অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೋಮುಖಾಸನ

ಗೋಮುಖಾಸನ

ಸಂಸ್ಕೃತದಲ್ಲಿ ‘ಗೋ’ ಎಂದರೆ ಹಸು. ಹಸುವಿನ ಮೋರೆಯ ನೆನಪನ್ನೇ ಈ ಆಸನ ತರುತ್ತದೆ. ಅದಕ್ಕಾಗಿಯೇ ಗೋಮುಖಾಸನವೆಂದು ಹೆಸರು.

ಮಾಡುವ ಕ್ರಮ

1)    ಆಸನ ಪ್ರಾರಂಭಿಸುವ ಮೊದಲು ಯೋಗಾಭ್ಯಾಸಿಯು ಎರಡೂ ಕಾಲುಗಳನ್ನು ಮುಂದಕ್ಕೆ ನೀಡಿ ಕುಳಿತುಕೊಳ್ಳಬೇಕು.

2)   ಮೊದಲು ಬಲಗಾಲನ್ನು ಮಡಿಸಿ, ಬಲ ಹಿಮ್ಮಡಿಯು ಅಂಡಮೂಲಕ್ಕೆ ತಗಲುವಂತೆ ಎಡತೊಡೆಯ ಕೆಳಗೆ ಇಡಬೇಕು.

3)    ಅನಂತರ ಇದೇ ರೀತಿ ಎಡಗಾಲನ್ನು ಮಡಿಸಿ, ಎಡಗಾಲು ಬಲ ಮಂಡಿಯ ಮೇಲೆ ಬರುವಂತೆ ಇಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಸಾಧ್ಯವಾದಷ್ಟೂ ಶರೀರದ ಪಕ್ಕದಲ್ಲೇ ಇರುವುದು ಹೆಚ್ಚು ಒಳಿತು.

4)   ಬಲಗೈಯನ್ನು ಮಡಿಸಿ ಕೆಳಗಡೆಯಿಂದ ಬೆನ್ನಿನ ಮೇಲೆ ಬರುವಂತೆ ಇಡಬೇಕು.

5)  ಇದೇ ರೀತಿ ಎಡಕೈಯನ್ನೂ ಮಡಿಸಿ, ಚಿತ್ರದಲ್ಲಿರುವಂತೆ ತಲೆಯ ಹಿಂದುಗಡೆಯಿಂದ ಮೇಲ್ಭಾಗದಿಂದ ಬರುವಂತೆ ಇಡಬೇಕು. ಅನಂತರ ಎರಡೂ ಕೈಗಳನ್ನು ಪರಸ್ಪರ ಸ್ಪರ್ಶಿಸಲು ಪ್ರಯತ್ನಿಸಬೇಕು.

6)  ನಿಧನವಾಗಿ ತಲೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾ, ಬೆನ್ನು ನೇರವಾಗಿಡುವುದರ ಜೊತೆಗೇ ಎರಡೂ ಮಂಡಿಗಳು ಆದಷ್ಟೂ ಹತ್ತಿರದಲ್ಲೇ ಇರುವತ್ತ  ಹೆಚ್ಚು ಗಮನ ವಹಿಸಬೇಕು. ಇದೇ ಸ್ಥಿತಿಯಲ್ಲಿ ಸಮತೋಲನವನ್ನು ಪಡೆದುಕೊಂಡು ದೀರ್ಘಕಾಲ ಕುಳಿತುಕೊಳ್ಳಲು ಪ್ರಯತ್ನಿಸಬೇಕು.

ಲಾಭಗಳು:

ಗೋಮುಖಾಸನವು ಕಾಲುಗಳಲ್ಲಿನ ಗಡಸುತನವನ್ನು ನಿವಾರಿಸುವುದಲ್ಲದೆ ಬೆನ್ನನಲ್ಲಿರುವ ಮಾಂಸಖಂಡಗಳು ಹಿಗ್ಗಲು ಸಹ ಇದು ಸಹಾಯಕಾರಿ. ಕೈ, ಕಾಲು, ಹೊಟ್ಟೆ ಮತ್ತು ಬೆನ್ನಲುಬುಗಳಲ್ಲಿನ ಅನೇಕ ವಿಕಾರಗಳೂ ದೂರವಾಗುವವು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 2/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate