অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಲಾಭ


ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ. ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇಲ್ಲಿ ನಾವು ಆಮ್ಲ ಜ್ಯೂಸ್ ಯನ್ನು ಪ್ರತಿದಿನ ಕುಡಿದರೆ ದೊರೆಯುವ ಪ್ರಮುಖ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ:

ಅಸ್ತಮಾವನ್ನು ಕಮ್ಮಿ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.

ದೀರ್ಘಕಾಲದ ಮಲಬದ್ಧತೆ ಗುಣವಾಗುವುದು ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

ರಕ್ತ ಶುದ್ಧೀಕರನ

ರಕ್ತವನ್ನು ಶುದ್ಧೀಕರಿಸುತ್ತದೆ ತಾಜಾ ಆಮ್ಲ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

ಮೂತ್ರ ಉರಿ ಶಮನ ಮಾಡುತ್ತದೆ 30mlಆಮ್ಲ ಜ್ಯೂಸ್ ಅನ್ನು ಪ್ರತಿದಿನ ಎರಡು ಬಾರಿ ಕುಡಿದರೆ ಉರಿ ಮೂತ್ರದ ಸಮಸ್ಯೆ ಇರುವುದಿಲ್ಲ.

ಸೆಕೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ ಸೆಕೆಗಾಲದಲ್ಲಿ ದೇಹ ಬೆಂದು ಹೋದ ಅನುಭವ ಉಂಟಾಗುವುದು, ಸೆಕೆಯನ್ನು ತಡೆಯಲು ಪ್ರತೀದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.

ಮುಟ್ಟಿನ ಸಮಯದಲ್ಲಿ ಒಳ್ಳೆಯದು ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

ಮುಖದ ಅಂದಕ್ಕೆ ಆಮ್ಲ ಜ್ಯೂಸ್ ಅನ್ನು ಸ್ವಲ್ಪ ಜೇನಿಗೆ ಮಿಶ್ರಣ ಮಾಡಿ ಪ್ರತಿದಿನ ಬೆಳಗ್ಗೆ ಕುಡಿಯುತ್ತಾ ಬಂದರೆ ಮುಖದಲ್ಲಿ ಬಿಳಿ ಮಚ್ಚೆ, ಮೊಡವೆ, ಬ್ಯ್ಯಾಕ್ ಹೆಡ್ಸ್ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ, ಮುಖದ ಕಾಂತಿ ಹೆಚ್ಚುವುದು.
ಕೆಂಪು ರಕ್ತ ಕಣ ಹೆಚ್ಚಿಸುತ್ತದೆ ದೇಹದಲ್ಲಿ ಕೆಂಪು ರಕ್ತ ಕಣ ಕಡಿಮೆಯಾದರೆ ರಕ್ತ ಹೀನತೆ ಉಂಟಾಗುವುದು. ಆಮ್ಲ ಹಾಗಾಗದಂತೆ ತಡೆಯುತ್ತದೆ.
ಶಕ್ತಿ ತುಂಬುತ್ತದೆ ಆಮ್ಲ ಜ್ಯೂಸ್ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ, ಹೃದಯದ ನರಗಳ ಅರೋಗ್ಯ ಹೆಚ್ಚಿಸಿ, ಹೃದಯ ಸಂಬಂಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ.

ಪೈಲ್ಸ್ ರೋಗಿಗಳಿಗೆ ಒಳ್ಳೆಯದು ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಮಲಬದ್ಧತೆ ಕಂಡು ಬರುವುದು ಸಹಜ. ಈ ಆಮ್ಲ ಜ್ಯೂಸ್ ಕುಡಿದರೆ ಆ ಸಮಸ್ಯೆಯಿಂದ ಪಾರಾಗಬಹುದು.

ಕಣ್ಣಿನ ಆರೋಗ್ಯಕ್ಕೆ ಇದನ್ನು ಕುಡಿಯುವುದರಿಂದ ಕ್ರಮೇಣ ಕಣ್ಣಿನ ಆರೋಗ್ಯ ಹೆಚ್ಚುವುದು.

ನೆರಿಗೆಯನ್ನು ತಡೆಯುತ್ತದೆ ಮುಖದಲ್ಲಿ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಆಮ್ಲ ಜ್ಯೂಸ್ ಅನ್ನು ಅರಿಶಿಣ ಹಾಗೂ ಜೇನು ಜೊತೆ ಕುಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸಮತೂಕ ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ, ಇದರಿಂದ ನೀವು ಸಮತೂಕವನ್ನು ಪಡೆಯಬಹುದು.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 6/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate