অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಣ್ಣಿನ ರಸಗಳು

ಹಣ್ಣಿನ ರಸಗಳು

ಹಣ್ಣಿನ ರಸಗಳು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ಕೆಲವು ತರಕಾರಿಯ ರಸಗಳು ಉತ್ತಮ ಔಷಧಿಗುಣಗಳಿಂದ ಕೂಡಿದ್ದು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ರಸಗಳು ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೆ, ಉತ್ತಮ ವಿರೇಚಕಗಳಾಗಿಯೂ ಕೆಲಸ ಮಾಡುತ್ತವೆ. ಈ ಹಣ್ಣು ಮತ್ತು ತರಕಾರಿಯ ರಸಗಳು ಕ್ಯಾಲ್ಸಿಯಂ, ವಿಟಮಿನ ‘ಸಿ’ ಹಾಗೂ ಫಾಸ್ಫೇಟ್, ಫಾಸ್ಫರಸ್, ಗ್ಲುಕೋಸ್ ಮುಂತಾದವುಗಳನ್ನೊಳಗೊಂಡಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.
1. ಕ್ಯಾರೆಟ್ ಜ್ಯೂಸ್ (ಗಜ್ಜರಿ ರಸ) : ಅಂಧತ್ವ ಹಾಗೂ ದೃಷ್ಟಿ ದೋಷಗಳಲ್ಲಿ ಹಾಗೂ ಪೋಷಕಾಂಶ ಕೊರತೆಯ ರೋಗಗಳಿಗೆ ಈ ರಸ ತುಂಬಾ ಉಪಯುಕ್ತವಾದುದು. ಹಾಗೂ ಇದರಲ್ಲಿ ಕ್ಯಾರೊಟಿನ್ ಅನ್ನಾಂಗವಿದೆ. ಕ್ಯಾರೆಟ್ ರಸ ಉತ್ತಮ ಟಾನಿಕ್ ಆಗಿದೆ.
2. ಗೋಧಿಹುಲ್ಲಿನ ರಸ : ಉತ್ತಮವಾದ ಗೋಧಿಯನ್ನು ಆರು ತಾಸು ನೀರಿನಲ್ಲಿ ನೆನೆಸಬೇಕು. ಹೆಚ್ಚು ಬಿಸಿಲು ಬೀಳದ ನೆಲದಲ್ಲಿ ಹತ್ತು ಚಿಕ್ಕ ಮಡಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪ್ರತಿದಿನ ಒಂದೊಂದರಂತೆ ನೆನೆಸಿದ ಗೋಧಿಯನ್ನು ಸಮನಾಗಿ ಬಿತ್ತಬೇಕು. ಇದೇ ರೀತಿ. ಕುಂಡಗಳಲ್ಲಿಯೂ ಬೆಳೆಯಬಹುದು. ಹತ್ತನೆಯ ದಿವಸಕ್ಕೆ ಮೊದಲ ದಿನ ಬಿತ್ತಿದ ಗೋಧಿ8-10 ಇಂಚು ಎತ್ತರದ ಸಸಿಯಾಗಿ ಬೆಳೆದಿರುತ್ತದೆ. ಅದನ್ನು ಕತ್ತರಿಸಿ ಮಿಕ್ಸಿಯಲ್ಲಿ ರಸ ಮಾಡಿ ಸೇವಿಸಬಹುದು. 25 ಮಿಲಿ ಲೀಟರ್‌ನಿಂದ ಆರಂಭಿಸಿ 150 ಮಿಲಿ ಲೀಟರ್‌ನವರೆಗೂ ಸೇವಿಸಬಹುದು. ಮೊದಲ ದಿನವೇ ಹೆಚ್ಚಾಗಿ ಸೇವಿಸಿದರೆ ವಾಂತಿಯಾಗುವ ಸಂಭವವುಂಟು. ಮಿಕ್ಸಿಯಲ್ಲಿ ರಸಮಾಡುವುದಲ್ಲದೆ ಗೋಧಿಯ ಹುಲ್ಲನ್ನು ಜಜ್ಜಿ ಅಥವಾ ರುಬ್ಬಿ ರಸ ಪಡೆಯಬುಹುದು. ಇಲ್ಲದೆ ಜಗಿದು ತಿನ್ನುವುದರಿಂದಲೂ ರಸ ಪಡೆಯಬಹುದು. ದಿನವೊಂದಕ್ಕೆ ಒಂದು ಮಡಿ ಅಥವಾ ಕುಂಡಲಿಯಂತೆ, ಹತ್ತನೇ ದಿವಸ ಮೊದಲನೇ ಮಡಿ ಅಥವಾ ಕುಂಡಲಿಯಲ್ಲಿಯ ಸಸಿಯನ್ನು ಕತ್ತರಿಸಿ ಉಪಯೋಗಿಸಿದ ಮೇಲೆ ಆ ಮಡಿ ಅಥವಾ ಕುಂಡಲಿಯಲ್ಲಿ ಮತ್ತೆ ಹೊಸದಾಗಿ ಸೆಗಣಿಗೊಬ್ಬರ ಮತ್ತು ಮಣ್ಣನ್ನು ಹಾಕಿ, ಅಂದೇ ಮತ್ತೆ ಮೇಲಿನ ಪ್ರಕಾರ ಬೀಜ ಹಾಕಿ ಬೆಳೆಸಬೇಕು. ಹೀಗೆ ಇರುವಷ್ಟು ಜಾಗೆಯಲ್ಲಿ ಎಷ್ಟು ದಿವಸಗಳಾದರೂ ಗೋಧಿಹುಲ್ಲನ್ನು ಬೆಳೆಸಿ ಅದರ ರಸ ಉಪಯೋಗಿಸಬಹುದು.
ಇಂದೊಂದು ಸರ್ವ ರೋಗ ನಿವಾರಿಣಿರಸವೆಂದು ಹೇಳಬಹುದು. ವಿಶೇಷವಾಗಿ ನಿಶ್ಯಕ್ತಿಯಿಂದ ಬಳಲುವವರಿಗೆ ತುಂಬಾ ಉತ್ತಮವಾದುದು. ಇದರಲ್ಲಿ ಕ್ಲೋರೋಫಿನಿಕಲ್, ಖನಿಜಾಂಶಗಳು ಮತ್ತು ವಿಟಮಿನ್ ‘ಬಿ’ ಅಂಶ ಹೇರಳವಾಗಿದೆ. ಈ ರಸದಲ್ಲಿ ವಿರೇಚಕ ಗುಣವೂ ಇದೆ. ಕ್ಯಾನ್ಸರಿನಂಥ ಭಯಾನಕ ರೋಗಗಳನ್ನು ವಾಸಿಮಾಡುವ ಶಕ್ತಿ ಈ ರಸಕ್ಕಿದೆ. ಕ್ಯಾನ್ಸರ್ ರೋಗಿಗಳು ದಿನವೊಂದಕ್ಕೆ 3 ಹೊತ್ತಿನಲ್ಲಿ ಈ ರಸವನ್ನು ಸೇವಿಸುವುದರಿಂದ ಗುಣಪಡೆಯಬಹುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate