অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊತ್ತಂಬ್ರಿ ಮದ್ದು

ಕೊತ್ತಂಬ್ರಿ ಮದ್ದು

ಭಾರತ ಸಂಬಾರ ಪದಾಥ೯ಗಳ ಮತ್ತು ಗಿಡಮೂಲಿಕೆಗಳ ತವರು. ನಮ್ಮಲ್ಲಿ ಬಹಳಷ್ಟು ಮಂದಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುವುದಿಲ್ಲ. ಗಿಡಮೂಲಿಕೆಗಳನ್ನೇ ಬಳಸಿಕೊಳ್ಳುವಷ್ಟು ಜ್ಞಾನ ನಮ್ಮಲ್ಲಿದೆ. ಸೋಂಕಿನಂತಹ ಸಮಸ್ಯೆಗಳು ಆಂಗ್ಲ ವೈದ್ಯ ಪದ್ಧತಿಯ ಪ್ರಕಾರ ಔಷಧಿ ತೆಗೆದುಕೊಂಡರೆ ಕಡಿಮೆಯಾಗುವುದಿಲ್ಲ. ಅಂಥ ಸಂದಭ೯ದಲ್ಲಿ ದಾರಿ ಯಾವುದು? ಈ ಬಗ್ಗೆ ನಿಜಕ್ಕೂ ತಲೆಕೆಡಿಸಿಕೊಂಡವರು ಪಾಶ್ಚಿಮಾತ್ಯರು. ನಮ್ಮ ವಿಚಾರ ಬಿಡಿ, ಪಾಶ್ಚಾತ್ಯ ಗಾಳಿಯಿಂದಾದ ಸೋಂಕು ಮತ್ತು ಅಲಜಿ೯ಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಮ್ಮಿಂದ ಇನ್ನೂ ಆಗಿಲ್ಲ.

ಪೋಚು೯ಗೀಸ್ ವಿಜ್ಞಾನಿಗಳು ಸೋಂಕಿಗೊಂದು ಉತ್ತಮ ಔಷಧಿ ಕಂಡುಕೊಳ್ಳಬೇಕೆಂದು ಪ್ರಯತ್ನಿಸಿದರು. ಹಲವು ಪ್ರಯೋಗಗಳು ಫಲ ಕಾಣಲಿಲ್ಲ ಅಂಥ ಸಂದಭ೯ದಲ್ಲಿ ಅವರಿಗೆ ಕಾಣಿಸಿದ್ದು ಕೊತ್ತಂಬ್ರಿ ಕಾಳಿನ ಎಣ್ಣೆ!

ಆಶ್ಚಯ೯ವಾದರೂ ಇದು ನಿಜ. ಬ್ರಿಟಿಷರ ದಾಳಿಗೂ ಪೂವ೯ದಲ್ಲಿಯೇ ಭಾರತಕ್ಕೆ ಬಂದಿದ್ದಂಥ ಪೋಚು೯ಗೀಸರು ಇಲ್ಲಿನ ಸಂಬಾರ ಮತ್ತು ಗಿಡಮೂಲಿಕೆ ಸಂಪನ್ಮೂಲವನ್ನು ಕಂಡು ಚಕಿತಗೊಂಡಿದ್ದರು. ಬಹಳಷ್ಟು ಸಂಪನ್ಮೂಲವನ್ನು ತಮ್ಮಲ್ಲಿಗೆ ಒಯ್ದಿದ್ದರು ಕೂಡಾ. ಆದರೆ ಈಗ ಅದೇ ಸಂಪನ್ಮೂಲವೇ ಮಹತ್ವದ ಸಂಶೋಧನೆಗೆ ನೆರವಾಗಿದೆ. ಕೊತ್ತಂಬ್ರಿ ಕಾಳಿನ ಎಣ್ಣೆಯನ್ನು ಪ್ರಯೋಗಕ್ಕೆ ಒಳಪಡಿಸಿದರು ವಿಜ್ಞಾನಿಗಳು. ಸ್ವತಃ ವಿಜ್ಞಾನಿಗಳೇ ಚಕಿತಗೊಳ್ಳುವಂಥ ಫಲಿತಾಂಶ ಸಿಕ್ಕಿತು. 12 ವಿಧದ ಬ್ಯಾಕ್ಟೀರಿಯಾಗಳ ಸದ್ದಡಗಿಸಿತ್ತು ಕೊತ್ತಂಬ್ರಿ ಕಾಳಿನ ಎಣ್ಣೆ. ಬಹಳಷ್ಟು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಇದು ತಟಸ್ಥಗೊಳಿಸಿತ್ತು. ಇನ್ನೂ ಹಲವನ್ನು ನಿನಾ೯ಮ ಮಾಡಿತ್ತು.

ಯೂನಿವಸಿ೯ಟಿ ಆಫ್ ಬೈರಾ ಇಂಟೀರಿಯರ್ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದ್ದು, ಕೊತ್ತಂಬ್ರಿ ಕಾಳಿನ ಎಣ್ಣೆಯು ಸಾಲ್ಮೊನೆಲ್ಲಾ, ಇ-ಕೋಲಿ ಮತ್ತು ಇತ್ತೀಚಿನ ಸೂಪರ್ ಬಗ್ ಬ್ಯಾಕ್ಟೀರಿಯಾ ಎಂ.ಆರ್.ಎಸ್.ಎ.ಗಳ ಬೆಳವಣಿಗೆಯನ್ನೂ ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದೆ. ಪ್ರತಿವಷ೯ವೂ ಲಕ್ಷಾಂತರ ಜನ ವಿಷಾಹಾರದ ಸಮಸ್ಯೆಗೆ ಒಳಗಾಗುತ್ತಾರೆ. ಇಂಥವರಿಗೆ ಕೊತ್ತಂಬ್ರಿ ಕಾಳಿನ ಎಣ್ಣೆಯು ನೆರವಾಗಬಲ್ಲುದು. ಸಾಮಾನ್ಯವಾಗಿ ಆಂಗ್ಲ ವೈದ್ಯ ಪದ್ಧತಿಯಲ್ಲಿ ಬಳಸುವಂಥ ಆಂಟಿಬಯೋಟಿಕ್ಸ್ ಬದಲಿಗೆ ನಿಸಗ೯ದತ್ತವಾದ ಕೊತ್ತಂಬ್ರಿ ಕಾಳಿನ ಎಣ್ಣೆಯನ್ನು ಬಳಸಬಹುದು ಎನ್ನುತ್ತಾರೆ ಸಂಶೋಧಕರು.

ಇಲ್ಲಿ ಇನ್ನೂ ಒಂದು ವಿಚಾರವನ್ನು ಗಮನಿಸಬೇಕು- 2009-10ರಲ್ಲಿ ಕಾಣಿಸಿಕೊಂಡಂಥ ಸೂಪರ್ ಬಗ್ ಎಂ.ಆರ್.ಎಸ್.ಎ. ಭಾರತದಿಂದ ಇತರ ದೇಶಗಳಿಗೆ ಹರಡಿದೆ ಎಂಬ ಆರೋಪ ಜಗತ್ತಿನ ದೊಡ್ಡ ದೇಶಗಳಿಂದ ವ್ಯಕ್ತವಾಗಿತ್ತು. ಆರೋಪ ಹುಸಿ ಎಂಬುದು ನಂತರ ಸಾಬೀತಾಯಿತು. ಆದರೆ ಇದಕ್ಕೆ ಅಗತ್ಯವಿರುವಂಥ ಔಷಧಿಯ ತವರು ಭಾರತ ಎಂಬುದನ್ನು ಈಗ ಜಗತ್ತೇ ಒಪ್ಪಿಕೊಳ್ಳಬೇಕಾಗುತ್ತದೆ.

ಮೂಲ : ವಿಜ್ಞಾನ ಗಂಗೆ

ಕೊನೆಯ ಮಾರ್ಪಾಟು : 7/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate