অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಾದಾಂಗುಷ್ಠಾಸನ

ಪಾದಾಂಗುಷ್ಠಾಸನ

ಪಾದದ  ‘ಅಂಗುಷ್ಠ’ ಬೆರಳುಗಳ ಸಹಾಯದಿಂದ ಮಾಡುವ ಈ ಆಸನಕ್ಕೆ ಪಾದಾಂಗಗುಷ್ಠಾಸನ ಎಂಬ ಹೆಸರು ಅನ್ವರ್ಥವಾಗಿದೆ..

ಮಾಡುವ ಕ್ರಮ

  • ಎರಡು ಕಾಲನ್ನೂ ಮುಂದೆ ಚಾಚಿ ಕುಳಿತುಕೊ‍ಳ್ಳಬೇಕು.
  • ಅನಂತರ ಯಾವುದಾದರೂ ಒಂದು ಕಾಲನ್ನು( ಉದಾ: ಎಡಗಾಲನ್ನು) ಮಡಿಸಿ ತುದಿಗಾಲು ಮತ್ತು ಬೆರಳುಗಳ ಮೇಲೆ ಭಾರ ಹಾಕಿ ಹಿಮ್ಮಡಿ ಗುದದ್ವಾರಕ್ಕೆ ಸ್ಪರ್ಶಿಸುವಂತೆ ಇಟ್ಟುಕೊಳ್ಳಬೇಕು.
  • ಅನಂತರ ಇನ್ನೊಂದು ಕಾಲನ್ನು ಮಡಿಸಿ ಎಡಗಾಲಿನ ಮಂಡಿಯ ಮೇಲೆ ಬಲಗಾಲಿನ ಗಂಟು ಬರುವಂತೆ ಇಡಬೇಕು. ಅನಂತರ ಇಡೀ ಶರೀರದ ಭಾರವನ್ನು ಕಾಲಿನ ಬೆರಳುಗಳ ಮೇಲೆ ಹೇರಿ ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಜೋಡಿಸುವುದರೊಂದಿಗೆ ಬೆನ್ನನ್ನು ನೇರಮಾಡಿ ಎದೆಯನ್ನು ಎತ್ತಿ ಕುಳಿತುಕೊಳ್ಳಬೇಕು. ಪ್ರಾರಂಭದಲ್ಲಿ ಈ ಆಸನವನ್ನು  ಗೋಡೆಯ ಪಕ್ಕದಲ್ಲಿ ಮಾಡುವುದು ಉತ್ತಮ. ಇಲ್ಲದಿದ್ದರೆ ಮುಗ್ಗರಿಸುವ ಸಾಧ್ಯತೆಗಳುಂಟು. ಒಂದರಿಂದ ಎರಡು – ಎರಡೂವರೆ ನಿಮಿಷಗಳವರೆಗೆ ನಮಸ್ಕಾರ ಮುದ್ರೆಯಲ್ಲಿ ಕುಳಿತಿದ್ದು, ಅನಂತರ ಕಾಲುಗಳನ್ನು ಬದಲಾಯಿಸಬಹುದು.

ಲಾಭಗಳು

ಪಾದಾಂಗುಷ್ಠಾಸನವು ಮೂಳೆರೋಗಕ್ಕೆ ಸಹಾಯಕಾರಿ. ಈ ಆಸನದ ಆಭ್ಯಾಸದಿಂದ ವೀರ್ಯ ದೋಷ ದೂರವಾಗುತ್ತದೆ. ಸ್ಮರಣಶಕ್ತಿ ಹೆಚ್ಚುತ್ತದೆ. ಕಾಲುಗಳಿಗೆ ಹೆಚ್ಚು ಶಕ್ತಿ ಬರುತ್ತದೆ.

 

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate