অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರುಡಾಸನ

ಗರುಡಾಸನ

ಈ ಆಸನಕ್ಕೆ ವೃಕ್ಷಾಸನ ಎಂಬ ಹೆಸರು ಸಹ ಬಳಕೆಯಲ್ಲಿದ್ದರೂ, ಹೆಚ್ಚು  ಪ್ರಚಲಿತವಿರುವುದು ‘ಗರುಡಾಸನ’ ಎಂಬುದೇ.

ಮಾಡು ಕ್ರಮ

1)    ಮೊದಲು ಯೋಗಾಭ್ಯಾಸಿಯೂ ಭೂಮಿಗೆ ಲಂಬವಾಗಿ, ಎರಡೂ ಕಾಲುಗಳ ಮೇಲೆ ಸಮವಾಗಿ ಭಾರ ಹಾಕಿ ನಿಂತುಕೊಳ್ಳಬೇಕು.

2)   ಅನಂತರ ಬಳ್ಳಿ ಮರವನ್ನು ಸುತ್ತುವಂತೆ, ಉದಾ: ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು.

3)  ಇದೇ ರೀತಿ ಬಲ ಮೊಣಕೈ ಕೆಳಗೆ ಎಡಮೊಣಕೈ ತಂದು ಅನಂತರ ಬಲಗೈಯನ್ನು ಸುತ್ತಿಸಿ, ಎರಡೂ ಅಂಗೈಗಳು ಪರಸ್ಪರ ಜೋಡಿಸಬೇಕು. ಈ ಸ್ಥಿತಿಯಲ್ಲಿ ದೇಹವು ಸಾಧ್ಯವಾದಷ್ಟೂ ಭೂಮಿಗೆ ಲಂಬವಾಗಿರಬೇಕು. ಅನಂತರ ಚಿತ್ರದಲ್ಲಿರುವ ಸ್ಥಿತಿಯನ್ನು ಒಮ್ಮೆ ತಲುಪಿದಾಗ, ಅದೇ ಸ್ಥಿತಿಯಲ್ಲಿ ಸಮತೋಲನ ಪಡೆದು, ನಿಧಾನವಾಗಿ ಕಾಲು ಕೈಗಳನ್ನು ಬದಲಾಯಿಸಬಹುದು.

ಲಾಭಗಳು:

ಈ ಆಸನದ ಅಭ್ಯಾಸದಿಂದ ಮೊಣಕಾಲುಗಳಲ್ಲಿನ ದೋಷ ನಿವಾರಣೆಯಾಗುವುದು. ಕೈ- ಕಾಲುಗಳಲ್ಲಿನ ನರಗಳಿಗೆ ಬಲ ಬರುವುದು. ಅಂಡಕೋಶದ ನ್ಯೂನತೆಯು ಸರಿ ಹೊಂದುವುದು.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate