অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬದಕು ಬದಲಿಸುವ / ಬದಲಿಸಿದ ನೋನಿ

ನೋನಿ-ಈ ಹೆಸರು ಬಂದಿದ್ದು ಹವಾಯಿ ಆದಿವಾಸಿಗಳಿಂದ. ನೋನಿ ಒಂದು ನಿತ್ಯ ಹಸಿರಾಗಿರುವ ಚಿಕ್ಕ ಮರ ದೊಡ್ಡ ಪೊದೆ ಗಿಡದಂತೆ ಕಾಣುತ್ತದೆ. ನೋನಿಯ ವೈಜ್ಞಾóನಿಕ ಹೆಸರು ಮೊರಿಂಡಾ ಸಿಟ್ರಿಫೋಲಿಯಾ  ರುಬಿಯೇಸಿಯ ಸಸ್ಯ ವರ್ಗಕ್ಕೆ ಸೇರಿದ ಗಿಡವಾಗಿದೆ. ಇದು ತನ್ನ ಭೌತಿಕ ಗುಣಗಳಿಂದಲೂ ಸಹ ಬೇರೆ ಬೇರೆ ಹೆಸರುಗಳನ್ನು ಹೊಂದಿದೆ. ಇದರ ಎಲೆ ನೋವು ನಿವಾರಕ ಗುಣ ಹೊಂದಿರುವುದರಿಂದ ಕೆಲವು ದೇಶಗಳಲ್ಲಿ ಇದನ್ನು ‘ಪೆಯಿನ್ ಕಿಲ್ಲಿಂಗ್ ಟ್ರೀ’  ಎಂದು ಕರೆಯುತ್ತಾರೆ. ಇದರ ಕಾಯಿ ಹಣ್ಣಾದಾಗ ಬೆಣ್ಣೆಯಂತೆ ಮೆತ್ತಗಿರುವುದರಿಂದ ‘ಛೀಸ್ ಫ್ರೂಟ್’ ಎಂತಲೂ ಕರೆಯುತ್ತಾರೆ. ಇದರ ಹಣ್ಣು ಅತ್ಯಂತ ಕೆಟ್ಟ ವಾಸನೆ ಹೊಂದಿರುವುದರಿಂದ ‘ಡೆಡ್ ಮ್ಯಾನ್ ಟ್ರೀ’  ಎಂತಲೂ ಪ್ರಸಿದ್ಧಿ ಪಡೆದಿದೆ. ನಿನೊ, ನುನೊ; ಹೀಗೆ ಹಲವು ಹೆಸರುಗಳಿಂದ ಪಾಶ್ಚ್ಯತ್ಯ ದೇಶಗಳ ಹಳೆಯ ನಾಗರೀಕತೆಯ ಜನರುಗಳಿಂದ ಕರೆಯಲ್ಪಡುತ್ತಿತ್ತು. ಅಲ್ಲದೆ ಸಂಸ್ಕøತದಲ್ಲಿ ಇದನ್ನು ‘ಅಚ್ಚುಕ ಫಲ’, ‘ಆಯುಷ್ಕ’ಎಂತಲು, ಬೇರೆ ಬೇರೆ ಭಾಷೆಗಳಲ್ಲಿ  ‘ತಗಟೆಮರ’,  ‘ಕಂಬಲ ಪಂಡು’, ‘ವೆನ್ನುವ’, ‘ಬರ್ತುಂಡಿ’ ಹೀಗೆ ನಾನಾ ಹೆಸರುಗಳಿಂದ ಮೂಲಿಕಾ ಪಂಡಿತರಿಂದ ಪರಿಚಿತವಾಗಿದೆ.

ನೋನಿಯ ಬಳಕೆ ಕ್ರಿಸ್ತ ಹುಟ್ಟುವ ಹಲವು ಶತಮಾನಗಳ ಹಿಂದೆಯೇ ಇತ್ತು ಎಂಬುದಕ್ಕೆ ನಮಗೆ ಅನೇಕ ಪುರಾವೆಗಳು ದೊರೆತಿವೆ. ಮೊದಲು ಇದನ್ನು ಪಾಲಿನೇಷಿಯನ್ ಆದಿವಾಸಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿದ್ದ ಉದಾಹರಣೆಗಳಿವೆ. ಆದಿವಾಸಿಗಳು ಈ ಸಸ್ಯಕ್ಕೆ ಅತ್ಯಂತ ಹೆಚ್ಚು ಮಹತ್ವವನ್ನು ಕೊಡುತ್ತಿದ್ದರು. ನಾವು ಭಾರತೀಯರು “ತುಳಸಿಗಿಡ”ಕ್ಕೆ ಎಷ್ಟು ಪಾವಿತ್ರ್ಯವನ್ನು ಕೊಟ್ಟಿದ್ದೇವೆಯೊ, ಅವರು ಅಷ್ಟೇ ಪಾವಿತ್ರ್ಯವನ್ನು  “ನೋನಿ ಗಿಡ”ಕ್ಕೆ ಕೊಟ್ಟಿದ್ದರು.

ನೋನಿಗಿಡದ ಬೇರು ತೊಗಟೆಯಿಂದ ಕೆಂಪು ಮತ್ತು ಹಳದಿ ಬಣ್ಣಗಳನ್ನು ತಯಾರಿಸಿ ನೇಯ್ದ ಬಟ್ಟೆಗಳಿಗೆ ಅದರ ಬಣ್ಣವನ್ನು ಹಾಕುತ್ತಿದ್ದರು. ಪೂರ್ವಜರು ನೋನಿಯನ್ನು ಔಷಧೀಯ ಪ್ರಯೋಗವಾಗಿ ಗಂಟಲು ಬೇನೆ, ಜ್ವರ, ಹುಣ್ಣುಗಳು, ಬಿಳಿಸೆರಗು, ಅತಿಯಾದ ಋತುಸ್ರಾವ, ಉಸಿರಾಟದ ತೊಂದರೆ, ಉರಿ ಮೂತ್ರ, ಕಫ ಇನ್ನು ಮುಂತಾದ ರೋಗಗಳ ನಿವಾರಣೆಗಾಗಿ ಬಳಸುತ್ತಿದ್ದರು.

20ನೇ ಶತಮಾನದ ಮಧ್ಯ ಭಾಗದಿಂದ ನೋನಿಯ ಬಗೆಗೆ ಸಂಶೋಧನೆ ಮಾಡಲು ಅನೇಕ ವಿಜ್ಞಾನಿಗಳು ಆರಂಭಿಸಿದರು. ಇದರಲ್ಲಿ  ಪ್ರಮುಖವಾದ ಹೆಸರುಗಳು ಡಾ|| ರಾಲ್ಫ್ ಹೆನಿಕಿ ಮತ್ತು ಡಾ|| ನೀಲ್ ಸೋಲೋಮನ್ ಅವರದು. ಡಾ|| ಹೆನಿಕಿಯವರು ನೋನಿ ಹಣ್ಣಿನಲ್ಲಿ ವಿಶೇಷವಾದ ‘ಮೂರು’ ಪ್ರಮುಖ ಪೋಷಕಾಂಶಗಳನ್ನು ಕಂಡುಹಿಡಿದರು. ಅವುಗಳೆಂದರೆ ‘ಝೆರೋನಿನ್’  ‘ಪ್ರೋಝೆರೋನಿನ್’  ಮತ್ತು  ‘ಪ್ರೋಝೆರೋನೈಸೇ’. ಡಾ|| ಹೆನಿಕಿಯವರು ಝೆರೋನಿನ್ ಸಂಶೋಧನೆ ಮಾಡಿದ ನಂತರ ಪ್ರಪಂಚದಾದ್ಯಂತ ಸಾವಿರಾರು ವಿಜ್ಞಾನಿಗಳು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇತರೆ ಸಂಶೋಧನಾ ಕೇಂದ್ರಗಳಲ್ಲಿ ಈ ಹಣ್ಣಿನ ಮೇಲೆ ಅತಿ ಹೆಚ್ಚು ಸಂಶೋಧನೆಯಲ್ಲಿ ತೊಡಗಿದರು. ಅದರಲ್ಲಿ ಹುದುಗಿಕೊಡಿರುವ ಅನೇಕ ಬಯೊ ಆಕ್ಟೀವ್ ಮಾಲ್ಯುಕ್ಯೂಲ್‍ಗಳನ್ನು ಪತ್ತೆ ಹಚ್ಚಿದರು.

ನೋನಿಯ ಚಮತ್ಕಾರಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸಬಹುದು. ಅವುಗಳೆಂದರೆ, ಝೆರೋನಿನ್ ಎಂಬ ದೈವೀಕಣ, ದೇಹದಲ್ಲಿ  ಉತ್ಪಾದನೆ ಯಾಗುವ ನೈಟ್ರಿಕ್ ಆಕ್ಸೈಡ್  ಮತ್ತು ಅಗಣಿತ ಪೋಷಕಾಂಶಗಳು ಹಾಗು  ಜೀವ ರಾಸಾಯನಿಕಗಳು.

ಝೆರೋನಿನ್ ಎಂಬ ದೈವೀಕಣ

ಇದರಲ್ಲಿ  ನಾವು ಝೆರೋನಿನ್‍ಅನ್ನು  ‘ದೈವಾಂಶ ಕಣ’ ವೆಂದು ಹೇಳಿದರೆ ಉತ್ಪ್ರೇಕ್ಷೆಯಲ್ಲ. ಏಕೆಂದರೆ, ಇದು ಜೀವಕೋಶದ ಹಂತದಲ್ಲಿ ಪ್ರಮುಖವಾಗಿ ಮೂರು ಅದ್ಬುತವಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

ಮೊದಲನೆಯದಾಗಿ, ಎಲ್ಲಾ ಅನಾರೋಗ್ಯ ಪೀಡಿತ ಜೀವಕೋಶಗಳನ್ನು ಆರೋಗ್ಯವಂತ ಜೀವಕೋಶಗಳಾಗಿ ಮಾರ್ಪಡಿಸುತ್ತದೆ.

ಎರಡನೆಯದಾಗಿ, ದೇಹದಲ್ಲಿ ಕೆಲಸ ಮಾಡುವ ಹಲವು ಬಯೋವೈಟಲ್ ಪ್ರೋಟೀನ್ ಎನ್‍ಜೈಮ್ಸ್  ಹಾರ್ಮೋನ್ಸ್  ಆ್ಯಂಟಿಬಾಡಿಸ್  ಇತರೆಗಳ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಮೂರನೆಯದಾಗಿ, ಜೀವ ಕೋಶಗಳ ಹೀರಿಕೊಳ್ಳುವ  ಸಾಮಥ್ರ್ಯವನ್ನು ಹೆಚ್ಚು ಮಾಡಿ ನಾವು ತೆಗೆದು ಕೊಳ್ಳುವ ಆಹಾರದಲ್ಲಿರುವ ಅಗತ್ಯ ಪೋಷಕಾಂಶಗಳನ್ನು ಜೀವಕೋಶದ ಒಳಗೆ ಹೋಗಲು ಸಹಾಯ ಮಾಡುತ್ತದೆ. ಅಷ್ಟೆಅಲ್ಲದೆ  ಜೀವಕೋಶದಲ್ಲಿ ಉತ್ಪತ್ತಿಯಾಗುವ ಟಾಕ್ಸಿನ್ (ತ್ಯಾಜ್ಯ ವಸ್ತುಗಳನ್ನು) ಸರಾಗವಾಗಿ ಹೊರಹಾಕಲು ನೆರವಾಗುತ್ತದೆ. ಇದರಿಂದಾಗಿ ಜೀವಕೋಶಕ್ಕೆ ಆರೋಗ್ಯ ಮರಳಿಬರುತ್ತದೆ.

ನೈಟ್ರಿಕ್ ಆಕ್ಸೈಡ್

ನೈಟ್ರಿಕ್ ಆಕ್ಸೈಡ್ ಮಾಲಿಕ್ಯೂಲ್ ಅನಿಲರೂಪಹೊಂದಿದೆ. ಇದು ಒಂದು ಜೀವಕೋಶದಲ್ಲಿ ಸೃಷ್ಟಿಯಾಗಿ ಅಲ್ಲಿಂದ ಬಿಡುಗಡೆಯಾದ ಮೇಲೆ ಇನ್ನೊಂದು ಜೀವಕೋಶದ ಮೇಲ್ಮೈ ಪರಿಧಿಗೆ ಬಡಿಯುತ್ತದೆ. ಹಾಗು ಜೀವಕೋಶದ ಒಳಗೆ ಹೋಗಿ ಅದರಲ್ಲಿ ನಡೆಯುವ ಅನೇಕ ಜೀವ ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುತ್ತದೆ ಎಂದು ಮೂರುಜನ ಸ್ವೀಡನ್ ವಿಜ್ಞಾನಿಗಳು 1998ರಲ್ಲಿ ಪ್ರತಿಪಾದಿಸಿ ನೊಬೆಲ್ ಪ್ರಶಸ್ತಿ ಪುರಸ್ಕøvರಾಗಿದ್ದಾರೆ. ನೈಟ್ರಿಕ್ ಆಕ್ಸೈಡ್ ಉತ್ಪಾದನೆಯು ನಮ್ಮ ದೇಹದಲ್ಲಿ ನಡೆಯುವ ರಕ್ತ ಪರಿಚಲನಾ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಉತ್ಪಾದನೆ ಕಡಿಮೆಯಾದರೆ ಹೃದ್ರೋಗ, ಪಾಶ್ರ್ವ ವಾಯು ನರದೌರ್ಬಲ್ಯ ಹಾಗು ಹೃದ್ದಾಪ್ಯದಲ್ಲಿ ಬರುವ ಹಲವು ರೋಗಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.  ನೋನಿಸೇವನೆಯಿಂದ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆ ಜಾಸ್ತಿಯಾಗಿ ದೇಹಕ್ಕೆ ಅಗತ್ಯವಾದ ಶಕ್ತಿ ಸಂಚಯವಾಗುತ್ತದೆ  ಮತ್ತು ಮೇಲಿನ ಸಮಸ್ಯೆಗಳು ದೂರವಾಗುತ್ತವೆ.

ಅಗಣಿತ ಪೋಷಕಾಂಶಗಳು ಮತ್ತು ಜೀವ ರಾಸಾಯನಿಕಗಳು.

ನೋನಿಯಲ್ಲಿ ಝೆರೋನಿನ್ ಒಂದೇಇಲ್ಲ.  ಪ್ರಕೃತಿ ಇದರಲ್ಲಿ ಮನುಷ್ಯ ಮತ್ತು ಪ್ರಾಣಿಗಳಿಗೆ ಬರುವ ಅನೇಕ ರೋಗಗಳನ್ನು ವಾಸಿಮಾಡುವ ಅದ್ಬುತ ಸಸ್ಯ ರಾಸಾಯನಿಕಗಳನ್ನು ಇಟ್ಟಿದೆ. ಅವುಗಳಲ್ಲಿ ಪ್ರಮುಖವಾಗಿ ಖನಿಜಾಂಶಗಳು, ಅಮೈನೋ ಆಮ್ಲಗಳು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಲವು ಆ್ಯಂಟಿ ಆಕ್ಸಿಡೆಂಟ್‍ಗಳು. ಇಷ್ಟೇ ಅಲ್ಲದೆ, ಜೀವ ರಾಸಾಯನಿಕ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವ ಆಲ್ಕಲೈಡ್‍ಗಳು, ಪ್ಲೇವನಾಯ್ಡ್ಸ್, ಇರಿಡಾಡೈ, ಫ್ಯಾಟಿ ಆಸಿಡ್ಸ್, ಕಾರ್ಬೋಹೈಡ್ರೇಟ್ಸ್, ಸ್ಕೋಪೊಲಿಟಿನ್, ಬಿಟಾ ಸಿಸ್ಟಾಲ್, ವಿಷಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ, ನೋವು ಬಾವುಗಳನ್ನು ಕಡಿಮೆ ಮಾಡಬಲ್ಲ ಅನೇಕ ಸಸ್ಯ ರಾಸಾಯನಿಕ ಘಟಕಗಳು. ನೆಲ್ಸನ್ ಮತ್ತು ಇಲ್ವಿಚ್ ರವರುಗಳು ನೊನಿ ಗಿಡವನ್ನು ಒಂದು ಬದುಕಿರುವ ಜೀವ ರಾಸಾಯನಿಕ ಕಾರ್ಖಾನೆ ಎಂದು ಕರೆದಿದ್ದಾರೆ.

ಪ್ರಪಂಚದ ಅದ್ಬುತ ಹಣ್ಣುಗಳಲ್ಲಿ ಇದು ಸಹ ಒಂದು ಎಮದು ಗುರುತಿಸಿಕೊಂಡಿದೆ.  ಜಗತ್ತಿನ ಯಾವುದೇ ದವಸ-ಧಾನ್ಯ, ಹಣ್ಣು-ತರಕಾರಿಗಳಲ್ಲಿ ಇರಲಾರದಷ್ಟು ಪೋಷಕಾಂಶಗಳನ್ನು ವಿಜ್ಞಾನಿಗಳು ಇದರಲ್ಲಿ ಕಂಡು ಹಿಡಿದಿದ್ದಾರೆ. ಈ ಕಾರಣದಿಂದಲೇ ನೋನಿಯ ಉತ್ಪನ್ನಗಳನ್ನು ಅನೇಕ ರೋಗಗಳಿಗೆ ಕೊಟ್ಟಾಗ ಅದ್ಬುತ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಬಹುಶಃ ನೋನಿಯಷ್ಟು ವೈಜ್ಞಾನಿಕ ಸಂಶೋಧನೆಗೆ ಒಳಪಟ್ಟ ಇನ್ನೊಂದು ಸಸ್ಯ ವಿರಳ ಎನ್ನಬಹದು. ಅನೇಕ ವಿಜ್ಞಾನಿಗಳು, ವೈದ್ಯರು, ವಿಶ್ವ ವಿದ್ಯಾನಿಲಯಗಳು ನೋನಿಯ ಮೇಲೆ ಸಂಶೋಧನೆ ಮಾಡಿದ್ದಾರೆ. ಅಮೇರಿಕನ್ ಕೆಮಿಕಲ್ ಸೊಸೈಟಿಯ, ಜರ್ನಲ್ ಆಫ್ ಫುಡ್ ಸೈನ್ಸನ ಅಂತರಾಷ್ಟೀಯ ವೈದ್ಯಕೀಯ ಸಮಾವೇಶಗಳಲ್ಲಿ ಹಾಗು ಆರೋಗ್ಯಕ್ಕೆ ಸಂಬಂಧಪಟ್ಟ ಯುರೋಪಿನ ಇತರ ವಾರ್ಷಿಕ ಸಮಾವೇಶಗಳಲ್ಲಿ ನೋನಿಯ ಬಗ್ಗೆ ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟಿವೆ. 2001ರಲ್ಲಿ ಯುರೋಪಿಯನ್ ನಾವೆಲ್ ಫುಡ್ ಕಮಿಷನ್) ನೋನಿಯನ್ನು  ಒಂದು  ನಾವೆಲ್ ಫುಡ್ ಎಂದು ಅಂಗೀಕರಿಸಿದೆ.

ರೋಗ ಹರ ನೋನಿ : ನೋನಿಯ ನಿರಂತರ ಸೇವನೆಯು ರಕ್ತ ಶುದ್ಧಿ ಗೊಳಿಸುತ್ತದೆ. ಜೀವ ಕೋಶಗಳಿಗೆ ಮರುಚೈತನ್ಯ ತರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಧಿವಾತ, ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು,  ಮಧು ಮೇಹ, ರಕ್ತದೊತ್ತಡ, ಮಾಂಸ ಖಂಡಗಳ ಸಮಸ್ಯೆ, ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಸ್ಯೆ, ತಲೆನೋವು, ಏಡ್ಸ್, ಗ್ಯಾಸ್ಟ್ರಿಕ್ ಅಲ್ಸರ್, ಮಾನಸಿಕ ಖಿನ್ನತೆ, ದುರ್ಬಲ ಜೀರ್ಣಕ್ರಿಯೆಯ ಸಮಸ್ಯೆ, ಅಥಿರೋಸ್ಲಿರೋಸಿಸ್, ರಕ್ತನಾಳ ಸಂಬಂಧಿತ ಸಮಸ್ಯೆಗಳು ಮತ್ತು ಔಷಧ ವ್ಯಸನ, ಗಂಟಲು ಮತ್ತು ವಸಡು ಸಮಸ್ಯೆಗಳು, ಥೈರಾಯಿಡ್,  ಲಿಕೋರಿಯ ರೋಗಗಳು ಇಂತಹ ರೋಗಗಳ ಲಕ್ಷಣಗಳನ್ನು ವಾಸಿ ಮಾಡ ಬಲ್ಲ ಔಷಧೀಯ ಗಣಗಳು ನೋನಿಯಲ್ಲಿ ಇವೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ನೋನಿಯಲ್ಲಿ ಇರುವ ಪ್ರಮುಖ ಘಟಕಗಳು ಮತ್ತು ದೇಹದ ಮೇಲೆ ಅವುಗಳ ಪರಿಣಾಮಗಳನ್ನು ಕಂಡುಹಿಡಿದು ಖಾಯಿಲೆಗಳು ಹೇಗೆ ವಾಸಿಯಾಗುತ್ತವೆ ಎಂಬುದನ್ನು ವಿವರಿಸಿದ್ದಾರೆ. ನೋನಿಯ ಬಗ್ಗೆ ನಡೆಯುತ್ತಿರುವ ಪ್ರತಿಯೊಂದು ಸಂಶೋಧನೆಯು ನೋನಿಯ ಧನಾತ್ಮಕ ಪರಿಣಾಮಗಳನ್ನು ವಿವರಿಸಿವೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಗುಡ್ಡೆಕೊಪ್ಪದ ಶ್ರೀಮತಿ ಅಂಬುಜಾಕ್ಷಿ ರೈತ ಮಹಿಳೆ. ಶ್ರೀನಿವಾಸಮೂರ್ತಿ ರೊಂದಿಗೆ ವಿವಾಹ. ಮೂರ್ತಿಯವರು ಜಮೀನಿನಲ್ಲಿ ಕೆಲಸಮಾಡುವಾಗ ಸಣ್ಣದಾಗಿ ಕಾಣಿಸಿಕೊಂಡ ಬೆನ್ನು ನೋವು ದಿನೇ-ದಿನೇ ಹೆಚ್ಚಾಗುತ್ತ ಹೋಯಿತು. ಪರಿಹಾರಕ್ಕಾಗಿ ಅನೇಕ ಚಿಕಿತ್ಸೆಗಳಿಗೆ ಮೊರೆ ಹೋದರು. ಪರಿಹಾರ ಕಾಣದೆ ಹಾಸಿಗೆ ಹಿಡಿದರು. ಹೆಚ್ಚು ಚಟುವಟಿಕೆಯಿಂದ ಇದ್ದು ಕೃಷಿಯ ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಿದ್ದ ತಮ್ಮ ಗಂಡನಿಗೆ ಒದಗಿದ ಈ ಸ್ಥಿತಿಯಿಂದ ಅಂಬುಜಾಕ್ಷಿಯವರಿಗೆ ದಿಕ್ಕು ತೋಚದಂತಾಯಿತು. ದೊಡ್ಡ-ದೊಡ್ಡ ಆಸ್ಪತ್ರೆಗಳಿಗೆ ಪರಿಹಾರಕ್ಕಾಗಿ ಅಲೆದಾಡಿದರು. ಹೆಸರಾಂತ ತಜ್ಞ ವೈದ್ಯರಲ್ಲಿ ತೋರಿಸಿದರು. ಲಕ್ಷ-ಲಕ್ಷ ಹಣ ಖರ್ಚಾಯಿತೇ ಹೊರತು ನೋವಿಗೆ ಪರಿಹಾರ ಸಿಗಲಿಲ್ಲ.

ಇಂತಹ ನಿಸ್ಸಹಾಯಕ ಸ್ಥಿತಿಯಲ್ಲಿ ಪರಿಚಿತರೋರ್ವರು ನೋನಿಯನ್ನು ಪ್ರಯೋಗಿಸಲು ಸಲಹೆ ನೀಡಿದರು. ಸಾಕಷ್ಟು ಹಣ ಖರ್ಚು ಮಾಡಿ ಗುಣಮುಖನಾಗಬಲ್ಲೆನೆಂಬ ವಿಶ್ವಾಸವನ್ನೇ ಕಳೆದು ಕೊಂಡಿದ್ದ ಮೂರ್ತಿಯವರಿಗೆ 1-2 ವರ್ಷಗಳ ಕಾಲ ನಿರಂತರವಾಗಿ ಉಪಯೋಗಿಸಬೇಕೆನ್ನುವ ಸಲಹೆ ಮತ್ತು ಲೀಟರ್ ಒಂದಕ್ಕೆ 2500ರೂ ಗಳಿಗೂ ಅಧಿಕ ಬೆಲೆ ಕೇಳಿ ಮಾನಸಿಕವಾಗಿ ಜರ್ಜರಿತರಾದರು.

ನೋನಿ ಹಣ್ಣಿನ  ಬಗೆಗೆ  ಅಂತರ್ ಜಾಲದಲ್ಲಿ ವಿಷಯ ಸಂಗ್ರಹಣೆಗೆ ತೊಡಗಿದರು. ಅದರಲ್ಲಿರುವ ಸಂಶೋಧನಾ ಪ್ರಬಂಧಗಳು ಹಾಗು ಲಕ್ಷಾಂತರ ಜನ ಇಂತಹುದೆ ಖಾಯಿಲೆಯಿಂದ ನರಳುತ್ತಿದ್ದವರು ಈ ಹಣ್ಣಿನ ಉತ್ಪನ್ನವನ್ನು ಉಪಯೋಗಿಸಿ ಫಲಿತಾಂಶ ಪಡೆದಿದ್ದನ್ನು ತಿಳಿದು ಆಶ್ಚರ್ಯಚಕಿತರಾದರು.  ಹಣ್ಣಿನ ಬಗ್ಗೆ  ಹೆಚ್ಚು-ಹೆಚ್ಚು ವಿಷಯ ಸಂಗ್ರಹಣೆ ಮಾಡಿದರು. ು. ಹಣ್ಣನ್ನು ತರಿಸಿದರು.. ಈ ಹಂತದಲ್ಲಿ ಅವರಿಗೆ ನೆನಪಾದವರು ಕೊಪ್ಪ ಆಯುರ್ವೇದ ಮೆಡಿಕಲ್ ಕಾಲೇಜಿನ   ಪ್ರಾಂಶುಪಾಲರಾದ  ಡಾ||ಸಂಜಯ್‍ರವರು. ಮೂರ್ತಿಯವರು ಸಂಗ್ರಹಿಸಿದ್ದÀ ನೋನಿ ಮಾಹಿತಿಯನ್ನು ಮತ್ತು ಅವರಿಗಿದ್ದ ಆಸಕ್ತಿಯನ್ನು ಗಮನಿಸಿದ ಸಂಜಯ್‍ರವರು ತಮ್ಮ ಆಸ್ಪತ್ರೆಗೆ ದಾಖಲಾಗಲು ತಿಳಿಸಿದರು. ಔಷಧ ತಯಾರಿಸಿ ಮೂರ್ತಿಯವರ ಮೇಲೆಯೆ  ಪ್ರಯೋಗ ಮಾಡಲು ಆರಂಭಿಸಿದರು. ನೋನಿಯಿಂದ ರಸವನ್ನು ಹೇಗೆ ತೆಗೆಯಬೇಕೆಂಬ ವಿಧಾನವನ್ನು ಅಂಬುಜಾಕ್ಷಿಯವರಿಗೆ ಹೇಳಿಕೊಟ್ಟರು. ಕೆಲವು ದಿನಗಳ ಚಿಕಿತ್ಸೆಯ ನಂತರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ಚಿಕಿತ್ಸೆಯನ್ನು ಮುಂದುವರಿಸಲು ಸಲಹೆ ಮಾಡಿದರು.

ಆಶ್ಚರ್ಯವೆಂಬಂತೆ,  ದಿನಗಳು ಕಳೆದಂತೆ ಮೂರ್ತಿಯವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು ಎದ್ದು ಗೋಡೆ ಹಿಡಿದು ಓಡಾಡುವಂತಾದರು. ಈ ವಿಷಯ ತಿಳಿದ ಬೇರೆ-ಬೇರೆ ಊರಿನ ಜನ ತಮ್ಮ ನೋವು ನಿವಾರಣೆಗೆ ಗುಡ್ಡೆಕೊಪ್ಪಕ್ಕೆ ಬರತೊಡಗಿದರು. ಮೊದಮೊದಲು ಅವರೇ ತರುವ ಬಾಟಲಿಗಳಿಗೆ ಹಾಕಿ ಕೊಡಲು ಪ್ರಾರಂಭಿಸಿದರು.  ದಿನ ಕಳೆದಂತೆ ಹೆಚ್ಚೆಚ್ಚು ಜನ ಔಷಧಿ ಕೇಳಿ ಕೊಂಡು ಬರಲಾಂಭಿಸಿದರು. ಬೇಡಿಕೆ ಹೆಚ್ಚಾದಂತೆ, ಸುತ್ತಲಿನವರ ಒತ್ತಾಸೆಯಿಂದ ತಮ್ಮ ಮನೆಯಲ್ಲೇ ಸಣ್ಣ ಗೃಹ ಕೈಗಾರಿಕೆ ಆರಂಭ ಮಾಡಿದರು. ಮೂರ್ತಿಯವರು ಸಂಪೂರ್ಣ ಆರೋಗ್ಯವಂತರಾದ ಮೇಲೆ ತಮಗೆ ಬದುಕನ್ನು ಬದಲಿಸಿ ಮರು ಜೀವ ಕೊಟ್ಟ ನೋನಿಯ ಅಮೃತ ಗುಣಗಳಿಂದ  ಪ್ರಭಾವಿತರಾಗಿ ಒಂದು  ಹೊಸ ಪ್ರಯೋಗಕ್ಕೆ ಪತ್ನಿಯನ್ನು ಪ್ರೇರೇಪಿಸಿದರು.  ನೋನಿಯನ್ನು ಬೆಳೆಯಲು ಆರಂಭಿಸಿದರು ಹೀಗೆ ತಮ್ಮಪತಿಯ  ವಾತರೋಗಕ್ಕೆ ಉತ್ತರ ಹುಡುಕುತ್ತಾ ನೋನಿ ರಸದ ತಯಾರಿಕೆಯ ಉದ್ಯಮಿಯಾಗುವ ಅವಕಾಶ ಅಂಬುಜಾಕ್ಷಿಯವರಿಗೆ ದೊರೆಯಿತು. ಹೀಗೆ ಸಮಸ್ಯೆಯು ಅವಕಾಶವಾಗಿ ಪರಿವರ್ತನೆಯಾದ ರೈತ ಮಹಿಳೆಯ ರೋಚಕ ಕಥೆ.

ಗುಡ್ಡೆಕೊಪ್ಪದಲ್ಲಿ ಕೈಗಾರಿಕೆಯ ಅಭಿವದ್ಧಿ ಕಷ್ಟವೆಂದು ಎಣಿಸಿ ಮೂರ್ತಿಯವರು  ಶಿವಮೊಗ್ಗ ನಗರಕ್ಕೆ 2009ರಲ್ಲಿ ಸ್ಥಳಾಂತರ ಮಾಡಿದರು. ಹಲವು ಹಿತೈಷಿಗಳ ಸಹಾಯದಿಂದ ಮತ್ತು ತಮ್ಮ ಉತ್ಪನ್ನದಿಂದ ಬಂದ ಫಲಿತಾಂಶದಿಂದ ಸ್ಪೂರ್ತಿಗೊಂಡು ಸರ್ಕಾರದ ಪರವಾನಗಿ (ಜಿ.ಎಮ್.ಪಿ) ಪಡೆದು ಅಮೃತ್ ನೋನಿ ಎನ್ನುವ ಬ್ರಾಂಡಿನಲ್ಲಿ ಪವರ್ ಪ್ಲಸ್ ಮತ್ತು ಡಿ ಪ್ಲಸ್ ಎಂಬ ಎರಡು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕರ್ನಾಟಕ ಮಾತ್ರ ವಲ್ಲದೆ ಬೇರೆ-ಬೇರೆ ರಾಜ್ಯಗಳಿಗೂ ಸರಬರಾಜು ಮಾಡುತ್ತಿದ್ದಾರೆ. ಮೌಲ್ಯ ವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಡಬೇಕೆಂಬ ಸದುದ್ದೇಶದಿಂದ ವ್ಯಾಲ್ಯು ಪ್ರಾಡಕ್ಟ್ಸ ಎನ್ನುವ ಹೆಸರಿನಲ್ಲಿ ಉದ್ಯಮವನ್ನು ನಡೆಸುತ್ತಿದ್ದಾರೆ.

ಸಂಪರ್ಕ: 9663367129 ಬರಹ : ಶ್ರೀ ಚಂದ್ರ ಮೋಹನ ಐರಿಣ,

ದೂ :09686675763 ಶಿವಮೊಗ್ಗ.

ಮೆ. ವಾಲ್ಯೂ ಪ್ರಾಡಕ್ಟ್ಸ್,
ಅಮೃತ್ ನೋನಿ ಉತ್ಪಾದಕರು.
ಶಿವಮೊಗ್ಗ.

ಮೆ. ವಾಲ್ಯೂ ಪ್ರಾಡಕ್ಟ್ಸ್,  ಅಮೃತ್ ನೋನಿ ಉತ್ಪಾದಕರು.  ಶಿವಮೊಗ್ಗ.

ಮಿಂಚಂಚೆ :  cmiwin123@gmail.ಕಂ

ಮೂಲ:ಚಂದ್ರಮೋಹನ್  ಇರಾನಿ

 

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate