অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-3

ಭಾಗ-3

1. ಸೂರ್ಯ ನಮಸ್ಕಾರದಲ್ಲಿ ಬಳಸುವ ಆರು ಬೀಜಮಂತ್ರಗಳು - ಹ್ರಾಂ, ಹ್ರೀಂ, ಹ್ರೂಂ, ಹ್ರೈಂ, ಹ್ರೌಂ, ಹ್ರಃ
2. ಸೂರ್ಯ ನಮಸ್ಕಾರದ 8 ಆಸನಗಳು-ಊಧ್ರ್ವನಮನಾಸನ, ಪಾದಹಸ್ತಾಸನ, ಏಕಪಾದಪ್ರಸರಣಾಸನ, ಚತುರಂಗದಂಡಾಸನ, ಶಶಾಂಕಾಸನ, ಸಾಷ್ಟಾಂಗಪ್ರಣಿಪಾತಾಸನ, ಊಧ್ರ್ವಮುಖಶ್ವಾನಾಸನ, ಅಧೋಮುಖಶ್ವಾನಾಸಾನ.
3. ಸೂರ್ಯನಮಸ್ಕಾರದಲ್ಲಿ ಬರುವ 13 ಮಂತ್ರಗಳಲ್ಲಿ ಸೂರ್ಯನ ಹೆಸರುಗಳು – ಮಿತ್ರ, ರವಿ, ಸೂರ್ಯ, ಭಾನು, ಖಗ, ಪೋಷ್ಣೆ, ಹಿರಣ್ಯಗರ್ಭ, ಮರಿಚ, ಆದಿತ್ಯ, ಸವಿತ್ರೇ, ಅರ್ಕ, ಭಾಸ್ಕರ, ಸವಿತೃಸೂರ್ಯನಾರಾಯಣ.
4. ಸೂರ್ಯನಮಸ್ಕಾರದ ‘ಸಾಷ್ಟಾಂಗ ನಮನಾಸನ’ದಲ್ಲಿ ಬಳಸುವ 8 ಅಂಗಗಳು ¬- ಹಣೆ, ಎದೆ, ಹಸ್ತಗಳೆರಡು, ಮಂಡಿಗಳೆರಡು, ಉಂಗುಷ್ಟಗಳೆರಡು.
5. ರಕ್ತದೊತ್ತಡ, ಸ್ಪಾಂಡಿಲೋಸಿಸ್, ಕಿವಿಸೋರುವವರು, ದುರ್ಬಲ ಹೃದಯದವರು, ಗ್ಲೋಕೋಮಾ ಸಮಸ್ಯೆ ಇರುವವರು ಶೀರ್ಷಾಸನ ಮಾಡಬಾರದು.
6. ‘ಮಾತ್ಸ್ಯಾಸನ’ದಲ್ಲಿ ಮತ್ಸ್ಯ ಎಂದರೆ - ಮೀನು
7. ಬಲರಾಮನ ಆಯುಧದ ಹೆಸರಿನ ಆಸನ - ಹಲಾಸನ
8. ‘ಭುಜಂಗಾಸನ’ದಲ್ಲಿ ಭುಜಂಗ ಶಬ್ದದ ಅರ್ಥ - ಹೆಡೆ ಎತ್ತಿದ ಸರ್ಪ
9. ‘ಮಿಡತೆ’ಯ ಭಂಗಿ ಹೋಲುವ ಆಸನ - ಶಲಭಾಸನ
10. ಬಿಲ್ಲನ್ನು ಹೋಲುವ ಆಸನ –ಧನುರಾಸನ
11. ನಾವೆ ಅಥವಾ ದೋಣಿಯನ್ನು ಹೋಲುವ ಆಸನ - ನೌಕಾಸನ
12. ಆಕಳಿನ ಮುಖವನ್ನು ಹೋಲುವ ಆಸನ - ಗೋಮುಖಾಸನ
13. ‘ಮತ್ಸ್ಯೇಂದ್ರಾಸನ’ - ಮತ್ಸ್ಯೇಂದ್ರನಾಥ ಯೋಗಿಯ ಹೆಸರನ್ನು ಹೊಂದಿದೆ
14. ‘ನವಿಲ’ನ್ನು ಹೋಲುವ ಆಸನ - ಮಯೂರಾಸನ
15. ‘ಮೊಸಳೆ’ಯ ಭಂಗಿ ಹೋಲುವ ಆಸನ – ಮಕರಾಸನ
16. ‘ಚೇಳನ್ನು’ ಹೋಲುವ ಆಸನ - ವೃಶ್ಚಿಕಾಸನ
17. ‘ಮರ’ದಂತೆ ನಿಲ್ಲುವ ಆಸನ – ವೃಕ್ಷಾಸನ
18. ವಿಷ್ಣುವಿನ ವಾಹನದ ಹೆಸರನ್ನು ಹೊಂದಿರುವ ಆಸನ – ಗರುಡಾಸನ
19. ‘ಅರ್ಧಕಟಿ ಚಕ್ರಾಸನ’ದಲ್ಲಿ ‘ಕಟಿ’ ಶಬ್ದದ ಅರ್ಥ - ಸೊಂಟ
20. ‘ಒಂಟೆಯ’ ಭಂಗಿಯನ್ನು ಹೋಲುವ ಆಸನ - ಉಷ್ಟ್ರಾಸನ
21. ಸರ್ವಾಂಗಾಸನದ ಪೂರ್ಣ ಲಾಭ ದೊರೆಯಬೇಕಾದರೆ ಪೂರಕವಾಗಿ ಮತ್ಸಾಸನ ಮಾಡಬೇಕು
22. ಹಠಯೋಗ ಪ್ರದೀಪಿಕೆಯಲ್ಲಿ ಹೇಳುವ ಎಂಟು ಪ್ರಾಣಾಯಾಮ - ಸೂರ್ಯಭೇದನ, ಉಜ್ಜಾಯಿ, ಶೀಥಲಿ, ಸಿತ್ಕಾರಿ. ಭಸ್ತ್ರಿಕಾ, ಭ್ರಾಮರಿ, ಮೂರ್ಛಾ, ಪ್ಲಾವನಿ.
23. ಪೂರಕ ಎಂದರೆ – ಉಸಿರನ್ನು ಒಳಗೆ ಎಳೆದುಕೊಳ್ಳುವುದು
24. ರೇಚಕ ಎಂದರೆ – ಉಸಿರನ್ನು ಹೊರಗೆ ಬಿಡುವುದು
25. ಕುಂಭಕ ಎಂದರೆ – ಉಸಿರನ್ನು ತಡೆಹಿಡಿಯುವುದು
26. ಕುಂಭಕಗಳ ವಿಧಗಳು –ಅಂತರ್‍ಕುಂಭಕ, ಬಾಹ್ಯ ಕುಂಭಕ, ಸಹಜಕುಂಭಕ ಅಥವಾ ಶೂನ್ಯಕ
27. ನಮ್ಮ ಶರೀರದಲ್ಲಿರುವ ನಾಡಿಗಳು -72 ಸಾವಿರ
28. ನಮ್ಮ ಶರೀರದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಮೂರು ನಾಡಿಗಳು - ಇಡಾ, ಪಿಂಗಳ, ಸುಷುಮ್ನ
29. ಪಂಚಪ್ರಾಣಗಳು - ಪ್ರಾಣ, ಅಪಾನ, ಸಮಾನ, ಉದಾನ, ವ್ಯಾನ
30. ಪಂಚ ಉಪಪ್ರಾಣಗಳು - ನಾಗ, ಕೂರ್ಮ, ಕ್ರಕರ, ದೇವದತ್ತ, ಧನಂಜಯ

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 7/21/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate