯೂವೆಬಲ್ ಎನರ್ಜಿ ಡೆವಲಪ್ ಮೆಂಟ್ ಏಜೆನ್ಸಿ ಲಿಮಿಟೆಡ್ ನವೀನ ಹಾಗೂ ನವೀಕರಿಸಬಲ್ಲ ಶಕ್ತಿಯ ಬಳಕೆ ಮಾಡುವ ಮಹಿಳೆಯರಿಗೆ ಪ್ರೇರಣಾತ್ಮಕ ಕೊಡುಗೆಯನ್ನು ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ ಭೇಟಿ ಕೊಡಿ: ಹೆಣ್ಣು ಮಕ್ಕಳ ಲಾಭಕ್ಕಾಗಿ ಹೆಣ್ಣು ಮಕ್ಕಳ ಶಿಕ್ಷಣದ ಮುಂದುವರಿಕೆಯನ್ನು ಪ್ರೋತ್ಸಾಹಿಸಲು ಸೌರ ಕಂದೀಲನ್ನು ಉಚಿತವಾಗಿ ಕೊಡುವ ಯೋಜನೆಯನ್ನು ಹಮ್ಮಿಕೊಂಡಿದೆ. ಇದಕ್ಕೆ ಬೇಕಾದ ಅರ್ಹತೆಗಳು: ಬಡತನ ರೇಖೆಯಿಂದ ಕೆಳಗಿರುವ ಕುಟುಂಬದ, ಶಾಲೆಗೆ ಹೋಗುತ್ತಿರುವ ಒಂದು ಹೆಣ್ಣು ಮಗು. ವಿಶೇಷ ವರ್ಗದಲ್ಲಿ ಬರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ, ವಿದ್ಯುತ್ ಸಂಪರ್ಕ ವಿರದ ಹಳ್ಳಿಗಳಲ್ಲಿ ವಾಸವಾಗಿರುವ ಕುಟುಂಬಗಳು. ಹನ್ನೊಂದನೇ ಮತ್ತು ಹನ್ನೆರಡನೇ ಇಯತ್ತೆಯಲ್ಲಿ ಓದುತ್ತಿರುವ ಹೆಣ್ಣುಮಕ್ಕಳು. ಯಾರನ್ನು ಸಂಪರ್ಕಿಸಬೇಕು ಜಿಲ್ಲಾ ಆಡಳಿತಗಾರರ ಮೂಲಕ ರಾಜ್ಯ ನೋಡಲ್ ಸಂಸ್ಥೆಯನ್ನು ಸಂಪರ್ಕಿಸಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬವೆಂದು ದೃಢೀಕರಿಸಬೇಕು, ಹೆಣ್ಣು ಮಗಳ ಶಾಲೆ, ಹಾಗೂ ತರಗತಿಯ ವಿವರಗಳನ್ನು ಪಡೆಯಬೇಕು. ಇದು ಅರುಣಾಚಲ ಪ್ರದೇಶ, ಅಸೋಮ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್, ಮತ್ತು ನಿಕೋಬಾರ್ ದ್ವೀಪಗಳು, ಹಾಗೂ ಲಕ್ಷದ್ವೀಪಗಳಲ್ಲಿ ಅನ್ವಯವಾಗುತ್ತದೆ.
ಆಕರ : ನವೀನ ಹಾಗೂ ನವೀಕರಿಸಬಲ್ಲ ಶಕ್ತಿಯ ಸಚಿವಾಲಯ, ಭಾರತ ಸರ್ಕಾರ