ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಪೌಷ್ಟಿಕತೆ / ಆರೋಗ್ಯಕ್ಕೆ ಬಾಳೆ ಹಣ್ಣು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆರೋಗ್ಯಕ್ಕೆ ಬಾಳೆ ಹಣ್ಣು

ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ , ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ .

ಬಾಳೆ ಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ ಮೂರು ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಪೈಬರ್ ಇವೆ , ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಮನಾರ್ಹ ಶಕ್ತಿ ನೀಡುತ್ತದೆ .

ಎರಡು ಬಾಳೆಹಣ್ಣು ತಿಂದರೆ ೯೦ ನಿಮಿಷ ಶ್ರಮದಾಯಕ ಕೆಲಸ ಮಾಡಲು ಸಾಧ್ಯವಾಗುತ್ತದೆ . ಎಂದು ಅಧ್ಯನದಿಂದ ತಿಳಿದು ಬಂದಿದೆ. ವಿಶ್ವದ ಪ್ರಮುಖ ಕ್ರೀಡಾ ಪಟುಗಳು ಸೇವಿಸುವ ಹಣ್ಣುಗಳ ಪೈಕಿ ನಂಬರ್ ಒಂದು ಹಣ್ಣು ಎಂದರೆ ಬಾಳೆಹಣ್ಣು ಎಂದು ಹೇಳಿದರೆ ಅಚ್ಚರಿಪಡಬೇಕಾಗಿಲ್ಲ . ಬಾಳೆಹಣ್ಣು ಗಣನೀಯವಾದ ರೋಗಗಳನ್ನು ತಡೆಗಟ್ಟುತ್ತದೆ. ಹೀಗಾಗಿ ನಮ್ಮ ಪ್ರತಿನಿತ್ಯ ಆಹಾರ ಬಾಳೆಹಣ್ಣು ಇರಲೇಬೇಕು ಅನ್ನುತ್ತಾರೆ ವೈದ್ಯರು .

ಖಿನ್ನತೆ

ಖಿನ್ನತೆಗೊಳಗಾದವನ್ನು ಇತ್ತೀಚಿಗೆ ಅಧ್ಯಯನ ನಡೆಸಲಾಗಿತ್ತು. ಬಾಳೆಹಣ್ಣು ತಿಂದಬಳಿಕ ಅವರಲ್ಲಿ ಸುಧಾರಣೆ ಕಂಡು ಬಂತು ಇದಕ್ಕೆ ಕಾರಣವೆಂದರೆ ಬಾಳೆಹಣ್ಣಿನಲ್ಲಿರುವ ಟ್ರಿಪ್ಟೋಫಾನ್ ಒಂದು ರೀತಿಯ ಪ್ರೊಟೀನ್ ಇದರಲ್ಲಿದ್ದು ಅದು ಸಿರೊಟೋನಿಸ್ ಆಗಿ ಪರಿರ್ವತಿಸುತ್ತದೆ. ಇದು ನಿಮ್ಮನ್ನು ರಿಲಾಕ್ಸ್ ಮಾಡುತ್ತದೆ. ಮನಃಸ್ಥಿತಿಯನ್ನು ಸುಧಾರಿಸುತ್ತದೆ. ಮತ್ತು ಸಾಮಾನ್ಯವಾಗಿ ನಿಮ್ಮನ್ನು ಸರಿತಸದನದಲ್ಲಿರುವಂತೆ ಮಾಡುತ್ತದೆ. ಹೀಗಾಗಿ ನೀವು ಔಷಧವನ್ನು ಮರೆತು ಬಿಡಿ ಬಾಳೆಹಣ್ಣು ತಿನ್ನಿ ಇದರಲ್ಲಿರುವ ವಿಟಮಿನ್ ಬಿ ೬ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.ಇದು ನಿಮ್ಮ ಮನಃಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.ರಕ್ತ ಹೀನತೆ ಕಬ್ಬಿಣದ ಅಂಶ ಅಧಿಕವಾಗಿದೆ ರಕ್ತದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ನೆರವಾಗುತ್ತದೆ.

ರಕ್ತದೊತ್ತಡ

ಕಡಿಮೆ ಪ್ರಮಾಣದಲ್ಲಿ ಉಪ್ಪಿನಿಂದ ಮತ್ತು ಅಧಿಕವಾಗಿ ಪೊಟಾಷಿಯಂ ಇದೆ. ಇದು ರಕ್ತದೊತ್ತಡವನ್ನು ಪರಿಪೂರ್ಣ ವಾಗಿಸುತ್ತದೆ

ಮಿದುಳಿನ ಶಕ್ತಿ

ಇಂಗ್ಲೆಂಡಿನ ಶಾಲೆಯೊಂದರ ೨೦೦ ವಿದ್ಯಾರ್ಥಿಗಳು ಬೆಳಗಿನ ಉಪಹಾರ ವಿರಾಮದ ಸಮಯ ಮತ್ತು ಬಾಳೆಹಣ್ಣು ತಿಂದುದರಿಂದ ಪರೀಕ್ಷೆ ಬರೆಯಲು ಸುಲಭವಾಯಿತು . ಈ ಹಣ್ಣಿನಲ್ಲಿ ಪೊಟಾಷಿಯಂ ಹೇರಳವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ನೆರವಾಯಿತು ಮಲಬದ್ದತೆ ಇದರಲ್ಲಿ ಪೈಬರ್ ಅಧಿಕವಾಗಿದೆ. ಆಹಾರದಲ್ಲಿ ಬಾಳೆಹಣ್ಣು ಅನ್ನು ಸೇರಿಸಿಕೊಂಡರೆ ನಿಮ್ಮ ಕರುಳಿನ ಸಾಮಾನ್ಯ ಕ್ರಿಯೆಯನ್ನು ಮರು ಸ್ಥಾಪಿಸುತ್ತದೆ. ಜೊತೆಗೆ ಮಲ ವಿಸರ್ಜನೆ ಕೂಡ ಸುಲಭವಾಗುತ್ತದೆ.

ಆಲಸ್ಯ

ಆಲಸ್ಯವನ್ನು ತ್ವರಿತವಾಗಿ ಗುಣಪಡಿಸಲು ಉತ್ತಮ ಮಾರ್ಗವೆಂದರೆ ಬಾಳೆಹಣ್ಣಿನ ಮಿಲ್ಕ್ ಶೇಕ್  ಕುಡಿಯುವುದು. ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ಇದು ಹೊಟ್ಟೆಯನ್ನು ತಣ್ಣಗೆ ಇಡುತ್ತದೆ.

ಎದೆ ಉರಿ

ಬಾಳೆಹಣ್ಣಿನಲ್ಲಿ ನೈಸರ್ಗಿಕವಾದ ಆಯಂಟಸಿಡ್ ಇದೆ. ಇದು ದೇಹದ ಮೇಲೆ ಪರಿಣಾಮ  ಬೀರುತ್ತದೆ.ನೀವು ಎದೆಉರಿಯಿಂದ ಬಳಲುತಿದ್ದರೆ, ಬಾಳೆಹಣ್ಣು ತಿನ್ನಲು ಯತ್ನಿಸಿ ಮತ್ತು ಹಿತವಾಗಿ ಪರಿಹರಿಸಿಕೊಳ್ಳಿ .

3.06363636364
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top