অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಚಕ್ರಾಸನ

ಚಕ್ರಾಸನ

ಚಕ್ರಾಸನಕ್ಕೆ ಊರ್ಧ್ವ ಧನುರಾಸನ ಮತ್ತು ತ್ರ್ಯಂಗ ಮುಖೋತ್ತಾನಾಸನ ಎಂಬ ಹೆಸರುಗಳೂ ಇವೆ. ಆದರೆ ಇವುಗಳಲ್ಲಿ ಸ್ವಲ್ಪ ವ್ಯಾತ್ಯಾಸಗಳು ಇವೆ.

ಮಾಡುವ ಕ್ರಮ

1)    ಪಾದಹಸ್ತಾಸನದಂತೆ ಪ್ರಾರಂಭದಲ್ಲಿ ಭೂಮಿಗೆ ನೇರವಾಗಿ, ಲಂಬವಾಗಿ ನಿಲ್ಲಬೇಕು.

2)    ಅನಂತರ ಎರಡು ಕಾಲುಗಳ ನಡುವೆ ಒಂದು ಅಡಿಯಷ್ಟು ಅಂತರ ವಿರಿಸಿ, ಅಂಗೈಗಳನ್ನು ರೊಂಡಿಯ ಮೇಲೆ ಇಡಬೇಕು.

3)    ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಿ  ನೆಲವನ್ನು ಮುಟ್ಟಬೇಕು. ಈ ಸ್ಥಿತಿಯಲ್ಲಿ ಶರೀರವು ಬಗ್ಗಿಸಿದ ಬಿಲ್ಲಿನಂತೆ ಇರುವುದು. ಆದರೆ ಹಿಂದಕ್ಕೆ ಬಾಗುವಾಗ ವಿಶೇಷವಾದ ಮುಂಜಾಗರೂಕತೆಯನ್ನು ವಹಿಸುವುದು ಉತ್ತಮ. ಪ್ರಾರಂಭದಲ್ಲಿ ಗೋಡೆಯ ಪಕ್ಕದಲ್ಲೇ ಈ ಆಸನವನ್ನು  ಅಭ್ಯಾಸ ಮಾಡಿ, ಸಮತೋಲನ ಹಾಗೂ ಸ್ವಾಮ್ಯ ಪಡೆದ ನಂತರವೇ ಗೊಡೆಯನ್ನು ಬಿಟ್ಟು ದೂರದಲ್ಲಿ ಅಭ್ಯಾಸ ಮಾಡಬಹುದು. ಒಮ್ಮೆ ನೆಲವನ್ನು ಮುಟ್ಟಿದ ನಂತರ  ಕೈಗಳನ್ನು ನೇರ ಮಾಡಬೇಕು. ಇಲ್ಲದಿದ್ದಲ್ಲಿ ಶರೀರದ ಭಾರವನ್ನು  ಹೊರಲಾರದೆ ಕೈಗಳು ಕುಸಿಯುವುವು.

ಲಾಭಗಳು

ಚಕ್ರಾಸನವು ವಿಶೇಷವಾಗಿ ಕುತ್ತಿಗೆ ಮತ್ತು ಮೇರುದಂಡಕ್ಕೆ ವಿಶೇಷವಾದ ವ್ಯಾಯಾಮವನ್ನು ಒದಗಿಸುತ್ತದೆ. ಸೊಂಟದ ನೋವು ಮತ್ತು ಉದರರೋಗಗಳು ದೂರವಾಗುವುವು. ಬೆನ್ನುಮೂಳೆಯು ಸದೃಢವಾಗುವುದು. ಚಕ್ರಾಸನವನ್ನು ಎಳೆಯ ವಯಸ್ಸಿನಿಂದಲೂ ಅಭ್ಯಾಸ ಮಾಡಿಕೊಂಡು ಬಂದಲ್ಲಿ ವೃದ್ಧಾಪ್ಯದಲ್ಲೂ ಬೆನ್ನು  ಬಾಗುವುದಿಲ್ಲ. ಚಕ್ರಾಸನದ ಅಭ್ಯಾಸವು ಮನಸ್ಸಿಗೆ ಶಾಂತಿಯನ್ನೂ, ಶರೀರಕ್ಕೆ ಉಲ್ಲಾಸವನ್ನೂ ಒದಗಿಸುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 4/22/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate