অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದ್ವಿಪಾದಕಂದರಾಸನ

ದ್ವಿಪಾದಕಂದರಾಸನ

ದ್ವಿಪಾದ ಕಂದರಾಸನಕ್ಕೆ ದ್ವಿಪಾದ ಶೀರ್ಷಾಸನ ಎಂಬ ಹೆಸರೂ ಇದೆ.

ಮಾಡುವ ಕ್ರಮ:

1)   ಪ್ರಾರಂಭದಲ್ಲಿ ಯೋಗಾಭ್ಯಾಸಿಯೂ ತನ್ನ ಎರಡೂ ಕಾಲುಗಳನ್ನು  ಮುಂದಕ್ಕೆ ಚಾಚಿ, ಎದೆ ಎತ್ತಿ ನೆಲದ ಮೇಲೆ ಕುಳಿತುಕೊಳ‍್ಳಬೇಕು.

2) ಅನಂತರ ಯಾವುದಾದರೂ ಒಂದು ಕಾಲನ್ನು (ಯೋಗಾಸನ ಕ್ರ. 38ರಲ್ಲಿ ವಿವರಿಸಿದಂತೆ) ನಿಧಾನವಾಗಿ ನೆಲದಿಂದ ಮೇಲಕ್ಕೆ ಎತ್ತಿ, ಮಂಡಿಯ ಬಳಿ ಬಗ್ಗಿಸಿ, ಕುತ್ತಿಗೆಯ  ಹಿಂಬದಿಯಲ್ಲಿಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಬೆನ್ನ ಮೇಲೆ ಒಂದನ್ನೊಂದು ಛೇದಿಸಿರುತ್ತವೆ ಹಾಗೂ ಕಾಲುಗಳ ಪಾದಗಳೆರಡೂ ಚಿತ್ರದಲ್ಲಿರುವಂತೆ ಕಾಣುತ್ತವೆ. ಈ ಸ್ಥಿತಿಯಲ್ಲಿ ಕುಳಿತುಕೊಳ್ಳುವುದು ಕಷ್ಟ.  ನಿಧಾನವಾಗಿ ಸಮತೋಲನ ಪಡೆದನಂತರ ಕೈಗಳಿಂದ ನಮಸ್ಕಾರ ಮುದ್ರೆ ಮಾಡಬೇಕು ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಕೇವಲ ಪೃಷ್ಠಭಾರದ ಮೇಲೆ ಬಿದ್ದಿರುತ್ತದೆ.

ಲಾಭಗಳು:

ದ್ವಿಪಾದ ಕಂದರಾಸನದ ಅಭ್ಯಾಸದಿಂದ ತೊಡೆಗಳು, ಕತ್ತು, ಸೊಂಟ ಬಲಗೊಳ್ಳುವವು. ಹೃದಯ – ಶ್ವಾಸಕೋಶಗಳು ಹೆಚ್ಚು ಸುದೃಢಗೊಳ್ಳುವವು. ಕಿಬ್ಬೊಟ್ಟೆಯ ಅನೇಕ ದೋಷಗಳು ದೂರವಾಗುವವು. ಮೂಳೆ ರೋಗದವರಿಗೆ ಈ ಆಸನ ಹೆಚ್ಚು ಉಪಕಾರಿ, ಆದರೆ ಅಂತಹವರು ಬಹಳ ಎಚ್ಚರಿಕೆಯಿಂದ ಅಭ್ಯಾಸ ಮಾಡಬೇಕಾಗುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate